ವಿಷಯಕ್ಕೆ ಹೋಗು

ಸದಸ್ಯ:Aditya.s.a/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಡಂ ಸ್ಮಿತ್

[ಬದಲಾಯಿಸಿ]
ಆಡಂ ಸ್ಮಿತ್

ಆಡಂ ಸ್ಮಿತಿನ ಹೆಸರು ಆರ್ಥಿಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರಿಯುವಂತ್ತದು; ರಾಜಕೀಯ ಅರ್ಥಶಾಸ್ತ್ರದ ಪಿತಮಹಾನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆಂದೂ, ಅವರನು ಗೌರವಿಸುತ್ತಾರೆ. ಆಡಂ ಸ್ಮಿತ್ ಸ್ಕಾಟ್ಲೆಂಡ್ನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು,ಅವರ ತಂದೆಯವರು ಇವರ ಬಾಲ್ಯದಲ್ಲಿ ರುವಾಗಲೇ ತೀರಿಕೊಂಡರು ಇದರಿಂದ ಇವರ ತಾಯಿಯು ಅವರನು ಬೆಳೆಸಿದರು.ಎರಡು ಶತಮಾನಗಳಿಗೂ ಹಿಂದೆ ಪ್ರತಿಪಾದಲಿಸ ತನ್ನ ಆರ್ಥಿಕ ಅಭಿಪ್ರಾಯಗಳಲ್ಲಿ ಕೆಲವು ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಅನ್ವಯವಾಗುವುದನ್ನು ನೋಡಿದರೆ, ಆಡ್ಂ ಸ್ಮಿತ್‌ನ ಪ್ರತಿಭೆಯ ಅರಿವಾಗುತ್ತದೆ.[] ಆತನ ಪ್ರಖ್ಯಾತವಾದ ತೆರೆಗೆಯ ಸೂತ್ರಗಳು ಆಧುನಿಕ ಕಲ್ಯಾಣ ರಾಷ್ಟ್ರ ಗಳಲ್ಲಿ ತೆರೆಗೆಯ ತತ್ವದ ಮಾರ್ಗದರ್ಶಿಗಳಾಗಿವೆ. ಆರ್ಥಿಕ ತತ್ವಗಳ ಬಾಹೈಪಾ ರೂಪ ನಿರ್ಣಯ, ಅರ್ಥಶಾಸ್ತ್ರದ ವ್ಯಾಪ್ತಿಯ ನಿರ್ಧಾರ ಮತ್ತು ಉತ್ಪಾದನೆ, ಮೌಲ್ಯ ಹಾಗೂ ವಿತರಣಾ ಸಮಸ್ಯೆಗಳ ವಿಶ್ಲೇಷಣೆ ಮಾಡುವುದಕ್ಕೆ ಆಡ್ಂ ಸ್ಮಿತ್ ಕಾರಣಕರ್ತನಾಗಿದ್ದಾನೆ.ಹಿತಸಕ್ತಿಗಳ ಸಮ್ಮಿಳನದ ಬಗ್ಗೆ ಕ್ರಮಬದ್ಧ ಹೇಳಿಕೆ ನೀಡಿದವರಲ್ಲಿ ಆತ ಪ್ರಥಮನಾಗಿದ್ದ ಹಾಗೂ ಅರ್ಥಶಾಸ್ತ್ರಕ್ಕೆ ತುಷ್ಟಿಗುಣ ಸಂಪ್ರದಾಯವನ್ನು, ಪರಿಚಯಿಸಿದ್ದು ಕೂಡ ಆಡ್ಂ ಸ್ಮಿತಿನ ಮಹತ್ಕಾರ್ಯವಾಗಿದೆ. ಅದುದರಿಂದ ಆಡ್ಂ ಸ್ಮಿತ್, ಇಂದಿಗೂ ಕೂಡ ರಾಜಕಿಯಾರ್ಥಶಾಸ್ತ್ರದ ಜನಕ ಎಂದು ಗೌರವಿಸಲ್ಪಡುತ್ತಾರೆ.ಸ್ಮಿತ್ತನ ಆರ್ಥಿಕ ಚಿಂತನೆಯನ್ನು ಆತನ ಮೇರು ಕೃತಿಯಾದ "ವೆಲ್ತ್ ಆಫ಼್ ನೇಷನ್ಸ್" ನಲ್ಲಿ ಕಾಣಬಹುದು. ಇದರ ಪ್ರಕಟಣೆಯೊಂದಿಗೆ ರಾಜಕಿಯಾರ್ಥ ಶಾಸ್ತ್ರದ ಆರಂಭಕ್ಕೆ ಬುನಾದಿ ದೊರೆಯಿತು. ಇದು ಯುಗ ಪ್ರವರ್ತಕ ಗ್ರಂಥವಾಗಿದ್ದು, ವಾಣಿಜ್ಯ ಪಂಥಕ್ಕೆ ಪ್ರಬಲ ಪಂಥಾಹ್ವಾನ ನೀಡಿತು. []

ಜೀವನ ಚಿತ್ರಣ

[ಬದಲಾಯಿಸಿ]

ಸ್ಕಾಟ್ಲಾಂಡಿನ ಎಡಿನ್ಬರ್ಗ್ ಪಟ್ಟಣದ ಸಮೀಪದ ಕಿರ್ತಾಲ್ಡಿ ಎಂಬಲ್ಲಿ ೧೭೨೩ರಲ್ಲಿ ಒರ್ವ ಸ್ಕಾಟಿಷ್ ನ್ಯಾಯವಾದಿಯ ಪುತ್ರನಾಗಿ ಆಡ್ಂ ಸ್ಮಿತ್ ಜನಿಸಿದ. ಆಡ್ಂ ಸ್ಮಿತ್‌ನ ತಂದೆ ಸುಂಕದ ಅಧಿಕಾರಿ ಕೂಡಾ ಆಗಿದ್ದ.೧೭೩೭ ರಿಂದ ೧೭೪೦ರ ವರೆಗೆ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಸ್ಮಿತ್ ಅಧ್ಯಯನ ಮಾಡುವಾಗ, ಆಗಿನ ಸರ್ವೋಷ್ಕ್ರುಷ್ಟ ತತ್ವ ಚಿಂತಕ ಹೆಚ್ಸನ್ ಆತನಿಗೆ ಗುರುವಾಗಿ ದೊರೆತ.೧೭೪೦ರಿಂದ ೧೭೪೬ರ ವರೆಗೆ ಹೆಸರಾಂತ ಆಕ್ಸ್ ಫ಼ೊರ್ಡ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಅಧ್ಯಯನವನ್ನು ಸ್ಮಿತ್ ಮುಂದುವರಿಸಿದರು.೧೭೪೭ರಿಂದ ೧೭೫೦ರ ವರೆಗೆ ಆತ ಎಡೆನ್ಬರ್ಗ್ ವಿಶ್ವವಿದ್ಯಾನಿಲಯದ ಆಂಗ್ಲ ಸಾಹಿತ್ಯ ಮತ್ತು ರಾಜಕಿಯಾರ್ಥಶಾಸ್ತ್ರದ ಬಗ್ಗೆ ಉಪನ್ಯಾಸಗಳನ್ನು ನೀಡಿದ.ಏತನ್ಮಧೈ ೧೭೪೯ರಲ್ಲಿ ಆತ ಫ಼ಿಲೊಸೊಫ಼ಿಕಲ್ ಎಸ್ಸೆ ಎಂಬ ಗ್ರಂಥ ಬರೆದ ನಾದರೂ ಅದು ಆತನ ಮರಣದ ನಂತರವೇ ಪ್ರಕಟವಾಯಿತು.[] ೧೭೫೧ ರಲ್ಲಿ ಆತ ತರ್ಕಶಾಸ್ತ್ರದ ತಿಯರಿ ಆಫ಼್ ಮೊರಲ್ ಸೆನ್ಟಿಮೇನ್ಟ ಅವನಿಗೆ ಹೆಸರು ಮತ್ತು ಖ್ಯಾತಿಗಳೆರಡರಲ್ಲಿ ಒಟ್ಟಿಗೇ ತಂದಿತುಆಡ್ಂ ಸ್ಮಿತ್ ಗೊಡ್ಡು ತತ್ವವನ್ನು ಜೋತುಬೀಳದೆ ವಾಸ್ತವಿಕವಾದ ಭೌತಿಕತೆಗೆ ಪ್ರಾಧಾನ್ಯತೆ ನೀಡಿದುದನ್ನು ಈ ಪುಸ್ತಕದಲ್ಲಿ ಕಾಣಬಹುದು.೧೭೬೪ ರಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಿದ್ದು ಸ್ಮಿತ್, ಡ್ಯೂಕ್ ಆಫ಼್ ಬೆಕಲ್ಯೋನ ಜೊತೆ ಯೂರೋಪಿನ ಪ್ರವಾಸ ಕೈಗೊಂಡ. ಆತ ಡ್ಯೂಕನ ಶಿಕ್ಷಕ ಹಾಗೂ ಮಾರ್ಗದರ್ಶಿಯಾಗಿ ಕೆಲಸ ನಿರ್ವಹಿಸಿದ. ಯೂರೋಪಿನ ಪ್ರವಾಸವು ಸ್ಮಿತಿನ ಜ್ಞಾನ ಹೆಚ್ಚಿಸಲು ಸಹಕಾರಿಯಾಗಿತ್ತು. ಈ ಪ್ರವಾಸಾವಧಿಯಲ್ಲಿ ಆತ ಸಮಕಾಲಿನ ಮಹಾನ್ ಚಿಂತಕರಾದ ಕ್ವಿನ್, ಡರ್ಗೋಟ್, ವಾಲ್ಟೆರ್ ಮುಂತಾದವರನ್ನು ಸಂಧಿಸಿದ.೧೭೬೬ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ ಸ್ಮಿತ್ ತನ್ನ ಯುಗ ಪ್ರವರ್ತಕ ಉದ್ಗ್ರಂಥವಾದ "ವೆಲ್ತ್ ಆಫ಼್ ನೇಷನ್ಸ್" ಅನ್ನು ಬರೆಯಲಾರಂಬಿಸಿದ. ೧೭೭೬ರಲ್ಲಿ ಈ ಪುಸ್ತಕ ಪ್ರಕಟವಾಗುವದರೊಂದಿಗೆ ಆರ್ಥಿಕ ಜಗತ್ತಿಗೆ ಹೊಸ ಆಯಾಮವೊಂದು ದೊರಕಿತು.೧೭೭೮ರಲ್ಲಿ ತನ್ನ ತಂದೆಯ ಹುದ್ದೆಯಾದ ಸುಂಕ ಪ್ರಾಧಿಕಾರದ ಅಧಿಕಾರಿಯಾಗಿ ಸ್ಮಿತ್ ನೇಮಕಗೊಂಡ. ಇದೇ ಹುದ್ದೆಯಲ್ಲಿ ಆತ ೧೭೯೦ ರ ವರೆಗೆ, ಅಂದರೆ ಮರಣದವರೆಗೂ ಉಳಿದ.[]

ಪರಿಚಯ

[ಬದಲಾಯಿಸಿ]
ಶತಮಾನಗಳ ಹಿಂದೆ ಪ್ರತಿಪಾದಲಿಸ ತನ್ನ ಆರ್ಥಿಕ ಅಭಿಪ್ರಾಯಗಳಲ್ಲಿ ಕೆಲವು ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಅನ್ವಯವಾಗುವುದನ್ನು ನೋಡಿದರೆ, ಆಡ್ಂ ಸ್ಮಿತ್‌ನ ಪ್ರತಿಭೆಯ ಅರಿವಾಗುತ್ತದೆ. ಹಿತಸಕ್ತಿಗಳ ಸಮ್ಮಿಳನದ ಬಗ್ಗೆ ಕ್ರಮಬದ್ಧ ಹೇಳಿಕೆ ನೀಡಿದವರಲ್ಲಿ ಆತ ಪ್ರಥಮನಾಗಿದ್ದ ಹಾಗೂ ಅರ್ಥಶಾಸ್ತ್ರಕ್ಕೆ ತುಷ್ಟಿಗುಣ ಸಂಪ್ರದಾಯವನ್ನು, ಪರಿಚಯಿಸಿದ್ದು ಕೂಡ ಆಡ್ಂ ಸ್ಮಿತಿನ ಮಹತ್ಕಾರ್ಯವಾಗಿದೆ.ಆತನ ಪ್ರಖ್ಯಾತವಾದ ತೆರೆಗೆಯ ಸೂತ್ರಗಳು ಆಧುನಿಕ ಕಲ್ಯಾಣ ರಾಷ್ಟ್ರ ಗಳಲ್ಲಿ ತೆರೆಗೆಯ ತತ್ವದ ಮಾರ್ಗದರ್ಶಿಗಳಾಗಿವೆ. ಅದುದರಿಂದ ಆಡ್ಂ ಸ್ಮಿತ್, ಇಂದಿಗೂ ಕೂಡ ರಾಜಕಿಯಾರ್ಥಶಾಸ್ತ್ರದ ಜನಕ ಎಂದು ಗೌರವಿಸಲ್ಪಡುತ್ತಾರೆ.ಆರ್ಥಿಕ ತತ್ವಗಳ ಬಾಹೈಪಾ ರೂಪ ನಿರ್ಣಯ, ಅರ್ಥಶಾಸ್ತ್ರದ ವ್ಯಾಪ್ತಿಯ ನಿರ್ಧಾರ ಮತ್ತು ಉತ್ಪಾದನೆ, ಮೌಲ್ಯ ಹಾಗೂ ವಿತರಣಾ ಸಮಸ್ಯೆಗಳ ವಿಶ್ಲೇಷಣೆ ಮಾಡುವುದಕ್ಕೆ ಆಡ್ಂ ಸ್ಮಿತ್ ಕಾರಣಕರ್ತನಾಗಿದ್ದಾನೆ.[]


ಹದಿನಾಲ್ಕು ವಯಸ್ಸಿನಲ್ಲಿ, ಇವರು ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದರು,ಹೆಚ್ಸನ್ ಎಂಬ ಪ್ರಸಿದ್ಧವಾದ ತತ್ವ ಚಿಂತಕರು ಸ್ಮಿತ್ ರವರ ಗುರುಗಳಾಗಿದ್ದರು.ಹೆಸರಾಂತವಾದ ಆಕ್ಸ್ ಫ಼ೊರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವರ ಅಧ್ಯಯನವನ್ನು ಸ್ಮಿತ್ ರವರ ಮುಂದುವರಿಸಿದರು.ಇವರು ಎಡೆನ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ರಾಜಕಿಯಾ ಅರ್ಥಶಾಸ್ತ್ರದ ಬಗ್ಗೆ ಮತ್ತು ಆಂಗ್ಲ ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ೧೭೪೯ರಲಿ "ಫಿಲೊಸೊಫಿಕಲ್ ಎಸ್ಸೆ" ಎಂಬ ಪುಸ್ತಕವನು ಬರೆದರು ಆದರೆ ಅದು ಅವರ ಮರಣದ ನಂತರವೇ ಅವರು ಪುಸ್ತಕವು ಪ್ರಕಟವಾಯಿತು.ಇವರ "ತಿಯರಿ ಆಫ್ ಮೊರಲ್ ಸೆನ್ಟಿಮೇಂಟ್" ಎಂಬ ಪುಸ್ತಕವು ಇವರಿಗೆ ಖ್ಯಾತಿ ಮತ್ತು ಹೆಸರನು ಒಟ್ಟಿಗೇ ತಂದಿತು. ಈ ಪುಸ್ತಕದಲ್ಲಿ ಆಡ್ಂ ಸ್ಮಿತ್ ರವರ ಗೊಡ್ಡು ತತ್ವವನ್ನು ಜೋತುಬೀಳದೆ ವಾಸ್ತವಿಕವಾದ ಭೌತಿಕತೆಗೆ ಪ್ರಾಧಾನ್ಯತೆ ನೀಡಿದುದನ್ನು ಕಾಣಬಹುದು.ಅವರ ವಿಶ್ವ ಪ್ರಸಿದ್ಧವಾದ ಪುಸ್ತಕ " ವೆಲ್ತ್ ಆಫ್ ನೇಷನ್ಸ್" ಅರ್ಥಶಾಸ್ತ್ರದ ಒಂದು ಮೂಲಸ್ತಂಭವಾಗಿದೆ.೧೭೭೮ರಲ್ಲಿ ತಮ್ಮ ತಂದೆಯ ಹುದ್ದೆಯಾದ ಸುಂಕ ಪ್ರಾಧಿಕಾರದ ಅಧಿಕಾರಿಯಾಗಿ ಸ್ಮಿತ್ ನೇಮಕಗೊಂಡರು. ಇದೇ ಹುದ್ದೆಯಲ್ಲಿ ಅವರು ಮರಣದವರೆಗೂ ಉಳಿದುಕೊಂಡಿದರು.

ಆಡಂ ಸ್ಮಿತ್ತರವರ ಸಮಾಧಿ
  1. https://www.britannica.com/biography/Adam-Smith
  2. https://www.investopedia.com/updates/adam-smith-economics/
  3. Buchan, James (2006). The Authentic Adam Smith: His Life and Ideas. W. W. Norton & Company. ISBN 0-393-06121-3.
  4. Buchholz, Todd (1999). New ideas from Dead Economists: An introduction to modern economic thought. Penguin Books. ISBN 0-14-028313-7.
  5. L. Davis, William; Figgins, Bob; Hedengren, David; B. Klein, Daniel (May 2011). "Economics Professors’ Favorite Economic Thinkers, Journals, and Blogs (along with Party and Policy Views)" (PDF). Econ Journal Watch 8 (2): 133.