ಸದಸ್ಯ:Akshathabhatk/ನನ್ನ ಪ್ರಯೋಗಪುಟ
ಮನಃಶಾಸ್ತ್ರ
ಮನಃಶಾಸ್ತ್ರವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಮನಃಶಾಸ್ತ್ರ ಎಂದರೆ ಮನಸ್ಸನ್ನು ಓದುವುದು, ಹುಚ್ಚರ ಅಧ್ಯಯನ ಎಂಬ ಹಲವಾರು ರೀತಿಯ ವಿವರಣೆಗಳು ಕೇಳಿಬರುತ್ತವೆ.ಆದರೆ ಮನಃಶಾಸ್ತ್ರ,ಅದರ ಅಗತ್ಯಗಳನ್ನು ಅರಿತುಕೊಳಳಲು ಯಾರೂ ಮುಂದಾಗುತ್ತಿಲ್ಲ. ಮನಃಶಾಸ್ತ್ರವೆಂದರೆ ಮಾನವನ ಮಾನಸಿಕ ಸ್ಥಿಮಿತತೆಯನ್ನು ಅಧ್ಯಯನ ಮಾಡುವುದು.ಮನುಷ್ಯ ತನಗಿರುವ ಒತ್ತಡ ಹಾಗು ಬಿಡುವಿಲ್ಲದ ಕೆಲಸಗಳಿಂದ ತನ್ನ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಿದ್ದಾನೆ.ಮಾನವನಿಗೆ ಮಾನಸಿಕ ಸ್ಥಿಮಿತತೆ ಇಲ್ಲದಾಗಿರುವುದರಿಂದ ಬರುವ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಲಾಗದೆ ಕುಗ್ಗಿಹೋಗುತ್ತಿದ್ದಾನೆ.ತನಗಾದ ನೋವನ್ನು ಹೇಳಿಕೊಳ್ಳಲಾಗದೆಯೋ,ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳಲಾಗದೆಯೋ,ನೋವನ್ನು ಸಹಿಸಿಕೊಳ್ಳಲಾಗದೆಯೋ ಖಿನ್ನತೆಗೊಳಗಾದ ಬಹಳಷ್ಟು ಮಂದಿ ಪ್ರತಿದಿನ ಈ ಪ್ರಪಂಚದಲ್ಲಿ ಸಿಗುತ್ತಲೇ ಇರುತ್ತಾರೆ.ಇಂಥವರಿಗೆ ಸಮಾಧಾನಿಸಿ ಸಾಂತ್ವಾನ ಹೇಳುವುದೇ ಮನಃಶಾಸ್ತ್ರಙ್ಞರ ಕೆಲಸ. ಮನಃಶಾಸ್ತ್ರಙ್ಞರು ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ನಿವ೯ಹಿಸುತ್ತಾರೆ.ಕೆಲವರು ಕೌಂಸಿಲಿಂಗ್ ಕ್ಷೇತ್ರದಲ್ಲಿ ಕಾಯ೯ ನಿವ೯ಹಿಸಿದರೆ, ಕೆಲವರು ವೈದ್ಯಕೀಯ ಕ್ಷೇತ್ರದಲ್ಲಿಯೂ ಕಾಯ೯ ನಿವ೯ಹಿಸುತ್ತಾರೆ.