ವಿಷಯಕ್ಕೆ ಹೋಗು

ಸದಸ್ಯ:36.255.87.24/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಮ್ಮುರಾಬಿಯ ಕೋಡ್ ಪುರಾತನ ಬ್ಯಾಬಿಲೋನಿಯ ಕಾನೂನು ಸಂಹಿತೆ. ಮೆಸೊಪಟ್ಯಾಮಿಯಾ ನಾಗರಿಕತೆಯ ಇತಿಹಾಸದಲ್ಲಿ ಮುಖ್ಯ ಸ್ಥಾನ ಪಡೆದಿದೆ. ಈ ಕಾನೂನು ಪಟ್ಟಿ ಅತ್ಯಂತ ಹಳೆಯದಾದ, ವಿಸಂಕೇತಿಸಿರುವ ಬರಹ. ಬ್ಯಾಬಿಲೋನಿಯಾದ ೬ರನೇ ರಾಜನಾದ ಹಮ್ಮುರಾಬಿ ಈ ಕಾನೂನು ಪಟ್ಟಿಯನ್ನು ಜಾರಿಗೊಳಿಸಿದನು.

ಈ ಕಾನೂನು ಪಟ್ಟಿ ಕಣ್ಣಿಗೆ ಕಣ್ಣು ಮತ್ತು ಹಲ್ಲಿಗೆ ಹಲ್ಲು ಎಂಬ ತತ್ವದ ಮೇಲೆ ನಡೆಯುತ್ತದೆ.

[]


ಇತಿಹಾಸ

[ಬದಲಾಯಿಸಿ]

ಇದು ಬ್ಯಾಬಿಲೋನಿಯಾ ರಾಜವಂಶದ ಅರಸ, ಹಮ್ಮುರಾಬಿ ಕೊಟ್ಟ ಕಾನೂನಿನ ಪಟ್ಟಿ. ಈ ಪಟ್ಟಿ ಅಥವಾ ಕೋಡ್ ಒಂದು ಕಲ್ಲಿನ ಕಂಬದ ಮೇಲೆ ಕೆತ್ತಲಾಗಿದೆ. ಇದು ಕನಿಷ್ಟಪಕ್ಷ ೪೦೦೦ ವರ್ಷದ ಹಿಂದೆ ಅನ್ವೇಷಣೆ ಮಾಡಲಾಗಿತ್ತು. ಇದರಲ್ಲಿ ಬ್ಯಾಬಿಲೋನಿಯಾದ ಜನರ ಜೀವನ, ಸಂಸ್ಕೃತಿ ಮತ್ತು ಕಾನೂನು ವ್ಯವಸ್ಥೆಯ ಬಗ್ಗೆ ಬರೆಯಲಾಗಿದೆ.

ಈ ಪಟ್ಟಿಯು ಇತಿಹಾಸದಲ್ಲೇ ಪ್ರಮುಖ ಸ್ಥಾನ ಪಡೆಯುತ್ತದೆ ಏಕೆಂದರೆ ಇದು ಆರಂಭಿಕ ಮತ್ತು ಅತ್ಯಂತ ಪೂರ್ಣಗೊಂಡಿದ ಕಾನೂನು ಕೋಡ್ ಗಳು. ಈ ಕಾನೂನುಗಳು ಸಮಾಜದ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಸಹಾಯ ಮಾಡುತ್ತದೆ.

ಆಧುನಿಕ ಪುರಾತತ್ತ್ವಜ್ಞರು ಈ ಕಾನೂನು ಪಟ್ಟಿಯನ್ನು ೧೯೦೧ ರಲ್ಲಿ ಕಂಡು ಹಿಡಿದರು. ೧೯೦೨ ರಲ್ಲಿ ಫ್ರಾನ್ಸ್ ನ ಜೀನ್ ವಿನ್ಸೆಂಟ್ ಕಾನೂನುಗಳನ್ನು ಅನುವಾದ ಮಾಡಿದರು.

ಕಾನೂನುಗಳು

[ಬದಲಾಯಿಸಿ]

ಈ ಕಾನೂನು ಪಟ್ಟಿಯಲ್ಲಿ ಕ್ರೂರ ದಂಡನೆಗಳು ಸೇರಿದ್ದು ಕೆಲವೊಮ್ಮೆ ಅಪರಾಧ ಮಾಡಿರುವನ ಕಿವಿ, ನಾಲಿಗೆ, ಕಣ್ಣು ಇತ್ಯಾದಿ ಕತ್ತರಿಸಿ ಬಿಡುವ ನಿಯಮ ಇತ್ತು.

ಇದರಲ್ಲಿ ಕುಟುಂಬ ಸಂಬಂಧಿತ ಮತ್ತು ಆಡಳಿತಾತ್ಮಕ ಕಾನೂನು ಬ್ಯಾಬಿಲೋನಿಯಾ ಸಮಾಜದ ೩ ವರ್ಗಗಳಿಗೂ ವಿಭಿನ್ನ ರೀತಿಗಳಲ್ಲಿ ಅನ್ವಯಿಸಲಾಗುತ್ತದೆ. ಪಟ್ಟಿಯಲ್ಲಿ ೨೮೨ ರಾಜಶಾಸನಗಳು ಇವೆ. ಉದಾಹರಣೆಗಾಗಿ, ಯಾರಾದರು ಇನ್ನೋಬ್ಬರ ಎತ್ತನ್ನು ಕದ್ದರೇ, ಆತನು ಮೂವತ್ತು ಬಾರಿ ಅದರ ಬೆಲೆಯನ್ನು ಕಟ್ಟ ಬೇಕು. ಹಾಗೆಯೆ, ಒಬ್ಬ ವೈದ್ಯ ರೋಗಿಗೆ ಸರಿಯಾಗಿ ಚಿಕಿತ್ಸೆ ಮಾಡದ್ದಿದರೇ, ಆತನ ಕೈಗಳು ಕತ್ತರಿಸಲಾಗುತ್ತದೆ.

ಈ ಕಾನೂನು ಪಟ್ಟಿಯನ್ನು ಸಂಪ್ರದಾಯದ ಮತ್ತು ಪ್ರಾಚೀನ ಸಂವಿಧಾನವೆಂದು ಭಾವಿಸಲಾಗುತ್ತದೆ.

ಕಾನೂನು ಪಟ್ಟಿಯ ವಿವರಣೆ

[ಬದಲಾಯಿಸಿ]

ಕಂಬದ ಮೇಲಿನ ಭಾಗದಲ್ಲಿ ರಾಜ ಹಮ್ಮುರಾಬಿಯು ನ್ಯಾಯದ ದೇವರಾದ ಶಮಾಶ್ನಿಂದ ಕಾನೂನು ಪಟ್ಟಿಯನ್ನು ಸ್ವೀಕರಿಸಿ ನಿಂತಿರುವ ಚಿತ್ರ ಕೆತ್ತಲಾಗಿದೆ. ಚಿತ್ರದ ಕೆಳಗೆ ಶಾಸನದಲ್ಲಿರುವ ಬರಹಗಳು ಅಕ್ಕಾಡಿಯನ್ ಭಾಷೆಯಲ್ಲಿ ಇದೆ.

ಈ ಚಿತ್ರ ಹಮ್ಮುರಾಬಿಯ ನ್ಯಾಯೋಚಿತ ಮತ್ತು ಉತ್ತಮ ಆಳ್ವಿಕೆಯನ್ನು ತೋರಪಡಿಸುವುದ್ದಕ್ಕೆ ಹಾಗು ಆಚರಿಸಲು ಸಹ ಕೆತ್ತಲಾಯಿತು.

ಇಂದು ಹಮ್ಮುರಾಬಿಯ ಕೋಡ್ ಕಂಬ ಪ್ಯಾರಿಸ್ ನ ಲೌವ್ರೆ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಾಗಿ ಇರಿಸಲಾಗಿದೆ.

ಇತಿಹಾಸದಲ್ಲಿ ನಡೆದಿರುವ ಹಲವಾರು ಘಟನೆಗಳು ಇಂದಿನ ದೈನಂದಿನ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಈ ಘಟನೆಗಳು ನಮಗೆ ನಮ್ಮ ಸಾಮಾಜಿಕ ಬೇರುಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಅದರಲ್ಲಿ, ಹಮ್ಮುರಾಬಿಯ ಕಾನೂನು ಪಟ್ಟಿ ಒಂದಾಗಿದೆ.

[]

ಕೋಡ್ ನ ಮಹತ್ವ

[ಬದಲಾಯಿಸಿ]

ಹಿಂದಿನ ಕಾಲವನ್ನು ಖಾತೆಯಲ್ಲಿ ಹಿಡಿದುಕೊಂಡರೇ,ಹಮ್ಮುರಾಬಿ ಒಬ್ಬ ನ್ಯಾಯೋಚಿತ ನಾಯಕಯಾಗಿ, ತನ್ನ ಜನರ ಯೋಗಕ್ಷೇಮಕ್ಕಾಗಿ ಶ್ರಮಿಸಿದವನು. ಆತನ ಆದೇಶ ಮಾಡಿದ್ದಿರಿಂದ ಊರಿನ ಕಡೆಯಲ್ಲಿ ಹಲವಾರು ನೀರಾವರಿಗಳು ನಿರ್ಮಿಸಲಾಗಿತ್ತು, ಗುಡಿ- ಮಂದಿರ- ದೇವಾಲಯಗಳು ನವೀಕರಿಸಲಯಿತು.

ಆದರೆ, ಇಂದಿನ ದಿನದಲ್ಲಿ, ,ಹಮ್ಮುರಾಬಿ ಒಬ್ಬ ಸರ್ವಾಧಿಕಾರಿಯಾಗಿ ಕಂಡು ಬರುತ್ತಾನೆ.

ಮೊದಲ ನೋಟಕ್ಕೆ, ಹಮ್ಮುರಾಬಿ ಮತ್ತು ಆತನು ಕೊಟ್ಟ ಕಾನೂನುಗಳು ನಮ್ಮ ಜೀವನಕ್ಕೆ ಹೇಗೆ ಸಂಭಂದವಿದೆಯೋ ಎಂದು ಅನಿಸಬಹುದು. ಆದರೆ ನಮ್ಮ ಆಧುನಿಕ ನಂಬಿಕೆಗಳು ಹಮ್ಮುರಾಬಿಯ ಕಾಲದಲ್ಲಿ ಇದ್ದ ಜನರದ್ದಕ್ಕು ಪ್ರತ್ಯೇಕವಲ್ಲ. ನಾವು ಇಂದಿಗೂ ನಮ್ಮ ಭರವಸೆ ನಮ್ಮ ಪೂರ್ವಜರ ಕಾನೂನು ಕೋಡ್ ನಲ್ಲಿ ಇಡುತ್ತೇವೆ.

[]

  1. Milkau Oberer Teil der Stele mit dem Text von Hammurapis Gesetzescode 369-2
  2. Louvre Parijs 25-02-2019 10-31-58
  3. Inscription of Hammurabi King of Babylon