ಸದಸ್ಯ:Akshitha achar/ಸೀತಾ ದೇವಿ ದೇವಸ್ಥಾನ
ಸೀತಾ ದೇವಿ ದೇವಸ್ಥಾನ | |
---|---|
ಧರ್ಮ ಮತ್ತು ಸಂಪ್ರದಾಯ | |
ಜಿಲ್ಲೆ | ನುವಾರ ಎಲಿಜಾ ಜಿಲ್ಲೆ |
ಪ್ರಾಂತ್ಯ | ಕೇಂದ್ರ ಪ್ರಾಂತ್ಯ |
ಸ್ಥಳ | |
ದೇಶ | ಶ್ರೀಲಂಕಾ |
ಸೀತಾ ದೇವಿ ದೇವಸ್ಥಾನವು ಸೀತಾ ಎಲಿಯಾ ಗ್ರಾಮದಲ್ಲಿರುವ ಹಿಂದೂ ದೇವಾಲಯವಾಗಿದೆ, ಇದು ಹಕ್ಗಾಲ ಬೊಟಾನಿಕಲ್ ಗಾರ್ಡನ್ನಿಂದ ಸುಮಾರು ೧ ಕಿ.ಮೀ.(೦.೬೨ ಮೈ) ಮತ್ತು ನುವಾರಾ ಎಲಿಯಾದಿಂದ ೧.೫ ಕಿ.ಮೀ(೩.೧ ಮೈ) ದೂರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಸೀತಾ ದೇವಿ ದೇವಸ್ಥಾನವನ್ನು ೧೯ ನೇ ಶತಮಾನದಲ್ಲಿ, ದೇಶಕ್ಕೆ ಬಂದಿದ್ದ ತಮಿಳು ಎಸ್ಟೇಟ್ ಕಾರ್ಮಿಕರು ನಿರ್ಮಿಸಿದರು. [೧]
ದಂತಕಥೆಗಳು
[ಬದಲಾಯಿಸಿ]ಈ ಸ್ಥಳವು ಸೀತೆಯನ್ನು ರಾಕ್ಷಸ ರಾಜ ರಾವಣನಿಂದ ಸೆರೆಯಲ್ಲಿಟ್ಟ ಸ್ಥಳವೆಂದು ನಂಬಲಾಗಿದೆ ಮತ್ತು ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ತನ್ನ ಪತಿ ರಾಮನು ಬಂದು ತನ್ನನ್ನು ರಕ್ಷಿಸಬೇಕೆಂದು ಅವಳು ಪ್ರತಿದಿನ ಪ್ರಾರ್ಥಿಸುತ್ತಿದ್ದಳು. [೨] [೩] ದೇವಸ್ಥಾನದ ಪಕ್ಕದಲ್ಲಿ ಒಂದು ತೊರೆ ಇದೆ, ಅದು ಹತ್ತಿರದ ಬೆಟ್ಟದಿಂದ ಹರಿಯುತ್ತದೆ ಮತ್ತು ಅಶೋಕ ವಾಟಿಕಾದಲ್ಲಿ ಸೀತಾದೇವಿಯ ಅಗತ್ಯಗಳಿಗಾಗಿ ರಚಿಸಲಾಗಿದೆ ಎಂದು ಹೇಳಲಾಗುತ್ತದೆ. ಸೀತೆ ದೇವಿಯು ಈ ಹೊಳೆಯಲ್ಲಿ ಸ್ನಾನ ಮಾಡಿದ್ದಳು ಎಂಬ ಪ್ರತೀತಿಯೂ ಇದೆ. [೩] ತೊರೆಗೆ ಅಡ್ಡಲಾಗಿರುವ ಬಂಡೆಯ ಮೇಲೆರುವ ವೃತ್ತಾಕಾರದ ತಗ್ಗುಗಳನ್ನು ಹನುಮಂತನ ಹೆಜ್ಜೆಗುರುತುಗಳೆಂದು ಪರಿಗಣಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Goonatilake, Susantha (2014). "Introduction to the Issue on the Rāmāyaṇa". Royal Asiatic Society of Sri Lanka. New Series, Vol. 59, No. 2 (Special Issue on the Ramayana): 1–21. Retrieved 16 July 2023.
- ↑ "WWW Virtual Library: Sita Eliya / Seetha Eliya / Sitha Eliya".
- ↑ ೩.೦ ೩.೧ https://www.news18.com/india/epic-ties-sri-lankan-pm-unveils-special-cover-for-sita-temple-in-nuwara-eliya-ramayana-trail-to-be-made-more-attractive-7646653.html