ಸದಸ್ಯ:Abhishek g n 333

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿರಿಯಾಪಟ್ಟಣ ಇದು ಮೈಸೂರು ಜೆಲ್ಲೆ ಯ ಒಂದು ತಾಲೂಕು ಕೇಂದ್ರ. ಮಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೈಸೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ೨೭೬೯ ಆಡಿ ಎತ್ತರದಲ್ಲಿರುವ ಒಂದು ಪಟ್ಟಣ ಪಂಚಾಯತು ಆಗಿದೆ. ಇಲ್ಲಿ ಪ್ರಸಿದ್ಡ ಮಸಣಿಕಮ್ಮ ದೇವಾಲಯವಿದೆ. ಪಿರಿಯಾಪಟ್ಟಣದ ಕಣಗಾಲು ಗ್ರಾಮದಲ್ಲಿ, ಕನ್ನಡದ ಸುಪ್ರಸಿದ್ಧ ನಿರ್ದೇಶಕರಾದ ಪುಟ್ಟಣ್ಣಕಣಗಾಲ ಜನಿಸಿದ್ದು. ಜನಪದ ಲಾವಣಿಗಲ್ಲಿ ಬರುವ ಪಿರಿಪಟ್ಟಣದ ಕಾಳಗ ಸುಪ್ರಸಿದ್ದವಾಗಿದ್ದು, ಕಂಸಾಳೆಯವರ ಪದಗಳಲ್ಲಿ ಹಾಡಲಾಗುತ್ತದೆ. ಚೆಂಗಾಳ್ವರ ದೊರೆ ವೀರರಾಜನಿಗೂ, ಮೈಸೂರಿನ ದಳವಾಯಿಗೂ ನಡೆದ ಯುದ್ಧ ಇದು. ಐತಿಹಾಸಿಕ ದಾಖಲೆಗಳ ಪ್ರಕಾರ, ಮೈಸೂರ ಒಡೆಯರ್ ರಣಧೀರ ಕಂಠೀರವ ರವರ ಕಾಲದಲ್ಲಿ, ಸ್ವಾಂತಂತ್ರ್ಯವಾಗಿದ್ದ ಪಿರಿಯಾಪಟ್ಟಣದ ಚೆಂಗಾಳ್ವರು, ಯುದ್ಧದಲ್ಲಿ ಸೋತು, ಮೈಸೂರಿನ ಸಾಮಂತರಾಗುತ್ತಾರೆ. ಕೊರಟಿ ಶ್ರೀನಿವಾಸರಾಯರ , ಐತಿಹಾಸಿಕ ಕೃತಿಗಳಲ್ಲಿ ಇದರ ಬಗೆಗೆ ಹೆಚ್ಚಬಹುದು ಮಾಹಿತಿ ಲಭ್ಯವಿರುತ್ತದೆ