ಸದಸ್ಯ:1810171saikeerthana
ಬಾಲ್ಯ :-
ನನ್ನ ಹೆಸರು ಸಾಯಿ ಕೀರ್ತನ ಎಂ ಎಸ್ .ನಾನು ಆಂಧ್ರ ಪ್ರದೆಶದ ಅನಂತಪುರ ಜಿಲ್ಲೆಯ ಚಿಲಮತ್ತೂರು ಎಂಬ ಊರಿನಲ್ಲಿ ಡಿಸೆಂಬರ್ ೩೦ ೨೦೦೦ ರಂದು ತಂದೆ ತಾಯಿಗಳಾದ ಎಂಪಿ ಶಿವಶಂಕರ್ ಹಾಗೂ ಬಿಎನ್ ಈಶ್ವರಿ ಅವರಿಗೆ ಹುಟ್ಟಿದ ಏಕೈಕ ಮಗು . ಆ ಸ್ಥಳ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಆಗಿತ್ತು .ನಮ್ಮ ತಂದೆ ಅವರಿಗೆ ಹೆಣ್ಣು ಮಗುವೇ ಬೇಕೆಂಬ ಆಸೆಯ ಪ್ರಕಾರ ನಾನು ಹುಟ್ಟಿದ ಕಾರಣ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು . ನಾನು ಹುಟ್ಟಿದ್ದು ಆಂಧ್ರ ದಲ್ಲಾದರೂ ಬೆಳೆದದ್ದು ಶಿಕ್ಷಣ ಷಣ ಪಡೆದು ಎಲ್ಲ ಬೆಂಗಳೂರು ನಲ್ಲಿ .ನನ್ನನ್ನು ಕನ್ನಡತಿಯಾಗಿ ಬೆಳೆಸಬೇಕೆಂದು ಇಚ್ಛೆ ನನ್ನ ತಂದೆ ತಾಯಿಗಳಿಗೆ ಇತ್ತು . ಮನೆಯಲ್ಲಿ ನಾನು ನನ್ನ ತಂದೆ ತಾಯಿಯರ ಜೊತೆ ತೆಲುಗು ವಿನ ಬದಲು ಕನ್ನಡದಲ್ಲೇ ಮಾತನಾಡುತ್ತಿದದೆ
ವಿದ್ಯಾಭ್ಯಾಸ :-
ನಾನು ಎಲ್ಕೆಜಿಯಿಂದ ಹತ್ತನೇ ತರಗತಿಯವರೆಗೂ ಚಂದಾಪುರ ಲಾರ್ವಿನ್ ಪಬ್ಲಿಕ್ ಶಾಲೆಯಲ್ಲಿ ಓದಿ ಉತ್ತೀರ್ಣ ನಾದೆನು .ಹನ್ನೆರಡು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಓದಿದ್ದರಿಂದ ಆ ವಾತಾವರಣಕ್ಕೆ ತುಂಬಾನೇ ಹೊಂದಿದೆ .ಆ ವಯಸ್ಸಿನಲ್ಲಿ ಪರಿಚಯವಾದ ಗೆಳೆಯ ಗೆಳತಿಯರು ಈಗಿನವರೆಗೆ ನನ್ನ ಜತೆಯಲ್ಲೇ ಕಷ್ಟ ಸುಖಗಳನ್ನು ಹಂಚಿಕೊಂಡು , ಒಬ್ಬರಿಗಾಗಿ ಇನ್ನೊಬ್ಬರು ಸಹಾಯ ಮಾಡಿಕೊಂಡು ಇದ್ದೇವೆ .ನಾನು ಚಿಕ್ಕಂದಿನಿಂದಲೂ ಚೆನ್ನಾಗಿ ಓದುತ್ತಿದ್ದೆ .ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನವನ್ನು ತೋರುತ್ತಾ ಬುದ್ಧಿಶಕ್ತಿಯಿಂದ ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದೆ .ಏಳನೇ ತರಗತಿಯವರೆಗೂ ನಾವೆಲ್ಲರೂ ಒಟ್ಟಾಗಿಯೇ ಇದ್ದೇವು.ನಮ್ಮ ಶಾಲೆಯಲ್ಲಿ ಐಸಿಎಸ್ಇ ಹಾಗೂ ಸ್ಟೇಟ್ ಬೋರ್ಡ್ ಆಗಿ ವಿದ್ಯಾರ್ಥಿಗಳ ಓದುವಿನ ಪ್ರಕಾರ ಎರಡು ಗುಂಪಾಗಿ ಬೇರೆ ಮಾಡಿದರು .ಆದ್ದರಿಂದ ಎಂಟನೇ ತರಗತಿಯಲ್ಲಿ ಬೇರೆ ತರಗತಿಯ ಮಕ್ಕಳು ನಮ್ಮ ತರಗತಿಗೆ ಬಂದು ನಮಗೆ ಹೊಸದಾಗಿ ಸ್ನೇಹಿತರಾದರು .ಅಲ್ಲಿಯವರೆಗೂ ನಾನು ನನ್ನ ಸ್ನೇಹಿತರನ್ನು ಬಿಟ್ಟು ಜಾಸ್ತಿ ಬೇರೆಯವರ ಜೊತೆ ಸೆರುತಿರಲಿಲ.ಎಂಟನೇ ತರಗತಿಯಲ್ಲಿ ನಾನು ನನ್ನ ಸ್ನೇಹಿತರು ಶಿಕ್ಷಕರೊಂದಿಗೆ ಕಳೆದ ಕ್ಷಣವೂ ಬೇರೆ ಯಾವ ತರಗತಿಯಲ್ಲೂ ಹಾಗೆ ಕಳೆಯಲಿಲ.ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಓದಿನಲ್ಲೂ ಹಾಗೆಯೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದೆ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೆ. ನಾನು ನೃತ್ಯದಲ್ಲಿ ಕ್ವಿಜ್ನಲ್ಲಿ ಭಾಗವಹಿಸಿದೆ.ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ನಮ್ಮ ಶಾಲೆಯ ಬ್ಯಾಂಡಿನ ರೂಬಿ ತಂಡದ ಕ್ಯಾಪ್ಟನ್ ಆಗಿದ್ದೆ .ನಂತರ ಒಂಬತ್ತನೇ ತರಗತಿಯ ತುಂಬಾ ಬೇಗ ಹಾಗೂ ಕಷ್ಟಕರವಾಗಿ ಇದ್ದಂತೆ ತೋರಿತು .ನಂತರ ನನ್ನ ಹತ್ತನೇ ತರಗತಿಯನ್ನು ತುಂಬಾ ಜಾಗೃತವಾಗಿ ಓದಲಾರಂಭಿಸಿದೆ ಆ ಕೊನೆಯ ಶಾಲೆಯ ದಿನಗಳನ್ನು ಕೊನೆಯ ಕ್ಷಣಗಳನ್ನು ಅದ್ಭುತವಾಗಿ ಕಳೆದೆವು.ಅವೆಲ್ಲ ನನಗೆ ಸಿಹಿ ನೆನಪುಗಳು .ಹತ್ತನೇ ತರಗತಿಯಲ್ಲಿ ಶೇಕಡಾ ತೊಂಬತ್ತು ಅಂಕಗಳನ್ನು ಪಡೆದೆನು.ನಂತರ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸದ್ಗುರು ಸಾಯಿನಾಥ್ ಪಿಯು ಕಾಲೇಜಿನಲ್ಲಿ ಮುಗಿಸಿದೆ .ಹನ್ನೆರಡು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಓದುತ್ತಿದ್ದ ನಾನು ತಕ್ಷಣ ಪದವಿ ಪೂರ್ವ ಶಿಕ್ಷಣ ಪಡೆಯಲು ಬೇರೆಯ ಕಾಲೇಜಿಗೆ ಹೊಗಬೆಕಯಿತು. ಆ ವಾತಾವರಣ ಬೇರೆಯಾಗಿತ್ತು .ಅಲ್ಲಿ ಕೂಡ ವಿದ್ಯಾರ್ಥಿಗಳೊಂದಿಗೆ ತಕ್ಷಣವೇ ಹೊಂದಿಕೊಂಡು ಹೋಗುವುದು ಕಷ್ಟವಾಯಿತು .ಆದರೂ ಅಲ್ಲಿ ಹೊಸ ಗೆಳತಿಯರು ಬೇಗ ಸಿಕ್ಕಿದ್ದರಿಂದ ಕಾಲೇಜಿನ ಎಲ್ಲ ನಿಯಮಗಳ ಜೊತೆಗೂ ಹೊಂದಿಕೊಂಡು ಹೋದೇನು . ಕಾಲೇಜಿನಲ್ಲಿ ಓದುವುದರಲ್ಲಿ ಮೊದಲಾಗಿದೆ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಇತರ ಕಾರ್ಯಕ್ರಮಗಳಲ್ಲಿ ಭಾಷಣಗಳನ್ನು ಕೊಟ್ಟಿದ್ದೆ . ಕೊನೆಯದಾಗಿ ಶೇಕಡ ತೊಂಬತ್ತೈದು ಅಂಗಗಳನ್ನು ಪಡೆದುಕೊಂಡು ಉತ್ತೀರ್ಣ ನಾದೆನು .ನಂತರ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಂಗೆ ಸೆರಿಕೊ೦ಡೆ. ಚಿಕ್ಕ ವಯಸ್ಸಿನಿಂದಲೂ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದಬೇಕೆಂಬ ಆಸೆ ನನ್ನದಾಗಿತ್ತು ಹಾಗೆಯೇ ನಾನು ಇಲ್ಲಿ ಸೇರಿಕೊಳ್ಳುವ ಅವಕಾಶ ಸಿಕ್ಕಿದ್ದರಿಂದ ಬಹಳ ಸಂತೋಷ ಪಟೆನು .ಹಾಗೂ ನನ್ನ ತಂದೆ ತಾಯಿಯ ಇಚ್ಛೆಯೂ ಅದೇ ಆಗಿತ್ತು .ನಾನು ಕ್ರೀಸ್ ಗೆ ಸೇರುವ ಕಾರಣ ಇದು ಪ್ರಸಿದ್ಧ ಹಾಗೂ ಹೆಸರುವಾಸಿಯಾದ ಕಾಲೇಜು .
ಆಸಕ್ತಿಗಳು :-
ನನ್ನ ಒಳ್ಳೆಯ ಗುಣಗಳು ಏನೆಂದರೆ ಬೇರೆಯವರ ಮಾತನ್ನು ಕೇಳಿಸಿಕೊಳ್ಳುತ್ತೇನೆ ಹಾಗೂ ಗೌರವಿಸುತ್ತೇನೆ ಆದರೆ ನನ್ನ ಬಲಹೀನ ಎಂದರೆ ಕೆಲವೊಮ್ಮೆ ಮಾತನಾಡಲು ಹಿನಜರಿಯುತೆನೆ. ಮಾತನ್ನು ಆಡಬೇಕೆಂದು ಇದ್ದರೂ ಸ್ವಲ್ಪ ಭಯ ಪಡುತೆನೆ. ಇನ್ನು ಮುಂದೆ ಆದರೂ ಎಲ್ಲದರಲ್ಲೂ ಭಾಗವಹಿಸಿ ಅದರಿಂದ ಸಾಕಷ್ಟು ಕಲಿಯಬೇಕೆಂದು ಆಶಿಸುತ್ತೇನೆ . ಜೀವನದಲ್ಲಿ ಏನಾದರೂ ಸಾಧಿಸಿ ಮುಂದುವರಿಯಬೇಕೆಂದು ಕೊರುತೆನೆ.