ಸದಸ್ಯ:2401:4900:2732:4416:0:4D:41F8:6201

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಬದುಕಿನ ಸವಿ ನೆನಪುಗಳು[ಬದಲಾಯಿಸಿ]

ಉಡುಪಿ ಕೃಷ್ಣ ಮಠ

ನಾನು ನನ್ನ ಪರಿವಾರ

ನನ್ನ ಹೆಸರು ರಿತು ಕೋಟಿಯಾನ್. ನಾನು ೨ನೇ ಜುಲೈ ೨೦೦೧ರಲ್ಲಿ ದೇವಾಲಯದ ನಗರವೆಂದು ಪ್ರಸಿಧವಾಗಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ರಾಜು ಕೋಟಿಯಾನ್ ಹಾಗೂ ತಾಯಿಯ ಹೆಸರು ಪುಷ್ಪಾ ಕೋಟಿಯಾನ್. ನನ್ನ ತಂದೆ ವೃತ್ತಿಯಲ್ಲಿ ಸಿ.ಎ, ಅವರು ಎಸ್.ಜೆ.ಆರ್. ಕಂಪನಿಯಲ್ಲಿ ಕೆಲಸಮಾಡುತಾರೆ ಹಾಗೂ ನನ್ನ ತಾಯಿ ಬ್ಯೂಟಿಸಿಎನ್. ನನ್ನ ತಂದೆ ತಾಯಿ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನನ್ನ ಅಮ್ಮ ರುಚಿಕರ ಅಡಿಗೆ ಮಾಡುತ್ತಾರೆ. ನಾನು ಕೇಳಿದ್ದು ಮಾಡಿಕೊಡುವರು. ಅವರು ಮಾಡುವ ಅಪ್ಪಮ್ ಮತ್ತು ಚಿಕನ್ ಸ್ಟೀವ ತುಂಬಾ ಇಷ್ಟ. ನನ್ನ ತಂದೆ ತಾಯಿ ನನ್ನನು ತುಂಬ ಚನ್ನಾಗಿ ನೋಡಿಕೊಳ್ಳುತ್ತಾರೆ. ನನ್ನ ಪೋಷಕರು ನನಗೆ ಎಲ್ಲಾ ರೀತಿಯಲ್ಲು ಪ್ರೋತ್ಸಹಿಸುತ್ತಾರೆ. ಇಂತಹ ಪೋಷಕರನ್ನು ಪಡೆದಿರುವುದು ನನ್ನ ಪುಣ್ಯ.ಇವರನ್ನು ಎಂದಿಗೂ ಚನ್ನಾಗಿ ನೋಡಿಕೊಳ್ಳಬೇಕೆಂಬುದು ನನ್ನ ಆಸೆ.

ಚಿತ್ರ:ಪರಿವಾರ.jpg
ನಾನು ನನ್ನ ಪರಿವಾರ

ಶಾಲೆ

ನಾನು ಧಾರವಾಡದಲ್ಲಿ ನನ್ನ ಬಾಲ್ಯ ಕಳೆದೆನು, ಅಲ್ಲಿ ಎರಡು ವರ್ಷಗಳು ಮಂಜುನಾಥೇಶ್ವರ ಪ್ರಿ-ಪ್ರೈಮರಿ ಸೆಂಟ್ರಲ್ ಶಾಲೆಗೆ ಹೋಗುತ್ತಿದೆ. ಐದು ವರ್ಷಗಳ ತನಕ ನಾನು ಧಾರವಾಡನಲ್ಲಿ ವಾಸಿಸುತಿದೆ. thumb|ಎಸ್.ಡಿ.ಎಮ್. ಶಾಲೆ ಆದರೆ ಕಾರಣಾಂತರಗಳಿಂದ ನಂತರ ಬೆಂಗಳೂರಿಗೆ ಬಂದೆ. ಬೆಂಗಳೂರಿನ ಶಾಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು ಮೊದಲಿಗೆ ಬಹಳ ಕಷ್ಟವಾಗಿತು ಯಾಕಂದರೆ ಧಾರವಾಡದಲ್ಲಿ ನಾನು ಕನ್ನಡ ಹಾಗೂ ತುಳುವನ್ನು ಮಾತ್ರ ಮಾತನಾಡುತಿದೆ. ಸಮಯ ಕಳೆದಹಾಗೆ ಆಂಗ್ಲ ಭಾಷೆ ಸುಲಭವಾಯಿತು. ಇನ್ನೊಂದು ತೊಂದರೆ ಏನೆಂದರೆ, ನನ್ನ ಹುಬಳ್ಳಿ-ಧಾರವಾಡದ ಕನ್ನಡಕ್ಕು ಹಾಗೂ ಬೆಂಗಳೂರಿನಲ್ಲಿ ಮಾತನಾಡುವ ಕನ್ನಡಕ್ಕು ಬಹಳ ವ್ಯತ್ಯಾಸವಿತ್ತು. ಇದರಿದ ಜನರಿಗೆ ಸ್ವಲ್ಪ ಅರ್ಥವಾಗುತ್ತಿರಲಿಲ್ಲ. ದಿನ ಕಳೆದ ಹಾಗೆ ನಾನು ಬೆಂಗಳೂರಿನ ಕನ್ನಡವನ್ನು ಕಲಿತೆ. ಸುಮಾರು 13 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವೆ. ಈವಾಗ ನಾನೂ ನನ್ನ ತಂದೆ ತಾಯಿ ಒಟ್ಟಿಗೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸಿಸುತಿದ್ದೇನೆ. ನಾನು 10ನೇ ತರಗತಿಯವರಗೆ ಬಲ್ಡ್ವಿನ್ ಶಾಲೆಯಲ್ಲಿ ಓದಿರುವೆ. ಶಾಲಾ ದಿನಗಳಲ್ಲಿ ನಾನು ಶಾಲೆಯಲ್ಲಿ ಎಲ್ಲಾ ತರಹದ ನ್ರತ್ಯ, ನಾಟಕ, ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಶಾಲೆಯಲ್ಲಿ ಎಲ್ಲರಿಗೂ ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಹಿಸುತ್ತಿದರು. ಶಾಲೆಯಿಂದಲು ನನಗೆ ಕನ್ನಡವೆಂದರೆ ತುಂಬ ಪ್ರೀತಿ. ಅಲ್ಲಿ ಪಾಟೀಲ್ ಸರ್ ನಮಗೆ ಕನ್ನಡ ಪಾಠ ಮಾಡುತಿದ್ದರು.ನನ್ನ ಬ್ಯಾಲದ ನೆಚ್ಚಿನ ಗೆಳತಿ ಸುಚಿತ್ರ. ನಾನು ಮತ್ತು ಅವಳು ಬಹಳ ಒಳೆಯ ಗೆಳೆತಿಯರು. ಹತ್ತನೇ ತರಗತಿಯಲ್ಲಿ ನಾನು ಶೇಕಡ 90 ಅಂಕ ಪಡೆದು ಉತೀರ್ಣಳಾಗಿದ್ದೆನೆ ಹಾಗೂ ಕನ್ನಡದಲ್ಲಿ 98 ಅಂಕಗಳು ದೊರೆಯಿತು. ನಂತರ ಸಿ.ಎಂ.ಆರ್. ಶಾಲೆಗೆ ಸೇರಿದೆ. ಇಲ್ಲಿ 11ನೇ ಹಾಗೂ 12ನೇ ತರಗತಿಯನ್ನು ಮುಗಿಸಿದೇ. ಶಾಲೆಯಲ್ಲಿ ನನಗೆ ಇಷ್ಟವಾದ ವಿಷಯಗಳು ಎಂದರೆ ಅರ್ಥಶಾಸ್ತ್ರ, ಕನ್ನಡ ಹಾಗೂ ಅಕೌಂಟನ್ಸಿ. ಈ ವಿಷಯಗಳಲ್ಲಿ ನನ್ನಗೆ ಉತ್ತಮ ಅಂಕಗಳು ಸಿಗುತ್ತದೆ. ಈ ಶಾಲೆಯಲ್ಲೂ ಸಹ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೇನೆ. ಶಾಲೆಯ ತ್ರೋಬಾಲ್ ತಂಡಕ್ಕೆ ಆಯ್ಕೆಯಾಗಿ ಬೇರೆ ಶಾಲೆಗಳಿಗೂ ಸಹ ಹೋಗಿ ಆಡಿ ಹಲವಾರು ಪದಕಗಳನ್ನು ತಂದ್ದಿದೇನೆ. ಹಾಗೂ ಬಹಳ ಸಂಸ್ಕೃತಿಕ ಕಾರ್ಯಕ್ರಮಗಳ್ಳಲಿ ನನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತಿದೆ. 12ನೇ ತರಗತಿಯನ್ನು ಮುಗಿಸಿ 93% ಪಡೆದೆ. ನಾನು ಈಗ ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯಲ್ಲಿ ಬಿ.ಕಾಂ ಪದವಿಯನ್ನು ಓದುತಿದೆನೆ. ಬಿ.ಕಾಂ ಮಗಿದ ನಂತರ ನನ್ನ ತಂದೆಯoತೆ ನಾನೂ ಸಹ ಸಿ.ಎ ಆಗಬೇಕೆಂಬುದು ನನ್ನ ಗುರಿ.

ನನ್ನ ಆಸಕ್ತಿಗಳು

ನನಗೆ ಬಾಲ್ಯದಿಂದಲೂ ನ್ರತ್ಯ ಬಹಳ ಇಷ್ಟ. ನಾನು ನ್ರತ್ಯ ತರಗತಿಗೆ ಸೇರಿಕೊಂಡೆ. ಇಲ್ಲಿ ಮಣಿ ಸರ್ ಹಾಗು ಸ್ಟಾಲಿನ್ ಸರ್ ನನಗೆ ಎಲ್ಲಾ ತರಹದ ನ್ರತ್ಯ ಕಲಿಸಿದರು. ನನ್ನ ಬೇರೆ ಆಸಕ್ತಿಗಳು - ಈಜಡುವುದು, ಪೈಂಟಿಂಗ್ ಮಾಡುವುದು, ಹಾಡು ಕೇಳುವುದು, ಅಡಿಗೆ ಮಾಡುವುದು.ನನಗೆ ತ್ರೋಬಾಲ್, ಖೋ-ಖೋ, ಕ್ರಿಕೆಟ್ ಎಲ್ಲ ಆಡುವುದು ಇಷ್ಟ. ನನಗೆ ಕ್ರಿಕೆಟ್ ತುಂಬಾ ಇಷ್ಟ. ನನ್ನ ನೆಚ್ಚಿನ ಐ.ಪಿ.ಎಲ್. ತಂಡ - ಆರ್.ಸಿ.ಬಿ. ನಾನು ಭಾರತ ಮತ್ತು ಆರ್.ಸಿ.ಬಿ. ಪಂದ್ಯವನ್ನು ತಪ್ಪದ ನೋಡುತ್ತೆನೆ, ಮತ್ತು ನಾನೂ ಹಲವು ಬಾರಿ ಸ್ಟೇಡಿಯಂನಲ್ಲಿ ಕೂಡಾ ವಿಕ್ಷೀಸಿದೇನೆ. ನನ್ನ ನೆಚ್ಚಿನ ಆಟಗಾರ ಕೆ.ಎಲ್.ರಾಹುಲ್. ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ ಅದರಲ್ಲೂ  ನಾಯಿಗಳೆಂದರೆ ತುಂಬ ಮುದ್ದು.

ಹಿನ್ನುಡಿ

ನಾನು ನನ್ನ ಕಾಲಿನ ಮೇಲೆ ನಿಂತು ಕೊಂಡು ಯಾರ ಮೇಲು ಆಭಾರಿಯಾಗದೆ ಜೀವನ ನಡೆಸಬೇಕೆಂದು ನನ್ನ ಆಸೆ. ನಾನು ಸಮಾಜಕೆ ಏನಾದರು ಒಳೆಯದ್ದನು ಮಾಡಿ ದೇಶದ ಒಂದು ಒಳೆಯ ಪ್ರಜೆಯಾಗಿ ಇರಬೇಕು.ಇದಕೆಲ್ಲಾ ನನ್ನ ತಂದೆಯೇ ನನಗೆ ಸ್ಪೂರ್ತಿ. ಅವರಂತೆ ನಾನು ಸಹ ಜೀವನ ನಡೆಸಬೇಕು. ನಾನು ನನ್ನ ತಂದೆ ತಾಯಿಗೆ ಒಳೆಯ ಮಗಳಾಗಿ ಬಾಳಬೇಕು.