ಸದಸ್ಯ:Akshata.G

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಅಕ್ಷತಾ ಜಿ. ನಾನು ಸಂತ ಅಲೋಶಿಯಸ್ ಕಾಲೇಜು ಬಿಎಸ್ಸಿ ಪದವಿ ವಿದ್ಯಾರ್ಥಿನಿ. ನಾನು ಜನವರಿ ೪,೧೯೯೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಜನಿಸಿರುತ್ತೇನೆ.ನನ್ನ ತಂದೆಯ ಹೆಸರು ಗುರುರಾಜ, ಅವರು ಮಂಗಳೂರಿನ ಪಣಂಬೂರಿನಲ್ಲಿ ಇರುವ K.I.O.C.L ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಅನುರಾಧ. ನಾನು ಸುಮಾರು ೧೪ ವರುಷಗಳ ಕಾಲ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕುದುರೇಮುಖದಲ್ಲಿ ವಾಸವಾಗಿದ್ದೆ. ನಾನು ಅಲ್ಲಿನ "ಗಿರಿಜ್ಯೋತಿ ಶಾಲೆಯಲ್ಲಿ" ೭ನೇ ತರಗತಿವರೆಗಿನ ಶಿಕ್ಷಣವನ್ನು ಮಾಡಿದೆ. ನಂತರ ೮ ರಿಂದ ೧೦ನೇ ತರಗತಿ ವರೆಗೆ ಶಿವಮೊಗ್ಗದಲ್ಲಿನ ಪ್ರತಿಷ್ಟಿತ "ದೇಶೀಯ ವಿದ್ಯಾ ಶಾಲೆಯಲ್ಲಿ" ಮುಗಿಸಿದೆ. ಮುಂದಿನ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದೆ. ನನ್ನ ಪದವಿ ಪೂವ್ರ ಶಿಕ್ಷಣವನ್ನು ಮಂಗಳೂರಿನ "ಶಾರದಾ ಪದವಿ ಪೂವ್ರ" ಕಾಲೇಜಿನಲ್ಲಿ ಮಾಡಿದೆ. ಇಂಜಿನಿಯರಿಂಗ್ ಅಥವ ವೈದ್ಯಕೀಯ ರಂಗಕ್ಕೆ ಹೋಗಲು ಇಷ್ಟವಿಲ್ಲದ ಕಾರಣ ನಾನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬಿ.ಎಸ್ಸಿಯನ್ನು ಆಯ್ಕೆ ಮಾಡಿಕೊಂಡೆ. ಈಗ ನಾನು ಮಂಗಳೂರಿನ " ಸಂತ ಅಲೋಶಿಯಸ್ " ಕಾಲೇಜಿನಲ್ಲಿ ೨ನೇ ವರುಶದ ಬಿ.ಎಸ್ಸಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ. ನಾನು ೬ನೇ ತರಗತಿಯಲ್ಲಿ ಇದ್ದಾಗ ಹಿಂದಿಯಲ್ಲಿ ಪ್ರಥಮ ಹಾಗು ಮಧ್ಯಮ ಪರೀಕ್ಷೆಗಳನ್ನು ಮುಗಿಸಿದೆ. ನಂತರ ನಾನು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಡ್ರಾಯಿಂಗ್ ನಲ್ಲಿ ಕಿರಿಯ ಹಾಗು ಹಿರಿಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದೆ ಹಾಗು ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯನ್ನೂ ಬರೆದಿದ್ದೆ. ರಾಮಾಯಣ ಪರೀಕ್ಷೆಯಲ್ಲಿ ಶಾಲೆಗೇ ದ್ವಿತೀಯ ಸ್ಥಾನವನ್ನು ಪಡೆದಿದ್ದೆ. ನಾನು ೯ನೇ ತರಗತಿಯಲ್ಲಿ ಇದ್ದಾಗ ನನಗೆ ಭಾರತ ಸರಕಾರದಿಂದ ಪ್ರತಿಭಾವಂತ ವಿದ್ಯಾಥ್ರಿಗಳಿಗೆ ನೀಡುವ "ಇನ್ -ಸ್ಪಾಯರ್" ವಿದ್ಯಾಥ್ರಿ ವೇತನ ಲಭಿಸಿತ್ತು. ನನ್ನ ಹವ್ಯಾಸಗಳೆಂದರೆ ಚಿತ್ರಕಲೆ, ಕರಕುಶಲ, ಛಾಯಾಚಿತ್ರಣ. ನನಗೆ ಕ್ರಿಕೆಟ್ ನಲ್ಲೂ ಆಸಕ್ತಿ ಇದೆ. ನನ್ನ ನೆಚ್ಚಿನ ಕ್ರಿಕೆಟ್ ಯಿಗ "ಮಹೇಂದ್ರ ಸಿಂಗ್ ಧೋನಿ" ಅವರ ಭಾವ ಚಿತ್ರಗಳನ್ನು ಸಂಗ್ರಹಿಸುವುದೂ ನನ್ನ ಹವ್ಯಾಸವಾಗಿದೆ. ಇಲ್ಲಿವರೆಗೆ ನಾನು ಮಹೇಂದ್ರ ಸಿಂಗ್ ಧೋನಿಯ ಸುಮಾರು ೨೫೦ ಭಾವ ಚಿತ್ರಗಳನ್ನು ಸಂಗ್ರಹಿಸಿದ್ದೇನೆ. ನನಗೆ ಒಮ್ಮೆಯಾದರು ಅವರನ್ನು ಭೇಟಿಯಾಗುವ ಆಸೆಯಿದೆ. ನನ್ನ ಬಿ.ಎಸ್ಸಿ ಶಿಕ್ಷಣ ಮುಗಿದ ನಂತರ ಎಂ.ಎಸ್ಸಿ ಮಾಡಿ ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯ ಬೇಕೆಂಬ ಹಂಬಲವಿದೆ.