ಸದಸ್ಯ:ANUSH AV03

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕುಟುಂಬ[ಬದಲಾಯಿಸಿ]

ತುಮಕೂರು
ಕರ್ನಾಟಕ ಬೂಪಟ  

ನನ್ನ ಹೆಸರು ಅನುಷ್ ಎ.ವಿ.ನಾನು ಕರ್ನಾಟಕ ರಾಜ್ಯದ, ತುಮಕೂರು ನಗರದ ಗಾಂಧಿನಗರದಲ್ಲಿ ವಿಶ್ವನಾಥ್ ಮತ್ತು ತಾರಾ ದಂಪತಿಗಳ ಎರಡನೆಯ ಮಗನಾಗಿ,೨೦೦೦ಏ ಇಸವಿಯ ನವೆಂಬರ್ ತಿಂಗಳ ೨ನೇ ತಾರೀಖಿನಂದು ಜನಿಸಿದೆ. ನನ್ನ ಅಣ್ಣನ ಹೆಸರು ಅಚಲ್.ಚಿಕ್ಕ ನಿಂದಲೂ, ಅಪ್ಪ ಅಮ್ಮಂದಿರ ಮುದ್ದಿನ ಮಗ.ಅಮ್ಮ ಅಂದರೆ ನನಗೆ ತುಂಬಾ ಇಷ್ಟ.ಅಮ್ಮ ನನಗೆ ಪ್ರೀತಿಯಿಂದ ಊಟ ಮಾಡಿಸುತ್ತಿದ್ದಯದು ಈಗಲೂ ನೆನಪಿದರ.ಅಪ್ಪ ನನಗೆ ಪ್ರಪಂಚದಲ್ಲಿ ಹೇಗೆ ಬದುಕಬೇಕು ಎಂದು ಹೇಳಿಕೊಡುತ್ತಿದ್ದರು.ಕುಟುಂಬದಲ್ಲಿ ತುಂಟ ಹುಡುಗ ನಾನು.ನನಗೆ ಆರು ವರ್ಷ ಆಯಿತು, ಶಾಲೆಗೆ ಸೇರಿಸಲು ಯೋಚಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಮುಂಬೈ

ಬಿಷಪ್ ಸಾರ್ಜೆಂಟ್ ಶಾಲೆಗೆ ಸೇರಿಸಿದರು.ಮೊದಲ ಬಾರಿ ಶಾಲೆಗೆ ಹೋಗಲು ಮನಸಾಗಲಿಲ್ಲ.ಅಳುತ್ತಾ ಕುಳಿತುಕೊಂಡಿದ್ದೆ,ಆಗ ಶಿಕ್ಷಕಿ ಬಂದು ಸಮಾಧಾನ ಮಾಡಿದರು.ದೀನಾ ಎಂಬ ಶಿಕ್ಷಕಿ, ಪ್ರೀತಿಯಿಂದ ಅಕ್ಷರ ಕಳುಹಿಸಿದರು.ಅವರ ದಯೆಯಿಂದ ಅಕ್ಷರ ಕಲಿತುಕೊಂಡೆ.ಅನೇಕ ಗೆಳೆಯರು ದೊರೆತರು.ಅವರ ಜೊತೆಗೆ ದಿನನಿತ್ಯ ಆಟ ಆಡುತ್ತಿದ್ದೆ.ಅವರ ಡಬ್ಬಿಗಳಲ್ಲಿನ ಊಟವನ್ನೆಲ್ಲ ನಾನೇ ತಿನ್ನುತ್ತಿದ್ದೆ.ಹೀಗೇ ಹತ್ತನೇ ತರಗತಿಯ ವರೆಗೆ ಅದೇ ಶಾಲೆಯಲ್ಲಿ ಪಾಠ ಕಲಿತುಕೊಂಡೆ.ಶಾಲೆಯಿಂದ ಪಾಂಡಿಚರಿ,ಮಹಾಬಲಿಪುರಂ,ಕೊಡೈಕೆನಾಲ್, ರಾಜಸ್ಥಾನ, ಮುಂಬಯಿಗೆ ಪ್ರವಾಸ ಹೋಗಿದ್ದೆವು.ಗೆಳೆಯರು ಜೊತೆಗೆ ಆ ಜೀವನ ಬಹಳ ಅದ್ಭುತವಾಗಿತ್ತು.ಶಿಕ್ಷಕರ ನೆಚ್ಚಿನ ವಿದ್ಯಾರ್ಥಿ ನಾನು.ಎಲ್ಲ ವಿಷಯಗಳಲ್ಲೂ ನಾನೇ ಮುಂದಿರುತ್ತಿದ್ದೆ.

ಅಂತೂ ತುಂಬಾ ಖುಷಿಯಿಂದ ಓದುತ್ತಿದ್ದೆ.ಅಂತೂ ಪರೀಕ್ಷೆಗಳು ಬಂದೇ ಬಿಟ್ಟವು.ಎಲ್ಲ ಗೆಳೆಯರ ಜೊತೆಗೆ,ಓದಲು ಶುರುಮಾಡಿದೆ,ಟ್ಯೂಷನ್ಗೂ ಕೂಡ ಸೇರಿಕೊಂಡೆ.ಎಲ್ಲ ಶಿಕ್ಷಕರ ನೆರವಿನಿಂದ ೮೦% ಅಂಕಗಳನ್ನು ಪಡೆದುಕೊಂಡೆ. ರಜಾದಿನಗಳಲ್ಲಿ ಕುಟುಂಬದ ಸಮೇತ ಮಡಿಕೇರಿಗೆ ಪ್ರವಾಸ ಹೋಗಿದ್ದೆ.


ಕಾಲೇಜು ಜೀವನ[ಬದಲಾಯಿಸಿ]

ಕಾಲೇಜಿಗೆ ಸೇರಿಕೊಳ್ಳಲು ಯೋಚಿಸ ತೊಡಗಿದೆ.ಅಮ್ಮ ನನ್ನನ್ನು ಬೆಂಗಳೂರಿನ ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಲು ಹೇಳಿದರು.ಅದರಂತೆ ನಾನೂ ಅದೇ ಕಾಲೇಜಿಗೆ ಸೇರಲು ಆಸಕ್ತಿ ತೋರಿಸಿದೆ. ಬೆಂಗಳೂರಿನಲ್ಲಿ ಪಿ.ಜಿ.ಯಲ್ಲಿ ಬಾಡಿಗೆ ಕೊಟ್ಟು ಉಳಿದುಕೊಂಡೆ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಮಾಡಿಸಿದೆ.ಮನೆಯವರನ್ನೆಲ್ಲಾ ಬಿಟ್ಟು ಬದುಕುವುದು ತುಂಬಾ ಕಷ್ಟಕರವಾಗಿತ್ತು.ಅವರ ಬಗ್ಗೆಯೇ ಸದಾ ಯೋಚಿಸುತ್ತಿದ್ದೆ.ಕಾಲೇಜಿನಲ್ಲಿ ಅನೇಕ ಗೆಳೆಯರನ್ನು ಪರಿಚಯ ಮಾಡಿಕೊಂಡೆ.ಚೇತನ್ ಎಂಬ ಗೆಳೆಯ ದೊರಕಿದ.ಅವನ ತುಂಟತನ ನನಗೆ ಬಹಳ ಹಿಡಿಸಿತು.ಅವನ ಜೊತೆ ಇಡೀ ಕಾಲೇಜನ್ನು ಸುತ್ತಿದೆ.

ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ಕಾಲಿಟ್ಟವು. ಶಿಕ್ಕಷಕರು ನಮ್ಮನ್ನು ಖುಷಿಯಿಂದ ಸ್ವಾಗತಿಸಿದರು. ದಿನ ಕಳೆದಂತೆ ಪರೀಕ್ಷೆಗಳ ಬಗ್ಗೆ ಚಿಂತೆ ಜಾಸ್ತಿಯಾಯಿತು.ಪರೀಕ್ಷೆಗಾಗಿ ಓದಲು ಶುರು ಮಾಡಿದೆ.ಪರೀಕ್ಷೆಯನ್ನು ತುಂಬಾ ಚೆನ್ನಾಗಿ ಬರೆದೆ.ದ್ವಿತೀಯ ಪಿಯುಸಿ ನಲ್ಲಿ ೮೫% ಅಂಕಗಳನ್ನು ಗಳಿಸಿದೆ. ಮನೆಯವರೆಲ್ಲ ಖುಷಿಯಿಂದ ನನ್ನನ್ನು ಅಭಿನಂದಿಸಿದರು.ನಂತರ ರಜೆಯಲ್ಲಿ ದೇವರಾಯನದುರ್ಗ, ಗೊರವನಹಳ್ಲಿ ಮಹಾಲಕ್ಷ್ಮಿ ದೇವಾಲಯಗಳಿಗೆ ಭೆಟಿ ಕೊಟ್ಟೆ.


ಕ್ರೈಸ್ಟ್ ಯೂನಿವರ್ಸಿಟಿ[ಬದಲಾಯಿಸಿ]

ನಂತರ ಡಿಗ್ರಿ ಗಾಗಿ ಕ್ರೈಸ್ಟ್ ಯೂನಿವರ್ಸಿಟಿ ವನ್ನು ಸೇರಿಕೊಂಡೆ.ಅಲ್ಲಿ ಅಶೋಕ ಎಂಬ ಜೀವ ಗೆಳೆಯನ ಪರಿಚಯವಾಯಿತು. ಅವನ ಸುಂದರವಾದ ವ್ಯಕ್ತತ್ವ ನನಗೆ ತುಂಬಾ ಹಿಡಿಸಿತು.ಅವನ ಜೊತೆ ಜೀವನ ತುಂಬಾ ಚೆನ್ನಾಗಿದೆ.ಇನ್ನೂ ಅನೇಕ ಹೊಸ ಗೆಳೆಯರ ಪರಿಚಯವಾಗಿದೆ.ಬದುಕು ಸುಂದರಗೊಳಿಸಿಕೊಳ್ಳಬೇಕೆಂದು ಕಾಯುತ್ತಿದ್ದೆನೆ.