ವಿಷಯಕ್ಕೆ ಹೋಗು

ಸದಸ್ಯ:2230582soumyapm/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ

[ಬದಲಾಯಿಸಿ]

ಸಾಮಾಜಿಕ ಮಾಧ್ಯಮವು ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವಾಗಿದ್ದು ಅದು ಜನರಿಗೆ ತಮ್ಮ ಆಲೋಚನೆಗಳನ್ನು, ಅಭಿಪ್ರಾಯಗಳನ್ನು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಇದನ್ನು ಕೃತಕ ನೆಟ್‌ವರ್ಕ್‌ಗಳ ಮತ್ತು ಸಮುದಾಯಗಳ ನಿರ್ಮಾಣದ ಮೂಲಕ ಮಾಡಲಾಗುತ್ತದೆ. ಜನರು ವೆಬ್ ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್ ಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಸಾಮಾಜಿಕ ಮಾಧ್ಯಮಗಳು

ಈ ಆಧುನಿಕ ಯುಗದಲ್ಲಿ ಸಾಮಾಜಿಕ ಮಾಧ್ಯಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಪರಸ್ಪರ ಸಂಪರ್ಕಿಸುವ, ವಿಷಯಗಳನ್ನು ಹಂಚಿಕೊಳ್ಳುವ ಮತ್ತು ಸಂವಹನ ಮಾಡುವ ವಿಧಾನವನ್ನೇ  ಪರಿವರ್ತಿಸುತ್ತಿದೆ. ಇಂದಿನ ಜಗತ್ತಿನಲ್ಲಿ, ಬಹುತೇಕ ಜನರು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಂತಹ ಹಲವಾರು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮಗಳು ನಾವು ಬದುಕುವ ರೀತಿಯನ್ನು ಬದಲಾಯಿಸಿವೆ. ಈ ಮಾಧ್ಯಮಗಳು ನಿಸ್ಸಂದೇಹವಾಗಿ ನಮ್ಮ ಜೀವನದಲ್ಲಿ ಅಭೂತಪೂರ್ವ ಅನುಕೂಲತೆ ತಂದಿದ್ದರೂ, ಅವು ಒಂದು ಬೆಳೆಯುತ್ತಿರುವ ಕಾಳಜಿಗೆ ಕಾರಣವಾಗಿವೆ. ಅದೇ, ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ. ಬಹುಮುಖಿ ಸ್ವರೂಪವನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವು ಅತ್ಯಂತ ಸಂಕೀರ್ಣವಾಗಿದೆ. ಈ ವೇದಿಕೆಗಳು ನಿಸ್ಸಂದೇಹವಾಗಿ ಸಾಮಾಜಿಕ ಸಂಪರ್ಕಗಳನ್ನು ಬೆಳೆಸುವುದರ ಮೂಲಕ ಹಲವಾರು ಪ್ರಯೋಜನಗಳನ್ನು ತಂದಿದ್ದರೂ, ನಮ್ಮ ಮಾನಸಿಕ ಯೋಗಕ್ಷೇಮದ ಮೇಲೆ ಇವುಗಳ ನಕಾರಾತ್ಮಕ ಪರಿಣಾಮಗಳು ಹೆಚ್ಚಾಗುತ್ತಿವೆ. []ಮಾನಸಿಕ ಆರೋಗ್ಯದ ಮೇಲೆ ಅವುಗಳ ಪ್ರಭಾವದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ಪ್ರತಿದಿನ ಶತಕೋಟಿ ಜನರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಇದು ನಾವು ಪರಸ್ಪರ ಸಂವಹನ ಮಾಡುವ ವಿಧಾನವನ್ನು ಬದಲಾಯಿಸಿದೆ. ಇತ್ತೀಚಿನ ದಿನಗಳಲ್ಲಿ, ಜನರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತಿದಿನ ಸುಮಾರು 2 ಗಂಟೆ 16 ನಿಮಿಷಗಳನ್ನು ಕಳೆಯುತ್ತಾರೆ.[] ಸಾಮಾಜಿಕ ಮಾಧ್ಯಮಗಳು ನಮಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಾಹಿತಿ  ನೀಡುವ ಮುಕ್ತ ಸಂಪನ್ಮೂಲವಾಗಿವೆ. ಆದರೆ ಈ ತಂತ್ರಜ್ಞಾನದ ಬಳಕೆಯಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.

ಸಾಮಾಜಿಕ ಮಾಧ್ಯಮದ ಧನಾತ್ಮಕ ಪರಿಣಾಮ

[ಬದಲಾಯಿಸಿ]

ಈ ಮಾಧ್ಯಮಗಳು ನಮ್ಮ ಸ್ನೇಹಿತರು ದೂರದಲ್ಲಿದ್ದರೂ ಅವರೊಂದಿಗೆ ಮಾತನಾಡಲು, ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ತಿಳಿದುಕೊಳ್ಳಲು ಸಹಾಯ ಮಾಡುವುದರ ಜೊತೆಗೆ ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಇತ್ತೀಚಿನ ಟ್ರೆಂಡ್‌ಗಳ ಕುರಿತು ಮಾಹಿತಿಗಳನ್ನು ನೀಡುತ್ತವೆ. ಸಾಮಾಜಿಕ ಮಾಧ್ಯಮವು ಜನರು ಮಾನಸಿಕ ಆರೋಗ್ಯದ ಬಗ್ಗೆ ಕಲಿಯುವ ಸ್ಥಳವಿದ್ದಂತೆ. ಜನರು ಮತ್ತು ಅನೇಕ ಸಂಸ್ಥೆಗಳು ಮಾನಸಿಕ ಆರೋಗ್ಯದ ಬಗ್ಗೆ ಇತರರಿಗೆ ತಿಳಿಸಲು ಮತ್ತು ಸಹಾಯಕವಾದ ವಿಷಯಗಳನ್ನು ಹಂಚಿಕೊಳ್ಳಲು ಈ ಮಾಧ್ಯಮಗಳನ್ನು ಬಳಸುತ್ತಾರೆ. ಜನರಿಗೆ ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಭಾವನೆಗಳ ಬಗ್ಗೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಇದು ಸಹಕಾರಿಯಾಗಿದೆ. ಇದು ಜನರಿಗೆ ಅಗತ್ಯವಿರುವಾಗ ಸಹಾಯ ಮತ್ತು ಬೆಂಬಲವನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ.[]

ಡಿಜಿಟಲ್ ಮಾಧ್ಯಮದ ಬಳಕೆಯು ಸಾಮಾಜಿಕ ಏಕೀಕರಣದ ವಿಷಯದಲ್ಲಿ ಯುವ ವ್ಯಕ್ತಿಗಳಿಗೆ ಅನುಕೂಲಕರವಾಗಿದೆ ಎಂದು  ಅಧ್ಯಯನ ಸೂಚಿಸಿದೆ. ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಿಂದ  ಸಂಪರ್ಕಗಳನ್ನು ಬೆಳೆಸಿಕೊಳ್ಳಬಹುದು. ಇದು ಅವರಲ್ಲಿ ಸಾಮಾಜಿಕ ಸೇರ್ಪಡೆಯ ಪ್ರಜ್ಞೆಯನ್ನು ಬೆಳೆಸಬಹುದು. ಮಾನಸಿಕ ಅಸ್ವಸ್ಥತೆಯಿರುವವರು ತಮ್ಮ ವೈಯಕ್ತಿಕ ಅನುಭವಗಳನ್ನು ತಮಗೆ ಸುರಕ್ಷಿತ ಎಣಿಸಿದ ವಾತಾವರಣಗಳಲ್ಲಿ ಮುಕ್ತವಾಗಿ ಹಂಚಿಕೊಂಡು ಜನರಿಂದ ಬೆಂಬಲವನ್ನು ಸಹ ಪಡೆಯಬಹುದು.[] ಮಾನಸಿಕ ಅಸ್ವಸ್ಥತೆಯಿರುವ ಜನರು ಸಾಮಾಜಿಕ ಮಾಧ್ಯಮವನ್ನು ಬಳಸುವ ಮೂಲಕ ಅವರ ಮಾನಸಿಕ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಒಳನೋಟವನ್ನು ಪಡೆಯುವ ಸಾಧ್ಯತೆಯಿದೆ. []

ಇದರೊಂದಿಗೆ, ನಿರ್ದಿಷ್ಟ ಕಾಯಿಲೆಗಳು ಅಥವಾ ಅಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಿದ ಸಮುದಾಯಗಳು, ಹಾಗೆಯೇ LGBTQಸಮುದಾಯದಂತಹ ಬೆಂಬಲವನ್ನು ನೀಡುವ ಆನ್‌ಲೈನ್ ಸಮುದಾಯಗಳಿಗೆ ಸೇರಿಕೊಳ್ಳುವುದು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ, ಆನ್‌ಲೈನ್ ಸಮುದಾಯಗಳನ್ನು ಸೇರುವುದರ ಮೂಲಕ, ತಮ್ಮ ಮಾನಸಿಕ ಒತ್ತಡಗಳನ್ನು ನಿಭಾಯಿಸುವ ಕಾರ್ಯವಿಧಾನಗಳನ್ನು ಕಲಿಯುವುದರಲ್ಲಿ ಸಹಕಾರಿಯಾಗಿದೆ.[]

ಇದಲ್ಲದೆ, ಮಕ್ಕಳಲ್ಲಿ ಡಿಜಿಟಲ್ ಮಾಧ್ಯಮವನ್ನು ಬಳಸುವದರಿಂದ  ಶೈಕ್ಷಣಿಕ ಪ್ರಯೋಜನಗಳನ್ನು ವ್ಯಾಪಕವಾಗಿ ಗುರುತಿಸಲಾಗಿದೆ.[] ಅಮೇರಿಕನ್ ಅಡಿಕ್ಷನ್ ಸೆಂಟರ್‌ಗಳ ಪ್ರಕಾರ, ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ತಮ್ಮ ಚೇತರಿಕೆಯ ಅನುಭವಗಳನ್ನು ಹಂಚಿಕೊಳ್ಳಲು, ಸಾಧನೆಗಳನ್ನು ಸ್ಮರಿಸಲು ಮತ್ತು ಇತರರಿಗೆ ಬೆಂಬಲವನ್ನು ನೀಡಲು ಹೆಚ್ಚುವರಿಯಾಗಿ ಸಹಾಯ ಮಾಡಬಹುದು. ವ್ಯಕ್ತಿಗಳು ಚೇತರಿಕೆಯತ್ತ ಸಾಗುತ್ತಿರುವಾಗ, ಈ ಉಪಕರಣಗಳು ಮೌಲ್ಯಯುತವೆಂದು ಸಾಬೀತುಪಡಿಸಲಾಗಿದೆ.[]

ಡಿಸ್ಪ್ಲೇಸ್ಡ್ ಬಿಹೇವಿಯರ್ ಥಿಯರಿಯು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಏಕೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳುತ್ತದೆ. ಇದರ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವಾಗ, ಇತರ ಜನರೊಂದಿಗೆ ನಿಜ ಜೀವನದಲ್ಲಿ ಸಂವಹನ ನಡೆಸಲು ಮತ್ತು ಬೆರೆಯಲು ಅವರಿಗೆ ಹೆಚ್ಚು ಸಮಯ ಇರುವುದಿಲ್ಲ, ಇದು ಅವರ ಮಾನಸಿಕ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. []

ಸಾಮಾಜಿಕ ಮಾಧ್ಯಮದ ಋಣಾತ್ಮಕ ಪರಿಣಾಮ 

[ಬದಲಾಯಿಸಿ]

2019 ರಲ್ಲಿ ನಡೆಸಿದ ವಿಮರ್ಶೆಗಳ ಅಧ್ಯಯನ ಇಂಟರ್ನೆಟ್ ಬಳಕೆ ಮತ್ತು ಖಿನ್ನತೆ, ಆತಂಕ ಮತ್ತು ಎಡಿಎಚ್‌ಡಿ ಅಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ನಡುವಿನ ಸಂಭವನೀಯ ಸಂಪರ್ಕಗಳನ್ನು ಕಂಡುಹಿಡಿದಿದೆ.[೧೦]  ಡಿಜಿಟಲ್ ಮಾಧ್ಯಮದ ಅತಿಯಾದ ಬಳಕೆಯು ಖಿನ್ನತೆಯ ರೋಗಲಕ್ಷಣಗಳೊಂದಿಗೆ ಸಂಬಂಧ ಹೊಂದಿದ್ದರೂ, ಡಿಜಿಟಲ್ ಮಾಧ್ಯಮವು ಮನಸ್ಥಿತಿಯನ್ನು ಸುಧಾರಿಸುತ್ತವೆ ಎಂಬುದು ಕೆಲವರ ಅಭಿಪ್ರಾಯ.[೧೧][೧೨] ಹೆಚ್ಚುವರಿಯಾಗಿ, ಒಂದು ದೊಡ್ಡ ನಿರೀಕ್ಷಿತ ಅಧ್ಯಯನವು ಎಡಿಎಚ್‌ಡಿ ರೋಗಲಕ್ಷಣಗಳು ಮತ್ತು ಡಿಜಿಟಲ್ ಮಾಧ್ಯಮ ಬಳಕೆಯ ನಡುವೆ ಧನಾತ್ಮಕ ಸಂಪರ್ಕವನ್ನು ಕಂಡುಹಿಡಿದಿದೆ.[೧೩]

ಚಾಸಿಯಾಕೋಸ್, ರಾಡೆಸ್ಕಿ ಮತ್ತು ಕ್ರಿಸ್ಟಾಕಿಸ್ ಅವರು 2016 ರಲ್ಲಿ ನಡೆಸಿದ ತಾಂತ್ರಿಕ ವರದಿಯು ಡಿಜಿಟಲ್ ಮಾಧ್ಯಮದ ಬಳಕೆಗೆ ಸಂಬಂಧಿಸಿದಂತೆ ಹದಿಹರೆಯದವರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನುಕೂಲಗಳು ಮತ್ತು ಕಾಳಜಿಗಳನ್ನು ಗುರುತಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವ ಸಮಯಕ್ಕಿಂತಲೂ ಅದನ್ನು ಬಳಸುವ ವಿಧಾನವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಈ ಅಧ್ಯಯನವು ತೋರಿಸಿದೆ. ಸಾಮಾಜಿಕ ಮಾಧ್ಯಮವನ್ನು ನಿಷ್ಕ್ರಿಯವಾಗಿ ಬಳಸುವ ಹದಿಹರೆಯದವರಲ್ಲಿ ಯೋಗಕ್ಷೇಮ ಮತ್ತು ಜೀವನ-ತೃಪ್ತಿಯಲ್ಲಿ ಕುಸಿತ ಕಂಡುಬಂದಿದೆ, ಆದರೆ ಹೆಚ್ಚು ಸಕ್ರಿಯವಾಗಿ ಬಳಸುವವರಲ್ಲಿ ಇದನ್ನು ಗಮನಿಸಲಾಗಿಲ್ಲ.[೧೪]

ಖಿನ್ನತೆ

[ಬದಲಾಯಿಸಿ]

2019 ರಲ್ಲಿ ಪ್ರಕಟವಾದ ವಿಮರ್ಶೆಗಳ ಮೇಲೆ ನಡೆಸಿದ ಅಧ್ಯಯನ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವ ಸಮಯ ಮತ್ತು "ಅಡಿಪೋಸಿಟಿ, ಖಿನ್ನತೆಯ ಲಕ್ಷಣಗಳು ಮತ್ತು ಕಡಿಮೆ ಜೀವನದ ಗುಣಮಟ್ಟ" ದಂತಹ ವಿವಿಧ ಆರೋಗ್ಯ ಸಮಸ್ಯೆಗಳ ನಡುವೆ ಸಂಪರ್ಕವಿದೆ ಎಂದು ಕಂಡುಹಿಡಿದಿದೆ.[೧೫] ಸಾಮಾಜಿಕ ಮಾಧ್ಯಮವನ್ನು, ವಿಶೇಷವಾಗಿ ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಅತಿಯಾಗಿ ಬಳಸುವುದರಿಂದ ಜನರು ಖಿನ್ನತೆ, ಆತಂಕ ಮತ್ತು ಒತ್ತಡವನ್ನು ಅನುಭವಿಸಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಈ ಮಾಧ್ಯಮಗಳು ಇತರರಂತೆ ಜನಪ್ರಿಯವಾಗಲು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕು ಅಥವಾ ತೋರಬೇಕು ಎಂದು ಜನರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು.

2019 ರಲ್ಲಿ US ನಲ್ಲಿ ನಡೆಸಿದ ಅಧ್ಯಯನವು ಹದಿಹರೆಯದವರಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಖಿನ್ನತೆಯ ನಡುವಿನ ಪರಸ್ಪರ ಸಂಬಂಧವನ್ನು ಕಂಡುಹಿಡಿದಿದೆ. ಈ ಸಂಪರ್ಕವು ಸಾಮಾಜಿಕ ಹೋಲಿಕೆಯ ವಿದ್ಯಮಾನಕ್ಕೆ ಕಾರಣವಾಗಿದೆ. ಅಲ್ಲಿ ಆದರ್ಶೀಕರಿಸಿದ ಚಿತ್ರಗಳಿಗೆ ಪುನರಾವರ್ತಿತ ಒಡ್ಡುವಿಕೆಯು ಹದಿಹರೆಯದವರಲ್ಲಿ ಸ್ವಾಭಿಮಾನದಲ್ಲಿ ಇಳಿಕೆ ಮತ್ತು ಅಂತಿಮವಾಗಿ ಖಿನ್ನತೆಯನ್ನು ಪ್ರಚೋದಿಸುತ್ತದೆ ಎಂದು ಕಂಡುಹಿಡಿಯಲಾಗಿದೆ.[೧೬] ಅಂತೆಯೇ, 2022 ರಲ್ಲಿ ನಡೆಸಿದ ಮೆಟಾ-ಅಧ್ಯಯನವು ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಖಿನ್ನತೆಯ ನಡುವಿನ ಮಹತ್ವದ ಸಂಬಂಧವನ್ನು ಕಂಡುಹಿಡಿದಿದೆ, ವಿಶೇಷವಾಗಿ ಹದಿಹರೆಯದ ಹುಡುಗಿಯರಲ್ಲಿ.[೧೭]

ತಪ್ಪಿಹೋಗುವ ಭಯ

[ಬದಲಾಯಿಸಿ]

ತಪ್ಪಿಹೋಗುವ ಭಯವು (FOMO) ಒಬ್ಬರ ಜೀವನವನ್ನು ಉತ್ತಮಗೊಳಿಸುವ ಮಾಹಿತಿ, ಘಟನೆಗಳು, ಅನುಭವಗಳನ್ನು ಕಳೆದುಕೊಳ್ಳುವ ಆತಂಕದ ಭಾವನೆಯಾಗಿದೆ.  ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದ ತಪ್ಪಿಹೋಗುವ ಭಯವುವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ಸೂಚಿಸುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಹೊಂದಿರುವ ಖಾತೆಗಳ ಸಂಖ್ಯೆ ಮತ್ತು ಅವರ ಆತಂಕ ಮತ್ತು ಖಿನ್ನತೆಯ ಮಟ್ಟಗಳ ನಡುವೆ ಸ್ಪಷ್ಟವಾದ ಸಂಬಂಧವಿದೆ.[೧೮]

ಅನೋರೆಕ್ಸಿಯಾ ನರ್ವೋಸಾ

[ಬದಲಾಯಿಸಿ]

ಸಾಮಾಜಿಕ ಮಾಧ್ಯಮವು ಹಾನಿಯನ್ನುಂಟುಮಾಡಬಹುದು , ವಿಶೇಷವಾಗಿ ತಮ್ಮ ಸ್ವಂತ ದೇಹದ ಚಿತ್ರಣವನ್ನು ಇನ್ನೂ ತಿಳಿಯದ ಯುವಜನರಿಗೆ. "ದಿ ಪ್ಯಾರಡಾಕ್ಸ್ ಆಫ್ ಟಿಕ್ ಟೋಕ್ ಆಂಟಿ-ಪ್ರೊ-ಅನೋರೆಕ್ಸಿಯಾ ವೀಡಿಯೊಗಳು: ಸೋಶಿಯಲ್ ಮೀಡಿಯಾ ಸ್ವಯಂ-ಗಾಯ ಮತ್ತು ಅನೋರೆಕ್ಸಿಯಾವನ್ನು ಹೇಗೆ ಉತ್ತೇಜಿಸುತ್ತದೆ" ಎಂಬ ಶೀರ್ಷಿಕೆಯ ಲೇಖನದಲ್ಲಿ, ಲೇಖಕರು ಪ್ರಸ್ತುತ ಪೀಳಿಗೆಯ ಮೇಲೆ ಟಿಕ್‌ಟಾಕ್ ಬೀರುತ್ತಿರುವ ಪ್ರಭಾವವನ್ನು ಚರ್ಚಿಸಿದ್ದಾರೆ. ದೊಡ್ಡ ದೇಹ ಪ್ರಕಾರಗಳನ್ನು ಒಳಗೊಂಡಿರುವ ವೀಡಿಯೊಗಳಿಗೆ ಹೋಲಿಸಿದರೆ ತೆಳ್ಳಗಿನ ದೇಹಗಳನ್ನು ಪ್ರದರ್ಶಿಸುವ ವೀಡಿಯೊಗಳು ಹೆಚ್ಚು ಗಮನ, ಲೈಕ್ಸ್ ಮತ್ತು ಸಂವಹನವನ್ನು ಪಡೆಯುತ್ತವೆ ಎಂದು ಹೇಳಲಾಗಿದೆ.[೧೯]

ಎಡಿಎಚ್‌ಡಿ

[ಬದಲಾಯಿಸಿ]

ಸಂಶೋಧಕರಾದ ಸಿದ್ಧಾರ್ಥ್ ಸಾಗರ್, ಡಾ. ನವೀನ್ ಕುಮಾರ್ ರವರು ಸೈಕಾಲಜಿ ಮತ್ತು ಎಜುಕೇಶನ್ ವಾಲ್ಯೂಮ್.58 ಸಂ.4 (2021) ನಲ್ಲಿ ಸಾಮಾಜಿಕ ಮಾಧ್ಯಮದ ಬಳಕೆಗಳು ಮತ್ತು ಚಂಚಲತೆ ಮತ್ತು ಅತಿ ಚಟುವಟಿಕೆಯ ಖಾಯಿಲೆ (ಎಡಿಎಚ್‌ಡಿ) ಲಕ್ಷಣಗಳು : ಎ ಕ್ರಾಸ್-ಸೆಕ್ಷನಲ್ ಸ್ಟಡಿ ಎಂಬ ಅಧ್ಯಯನವನ್ನು ಪ್ರಕಟಿಸಿದ್ದಾರೆ. ಅಧ್ಯಯನವು ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಎಡಿಎಚ್‌ಡಿ ನಡುವಿನ ಸಂಬಂಧವನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವ ಗುರಿಯನ್ನು ಹೊಂದಿತ್ತು. ಎಡಿಎಚ್‌ಡಿ ಸಾಮಾಜಿಕ ಮಾಧ್ಯಮದ ವ್ಯಸನಕಾರಿ ಅಥವಾ ಅತಿಯಾದ ಬಳಕೆಗೆ ಗಮನಾರ್ಹವಾಗಿ ಸಂಬಂಧಿಸಿದೆ ಮತ್ತು ವ್ಯಸನಕಾರಿ ಸಾಮಾಜಿಕ ಮಾಧ್ಯಮ ಬಳಕೆಯು ಮಹಿಳೆಯರು, ಯುವಕರು ಮತ್ತು ಕಾಲೇಜು ವಯಸ್ಸಿನ ಹುಡುಗರಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸುವ ಜನರಲ್ಲಿ ಎಡಿಎಚ್‌ಡಿ ಹೆಚ್ಚು ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳು, ಬೇಸರಗೊಂಡಾಗ ಒಂದು ಚಟುವಟಿಕೆಯಿಂದ ಇನ್ನೊಂದಕ್ಕೆ ಸ್ಥಳಾಂತರಗೊಳ್ಳಲು ಸೂಕ್ತವಾದ ಸ್ಥಳ ಆಗಿರುವುದು ಇದಕ್ಕೆ ಕಾರಣ ಎಂದು ಲೇಖಕರು ಸೂಚಿಸಿದ್ದಾರೆ. ಇವು ಸಾಮಾನ್ಯ ಎಡಿಎಚ್‌ಡಿ ನಡವಳಿಕೆಗಳು (ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್, 2013).[೨೦]

ಸೈಬರ್‌ಬುಲ್ಲಿಂಗ್

[ಬದಲಾಯಿಸಿ]

ಸೈಬರ್‌ಬುಲ್ಲಿಂಗ್ ಎನ್ನುವುದು ಎಲೆಕ್ಟ್ರಾನಿಕ್ ವಿಧಾನಗಳನ್ನು ಬಳಸಿಕೊಂಡು ಬೆದರಿಸುವ ಅಥವಾ ಕಿರುಕುಳದ ಒಂದು ರೂಪವಾಗಿದೆ. ಸೈಬರ್‌ಬುಲ್ಲಿಂಗ್ ಅಥವಾ ಕಿರುಕುಳಕ್ಕಾಗಿ ಸಾಮಾಜಿಕ ಮಾಧ್ಯಮ ಅಥವಾ ಇತರ ಎಲೆಕ್ಟ್ರಾನಿಕ್ ವಿಧಾನಗಳ ಬಳಕೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಲಾಗಿದೆ. ಇದಕ್ಕೆ  ಗುರಿಯಾಗಿರುವವರು ಕಡಿಮೆ ಸ್ವಾಭಿಮಾನ, ಆತ್ಮಹತ್ಯೆಯ ಆಲೋಚನೆಗಳು, ನಿಯಮಿತ ಚಟುವಟಿಕೆಗಳಲ್ಲಿ ಕಡಿಮೆ ಆಸಕ್ತಿ ಮತ್ತು ಭಯ, ಹತಾಶೆ, ಕೋಪ, ಆತಂಕ ಅಥವಾ ಖಿನ್ನತೆಯಂತಹ ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸಬಹುದು. ಪರಿಣಾಮವಾಗಿ, ಈ ವ್ಯಕ್ತಿಗಳು ಸ್ನೇಹಿತರು ಮತ್ತು ಕುಟುಂಬದಿಂದ ದೂರವಿರಲು ಪ್ರಾರಂಭಿಸಬಹುದು.[೨೧]

ನಿದ್ರಾಹೀನತೆ

[ಬದಲಾಯಿಸಿ]
ನಿದ್ರಾಹೀನತೆ

ಹಲವಾರು ಅಧ್ಯಯನಗಳು ಮಲಗುವ ಮುನ್ನ ಮೊಬೈಲನ್ನು  ಬಳಸುವುದು ಹೇಗೆ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ  ಎಂಬುದನ್ನು ತೋರಿಸಿವೆ.[೨೨] ಮಲಗುವ ಮುನ್ನ ಮೊಬೈಲ್ ಬಳಸುವುದರಿಂದ ನಿದ್ದೆಯ ಗುಣಮಟ್ಟ ಕ್ಷೀಣಿಸುತ್ತದೆ ಹಾಗು ಹಗಲಿನಲ್ಲಿ ಆಯಾಸವಾಗುತ್ತದೆ ಎಂದು ಹೇಳಲಾಗಿದೆ. ಗಮನಾರ್ಹವಾಗಿ, 36 ಪ್ರತಿಶತ ಹದಿಹರೆಯದವರು ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಿಸಲು ರಾತ್ರಿಯ ಅವಧಿಯಲ್ಲಿ ಒಮ್ಮೆಯಾದರೂ ಎಚ್ಚರಗೊಳ್ಳುತ್ತಾರೆ ಎಂದು ಹೇಳಿದ್ದಾರೆ ಮತ್ತು 40 ಪ್ರತಿಶತ ಹದಿಹರೆಯದವರು ಮಲಗಲು ಹೋದ ಐದು ನಿಮಿಷಗಳಲ್ಲಿ ಮೊಬೈಲನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.[೨೩] ಹೀಗೆ ಸಾಮಾಜಿಕ ಮಾಧ್ಯಮಗಳು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಾ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಗೆ ಅಪಾಯಕಾರಿ ಅಂಶವಾಗಿ ಮುಂದುವರಿಯುತ್ತಿವೆ.

ಉಲ್ಲೇಖಗಳು   

[ಬದಲಾಯಿಸಿ]
  1. https://www.ncbi.nlm.nih.gov/pmc/articles/PMC9915628/
  2. https://www.statista.com/statistics/433871/daily-social-media-usage-worldwide/
  3. https://pubmed.ncbi.nlm.nih.gov/23615206/
  4. https://doi.org/10.1542%2Fpeds.2016-2593
  5. https://dx.doi.org/10.11622/smedj.2017006?utm_medium=email&utm_source=transaction
  6. https://www.thelancet.com/journals/lanonc/article/PIIS1470-2045(19)30346-8/abstract
  7. https://doi.org/10.1542%2Fpeds.2016-2593
  8. https://americanaddictioncenters.org/blog/tiktok-and-recovery
  9. https://www.cureus.com/articles/176889-the-impact-of-social-media-on-the-mental-health-of-adolescents-and-young-adults-a-systematic-review#!/
  10. https://eppi.ioe.ac.uk/cms/Default.aspx?tabid=3748
  11. https://publications.aap.org/pediatrics/article/140/Supplement_2/S76/34184/Digital-Media-Anxiety-and-Depression-in-Children?autologincheck=redirected
  12. https://www.sciencedirect.com/science/article/abs/pii/S0165032716303196?via%3Dihub
  13. https://www.uptodate.com/contents/attention-deficit-hyperactivity-disorder-in-children-and-adolescents-clinical-features-and-diagnosis
  14. https://publications.aap.org/pediatrics/article/138/5/e20162593/60349/Children-and-Adolescents-and-Digital-Media
  15. https://www.ncbi.nlm.nih.gov/pmc/articles/PMC6326346
  16. https://www.ncbi.nlm.nih.gov/pmc/articles/PMC6632122
  17. https://www.ncbi.nlm.nih.gov/pmc/articles/PMC9103874/
  18. https://doi.org/10.1016%2Fj.adolescence.2017.08.005
  19. https://www.ncbi.nlm.nih.gov/pmc/articles/PMC7908222
  20. http://psychologyandeducation.net/pae/index.php/pae/article/view/4736
  21. https://doi.org/10.1080%2F01639620701457816
  22. https://dx.doi.org/10.4103/jfmpc.jfmpc_269_19?utm_medium=email&utm_source=transaction
  23. https://dx.doi.org/10.1001/jamapediatrics.2016.2341?utm_medium=email&utm_source=transaction

ಕರ್ನಾಟಕದ ಸಿದ್ಧಿಗಳು

[ಬದಲಾಯಿಸಿ]

ಕರ್ನಾಟಕದ ಸಿದ್ದಿಗಳು ಭಾರತದಲ್ಲಿ ವಾಸಿಸುವ ಒಂದು ಜನಾಂಗೀಯ ಗುಂಪು. ಇವರು  ಆಗ್ನೇಯ ಆಫ್ರಿಕಾದ ಬಂಟು ಜನರ ವಂಶಸ್ಥರು. ಅವರನ್ನು ಪೋರ್ಚುಗೀಸ್ ವ್ಯಾಪಾರಿಗಳು ಮತ್ತು ಅರಬ್ ವ್ಯಾಪಾರಿಗಳು ಗುಲಾಮರಾಗಿ ಭಾರತಕ್ಕೆ ಕರೆತಂದರು. ಭಾರತದಾದ್ಯಂತ 50,000 ಸಿದ್ದಿ ಜನಸಂಖ್ಯೆ ಇದೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ[2 ೧]. ಕರ್ನಾಟಕದಲ್ಲಿ, ಅವರು ಉತ್ತರ ಕನ್ನಡದ ಯಲ್ಲಾಪುರ, ಹಳಿಯಾಳ, ಅಂಕೋಲಾ, ಜೋಯಿಡಾ, ಮುಂಡಗೋಡ ಮತ್ತು ಶಿರಸಿ ತಾಲ್ಲೂಕುಗಳ ಸುತ್ತಲೂ ಮತ್ತು ಬೆಳಗಾವಿಯ ಖಾನಾಪುರ ಮತ್ತು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕೇಂದ್ರೀಕೃತರಾಗಿದ್ದಾರೆ.  ಸ್ವಾತಂತ್ರ್ಯದ ನಂತರ ಈ ಸಮುದಾಯದ ಅನೇಕ ಸದಸ್ಯರು ಪಾಕಿಸ್ತಾನಕ್ಕೆ ವಲಸೆ ಹೋಗಿ ಕರಾಚಿ ಮತ್ತು ಸಿಂಧ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ, MTV ಸೌಂಡ್ ಟ್ರಿಪ್ಪಿನ್‌ಗಾಗಿ ಸ್ನೇಹಾ ಖಾನ್ವಾಲ್ಕರ್ ಅವರ ಹಾಡು  'ಯೇರೆ' ಮೂಲಕ ಅವರು ಬೆಳಕಿಗೆ ಬಂದಿದ್ದಾರೆ.

ವ್ಯುತ್ಪತ್ತಿ

[ಬದಲಾಯಿಸಿ]

ಸಿದ್ದಿ ಎಂಬ ಹೆಸರಿನ ಮೂಲದ ಬಗ್ಗೆ ವಿವಿಧ ಸಿದ್ಧಾಂತಗಳಿವೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಸಾಹಿಬ್ ಪದದಂತೆಯೇ ಉತ್ತರ ಆಫ್ರಿಕಾದಲ್ಲಿ ಸಿದ್ಧಿ ಎಂಬ  ಪದವು ಗೌರವವನ್ನು ಸೂಚಿಸುವ ಪದವಾಗಿತ್ತು ಎಂಬುದು ಒಂದು ಸಿದ್ಧಾಂತವಾಗಿದೆ. ಇನ್ನೊಂದು ಸಿದ್ಧಾಂತದ ಪ್ರಕಾರ ಸಿದ್ದಿ ಎಂಬ ಪದವು ಮೊದಲು ಸಿದ್ದಿಗಳನ್ನು ಭಾರತಕ್ಕೆ ಕರೆತಂದ ಅರಬ್ ಹಡಗುಗಳ ನಾಯಕರು ಅವರಿಗೆ ಕೊಟ್ಟ ಹೆಸರು ಎಂದು ಹೇಳಲಾಗಿದೆ. ಈ ನಾಯಕರನ್ನು ಸಯ್ಯದ್ ಎಂದು ಕರೆಯಲಾಗುತ್ತಿತ್ತು[2 ೨].

ಅಂತೆಯೇ, ಸಿದ್ದಿಗಳಿಗೆ ಮತ್ತೊಂದು ಪದ, ಹಬ್ಶಿ (ಅಲ್-ಹಬ್ಶ್ ನಿಂದ, ಅಬಿಸ್ಸಿನಿಯಾದ ಅರೇಬಿಕ್ ಪದ)ಈ ಪದವು ಮೊದಮೊದಲಿಗೆ ಇಥಿಯೋಪಿಯನ್/ಅಬಿಸ್ಸಿನಿಯನ್ ಹಡಗುಗಳಲ್ಲಿ  ಸಿದ್ದಿ ಗುಲಾಮರನ್ನು ಭಾರತಕ್ಕೆ ತಲುಪಿಸುತಿದ್ದ ನಾಯಕರಿಗೆ ನೀಡಲಾಗಿದ್ದ ಹೆಸರು ಎಂದು ಹೇಳಲಾಗಿದೆ[2 ೩]. ಈ ಪದವು ಅಂತಿಮವಾಗಿ ಇತರ ಆಫ್ರಿಕನ್ನರಿಗೆ ಅನ್ವಯಿಸಿತು. ಕಾಲಾನಂತರದಲ್ಲಿ, ಇದು ಅವರ ವಂಶಸ್ಥರನ್ನೂ ಉಲ್ಲೇಖಿಸಲು ಬಳಸಲ್ಪಟ್ಟಿತು. ಇದನ್ನು ಕೆಲವೊಮ್ಮೆ "ಹಫ್ಸಿ" ಎಂದು ಉಚ್ಚರಿಸಲಾಗುತ್ತದೆ ಮತ್ತು ಇದನ್ನು ಅವಮಾನವೆಂದು ಪರಿಗಣಿಸಲಾಗುತ್ತದೆ.[2 ೪]

ಇತಿಹಾಸ

[ಬದಲಾಯಿಸಿ]

ಕೆಲವು ಸಿದ್ದಿಗಳು ಪೋರ್ಚುಗೀಸ್ ಗುಲಾಮ ವ್ಯಾಪಾರದ ಬಲಿಪಶುಗಳಾಗಿದ್ದರೆ, ಇನ್ನು ಕೆಲವರನ್ನು 15-16 ನೇ ಶತಮಾನಗಳಲ್ಲಿ ಸುಲ್ತಾನರು ಮಿಲಿಟರಿ ಕೂಲಿಗಳಾಗಿ ಆಮದು ಮಾಡಿಕೊಂಡರು. ಇತರರು ಪೂರ್ವದ ವ್ಯಾಪಾರ ಮಾರ್ಗಗಳಲ್ಲಿ ನಾವಿಕರಾಗಿದ್ದರು. 2013 ರಲ್ಲಿ, ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿಯು ಹಿಂದಿನ ಪ್ರಮುಖ ಸಿದ್ದಿಗಳ ಜೀವನ ಮತ್ತು ಸಾಧನೆಗಳನ್ನು ಕುರಿತು, "ಆಫ್ರಿಕನ್ಸ್ ಇನ್ ಇಂಡಿಯಾ: ಫ್ರಮ್ ಸ್ಲೇವ್ಸ್ ಟು ಜನರಲ್ಸ್ ಅಂಡ್ ರೂಲರ್ಸ್" ಎಂಬ ಶೀರ್ಷಿಕೆಯ ಕಲಾತ್ಮಕ ಪ್ರದರ್ಶನವನ್ನು ನಡೆಸಿತು. ಇದು ವರ್ಣಚಿತ್ರಗಳು ಮತ್ತು ಆಧುನಿಕ ಛಾಯಾಚಿತ್ರಗಳ ನೂರು ಪುನರುತ್ಪಾದನೆಗಳನ್ನು ಒಳಗೊಂಡಿತ್ತು.[2 ೫]

ಕರ್ನಾಟಕದ ಬಹುತೇಕ ಸಿದ್ದಿಗಳು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಗಮನಾರ್ಹ ಸಂಖ್ಯೆಯಿದೆ.[2 ೬] ಹಳಿಯಾಳ ತಾಲೂಕಿನಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜನಸಂಖ್ಯೆ ಇದ್ದು, ಹಿಂದೂ ಜನಸಂಖ್ಯೆಯು ಯಲ್ಲಾಪುರ ಮತ್ತು ಅಂಕೋಲಾದ ಘಟ್ಟ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ.[2 ೩] ಸಿದ್ಧಿಗಳು ವಿವಿಧ ಧರ್ಮಗಳನ್ನು ಆಯ್ಕೆ ಮಾಡಿಕೊಂಡರೂ ಅವರು ಯಾವುದೇ ಮೀಸಲಾತಿಯಿಲ್ಲದೆ ಧರ್ಮಗಳಾದ್ಯಂತ ಅಂತರ್ಜಾತಿ ವಿವಾಹವಾಗುತ್ತಾರೆ.[2 ೭]

ಹಿರಿಯರ ಆರಾಧನೆ

[ಬದಲಾಯಿಸಿ]

ಸಿದ್ಧಿಯರನ್ನು ಬಂಧಿಸುವ ಒಂದು ಅಂಶವೆಂದರೆ, ಅವರ ಹಿರಿಯರು ಅಥವಾ ಪೂರ್ವಜರ ಆರಾಧನೆಯಾಗಿದೆ. ಸತ್ತವರು ಆತ್ಮಗಳ ರೂಪದಲ್ಲಿ ಹತ್ತಿರದಲ್ಲಿದ್ದಾರೆ ಎಂದು ಅವರು ನಂಬುತ್ತಾರೆ. ಕುಟುಂಬಗಳು ತಮ್ಮ ಎಲ್ಲಾ ವಿಚಾರಗಲ್ಲು ಸಮಾಲೋಚಿಸಲು ಅವರನ್ನು ಸಾಕ್ಷಿಗಳಾಗಿ ಪರಿಗಣಿಸುತ್ತಾರೆ. ಜನನ, ಮದುವೆ ಮತ್ತು ಮರಣದಂತಹ ಸಂದರ್ಭಗಳಲ್ಲಿ, ಪೂರ್ವಜರನ್ನು ಆಹ್ವಾನಿಸಲಾಗುತ್ತದೆ. ಅಗಲಿದ ತಂದೆ-ತಾಯಿಯರ ಆತ್ಮಕ್ಕೆ ಸುತ್ತಮುತ್ತ ಮನೆಯನ್ನು ಆಯೋಜಿಸಲಾಗುತ್ತದೆ. ಇದು ಪೋಷಕರ ಸ್ಮರಣಾರ್ಥವನ್ನು ಸೂಚಿಸುತ್ತದೆ ಜೊತೆಗೆ ಹಲವಾರು ವರ್ಷಗಳಿಂದ ಅವರ ಕಾಳಜಿಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುವ  ಮಾರ್ಗವಾಗಿದೆ. ಎಲ್ಲಾ ಸಂಬಂಧಿಕರು ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ, ಹೀಗೆ ಬಂಧುತ್ವ ಸಂಬಂಧಗಳನ್ನು ನವೀಕರಿಸಲಾಗುತ್ತದೆ. ಹಿರಿಯರ ಪೂಜೆಯನ್ನು ಕುಟುಂಬದ 'ಕರ್ತ' (ಮುಖ್ಯಸ್ಥ) ವರ್ಷಕ್ಕೆ ಎರಡು ಬಾರಿ ಮಾಡಬಹುದು. ಇದು ಸಾಮಾನ್ಯವಾಗಿ ನವೆಂಬರ್ ಮೊದಲ ವಾರದಲ್ಲಿ ನವರಾತ್ರಿ ಹಬ್ಬದ ಸಮಯದಲ್ಲಿ ನಡೆಯುತ್ತದೆ. ಕೆಲವು ಕಾರಣಗಳಿಂದ ಇದು ಸಾಧ್ಯವಾಗದಿದ್ದರೆ, ಇದನ್ನು ಏಪ್ರಿಲ್-ಮೇ ತಿಂಗಳಲ್ಲಿ ಇತರ ಪ್ರಮುಖ ಹಬ್ಬವಾದ ಹೋಳಿ ಸಮಯದಲ್ಲಿ ಮಾಡಬಹುದು. ಇವುಗಳು ನಿಸ್ಸಂಶಯವಾಗಿ ಪೋಷಕರ ಮರಣದ ದಿನಾಂಕಗಳೊಂದಿಗೆ ಹೊಂದಿಕೆಯಾಗುವುದಿಲ್ಲ, ಏಕೆಂದರೆ ಸಿದ್ದಿಗಳು ಮೊದಲ ಮರಣ ವಾರ್ಷಿಕೋತ್ಸವವನ್ನು ಮಾತ್ರ ಆಚರಿಸುತ್ತಾರೆ.[2 ೩]

ಸಿದ್ದಿಗಳು ಮುಖ್ಯವಾಗಿ ಇಂಡೋ-ಆರ್ಯನ್ ಕುಟುಂಬಕ್ಕೆ ಸೇರಿದ ಗೋವಾದ ಸ್ಥಳೀಯ ಭಾಷೆಯಾದ ಕೊಂಕಣಿಯನ್ನು ಮಾತನಾಡುತ್ತಾರೆ. ಕೆಲವರು ಕನ್ನಡ ಮತ್ತು ಮರಾಠಿ ಮುಂತಾದ ಇತರ ಭಾಷೆಗಳನ್ನು ಮಾತನಾಡುತ್ತಾರೆ.[2 ೮]

ಉದ್ಯೋಗ

[ಬದಲಾಯಿಸಿ]

ಇಂದು ಬಹುತೇಕ ಎಲ್ಲಾ ಸಿದ್ದಿಗಳು ಕೃಷಿ ಮತ್ತು ಕೆಲವು ಸಂದರ್ಭಗಳಲ್ಲಿ ಗುತ್ತಿಗೆ ಅಥವಾ  ಬಂಧಿತ ಸಾಂದರ್ಭಿಕ ಕಾರ್ಮಿಕರು.[2 ೯] ಕೆಲವರು ಮನೆಯ ಸಹಾಯಕರಾಗಿಯೂ ಕೆಲಸ ಮಾಡುತ್ತಾರೆ. ಗೋವಾದಿಂದ ಓಡಿಹೋಗಿ ಉತ್ತರ ಕೆನರಾದ ಕರ್ನಾಟಕ ಕಾಡುಗಳನ್ನು ಪ್ರವೇಶಿಸಿದ ಆರಂಭಿಕ ಸಿದ್ಧಿ ಪಾಳೆಗಾರರು ಕಾಡುಗಳನ್ನೇ ತಮ್ಮ ಮನೆಯಾಗಿ ಮಾಡಿಕೊಂಡು ಕೃಷಿಯನ್ನು ಪ್ರಾರಂಭಿಸಿದರು. ಈ ಪ್ರದೇಶಗಳಲ್ಲಿನ ಕೆಲವು ಹಳ್ಳಿಗಳಲ್ಲಿ, ಇವರನ್ನೇ ಆರಂಭಿಕ ವಸಾಹತುಗಾರರೆಂದು ಗುರುತಿಸಲಾಗಿದೆ.

ಕರ್ನಾಟಕದ ಸಿದ್ದಿಗಳು ಇತ್ತೀಚಿನ ವರ್ಷಗಳಲ್ಲಿ ಕವಂಡಿ ಎಂಬ, ತಮ್ಮ ವಿಶಿಷ್ಟ ಗಾದಿಗಳನ್ನು ತಯಾರಿಸುವುದು  ಶೈಲಿಗೆ ಹೆಸರುವಾಸಿಯಾಗಿದ್ದಾರೆ.  ಗಾದಿಗಳನ್ನು ತಯಾರಿಸುವ ಸಂಕೀರ್ಣವಾದ ಪ್ರಕ್ರಿಯೆ ಇವರನ್ನು ಇತರ ಗುಂಪುಗಳಿಂದ ಭಿನ್ನವಾಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮರುಬಳಕೆ ಮಾಡಲಾಗಿರುವ ಬಟ್ಟೆಗಳನ್ನು ತೆಗೆದುಕೊಂಡು ಅವುಗಳನ್ನು ಜ್ಯಾಮಿತೀಯ ಮಾದರಿಗಳಲ್ಲಿ ಜೋಡಿಸುತ್ತಾರೆ, ಕೆಲವೊಮ್ಮೆ ಧಾರ್ಮಿಕ ಚಿಹ್ನೆಗಳ ಮಾದರಿಯಲ್ಲೂ ಜೋಡಿಸುತ್ತಾರೆ. ಸಾಮಾನ್ಯವಾಗಿ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗದ ವಯಸ್ಸಾದ ಮಹಿಳೆಯರು ಈ ಪ್ರಕ್ರಿಯಿಯ ಮೂಲಕ ಕುಟುಂಬದ ಸದಸ್ಯರಿಗೆ ಗಾದಿಗಳನ್ನು ತಯಾರಿಸುತ್ತಾರೆ.ಈ ಗಾದಿಗಳನ್ನು  ಹಾಸಿಗೆಗಳಾಗಿ , ಕೊಟ್ಟಿಗೆ ಕವರ್‌ಗಳಾಗಿ  ಅಥವಾ ತಂಪಾದ ಮಾನ್ಸೂನ್ ರಾತ್ರಿಗಳಲ್ಲಿ ಹೊದಿಕೆಗಳಾಗಿ  ಬಳಸಲಾಗುತ್ತದೆ. "ಸಿದ್ದೀಸ್ ವುಮೆನ್ ಕ್ವಿಲ್ಟಿಂಗ್ ಸಹಕಾರಿ" (SWQC) ಎಂಬ  ಲಾಭರಹಿತ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆಯನ್ನು 2004 ರಲ್ಲಿ ಈ ಸಮುದಾಯಕ್ಕೆ ಮತ್ತು ಗಾದಿ ತಯಾರಕರಿಗೆ ಆದಾಯದ ಮೂಲವನ್ನು ಒದಗಿಸುವ ಪ್ರಯತ್ನದಲ್ಲಿ ರಚಿಸಲಾಯಿತು. 2011 ರಲ್ಲಿ "ಸೋಲ್‌ಫುಲ್ ಸ್ಟಿಚಿಂಗ್: ಪ್ಯಾಚ್‌ವರ್ಕ್ ಕ್ವಿಲ್ಟ್ಸ್ ಬೈ ಆಫ್ರಿಕಾನ್ಸ್ (ಸಿದ್ಧಿಸ್) ಇನ್ ಇಂಡಿಯಾ" ಎಂಬ ಶೀರ್ಷಿಕೆಯ ಪ್ರದರ್ಶನವನ್ನು ಆಫ್ರಿಕನ್ ಡಯಾಸ್ಪೊರಾ ಮ್ಯೂಸಿಯಂನಲ್ಲಿ ಪ್ರದರ್ಶಿಸಿದ್ದು, ಈ ಗಾದಿ ತಯಾರಕರು ಮತ್ತು ಸಮುದಾಯವು ಮನ್ನಣೆಯನ್ನು ಪಡೆಯಲು ಸಹಾಯ ಮಾಡಿತು.[2 ೧೦]

ಸಮೀಕರಣ

[ಬದಲಾಯಿಸಿ]

ಕರ್ನಾಟಕದ ಸಿದ್ದಿಗಳು, ಮಹಾರಾಷ್ಟ್ರ ಸಿದ್ದಿಗಳು ಮತ್ತು ಗೋವಾದ ಸಿದ್ದಿಗಳಲ್ಲಿರುವ ಒಂದು ಸಾಮಾನ್ಯವಾದ ವೈಶಿಷ್ಟ್ಯವೆಂದರೆ ಅವರು  ಸ್ಥಳೀಯ ಸಂಸ್ಕೃತಿಯೊಂದಿಗೆ ಗಮನಾರ್ಹ ಸಂಯೋಜನೆಯನ್ನು ಪ್ರದರ್ಶಿಸುತ್ತಾರೆ. ಯಾವುದೇ ರೀತಿಯ ಒತ್ತಾಯಕ್ಕೆ ಒಳಗಾಗದೆ ತಮ್ಮ ಸ್ವಂತ ಇಚ್ಛೆಯಿಂದ  ಇತರ ಸಂಸ್ಕೃತಿಗಳೊಂದಿಗೆ ಸಂಯೋಜಿಸುತ್ತಾರೆ. ಅವರ ವಿಶಿಷ್ಟವಾದ ಹಿರಿಯರ ಆರಾಧನೆಯ ಪದ್ಧತಿಯಲ್ಲೂ ಸ್ಥಳೀಯ ಹಿಂದೂ ಧರ್ಮದ ಸಂಕೇತಗಳನ್ನು ಅಳವಡಿಸಿಕೊಂಡಿದ್ದಾರೆ. ಬುಡಕಟ್ಟಿನ ಜನಾಂಗೀಯ ಗುಣಲಕ್ಷಣಗಳನ್ನು ಹೊರತುಪಡಿಸಿ, ಇವರನ್ನು ಇತರ ಸ್ಥಳೀಯ ಜನಸಂಖ್ಯೆಯಿಂದ ಪ್ರತ್ಯೇಕಿಸಲು ಯಾವುದೇ ವ್ಯತ್ಯಾಸ ಅಥವಾ ಅಂತರ ಕಾಣಸಿಗುವುದಿಲ್ಲ.[2 ೩] ಇಂದಿನ ಭಾರತದಲ್ಲಿನ ಬಹುತೇಕ ಎಲ್ಲಾ ಸಿದ್ದಿಗಳು ಇಂಡೋ-ಆಫ್ರಿಕನ್ ಮಿಶ್ರಿತವಾಗಿದ್ದು,  ಕರ್ನಾಟಕದಲ್ಲಿ ಕೆಲವೇ ಶುದ್ಧ ಸಿದ್ದಿ ಜನಸಂಖ್ಯೆಗಳಿವೆ. ಕರ್ನಾಟಕವನ್ನು ಹೊರತುಪಡಿಸಿ ಹೆಚ್ಚಿನ ಶುದ್ಧ ಸಿದ್ದಿ ಜನಸಂಖ್ಯೆಯು ಗುಜರಾತ್‌ನಲ್ಲಿ ನೋಡಬಹುದು. ಅವರಲ್ಲಿ ಹಲವರು ತಮ್ಮ ಮೂಲ ಆಫ್ರಿಕನ್ ಹೆಸರುಗಳು ಮತ್ತು ಸಂಸ್ಕೃತಿಯನ್ನು ಕಳೆದುಕೊಂಡಿದ್ದಾರೆ ಆದಾಗ್ಯೂ ಅವರು ನೃತ್ಯ ಮತ್ತು ಸಂಗೀತದ ರೂಪದಲ್ಲಿ ಆಫ್ರಿಕನ್ ಸಂಪ್ರದಾಯಗಳ ಕೆಲವು ಪ್ರಕಾರಗಳನ್ನು ಉಳಿಸಿಕೊಂಡಿದ್ದಾರೆ.

ಐತಿಹಾಸಿಕ ಉಲ್ಲೇಖಗಳು

[ಬದಲಾಯಿಸಿ]

ಕನ್ನಡ ಪುಸ್ತಕ 'ಕೊಡಗಿನ ಇತಿಹಾಸ'ದಲ್ಲಿ, ಸಿದ್ಧಿ ಜನಾಂಗದವರು ದೊಡ್ಡ ವೀರರಾಜೇಂದ್ರನ (1763-1809) ಆಳ್ವಿಕೆಯಲ್ಲಿ ಕೊಡಗಿನ ಅರಮನೆಯ ಕಾವಲುಗಾರರಾಗಿದ್ದರೆಂದು ಉಲ್ಲೇಖಿಸಲಾಗಿದೆ.[2 ೧೧]

1870ರಲ್ಲಿ ರೆವ್. ಜಿ. ರಿಕ್ಟರ್ ಅವರ ಒಂದು ವರದಿಯಲ್ಲೂ ಸಹ ಅದೇ ರಾಜನ ಸೇವೆಯಲ್ಲಿ ಸಿದ್ದಿಗಳನ್ನು "ಆಫ್ರಿಕಾದ ರಕ್ಷಕರು" ಎಂದು ಉಲ್ಲೇಖಿಸಲಾಗಿದೆ.  1829-30ರಲ್ಲಿ ಕಿತ್ತೂರಿನ ಬಳಿ ಬ್ರಿಟಿಷರ ವಿರುದ್ಧ ನಡೆದ ಒಂದು ದಂಗೆಯಲ್ಲಿ, ಗಜವೀರ ಎಂಬ ಸಿದ್ಧಿ ಸಂಗೊಳ್ಳಿ ರಾಯಣ್ಣನೊಂದಿಗೆ ಕೈಜೋಡಿಸಿದ್ದ ಎಂದು ಗುರುತಿಸಲಾಗಿದೆ. 1844ರಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಸಾವಂತವಾಡಿಯಲ್ಲಿ ಒಂದು  ದಂಗೆ ನಡೆಯುತ್ತದೆ. ಆ ದಂಗೆಯಲ್ಲಿ ದಾಂಡೇಲಿಯ ಬಳಿಯ ಪುನ್ಸೊಲ್ಲಿಯ ಇಬ್ಬರು ಸಿದ್ಧಿ ಸಹೋದರರಾದ ಬಾಸ್ಟಿಯನ್ ಮತ್ತು ಬೆನೋವ್ ಪಾಲ್ಗೊಂಡಿರುತ್ತಾರೆ. ಅವರನ್ನು ನೋಡಿದ ಸಾವಂತವಾಡಿ ಆಸ್ಥಾನದ ಗಣ್ಯರಾದ ಫೆನ್ ಸಾವಂತ್ ರವರು ಅವರನ್ನ ತಮ್ಮ ಜೊತೆ  ಸೇರಿಸಿಕೊಂಡರು ಎಂದು ದಾಖಲೆಗಳು ತೋರಿಸುತ್ತವೆ.

ಸುಪಾ ದಂಗೆಯ ಸಮಯದಲ್ಲಿ ಬ್ರಿಟಿಷ್ ಹೊರಠಾಣೆಯನ್ನು ದರೋಡೆ ಮಾಡುವ ಮೂಲಕ ಈ ಗುಂಪು ಮೊದಲು ಗಮನ ಸೆಳೆಯಿತು. ನಂತರ ಇವರು ಸರ್ಕಾರದ ಹಣವನ್ನು ವಶಪಡಿಸಿಕೊಂಡರು, ಅನೇಕ ಕಾವಲುಗಾರರನ್ನು ವಶಪಡಿಸಿಕೊಂಡರು ಮತ್ತು ಹಲವಾರು ಹೊರಠಾಣೆಗಳನ್ನು ಸುಟ್ಟುಹಾಕಿದರು. ಗುಂಪಿನ ಮುಖಂಡರು ದರ್ಶನಿಗುಡ್ಡ ಶ್ರೇಣಿಗಳಲ್ಲಿ ಆಶ್ರಯ ಪಡೆದು ಕೆಲವೊಮ್ಮೆ ಗೋವಾಕ್ಕೆ ಪರಾರಿಯಾಗುತ್ತಿದ್ದರು. ದಾಂಡೇಲಿಯಲ್ಲಿ ಮತ್ತು ಸೋಮಲಿಂಗ ದೇವಸ್ಥಾನದಲ್ಲಿ ಹಲವಾರು ಯುದ್ಧಗಳು ನಡೆದವು. ಈ ಕ್ರಮಗಳು ತಿಂಗಳುಗಳ ಕಾಲ ಮುಂದುವರೆಯಿತು ಮತ್ತು ಕೆಲವು ಸದಸ್ಯರಿಗೆ ಅಂತಿಮವಾಗಿ ಬ್ರಿಟಿಷರು ಶಿಕ್ಷೆ ವಿಧಿಸಿದರು. ಪೋರ್ಚುಗೀಸರು ಸಾವಂತ್ ಸಹೋದರರು ಮತ್ತು ಅವರ ಕುಟುಂಬಗಳನ್ನು ಒಳಗೊಂಡಂತೆ 100 ಕ್ಕೂ ಹೆಚ್ಚು ದಂಗೆಕೋರರನ್ನು ಈಸ್ಟ್ ಇಂಡೀಸ್‌ನ ಟಿಮೋರ್‌ಗೆ ಗಡೀಪಾರು ಮಾಡಿದರು. ಆದರೆ, ಗುಣಬಾ ಶೇಣ್ವಿ, ಸಿದ್ದಿ ಬಾಸ್ಟಿಯನ್, ಅವರ ಸಹೋದರ ಅಣ್ಣಾ ಸಾಹೇಬ್ ಮತ್ತು ಮೂವರು ಫಡ್ನಿಸ್ ಸಹೋದರರನ್ನು ಇನ್ನೂ ಸೆರೆಹಿಡಿಯಲಾಗಿಲ್ಲ. ಜುಲೈ 1859 ರಲ್ಲಿ, ಬ್ರಿಟಿಷರು ಅವರನ್ನು ಹಿಡಿಯಲು ತಲಾ 1000 ರೂ.ಗಳ ಬಹುಮಾನವನ್ನು ಘೋಷಿಸಿದರು. ನಂತರ ಜಗಬೆಟ್‌ನಲ್ಲಿ ನಡೆದ ಘರ್ಷಣೆಯಲ್ಲಿ ಚಿಂತೋಬಾ ಫಡ್ನಿಸ್ ಮತ್ತು ಸಿದ್ದಿ ಬಾಸ್ಟಿಯನ್ ಕೊಲ್ಲಲ್ಪಟ್ಟರು.

ಜನಸಂಖ್ಯಾ

[ಬದಲಾಯಿಸಿ]

ಭಾರತದಲ್ಲಿ, ಕರ್ನಾಟಕವು ಸಿದ್ದಿಯರ ಅತಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ.ಇತ್ತೀಚಿನ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 3,700 ಸಿದ್ದಿ ಕುಟುಂಬಗಳಿದ್ದು, ಒಟ್ಟು 18,000 ಜನಸಂಖ್ಯೆ ಇದೆ. ದೇಶದ ಇತರ ಭಾಗಗಳಲ್ಲಿಯೂ ಸಿದ್ದಿಗಳು ಕಂಡುಬರುತ್ತಾರೆ. ಗುಜರಾತ್‌ನಲ್ಲಿ ಸುಮಾರು 10,000, ಹೈದರಾಬಾದ್‌ನಲ್ಲಿ 12,000 ಮತ್ತು ಲಕ್ನೋ, ದೆಹಲಿ ಮತ್ತು ಕಲ್ಕತ್ತಾದಲ್ಲು ಕೆಲವು ಸಿದ್ದಿ ಸಮುದಾಯಗಳನ್ನು ಕಾಣಬಹುದ.[2 ೫]

ಸಾಮಾಜಿಕ ಸ್ಥಾನಮಾನ ಮತ್ತು ಪುನರ್ವಸತಿ

[ಬದಲಾಯಿಸಿ]

ಭಾರತದ ಇತರೆಡೆ ಇರುವ ಸಿದ್ದಿಗಳಂತೆ ಕರ್ನಾಟಕದ ಸಿದ್ದಿ ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕ ನಿರ್ಲಕ್ಷ್ಯವನ್ನು ಎದುರಿಸಿ, ಪ್ರತ್ಯೇಕವಾಗಿ ಉಳಿದಿವೆ.[2 ೫] 1984 ರಲ್ಲಿ, "ಅಖಿಲ-ಕರ್ನಾಟಕ ಸಿದ್ದಿ ಅಭಿವೃದ್ಧಿ ಸಂಘ"ವನ್ನು ಸಿದ್ಧಿ ಜನರನ್ನು ಒಗ್ಗೂಡಿಸಲು ಮತ್ತು ಅವರ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲು ಸ್ಥಾಪಿಸಲಾಯಿತು. K. V. ಸುಬ್ಬಣ್ಣ ಅವರಂತಹ ವ್ಯಕ್ತಿಗಳು ಮತ್ತು ದಾಂಡೇಲಿಯ ರೂರಲ್ ವೆಲ್ಫೇರ್ ಟ್ರಸ್ಟ್‌ನಂತಹ ಸಂಸ್ಥೆಗಳು ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದವು. ಸಾಂವಿಧಾನಿಕವಾಗಿ ಅವರನ್ನು ಸಬಲೀಕರಣಗೊಳಿಸುವ ಗುರಿಯನಿಟ್ಟುಕೊಂಡು,ಜನವರಿ 8, 2003 ರಂದು, ಭಾರತ ಸರ್ಕಾರವು ಸಿದ್ದಿಗಳನ್ನು ಪರಿಶಿಷ್ಟ ಪಂಗಡಗಳೆಂದು ಗುರುತಿಸಿತು. ವಸತಿ, ನೀರಿನ ಸೌಲಭ್ಯಗಳು, ಶಿಕ್ಷಣ, ಉದ್ಯೋಗ, ರಸ್ತೆಗಳು, ವಿದ್ಯುತ್, ಸಂಚಾರಿ ಆಸ್ಪತ್ರೆಗಳು, ಪ್ರತಿ ಸಿದ್ದಿ ಕುಟುಂಬಕ್ಕೆ 2 ಎಕರೆ ಭೂಮಿ ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಹಕ್ಕನ್ನು ಒಳಗೊಂಡ ನೀತಿಗಳನ್ನು ಸಂಸತ್ತು ಅನುಮೋದಿಸಿತು. ಈ ನೀತಿಗಳ ಸರಿಯಾದ ಅನುಷ್ಠಾನವು ಸಿದ್ಧಿ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯವಾಗಿ, 2006 ರಲ್ಲಿ, ಬ್ರೆಜಿಲ್‌ನ ಪ್ರೊ ಆಂಜೆನೋಟ್ ನೇತೃತ್ವದ ಯುನೆಸ್ಕೋ-ಬೆಂಬಲಿತ ಉಪಕ್ರಮ 'ದಿ ಆಫ್ರಿಕನ್ ಡಯಾಸ್ಪೊರಾ ಇನ್ ಏಷ್ಯಾ' (TADIA), ಸಿದ್ದಿ ಬುಡಕಟ್ಟಿನ ಪುನರ್ವಸತಿಯಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ.[2 ೧೨] ಈ ಉಪಕ್ರಮವು ಕರ್ನಾಟಕ, ಗುಜರಾತ್, ಆಂಧ್ರಪ್ರದೇಶದ ಸಿದ್ದಿಗಳು ಮತ್ತು ಇತರ ಸಂಶೋಧನಾ ವಿದ್ವಾಂಸರ ನಡುವೆ ಶೈಕ್ಷಣಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಗುರಿಗಳು ಶೈಕ್ಷಣಿಕ ಸಂಶೋಧನೆ, ಸಾಂಸ್ಕೃತಿಕ ವಿನಿಮಯ ಮತ್ತು ಸಿದ್ದಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕಾರ್ಯಕ್ರಮಗಳಿಗಾಗಿ ನಿಧಿಸಂಗ್ರಹಣೆಯನ್ನು ಒಳಗೊಂಡಿವೆ.

ಉಲ್ಲೇಖಗಳು   

[ಬದಲಾಯಿಸಿ]
  1. Shah, Anish M.; et al. (15 July 2011). "Indian Siddis: African Descendants with Indian Admixture". American Journal of Human Genetics. 89 (1): 154–161. doi:10.1016/j.ajhg.2011.05.030. PMC 3135801. PMID 21741027.
  2. Vijay Prashad (2002), Everybody Was Kung Fu Fighting: Afro-Asian Connections and the Myth of Cultural Purity, Beacon Press, ISBN 978-0-8070-5011-8, ... since the captains of the African and Arab vessels bore the title Sidi (from Sayyid, or the lineage of the prophet Muhammad), the African settlers on the Indian mainland came to be called Siddis ...
  3. ೩.೦ ೩.೧ ೩.೨ ೩.೩ Vijay Prashad, Everybody Was Kung Fu Fighting: Afro-Asian Connections and the Myth of Cultural Purity, (Beacon Press: 2002), p.8
  4. Ronald Segal (2002), Islam's Black Slaves: The Other Black Diaspora, Macmillan, ISBN 978-0-374-52797-6, ... Ethiopians were particularly favored; the term Habashi or Habshi— from the Arabic word for Ethiopian – came to be applied to other Africans as well, and referred not only to the freed but to their descendants ...
  5. ೫.೦ ೫.೧ ೫.೨ Devika Sequeira. "Near forgotten, Siddis to meet". Deccan Herald. Archived from the original on 29 September 2007. Retrieved 19 July 2007.
  6. "ST-14 SCHEDULED TRIBE POPULATION BY RELIGIOUS COMMUNITY". Archived from the original on 11 March 2022. Retrieved 1 September 2023.
  7. "The Siddhi Community". K.L.Kamat. Kamat's Potpourri. Retrieved 20 July 2007.
  8. Pinto, Jeanette (2006). "The African Native in Indiaspora". African and Asian Studies. 5 (3): 383–397. doi:10.1163/156920906779134786. ISSN 1569-2094.
  9. Bhatt, Purnima Mehta (5 September 2017). The African Diaspora in India. Routledge India. doi:10.4324/9781315148380. ISBN 978-1-315-14838-0.
  10. "Museum of the African Diaspora Presents "Soulful Stitching: Patchwork Quilts by Africans (Siddis) in India"". artdaily.cc. Retrieved 13 May 2020.
  11. "The Raja had surrounded his house with African bodyguards"
  12. Beeranna Nayak Mogata. "Empowering the Siddi community". Deccan Herald. Archived from the original on 29 September 2007. Retrieved 19 July 2007.