ಸದಸ್ಯ:2130779joshitha.n/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಪ್ರಧಾನಿಯಾದರೆ

ಯಾವುದೇ ರಾಷ್ಟ್ರದ ಚಾಲನೆಯು ರಾಷ್ಟ್ರದ ಹಿತಾಸಕ್ತಿಯ ವಿವಿಧ ಮುಖಗಳಿಂದ ಅಲ್ಲಿನ ಪ್ರಧಾನಿಯ ಕೈಯಲ್ಲೇ ಇರುತ್ತದೆ. ರಾಷ್ಟ್ರದ ಅಂತರಂಗ ಹಾಗೂ ಬಹಿರಂಗದ ಆಗುಹೋಗುಗಳು ರಾಷ್ಟ್ರದ ಉತ್ತಮ ಪ್ರಗತಿಯ ಪಥದಲ್ಲಿ ಸುಗಮವಾಗಿ ನಡೆಯಲು ಅಲ್ಲಿನ ಪ್ರಧಾನಿಯ ಬಿಗಿ ಹಿಡಿಯೇ ಪ್ರಾಧಾನ್ಯ.'ಪ್ರಾಧಾನ್ಯ' ಎಂಬುದರ ಅರ್ಥವೂ ಸಹ ಅದೇ ತಾನೇ?

“ಹರಿದು ತುಂಡಾಗಿಹುದು ನಮ್ಮ ಕನ್ನಡ ನಾಡು" ಎಂದು ಹಿಂದಿನ ತಲೆಮಾರಿನ ಕನ್ನಡ ಕವಿ ಒಬ್ಬರು ತನ್ನ ನಾಡಿನ ಬಗ್ಗೆ ಕಳಕಳಿಯಿಂದ ವಿಷಾದಿಸಿದ್ದುದು, ಇಂದಿಗೂ ನಮಗೆ ನಮ್ಮ ರಾಷ್ಟ್ರವೆನಿಸಿರುವ ಸಮಗ್ರ ಭಾರತದ ಇಂದಿನ ಸ್ಥಿತಿಯಲ್ಲಿ ಕಣ್ಣಾರೆ ಕಂಡಾಗ, ಪತ್ರಿಕೆಗಳಲ್ಲಿ ಓದಿದಾಗ, ಕನ್ನಡ ಕವಿಯ ಈ ಮೇಲ್ಕಂಡ ವಿಚಾರವು ರಾಷ್ಟ್ರಕ್ಕೇ ಅನ್ವಯಿಸುತ್ತಿರುವುದೇನೋ! ಎಂದೆನಿಸದಿರದು.

ಭಾರತಮಾತೆಯ ಭವ್ಯ ಭೂರಮೆಯ ದೇಹ ಸ್ವಾತಂತ್ರ್ಯ ಪೂರ್ವದಲ್ಲಿ ದಿಕ್ಕು ದಿಕ್ಕಿಗೂ ಹಂಚಿಹೋಗಿತ್ತು. ಈಗಲೂ ಅಂದರೆ ೧೯೪೭ರ  ನಂತರವೂ, ಸ್ವಾತಂತ್ರ್ಯ ಸಂದು ಸುಮಾರು ಐದು ದಶಕಗಳ ಅವಧಿಯೇ ಮುಗಿಯುತ್ತಿದ್ದರೂ, ಹಿಂದಿನಂತೆಯೇ 'ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ' ಎಂಬ ಗಾದೆಯ ಮಾತಿನಂತೆಯೇ ಉಳಿದಿರುವುದು ವೇದ್ಯವಾಗುತ್ತಿದೆ.

ಉತ್ತರ ಭಾರತದಲ್ಲಿ ಭಾರತ ಮಾತೆಯ ಶಿರಸ್ಸಿನಂತಿರುವ ಕಾಶ್ಮೀರವನ್ನು ನಮ್ಮ ರಾಷ್ಟ್ರದ ನೆರೆಯ ಹಿತಶತ್ರುಗಳಾದ ಪಾಕಿಸ್ತಾನೀಯರು ಅಡ್ಡಾದಿಡ್ಡಿ  ಎಳೆದಾಡುತ್ತಿರುವುದನ್ನು ಭಾರತೀಯರೆಂದು ಹೆಮ್ಮೆ ಪಡುವ ನಾವುಗಳು ಕಣ್ಣಾರೆ ನೋಡುತ್ತಲೇ ಇದ್ದೇವೆ. ಆದರೆ, ದೇಶ ಮಾತೆಯ ಮಾನಸಂರಕ್ಷಣೆ ಮಾಡುವ ಬಿಸಿರಕ್ತವೇ ಎಲ್ಲರಲ್ಲೂ ತಣ್ಣಗಾಗುತ್ತಿರುವುದೇನೋ! ಎಂದೆನ್ನಿಸುತ್ತಲೇ ಇದೆ. ಇನ್ನು “ಚೀನೀ-ಹಿಂದೂ, ಭಾಯಿ ಭಾಯಿ” ಅನ್ನುತ್ತಿದ್ದ ಚೀನೀಯರೂ ಒಳಗೊಳಗೇ ಮಸಲತ್ತು ಮಾಡತೊಡಗಿದರೆ ಭಾರತ ಮಾತೆ ಬಾಯಿ-ಬಾಯಿ ಬಿಡಬೇಕಾದ ಸಂದರ್ಭವೂ ಬರುವುದೋ ಏನೋ!

ಪಂಡಿತ ಜವಹರಲಾಲ್‌ ನೆಹರೂ ಅವರು ನಮ್ಮ ಪ್ರಥಮ ಪ್ರಧಾನಿ.ಅವರ ಕೊನೆಯ ದಿನಗಳಲ್ಲಿಯೇ ಭಾರತೀಯ ಸ್ಥಿತಿ-ಗತಿ ಉಲ್ಬಣಗೊಳ್ಳುತ್ತಿರುವ ಲಕ್ಷಣಗಳು ಕಾಣುತ್ತಿದ್ದವು. ಎಷ್ಟೋ ಬಾರಿ ಭಾರತದ ಉಕ್ಕಿನ ಮನುಷ್ಯ ಎಂದು ಹೆಸರು ಗಳಿಸಿದ್ದ ಸರ್ದಾರ ವಲ್ಲಭಭಾಯಿ ಪಟೇಲ್ ಅವರೇ ಪ್ರಧಾನಿ ಆಗಿದ್ದಿದ್ದರೆ! ಎಂಬ ಒಡಕು ಕೂಗು ಅಲ್ಲಲ್ಲಿ ಕೇಳಿಸುತ್ತಲೂ ಇತ್ತು. ಅವರ ನಂತರ ಮುಂದಿನ ಪ್ರಧಾನಿ ಯಾರು? ಎಂಬ ದಿಗ್ಭ್ರಮೆಯ ಪಿಸುಮಾತೂ ಹೊರಬರುತ್ತಿತ್ತು. ಅವರು ಪ್ರಧಾನಿ ಆಗಿದ್ದಾಗ ಅನುಸರಿಸುತ್ತಿದ್ದ ಧಾರಾಳತನದ ಔದಾರ್ಯದ ಕಾರಣದಿಂದಲೋ ಏನೋ! ಭಾರತದ  ಬಗ್ಗೆ "ಬೆಚ್ಚಿ ಬೆದರುತಿದೆ ಲಂಡನ್!'' ಎಂಬ ಕೂಗು ಹೋಗಿ, ಮತ್ತೆ ಸ್ವತಂತ್ರ ಭಾರತವನ್ನು ಅತಂತ್ರತೆಯಲ್ಲಿ ಸಿಲುಕಿಸುವ ಸಮಸ್ಯೆಗಳನ್ನು ಸಮಯವರಿತು ನೆರೆಯ ಹಿತಶತ್ರುಗಳು ಉಂಟು ಮಾಡತೊಡಗಿದರು. ಇಂತಹ ಸಮಸ್ಯೆಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದ ಕಾರಣ, ದೇಶಮಾತೆ ಮತ್ತಷ್ಟು ಸಿಕ್ಕುಗಳಲ್ಲಿ ನುಣುಚಿಕೊಳ್ಳಲಾಗದಂತೆ ಸಿಕ್ಕಿ, ತೊಳಲಾಡುತ್ತಿದ್ದಾಳೆ. ನಾನೇನಾದರೂ ಪ್ರಧಾನಿ ಆದರೆ ಉಲ್ಬಣಗೊಂಡಿರುವ ಸಂಕೀರ್ಣ ಸ್ಥಿತಿಯನ್ನು ಆದಷ್ಟೂ ಹತೋಟಿಗೆ ತರಲು  ಯತ್ನಿಸುತ್ತೇನೆ.

Jawaharlal nehru

ಬಹುಮಂದಿ ಭಾರತೀಯರು ಇಂದು "ಅಂದಿನ ಆಂಗ್ಲ ಭಾರತವೇ  ಪ್ರಚಾನುಕೂಲದ ದೃಷ್ಟಿಯಿಂದ ಸಂರಕ್ಷತೆ ಪಡೆದಿತ್ತು ಎಂದು ಉದ್ಗರಿಸುತ್ತಿರುವುದರಲ್ಲಿಯೂ ಅರ್ಥ ಇಲ್ಲದಿಲ್ಲ. ಸ್ವಾತಂತ್ರ್ಯ ಎಂಬುದರ ಸರಿ ಅರ್ಥವೇ ಸಾಮಾನ್ಯ ಜನರಿಗೆ ಆದಂತಿಲ್ಲ. ಬಸ್ಸುಗಳಲ್ಲಿ ನೋಡಲಿ, ಬಜಾರುಗಳಲ್ಲಿ ನೋಡಲಿ, ಸಮಾಜ ಪ್ರಜ್ಞೆ (Civic Sense) ಯೇ ನಾಗರಿಕರೆನಿಸಿರುವ ನಮಗೆ ಅಂದರೆ ಭಾರತೀಯ ಪೌರರಲ್ಲಿ ಬಹುಮಂದಿಗೆ ಇದ್ದಂತಿದೆ. ಸ್ವಾತಂತ್ರ್ಯನಂತರ ನಾವು ತಿಂಡಿಗಳು ತುಂಬಿದ್ದ ಅಂಗಡಿಯ ಕೆಲಸಗಾರರು ಮುಕ್ತಿ ಪಡೆದವರಂತಾಗಿದ್ದೇವೆ. ಆಗ ಲಾಠೀ ಏಟಿನ ಭಯವಿತ್ತು. ಬಂದೂಕಿನ ಶಬ್ದಕ್ಕೆ ಭಯಪಡುತ್ತಿದ್ದರು. ಇಂದು ವಿದ್ಯಾವಂತರೆನಿಸಿದವರೂ ಸಹ ಸ್ವಾತಂತ್ರ್ಯದ ಅರ್ಥದ ಅರಿವಿಲ್ಲದೆ 'ಭಾರತ' ಎಂಬ ಅಂಗಡಿಯಲ್ಲಿನ ತಿಂಡಿ ತಿನಿಸುಗಳನ್ನು ಬುಕ್ಕಿ-ಮುಕ್ಕುವುದರಲ್ಲಿಯೇ ಮುಳುಗೇಳುತ್ತಿದ್ದಾರೆ.

ಸುಭಾಷ್ ಅಂದು ಹೇಳುತ್ತಿದ್ದರು - "ನನಗೆ ರಕ್ತ ಕೊಡಿ, ನಾನು ನಿಮಗೆ  ಸ್ವಾತಂತ್ರ್ಯವನ್ನು ಆಂಗ್ಲರ ಕೈಯಿಂದ ಕಿತ್ತು ಕೊಡಿಸುತ್ತೇನೆ.” ಇಂದಿನ ನಾಯಕರು ಭಾರತದಲ್ಲಿ ಹೇಳುತ್ತಿರುವ ಮಾತು - "ನನಗೆ  ಓಟು ಕೊಡಿ, ನಾನು ನಿಮ್ಮೆಲ್ಲರನ್ನೂ ನೋಡಿಕೊಳ್ಳುತ್ತೇನೆ." ಓಟು ಕೊಟ್ಟ ನಂತರ ಯಾವ ರೀತಿ ನೋಡಿ ಕೊಳ್ಳುತ್ತಿರುವ ರೆಂಬುದು, ಕನ್ನಡಿಯಲ್ಲಿ ಕಾಣುವಷ್ಟು ಸ್ಪಷ್ಟವಾಗಿದೆ.

Subhas chandra bose (1)

ಆದರೆ ಜನಜಾಗೃತಿ ಆಗಿಲ್ಲ. ಜನದಾಂಧಲೆ, ಹೊಡೆದಾಟ-ಹೋರಾಟ ಅನೀತಿಯ ಮಾರ್ಗದಲ್ಲಿ ಹೆಚ್ಚುತ್ತಿದೆ. ಕೊಲೆ, ಅತ್ಯಾಚಾರಾದಿ ಅತ್ಯಚಾರಗಳೇ ಅಧಿಕಗೊಳ್ಳುತ್ತಿವೆ. ಭಾರತದ ಇಂದಿನ ನಾಯಕರಲ್ಲಿ ಬಹುಮಂದಿ ಆಂತರಿಕವಾಗಿ ನಿಸ್ತೇಜಿತರಾಗಿದ್ದಾರೆ. ಜನರನ್ನು ಮರುಳುಗೊಳಿಸಿ, ತಪ್ಪು ದಾರಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಹಣ-ಹೆಂಡ ಹಂಚುವುದರ ಮೂಲಕ ಬಲಿ ತೆಗೆದುಕೊಳ್ಳುತ್ತಿದ್ದಾರೆ.

ನಾನೇನಾದರೂ ಪ್ರಧಾನಿ ಆದರೆ ಪ್ರಥಮತಃ ಶಿಕ್ಷಣದ ಕಡೆ ಗಮನಹರಿಸುತೇನೆ. ಹಿಂದೆ ರಾಷ್ಟ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಲಭಿಸುತ್ತಿದ್ದ ರಾಷ್ಟ್ರೀಯ ಮನೋಭಾವನೆಗಳು ಮತ್ತೆ ಜಾಗೃತನಾಗಲು ಸೂಕ್ತ ಮಾರ್ಗವನ್ನು ಅನುಷ್ಠಾನಕ್ಕೆ ತರುತ್ತೇನೆ. ಇಷ್ಟಾದರೆ ಸಾಕು, ಇಂದಿನ ಮಕ್ಕಳೇ ಮುಂದಿನ ಜನಾಂಗವೆನಿಸುವಂತಾಗಿ, ದಾರಿ ತಪ್ಪುವ ಅಭಿಭಾವಕರು, ಅಧ್ಯಾಪಕರು ಈರ್ವರನ್ನೂ ತಾವೇ ಸನ್ಮಾರ್ಗದಲ್ಲಿ ಪ್ರವೃತ್ತರೆನಿಸುವಂತೆ ಮಾಡುತ್ತಾರೆ.

ನಹರೂ ಅವರನ್ನು ಮಕ್ಕಳು ಚಾಚು ಅನ್ನುತ್ತಿದ್ದರು. ಗಾಂಧೀಜಿಯನ್ನು ಬಾಪೂ ಎಂದು ಕರೆಯುತ್ತಿದ್ದರು. ಏಕೆ? ಅವರಿಗೆ ಮಕ್ಕಳ ಬಗ್ಗೆ ಇದ್ದ ನಿಷ್ಕಲಂಕ ಪ್ರೀತ್ಯಾದರವೇ ಕಾರಣ. ಅಂತಹ ಪ್ರವೃತ್ತಿ ಇಂದು ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರಜೆಗಳೆಲ್ಲರ ಹೃನ್ಮಂದಿರಗಳಲ್ಲಿಯೂ ತುಂಬುವಂತೆ ಮಾಡುವುದು ಭಾರತದ ಪ್ರಧಾನ ಪ್ರಜೆ ಎನಿಸಿದ. ಪ್ರಧಾನಿಯದೇ ತಾನೇ?

ನಾನೇನಾದರೂ ಪ್ರಧಾನಿ ಆಗುವ ಯೋಗ ಸಂದರೆ ಮೊದಲು ಶಿಕ್ಷಣದ ಕಡೆಗೆ ಗಮನಹರಿಸುವುದರ ಹಿಂದೆಯೇ ಹೃದಯ ನೈರ್ಮಲ್ಯದ ಸುತ್ತಲೂ ಕಿಲುಬು ಕಟ್ಟುತ್ತಿರುವ ಕಲ್ಮಷವನ್ನು ಜನಮನದಲ್ಲಿ ತೊಳೆಯಲು ಯತ್ನಿಸುತ್ತೇನೆ. ನಿರುದ್ಯೋಗ ಸಮಸ್ಯೆ ನಿರ್ಮೂಲವಾಗುವಂತೆ  ಔದ್ಯೋಗಿಕ  ಶಿಕ್ಷಣದ ಕಡೆ ಗಮನ ಹರಿಸುತ್ತೇನೆ. ಮಿಗಿಲಾಗಿ ಮಹಿಳೆಯರಿಗೆ ಯೋಗ್ಯವೆನಿಸುವ  ಸದ್ವಿದ್ಯೆ  ಹಾಗೂ ಸರಿ ರೀತಿಯಲ್ಲಿ ಸ್ವಾತಂತ್ರ್ಯವನ್ನು ಸದ್ವಿನಿಯೋಗಿಸಿ ಕೊಳ್ಳುವ ಕಡೆಗೂ ಆಡಳಿತ ವ್ಯವಸ್ಥೆಯಲ್ಲಿ ಗಮನ ಕೊಡುತ್ತೇನೆ. ದೇಶಕ್ಕೆ ಸುಭಿಕ್ಷತೆ ದೊರೆತಿಲ್ಲ. ಅದು ದೊರೆಯುವಂತಾದರೆ ಬಾಹ್ಯ ಸಮಸ್ಯೆಗಳು ತಾವೇ ತಾವಾಗಿಯೇ ಪರಿಹಾರ ಕಾಣುವುವು.

ಆದ್ದರಿಂದ ನಾನೇನಾದರೂ ಪ್ರಧಾನಿ ಆದರೆ ಜನರನ್ನು ಅಂಕಿ-ಅಂಶಗಳಲ್ಲಿ ವಿದ್ಯಾವಂತರನ್ನಾಗಿ ಮಾಡದೆ, ಭಾವೈಕ್ಯತೆ ಹಾಗೂ ರಾಷ್ಟ್ರೈಕ್ಯತೆಯಲ್ಲಿಯೂ ಸುಶಿಕ್ಷತರೆನಿಸುವಂತೆ ಮಾಡುತ್ತೇನೆ. ಆಗ ಆಡಳಿತ ಸೂತ್ರದ ಬಿಗಿ ಸರಿಬರುವುದು. ಅಲ್ಲಿಯವರೆಗೂ ಸೂತ್ರವನ್ನು ಪ್ರಧಾನಿ ಹಿಡಿದೆಳೆದಾಗ "ಎತ್ತು ಏರಿಗಳೆದರೆ ಕೋಣ ನೀರಿಗೆಳೆಯಿತು” ಎಂದಂತೆಯೇ ಆಗುವುದೆಂಬುದನ್ನು ನೀವೂ ಒಪ್ಪುವಿರಲ್ಲವೇ?

ಪ್ರಸ್ತುತ ಪರಿಸ್ಥಿತಿಗಳನ್ನು ಗಮನಿಸಿದರೆ ನಾನೇನಾದರೂ ಈ ದೇಶದ ಪ್ರಧಾನಿಯಾದರೆ ಈಗಿರುವ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರಂತೆ ಕಾರ್ಯ ನಿರ್ವಹಿಸಲು ಪ್ರಯತ್ನಿಸುತ್ತೇನೆ.

Narendra modi

ನರೇಂದ್ರ ಮೋದಿಯವರು ಅಧಾಕಾರಕ್ಕೆ ಬಂದ ನಂತರ ದೇಶದ ಒಳಗೆ ಹಾಗೂ ಹೊರಗೆ ಇರುವ ಸಮಸ್ಯೆಗಳನ್ನು ಅನೇಕ ರೀತಿಯಲ್ಲಿ ಬಗೆಹರಿಸಿದ್ದಾರೆ. ಇತರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ, ಲಂಚಗುಳಿತನ, ಕಪ್ಪು ಹಣ, ಹೀಗೆ ಅನೇಕ ಸಮಸ್ಯೆಗಳು ಬಗೆಹರಿದಿವೆ.  ಮತ್ತು ಅವರು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಅದೇ ರೀತಿ  ನಾನೇನಾದರೂ ಪ್ರಧಾನಿಯಾದರೆ ನಾನು ಸಹ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ದೇಶವನ್ನು ಅಭಿವೃದ್ಧಿ ಪಡಿಸುವ ಹಾದಿಯಲ್ಲಿ ನಡೆಯುತ್ತೇನೆ. ಈ ದೇಶದ ಪ್ರಧಾನಿಯಾಗಿ ಈ ದೇಶವನ್ನು ಉದ್ದಾರ ಮಾಡಬೇಕೆಂಬುದು ನನ್ನ ಬಹುದಿನದ ಆಶಯವಾಗಿದೆ.

ReplyForward