ಸದಸ್ಯ:Akshata.G/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ವಿದ್ಯುತ್ ಬೆಸೆ [Electric Fuse] :'

ಬೆಸೆಯು ಅಧಿಕ ವಿದ್ಯುತ್ಸ್ರವಾಹದಿಂದ ಮಂಡಲವನ್ನು ರಕ್ಷಿಸುವ ಒಂದು ಸುರಕ್ಷಾ ಸಾಧನವಾಗಿದೆ. ಇದು ವಿದ್ಯುತ್ತಿನ ಶಾಖೋತ್ಪನ್ನ ಪರಿಣಾಮದಿಂದ ಕೆಲಸ ಮಾಡುತ್ತದೆ. ಅಧಿಕ ವಿದ್ಯುತ್ಸ್ರವಾಹದ ಪರಿಸ್ಥಿತಿಯಲ್ಲಿ ಬೆಸೆ ತಂತಿ ಕರಗಿ ತೆರೆದ ಮಂಡಲವನ್ನು ಉಂಟು ಮಾಡುವುದರಿಂದ ಮಂಡಲದ ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ. ನಿಗದಿತ ಪ್ರಮಾಣದ ವಿದ್ಯುತ್ ನ್ನು ಕೊಂಡೊಯ್ಯುವಷ್ಟು ಮಾತ್ರ ಶಕ್ತಿ ಹೊಂದಿರುವ ವಾಹಕ ತಂತಿಗಳಲ್ಲಿ ಕೆಲವು ವೇಳೆ ಇದ್ದಕಿದ್ದಂತೆಯೆಅತಿ ವಿಭವದ ವಿದ್ಯುತ್ ಸರಬರಾಜಿನಿಂದ ಅಥವ ವಿದ್ಯುತ್ ಬಳಕೆಯ "ತೀವ್ರಹೊರೆ" [overload]ಯ ಕಾರಣದಿಂದ "ಹ್ವ್ರುಸ್ವಮಂಡಲಗಳು" [short circuits] ಉಂಟಾಗುತ್ತದೆ. ಇದರಿಂದ ಮಂಡಲದಲ್ಲಿ ಅಧಿಕ ವಿದ್ಯುತ್ಸ್ರವಾಹ ಉಂಟಾಗುತ್ತದೆ. ವಿದ್ಯುತ್ಸ್ರವಾಹದ ಪ್ರಮಾಣ ನಿಗದಿತ ಮಟ್ಟವನ್ನು ಮೀರಿದಾಗ, ವಿದ್ಯುತ್ಸ್ರವಾಹದ ಶಾಖೋತ್ಪನ್ನ ಪರಿಣಾಮದಿಂದ ಮಂಡಲದ ವಾಹಕ ತಂತಿಯು ಕರಗಿ ಬೆಂಕಿ ಅವಗಡಗಳು ಸಂಭವಿಸುತ್ತದೆ. ಇದರಿಂದ ಮಂಡಲದ ಜೋಡಿಕೆಯಲ್ಲಿರುವ ವಿದ್ಯುತ್ ಉಪಕರಣಗಳು ಸುಟ್ಟು ಹಾಳಾಗುತ್ತದೆ. ಈ ಅಪಾಯವನ್ನು ಬೆಸೆ [fuse] ಬಳಕೆಯಿಂದ ತಡೆಗಟ್ಟಬಹುದು.

ಬೆಸೆ ತಂತಿಯನ್ನು ಕಡಿಮೆ ತಾಪಕ್ಕೆ ಕರಗಬಲ್ಲ [low melting point] ಹೆಚ್ಚು ರೋಧವುಳ್ಳ ಸೀಸ ಮತ್ತು ತವರದ ಮಿಶ್ರ ಲೋಹದಿಂದ ತಯಾರಿಸುತ್ತಾರೆ.

ಮನೆ ವಯರಿಂಗ್ ವ್ಯವಸ್ಠೆಯಲ್ಲಿ ಬೆಸೆ ತಂತಿ ದರಗಳು [fuse ratings],

  • ಮುಖ್ಯ ಬೆಸೆ [main fuse]-50 ampere
  • ದೀಪ ಮಂಡಲಗಳು [lighting circuits]- 5 ampere
  • ಶಕ್ತಿ ಮಂಡಲಗಳು [power circuit]- 15 ampere.