ಸದಸ್ಯ:1810161jyothikadeepashree
ಜ್ಯೋತಿಕಾ ದೀಪ ಶ್ರೀ | |
---|---|
Born | 20/02/2001 ಪದ್ಮನಾಭನಗರ, ಬೆಂಗಳೂರು, ಭಾರತ. |
Education | ಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ. |
Parent(s) | ಶಂಕರ್, ಹೇಮಲತಾ |
ಜನನ
ನನ್ನ ಹೆಸರು ಜ್ಯೋತಿಕಾ ದೀಪಾಶ್ರೀ.ನಾನು ಎರಡು ಸಾವಿರದ ಒಂದು ಫೆಬ್ರವರಿ ಇಪ್ಪತ್ತನೆ ತಾರೀಕಿನಂದು ಬೆಂಗಳೂರುನಲ್ಲಿ ಜನಿಸಿದೆನು.ತಂದೆ ಶಂಕರ್, ತಾಯಿ ಹೇಮಲತಾ.ವಿದ್ಯಾವಂತ ಅಜ್ಜ ,ಅಜ್ಜಿ ,ದೊಡ್ಡಪ್ಪ ,ದೊಡ್ಡಮ್ಮ, ಚಿಕ್ಕಪ್ಪ ,ಚಿಕ್ಕಮ್ಮ, ಅಕ್ಕಂದಿರು ,ಅಣ್ಣಂದಿರು ಒಳಗೊಂಡಂಥಾ ತುಂಬು ಕುಟುಂಬದಲ್ಲಿ ನನ್ನ ಬಾಲ್ಯ ಪ್ರಾರಂಭವಾಯಿತು .ಎರಡು ವರ್ಷದ ನಂತರ ನನ್ನ ಜೀವನದಲ್ಲಿ ತಮ್ಮನ ಆಗಮನ ಆಯಿತು.ವಿಶೇಷವಾದ ಮಗುವಾದ ಕಾರಣ ತಂದೆ ತಾಯಿ ಹೆಚ್ಚಿನ ಗಮನವನ್ನು ಆ ಕಡೆ ಹರಿಸಬೇಕಾಯಿತು.ಆದ ಕಾರಣ ನಾನು ನನ್ನ ಅಜ್ಜಿಯ(ತಾಯಿಯ ತಾಯಿ) ಮನೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಬೇಕಾಯಿತು.
ವ್ಯಾಸಂಗ
ನಾನು ಜ್ಞಾನ ವಿಜ್ಞಾನ ವಿದ್ಯಾಪೀಠ ಎಂಬ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ವ್ಯಾಸಂಗ ಮಾಡಿದೆನು.
ಒಮ್ಮೆ ಯುಕೆಜಿಯಲ್ಲಿ ಓದುತ್ತಿರುವಾಗ ನಡೆದಂಥ ಘಟನೆ ಈಗಲೂ ನೆನಪಿರುವ ಹಾಗೆ ಅಂದು ಶುಕ್ರವಾರದಂದು ನೂರಾರು ಜನರ ಮುಂದೆ ಹೇಳಿದಂತ ಪದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಪ್ರಶಂಸೆ ಗಿಟ್ಟಿಸಿಕೊಂಡ ಸವಿ ನೆನಪು ಇನ್ನೂ ಹಚ್ಚ ಹಸಿರಾಗಿದೆ .ನಾನು ಓದುವುದರ ಜೊತೆಗೆ ಕ್ರೀಡಾ ಸ್ಪರ್ಧೆಗಳಲ್ಲಿ ಮೊದಲಿಗಳಾಗಿ ಇರುತ್ತಿದ್ದೆ .ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿರಬೇಕಾದರೆ ಅಂತಹ ಒಂದು ಕ್ರೀಡಾ ಸ್ಪರ್ಧೆ ಭಾಗವಹಿಸಲು ಅಭ್ಯಾಸ ಮಾಡುತ್ತಿದ್ದೆ ಆಗ ಆಕಸ್ಮಿಕವಾಗಿ ಬಿದ್ದು ನನ್ನ ಬಲಗೈ ಮುರಿದುಕೊಂಡೆ .ಆ ಘಟನೆ ನಡೆದಾಗ ನನ್ನ ಪೋಷಕರು, ಶಿಕ್ಷಕರು ಮುಖ್ಯವಾಗಿ ನನ್ನ ಗೆಳೆಯರು ತುಂಬಾ ಕಾಳಜಿಯಿಂದ ನನ್ನ ಎಲ್ಲ ಕೆಲಸಗಳಿಗೂ ಸಹಕಾರ ನೀಡಿದ್ದು ಇವತ್ತಿಗೂ ಅವಿಸ್ಮರಣೀಯ. ನನ್ನ ಪ್ರಾಥಮಿಕ ಜೀವನದ ನೆನಪಿನ ಬುತ್ತಿಯಲ್ಲಿ ಈ ಎರಡು ಘಟನೆಗಳು ಚಿರಸ್ಮರಣೀಯ.
ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಬೆಂಗಳೂರು ನಗರದಿಂದ ಬೆಂಗಳೂರು ಗ್ರಾಮಾಂತರದಲ್ಲಿ ನನ್ನ ಜೀವನ ಬದಲಾಯಿತು ಅಜ್ಜಿ ಅಜ್ಜನ ಮಡಿಲಿನಿಂದ ನನ್ನ ತಂದೆ ತಾಯಿ ಹಾಗೂ ವಿಶೇಷ ಚೇತನನಾದ ನನ್ನ ತಮ್ಮನೊಂದಿಗೆ ಹೊಸ ಬದುಕು ಪ್ರಾರಂಭವಾಯಿತು .ನಾವಿಬ್ಬರೂ ಒಟ್ಟಿಗೆ ನಜರತ್ ಎಂಬ ಶಾಲೆಯಲ್ಲಿ ಓದಿದೆವು.ಪ್ರತಿನಿತ್ಯ ಅವನ ವಿಶೇಷಲೆಗೆ ಭೇಟಿ ನೀಡಿ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದ.ವಿಶೇಷ ಮಕ್ಕಳೊಂದಿಗೆ ಹೇಗೆ ಬೆರೆಯಬೇಕು ಎನ್ನುವ ಕಲಿಕೆ ಆ ವಯಸ್ಸಿನಿಂದಲೇ ಶುರುವಾಯಿತು ಇದೊಂದು ನನ್ನ ಜೀವನದ ಮುಖ್ಯ ತಿರುವಿನ ಘಟ್ಟ .
ಪ್ರೌಢಶಾಲೆಯಲ್ಲಿ ನನಗೆ ಹಲವಾರು ಸಿಹಿ ಕಹಿ ನೆನಪುಗಳಿವೆ.ನನ್ನ ಜೀವನದಲ್ಲಿ ಈ ಪ್ರೌಢ ಶಿಕ್ಷಣ ತಳಪಾಯ ಆಯಿತು.ನಾನು ಕ್ರೀಡೆಯಲ್ಲಿ ಮುಂದಿದೆ.ಅದರಲ್ಲೂ ವಾಲಿಬಾಲ್ ನನಗೆ ಅಚ್ಚುಮೆಚ್ಚು,ನಾನು ನನ್ನ ಶಾಲಾ ವಾಲಿಬಾಲ್ ತಂಡಕ್ಕೆ ನಾಯಕಿಯಾಗಿದ್ದೆ ಮತ್ತು ನನ್ನ ಶಾಲೆಯಲ್ಲಿ ಮೊದಲ ಕ್ರೀಡಾ ನಾಯಕಿ (ಸ್ಪೋರ್ಟ್ಸ್ ಮಿನಿಸ್ಟರ್) ಆಗಿ ಆಯ್ಕೆಗೊಂಡಿದ್ದು.ಈಗಲೂ ನನ್ನ ಕಿರಿಯ ವಿದ್ಯಾರ್ಥಿಗಳು ಸಿಕ್ಕಾಗ ನನ್ನ ಹೆಸರಿನ ಬದಲು ಸ್ಪೋರ್ಟ್ ಕ್ಯಾಪ್ಟನ್ ಎಂದೇ ಗುರುತಿಸುತ್ತಾರೆ. ನಾನು ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಾಟಕದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು ಅದು ಮುಖ್ಯ ಪಾತ್ರಧಾರಿಯಾಗಿ. ಆ ನಾಟಕದಲ್ಲಿ ಕಿತ್ತೂರು ಚೆನ್ನಮ್ಮನ ಪಾತ್ರ ವಹಿಸಿದ್ದ ನನ್ನ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ ನನ್ನ ಪ್ರಾಂಶುಪಾಲರು ನನ್ನನ್ನು ಚೆನ್ನಮ್ಮ ಎಂದೇ ಕರೆಯಲು ಪ್ರಾರಂಭಿಸಿದರು . ಹೀಗೆ ನನ್ನ ಶಾಲಾ ಜೀವನ ಮುಂದುವರಿಯಿತು ಹತ್ತನೇ ತರಗತಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕಾದ ಕಾರಣ ಬೇರೆಲ್ಲಾ ಚಟುವಟಿಕೆಗಳಿಗೆ ವಿಶ್ರಾಂತಿ ನೀಡಬೇಕಾಯಿತು .ಒಳ್ಳೆಯ ಅಂಕಗಳೊಂದಿಗೆ ನನ್ನ ಶಾಲಾ ಜೀವನ ಮುಕ್ತಾಯವಾಯಿತು .
ನಂತರ ನನ್ನ ಕಾಲೇಜಿನ ಜೀವನ ಪ್ರಾರಂಭವಾಯಿತು.ನನ್ನ ಪಿಯುಸಿಯನ್ನು ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಎಂಬ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆನು.ಮೊದಮೊದಲು ಶಾಲಾ ದಿನಗಳ ನೆನಪಾಗುತ್ತಿತ್ತು, ಶಾಲಾ ದಿನಗಳೇ ಚೆನ್ನಾಗಿತ್ತು ಆ ದಿನಗಳು ಪುನಃ ಪಡೆಯಲು ಸಾಧ್ಯವಿಲ್ಲ ಎಂದು ಭಾಸವಾಗುತ್ತಿತ್ತು . ನಂತರ ನನ್ನ ಪ್ರೌಢಿಮೆಯ ಬೆಳವಣಿಗೆಯಾಯಿತು ಕಾಲೇಜು ಜೀವನದ ಶೈಲಿಗೆ ಹೊಂದಿಕೊಂಡೆ. ಇಲ್ಲಿ ಹೇಳಿಕೊಳ್ಳಲಾಗದ ಹಲವಾರು ನೆನಪುಗಳು ಉಂಟು,ಮುಖ್ಯವಾಗಿ ನನಗೆ ಇಲ್ಲಿ ಒಳ್ಳೆಯ ಗೆಳೆಯರ ಬಳಗ ಸಿಕ್ಕಿತು.ಹಲವಾರು ನೆನಪುಗಳೊಂದಿಗೆ ನನ್ನ ಪಿಯುನಲ್ಲಿ ಅತಿ ಹೆಚ್ಚು ಅಂಕ(ತೊಂಬತ್ತುಎರಡು ಪರ್ಸೆಂಟ್) ಪಡೆದು ಕಾಲೇಜ್ ಟಾಪರ್ಗಳಲ್ಲಿ ಒಬ್ಬಳಾಗಿದ್ದೇನು.
ಒಳ್ಳೆಯ ಅಂಕ ಪಡೆದ ನಾನು ಕ್ರೈಸ್ಟ್ ಡಿಗ್ರಿ ಕಾಲೇಜಿಗೆ ಸೇರಿದೆ ಇಲ್ಲಿ ಪುನಃ ಬೆಂಗಳೂರು ಗ್ರಾಮಾಂತರದಿಂದ ಬೆಂಗಳೂರು ಬೃಹತ್ ದರ್ಶನವಾಯಿತು .
ಭವಿಷ್ಯದ ಗುರಿ
ನಾನು ಮುಂದೆ ಮಹಿಳಾ ಉದ್ಯಮಿ ಹಾಗಾ ಬೇಕು ಎಂಬುವ ಗುರಿ ಇದೆ. ನನ್ನ ಗುರಿಯನ್ನು ತಲುಪುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ.ಕಲಿಕೆ ಎಂಬ ಮಹಾಸಾಗರದಲ್ಲಿ ಈಜುತ್ತಿರುವೆನು ಸುರಕ್ಷಿತವಾಗಿ ದಡ ಸೇರುವ ಅಚಲ ವಿಶ್ವಾಸವಿದೆ.