ಸದಸ್ಯ:2401:4900:22E0:BBC7:1:0:50ED:5E73

ವಿಕಿಪೀಡಿಯ ಇಂದ
Jump to navigation Jump to search

ನನ್ನ ಪರಿಚಯ[ಬದಲಾಯಿಸಿ]

ಎಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಹೆಸರು ಶೈಲಿಕ.ಎಸ್. ನಾನು 06-12-2001 ರಂದು ಜನಿಸಿದೆ. ನಾನು ಬೆಂಗಳೂರು ಆಡ್ಡೆಸೊನ್ನಹಟ್ಟಿ ಎಂಬ ಊರಿನಲ್ಲಿ ಜನಿಸಿದೆನು.ನಾವು ಒಟ್ಟು ನಾಲ್ಕು ಜನ ವಾಸವಾಗಿದ್ದೆನೆ. ನನ್ನ ತಂದೆಯ ಹೆಸರು ಶ್ರೀನಿವಾಸ್. ಡಿ. ಎಮ್, ನನ್ನ ತಾಯಿ ಮುನಿರತ್ನಮ್ಮ. ಜೆ ಮತ್ತು ನನ್ನ ತಮ್ಮನ ಹಸರು ಶ್ರೇಯಸ್. ಎಸ್. ನನ್ನ ತಂದೆ ಬಿ.ಎಮ್.ಟಿ. ಸಿ ಚಾಲಕರಗಿ ಕೆಲಸ ಮಾಡುತಿದ್ದಾರೆ. ನನ್ನ ತಾಯಿ ಮನೆಗೆಲಸ ಮಾಡುತ್ತ ಮನೆಯಲ್ಲೇ ಇರುತ್ತಾರೆ. ನನ್ನ ತಮ್ಮ ಈಗ ಹತ್ತನೆ ತರಗತಿಯಲ್ಲಿ ಓದುತಿದ್ದಾ ನೆ. ನನಗೆ ನನ್ನ ತಂದೆ ಎಂದರೆ ತುಂಬಾ ಇಷ್ಟ. ಅವರಿಗೂ ನಾನೆಂದರೆ ಪ್ರಾಣ. ನಾವು ಮನೆಯಲ್ಲಿ ಸದಾ ಖುಷಿಯಾಗಿರುತ್ತೆವೆ. ನಮ್ಮ ಅಜ್ಜಿ ಕೂಡ ನಮ್ಮೊಡನೆ ಇರುತತ್ತಾರೆ. ಅವರು ನಮಗೆ ಕಥೆಗಳು ಹೆಳ್ಳುತ್ತಾರೆ ಅದು ನಮಗೆ ತುಂಬಾ ಇಷ್ಟವಾಗುತ್ತದೆ. ಹೇಗೆ ನನ್ನ ಬಾಲ್ಯ ಕೆಳೆದೆನು.

ನನ್ನ ಶಾಲೆಯ ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಪ್ರೀ-ಕೆಜಿ ಇಂದ ಮೂರನೇ ತರಗತಿಯ ವರೆಗೂ ಸಂತ. ಫಿಲೋಮೀನಸ್ ಎಂಬ ಶಾಲೆಯಲ್ಲಿ ಓದಿದೇನು. ನಂತರದ ವಿದ್ಯಾಭ್ಯಾಸಕ್ಕೆ ಎಂದರೆ ನಾಲ್ಕನೇ ತರಗತಿ ಇಂದ ಹತ್ತನೆ ತರಗತಿಯವರೆಗೂ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಓದಿದೆನು.ಆ ನನ್ನ ಶಾಲೆ ದಿನಗಳ್ಳನ್ನು ಮರೆಯಲು ಸಾಧ್ಯವಿಲ್ಲಾ.ಆ ದಿನಗಳು ಸಂತೋಷ,ಮೋಜು, ಮಾಸ್ತಿ ಇಂದ ಕುಡಿತ್ತು. ನಾನು ಶಾಲೆಯ ಸಮಯದಲ್ಲಿ ತುಂಬಾ ಚೆನ್ನಾಗಿ ಒದುತಿದ್ದೆ.ಆ ಕಾರಣದಿಂದಾಗಿ ಎಲ್ಲಾ ಶಿಕ್ಷಕರಿಗೆ ನಾನು ಎಂದರೆ ತುಂಬಾ ಇಷ್ಟವಾಗುತ್ತಿತ್ತು. ಎಲ್ಲ ವಿಷಯದಲ್ಲಿ ಮುಂದೆ ಇರುತ್ತಿದೆ.ಯಾವುದೇ ಕಾರ್ಯಕ್ರಮವಾಗಲಿ ನಾನೆ ಭಾಷಣ ಮಾಡುತ್ತಿದೆ.ಅದರಿಂದ ನನಗೆ ತುಂಬ ಸಂತೋಷವಾಗುತ್ತಿತ್ತು. ನಾನು ಓದುವುದಲ್ಲದೆ ಬೇರೆ ವಿಷಯದಲ್ಲೂ ಮುಂದು.ನನಗೆ ಆಟದಲ್ಲಿ ಮಾತು ಹಾಡುವುದಲ್ಲಿ ಆಸಕ್ತಿ ಇತ್ತು ಅದರಿಂದ ನಾನು ಎಲ್ಲಾ ಕಾರ್ಯಕ್ರಮದಲ್ಲಿ ಹಾಡುತಿದ್ದೆ. ಆಟದಲ್ಲಿ ನನಗೆ ಒಂದು ಬರಿ ಚಿನ್ನದ ಪದಕ ದೊರೆತಿತ್ತು. ಒಂದು ಬರಿ ಬೆಂಕಿ ಇಲ್ಲದೆ ಅಡುಗೆ ಮಾಡುವುದರಲ್ಲಿ ಕಂಚಿನ ಪದಕ ದೊರೆತಿತ್ತು. ಆ ಸಮಯದಲ್ಲಿ ನನಗೆ ತುಂಬ ಖುಷಿಯಾಯಿತು. ನನ್ನ ತಂದೆ ತಾಯಿ ಕೂಡ ಖುಷಿ ಪಟ್ಟಿದ್ದರು. ಹೀಗೆ ನನ್ನ ಶಾಲೆ ಜೀವನದಲ್ಲಿ ನನಗೆ ಒಳ್ಳೆ ಗೆಳೆಯರು ಮತ್ತು ಗೆಳೆತಿಯರು ಸಿಕ್ಕಿದರು.ನಾನು ಏಳನೇ ತರಗತಿಯಲ್ಲಿದ್ದಾಗ ನಾನು ಒಂದು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಾಗವಹಿಸಿ ನಾನು ಮೊದಲನೇ ಸ್ಥಾನ ಪಡೆದಿದ್ದಕ್ಕೆ ನನಗೆ 5000 ರೂಪಾಯಿಗಳು ಬಹುಮಾನವಾಗಿ ದೊರೆತಿತ್ತು.ಹಾಗಾಗಿ ಅದರ ಮುಂದಿನ ಸುತ್ತಿಗೆ ನಾನು ದವಣೆಗೆರೆಗೆ ಹೋಗಬೇಕಿತ್ತು ಹಾಗ ನನ್ನ ಜೊತೆ ನನ್ನ ತಂದೆ ಮತ್ತು ನನ್ನ ಶಿಕ್ಷಕರು ಬಂದಿದ್ದರು.ಈ ಸಮಯದಲ್ಲಿ ನನ್ನ ಪರಿವಾರದವರು ತುಂಬ ಹೆಮ್ಮೆ ಪಟ್ಟರು ನನಗು ತುಂಬ ಖುಷಿಯಾಯಿತು.ಆದರೆ ಅಲ್ಲಿನಮ್ಮ ಸ್ಪರ್ಧೆಯಲ್ಲಿ ನನಗೆ ಬಹುಮಾನ ಸಿಗಲಿಲ್ಲ ಆಗ ನನಗೆ ತುಂಬ ಬೇಸರವಾಯಿತು.ಆದರೆ ನನ್ನ ತಂದೆ ಭಾಗವಹಿಸಿದೆಯಲ್ಲ ಅಷ್ಟೇ ಸಾಕು ಗೆಲ್ಲುವುದು ಸೋಲುವುದು ಅದರ ಒಂದು ಭಾಗ. ಆಗ ನನಗೆ ಸಮಾಧಾನವಾಯಿತು.ಹೀಗೆ ಹಲವಾರು ಸ್ಪರ್ಧೆಗಳ್ಳಲ್ಲಿ ಭಾಗವಹಿಸಿದೇನು . ಇದರಿಂದ ನನ್ನ ಬುದ್ದಿಶಕ್ತಿಯು ಹೆಚ್ಚಿತು ಮತ್ತು ನನ್ನ ಆತ್ಮ ವಿಶ್ವಾಸವು ಬೆಳೆಯಿತು. ಇದಕ್ಕೆ ನಾನು ನನ್ನ ಶಾಲೆಗೆ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ. ಹೀಗ್ಗಿದಾಗ್ಲೇ ಹತ್ತನೇ ತರಗತಿಯ ಪರೀಕ್ಷೆ ಶುರುವಾಗತೊಡಗಿತು, ನಮಗೆಲ್ಲ ಭಯ ಶುರುವಾಯ್ತು ಆಗಲೇ ನಮ್ಮ ಶಿಕ್ಷಕರು ನಮಗೆ ಸ್ಫೂರ್ತಿ ತುಂಬಿದರು. ಆಗ ನಾನು ನನ್ನ ಗೆಳೆಯರೆಲ್ಲ ಸೇರಿ ಒಟ್ಟಿಗೆ ಓಧಿ ನಮ್ಮ ಪರಿಕ್ಷೇಯನ್ನು ಚೆನ್ನಾಗಿ ಮಾಡಿದೇವು. ಆ ನಂತರ ನಮಗೆ ರಜೆಗಳು ಶುರುವಾಯಿತು. ರಜೆಗಳ್ಳಲ್ಲಿ ನಾನು ನಮ್ಮ ಊರಿನಲ್ಲಿ ಕಾಡು ಸುತ್ತುತ್ತ ನಿಸರ್ಗವನ್ನು ಗಮನಿಸುತ್ತಿದೆ. ನಂತರ ಪರೀಕ್ಷೆಯ ಫಲಿತಾಂಶ ಹೊರ ಬಂದಿತು ನನಗೆ ಆ ದಿನ ತುಂಬ ಭಯವಾಗಿತ್ತು ಆದರೆ ನನಗೆ ಒಳ್ಳೆಯ ಅಂಕಗಳು ದೊರೆತಿತ್ತು. ನಾನು 76% ಪಡೆದುಕೊಂಡ್ಡಿದ್ದೆ. ನನ್ನ ಅಪ್ಪ ಅಮ್ಮ ತುಂಬಾ ಖುಷಿ ಪಟ್ಟರು.

ನನ್ನ ಕಾಲೇಜಿನ ಜೀವನ[ಬದಲಾಯಿಸಿ]

ನಂತರ ನಾನು ನನ್ನ ಪಿ.ಯು.ಸಿ ಗೆ ಎಸ್.ವಿ.ವಿ.ಎನ್ ಪಿ.ಯು ಕಾಲೇಜಿಗೆ ಸೇರಿಕೊಂಡೆ. ನನಗೆ ಅಲ್ಲಿ ಮೊದಲು ತುಂಬ ಕಷ್ಟವಗಿತ್ತು ಏಕೆಂದರೆ ಎಲ್ಲರೂ ಹೊಸಬರು ಮತ್ತು ಅಲ್ಲಿನ ವಾತಾವರಣ ಹೊಸದು. ಆದರೆ ದಿನ ಕಳೆತ್ತಿದಂತೆ ಹೊಸ ಗೆಳೆಯರು ಪರಿಚಯವಾದರು ಅವರೊಂದಿಗೆ ಇದ್ದರೆ ಸಮಯ ಬೇಗ ಹೋಗುತ್ತಿತ್ತು. ಅದರಿಂದ ಯಾವುದೇ ಕಷ್ಟವಾಗಲಿಲ್ಲ.ಹೀಗೆ ಮೊದಲನೆಯ ವರ್ಷ ಆರಾಮಾಗಿ ಕಳೆದೆವು. ಆದರೆ ಎರಡನೇ ವರ್ಷ ನಮಗೆ ತುಂಬಾ ಮುಖ್ಯವಾಗಿತ್ತು ಅದರಿಂದ ಚೆನ್ನಾಗಿ ಓದಿದೆವು. ಪರೀಕ್ಷೆ ಬಂದಾಗ ರಾತ್ರಿ ಹೊತ್ತು ಕಾಲೇಜಿನಲ್ಲಿ ಒಧುತ್ತಿದ್ದೆವು. ಹೀಗೆ ಪರೀಕ್ಷೆ ಮುಗಿಯಿತು ಫಲಿತಾಂಶಕ್ಕಾಗಿ ಕಾಯುತಿದ್ದೆವು. ಫಲಿತಾಂಶ ಬಂದಾಗ ತುಂಬ ಸಂತೋಷವಾಯಿತು. ನನಗೆ 88.33% ಬಂದಿತು. ನನಗೆ ತುಂಬ ಖುಷಿಯಾಯಿತು.ಹೀಗೆ ನನ್ನ ಕಾಲೇಜು ಮುಗಿಯಿತು. ಆಗ ತುಂಬ ಬೇಸರವಾಯಿತು ಏಕೆಂದರೆ ನಮ್ಮ ನೆಚ್ಚಿನ ಶಿಕ್ಷಕರು, ಗೆಳೆಯರನೆಲ್ಲ ಬಿಟ್ಟು ಹೋಗಬೇಕಲ್ಲ ಎಂದು. ರಜೆಗಳು ಪ್ರಾರಂಭವಾಯಿತು ಮಾತು ಮುಂದಿನ ಓದಿಗೆ ಯಾವ ಕಾಲೇಜಿಗೆ ಹೋಗುವುದು ಎಂಬ ಚಿಂತೆಯು ಶುರುವಾಯಿತು. ಆಗ ನನ್ನ ಅಣ್ಣ ನನಗೆ ಕ್ರೈಷ್ಟ್ ಯೂನಿವರ್ಸಿಟಿಗೆ ಸೇರಿಕೊ ಎಂದು ಸಲಹೆ ನುಡಿದನು, ಮತ್ತು ನಾನು ಆ ಕಾಲೇಜಿನ ಬಗ್ಗೆ ಕೇಳ್ಳದ್ದೆನು ನನಗು ಇಷ್ಟ ಅಯ್ತು ಅದ್ಕಕೆ ಸೇರಿಕೊಂಡು ಈಗ ನಾನು ಮೊದಲನೇ ವರ್ಷ ಡಿಗ್ರಿ ಮಾಡುತ್ತಿದೇನೇ. ನನಗೆ ಈ ಕಾಲೇಜು ತುಂಬ ಇಷ್ಟವಾಯಿತು ಎಲ್ಲೂ ನಮಗೆ ಎಲ್ಲಾ ರೀತಿಯ ವಿಷಯಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ನಾವು ತುಂಬ ಹೆಚ್ಚು ಕಾರ್ಯಕ್ರಮದಲ್ಲಿ ಭಾಗವಹಿಸಿಬಹುದು . ಅದರಿಂದ ನಾನು ಈ ಕಾಲೇಜಿನಲ್ಲಿ ಓಧಿ ನನ್ನ ತಂದೆ ತಾಯಿಯ ಕೀರ್ತಿಯನ್ನು ಹೆಚ್ಚಿಸುತ್ತೇನೆ. ಇದೇ ನನ್ನ ಆಶಯ.

                    ಧನ್ಯವಾದಗಳು.

ಆಗ ನನ್ನ ಅಣ್ಣ ನನಗೆ ಕ್ರೈಷ್ಟ್ ಯೂನಿವರ್ಸಿಟಿಗೆ ಸೇರಿಕೊ ಎಂದು ಸಲಹೆ ನುಡಿದನು, ಮತ್ತು ನಾನು ಆ ಕಾಲೇಜಿನ ಬಗ್ಗೆ ಕೇಳ್ಳದ್ದೆನು ನನಗು ಇಷ್ಟ ಅಯ್ತು ಅದ್ಕಕೆ ಸೇರಿಕೊಂಡು ಈಗ ನಾನು ಮೊದಲನೇ ವರ್ಷ ಡಿಗ್ರಿ ಮಾಡುತ್ತಿದೇನೇ. ನನಗೆ ಈ ಕಾಲೇಜು ತುಂಬ ಇಷ್ಟವಾಯಿತು ಎಲ್ಲೂ ನಮಗೆ ಎಲ್ಲಾ ರೀತಿಯ ವಿಷಯಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ನಾವು ತುಂಬ ಹೆಚ್ಚು ಕಾರ್ಯಕ್ರಮದಲ್ಲಿ ಭಾಗವಹಿಸಿಬಹುದು . ಅದರಿಂದ ನಾನು ಈ ಕಾಲೇಜಿನಲ್ಲಿ ಓಧಿ ನನ್ನ ತಂದೆ ತಾಯಿಯ ಕೀರ್ತಿಯನ್ನು ಹೆಚ್ಚಿಸುತ್ತೇನೆ. ಇದೇ ನನ್ನ ಆಶಯ.