ಸದಸ್ಯ:2409:4071:2313:B373:0:0:159E:28B0

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಭವಾನಿ.ಸಿ .ನಾನು ಚಿನ್ನರಾಮು.ಸಿ ಮತ್ತು ಸರಸ್ವತಿ ದಂಪತಿಯ ತೃತೀಯ ಪುತ್ರಿ. ನಾನು ೨೨ /೦1/ ೨೦೦೧ ಇಸವಿಯಲ್ಲಿ ತಮಿಳುನಾಡಿನಲ್ಲಿ ಜನಿಸಿದೆ. ಈಗ ನಾನು ಕೋರಮಂಗಲ ,ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ.ನನ್ನ ಅಕ್ಕನ ಹೆಸರು ರೇಣುಕಾ.ತಮ್ಮನ ಹೆಸರು ಗೋಕುಲ್ ಕೃಷ್ಣ .ಬಾಲ್ಯದಿಂದಲೂ ನನ್ನ ತಂದೆ ತಾಯಿ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.ನನಗೆ ಕನ್ನಡ ಬರಲೆಂದು ನನ್ನ ತಂದೆ ನನ್ನ ಜೊತೆ ಕನ್ನಡದಲ್ಲಿಯೇ ಮಾತನಾಡಿಸುತ್ತಿದ್ದರು. ಬಾಲ್ಶದ ‌‌‌‌‌‍‌‍‍‌‌‌‍‌‌‌ ‌‌‌‌‌ಜೀವನ ಇನ್ನೂ ನೆನಪಿನಲ್ಲಿವೆ. ಮರೆಯಲಾಗದ ಕ್ಷಣಗಳು. ‍‌‌[ಬದಲಾಯಿಸಿ]

ಹವ್ಯಾಸಗಳು[ಬದಲಾಯಿಸಿ]

ನನಗೆ ೬ ವರ್ಷವಿದ್ದಾಗ ನನ್ನ ತಂದೆ ಆಡುಗೋಡಿಯ ಮುನಿಚಿನ್ನಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾತಿ ಮಾಡಿದರು. ನನಗೆ ಆ ಶಾಲೆಯಲ್ಲಿ ಸೇರಿದ ನಂತರ ಅನೇಕ ಸ್ನೇಹಿತರು ದೊರೆತರು.ನನ್ನ ಆತ್ಮೀಯ ಸ್ನೇಹಿತರೆಂದರೆ ಅಶ್ವಿನಿ ,ಸಿಂಧೂಜಾ,ಐಶು ಖುಷ್ಬು ಮತ್ತು ಪ್ರಿಯಾಂಕ. ನನಗೆ ಓದಿನ ಜೊತೆಯಲ್ಲಿ ಹಾಡು, ನಾಟಕ,ಪ್ರಬಂಧ ಮುಂತಾದ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು.ಆ ಸಂಧರ್ಭದಲ್ಲಿ ತರಗತಿ ಶಿಕ್ಷಕಿಯಾದ ಶೋಭಾರವರ ಪ್ರೋತ್ಸಾಹದಿಂದ ,ಬಹಳ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಗೆದ್ದಿದ್ದುಂಟು . ಎಲ್ಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲೆಂದು ಒಂದು ಸಣ್ಣ ಪ್ರಯತ್ನವಾಗಿ ಪ್ರತಿ ವರ್ಷ ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರವರ ಪ್ರತಿಭೆಯನ್ನು ನಾನಾ ಚಟುವಟಿಕೆಯ ಮೂಲಕ ಪ್ರದರ್ಶಿಸುತ್ತಿದ್ದರು.ಉದಾಹರಣೆಗೆ ನೃತ್ಯ ,ಹಾಡು ,ಚಿತ್ರಕಲೆ, ಆಶುಭಾಷಣ ಮತ್ತು ರಸಪ್ರಶ್ನೆ ಮುಂತಾದವು.ಈ ಕಾರ್ಯಕ್ರಮದಲ್ಲಿನಾನು ಮತ್ತು ನನ್ನ ಸ್ನೇಹಿತರು ಪ್ರತೀ ವರ್ಷ ಪಾಲ್ಗೊಂಡು ಅನೇಕ ಬಹುಮಾನಗಳನ್ನು ಪಡೆದಿದ್ದುಂಟು . ಇವೆಲ್ಲವೂ ನನ್ನ ಜೀವನದ ಸಿಹಿ ನೆನಪುಗಳು.[ಬದಲಾಯಿಸಿ]

ಸಿಹಿನೆನಪುಗಳು[ಬದಲಾಯಿಸಿ]

ಮೈಸೂರ್ ಪೋಷಕಿ

ನಾನು ನನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಸರ್ಕಾರಿ ಪ್ರೌಢ ಶಾಲೆ ಆಡುಗೋಡಿಯಲ್ಲಿ ೮ನೇ ತರಗತಿಗೆ ದಾಖಲಾದೆ.ಆ ಶಾಲೆ ನನಗೆ ಬಹಳ ಶಿಸ್ತನ್ನು, ಉತ್ತಮ ನಡೆವಳಿಕೆಯನ್ನು ಕಳಿಸಿತು. ನಾನು ಎಂಟನೇ ತರಗತಿಯಲ್ಲಿದ್ದಾಗ ವಂಡರ್ ಲಾಗೆ ಪ್ರವಾಸಕ್ಕೆಂದು ಕರೆದುಕೊಂಡು ಹೋದರು. ಅದು ನನ್ನ ಜೀವನದ ಮರೆಯಲಾಗದ ಅಧ್ಭತ ಕ್ಷಣಗಳು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಕಂಠೀರವ ಕ್ರೀಡಾಂಗಣದಲ್ಲಿ ಹೋಗಿ ಪಥಸಂಚಲನ ಮಾಡುತ್ತಿದ್ದೆವು.ನಾನು ಹತ್ತನೇ ತರಗತಿಯಲ್ಲಿದ್ದಾಗ ಸ್ನೇಹಿತರೊಂದಿಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋದೆವು.ಅಲ್ಲಿ ನಿಮಿಶಾಂಬ ದೇವಸ್ಥಾನ ,ನಂದಿ ಬೆಟ್ಟ, ಮೈಸೂರು ಅರಮನೆ ಮತ್ತು ಮೃಗಾಲಯವನ್ನು ನೋಡಿ ಖುಷಿಪಟ್ಟೇವು.ನನ್ನ ಪೋಷಕರು, ಶಿಕ್ಷಕರು ,ಸ್ನೇಹಿತರ ಪ್ರೋತ್ಸಾಹದಿಂದ ೧೦ನೇ ತರಗತಿಯನ್ನು ಉತ್ತಮ ಅಂಕ ಪಡೆದು ಉತ್ತೀರ್ಣ ಳಾದೆ.[ಬದಲಾಯಿಸಿ]

ವಿದ್ಯಾಭ್ಯಾಸ[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿ , ಬೆಂಗಳೂರು

ನಾನು ನನ್ನ ಮುಂದಿನ ಶಿಕ್ಷಣಕ್ಕೆ ನಗರದ ಜ್ಯೋತಿನಿವಾಸ್ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಂಡೆ.ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಂಡೆ. ಆ ಕಾಲೇಜು ನನಗೆ ಹೊಸ ಗೆಳತಿಯರು,ಹೊಸ ಶಿಕ್ಷಕರು ,ಹೊಸ ವಾತಾವರಣ ,ನಿಯಮಗಳ ಅನಭವವಾಯಿತು.ಗಳೆತಿಯರ ಜೊತೆ ಸಂತೋಷದ ಕ್ಷಣಗಳನ್ನು ಕಳೆದ್ದದುಂಟು.ಕಾಲೇಜಿನಲ್ಲಿ ಪ್ರಬಂಧ, ಕಬ್ಬಡಿ ಮುಂತಾದ ಸ್ಪರ್ದಗಳನ್ನುನಏರ್ಪಡಿಸುತಿದ್ದರು.ನಾನು ಅ ಸ್ಪರ್ದಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದೆ. ದ್ವಿತೀಯ ಪಿಯುಸಿ ನಮ್ಮ ಜೀವನದ ನಿರ್ಣಾಯಕ ಹಂತವಾಗಿದ್ದರಿಂದ ಶ್ರದ್ದೆಯಿಂದ ಶಿಕ್ಷಕರ ಸಹಾಯದಿಂದ ಪರೀಕ್ಷೆ ಯಲ್ಲಿ ೯3 ಅಂಕ ಗಳಿಸಿದ್ದೆ. ನನ್ನ ಪೋಷಕರು ಹಾಗೂ ಶಿಕ್ಷಕರಿಗೆ ಬಹಳ ಖುಷಿ ತಂದುಕೊಟ್ಟೆ.ಈಗ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದೇನೆ.ಇಲ್ಲಿನ ವಿಶಾಲವಾದ ವಾತಾವರಣ ನನ್ನ ಮನಸ್ಸಿಗೆ ಖುಷಿ ಮತ್ತು ಮುದ ನೀಡುತ್ತದೆ. ಈ ಕಾಲೇಜಿನಲ್ಲೂ ನನಗೆ ಉತ್ತಮ ಸ್ನೇಹಿತರು ಜೊತೆಯಾಗಿದ್ದಾರೆ. ನನ್ನ ಮುಂದಿನ ಗುರಿ ಒಂದು ಒಳ್ಳೆ ಹುದ್ದೆಗೆ ಸೇರಿ ಪೋಷಕರನ್ನು ಚೆನ್ನಾಗಿ ಖುಷಿಯಾಗಿ ನೋಡಿಕೊಳ್ಳಬೇಕು.[ಬದಲಾಯಿಸಿ]