ವಿಷಯಕ್ಕೆ ಹೋಗು

ಸದಸ್ಯ:Akshatharp/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

''''''''''''''''''''''ಸಂಗೀತ''''''''''''''''''''''

ವೈಲಿನ್

ಸಂಗೀತ ಒಂದು ಕಲಾ ರೂಪ ಹಾಗು ಸಾಂಸ್ಕೃತಿಕ ಚಟುವಟಿಕೆ[].ಸಂಗೀತದ ಮಧ್ಯಮ ಧ್ವನಿ ಮತ್ತು ಮೌನ.ಶ್ರೀ ಪುರಂದರದಾಸರನ್ನು'ಕರ್ನಾಟಕ ಸಂಗೀತ ಪಿತಾಮಹ'ಎಂದು ಕರೆಯಲಾಗುತ್ತದೆ.ಸಂಗೀತ ಹಲವಾರು ವರ್ಷಗಳಿಂದ ಅಸ್ಥಿತ್ವದಲ್ಲಿದೆ.ಸಂಗೀತದ ಸಾಮಾನ್ಯ ಅಂಶಗಳೆಂದರೆ ಮಟ್ಟ,ಛಂದೋಗತಿ[ಮಧುರ ಮತ್ತು ಸಾಮರಸ್ಯ],ಕ್ರಿಯಾಶೀಲತೆ[ಮೃದುತ್ವ] ಮತ್ತು ಹಲವಾರು.ಈ ರೀತಿ ಸಂಗೀತ ಹಲವಾರು ಅಂಶಗಳನ್ನು ಹೊಂದಿರುತ್ತದೆ.ಸಂಗೀತವನ್ನು ನುಡಿಸುವಾಗ ಹಲವಾರು ವಾದ್ಯಗಳನ್ನು ಉಪಯೋಗಿಸುತ್ತಾರೆ.ಉದಾಹರಣೆಗೆಪಿಯಾನೋ,ಗಿಟಾರ್[],ಡ್ರಮ್ಸ್,ತಂಬೂರಿ,ಕೊಳಲು,ಸಿತಾರ,ವೀಣೆ,ಪಿಟೀಲು,ಮೃದಂಗ ಹೀಗೆ ಇನ್ನು ಹಲವಾರು ವಾದ್ಯಗಳಿವೆ. ಸಂಗೀತದ ವಿಧಾನಗಳು:ಸಂಗೀತದಲ್ಲಿ ಹಲವಾರು ವಿಧಾನಗಳು ಅಥವ ಪ್ರಕಾರಗಳಿವೆ.ಶಾಸ್ತ್ರೀಯ ಸಂಗೀತ,ಹಿಂದೂಸ್ತಾನಿ ಸಂಗೀತ[] ,ಕರ್ನಾಟಕ ಸಂಗೀತ,ಜಾನಪದ ಸಂಗೀತ,ಚಲನಚಿತ್ರ ಸಂಗೀತ,ಭಾರತೀಯ ಪಾಪ್ ಸಂಗೀತ,ಹೀಗೆ ಹಲವಾರು.ಸಂಗೀತದ ವಿಧಾನದಲ್ಲಿ ಸಾಂಸ್ಕೃತಿಕ ಸಂಗೀತ ಹಾಗು ಆಧುನಿಕ ಸಂಗೀತ ಎಂಬ ಎರಡು ವಿಧಗಳಿವೆ.ಸಾಂಸ್ಕೃತಿಕ ಸಂಗೀತ-ಶಾಸ್ತ್ರೀಯ[ಕರ್ನಾಟಕ ಹಾಗು ಹಿಂದುಸ್ತಾನಿ],ಜನಪದ,ಭಜನೆ,ಒಡಿಸಿ,ರಬೀಂದ್ರ ಸಂಗೀತ,ಗಜ಼ಲ್,ಸುಫಿ,ದದ್ರ ಹಾಗು ಮುಂತಾದವುಗಳು.ಆಧುನಿಕ ಸಂಗೀತ-ಭಂಗ್ರ,ಚಲನಚಿತ್ರ ಸಂಗೀತ,ಪಾಪ್,ರಾಕ್[ಬೆಂಗಾಲಿ,ರಾಗ],ಜಾಸ್,ಟ್ರಾನ್ಸ್ ಹಾಗು ಮುಂತಾದವುಗಳು. ಸಂಗೀತದ ಪರಿಭಾಷೆ:ಕನ್ನಡ ಭಾಷೆಯಲ್ಲದೆ ಬೇರೆ ಭಾಷೆಯಲ್ಲು ಸಹ ಸಂಗೀತವನ್ನು ರಚಿಸಲಾಗಿದೆ.ತೆಲಗು,ಮಲಯಾಳಂ,ತಮಿಳು,ಹಿಂದಿ,ಇಂಗ್ಲೀಷ್,ಬಂಗಾಲಿ ಹಾಗು ಇನ್ನು ಹಲವಾರು ಭಾಷೆಗಳಲ್ಲಿ ಸಂಗೀತವನ್ನು ರಚಿಸುವರು.ಎಲ್ಲಾ ರಾಜ್ಯ ಹಾಗು ದೇಶದಲ್ಲೂ ತಮ್ಮ ತಮ್ಮ ಮತೃಭಾಷೆ ಹಾಗು ರಾಜ್ಯ ಅಥವ ದೇಶದ ಭಾಷೆಗಳಲ್ಲಿ ಸಂಗೀತವನ್ನು ರಚಿಸಲ್ಪಡಲಾಗುತ್ತದೆ.ಬೇರೆ ಬೇರೆ ಭಾಷೆಗಳಲ್ಲು ಭಕ್ತಿ ಗೀತೆ,ಚಲನಚಿತ್ರ ಗೀತೆಯನ್ನು ರಚಿಸಲಾಗುತ್ತದೆ.ಬೇರೆ ಬೇರೆ ದೇಶಗಳಲ್ಲಿ ಬೇರೆ ರೀತಿಯ ಸಂಗೀತ ವಾದ್ಯಗಳನ್ನು ಉಪಯೋಗಿಸುತ್ತಾರೆ.ಒಂದು ಭಾಷೆ ಹಾಗು ಇನ್ನೊಂದು ಭಾಷೆಯ ಸಂಗೀತಕ್ಕೆ ಬಹಳ ವ್ಯತ್ಯಾಸವಿರುತ್ತದೆ. ಸಂಗೀತದ ನಿರ್ಮಾಣ ಹಾಗು ಇತಿಹಾಸ:ಸಂಗೀತ ಬಹಳ ವರ್ಷಗಳ ಹಿಂದೆ ನಿರ್ಮಾಣವಾದುದ್ದು.ಪುರಂದರದಾಸರ ಕಾಲದಿಂದಲು ಸಂಗೀತ ಅಸ್ಥಿತ್ವದಲ್ಲಿದೆ.ಸಂಗೀತ ಕನಿಷ್ಠ ೫೫೦೦೦ ವರ್ಷದಿಂದ ಅಸ್ಥಿತ್ವದಲ್ಲಿದೆ ಎಂಬ ಮಾತಿದೆ.ಮೊದಲು ಸಂಗೀತದ ಆವಿಷ್ಕಾರ ಅಥವ ನಿರ್ಮಾಣ ಹೊಂದಿದ್ದು ಆಫ್ರಿಕಾದಲ್ಲಿ ಎಂದು ಹೇಳಲಾಗಿದೆ.ಇತಿಹಾಸಪೂರ್ವ ಸಂಗೀತ,ಪುರಾತಣ ಸಂಗೀತ,ಆರಂಭಿಕ ಸಂಗೀತ,ಮಧ್ಯಕಾಲಿನ ಸಂಗೀತ,ನವೋದಯ ಸಂಗೀತ,ಶಾಸ್ತ್ರೀಯ ಸಂಗೀತದ ಯುಗ,೨೦ ಮತ್ತು ೨೧ನೇ ಶತಮಾನದ ಸಂಗೀತ-ಹೀಗೆ ಸಂಗೀತ ಹಲವಾರು ಕಾಲ ಹಾಗು ಶತಮಾನದಿಂದಲು ಉಳಿದುಕೊಂಡಿದೆ.ಪ್ರತ್ಯೇಕ ಬುಡಕಟ್ಟಿನ ಗುಂಪಿನ ಜನರಿಗೂ ಸಹ ಸಂಗೀತ ತಿಳಿದಿತ್ತು.ಅವರು ತಮ್ಮದೆ ಆದ ಭಾಷೆ ಹಾಗು ಶೈಲಿಯಲ್ಲಿ ಸಂಗೀತ ಅಥವ ಹಾಡುಗಳನ್ನು ಹಾಡುತ್ತಿದ್ದರು.ಭಾವನೆಗಳು ಹಾಗು ಆಲೋಚನೆಗಳನ್ನು ಸಂಗೀತ ಅಭಿವ್ಯಕ್ತಿಸುತ್ತದೆ.ಕರ್ನಾಟಕದ ಪ್ರಸಿದ್ದ ಸಂಗೀತಗಾರರು/ಗಾಯಕರು-ಪಂಚಾಕ್ಷರಿ ಗವಾಯಿಯವರು,ಕನಕದಾಸರು,ಪುರಂದರದಾಸರು,ವಿಧ್ವಾನ್ ಆರ್.ಎನ್.ತ್ಯಾಗರಾಜನ್,ಎಸ್ ಜಾನಕಿಯವರು,ಡಾ ರಾಜ್ ಕುಮಾರ್ ರವರು,ಎಸ್ ಪಿ ಬಾಲಸುಬ್ರಮಣ್ಯಯವರು,ಸಿ ಅಶ್ವಥ್ ರವರು,ಗಂಗುಬಾಯಿ ಹಂಗಾಲ್ ಹಾಗು ಇನ್ನು ಹಲವಾರು ಗಾಯಕರು. ಕರ್ನಾಟಕ ಸಂಗೀತಕ್ಕೆ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಎಂಬ ಹೆಸರು ಇದೆ.ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದುದ್ದು.ಈ ಭಕ್ತಿಗೀತೆಗಳು ಸಾಮಾನ್ಯವಾಗಿ ಹಿಂದು ದೇವ- ದೇವತೆಗಳ ಕುರಿತಾದವು.ಜಾತ್ಯತೀತ ರಚನೆಗಳು ಸಾಮನ್ಯವಾಗಿ ಮಕ್ಕಳ ಹಾಡುಗಳು,ಹಾಸ್ಯ ಪ್ರಧಾನ,ಇಲ್ಲವೇ ಚಿತ್ರಗೀತೆಗಳಾಗಿರುತ್ತವೆ.ಕರ್ನಾಟಕ ಸಂಗೀತದಲ್ಲಿ ಎರಡು ಪ್ರಧಾನ ಅಂಶಗಳೆಂದರೆ, ರಾಗ ಮತ್ತು ತಾಳ.ಕರ್ನಾಟಕ ಸಂಗೀತದಲ್ಲಿ ಏಳು ಮೂಲ ಸ್ವರಗಳಿವೆ:ಸ-ರಿ-ಗ-ಮ-ಪ-ದ-ನಿ.ಇವುಗಳನ್ನು ಸಪ್ತ ಸ್ವರಗಳೆಂದು ಕರೆಯಲಾಗುತ್ತದೆ.ರಾಗ ಎಂಬುದು ಶ್ರುತಿಬದ್ಧವಾದ ರಚನೆಯನ್ನು ಸೃಷ್ಟಿಸಲು ಇರುವ ನಿಯಮಗಳ ವ್ಯವಸ್ಥೆ.ತಾಳ ಎಂಬುದು ಸಂಗೀತ ರಚನೆಗಳ ಲಯವಿನ್ಯಾಸವನ್ನು ನಿರ್ದೇಶಿಸುತ್ತದೆ.ತಾಳವನ್ನು ಏಳು ಗುಂಪುಗಳಾಗಿ ವರ್ಗೀಕರಿಸಲಾಗಿದೆ:ಧ್ರುವ,ಮಠ್ಯ,ರೂಪಕ,ಝಂಪೆ,ತ್ರಿಪುಟ,ಅಟ್ಟ ಮತ್ತು ಏಕ. ಕರ್ನಾಟಕ ಸಂಗೀತದಲ್ಲಿ ಸಾಮಾನ್ಯವಾಗಿ ತಾಳವನ್ನು ತೋರಿಸಲು ಉಪಯೋಗಿಸುವ ವಾದ್ಯ ಮೃದಂಗ.ಕರ್ನಾಟಕ ಸಂಗೀತ ಎಂಬ ಪದದ ವ್ಯುತ್ಪತ್ತಿಯ ಬಗ್ಗೆ ವಿವಿಧ ಊಹೆಗಳಿವೆ.ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಉಗಮಗೊಂಡಿದ್ದರಿಂದ ಈ ಹೆಸರು ಬಂದಿರಬಹುದು.ಇತರ ವ್ಯುತ್ಪತ್ತಿಗಳೂ ಸಹ ಪ್ರತಿಪಾದಿಸಲ್ಪಟ್ಟಿವೆ.ಇವುಗಳಲ್ಲಿ ಒಂದು-"ಕರ್ಣೇ ಅಟತಿ ಇತಿ ಕರ್ಣಾಟಕಮ್"-ಕಿವಿಗೆ ಇಂಪಾಗಿ ಕೇಳುವ ಸಂಗೀತ ಎಂದರ್ಥ. ಕರ್ನಾಟಕ ಚಿತ್ರರಂಗದ ಸಂಗೀತ ಸಾಕಷ್ಟು ಪ್ರಕಾರಗಳನ್ನೊಳಗೊಂಡ ಸಂಗೀತ ಕ್ರಮ.ಚಿತ್ರದೊಂದಿಗೆ ಬರುವ ಹಿನ್ನೆಲೆ ಸಂಗೀತವಲ್ಲದೆ,ಚಿತ್ರದ ಮಧ್ಯದಲ್ಲಿ ಮೂಡಿ ಬರುವ ಸಂಗೀತ ಅಂದರೆ ಹಾಡುಗಳು.ಕನ್ನಡ ಚಿತ್ರ ಸಂಗೀತವನ್ನು ಒಂದು ಪ್ರಕಾರವಾಗಿ ರೂಪಿಸಿವೆ.ಕನ್ನಡ ಚಿತ್ರ ಸಂಗೀತಕ್ಕೆ ಜನರ ಮನದಲ್ಲಿ ವಿಶಿಷ್ಟ ಸ್ಥಾನಮಾನಗಳು ಬೆಳೆದು ಬಂದಿವೆ.ಕನ್ನಡ ಚಿತ್ರ ಸಂಗೀತ ಹುಟ್ಟಿ ಬರುವುದು ಸಂಗೀತ ನಿರ್ದೇಶಕರು,ಹಿನ್ನೆಲೆ ಗಾಯಕರು,ಚಿತ್ರಸಾಹಿತಿಗಳು,ಸಂಗೀತ ವಾದ್ಯಗಾರರು,ಹಿನ್ನೆಲೆ ಸಂಗೀತ ಜೋಡಿಸುವವರು-ಇವರೆಲ್ಲರ ಸಹಯೋಗದಿಂದ.ಕಥೆಯ ಮಧ್ಯೆ ದೃಶ್ಯಗಳ ನಡುವೆ ಪ್ರಸಂಗಕ್ಕೆ ಹೊಂದುವಂತೆ ಮೂಡಿ ಬರುವ ಅರ್ಥವತ್ತಾದ ಸಂಗೀತ ಇದರ ವಿಶಿಷ್ಟತೆ.ಇತ್ತೀಚಿನ ಚಿತ್ರಗಳಲ್ಲಿ ಪ್ರಾಸಂಗಿಕ ಹಾಡುಗಳ ಬಳಕೆ ಕಡಿಮೆಯಾದರೂ ಚಿತ್ರದ ಮಧ್ಯೆ ಹಾಡುಗಳು,ಸಂಗೀತ ಜೋಡಿಸುವ ಪರಂಪರೆ ನಡೆದು ಬಂದಿದೆ.ಪ್ರಸಿದ್ಧ ಕನ್ನಡ ಸಂಗೀತ ನಿರ್ದೇಶಕರು-ಜಿ ಕೆ ವೆಂಕಟೇಶ್,ವಿಜಯಭಾಸ್ಕರ್,ಇಳಯರಾಜ,ಹಂಸಲೇಖ,ವಿ ಮನೋಹರ್,ಸಾಧು ಕೋಕಿಲ,ರಾಜೇಶ್ ರಾಮನಾಥ,ಗುರುಕಿರಣ್,ರವಿಚಂದ್ರನ್,ಮನೋಮೂರ್ತಿ,ವಿ ಹರಿಕೃಷ್ಣ ಹಾಗು ಇನ್ನು ಹಲವರು. ಸಂಗೀತ ಭಾರತೀಯ ಜೀವನದ ಒಂದು ಪ್ರಮುಖ ಭಾಗವಾಗಿದೆ.ಮೊಘಲ್ ಚಕ್ರವರ್ತಿಗಳ ನ್ಯಾಯಾಲಯಗಳಲ್ಲಿ ಹಾಗು ಅಕ್ಬರ್ನ ಆಸ್ಥಾನದಲ್ಲಿಯೂ ಸಹ ಸಂಗೀತ ನುಡಿಸುತ್ತಿದ್ದರು.ಈ ರೀತಿ ಸಂಗೀತ ಬಹಳ ವರ್ಷಗಳಿಂದ ಭಾರತದಲ್ಲಿ ಉಳಿದಿದೆ.ಮುಂದೆ ಹದಿನಾರನೆಯ ಶತಮಾನದಲ್ಲಿ ಹಿಂದುಸ್ತಾನಿ[ಉತ್ತರ ಭಾರತೀಯ]ಸಂಗೀತ ಮತ್ತು ಕರ್ನಾಟಕ[ದಕ್ಷಿಣ ಭಾರತದ]ಸಂಗೀತ ಎಂದು ಭಾರತದಲ್ಲಿ ಸಂಗೀತವನ್ನು ವಿಂಗಡಿಸಲಾಯಿತು.ಭಾರತದಲ್ಲಿ ಹಲವಾರು ರೀತಿಯ ಸಂಗೀತಗಳಿವೆ.ಅವುಗಳಲ್ಲಿ ಕೆಲವು-ಜನಪದ ಸಂಗೀತ,ಗಜಲ್ಸ್,ಭಾರತೀಯ ಫ್ಯೂಷನ್ ಸಂಗೀತ,ಭಾರತೀಯ ಚಲನಚಿತ್ರ ಸಂಗೀತ,ಕರ್ನಾಟಕ ಸಂಗೀತ,ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ,ಸಿನಿಮಾ ಮತ್ತು ಬಾಲಿವುಡ್ ಸಂಗೀತ,ರಾಕ್ ಮತ್ತು ಲೋಹದ ಸಂಗೀತ.ಈ ರೀತಿ ಸಂಗೀತ ತಲತಲಾಂತರದಿಂದ ಅಥವ ಕಾಲದಿಂದ ತನ್ನ ಸ್ಥಾನವನ್ನು ಪಡೆದಿದೆ/ಉಳಿಸಿಕೊಂಡಿದೆ.

ವೀಣೆ

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Music
  2. https://en.wikipedia.org/wiki/Guitar
  3. https://en.wikipedia.org/wiki/Hindustani_classical_music