ಸದಸ್ಯ:1810281v
ಗೋಚರ
ನನ್ನ ಪರಿಚಯ: ನನ್ನ ಹೆಸರು 'ಭಾವನ' ನಾನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲಿರುವ ನಮ್ಮ ಅಜ್ಜಿಯ ಮನೆಯಲ್ಲಿ ಜೂನ್ 18 2000 ದಲ್ಲಿ ಜನಿಸಿದೆನು.ನನ್ನ ತಾಯಿ ವಿ.ಅನಿತ,ತಂದೆ ಎಸ್.ಎಚ್.ನಾರಾಯಣಮೂರ್ತಿ,ನನ್ನ ತಂಗಿಯ ಹೆಸರು ಮೇಘನ.ನನ್ನ ತಂದೆ ಕೋಲಾರ ಪತ್ರಿಕೆಯ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನನ್ನ ನಾಮಕರಣದ ಕೆಲವು ದಿನಗಳ ನಂತರ ನನ್ನನ್ನು 'ವೆನ್ನೆಲ' ಎಂಬ ಹೆಸರಿನಿಂದ ಕರೆಯಲಾರಂಭಿಸಿದರು.ಇಂದಿಗೂ ಅದೇ ಹೆಸರಿನಿಂದ ಕರೆಯುತ್ತಿದ್ದಾರೆ,ಅದೇ ಹೆಸರು ಚಾಲ್ತಿಯಿಲ್ಲಿದೆ.
ವಿದ್ಯಾಭ್ಯಾಸ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿವೇಕಾನಂದ ಶಾಲೆಯಲ್ಲಿ ನಾನು 4 ವರ್ಷ ಮಗುವಿದ್ದಾಗ ನನ್ನ ವಿದ್ಯಾಭ್ಯಸ ಪ್ರಾರಂಭವಾಯಿತು.ನಂತರ ಎಲ್.ಕೆ.ಜಿ ಯಿಂದ 1 ನೇ ತರಗತಿಯವರೆಗೆ ಇದೇ ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ಸಪ್ತಗಿರಿ ಶಾಲೆಯಲ್ಲಿ ಓದಿದೆನು.ನನಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಇದೇ ಶ್ರೀನಿವಾಸಪುರದಲ್ಲಿ ಹೆಸರು ಗಳಿಸಿರುವ ಸಂಸ್ಥೆಗಳಲ್ಲಿ ಒಂದಾದ ಎಸ್.ಎಫ್.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇರಿಸಲು ನನ್ನ ತಂದೆ ತಾಯಿ ನಿಶ್ಚಯಿಸಿದರು.ಆದರೆ ಅಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಆಂಗ್ಲ ಭಾಷ ಬಾರದ ಕಾರಣದಿಂದಾಗಿ ಉತ್ತೀರ್ಣವಾಗಲಿಲ್ಲ.ಕೊನೆಯ ಪಕ್ಷದಲ್ಲಿ ಆ ದೇವರ ಕೃಪೆಯಿಂದ ನಮಗೆ ತಿಳಿದಿರುವ ಶಿಕ್ಷಕಿಯ ಸಹಾಯದಿಂದ ಇದೇ ಎಸ್.ಎಫ್.ಎಸ್ ಶಾಲೆಗೆ ಸೇರಲು ಅನುಕೂಲವಾಯಿತು.ನಾನು ಶಾಲೆಗೆ ಸೇರಿದ ಮೊದಲಿನಲ್ಲಿ ನನ್ನ ಸಹಪಾಠಿಗಳು ಆಂಗ್ಲಭಾಷೆಯಲ್ಲಿ ಮಾತನಾಡುತ್ತಿರುವ ಕಾರಣದಿಂದಾಗಿ ಅವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು.ನಮ್ಮ ಶಾಲೆಯ ಬಗ್ಗೆ ಹೇಳುವುದಾದರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಹಾಗೆಯೇ ನನಗೆ ಶಾಲೆಯಲ್ಲಿ ಹೊಂದಿಕೊಳ್ಳುವುದು ಕಷ್ಟವಾದರೂ ನಾಲ್ಕನೇ ತರಗತಿಯಲ್ಲಿ ಶೇ.97% ನೊಂದಿಗೆ ಗಳಿಸಿದೆನು.ಆದರೆ ಅನಾರೋಗ್ಯದ ಕಾರಣಗಳಿಂದಾಗಿ 5ನೇ ತರಗತಿಯಲ್ಲಿ ನನ್ನ ಅಂಕಗಳು ಕಡಿಮೆಯಾಗಿತ್ತು, ನಂತರ ಆ ದೇವರ ಕೃಪೆಯಿಂದ ನನ್ನ ಆರೋಗ್ಯ ಚೇತರಿಸಿಕೊಂಡು 5ನೇ ತರಗತಿಯಲ್ಲಿ ಶೇ.93% ನೊಂದಿಗೆ ಉತ್ತೀರ್ಣನದೆನು.ಅಲ್ಲದೆ ಯೇಸುವಿನ ನಾಟಕದಲ್ಲಿ ಭಾಗವಹಿಸಿದೆನು.ನಾನು 6ನೇ ತರಗತಿಯನ್ನು ಓದುತ್ತಿರುವಾಗ ನನ್ನ ಗೆಳತಿಯಾದ ಮಾಲತಿ ಸಹಾಯದಿಂದ ಶೇ.99% ಅಂಕಗಳು ಪಡೆದನು.ಈ ಮೂಲಕ ನಾನು ಹೇಳುವುದೆಂದರೆ ಅವಳು ನನಗೆ ಓದಲು ಮಾಢಿರುವ ಸಹಾಯವನ್ನು ನಾನು ಮರೆಯುವುದಿಲ್ಲ.7ನೇ ತರಗತಿಯಿಂದ ನಾನು ನಮ್ಮ ಶಾಲೆಯ ಪ್ರಾರ್ಥನಾ ಗುಂಪಿನಲ್ಲಿದ್ದೆನು.ಎಲ್ಲಾ ಶಾಲೆಯ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರೋತ್ಸಾಹಿಸಲು ಸರ್ಕಾರಿ ಏರ್ಪಡಿಸುವ ಪ್ರತಿಭಾ ಕಾರಂಜಿಯಲ್ಲಿ ಭಗವದ್ಗೀತೆಯಲ್ಲಿ ಭಾಗವಹಿಸಿದೆನು. ಅಲ್ಲದೆ ನಮ್ಮ ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳಲ್ಲಿ ದೇಶ ಭಕ್ತಿಗೀತೆಗಳಲ್ಲಿ ಭಾಗವಹಿಸುತ್ತಿದ್ದೆ.ಈ ರೀತಿಯಾಗಿ 2016ರಲ್ಲಿ ಹತ್ತನೇ ತರಗತಿಯಲ್ಲಿ ಶೇ.91% ನೊಂದಿಗೆ ಉತ್ತೀರ್ಣಳಾದೆನು.ಒಟ್ಟಿನಲ್ಲಿ ನನ್ನ ಜೀವನದಲ್ಲಿ ಕ್ರಮ ಶಿಕ್ಷಣವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿ ಗಳಿಸಲು ನಾನು ಶಾಲೆಯಲ್ಲಿ ಕಲಿತ ಮೌಲ್ಯಗಳು,ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ನನ್ನ ಶಾಲೆಯೇ ಕಾರಣ. ಈ ಶಾಲೆಯಲ್ಲಿ ಕಳೆದ ದಿನಗಳನ್ನು ನನಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಂತರ 2016ರಲ್ಲಿ ನನ್ನ ಪೋಷಕರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಇದೇ ಶ್ರೀನಿವಾಸಪುರದಲ್ಲಿರುವ ಕಡಿಮೆ ಶುಲ್ಕದೊಂದಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿಗೆ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ ದಾಖಲು ಮಾಡಿದರು.ನಂತರ ಈ ಕಾಲೇಜಿನಲ್ಲಿ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ನನ್ನ ಗೆಳತಿಯಾದ ಪಲ್ಲವಿ ಜೊತೆಗೂಡಿ ಭಾಗವಸಹಿದೆನು.ಆ ಕಾಲೇಜಿನಲ್ಲಿ ನನ್ನ ಸಹಪಾಠಿಗಳೊಂದಿಗೆ ಹೊಂದಿಕೊಳ್ಳಲು ಒಂದು ವರ್ಷವೇ ಆಯಿತು.ಆದರೆ ದ್ವಿತೀಯ ಪಿಯುಸಿಯಲ್ಲಿ ನನ್ನು ತರಗತಿ ನಾಯಕಿಯಾಗಿ ಕಾರ್ಯನಿರ್ವಹಿಸಿದೆನು. ಆಗ ನನಗೆ ಎಲ್ಲರ ಪರಿಚಯವಾಯಿತು.2018ರಲ್ಲಿ ನನ್ನ ಪ್ರಥಮ ಪಿಯುಸಿಯನ್ನು ಮುಗಿಸಿಕೊಂಡು ದ್ವಿತೀಯ ಪಿಯುಸಿಯನ್ನು ಇದೇ ಕಾಲೇಜಿನಲ್ಲಿ ಮುಂದುವರೆಸಿದೆನು. ಆಗ ದ್ವಿತೀಯ ಪಿಯುಸಿಯಲ್ಲಿ ನಮ್ಮ ಜೀವನದ ಮುಂದಿನ ಗುರಿಗಳ ಬಗ್ಗೆ, ವ್ಯಕ್ತಿತ್ವ ವಿಕಸನದ ಬಗ್ಗೆ,ಹಾಗೂ ಪೋಷಕರ ಮತ್ತು ಉಪನ್ಯಾಸಕರ ಮಹತ್ವ, ಹಾಗೂ ಯಾವುದಾದರೂ ಕೆಲಸದ ನಿಮಿತ್ತ ಸಂದರ್ಶನಕ್ಕೆ ಹೋಗಬೇಕಾದರೆ ಬೇಕಾಗಿರುವ ಕಮ್ಯೂನಿಕೇಷನ್ ಸ್ಕಿಲ್ಸ್ ಬಗ್ಗೆ ಹೀಗೆ ಎಲ್ಲಾ ರೀತಿಯಲ್ಲಿಯೂ ಸಹ ಈ ಕಾಲೇಜಿನ ಆಡಳಿತ ಮಂಡಳಿಯಿಂದ ಹಿಡಿದು ಉಪನ್ಯಾಸಕರೆಲ್ಲರೂ ಸಹ ನಮ್ಮ ಶಿಕ್ಷಣಕ್ಕೆ ಮತ್ತು ಜೀವನಕ್ಕೆ ಬೇಕಾಗಿರುವ ಎಲ್ಲ ರೀತಿಯ ಮೌಲ್ಯಗಳನ್ನು ಕಲಿಸಿರುತ್ತಾರೆ, ಒಳ್ಳೆಯ ಸ್ನೇಹಿತರ ಪರಿಚಯವಾಯಿತು.ವಿಶೇಷವಾಗಿ ಶೋಬಿತ್ ಎಂಬ ಒಳ್ಳೆಯ ಗೆಳೆಯನ ಪರಿಚಯವಾಯಿತು.ಹೀಗೆ ಒಟ್ಟಾರೆಯಾಗಿ ನನ್ನ ಪದವಿ ಪೂರ್ವ ಶಿಕ್ಷಣ 2018ರಲ್ಲಿ ಶೇ.95% ನೊಂದಿಗೆ ಉತ್ತೀರ್ಣನದೆನು.ನನ್ನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರುನ ಹೆಸರಾಂತ ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ ಬಿ.ಕಾಂನ ಮೊದಲನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ಪಡೆದ ಬಹುಮಾನಗಳು:ನಾನು ಮೊದಲನೆ ಬಾರಿ ಸಾಂಸ್ಕೃತಿಕ ಕಾರ್ಯಕ್ರಮವಾದ ಚಿತ್ರಕಲೆಯಲ್ಲಿ ಮೂರನೇ ತರಗತಿಯಲ್ಲಿ ಭಾಗವಹಿಸಿ, ಎರಡನೇ ಸ್ಥಾನ ಪಡೆದುಕೊಂಡೆನು.ನಂತರ 8ನೇ ತರಗತಿಯಿಂದ ಹತ್ತನೆ ತರಗತಿಯವರೆಗೂ ಚಿತ್ರಕಲೆಯಲ್ಲಿ ಮೊದಲನೇ ಸ್ಥಾನ ಪಡೆದಿದ್ದೇನೆ.ನಾನು ಮರೆಯಲಾಗದ ಸಂತೋಷವೇನೆಂದರೆ 9ನೇ ತರಗತಿಯಲ್ಲಿ ನನಗೆ ಚಿತ್ರಕಲೆಯಲ್ಲಿ ಮೊದಲನೆ ಸ್ಥಾನ, ಜನಪದ ಗೀತೆ ಹಾಡುವುದರಲ್ಲಿ 2ನೇ ಸ್ಥಾನ, ಓಟದ ಸ್ಫರ್ಧೆಯಲ್ಲಿ ಮೊದಲನೇ ಸ್ಥಾನ, ಆರ್ಟ್ ಅಂಡ್ ಕ್ರಾಫ್ಟ್ ನಲ್ಲಿ ಎರಡನೇ ಸ್ಥಾನ ಪಡೆದುಕೊಂಡೆನು. ಈ ರೀತಿಯಾಗಿ 9ನೇ ತರಗತಿಯಲ್ಲಿ ಹೆಚ್ಚಿನ ಬಹುಮಾನಗಳನ್ನು ಪಡೆದನು.ಅದೇ ರೀತಿಯಾಗಿ ಹತ್ತನೇ ತರಗತಿಯಲ್ಲಿ ಶಿಕ್ಷಕರ ದಿನಾಚರಣೆಯಂದು ಕಾರ್ಯಕ್ರಮದ ನಿರೂಪಕಿಯಾಗಿ ಆ ಕಾರ್ಯಕ್ರಮವನ್ನು ನನ್ನ ಸ್ನೇಹಿತರಾದ ಶ್ರೀಧರ್ಶನ್, ಪಲ್ಲವಿ, ಕಾರ್ತೀಕ್ ರೊಂದಿಗೆ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು. ನನ್ನ ನಿರೂಪಣೆಯನ್ನು ಮೆಚ್ಚಿ ನಮ್ಮ ಶಾಲೆಯ ಪ್ರಾಂಶುಪಾಲರಾದ ಮೇಜಿಶ್ ರವರು ಶಾಲೆಯ ದಿನಾಚರಣೆಯಂದು ಮತ್ತೊಂದು ಅವಕಾಶ ನೀಡಿದರು.ದ್ವಿತೀಯ ಪಿಯುಸಿಯಲ್ಲಿ ನಾನು ಮರೆಯಲಾಗದ ಕ್ಷಣವೆಂದರೆ ನನ್ನ ಭಾಷಣವನ್ನು ಮೆಚ್ಚಿ ನಮ್ಮ ಉಪನ್ಯಾಸಕರಾದ ಅಶೋಕ್ ರೆಡ್ಡಿ ಸರ್ ರವರು 500 ರೂಗಳನ್ನು ಬಹುಮಾನವಾಗಿ ನೀಡಿದರು.
ಧನ್ಯವಾದಗಳು: ಕೊನೆಯದಾಗಿ ನನ್ನನ್ನು ಹೆತ್ತು ಹೊತ್ತು ಸಾಕಿ ನನ್ನ ಜೀವನದ ಎಲ್ಲಾ ರಂಗದಲ್ಲೂ ಪ್ರೋತ್ಸಾಹಿಸುತ್ತಿರುವ ನನ್ನ ಪೋಷಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.