ಸದಸ್ಯ:45.112.20.200

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಶ್ವಿನಿ.ವಿ
Born೧೭/೧೧/೨೦೦೦
ಆಡುಗೋಡಿ,ಬೆಂಗಳೂರು ಜಿಲ್ಲೆ, ಭಾರತ.
Educationಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
Parent(s)ವೆಂಕಟೇಶ್, ಅನಿತ.




ಕುಟುಂಬ:[ಬದಲಾಯಿಸಿ]

ನನ್ನ ಹೆಸರು ಅಶ್ವಿನಿ.ವಿ.ನಾನು ವೆಂಕಟೇಶ್ ಮತ್ತು ಅನಿತ ದಂಪತಿಯ ತೃತೀಯ ಪುತ್ರಿ. ನಾನು ೧೭-೧೧-೨೦೦೦ ಇಸವಿಯಲ್ಲಿ, ಬೆಂಗಳೂರಿನಲ್ಲಿ ಜನಿಸಿದೆ.

ಈಗ ನಾನು ಆಡುಗೋಡಿ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಅಕ್ಕನ ಹೆಸರು ಸಿಂಧು. ಅಣ್ಣನ ಹೆಸರು ಮಂಜುನಾಥ. ಬಾಲ್ಯದಿಂದಲೂ ನಾನು ನಮ್ಮ

ತಂದೆ ತಾಯಿಯ ಮುದ್ದಿನ ಮಗಳು. ಅಲ್ಲದೆ ನಾನು ಕಿರಿಯವಳಾಗಿದ್ದರಿಂದ ನನ್ನ ಕುಟುಂಬದಲ್ಲಿ ಎಲ್ಲರೂ ನನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಬಾಲ್ಯದಲ್ಲಿ ಆಡಿದ ಆಟ,ತುಂಟತನ,ಗಲಾಟೆ,ಕೀಟಲೆ ಈಗಲೂ ನನ್ನ ನೆನಪಿನಲ್ಲಿದೆ.

ಬಾಲ್ಯ ಮತ್ತು ವಿದ್ಯಾಭ್ಯಾಸ:[ಬದಲಾಯಿಸಿ]

ನನಗೆ ೫ ವರ್ಷವಿದ್ದಾಗ ನನ್ನ ತಾಯಿ ಆಡುಗೋಡಿಯ ಮುನಿಚಿನ್ನಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾತಿ ಮಾಡಿದರು.ಆಗ ನನ್ನ ಅಕ್ಕ ಅದೇ ಶಾಲೆಯಲ್ಲಿ

ಓದುತ್ತಿದ್ದ ಕಾರಣ,ನನ್ನನ್ನು ಆ ಶಾಲೆಯಲ್ಲೇ ದಾಖಲು ಮಾಡಿದರು. ನಾನು ಒಂದನೇ ತರಗತಿಯಲ್ಲಿ ಶಾಲೆಗೆ ಹೋಗಲು ಬಹಳ ಹಠ ಮಾಡುತ್ತಿದ್ದೆ. ಆದರೆ ನನ್ನ

ತರಗತಿ ಶಿಕ್ಷಕಿ ಶೋಭಾರವರ ಪಾಠ,ಬುದ್ಧಿವಾದ,ಪ್ರೀತಿಮಾತು ಹಾಗೂ ಪ್ರೋತ್ಸಾಹದಿಂದ ತಪ್ಪದೆ ಶಾಲೆಗೆ ಹೋಗುವ ಮನಸ್ಸು ಬಂದಿತ್ತು. ನನಗೆ ತರಗತಿಯಲ್ಲಿ

ಬಹಳ ಸ್ನೇಹಿತರಿದ್ದರು. ನನಗೆ ಆತ್ಮೀಯ ಸ್ನೇಹಿತೆಯರೆಂದರೆ ಭವಾನಿ,ಸಿಂಧೂಜ,ಖುಷ್ಬು,ಐಶೂ,ಮತ್ತು ಪ್ರಿಯಾಂಕ. ನನಗೆ ಓದಿನ ಜೊತೆಯಲ್ಲಿ ಹಾಡು,ನಾಟಕ,

ಪ್ರಬಂಧ ಮತ್ತು ಆಶುಭಾಷಣ ಮುಂತಾದ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಬಹಳ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಗೆದ್ದಿದ್ದುಂಟು. ನಾನು ೭ನೇ ತರಗತಿ

ಕಲ್ಲಿನ ಕೋಟೆ

ಓದುತ್ತಿರುವಾಗ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದೆವು.ಮೈಸೂರು,ಚಾಮುಂಡಿಬೆಟ್ಟ,ತಲಕಾಡು,ರಂಗನ ತಟ್ಟು,ಚಿತ್ರದುರ್ಗ,ಬಳ್ಳಾರಿ ಮುಂತಾದ ಸ್ಥಳಗಳಿಗೆ ಭೇಟಿ

ನಿಡಿದ್ದೆವು. ಈ ಪ್ರವಾಸದಿಂದ ಕರ್ನಾಟಕದಲ್ಲಿನ ನಯನ ಮನೋಹರ ತಾಣಗಳ ಬಗ್ಗೆ ತಿಳಿದುಕೊಂಡೆ. ಇದು ನನ್ನ ಜೀವನದ ಸಿಹಿ ನೆನಪು.


ನಾನು ನನ್ನ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಸರ್ಕಾರಿ ಪ್ರೌಢಶಾಲೆ,ಆಡುಗೋಡಿಯಲ್ಲಿ ೮ನೇ ತರಗತಿಗೆ ದಾಖಲಾದೆ. ನಾನು ಆ ಶಾಲೆಯಲ್ಲಿ ಬಹಳ ವಿಚಾರ,

ಹಸಿರು ನಾಡು

ಜ್ಞಾನ ಪಡೆದುಕೊಂಡೆ. ನನ್ನ ಶಿಕ್ಷಕರ ಸಹಾಯದಿಂದ ಮತ್ತು ಸ್ನೇಹಿತರ ಪ್ರೋತ್ಸಾಹದಿಂದ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ

ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಪ್ರತಿವರ್ಷ ರಾಷ್ಟ್ರಹಬ್ಬ,ನಾಡಹಬ್ಬದಂದು ಕಂಠೀರವ ಕ್ರೀಡಾಂಗಣಕ್ಕೆ ಹೋಗಿ ಪಥಸಂಚಲನ ಮಾಡುತ್ತಿದ್ದೆವು. ನಾನು ಹತ್ತನೇ

ತರಗತಿಯಲ್ಲಿದ್ದಾಗ ಗೆಳತಿಯರು ಹಾಗು ನಮ್ಮ ಗುರುಗಳೊಂದಿಗೆ ಇನ್ನೋವೇಟಿವ್ ಫಿಲಂ ಸಿಟಿಗೆ ಪ್ರವಾಸಕ್ಕೆಂದು ಹೋಗಿದ್ದೆ. ಆ ಕ್ಷಣವನ್ನು ಬಹಳ ಮೋಜು

ಮಸ್ತಿಯಿಂದ ಕಳೆದೆವು. ನಾನು ೧೦ನೇ ತರಗತಿಯಲ್ಲಿ ನನ್ನ ಶಿಕ್ಷಕರ ಸಹಾಯ,ಪ್ರೋತ್ಸಾಹದಿಂದ ಉತ್ತಮ ಅಂಕಗಳಿಸಿದೆ.ನನ್ನ ತಂದೆ ತಾಯಿ,ಶಿಕ್ಷಕರು ನನ್ನನ್ನು

ಅಭಿನಂದಿಸಿದರು.


ಕಾಲೇಜು ಜೀವನ:[ಬದಲಾಯಿಸಿ]

ನಾನು ನನ್ನ ಕಾಲೇಜು ಶಿಕ್ಷಣಕ್ಕೆ ನಗರದ ಜ್ಯೋತಿನಿವಾಸ್ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡೆ. ವಾಣಿಜ್ಯ ವಿಭಾಗದಲ್ಲಿ ನಾನು ವ್ಯಾಸಂಗ ಮಾಡಿದೆ.

ಈ ಕಾಲೇಜಿನಲ್ಲಿ ನನಗೆ ಹೊಸ ಸ್ನೇಹಿತರು,ಶಿಕ್ಷಕರು,ವಾತಾವರಣ, ನಿಯಮದ ಅನುಭವವಾಯಿತು. ಸ್ನೇಹಿತರೊಂದಿಗೆ ಬಹಳ ಸಂತೋಷದ ಕ್ಷಣಗಳನ್ನು

ಕಳೆದೆ.ಕಾಲೇಜಿನಲ್ಲಿ ಏರ್ಪಡಿಸುತ್ತಿದ್ದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ಬಹುಮಾನಗಳನ್ನು ಗೆಲ್ಲುತ್ತಿದ್ದೆ. ದ್ವಿತೀಯ ಪಿಯುಸಿ ನಮ್ಮ ಜೀವನದ ನಿರ್ಣಾಯಕ

ಹಂತವಾಗಿದ್ದರಿಂದ ಶ್ರದ್ಧೆಯಿಂದ ಶಿಕ್ಷಕರ ಸಹಾಯದಿಂದ ಪರೀಕ್ಷೆಯಲ್ಲಿ ಪ್ರತಿಶತ ೯೩ ಅಂಕ ಗಳಿಸಿದ್ದೆ. ನನ್ನ ಪೋಷಕರು ಹಾಗು ಶಿಕ್ಷಕರಿಗೆ ಬಹಳ ಖುಷಿ

ತಂದುಕೊಟ್ಟೆ.

ಜೀವನದ ಗುರಿ[ಬದಲಾಯಿಸಿ]

ಈಗ ಕ್ರೈಸ್ಟ್ ಯೂನಿವರ್ಸಸಿಟಿಯಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.ಇಲ್ಲಿನ ಹಸಿರು ಪರಿಸರ,ವಿಶಾಲವಾದ ವಾತಾವರಣ ನನಗೆ ಬಹಳ ಖುಷಿ

ತಂದಿದೆ. ಈ ಕಾಲೇಜಿನಲ್ಲೂ ನನಗೆ ಉತ್ತಮ ಸ್ನೇಹಿತೆಯರು ಜೊತೆಯಾಗಿದ್ದಾರೆ. ನನ್ನ ಮುಂದಿನ ಗುರಿ ಬ್ಯಾಂಕಿನಲ್ಲಿ ಉತ್ತಮ ಹುದ್ದೆಗೆ ಸೇರಿ ನಮ್ಮ

ತಂದೆ ತಾಯಿಯನ್ನು ಸಂತೋಷದಿಂದ ನೋಡಿಕೊಳ್ಳಬೇಕೆಂದಿದ್ದೇನೆ. ಅಲ್ಲದೆ ನಿರಾಶ್ರಿತರು ಹಾಗು ಅಸಹಾಯಕರಿಗೆ ಸಹಾಯ ಮಾಡಬೇಕೆಂಬುದು

ನನ್ನ ಆಸೆಯಾಗಿದೆ.