ಸದಸ್ಯ:2231143tanviwodeyar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಟ್ಯ ಶಾಸ್ತ್ರ[ಬದಲಾಯಿಸಿ]

ನೃತ್ಯದ ಅಧಿಪತಿಯಾಗಿ ಶಿವ

ನಾಟ್ಯ ಶಾಸ್ತ್ರವು ಪ್ರದರ್ಶನ ಕಲೆಗಳ ಕುರಿತಾದ ಸಂಸ್ಕೃತ ಗ್ರಂಥವಾಗಿದೆ. ಈ ಗ್ರಂಥವನ್ನು ಬರೆದ ಕೀರ್ತಿ ಭರತ ಮುನಿಗೆ ಸಲ್ಲುತ್ತದೆ. ಇದು ಸಂಪೂರ್ಣವಾಗಿ ೨೦೦ ಬಿ.ಸಿ.ಇ ಮತ್ತು ೨೦೦ ಸಿ.ಇ ನಡುವೆ ಸಂಯೋಜಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಪಠ್ಯವು ಪ್ರದರ್ಶನ ಕಲೆಗಳನ್ನು ವಿವರಿಸುವ ಒಟ್ಟು ೬೦೦೦ ಕಾವ್ಯಾತ್ಮಕ ಪದ್ಯಗಳೊಂದಿಗೆ ೩೬ ಅಧ್ಯಾಯಗಳನ್ನು ಒಳಗೊಂಡಿದೆ. ಈ ಗ್ರಂಥವು ಒಳಗೊಂಡಿರುವ ವಿಷಯಗಳೆಂದರೆ ನಾಟಕೀಯ ಸಂಯೋಜನೆ, ನಾಟಕದ ರಚನೆ ಮತ್ತು ಅದನ್ನು ಆಯೋಜಿಸಲು ವೇದಿಕೆಯ ನಿರ್ಮಾಣ, ನಟನೆಯ ಪ್ರಕಾರಗಳು, ದೇಹದ ಚಲನೆಗಳು, ಸೌಂದರ್ಯ ವರ್ಧಕ ಮತ್ತು ವೇಷಭೂಷಣಗಳು, ಕಲಾ ನಿರ್ದೇಶಕನ ಪಾತ್ರ ಮತ್ತು ಗುರಿಗಳು, ಸಂಗೀತ ಮಾಪಕಗಳು, ಸಂಗೀತ ವಾದ್ಯಗಳು ಮತ್ತು ಕಲೆಯ ಪ್ರದರ್ಶನದೊಂದಿಗೆ ಸಂಗೀತದ ಏಕೀಕರಣ. ನಾಟ್ಯ ಶಾಸ್ತ್ರವು ಕಲೆಗಳ ಕುರಿತಾದ ಪುರಾತನ ವಿಶ್ವಕೋಶ ಗ್ರಂಥವಾಗಿ ಗಮನಾರ್ಹವಾಗಿದೆ. ಇದು ಭಾರತದಲ್ಲಿನ ನೃತ್ಯ, ಸಂಗೀತ ಮತ್ತು ಸಾಹಿತ್ಯ ಸಂಪ್ರದಾಯಗಳ ಮೇಲೆ ಪ್ರಭಾವ ಬೀರಿದೆ. ಇದು ಸೌಂದರ್ಯದ "ರಸ" ಸಿದ್ಧಾಂತಕ್ಕೆ ಸಹ ಗಮನಾರ್ಹವಾಗಿದ್ದು, ಮನೋರಂಜನೆಯು ಪ್ರದರ್ಶನ ಕಲೆಗಳ ಮುಖ್ಯ ಗುರಿಯಾಗಿದ್ದು ಪ್ರಾರ್ಥಮಿಕ ಗುರಿಯಲ್ಲ ಎಂದು ಪ್ರತಿಪಾದಿಸುತ್ತದೆ. ಪ್ರೇಕ್ಷಕರಲ್ಲಿರುವ ವ್ಯಕ್ತಿಯನ್ನು ಆಶ್ಚರ್ಯದಿಂದ ತುಂಬಿರುವ ಮತ್ತೊಂದು ಸಮಾನಾಂತರ ವಾಸ್ತವಕ್ಕೆ ಸಾಗಿಸುವುದೇ ಇದರ ಪ್ರಾರ್ಥಮಿಕ ಗುರಿ ಎಂದು ಹೇಳುತ್ತದೆ. ಪಠ್ಯವು ೧೦ ನೇ ಶತಮಾನದ ಅಭಿನವಗುಪ್ತರಿಂದ ಬರೆಯಲ್ಪಟ್ಟ ಅಭಿನವಭಾರತಿಯಂತಹ ದ್ವಿತೀಯ ಸಾಹಿತ್ಯಕ್ಕೆ ಪ್ರೇರಣೆ ನೀಡಿತು.

ವ್ಯುತ್ಪತ್ತಿ[ಬದಲಾಯಿಸಿ]

ಪಠ್ಯದ ಶೀರ್ಷಿಕೆಯು “ನಾಟ್ಯ” ಮತ್ತು "ಶಾಸ್ತ್ರ" ಎಂಬ ಎರಡು ಪದಗಳಿಂದ ಕೂಡಿದೆ. ನಾಟ್ಯ ಸಂಸ್ಕೃತ ಪದದ ಮೂಲ ನಟ ಅಂದರೆ "ನಟ, ಪ್ರತಿನಿಧಿ". ಶಾಸ್ತ್ರ ಎಂಬ ಪದವು "ನಿಯಮ, ನಿಯಮಗಳು, ಕೈಪಿಡಿ, ಸಂಕಲನ, ಪುಸ್ತಕ ಅಥವಾ ಗ್ರಂಥ" ಎಂದರ್ಥ.

ನಾಟ್ಯಶಾಸ್ತ್ರದ ರಚನೆ[ಬದಲಾಯಿಸಿ]

ಈ ಪಠ್ಯವು ನಾಟಕೀಯ ಅಂಶಗಳನ್ನು ವಿವಿಧ ಅಧ್ಯಾಯಗಳಾಗಿ ವಿಂಗಡಿಸುತ್ತದೆ. ಪಠ್ಯವು ಪೌರಾಣಿಕ ಮೂಲ ಮತ್ತು ನಾಟಕದ ಇತಿಹಾಸದೊಂದಿಗೆ ಪ್ರಾರಂಭವಾಗಿ, ಕಲೆಯ ವಿವಿಧ ಅಂಶಗಳಲ್ಲಿ ವಿಭಿನ್ನ ಹಿಂದೂ ದೇವತೆಗಳ ಪಾತ್ರವನ್ನು ಉಲ್ಲೇಖಿಸುತ್ತದೆ. ನಾಟ್ಯಶಾಸ್ತ್ರವು 36 ಅಧ್ಯಾಯಗಳನ್ನು ಒಳಗೊಂಡಿದೆ. ಅಧ್ಯಾಯ ೧-೫ ರಲ್ಲಿ ವೇದಿಕೆ, ರಂಗಮಂದಿರದ ಕಟ್ಟಡ ಇತ್ಯಾದಿಗಳಂತಹ ಬಾಹ್ಯ ಮತ್ತು ಪ್ರಾದೇಶಿಕ ಅಂಶಗಳನ್ನು ಚರ್ಚಿಸಲಾಗಿದೆ. ಅಧ್ಯಾಯ ೬ ಮತ್ತು ೭ ರಸದ ಸಿದ್ಧಾಂತದ ಬಗ್ಗೆ ವಿವರಣೆ ನೀಡುತ್ತದೆ. ಅಧ್ಯಾಯ ೮-೧೩ ಶಾರೀರಿಕ ಅಭಿನಯ ತಂತ್ರದ ಬಗ್ಗೆ ಮಾಹಿತಿ ನೀಡುತ್ತದೆ. ಮೌಖಿಕ ಅಂಶಗಳಾದ ಧ್ವನಿ ಹಾಗೂ ಭಾಷಣವನ್ನು ಅಧ್ಯಾಯ ೧೪-೧೯ರಲ್ಲಿ ವಿವಿರಿಸಲಾಗಿದೆ. ಅಧ್ಯಾಯ ೨೦-೨೧ ನಾಟಕದ ಪ್ರಕಾರಗಳು ಮತ್ತು ರಚನೆಯ ಬಗ್ಗೆ, ೨೨-೨೬ ಸೌಂದರ್ಯ ವರ್ಧಕ ಹಾಗು ವೇಷಭೂಷಣಗಳ ಬಗ್ಗೆ ಹೇಳುತ್ತದೆ. ೨೮-೩೩ ಅಧ್ಯಾಯಗಳು ಸಂಗೀತದ ಮೇಲೆ ಕೇಂದ್ರೀಕರಿಸುತ್ತವೆ. ನಾಟಕ ತಂಡದ ಅಂಶಗಳು ಮತ್ತು ಪಾತ್ರಗಳ ವಿತರಣೆಯನ್ನು ವಿವರಿಸಿ ,ಅದ ನಂತರ ಗಮನವು ರಂಗಭೂಮಿ ಕಲೆಯ ದೈವಿಕ ಮೂಲದ ಪ್ರಶ್ನೆ-ಅದರ ಪ್ರಾರಂಭಕ್ಕೆ ಮರಳುತ್ತದೆ.

ನಾಟ್ಯಶಾಸ್ತ್ರದಲ್ಲಿನ ವಿಷಯಗಳು[ಬದಲಾಯಿಸಿ]

ನಾಟ್ಯಶಾಸ್ತ್ರದ ವಿಷಯಗಳು, ಸುಸಾನ್ ಶ್ವಾರ್ಟ್ಜ್ ಹೇಳುವಂತೆ, "ಭಾಗಶಃ ನಾಟಕೀಯ ಕೈಪಿಡಿ, ಭಾಗಶಃ ಸೌಂದರ್ಯಶಾಸ್ತ್ರದ ತತ್ವಶಾಸ್ತ್ರ,ಭಾಗಶಃ ಪೌರಾಣಿಕ ಇತಿಹಾಸ, ಭಾಗಶಃ ದೇವತಾಶಾಸ್ತ್ರ".ಇದು ಭಾರತದ ನಾಟಕಶಾಸ್ತ್ರದ ಬಗೆಗಿನ ಅತ್ಯಂತ ಹಳೆಯದಾದ ವಿಶ್ವಕೋಶದ ಗ್ರಂಥವಾಗಿದ್ದು, ವಿವಿಧ ಪ್ರದರ್ಶನ ಕಲೆಗಳ ಸಿದ್ಧಾಂತ ಮತ್ತು ಅಭ್ಯಾಸದ ವಿಭಾಗಗಳನ್ನು ಹೊಂದಿದೆ. ಪ್ರದರ್ಶನ ಕಲೆಗಳ ಗುರಿಗಳು, ನಾಟಕಕಾರನ ಸ್ವಭಾವ, ಕಲಾವಿದರು ಮತ್ತು ಪ್ರೇಕ್ಷಕರು, ಪ್ರದರ್ಶನದ ಸಮಯದಲ್ಲಿ ಅವರ ನಿಕಟ ಸಂಬಂಧವನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಪಠ್ಯವು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಈ ಪಠ್ಯವು ನಾಟ್ಯ ವಿಷಯಗಳಾದ ನಾಟಕ, ನೃತ್ಯ, ರಂಗಭೂಮಿ, ಕಾವ್ಯ ಮತ್ತು ಸಂಗೀತವನ್ನು ಒಳಗೊಂಡಿವೆ. ಪಠ್ಯವು ಅದರ ಸೌಂದರ್ಯಶಾಸ್ತ್ರ ಮತ್ತು ಕಲೆಗಳ ವಿವರಣೆಯನ್ನು ಹಿಂದೂ ದೇವತೆಗಳು ಮತ್ತು ದೇವಿಗಳಿಗೆ ಸಂಬಂಧಿಸಿದ ಪುರಾಣಗಳೊಂದಿಗೆ ಸಂಯೋಜಿಸುತ್ತದೆ. ನಾಟ್ಯಶಾಸ್ತ್ರವು ವಿಧಿ ವಿಧಾನದ (ಯಜ್ಞ) ಒಂದು ರೂಪವಾಗಿದೆ.

ನಾಟ್ಯಶಾಸ್ತ್ರದ "ರಸ ಸಿದ್ಧಾಂತ", ಡೇನಿಯಲ್ ಮೆಯೆರ್-ಡಿಂಕ್‌ಗ್ರಾಫ್ ಹೇಳುವಂತೆ, ಆನಂದವು ಮನುಷ್ಯನಲ್ಲಿ ಸ್ವಾಭಾವಿಕ ಮತ್ತು ಆಂತರಿಕವಾಗಿದೆ ಎಂದು ಊಹಿಸುತ್ತದೆ. ಅದು ತನ್ನಲ್ಲಿಯೇ ಅಸ್ತಿತ್ವವಾಗಿ, ಭೌತಿಕವಲ್ಲದ ಆಧ್ಯಾತ್ಮಿಕ ವಿಧಾನಗಳ ಮೂಲಕ ಪ್ರಟಕವಾಗುತ್ತದೆ .ಈ ರಸವನ್ನು ಅನುಭವಿಸಲು ಅಥವಾ ಅದನ್ನು ಮರು-ಅನುಭವಿಸಲು ಮನುಷ್ಯನನ್ನು ನಿರ್ದೇಶಿಸುವುದು ಪ್ರದರ್ಶನ ಕಲೆಗಳ ಗುರಿಯಾಗಿದೆ. ಈ ಸೌಂದರ್ಯದ ಪ್ರಯಾಣದಲ್ಲಿ ಪ್ರೇಕ್ಷಕರನ್ನು ತನ್ನೊಂದಿಗೆ ಕರೆದೊಯ್ಯುವ ಗುರಿಯನ್ನು ನಟರು ಹೊಂದಿರುತ್ತಾರೆ. ವಿಭವ (ನಿರ್ಣಯಕಾರಕಗಳು), ಅನುಭವ (ಪರಿಣಾಮಗಳು) ಮತ್ತು ವ್ಯಾಭಿಚಾರಿಭಾವ (ಸ್ಥಿರ ಸ್ಥಿತಿಗಳು) ಗಳ ಸೃಜನಶೀಲ ಸಂಶ್ಲೇಷಣೆ ಮತ್ತು ಅಭಿವ್ಯಕ್ತಿಯ ಮೂಲಕ ರಸವನ್ನು ತಯಾರಿಸಲಾಗುತ್ತದೆ ಎಂದು ನಾಟ್ಯಶಾಸ್ತ್ರವು ಹೇಳುತ್ತದೆ. ಪ್ರೇಕ್ಷಕರಲ್ಲಿ ವ್ಯಕ್ತಿಯನ್ನು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ, ಪಠ್ಯವು ಎಂಟು ಭಾವನೆಗಳಾದ ಶೃಂಗಾರ , ಹಾಸ್ಯ, ಕರುಣ, ಭಯಾನಕ, ಉಗ್ರ, ಅಸಹ್ಯ, ವೀರ ಮತ್ತು ಅದ್ಭುತ-ಇವುಗಳ ಬಳಕೆಯನ್ನು ವಿವರಿಸುತ್ತದೆ. ಪಠ್ಯವು ವಿವಿಧ ಪ್ರದರ್ಶನ ಕಲೆಗಳ ಜೊತೆಗೆ ವೇದಿಕೆಯ ವಿನ್ಯಾಸವನ್ನು ಚರ್ಚಿಸುತ್ತದೆ.

ನಾಟಕ[ಬದಲಾಯಿಸಿ]

ನಾಟಕವು ನಟನ ಸಂವಹನ ಕಲೆಯ ಮಾಧ್ಯಮದ ಮೂಲಕ ಪ್ರೇಕ್ಷಕರಲ್ಲಿ ಕಲಾತ್ಮಕವಾಗಿ ಸಂತೋಷವನ್ನು ಉಂಟುಮಾಡುವ ಒಂದು ಕಲಾ ಪ್ರಕಾರವಾಗಿದೆ ಎಂದು ನಾಟ್ಯಶಾಸ್ತ್ರವು ಪದ್ಯ ೬.೧೦ರಲ್ಲಿ ನಾಟಕವನ್ನು ವ್ಯಾಖ್ಯಾನಿಸುತ್ತದೆ. ಈ ನಾಟ್ಯವು ಅಭಿನಯ, ಧರ್ಮಿ, ವೃತ್ತಿ, ಪ್ರವೃತ್ತಿ, ಹಾಡು ಗಾಯನಗಳಿಂದ, ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾದ ರಂಗಮಂದಿರದಲ್ಲಿ ಯಶ್ಶಸ್ಸನ್ನು (ಸಿದ್ಧಿ) ಸಾಧಿಸುತ್ತದೆ. ಈ ಪುರಾತನ ಸಂಸ್ಕೃತ ಪಠ್ಯದಲ್ಲಿನ ಈ ನಾಟಕವು ಜೀವನದ ಪ್ರತಿಯೊಂದು ಅಂಶವನ್ನು ವೈಭವೀಕರಿಸಲು ಮತ್ತು ಸಂತೋಷದಾಯಕ ಪ್ರಜ್ಞೆಯ ಸ್ಥಿತಿಯನ್ನು ನೀಡುವ ಒಂದು ಕಲೆಯಾಗಿದೆ. ಪಠ್ಯವು ನಾಟಕದ ಸಾರ್ವತ್ರಿಕ ಮತ್ತು ಆಂತರಿಕ ತತ್ವಗಳನ್ನು ಚರ್ಚಿಸುತ್ತಾ, ಪ್ರೇಕ್ಷಕರನ್ನು ಅನ್ವೇಷಣೆ ಮತ್ತು ತಿಳುವಳಿಕೆಯ ಸ್ಥಿತಿಯ ಪ್ರಯಾಣದ ಕಡೆಗೆ ಕರೆದೊಯ್ಯುತ್ತದೆ. ಕಥೆಗಳು ಮತ್ತು ಕಥಾವಸ್ತುಗಳನ್ನು ಇತಿಹಾಸಗಳು (ಮಹಾಕಾವ್ಯಗಳು), ಪುರಾಣಗಳು ಮತ್ತು ಹಿಂದೂ ಸಾಹಿತ್ಯದ ಕಥಾ ಪ್ರಕಾರದಿಂದ ಆಯ್ದುಕೊಳ್ಳಲಾಗಿದೆ. ನಾಟಕಕಾರನು ಕಥೆಯಲ್ಲಿನ ಎಲ್ಲಾ ಪಾತ್ರಗಳ ಭಾವಗಳನ್ನು (ಆಂತರಿಕ ಸ್ಥಿತಿ) ತಿಳಿದಿದ್ದರೆ ಮಾತ್ರ ಪ್ರೇಕ್ಶಕರು ಆ ಭಾವವನ್ನುಹಂಚಿಕೊಂಡು ಅನುಭವಿಸುತ್ತಾರೆ. ನಾಟ್ಯಶಾಸ್ತ್ರದ ಪ್ರಕಾರ ನಾಟಕವೆಂದರೆ ಮನುಷ್ಯರು ಪ್ರೇಕ್ಷಕರಾಗಿ ಬಂದಾಗ ವಿಭಿನ್ನ ಆಂತರಿಕ ಸ್ಥಿತಿಗಳಲ್ಲಿದ್ದಾರೆ ಎಂದು ಒಪ್ಪಿಕೊಂಡು ನಂತರ ಪ್ರದರ್ಶನದ ಮೂಲಕ ಸಂತೋಷವನ್ನು ಬಯಸುವವರಿಗೆ ಸಂತೋಷವನ್ನು ನೀಡುತ್ತದೆ, ದುಃಖದಲ್ಲಿರುವವರಿಗೆ ಸಾಂತ್ವನ ನೀಡುತ್ತದೆ. ಚಿಂತಿತರಿಗೆ ಶಾಂತತೆ, ಧೈರ್ಯವಿರುವವರಿಗೆ ಶಕ್ತಿ, ಹೇಡಿಗಳಿಗೆ ಧೈರ್ಯ, ಶ್ರೀಮಂತರಿಗೆ ಭೋಗ, ಅವಿದ್ಯಾವಂತರಿಗೆ ಜ್ಞಾನ, ವಿದ್ಯಾವಂತರಿಗೆ ಬುದ್ಧಿವಂತಿಕೆ ನೀಡುತ್ತದೆ. ನಾಟಕವು ಜೀವನ ಮತ್ತು ಪ್ರಪಂಚದ ಸತ್ಯಗಳನ್ನು ಭಾವನೆಗಳು ಮತ್ತು ಸಂದರ್ಭಗಳ ಮೂಲಕ ಪ್ರತಿನಿಧಿಸುತ್ತ ಮನರಂಜನೆಯನ್ನು ನೀಡುತ್ತದೆ. ಆದರೆ ಅದಕ್ಕಿಂತ ಹೆಚ್ಚು ಮುಖ್ಯವಾಗಿ ನೈತಿಕತೆ, ಪ್ರಶ್ನೆಗಳು, ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ನಾಟ್ಯಶಾಸ್ತ್ರದಲ್ಲಿ ಡೇನಿಯಲ್ ಮೆಯೆರ್-ಡಿಂಕ್‌ಗ್ರಾಫ್‌ ಹೇಳುವಂತೆ ನಾಟಕ ಮತ್ತು ರಂಗಭೂಮಿಯ ಕಲೆಯ ಕಾರ್ಯವು ಮಾನವ ಸಾಮರ್ಥ್ಯವನ್ನು ಪುನಃಸ್ಥಾಪಿಸುವುದು. ಪಠ್ಯವು ಅದರ ಗುರಿಗಳನ್ನು ಸಾಧಿಸಲು ನಾಟಕೀಯ ಕಲೆಗಳಲ್ಲಿ ಲಭ್ಯವಿರುವ ವಿಧಾನಗಳನ್ನು ವಿವರಿಸಲು ನಿರ್ದಿಷ್ಟತೆಗಳಿಗೆ ಹೋಗುತ್ತದೆ. ಆಹಾರದ ರುಚಿಯನ್ನು ತರಕಾರಿಗಳು, ಮಸಾಲೆಗಳು ಮತ್ತು ಸಕ್ಕರೆ ಮತ್ತು ಉಪ್ಪಿನಂತಹ ಇತರ ಲೇಖನಗಳ ಸಂಯೋಜನೆಯಿಂದ ಹೇಗೆ ನಿರ್ಧರಿಸಲಾಗುತ್ತದೋ , ಪ್ರೇಕ್ಷಕರು ಪದಗಳು, ಸನ್ನೆಗಳು ಮತ್ತು ಮನೋಧರ್ಮಗಳ ಅಭಿವ್ಯಕ್ತಿಯ ಮೂಲಕ ನಾಟಕದ ಪ್ರಬಲ ಸ್ಥಿತಿಗಳ ರುಚಿ ನೋಡುತ್ತಾರೆ. ಈ ಸ್ಥಾಯಿಭಾವಗಳು - ಪ್ರೀತಿ, ಉಲ್ಲಾಸ, ದುಃಖ, ಕೋಪ, ಶಕ್ತಿ, ಭಯ, ಅಸಹ್ಯ ಮತ್ತು ಬೆರಗು. ಇದಲ್ಲದೆ, ಪಠ್ಯವು ಹೇಳುವ ಪ್ರಕಾರ, ನಿರುತ್ಸಾಹ, ದೌರ್ಬಲ್ಯ, ಆತಂಕ, ಅಮಲು, ಆಯಾಸ, ಆಂದೋಲನ, ಹತಾಶೆ, ಅಸಹನೆಗಳಂತಹ 33 ಮಾನಸಿಕ ಸ್ಥಿತಿಗಳಿವೆ. ಇದನ್ನ ವ್ಯಭಿಚಾರಿಭಾವಗಳೆಂದು ಕರಿಯುತ್ತಾರೆ.

ಅಭಿನಯ[ಬದಲಾಯಿಸಿ]

ಅಭಿನಯ (ಸಂಸ್ಕೃತ ಅಭಿ- ' ಕಡೆಗೆ' + ನೀ -ಮಾರ್ಗದರ್ಶಿ') ಭಾರತೀಯ ಸೌಂದರ್ಯಶಾಸ್ತ್ರದಲ್ಲಿ ಅಭಿವ್ಯಕ್ತಿಯ ಕಲೆಯಾಗಿದೆ. ಹೆಚ್ಚು ನಿಖರವಾಗಿ ಇದರ ಅರ್ಥ "ಪ್ರೇಕ್ಷಕರನ್ನು ಒಂದು ಭಾವನೆಯ (ರಸ) ಅನುಭವದ (ಭಾವ) ಕಡೆಗೆ ಮುನ್ನಡೆಸುವುದು.

ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವವಾಗ್ಮಯಂ 

ಆಹಾರ್ಯಾಂ ಚಂದ್ರತಾರಾದಿ ತಂ ವಂದೇ ಸಾತ್ವಿಕಂ ಶಿವಂ ಅಭಿನಯದಲ್ಲಿ ಚತುರ್ವಿಧ ಅಭಿನಯ ಎಂಬ ೪ ವಿಧಗಳು:

೧. ಆಂಗಿಕ: ಅಂಗಾಂಗಗಳ ಚಲನೆ

೨. ವಾಚಿಕ: ಮಾತುಗಳ ಪ್ರಯೋಗ

೩. ಆಹಾರ್ಯ: ಪಾತ್ರಕ್ಕೆ ಹೊಂದುವ ವೇಷಭೂಷಣ

೪. ಸಾತ್ವಿಕ: ಮನೋಭಾವನೆಗೆ ಅನುಗುಣವಾದ ಅಭಿನಯ

ನಾಟ್ಯಶಾಸ್ತ್ರವು ಪ್ರದರ್ಶನ ಕಲೆಗಳಿಗೆ ವೇದಿಕೆಯು ಕಲಾವಿದರಿಗೆ ಪವಿತ್ರ ಸ್ಥಳವೆಂದು ವಿವರಿಸುತ್ತದೆ ಮತ್ತು ವೇದಿಕೆಯ ವಿನ್ಯಾಸ, ನಟರ ಸ್ಥಾನ, ಸಂಬಂಧಿತ ಸ್ಥಳಗಳು, ವೇದಿಕೆಯ ಮೇಲಿನ ಚಲನೆ, ಪ್ರವೇಶ ಮತ್ತು ನಿರ್ಗಮನ, ಹಿನ್ನೆಲೆಯಲ್ಲಿ ಬದಲಾವಣೆ, ಪರಿವರ್ತನೆ, ವೇದಿಕೆಯ ಮೇಲೆ ಪ್ರದರ್ಶಿಸಲಾದ ವಸ್ತುಗಳ ವಿಶೇಷತೆಗಳನ್ನು ಚರ್ಚಿಸುತ್ತದೆ. ಮತ್ತು ರಂಗಮಂದಿರದ ಅಂತಹ ವಾಸ್ತುಶಿಲ್ಪದ ಲಕ್ಷಣಗಳ ಈ ಅಂಶವು ಪ್ರೇಕ್ಷಕರನ್ನು ನಾಟಕದಲ್ಲಿ ಲೀನವಾಗಲು ಸಹಾಯ ಮಾಡುತ್ತದೆ ಮತ್ತು ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. 10 ನೇ ಶತಮಾನದ ನಂತರ, ಹಿಂದೂ ದೇವಾಲಯಗಳನ್ನು ನಾಟ್ಯಶಾಸ್ತ್ರದಲ್ಲಿ ವಿವರಿಸಿದ ಚೌಕ ತತ್ವದ ಆಧಾರದ ಮೇಲೆ ಪ್ರದರ್ಶನ ಕಲೆಗಳಿಗೆ (ಉದಾಹರಣೆಗೆ, ಕೂತಂಬಲಂ ) ಅಥವಾ ಪ್ರಾರ್ಥನಾ ಮಂದಿರಗಳನ್ನು (ಉದಾಹರಣೆಗೆ, ನಾಮಘರ್) ನಾಟಕೀಯ ಕಲೆಗಳ ವೇದಿಕೆಯಾಗಿ ಸೇರಿಸಲು ವಿನ್ಯಾಸಗೊಳಿಸಲಾಯಿತು .

ಕಲೆಯಲ್ಲಿ ಹಾಡು ಮತ್ತು ನೃತ್ಯ[ಬದಲಾಯಿಸಿ]

ನಾಟ್ಯಶಾಸ್ತ್ರವು ವೇದಗಳಲ್ಲಿನ  ಗೀತೆಗಳನ್ನು ಚರ್ಚಿಸುತ್ತದೆ. ಪಠ್ಯದ 17 ನೇ ಅಧ್ಯಾಯವು ಸಂಪೂರ್ಣವಾಗಿ ಕಾವ್ಯ ಮತ್ತು ಹಾಡಿನ ರಚನೆಗೆ ಮೀಸಲಾಗಿದ್ದು, ಇದು ನಾಟಕಗಳನ್ನು ರಚಿಸುವ ನೀಲಿನಕ್ಷೆಯಾಗಿರುತ್ತದೆ. ಅದರ ೩೧ ನೇ ಅಧ್ಯಾಯವು ಏಳು ಪ್ರಕಾರದ ಹಾಡುಗಳನ್ನು ಪ್ರತಿಪಾದಿಸುತ್ತದೆ.ಅವುಗಳು-ಮಂದ್ರಕ, ಅಪರಾಂತಕ, ರೋವಿಂದಕ, ಪ್ರಾಕಾರಿ, ಉಲ್ಲೋಪ್ಯಕ, ಓವೇದಕ ಮತ್ತು ಉತ್ತರ. ಇದು ಹಾಡುಗಳಲ್ಲಿ ೩೩  ಸುಮಧುರ ಅಲಂಕಾರಗಳನ್ನು ವಿವರಿಸುತ್ತದೆ. ಇವುಗಳು ಯಾವುದೇ ಹಾಡಿಗೆ ಕಲೆಯ ಸುಮಧುರ ಸಾಧನಗಳಾಗಿವೆ ಮತ್ತು ಅವು ಅತ್ಯಗತ್ಯ. ಈ ಸುಮಧುರ ಸ್ವರಗಳಿಲ್ಲದೆ, ಒಂದು ಹಾಡು "ಚಂದ್ರನಿಲ್ಲದ ರಾತ್ರಿ, ನೀರಿಲ್ಲದ ನದಿ, ಹೂವಿನಿಲ್ಲದ ಬಳ್ಳಿ ಮತ್ತು ಆಭರಣವಿಲ್ಲದ ಮಹಿಳೆ" ಎಂದು ಹೇಳ್ಲಲ್ಪಡಲಾಗುತ್ತದೆ. ಒಂದು ಹಾಡು ಅದರ ಅರ್ಥವನ್ನು ಸಶಕ್ತಗೊಳಿಸಲು ನಾಲ್ಕು ಮೂಲಭೂತ ವಾಸ್ತುಶಿಲ್ಪದ ವರ್ಣಗಳನ್ನು ಹೊಂದಿರುತ್ತದೆ, ಮತ್ತು ಈ ಸ್ವರ ಮಾದರಿಗಳು ಆರೋಹಣ ರೇಖೆ, ಸ್ಥಿರ ರೇಖೆ, ಅವರೋಹಣ ರೇಖೆ ಮತ್ತು ಅಸ್ಥಿರ ರೇಖೆಗಳಾಗಿವೆ.


ಭಾರತೀಯ ನೃತ್ಯ (ನೃತ್ತ ) ಸಂಪ್ರದಾಯಗಳು ನಾಟ್ಯಶಾಸ್ತ್ರದ ಸೌಂದರ್ಯಶಾಸ್ತ್ರದಲ್ಲಿ ಬೇರುಗಳನ್ನು ಹೊಂದಿದ್ದಾರೆ. ಪಠ್ಯವು ಮೂಲಭೂತ ನೃತ್ಯ ಘಟಕವನ್ನು ಕರಣ ಎಂದು ವ್ಯಾಖ್ಯಾನಿಸುತ್ತದೆ, ಇದು ನಿರ್ದಿಷ್ಟ ದೇಹದ ಭಂಗಿ ಮತ್ತು ನಡಿಗೆಯೊಂದಿಗೆ (ಸ್ಥಾನ ಮತ್ತು ಚಾರಿ) ಸಂಯೋಜಿಸಲ್ಪಟ್ಟ ಕೈಗಳು ಮತ್ತು ಪಾದಗಳ ನಿರ್ದಿಷ್ಟ ಸಂಯೋಜನೆಯಾಗಿದೆ. ಅಧ್ಯಾಯ ೪, ೧೦೮  ಕರಣಗಳನ್ನು ನೃತ್ಯಕಲೆಯ  ಮುಖ್ಯವಾದ  ಅಂಶ ಎಂದು ವಿವರಿಸುತ್ತದೆ. ಪಠ್ಯವು ಮುಖದ ಚಲನೆಗಳೊಂದಿಗೆ, ಪ್ರಮುಖ ಮತ್ತು ಸಣ್ಣ ಅಂಗಗಳ ವಿವಿಧ ಚಲನೆಗಳನ್ನು, ಕಲ್ಪನೆಗಳನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸಾಧನವೆಂದು ಹೇಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

[೧]

[೨]

  1. https://en.wikipedia.org/wiki/Natya_Shastra
  2. http://www.bharatiyadrama.org/theatreacc.htm