ಸದಸ್ಯ:2409:4071:2209:1C8B:58BD:59C2:C24F:DA49

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನದೊಂದು ಚಿಕ್ಕ ಜೀವನ ಚರಿತ್ರೆ[ಬದಲಾಯಿಸಿ]

thumb|399x399px|ದಾವಣಗೆರೆಯ ಪ್ರಸಿದ್ಧ ತಾಣ

ಚಿತ್ರ:ನನ್ನ ಭಾವಚಿತ್ರ.png
ನನ್ನ ಭಾವಚಿತ್ರ


ನನ್ನ ಬಾಲ್ಯ[ಬದಲಾಯಿಸಿ]

ನನ್ನ ಹೆಸರು ವೀರೇಶ್ ಜಿ ಟಿ. ನಾನು ಹುಟ್ಟಿದ್ದು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ, 'ಅಡಿಕೆಯ ನಾಡು' ಎಂದು ಪ್ರಸಿದ್ಧಿ ಹೊಂದಿರುವ ಚನ್ನಗಿರಿ ತಾಲೂಕಿನಲ್ಲಿ.[ಬದಲಾಯಿಸಿ]


ನನ್ನ ಓದು[ಬದಲಾಯಿಸಿ]

ನಾನು ಚನ್ನಗಿರಿ ನವಚೇತನ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ನನ್ನ ಅಕ್ಕನ ಉನ್ನತ ವಿದ್ಯಾಭ್ಯಾಸಕ್ಕಾಗಿ ನಾವು ದಾವಣಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದೆವು. ನಾನು ಐದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ದಾವಣಗೆರೆಯಲ್ಲಿರುವ ತರಳಬಾಳು ಜಗದ್ಗುರು ಶಾಲೆ ಹಾಗೂ ಕಾಲೇಜಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿದೆನು. ಇಲ್ಲಿ ನನಗೆ ತುಂಬಾ ಖುಷಿಯಾದ ವಿಚಾರ ಏನೆಂದರೆ ನನಗೆ ೨೦೧೬-೨೦೧೭ ನೇ ಶೈಕ್ಷಣಿಕ ವರ್ಷದಲ್ಲಿ 'ಬೆಸ್ಟ್ ಸ್ಟೂಡೆಂಟ್ ಆಫ್ ದಿ ಇಯರ್' ಪುರಸ್ಕಾರ ಮತ್ತು ಐದು ಸಾವಿರ ರೂಪಾಯಿ ನಗದು ಬಹುಮಾನ ಬಂದಿತು. ನಾನು ಸಣ್ಣನವನಿದ್ದಾಗಿನಿಂದ ನನ್ನ ಕನಸು ಡಿಸಿ ಆಗಬೇಕೆಂದಿತ್ತು. ಆದರೆ ನಮ್ಮ ಮನೆಯಲ್ಲಿ ನಾನು ಸಿ ಎ ಮಾಡಬೇಕೆಂದು ಕನಸು ಹೊಂದಿದ್ದರು. ಆದ್ದರಿಂದ ಒಲ್ಲದ ಮನಸ್ಸಿನಿಂದ ವಾಣಿಜ್ಯ ವಿಭಾಗವನ್ನು ಸೇರಿಕೊಂಡೆ. ನಂತರ ನಾನು ನಿರ್ಧರಿಸಿದ್ದು ಏನೆಂದರೆ ಈಗಿರುವ ವಿಷಯದಲ್ಲೇ ಸಂಪೂರ್ಣ ಪ್ರಯತ್ನ ಹಾಕಿ ನನ್ನ ಪೋಷಕರ ಆಸೆ ತೀರಿಸುವುದೇ ನನ್ನ ಮುಖ್ಯ ಗುರಿ. ನಾನು ಬಾಲ್ಯದಿಂದಲೂ ಚೆನ್ನಾಗೇ ಓದುತ್ತಾ ಬಂದೆ. ನಾನು ಬಾಲ್ಯದಲ್ಲಿ ಚೆನ್ನಾಗಿ ಓದಲು ಕಾರಣವೇನೆಂದರೆ ನನ್ನ ಚಿಕ್ಕಮ್ಮ ಹಾಗೂ ಸೋದರ ಸಂಬಂಧಿಗಳು ನನ್ನ ಬಗ್ಗೆ ಬಹಳ ವಿಚಾರಣೆ ಮಾಡುತ್ತಿದ್ದರು. ಕೆಲವೊಮ್ಮೆ ಕಡಿಮೆ ಅಂಕವನ್ನು ಅವರೆದುರು ಹೇಳಲು ಮುಜುಗರ ಆಗುತ್ತಿತ್ತು. ಈ ಮುಜುಗರದಿಂದ ಪಾರಾಗಲು ಓದುತ್ತಿದ್ದ ನಾನು ಹಾಗೆ ಮುಂದುವರಿಸಿದೆ. ಈಗ ನಾನು ನನ್ನ ಅಂಕಗಳನ್ನು ಬಹಳ ಹೆಮ್ಮೆಯಿಂದ ಅವರೆದುರು ಹೇಳಿಕೊಳ್ಳುತ್ತೇನೆ, ಆದರೆ ಅವರು ನನಗೆ ಗರ್ವ ಬಹಳ ಎಂದು ಅಂದುಕೊಂಡಿದ್ದನ್ನು ಕೇಳಿಸಿಕೊಂಡಿದ್ದೇನೆ. ನಾನು ಚನ್ನಗಿರಿಯಲ್ಲಿ ಎರಡನೆ ತರಗತಿಯಲ್ಲಿದ್ದಾಗ ನನ್ನ ತಂದೆ ಅದೇ ತಾಲೂಕಿನಲ್ಲಿ ಬಿಇಒ ಆಗಿದ್ದರು. ನಾನು ಚನ್ನಗಿರಿಯಲ್ಲಿ ಓದುತ್ತಿದ್ದಾಗ ನನ್ನ ತಂದೆ ಆ ಕ್ಷೇತ್ರದ ಬಿ.ಇ.ಓ ಆಗಿದ್ದರಿಂದ ನಾಲ್ಕನೇ ತರಗತಿಯವರೆಗೂ ಒಂದೇ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಇದು ತಪ್ಪೋ ಸರಿಯೋ ಎಂದು ನನಗೆ ತಿಳಿಯದು. ನಮ್ಮ ಶಾಲೆಯಲ್ಲಿ ಅಂದು ಕ್ರೀಡಾ ದಿನವಾಗಿದ್ದರಿಂದ ನನ್ನ ತಂದೆಯೇ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಅಂದು ನಡೆದ ಗೋಣಿಚೀಲ ಕಟ್ಟಿಕೊಂಡು ಜಿಗಿಯುವ ಆಟದಲ್ಲಿ ನಾನು ಮೊದಲು ಬಂದಿದ್ದರಿಂದ ನನ್ನ ತಂದೆಯ ಕೈಯಿಂದಲೇ ನನಗೆ ಪ್ರಶಸ್ತಿ ದೊರೆಯಿತು. ಆ ಸಂದರ್ಭವನ್ನು ನಾನು ಎಂದಿಗೂ ಮರೆಯಲಾರೆ. ನನಗೆ ನನ್ನ ಮನಸ್ಸು, ಬುದ್ದಿ ಎಲ್ಲವೂ ನನ್ನ ಹಿಡಿತದಲ್ಲಿ ಇದೆ ಎಂದು ಹೇಳಲು ಖುಷಿಯಾಗುತ್ತದೆ. ನಾನು ಹತ್ತನೇ ತರಗತಿಯಲ್ಲಿ ಶೇಖಡ 95.68, ದ್ವಿತೀಯ ಪಿಯುಸಿಯಲ್ಲಿ ಶೇಖಡ 93.5 ಗಳಿಸಿದ್ದೇನೆ. ಅಂಕಗಳು ಒಬ್ಬ ಮನುಷ್ಯನನ್ನು ಪ್ರತಿನಿಧಿಸುವುದಿಲ್ಲ. ಪರೀಕ್ಷೆಯ ಅಂಕಗಳಿಗಿಂತ ಜೀವನದ ಪರೀಕ್ಷೆಯ ಅಂಕಗಳು ಬಹಳ ಮುಖ್ಯ. ನನಗೆ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಲು ಇಷ್ಟವೇ ಇರಲಿಲ್ಲ. ಆದರೆ ಕೆಲ ಸಿ ಎ ಗಳ ಅಭಿಪ್ರಾಯದ ಮೇರೆಗೆ ಇಲ್ಲಿಗೆ ಸೇರಿದೆ. ಮೊದಲ ಕೆಲವು ದಿನ ನಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ಅಂದುಕೊಂಡೆ, ಆದರೆ ದಿನಗಳು ಕಳೆದಂತೆ ರೂಡಿ ಮಾಡಿಕೊಂಡೆ. ನನ್ನ ಭವಿಷ್ಯಕ್ಕೆ ಕ್ರೈಸ್ಟ್ ಸಹಾಯ ಮಾಡುತ್ತದೆ ಎಂದು ತಿಳಿದು ನನ್ನ ಕೆಲಸಗಳಲ್ಲಿ ಮಗ್ನನಾದೆ. ನನ್ನ ಓದು ಕನ್ನಡ ಮಾಧ್ಯಮದಲ್ಲಿ ಶುರುವಾಗಿದ್ದರಿಂದ ನನಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ಪ್ರೀತಿ. ನಾನು ಹತ್ತನೇ ತರಗತಿಯಲ್ಲಿ ಕನ್ನಡದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದು 'ಕನ್ನಡದ ಕುವರ' ಎಂಬ ಪುರಸ್ಕಾರಕ್ಕೆ ಭಾಜನನಾದೆನು.[ಬದಲಾಯಿಸಿ]


ನನ್ನ ಇತರೆ ಆಸಕ್ತಿಗಳು[ಬದಲಾಯಿಸಿ]

ನಾನು ಇರುವ ಹಾಸ್ಟೆಲಿನಲ್ಲಿ ಕೆಲವು ಹೊರರಾಜ್ಯ ಹುಡುಗರಿಗೆ ನನ್ನ ಸ್ನೇಹಿತರ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಕನ್ನಡವನ್ನು ಹೇಳಿಕೊಡುತ್ತಿದ್ದೇನೆ. ಅವರೂ ಸಹ ನಮಗೆ ಅವರ ಭಾಷೆಯನ್ನು ಹೇಳಿಕೊಡುತ್ತಿದ್ದಾರೆ. ನನ್ನ ಜೀವನದಲ್ಲಿ ಕೆಟ್ಟ ವಿಚಾರವೇನೆಂದರೆ ನನಗೆ ಕೆಡುಕು ಮಾಡಿದವರಿಗೆ ಎಷ್ಟೇ ಒಳ್ಳೆಯದನ್ನು ಮಾಡಿದರೂ ಅವರು ನನಗೆ ಕೆಟ್ಟದ್ದನ್ನೇ ಬಯಸುವರು. ನಾನು ಬರೀ ಓದುವುದನ್ನೇ ಮಾಡುವ ಮನುಷ್ಯನಲ್ಲ. ನಾನು ಬೆಂಗಳೂರಿಗೆ ಬಂದಮೇಲೆ ಜಿಮ್ ಗೆ ಹೋಗಲು ಆರಂಭಿಸಿದ್ದೇನೆ. ನಾನು ಅದರ ಕ್ರಮವಾಗಿ ಹೋಗದೆ ಇರುವ ಕಾರಣ ನೋಡಿದವರಿಗೆ ನಾನು ಇನ್ನು ಜಿಮ್ ಗೆ ಹೋಗುತ್ತಿಲ್ಲ ಅನ್ನಿಸುತ್ತದೆ. ನನಗೆ ಆಟ ಎಂದರೆ ಬಹಳ ಇಷ್ಟ. ಕ್ರಿಕೆಟ್, ರನ್ನಿಂಗ್ ರೇಸ್, ವಾಲಿಬಾಲ್ ಎಂದರೆ ಎಲ್ಲಿಲ್ಲದ ಖುಷಿ. ನನಗೆ ಮೊಬೈಲ್ನಲ್ಲಿ ಆಟವಾಡುವುದು ಕೂಡ ಇಷ್ಟ. ನನಗೆ ಐದನೇ ತರಗತಿಗೇ ಕನ್ನಡಕ ಬಂದಿತು. ನನ್ನ ತಾಯಿಯ ಕಡೆಯವರೆಲ್ಲರೂ ನನ್ನನ್ನು ಆಡಿಕೊಂಡರು. ನನ್ನ ತಾಯಿ ಕಣ್ಣೀರಾಕಿದ ಸನ್ನಿವೇಶಗಳೂ ಇವೆ. ಹಾಗಾಗಿ ನನ್ನ ಮೊಬೈಲ್ ಹಾಗು ಲ್ಯಾಪ್ಟಾಪ್ ಬಳಕೆಯನ್ನು ನನ್ನ ತಾಯಿ ನಿರ್ಬಂಧಿಸಿದರು. ಆದರೆ ಕಾಲದ ಕ್ರಮೇಣ ನಾನೇ ಅವುಗಳ ಬಳಕೆಯನ್ನು ಕಡಿಮೆ ಮಾಡಿಕೊಂಡೆನು. ಆದರೆ ಈಗ ಪಬ್ ಜಿ ಬಂದಮೇಲಂತೂ ನಾನು ನನ್ನ ಹಿಡಿತದಲ್ಲಿ ಇಲ್ಲವೆಂದು ಕೆಲವು ಬಾರಿ ಡಿಲೀಟ್ ಕೂಡ ಮಾಡಿದೆನು. ಆದರೆ ಒಂದೆರಡು ದಿನಗಳ ನಂತರ ಮತ್ತೆ ಇನ್ಸ್ಟಾಲ್ ಮಾಡಿಬಿಡುತ್ತಿದ್ದೆ. ಪಬ್ ಜಿ ಆಟ ಎಂದರೆ ಸಿಕ್ಕಾಪಟ್ಟೆ ಇಷ್ಟ. ಕೆಲವರಿಗೆ ಸಿಕ್ಕ ಅವಕಾಶಗಳು ನನಗೆ ಸಿಗಲಿಲ್ಲ ಎಂದರೆ ನಾನು ನನಗೆ ಹಿಂದಿಯ ಒಂದು ಖ್ಯಾತ ಹಾಡಿನ ಸಾಲು - 'ಅಪ್ನ ಟೈಮ್ ಆಯೆಗ' ನೆನಪಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತೇನೆ. ಹಾಗಂತ ಸುಮ್ಮನೆ ಕೂತರೆ ನಮ್ಮ ಸಮಯ ಬರುವುದಿಲ್ಲ, ಬದಲಿಗೆ ನಮಗೆ ಬರಬೇಕಾದ ಸಮಯವೂ ಕೂಡ ಬರುವುದಿಲ್ಲ. ಅದಕ್ಕಾಗಿ ನಾನು ಶ್ರಮಪಟ್ಟು ಅದನ್ನು ಗಿಟ್ಟಿಸಿಕೊಳ್ಳುತ್ತೇನೆ. ಮನೆಯಲ್ಲಿದ್ದಾಗ ಟಿವಿ ನೋಡಿ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೆ. ಆದರೆ ಈಗ ಹಾಸ್ಟೆಲಿನಲ್ಲಿ ಇರುವುದರಿಂದ ಎಲ್ಲ ಮೊಬೈಲ್ನಿಂದಲೇ ತಿಳಿದುಕೊಳ್ಳುತ್ತಿದ್ದೇನೆ. ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದಾಗಲಿ, ದಿನ ಪತ್ರಿಕೆ ಓದುವುದಾಗಲಿ ಅಲ್ಲ. ಜಗತ್ತಿನ ಸುದ್ದಿಗಳನ್ನೆಲ್ಲಾ ಮೊಬೈಲ್ನಲ್ಲಿಯೇ ತಿಳಿದುಕೊಳ್ಳುತ್ತೇನೆ. ನನ್ನ ತಂದೆ ತಿಪ್ಪೇಶಪ್ಪ ಹಾಗೂ ತಾಯಿ ಪುಷ್ಪ ಅವರಿಗೆ ನಾನು ಯಾವಾಗಲೂ ಒಳ್ಳೆಯ ಮಗನಾಗಿರುತ್ತೇನೆ. ಏಕೆಂದರೆ ಜಗತ್ತಿನಲ್ಲಿ ಒಬ್ಬ ಮನುಷ್ಯ ತನ್ನ ಪೋಷಕರನ್ನು ನೋಡಿಕೊಳ್ಳದಿದ್ದರೆ ಅವನು ಮನುಷ್ಯನಾಗಲೂ ಅರ್ಹನಲ್ಲ. ನಾವು ನಮ್ಮ ಪೋಷಕರಿಗೆ ಗೌರವ ನೀಡಿದರೆ, ಅವರ ಹಾರೈಕೆಯಿಂದ ಇಡೀ ಜಗತ್ತೇ ನಮಗೆ ಗೌರವ ತೋರುತ್ತದೆ. ನನಗೆ ಮಿತ್ರರು ಕಡಿಮೆ, ಮಿತ್ರರಾಗಿದ್ದವರೂ ಸಹ ನನ್ನನ್ನು ದ್ವೇಷಿಸಲು ಆರಂಭಿಸುತ್ತಾರೆ. ನಾನು ಅವರಿಗೆ ಏನನ್ನೂ ಕೆಡುಕು ಮಾಡದಿದ್ದರೂ ನನ್ನ ವಿರುದ್ಧ ದ್ವೇಷ ಸಾಧಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ ನನ್ನ ಪ್ರಿಯ ಮಿತ್ರರ ಪಟ್ಟಿಯಲ್ಲಿ ಯಾರನ್ನೂ ಸೇರಿಸಲು ಇಷ್ಟಪಡುವುದಿಲ್ಲ. ನನ್ನಿಂದ ಅವರಿಗೆ ಏನಾದರೂ ಕೆಲಸವಾಗಬೇಕಿತ್ತೆಂದರೆ ನನ್ನನ್ನು ಬಳಸಿಕೊಂಡು, ನಂತರ ದೂರ ಮಾಡುವರು. ಹಾಗಾಗಿ ನಾನು ನನ್ನ ಐದು ಜನರ ಮನೆಯವರನ್ನಷ್ಟೇ  ನಂಬುದುವುದು. ನನಗೆ ನನ್ನ ಮನೆಯಿಂದ ನನ್ನ ಎಲ್ಲಾ ಒಳ್ಳೆಯ ಕೆಲಸಗಳಿಗೂ ಮನ್ನಣೆ ನೀಡುತ್ತಾರೆ.[ಬದಲಾಯಿಸಿ]