ಸದಸ್ಯ:1810163KavyaSR
{{Infobox user
| abovecolor =
| color =
| fontcolor =
| abovefontcolor =
| headerfontcolor =
| tablecolor =
| title = <!-- optional, defaults to {{BASEPAGENAME}} -->
| status = | image =
| image_caption = | image_width = 250px | name = ಕಾವ್ಯ | birthname = | real_name = | gender = | languages = | birthdate =೨೮ - ೦೭ - ೨೦೦೦ | birthplace = ಬೆಂಗಳೂರು | location = | country = | nationality = | ethnicity = | occupation = | employer = | education = | primaryschool = | intschool = | highschool = ಚರಣ್ಸ್ ಪಬ್ಲಿಕ್ ಸ್ಕೂಲ್ | university =ಕ್ರ್ಯೈಸ್ಟ್ ಯುನಿವರ್ಸಿಟಿ | college = | hobbies = ನೃತ್ಯ | religion = | politics = | movies = | books = | interests =
| email =
| irc =
| facebook =
| twitter =
| joined_date =
| first_edit =
| userboxes =
}}
ವೈಯಕ್ತಿಕ ಜೀವನ
ಹುಟ್ಟು ಮತ್ತು ಬಾಲ್ಯ
ನನ್ನ ಹೆಸರು ಕಾವ್ಯ. ನಾನು ಬೆಂಗಳೂರು ಜಿಲ್ಲೆಯ ಹಲಸೂರು ತಾಲೂಕಿನ ಫಿಲೋಮಿನಾಸ್ ವೆಂಬ ಪ್ರಸಿದ್ಧ ಆಸ್ಪತ್ರೆಯಲ್ಲಿ ೨೮-೦೭-೨೦೦೦ ರಂದು ತಂದೆ -ತಾಯಿಗಳಾದ ರಾಜೇಂದ್ರ ಕುಮಾರ್ ಮಾತು ಆಲಿಸ್ ಮಾಲಿನಿರವರಿಗೆ ಹುಟ್ಟಿದ ಎರಡನೇ ಮಗು.ತಂದೆ ದರ್ಜಿ ಕೆಲಸ ಮಾಡುತ್ತಿದಾರೆ ಹಾಗು ತಾಯಿ ಗೃಹಿಣಿ. ಹೆಣ್ಣು ಮಗುವಾಗಿದ್ದರಿಂದ ತುಂಬಾನೇ ಖುಷಿಯಿಂದ ಮನೆಯವರೆಲ್ಲ ಸಂಭ್ರಮಿಸಿದರು.ತಂದೆ ಮತ್ತು ತಾಯಿ ಇಬ್ಬರ ಪೋಷಕರ ಮನೆಯೂ ಬೆಂಗಳುರಿನಲ್ಲೆ ಇದ್ದುದರಿಂದ ಇಡೀ ಬಾಲ್ಯವನ್ನು ಅಲ್ಲೆ ಕಳೆದೆ.ನನ್ನ ಅಣ್ಣನ ಜೋತೆಯಲ್ಲಿ ಮಾತ್ರ ಆಟ ಆಡುತ್ತ ಎಲ್ಲೂ ಹೊರಗಡೆ ಹೊಗದೆ ಸಮಯ ಕಳೆಯಿತ್ತು.
ವಿಧ್ಯಾಭ್ಯಾಸ
ನಾನು ಚಿಕ್ಕಂದಿನಿಂದ ನನ್ನ ಹತ್ತನೇಯ ತರಗತಿಯವರೆಗೂ -ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಎಲ್ಲವನ್ನು ಕೇಂಬ್ರಿಜ್ ರಸ್ತೆಯ ಚರಣ್ಸ್ ಪಬ್ಲಿಕ್ ಶಾಲೆಯಲ್ಲಿ ಪೂರ್ಣಗೊಳಿಸಿದೆ. ಹದಿಮೂರು ವರ್ಷಗಳ ಕಾಲ ಒಂದೇ ವಾತಾವರಣಕ್ಕೆ ತುಂಬಾನೇ ಹೊಂದಿಕೊಂಡಿದ್ದೆ, ಆ ವಯಸ್ಸಿನಲ್ಲಿ ಪರಿಚಯರಾದ ಸ್ನೇಹಿತರು ಈಗಿನವರೆಗೂ ನನ್ನ ಜೊತೆಯಲ್ಲಿ ಕಷ್ಟ ಸುಖಗಳನ್ನು ಹಂಚಿಕೊಂಡು ಒಬ್ಬರಿಗಾಗಿ ಇನ್ನೊಬರು ಸಹಾಯ ಮಾಡಿಕೊಂಡು ಇದ್ದೀವಿ. ಅಲ್ಲಿಂದ ಪದವಿಪೂರ್ವ ಶಿಕ್ಷಣಕ್ಕಾಗಿ ಕ್ರೈಸ್ಟ್ ಕಾಲೇಜ್ ಸೇರಿಕೊಂಡೆ. ಅಲ್ಲಿರುವ ಶಿಕ್ಷಕರು ತುಂಬಾನೇ ಪ್ರೋತ್ಸಾಹಿಸುತಿದ್ದರು. ಹಲವಾರು ಸ್ಪರ್ಧೆಗಳಲ್ಲಿ- ನಾಟಕ, ನೃತ್ಯ,ಸಂಗೀತ ಮುಂತಾದವುದಲ್ಲಿ ಭಾಗವಹಿಸುತಿದ್ದೆ. ಮೊದಲ ವರ್ಷ ಈ ಹೊಸ ಕಾಲೇಜು ಹಾಗು ಅಲ್ಲಿನ ವಾತಾವರಣಕ್ಕೆ ತುಂಬಾನೇ ಹೊಂದಿಕೊಳ್ಲಲು ತುಂಬ ಕಷ್ಟ ಪಡುತ್ತಿದೆ, ಕಡಿಮೆ ವಿದ್ಯಾರ್ಥಿಯ ಸಂಖ್ಯೆಯಿರುವ ಶಾಲೆಯಲ್ಲಿ ಒದ್ದಿದ್ದರಿಂದ ಥಟ್ಟನೆ ಅಷ್ಟು ಸಾವಿರ ವಿದ್ಯಾರ್ಥಿಗಳನ್ನು ಒಂದೇ ಸಲ ಕಂಡಾಗ, ಹೇಗೆ ಅವರ ಜೊತೆ ಹೊಂದಿಕೊಳ್ಳುತ್ತೇನೆವೆಂಬ ಭಯ ಶುರುವಾಗತೊಡಗಿತು. ಮೆಲ್ಲನೆ ಅವರ ಜೊತೆಯಲ್ಲಿ ಬೆರೆತುಹೋದೆ.ಒಳ್ಳೆಯ ಸ್ನೇಹಿತರ ಪರಿಚಯವಾಯಿತು. ಸಂತಸದಿಂದ ಅದ್ಭುತವಾದ ಕ್ಷಣಗಳನ್ನು ಕಳೆದೆ. ನನಗೆ ನೃತ್ಯದಲ್ಲಿದ್ದ ಆಸಕ್ತಿಯನ್ನು ಹೊರತರಲು ತುಂಬಾನೇ ಸಹಾಯ ಮಾಡಿದರು. ಡಿಗ್ರೀಗಾಗಿ ಕ್ರೈಸ್ಟ್ ಯೂನಿವರ್ಸಿಟಿ ಸೇರಬೇಕೆಂಬ ಆಸೆಯಿಂದಾನೆ ಇನ್ನು ಕಷ್ಟಪಟ್ಟು ಓದಿದ್ದೆ. ಪರೀಕ್ಷೆಯ ಭಯ ಹಾಗು ತೀವ್ರತೆಯ ಕೂಡ ಕಾಣತೊಡಗಿತು,ಹಾಗ ಸ್ನೇಹಿತರೆಲ್ಲರು ಒಟ್ಟಿಗೆ ಕೂತು ಓದಿ ಉತ್ತಮ ಫಲತಾಂಶವನ್ನು ಪಡೆದೆವು.ಓದಿನಲ್ಲಿ ಮಾತ್ರವಲ್ಲದೆ ತಮ್ಮಲ್ಲಿದ್ದ ಸಾಮರ್ಥ್ಯವನ್ನು ಕೂಡ ಹೊರತಂದ ದಿನಗಳವು. ಆಸೆಯಂತೆಯೇ ಡಿಗ್ರೀಗಾಗಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲೇ ಸೇರಿದ್ದು ಖುಷಿಯಾಯಿತು. ಸಿ.ಏ. ಪರೀಕ್ಷೆಗಳನ್ನು ಬರೆದಿದ್ದೆ, ಮೊದಲ ಹಂತವನ್ನು ಮುಗಿಸಿದ್ದೆ.
ಆಸಕ್ತಿ ಹಾಗು ಮುಂದಿನ ಜೀವನ
ಡಿಗ್ರೀಯ ಜತೆ ಜೊತೆಯಲ್ಲೇ ಸಿ. ಏ ಹಾಗು ನೃತ್ಯದಲ್ಲಿ ಸಾಧಿಸಬೇಕೆಂಬ ಪ್ರಯತ್ನವನ್ನು ಕೂಡ ಮಾಡುತಿದ್ದೇನೆ. ಕಾಲೇಜಲ್ಲಿ ಹೆಚ್ಚು ಸಮಯವನ್ನು ಕಳೆದು ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುತಿದ್ದೇನೆ. ಬಹಳಷ್ಟು ಅವಕಾಶಗಳಿಂದ ಕೊಂಚ ಕೊಂಚವೇ ಲೋಕದ ಜ್ಞಾನವನ್ನು ತಿಳಿಯುತ್ತಾ ,ಅನುಭವಿಸುತಾಯಿದ್ದೀನಿ. ಮುಂದೆ ಜೀವನದಲ್ಲಿ ಸಾಧಿಸಲೇಬೇಕೆಂಬ ಛಲ ಹಾಗು ಹಠದಿಂದ ಸಾಧ್ಯವಾದಷ್ಟು ಎಲ್ಲಾ ವಿಭಾಗದಲ್ಲೂ ಏಕಾಗ್ರತೆಯಿಂದ ಮುನ್ನುಗುತಿದ್ದೇನೆ. ಜೀವನದಲ್ಲಿ ನನ್ನ ತಂದೆ - ತಾಯಿಗೆ ಒಳ್ಳೆಯ ಹೆಸರು ತಂದುಕೊಡುವುಧು ಹಾಗು ನನ್ನದೇ ಆದ ಒಂದು ನೃತ್ಯ ಶಾಲೆಯನ್ನು ತೆರೆಯುವುದು - ಇವೆರಡು ನನ್ನ ಜೀವನದ ದೊಡ್ಡ ಗುರಿ ಹಾಗೂ ಕನಸಾಗಿವೆ.