ಸದಸ್ಯ:Akshatha.venkatesh/sandbox
ಮರಾಟಸ್ ವೊಲನ್ಸ್
ಮರಾಟಸ್ ವೊಲನ್ಸ್ ಜಿಗಿಯುವ ಜೇಡ ಕುಟುಂಬಕ್ಕೆ ಸೇರಿದ ಒಂದು ಪ್ರಾಣಿ.
ಕುಟುಂಬ
[ಬದಲಾಯಿಸಿ]ಈ ಪ್ರಾಣಿ ಆರ್ತ್ರಾಪೊಡ ವಿಭಾಗದ ಆರ್ಯಾಕ್ನಿಡ ವರ್ಗದ ಆರನೀಯಿಡ ಗಣಕ್ಕೆ ಸೇರಿದೆ.ಆರ್ಯಾಕ್ನಿಡ ವರ್ಗದಲ್ಲಿರುವ ಹನ್ನೊಂದು ಗಣಗಳಲೆಲ್ಲ ಪ್ರಭೇದಗಳ ಸಂಖ್ಯೆಯ ದೃಷ್ಟಿಯಿಂದ ಜೇಡಗಳ ಗಣವೇ ಅತ್ಯಂತ ಪ್ರಮುಖವಾದ್ದು.ನವಿಲು ಜೇಡಗಳ ಅನ್ವೇಷಣೆ ೧೮೦೦ರಲ್ಲಿ ಆಗಿದ್ದರೂ,ಒಂದು ಶತಮಾನದವರಗೆ ಇದರ ಸಂಶೋಧನೆ ಹೆಚ್ಚಾಗಿ ನಡೆಯಲಿಲ್ಲ.ಮೊದಲನೆಯ ಬಾರಿಗೆ ಔಪಚಾರಿಕ ಜೈವಿಕ ವಿವರಣೆ ನೀಡಿದ ಶ್ರೇಣಿ ಆಕ್ಟೇವಿಯಸ್ ಪಿಕರ್ಡ ಕೇಂಬ್ರಿಜ್ರವರಿಗೆ ಸಲ್ಲುತ್ತದೆ.ಇವರು ಮೊದಲು ಇದಕ್ಕೆ ಸಾಲ್ಟಿಕಸ್ ವೊಲನ್ಸ್ ಎಂಬ ಹೆಸರಿಟ್ಟರು,ನಂತರ ಮಾರಿಕ್ ಜಬ್ಕರವರು ಈ ಹೆಸರನ್ನು ಮರಾಟಸ್ ವೊಲನ್ಸ್ ಎಂಬ ಹೆಸರಿಗೆ ೧೯೯೧ರಲ್ಲಿ ಬದಲಾಯಿಸಿದರು.ಬಹುಪಾಲು ಜೇಡಗಳಲ್ಲಿ ೮ ಅಥವ ೬ ಕಣ್ಣುಗಳಿವೆ,ಇವು ಕಪ್ಪು ಅಥವ ಬಿಳಿಯ ಪಟ್ಟಿಯನ್ನು ಹೊಂದಿರುತ್ತದೆ.ಇವು ಬೆಳಕು ಮತ್ತು ಕತ್ತಲು,ನೆರಳು ಮತ್ತು ಚಲನೆಯನ್ನು ಪತ್ತೆ ಮಾಡುತ್ತದೆ.ಕೆಳವು ತಳುವಾದ ಚಿತ್ರಗಳನ್ನು ಕಡಿಮೆ ಬೆಳಕಿದ್ದರೂ ಪತ್ತೆ ಮಾಡುತ್ತದ್ದೆ. ಜೇಡಗಳಿಗೆ ಕಿವಿಗಳಿಲ್ಲ,ಇದು ಕಾಲುಗಳಲ್ಲಿರುವ ಅಂಗವನ್ನು ಇದಕ್ಕೆ ಉಪಯೋಗಿಸುತ್ತದೆ.
ರಚನಾತ್ಮಕ ವಿವರಣೆ
[ಬದಲಾಯಿಸಿ]ಈ ಜೇಡಗಳ ರಕ್ತ ವರ್ಣರಹಿತ. ಹೃದಯ ಉದ್ದವಾದ ಒಂದು ಸರಳಕೊಳವಿ, ಉದರದ ಬೆನ್ನುಭಾಗದ ಮಧ್ಯದಲ್ಲಿ ಸ್ಥಿತವಾಗಿದೆ. ಆಸ್ಳೆಯಗಳೆಂಬ ಸೀಳುಗಳ ಮೂಲಕ ರಕ್ತ ಹರಿಯುತ್ತದೆ.ಈ ಸೀಳುಗಳ ಸಂಖ್ಯೆ ಕುಟುಂಬದಿಂದ ಕುಟುಂಬಕ್ಕೆ ವ್ಯತ್ಯಾಸವಾಗುತ್ತದೆ.ಜೇಡಗಳ ಸಂವೇದನ ಅಂಗಗಳಲ್ಲಿ ಮುಖ್ಯವಾದ್ದು ಕಣ್ಣು .ಸೆಫಲಾನಿನ ತುತ್ತತುದಿಗೂ, ಮೊದಲ ಜೊತೆ ಕಣ್ಣುಗಳಿಗೂ ನಡುವೆ ಇರುವ ಕ್ಷೇತ್ರಕ್ಕೆ ಕ್ಲೈಪಿಯಸ್ ಎಂದು ಹೆಸರು.ಸೆಫಲೊತೋರ್ಯಾಕ್ಸಿನ ಮೇಲೆ ಆರೀಯ ರೀತಿಯಲ್ಲಿ ಜೋಡಣೆಗೊಂಡ ಎಂಟು ಉದ್ದಗೆರೆಗಳನ್ನು ಕಾಣಬಹುದು.ಇವು ಕಾಲುಗಳ ಮಾಂಸಖಂಡಗಳ ಸೇರುವೆಗಳನ್ನು ಸೂಚಿಸುತ್ತದೆ.ಈ ಜೇಡದ ದೇಹದ ಮುಂಭಾಗವಾದ ಸೆಫಲೊತೋರ್ಯಾಕ್ಸ್ ಹೆಚ್ಚುಕಡಿಮೆ ಒಂದು ಏಕ ರೂಪದ ರಚನೆ.ಇದರ ಮೇಲ್ಮ್ರೆನಯವಾಗಿದೆ.ತೆಳುವಾದ ಒಂದು ಸೊಂಟ ಅಥವಾ ವೃಂತದ ಮೂಲಕ ಸೆಫಲೊತೋರ್ಯಾಕ್ಸ್ ಉದರಕ್ಕೆ ಸೇರಿಕೊಂಡಿದೆ.ವೃಂತ ಸೂಕ್ಷ್ಮವಾದ ಬಂಧ.ಉದರ ಬಹಳ ಮುಂದಕ್ಕೆ ಚಾಚಿರುವುದರಿಂದ ವೃಂತ ಕಣ್ಣೆಗೆ ಬೀಳುವುದಿಲ್ಲ . ಮೇಲ್ಭಾಗದಲ್ಲಿ ಲೋದಮ್ ಮತ್ತು ಕೆಳಭಾಗದಲ್ಲಿ ಪ್ಲಾಗ್ಯುಲ ಎಂಬ ಕೈಟಿನ್ ಫಲಕಗಳು ಇದಕ್ಕೆ ರಕ್ಷಣೆಯನ್ನೂ ಬಲವನ್ನೂ ಕೊಡುತ್ತವೆ.ವೃಂತದ ವ್ಯಾಸ ಬಲು ಚಿಕ್ಕದು ಆದರೂ ಇದರ ಮುಖಾಂತರ ಒಂದು ಅಪಧಮಾನಿಯೂ ಮುಖ್ಯ ನರಹುರಿಯೂ ಜೀರ್ಣವಾಳದ ಒಂದಂಶವೂ ಹಾದುಹೋಗುತ್ತವೆ.
ಹಂಚಿಕೆ
[ಬದಲಾಯಿಸಿ]ಈ ಜೇಡವು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್, ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯನ್ ಕ್ಯಾಪಿಟಲ್ ಪ್ರಾಂತ್ಯ, ಪಶ್ಚಿಮ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾಗೆ ಸೀಮಿತವಾಗಿದೆ.
ಹೆಸರು
[ಬದಲಾಯಿಸಿ]ಲ್ಯಾಟಿನ್ ಭಾಷೆಯಲ್ಲಿ ವೋಲನ್ ಎಂಬುದರ ಅರ್ಥ ಹಾರುವುದು.ಆಕ್ಟೇವಿಯಸ್ ಪಿಕರ್ಡ ಕೇಂಬ್ರಿಜ್ರವರಿಗೆ ನ್ಯೂ ಸೌತ್ ವೇಲ್ಸ್ ಎಂಬ ಜಾಗದಿಂದ ಈ ಜೀವಿಯ ಮಾದರಿಯನ್ನು ಕಳಿಸಿದವರು ಈ ಕೆಳಗಿನ ವಿವರಣೆ ನೀಡಿದರು,ಈ ಜೇಡ ತಮ್ಮ ಪ್ಲಾಪ್ ಗಳನ್ನು ದೂರ ಜಿಗಿದಾಗ ಸಮತೋಲನೆಯನ್ನು ಕಾಪಾಡಿಕೊಳ್ಳಲು ಬಳಸುತ್ತದೆ.ಆದರೆ ಈ ನಂಬಿಕೆಯನ್ನು ಆಸ್ಟ್ರೇಲಿಯದ ಪುರಾತತ್ವ ಸಮಾಜವು ತಳ್ಳಿಹಾಕಿದ್ದಾರೆ.
ಮಿಲನದ ವಿವರಣೆ
[ಬದಲಾಯಿಸಿ]ಕೆಂಪು,ನೀಲಿ ಮತ್ತು ಕಪ್ಪು ಬಣ್ಣದ ಪುರುಷ ಜೇಡಗಳಿಗೆ ತಮ್ಮ ಹೊಟ್ಟೆಯ ಭಾಗದಿಂದ ಪ್ಲಾಪ್-ತರಹದ ವಿಸ್ತರಣೆಗಳಿವೆ,ತಮ್ಮ ಮಿಲನದ ಸಮಯದಲ್ಲಿ ಈ ಜೇಡಕ್ಕಿರುವ ಬಿಳಿ ಬಣ್ಣದ ಕೂದಲನ್ನು ಬಳಸುತ್ತದೆ.ಆದುದರಿಂದ ಈ ಜೇಡವನ್ನು ನವಿಲಿಗೆ ಹೊಲಿಸಲಾಗಿದೆ ಮತ್ತು ನವಿಲು ಜೇಡು ಎಂದು ಕರೆಯಲಾಗುತ್ತದೆ.ಈ ಜೇಡ ಸಾಮಾನ್ಯವಾಗಿ ೫ ಮಿಲಿಮೀಟರ್ ಉದ್ದ ಬೆಳೆಯುತ್ತದೆ.ಹೆಣ್ಣು ಮತ್ತು ಅಪಕ್ವ ಜೇಡಗಳು ಕಂದು ಬಣ್ಣದಲ್ಲಿ ಇರುತ್ತದೆ.ಅದರ ಬಣ್ಣದ ಮಾದರಿಯಿಂದ ಇದನ್ನು ಬೇರೆಯ ಜಾತಿಯಿಂದ ಗುರುತಿಸಲು ಸಾಧ್ಯಾವಾಗುತ್ತದ್ದೆ.ಒಂದು ಹೆಣ್ಣು ಜೇಡವು ಗಂಡು ಜೇಡದ ನೃತ್ಯವನ್ನು ನೋಡುವಾಗ ಅದು ಮೊಟ್ಟೆಯನ್ನು ಹೊತ್ತಿರುತ್ತದೆ ಅಥವಾ ಅದು ಪ್ರಭಾವಿತವಾಗದೆ ಇರಬಹುದು. ಗಂಡು ಜೇಡವು ಅದರ ನೃತ್ಯವನ್ನು ಮುಂದುವರೆಸಿದಲ್ಲಿ ,ಸ್ತ್ರೀ ಜೇಡವು ಅದರ ಮೇಲೆ ದಾಳಿ ಮಾಡಿ ಸಾಯಿಸಲೂಬಹುದು. ಗಂಡು ಜೇಡ ವೇಗವಾಗಿದಲ್ಲಿ,ಹೆಣ್ಣು ಜೇಡದ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ,ಅದು ಸಾಧ್ಯವಾಗದಲ್ಲಿ ಹೆಣ್ಣು ಜೇಡಕ್ಕೆ ಆಹಾರವಾಗುತ್ತದ್ದೆ.ಹೆಣ್ಣು ಜೇಡದ ನಡುವಳಿಕೆ ನಮಗೆ ಗಂಡು ಜೇಡಗಳಲ್ಲಿರುವ ಅನನ್ಯ ಲೈಂಗಿಕ ಡೆಮೊರ್ಪಿಕ್ ವೈಶಿಷ್ಯಗಳನ್ನು ಮತ್ತು ಪ್ರಣಯದ ವರ್ತನೆಯನ್ನು ಹೊಂದಿರುವದರ ಬಗ್ಗೆ ವಿವರಣಿ ನೀಡುತ್ತದೆ.ಹೆಣ್ಣು ಜೀಡವನ್ನು ಆಕರ್ಷಿಸಲು ಈ ಜೇಡಗಳು ತಮಗೆ ಆನುವಂಶಿಕವಾಗಿ ಬಂದಿರುವ ಬಣ್ಣದ ಅಪಿಸ್ತೋಸೊಮಲ್ ಪ್ಲಾಪ್ ಗಳ ಜೊತೆಗೆ ತಮ್ಮ ಮೂರನೆಯ ಕಾಲಗಳನ್ನು ಬೀಸುತ್ತದೆ ಮತ್ತು ಮಿಡಿಸುತ್ತದೆ.ಗಂಡು ಜೇಡಗಳು ಹೆಣ್ಣುಗಳ ಮುಂದೆ ತಮ್ಮ ಪ್ಯಾಲ್ವಿಗಳನ್ನೊ ಕಾಲುಗಳನ್ನೊ ಆಡಿಸುತ್ತ ವಿಚಿತ್ರ ಭಂಗಿಗಳನ್ನು ತಾಳುತ್ತ ನರ್ತಿಸುತ್ತವೆ.ಇಂಧ ವರ್ತನೆಗೆ ಕಾರಂಅಗಳು ಹಲವಾರು ಇರಬಹುದು.ಲೈಂಗಿಕ ಆಯ್ಕೆ ಒಂದು ಕಾರಣಗಳು ಹೆಣ್ಣಿನ ಗಮನವನ್ನು ಸೆಳೆಯುವುದು, ಉದ್ರ್ತಿಕ ಸ್ಠಿತಿಸ್ವರಕ್ಷಣೆ ಇವು ಇನ್ನಿತರ ಕಾರಣಗಳು ಎಂದು ಹೇಳಲಾಗಿದೆ.ಸಂಭೋಗದ ಕಾಲಾವಧಿಯಲ್ಲಿ ಉಂಟಾಗುವ ತೀವ್ರತೆರನ ಶಾರೀರಿಕ ಚಟುವಟಿಕೆಯ ಬಾಹ್ಯಾಪ್ರದರ್ಶನ ಹಾಗೂ ಹೆಣ್ಣು ಜೇಡನ್ನು ಪ್ರಚೋದಿಸಲು ಗಂಡು ನಡೆಸುವ ಪ್ರಣಯಾಚರಣೆ ಇದು ಎಂಬ ಅಭಿಪ್ರಾಯವೂ ಇದೆ.ಜೇಡಗಳ ಕೂಡುವಿಕೆಯ ಮುನ್ನ ಕೆಲವು ಪೂರ್ವಸಿದ್ಧತೆಗಳಲ್ಲಿ ಪ್ರವೃತ್ತವಾಗುತ್ತವೆ.ಸಾಮಾನ್ಯವಾಗಿ ಗಂಡು ಜೇಡಾವೇ ಇಂಥ ಸಿದ್ಧತೆಗಳನ್ನು ಆರಂಭಿಸುವುದು.ಈ ಕೂಡುವಿಕೆಯು ೪ ರಿಂದ ೫೦ ನಿಮಿಷದಕಾಲ ನಡೆಯುತ್ತದೆ.ಒಂದು ಮುಖ್ಯ ಭಾಗದಷ್ಟು ಶಕ್ತಿ ಮತ್ತು ಸಮಯ ಹೆಣ್ಣು ಜೇಡದ ಮೇಲೆ ಹೂಡಿಕೆ ಮಾಡಲಾಗುತ್ತದೆ.ಆ ಜೇಡವು ಗಂಡು ಜೇಡದೊಂದಿಗೆ ಮಿಲನವಾಗದಿದ್ದರೆ,ಈ ಸಮಯ ಮತ್ತು ಶಕ್ತಿ ವ್ಯರ್ತವಾಗುತ್ತದೆ.ದೊಡ್ಡದಾದ ಜೇಡ ೦.೩ ಇಂಚ್ ರಷ್ರು ಮಾತ್ರ ಬೆಳೆಯುತ್ತದ್ದೆ.ಬೇರೆಯ ಜೇಡದ ರೀತಿ ನವಿಲು ಜೇಡಗಳು ವಿಷಪೂರಿತವಾಗಿದೆ.ಆದರೆ ಅದು ಮನುಷ್ಯರಿಗೆ ಏನು ಹಾನಿ ಮಾಡವುದಿಲ್ಲ.ಜೇಡದ ಚಿಕ್ಕ ದವಡೆಗಳು ನಮ್ಮ ಚರ್ಮದ ಒಳಗೆ ಇಳಿಯುವುದಿಲ್ಲ.ಬೇರೆಯ ಜಿಗಿಯುವ ಜೇಡದಂತೆ ಇವು ಜಾಲ ಕಟ್ಟುವುದಿಲ್ಲ.ಇವು ಆಹಾರವನ್ನು ಬೇಟೆಯಾಡುತ್ತದೆ.ಈ ಜೇಡವು ಅದಕ್ಕೆ ಮೂರು ಅಥವ ನಾಲ್ಕರಷ್ಟು ತೂಕದ ಜೀವಿಯನ್ನು ಬೇಟೆಯಾಡುತ್ತದೆ.ಬಹಳ ಒಳ್ಳೆಯ ಜೀನ್ಗಳನ್ನು ಆಯ್ಕೆಮಾಡಿಕೊಳ್ಳಲು ಹೆಣ್ಣು ಜೇಡವು ಅತ್ಯಂತ ಸುದೀರ್ಘವಾಗಿ ನೃತ್ಯ ಮಾಡುವ ಗಂಡು ಜೇಡನ್ನು ಆರಿಸಿಕೊಳ್ಳುತ್ತದೆ.ಹೆಣ್ಣು ಜೇಡ ಪ್ರಕಾಶಮಾನವಾದ ಮತ್ತು ಅನನ್ಯ ನೃತ್ಯ ಮಾದರಿಯಿರುವ ಜೇಡನ್ನು ಪಡೆದಲ್ಲಿ , ಅದರ ಸಂತತಿಯು ಅದೇ ವೈಶಿಷ್ಯತೆಯನ್ನು ಹೊಂದುತ್ತದೆ ಅಥವ ಒಂದು ಮಂದ ಗಂಡು ಜೇಡನ್ನು ಆಯ್ಕೆಮಾಡಿಕೊಂಡರೆ ಅದರ ಸಂತತಿಯು ಹಾಗೆ ಇರುತ್ತದೆ ಮತ್ತು ಅದು ಲೈಂಗಿಕವಾಗಿ ಮುಂದುವರೆಯಲು ಸಾಧ್ಯವಾಗದೆ, ಅದರ ಜಾತಿಯು ನಿರ್ಮೂಲವಾಗಬಹುದು.ಕೂಡುವಿಕೆಯ ನಂತರ ಹೆಣ್ಣು ಜೇಡ ಆರು ಮೊಟ್ಟೆಯನ್ನು ಹಾಕುತ್ತದೆ.ಮರಾಟಸ್ ವೋಲನ್ ಆರು ಮೊಟ್ಟೆಯಿಡುತ್ತದೆ.ಹೆಣ್ಣು ಜೇಡಾ ಎರಡು ವಾರಗಳ ಕಾಲ ಏನು ತಿನ್ನದೆ ತನ್ನ ಮೊಟ್ಟೆಯನ್ನು ಕಾಯುತ್ತದೆ.ಎರಡು ವಾರದ ಅಂತ್ಯದಲ್ಲಿ ಹೆಣ್ಣು ಜೇಡ ಸಾಯುತ್ತದೆ.ಮೊಟ್ಟೆಯೊಡೆದು ಹೊರಬರುವ ಮರಿಗಳು ತಾವು ಓಡಾಡುವಷ್ಟು ಸಾಮರ್ಥ್ಯವನ್ನು ಪಡೆದಮೇಲೆ ರೇಷ್ಮೆಗೂಡನ್ನು ಬಿಟ್ಟು ಹೊರಬರುತ್ತವೆ.
ಜೀವನಾವಧಿ
[ಬದಲಾಯಿಸಿ]ನವಿಲು ಜೇಡಗಳು ಕಾಡಿನಲ್ಲಿ ಬೆಳೆದರೆ ೧೫-೨೦ ವರ್ಷಗಳ ಕಾಲ ಬದುಕುವುದು.ಆದರೆ ಬಂಧಿಯಾಗಿರುವ ಜೇಡದ ಜೀವನಾವಧಿ ಕಡಿಮೆ.