ಸದಸ್ಯ:2230394Darshan/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಟ್ಟು[ಬದಲಾಯಿಸಿ]

ಪ್ರತಿಯೊಂದು ಪುಟ್ಟ ಪುಟ್ಟ ಅಂಶಗಳನ್ನು ಕೂಡಿ ಹಾಕುತ್ತಾ ಜೀವನದ ಹಾದಿ ಉದ್ದಕ್ಕೂ ಕ್ಷಣ ಕ್ಷಣವನ್ನು ಎಣಿಸುತ್ತ ಗಾಂಧೀಜಿಯವರು ಹೇಳಿದ "ಲಿವ್ ಎಸ್ ಇಫ್ ಯು ವರ್ ಟು ಡೈ ಟುಮಾರೋ ,ಲರ್ನ್ ಎಸ್ ಇಫ್ ಯು ವರ್ ಟು ಲಿವ್ ಫೋರೆವೆರ್"ಎಂಬ ಮಾತನ್ನು ಪಾಲಿಸುತ್ತಾ ನನ್ನ ಬದುಕಿನ ಪ್ರತಿಯೊಂದು ಹಂತದಲ್ಲೂ ಉತ್ಸಾಹ ಭರಿತನಾಗಿ ನಾನು ಜೀವಿಸುತ್ತಿರುವ ಪ್ರತಿಯೊಂದು  ಕ್ಷಣದಲೂ ಕಲಿಕೆ ಇದೆ ಎಂಬ ದೃಷ್ಟಿಕೋನದೊಂದಿಗೆ ಸದಾ ನಗುತ್ತಾ ಉಲ್ಲಾಸವನ್ನು ತುಂಬಿದ ಆಶಾವಾದಿ ನಾನು ದರ್ಶನ್. ನನ್ನ ಅಪ್ಪ ,ತಮ್ಮ ಅಣ್ಣನೊಂದಿಗೆ ಚಂದನವನದ  ನಟರಾದ ದರ್ಶನ್ ರವರ "ನನ್ನ ಪ್ರೀತಿಯ ರಾಮು" ಎಂಬ ಚಲನಚಿತ್ರವನ್ನು ವೀಕ್ಷಿಸಿದ್ದ ದಿನವೇ ನಾನು ಹುಟ್ಟಿದ್ದು. ನಟ ದರ್ಶನ್ ರವರ ಹೆಸರಿನಿಂದ ನನಗೆ ದರ್ಶನ್ ಎಂಬ ನಾಮಕರಣ ಮಾಡಲಾಯಿತು.

ಮೂಲತಃ ಯಾದಗಿರಿ  ಪಟ್ಟಣದ  ಪಕ್ಕ ಇರುವ ಎಂ.ಹೊಸಳ್ಳಿ ಎಂಬ ಗ್ರಾಮ ನನ್ನ ಊರು. ಹುಟ್ಟಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಎಂಬ ಗ್ರಾಮದಲ್ಲಿ.ತಂದೆಯ ಹೆಸರು ಸಾಬಣ್ಣ, ತಾಯಿ ನಾಗವೇಣಿ ನಾನು ನನ್ನ ತಂದೆ ತಾಯಿಯ ಹಿರಿಯ ಪುತ್ರ 2004 ಜನವರಿ ನಾಲ್ಕರಂದು  ಜನಿಸಿದೆ. ಹುಟ್ಟಿನಿಂದಲೇ ಕುತೂಹಲಕಾರಿ, ಪ್ರಾಣಿಗಳ ಮೇಲೆ ಪ್ರೀತಿ ಹೊಂದಿದ ಕಾರಣ ನಮ್ಮ ಊರಿನಲ್ಲೇ ನಮ್ಮ ಅಜ್ಜಿ ಸಾಕಿದ ಕೋಳಿ ಮರಿಗಳೊಂದಿಗೆ ಬೆಳೆದೆ. ಮನೆಗೆ ಮೊದಲ ಮಗುವಾದ ನನ್ನನ್ನು ನನ್ನ ಅಜ್ಜಿ,ಚಿಕ್ಕಪ್ಪ ಮತ್ತು ಪೋಷಕರು ತುಂಬಾ ಮುದ್ದಾಗಿ ಬೆಳೆಸಿದರು.ನಾನು ಎರಡು ವರ್ಷದ ಮಗು ಆಗಿದ್ದಾಗ ನನ್ನ ಅಪ್ಪನಿಗೆ ಬೇರೆ ಊರಿಗೆ ವರ್ಗಾವಣೆ ಆದ ಕಾರಣ ನಾವು ಅಲ್ಲಿಗೆ ಹೋಗಬೇಕಾಯಿತ, ನಂತರ ನಾನು ಎರಡು ವರ್ಷ ಎಂಟು ತಿಂಗಳು ಮಗುವಾಗಿದ್ದಾಗ ಜನಿಸಿದ ತಮ್ಮ ಮಲ್ಲಿಕಾರ್ಜುನ್. ನನ್ನ ತಮ್ಮ ಹುಟ್ಟಿನಿಂದ ಬಹಳ ಕಡಿಮೆ ವೇಗದಲ್ಲಿ ಬೆಳವಣಿಗೆ ಹೊಂದಿದ, ಅವನಿಗೆ ಮಾತು ಬಂದಿದ್ದು ನಾಲ್ಕು ವರ್ಷದ ಮಗುವಿದ್ದಾಗ, ಇದೇ ಸಂದರ್ಭದಲ್ಲಿ ಹುಟ್ಟಿದ್ದು ನನ್ನ ತಂಗಿ ಅನ್ನಪೂರ್ಣ.

ಆರಂಭಿಕ ಶಿಕ್ಷಣ[ಬದಲಾಯಿಸಿ]

ನನ್ನ ಮೊದಲ ಕಲಿಕೆ ದಿನಗಳ ಬಗ್ಗೆ ನೆನಪಿಸಿಕೊಂಡರೆ ನನಗೆ ನೆನಪು ಬರುವುದು ನಮ್ಮ ಅಂಗನವಾಡಿ  ಮಿಸ್ ಅವರು ಚಿಕ್ಕ ಚಿಕ್ಕ ಮಿಕ್ಕಿ ಮೌಸ್  ಬೊಂಬೆಗಳನ್ನು ಕೊಟ್ಟು ನನಗೆ ಲೆಕ್ಕ ಹೇಳಿ ಕೊಟ್ಟಿದ್ದು, ಅದರ ಜೊತೆಗೆ ನನ್ನ ಅಮ್ಮ ನನಗೆ ಎಬಿಸಿಡಿ ಇಂಗ್ಲಿಷ್ ಅಕ್ಷರ ಕಲಿಸಿದ್ದು. ಆಗ ನನಗೆ ನಾಲ್ಕು ವರ್ಷ ಕಲಿಕೆಯಲ್ಲಿ ವೇಗವಾಗಿದ್ದ ಕಾರಣ ನನಗೆ ನೇರವಾಗಿ ಯು.ಕೆ.ಜಿ  ಸೇರಿಸಲಾಯಿತು ಯು.ಕೆ.ಜಿ ಮುಗಿಸಿದ ನಂತರ ನಮ್ಮ ತಂದೆಯವರಿಗೆ ಬಸವನಬಾಗೇವಾಡಿಗೆ ವರ್ಗಾವಣೆ ಆಯಿತು.ಆಗ ನಾನು ಅಲ್ಲಿ ಕನ್ನಡ ಕೋಚಿಂಗ್ ಜೊತೆ ಕಂಪ್ಯೂಟರ್ ಕ್ಲಾಸ್ ಗೆ ಹೋದೆ, ಅಲ್ಲಿ ಒಂದು ವರ್ಷ ಕಳೆದ ನಂತರ ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ಅಡೆತಡೆಗಳು ಬರುತ್ತಿದ್ದ ಕಾರಣ ನಮ್ಮ ಕುಟುಂಬ ಯಾದಗಿರಿಯಲ್ಲಿ ನೆಲಿಸಲು ತೀರ್ಮಾನಿಸಿ, ನಾನು ಆರು ವರ್ಷ ಹುಡುಗನಿದ್ದಾಗ ನಮ್ಮ ಯಾದಗಿರಿಯ 'ಶ್ರೀ.ಪಿ.ಎಸ್.ಡಿ. ಜೈನ್'ಶಾಲೆಯಲ್ಲಿ ಒಂದನೇ ತರಗತಿಗೆ ಸೇರಿಸಿದರು. ಆಗ ಆರಂಭವಾಯಿತು ನನ್ನ ಮುಂದಿನ 10 ವರ್ಷದ ಶಾಲಾ ಬದುಕಿನ ಪಯಣ.

ಶಾಲಾ ಶಿಕ್ಷಣ[ಬದಲಾಯಿಸಿ]

ಕಲಿಕೆ ಆರಂಭ ದಿನಗಳಲ್ಲಿ ನನ್ನ ಅಮ್ಮನ ಹೆಚ್ಚು ಶ್ರದ್ಧೆಯಿಂದ ಕಲಿಸಿದ ಕಾರಣ ಓದು ನನಗೆ ಆರಂಭ ದಿನಗಳಲ್ಲಿ ಸರಳವಾಯಿತು , ನನ್ನ ಶಾಲೆ ಎಲ್ಲಾ ತರಗತಿಗಳಲ್ಲು ಯಾವಾಗಲೂ ಮೊದಲಿನ ಮೂರು ಸ್ಥಾನಗಳಲ್ಲಿ ಒಂದನ್ನು ಗಳಿಸಿ ಉತ್ತೀರ್ಣನಾದೆ. ಕೇವಲ ಓದು ಬರಹವಲ್ಲದೆ ಮೊದಲನೆಯ ಐದು ಶಾಲಾ ವರ್ಷಗಳಲ್ಲಿ  ಹಾಡಿನ ಸ್ಪರ್ಧಿ, ಕೈಬರಹಸ್ಪರ್ಧೆ ಕಾಲಸ್ಪರ್ಧೆ ಭಾಗವಹಿಸಿ ಬಹುಮಾನಗಳನ್ನು ಪಡೆದೆ. ಆರನೇ ತರಗತಿಗೆ ತೆರಳಿದ ನಂತರ ಭಾಷಣದ ಕಡೆಗೆ ಒಲವು ಮೂಡಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಭಾಷಣ ಮಾಡಿದೆ, ಇದೇ ವರ್ಷದಲ್ಲಿ ಶಾಲೆವಾರ್ಷಿಕೋತ್ಸವದ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನನ್ನ ಬದುಕಿನ ಭಾಷಣ ಹಾಗೂ ನಿಬಂಧ ಸ್ಪರ್ಧೆಗಳ ಲೋಕಕ್ಕೆ ಕಾಲಿಟ್ಟೆ. ನಂತರ ಶಾಲೆ 9ನೇ ತರಗತಿವರೆಗೆ ಸತತವಾಗಿ ನಿಬಂಧ ಸ್ಪರ್ಧೆಯಲ್ಲಿ ವಿಜೇತನಾಗಿ ಹತ್ತನೇ ತರಗತಿಗೆ ಕಾಲಿಟ್ಟೆ. ಇದಲ್ಲದೆ ಶಾಲೆ ಹೊರಗಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದೆ. ಈ ನನ್ನ ಗೆಲುವಿನ ಪಯಣ ತುಂಬಾ ದಿನ ಉಳಿಯಲಿಲ್ಲ 10ನೇ ತರಗತಿಯಲ್ಲಿ ಸ್ವಗತ ಮತ್ತು ಸ್ಪೆಲ್ ಬಿ ಸ್ಪರ್ಧೆಗಳನ್ನು ಉತ್ತೀರ್ಣರಾದರು, ಕೆಲವು ಬೇರೆ ಶಾಲೆಗಳಲ್ಲಿ ಭಾಷಣ ಸ್ಪರ್ಧೆಯಲ್ಲಿ ಚೆನ್ನಾಗಿ ಮಾಡದೆ ಬಹುಮಾನ ಪಡೆಯಲಿಲ್ಲ. ಈ ಒಂದು ಅನುಭವದಿಂದ ನನ್ನ ಆತ್ಮ ವಿಶ್ವಾಸ ತೀರ ಕಡಿಮೆಯಾಯಿತು ಇಲ್ಲಿಂದ ಶುರುವಾಯಿತು ನನ್ನ ಬದುಕಿನ ದೊಡ್ಡ ಅನ್ವೇಷಣಾ. 10ನೇ ತರಗತಿಯ ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆ  ಆರಂಭವಾಯಿತು, ವಿಜ್ಞಾನ ಪರೀಕ್ಷೆಯಲ್ಲಿ ಓ.ಎಂ ಆರ್ ಶೀಟ್ ನಲ್ಲಿ ತಪ್ಪು ಮಾಡಿ ಎಲ್ಲಾ ಸಮಯ ವ್ಯರ್ಥ ಮಾಡಿಕೊಂಡು ಪರೀಕ್ಷೆ ಸರಿಯಾಗಿ ಬರೆಯದೆ, ವಿಜ್ಞಾನ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದೆ, ಬೇರೆ ವಿಷಯಗಳಲ್ಲಿ ಅಂಕ ಚೆನ್ನಾಗಿ ಬಂದಿದ್ದರು ಕೂಡ ವಿಜ್ಞಾನದ ಅಂಕಗಳಿಂದ ನನಗೆ ಬಹಳ ನಿರಾಶೆ ಉಂಟಾಗಿತ್ತು. ಇದರ ಹೊತ್ತಿಗೆ ಕೊರೊನ ಎಂಬ ಮಹಾಮಾರಿ ಜಗತ್ತನ್ನು ಒಕ್ಕಿತ್ತು ಆಗ ನನಗೆ ಪರಿಚಯವಾದದ್ದು ಜಪಾನಿನ "ನಾರುಟು" ಎಂಬ ಆನಿಮಿ(ಜಪಾನೀಸ್ ಗೊಂಬೆಗಳ ವೇಷದ ಚಲನಚಿತ್ರ. ಇಲ್ಲಿಂದ ಶುರುವಾದ ನನ್ನ ಜಪಾನೀಸ್ ಗೊಂಬೆಗಳ ವೇಷದ ಚಲನಚಿತ್ರದ ಮೇಲಿನ ಆಸಕ್ತಿ ಇಂದಿಗೂ ಕಡಿಮೆಯಾಗಿಲ್ಲ .

ಪಿಯು ಕಾಲೇಜಿನ ಶಿಕ್ಷಣ[ಬದಲಾಯಿಸಿ]

ಹನ್ನೊಂದನೇ ತರಗತಿಗೆ ಬೆಂಗಳೂರಿಗೆ ಬರುವ ಯೋಜನೆಗಳು ಇದ್ದರೂ ಕೋರನಾದ ತಡೆಗಳಿಂದ ಆಗಲಿಲ್ಲ, ಆಗಲೇ  ಶುರುವಾಗಿದ್ದ "ಶ್ರೀ ಸಿದ್ದಲಿಂಗೇಶ್ವರ ವಿಜ್ಞಾನ ಪಿಯು" ಕಾಲೇಜಿನಲ್ಲಿ ನನ್ನ ವಿಜ್ಞಾನದ ಜ್ಞಾನವನ್ನು ಪರೀಕ್ಷಿಸಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ವಿಜ್ಞಾನ ಸ್ಟೀಮ್ ನಲ್ಲಿ ಜೀವಶಾಸ್ತ್ರ ಗಣಿತಶಾಸ್ತ್ರ ರಾಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಅಭ್ಯಾಸವನ್ನು ಆರಂಭಿಸಿದೆ . ಒಂದುವರೆ ವರ್ಷಗಳ ಕಾಲ ಹಗಲು ರಾತ್ರಿ ಓದಿ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದು ಯಾದಗಿರಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದೆ, ಒಂದೇ ಅಂಕದಿಂದ ಹಿಂದುಳಿದ ನಾನು  ಮುಂದಿನ  ಸ್ಪರ್ಧಾತ್ಮಕ ಜಗತ್ತಿಗೆ  ಕಾಲಿಡಲು ನಿರ್ಧರಿಸಿದೆ.

ಕಾಲೇಜಿನ ಶಿಕ್ಷಣ[ಬದಲಾಯಿಸಿ]

ನನ್ನ 10 ವರ್ಷಗಳ ' ಶ್ರೀ ಪಿ. ಎಸ್. ಡಿ ಜೈನ ಶಾಲೆ' ದಿನಗಳು ಮತ್ತು ಎರಡು ವರ್ಷಗಳು ಪಿಯು ಕಾಲೇಜಿನಾ ದಿನಗಳು ಮನೆಯ ಹಲವು ಕಷ್ಟಗಳು ಕುಟುಂಬದ ಆರ್ಥಿಕ ಏರುಪರಗಳನ್ನು, ತಂದೆ ವ್ಯಾಪಾರ ನಷ್ಟವನ್ನು ನೋಡುತ್ತಾ ಬೆಳದ ನಾನು, ಕೊನೆಗೆ ಯಾದಗಿರಿ ಅಭ್ಯಾಸ ಜೀವನಕ್ಕೆ ವಿರಾಮ ಹೇಳುವ ಸಮಯ ಬಂತು. ತಂದೆ ತಾಯಿ ಬಂಧು ಮಿತ್ರರ ಒತ್ತಡದಿಂದ ಹಲವಾರು ಡಿಗ್ರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಕೆಲವೊಂದು ಕ್ಲಿಯರ್ ಮಾಡಿದರು ನಾನು ನನ್ನ ಜೀವನವನ್ನು ಹಾಗೂ ಅಭ್ಯಾಸದ ಪ್ರಾಮುಖ್ಯ ನಿರ್ಣಯವನ್ನು ನಿರ್ಧರಿಸಿ "ಮನೋವಿಜ್ಞಾನವನ್ನು " ಆಯ್ಕೆ ಮಾಡಿದೆ, 'ಕೂವಿಡ್ -19' ನಿಂದ ಜಗತ್ತಿನಲ್ಲಿ ಏರುಪೇರದ ಜನರ ಮಾನಸಿಕ ಪರಿಸ್ಥಿತಿ ಜೊತೆಗೆ ನನ್ನ ತಮ್ಮನ ಕಲಿಕೆಯ ಅಸಹಾಯಕತೆ ಕುರಿತು ಅರಿಯಲು ಈ ವಿಷಯವನ್ನು ಆಯ್ಕೆಮಾಡಿದೆ. ಆದರೆ ಈ ವಿಷಯವನ್ನು ನಮ್ಮ ಬಂಧು ಬಳಗದಲ್ಲಿ ಇಡೀ ಊರಿನಲ್ಲಿ ಯಾರು ಓದದಿದ್ದ ಕಾರಣ ನಮ್ಮ ಬಳಗದಲ್ಲಿ ಹಲವಾರು ಸಂಶಯ ಮೂಡಿತು, ಹಲವಾರು ಜನರು ನನ್ನ ನಿರ್ಣಯವನ್ನು ವಿರೋಧಿಸಿ, ಅದನ್ನು ಬದಲಾಯಿಸಲು ಸೂಚಿಸಿದರು.ನಾನು ನನ್ನ ಹಟವನ್ನು ಬಿಡದೆ  ನನ್ನ ಪೋಷಕರನ್ನು ಒಪ್ಪಿಸಿ ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ 'ಪಿಎಸ್ ಇಂಗ್ಲೀಷ್' ಅಂದರೆ ಮನೋವಿಜ್ಞಾನ,ಸಮಾಜಶಾಸ್ತ್ರ ಮತ್ತು ಇಂಗ್ಲಿಷ್ ಪದವಿ ಪಡೆಯಲು  ಸೇರಿಕೊಂಡೆ.

ಯಾದಗಿರಿ ಎಂಬ ಪುಟ್ಟ ಪಟ್ಟಣದಿಂದ ಬಂದ ನಾನು ಬೆಂಗಳೂರ ಎಂಬ ಮಹಾನಗರದಲ್ಲಿ ನನ್ನ ಮುಂದಿನ ಪದವಿ ಶಿಕ್ಷಣವನ್ನು ಆರಂಭಿಸಿದೆ. ನನ್ನ ಚಿಕ್ಕಪ್ಪ, ಮಾಮಾ ಮತ್ತೆ ಹಲವು ಸಂಬಂಧಿಕರು ಇಲ್ಲಿ  ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದ ಕಾರಣ ನಾನು ಆಗಾಗ ಬೆಂಗಳೂರಿಗೆ ಬಂದಿದ್ದೆ ಆದರೆ ಈ ಬಾರಿ ಯೂನಿವರಸಿಟಿ ಅದರಲ್ಲೂ 20,000 ಕ್ಕಿಂತ ಹೆಚ್ಚು ಜನರ  ಮಧ್ಯೆ ಓದಲು ಬಂದೆ. ಚಿಕ್ಕಂದಿನಿಂದಲೇ ಕುತೂಹಲಕಾರಿ , ಜನರ ಜೊತೆಗೆ ಚೆನ್ನಾಗಿ ಬರೆಯುವ ಕೌಶಲ್ಯ ಹೊಂದಿದ ನಾನು ಇಲ್ಲಿ ಸ್ನೇಹಿತರನ್ನು ಗಳಿಸಲು ಹೆಚ್ಚು ಸಮಯ ಆಗಲಿಲ್ಲ, ಆದರೆ 90ಕ್ಕಿಂತ ಹೆಚ್ಚು  ಈತನನ್ನ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳಲು ಅವಕಾಶ ನೀಡಿದ 'ಸೈಕಾಲಜಿ ಅಸೋಸಿಯೇಷನ್' ಗೆ ಸದಾ ಚಿರಋಣಿ. ಸೈಕಾಲಜಿ ಕ್ಲಾಸ್ ರೇಪ್ ಆದ ನಾನು ಸ್ಟ್ರೀಟ್ ಪ್ಲೇ (ಬೀದಿ ನಾಟಕ ಸ್ಪರ್ಧೆ )ಸಿಂಗಿಂಗ್ ಕಾಂಪಿಟೇಶನ್ ಮತ್ತೆ ಸಿಲ್ಹೋತ್ತೆ (silhouette ) ಎಂಬ ಡಿಪಾರ್ಟ್ಮೆಂಟಲ್ ಫೆಸ್ಟನ್ನು  ಆಯೋಜಿಸಿ ನನ್ನ ವರ್ಗದಲ್ಲಿರುವ ಪ್ರತಿಯೊಂದು ವಿದ್ಯಾರ್ತಿಯನ್ನು ಪರಿಚಯಿಸುಕೊಂಡು, ಒಳ್ಳೆಯ ಗೆಳತನ ಬೆಳೆಸಿಕೊಂಡಿದ್ದೇನೆ. ಇದಲ್ಲದೆ ವಿವಿಧ ಕಾರ್ಯಕ್ರಮಗಳಾದ ಭಾಷಾ ಉತ್ಸವ ಸಂಧರ್ಭದಲ್ಲಿ ನೃತ್ಯ ಮಾಡಿ, ಬ್ಲಾಸ್ಸಾಮ್ಸ್ನಲ್ಲಿ ನಾಟಕದಲ್ಲಿ ಅಭಿನಯಿಸಿ ನನ್ನ ಆಸಕ್ತಿಗಳ ಬಂಡಾರವನ್ನು ವಿಸ್ತರಿಸುತ್ತಾ ಹಲವಾರು ಕಲಿಕೆಯ ಅಭ್ಯಾಸವನ್ನು ನಡೆಸುತ್ತಾ ಕಾಲೇಜಿನ ಜೀವನವನ್ನು ಮುಂದುವರಿಸಿದೆ .ಅದಲ್ಲದೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಲೀಡರ್ಶಿಪ್ ಕ್ಲಬ್ ಸೇರಿ ಹಲವಾರು  ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೇನ, ಇದಲ್ಲದೆ ನನ್ನ ಜೀವನದ ಪ್ರಮುಖ ದಿನಗಳಾದ ಈ ಕಾಲೇಜಿನ ದಿನಗಳಲ್ಲಿ  ನನಗೆ ಜನರು ಹಾಗೂ ಇಡಿ ಸಮಾಜದ ನೀತಿ ನಿಯಮಗಳ ಮೇಲಿರುವ ಆಸಕ್ತಿ, ಮನುಷ್ಯನ ಭಾವನೆಗಳನ್ನು ಅರಿತು ಭಾವನಾತ್ಮಕ ಬುದ್ಧಿವಂತಿಕೆಯ ಬೆಳೆಸಿಕೊಳ್ಳುವ ಹಾದಿಯನ್ನು  ರೂಪಿಸಿಕೊಳ್ಳುತ್ತಿದ್ದೇನೆ. ಇವೆಲ್ಲ ಮನುಷ್ಯನ ಜೀವನದ ಮಾದರಿಗಳನ್ನು ಹಂತವಾಗಿ ಮಣಿಗಳನ್ನು ಜೋಡಿಸಿದಂತೆ ಜೋಡಿಸುತ್ತ ನನ್ನ ಬದುಕಿನ ನಿಜವಾದ ಉದ್ದೇಶಗಳ ಭಾಗವನ್ನು ಅನ್ವಯಿಸುತ್ತ ನನ್ನ ಮೊದಲ ಗುರಿಯಾದ " ಯು.ಪಿ.ಎಸ್ಸಿ ಸಿವಿಲ್ ಸರ್ವಿಸ್" ಪರೀಕ್ಷೆ ಪೂರೈಸಿ ಸಮಾಜದ ಏಳಿಗೆಗೆ ಶ್ರಮಿಸುವ ಕನಸನ್ನು ಕಣ್ಣ್ ತುಂಬಿಸಿಕೊಂಡು ಸುತ್ತಲಿನ ಅವಿಸ್ಮಯ ಜಗತ್ತನ್ನು ನನ್ನದೇ ಆದ ವಿಶಿಷ್ಟ ನೋಟದಿಂದ ತರತರಹದ ದೃಷ್ಟಿಕೋನವನ್ನು ರೂಪಿಸುವ ಕ್ರಿಯೆಯಲ್ಲಿ ನನ್ನನ್ನು ನಾನು ಅಳುವಡಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸೌಖ್ಯವಾಗಿರುವುದು ಎಂಬ ನಂಬಿಕೆಯಿಂದ, ಕೊನೆಗೆ

"ಸಮಯವೆಂಬ ನದಿಯಲ್ಲಿ, ಬದುಕು ಎಂಬ ಹಡುಗಿನಲ್ಲಿ ಪ್ರೀತಿ ವಿಶ್ವಾಸದ ಸರುಕುಗಳನ್ನು ತುಂಬಿಕೊಂಡು ನನ್ನ ಗುರಿಯ ಕಡೆ ಸಾಗಿದೆ ಪಯಣ, ಎಲ್ಲಿಯೂ ಆಗದಿರಲಿ ನನ್ನ ದೃಢತೆಯ ಪತನಾ, ಇಲ್ಲಿಗೆ ಮುಗಿಸುವೆ ನನ್ನ ಜೀವನದ ಪುಟ್ಟ ಕಥನ " .