ಸದಸ್ಯ:1810157cicilyajencys
ಗೋಚರ
ನನ್ನ ವೈಯಕ್ತಿಕ ಜೀವನ
ಸಿಸಿಲಿಯಾ ಜಾನ್ಸಿ ಎಸ್ | |
---|---|
Born | ೨೦/೦೧/೨೦೦೧ ಚೆಲುವಾಂಬ ಹಾಸ್ಪಿಟಲ್ ಮೈಸೂರು , ಭಾರತ. |
Education | ಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ. |
Parent(s) | ಸಗಾಯರಾಜ್, ಮೇರಿ |
ಹುಟ್ಟು ಮತ್ತು ಬಾಲ್ಯ
ನನ್ನ ಹೆಸರು ಸಿಸಿಲಿಯಾ ಜೆಸ್ಸಿ ನಾನು ೨೦-ಜನವರಿ -೨೦೦೧ ರಂದು ಜನಿಸಿದೆ ನನ್ನ ಜನನ ಮೈಸೂರು ಜಿಲ್ಲೆ ಯ ಜೆಎಸ್ಎಸ್ಟ ಹಾಸ್ಪಿಟಲ್ ನಲ್ಲಿ ಆಯಿತು ನನ್ನ ತಂದೆಯ ಹೆಸರು ಸಗಾಯರಾಜ್ ತಾಯಿಯ ಹೆಸರು ಮೇರಿ ನನ್ನ ಕಿರಿಯ ಸಹೋದರಿಯ ಹೆಸರು ಆನೆಟ್ ಲಿಡಿಯಾ ಅವಳನ್ನು ನಾನು ಮುದ್ದಾಗಿ ಕುಟ್ಟಿ ಬೇಬಿ ಎಂದು ಕರೆಯುತ್ತೇನೆ . ನಾವು ಬೆಂಗಳೂರು ಜಿಲ್ಲೆಯಲ್ಲಿ ವಾಸಿಸುತ್ತಿದ್ದೇವೆ.ನನ್ನ ತಂದೆ ಎಂಬ್ರಾಯಡರಿ ಕೆಲಸ ಮಾಡುತ್ತಿದ್ದರೆ ತಾಯಿ ಗೃಹಿಣಿ ನಾನೊಂದು ಸರಾಸರಿ ಕುಟುಂಬದಲ್ಲಿ ಜನಿಸಿದರೂ ಬಹಳ ಸಂತೋಷವಾಗಿದ್ದೇನೆ ನಾನು ಚೆನ್ನಾಗಿ ಓದಿ ನನ್ನ ಗುರಿ ಮುಟ್ಟಬೇಕೆಂಬ ಛಲದೊಂದಿಗೆ ಬಾಳುತ್ತಿದ್ದೇನೆ .ನನಗೆ ಹೆಚ್ಚು ಜನ ಸ್ನೇಹಿತರಿ ರಲಿಲ್ಲ ಆದರೆ ನನ್ನೊಂದಿಗಿದ್ದ ಆ ನಾಲ್ವರು ನನಗೆ ಬಹಳ ನೆಚ್ಚಿನ ಸ್ನೇಹಿತರಾಗಿದ್ದರು ಅವರು ಯಾರೆಂದರೆ ಫ್ರಾನ್ಸಿನ ಜೋಶ್ವಾ, ಸಂಜಯ್ ಮತ್ತು ಪ್ರಶಾಂತ್. ನಾನು ಮತ್ತು ನನ್ನ ತಾಯಿ ಸ್ನೇಹಿತರಂತೆ ಬೆರೆಯುತ್ತೇವೆ ದಿನವಿಡೀ ನಡೆದ ವಿಷಯಗಳನ್ನು ಚರ್ಚಿಸುತ್ತಾ ,ಮಾತನಾಡುತ್ತಾ ನಾನು ಕಾಲ ಕಳೆಯುತ್ತೇನೆ. ಎಲ್ಲರಿಗಿಂತ ಮಿಗಿಲಾಗಿ ನನಗೆ ನನ್ನ ತಾಯಿಯ ಮೇಲೆ ಅಪಾರವಾದ ಗೌರವ ಹಾಗೂ ಪ್ರೀತಿ
ಶಿಕ್ಷಣ
ನನ್ನ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಪಡೆದಿದ್ದು ರಿಚ್ಚೆಸ್ಟ್ ಬ್ರೈಟ್ ಶಾಲೆಯಲ್ಲ ನಾನು ಬಹಳ ಚುರುಕಾದ ಹುಡುಗಿ ಆಗಿದ್ದರಿಂದ ನಮ್ಮ ಪ್ರಾಂಶುಪಾಲರು ನನ್ನನ್ನು ಎಲ್ಕೆಜಿ ಬೇಡವೆಂದು ಯುಕೆಜಿಗೆ ಸೇರಿಸಿಕೊಂಡರು ನಾನು ಯುಕೆಜಿಯಿಂದ ಹತ್ತನೆಯ ತರಗತಿಯವರೆಗೆ ಯಾರಿಗೂ ಪ್ರಥಮ ಸ್ಥಾನವನ್ನು ಬಿಟ್ಟು ಕೊಡದೆ ನಾನೇ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದೆ ಆದ ಕಾರಣ ನನ್ನ ಶಾಲೆಯಲ್ಲಿದ್ದ ಎಲ್ಲಾ ಶಿಕ್ಷಕರಿಗೂ ಪ್ರಾಂಶುಪಾಲರಿಗೂ ಹಾಗೂ ನಮ್ಮ ಪಿಟಿ ಮಾಸ್ಟರ್ಗೆ ನನ್ನನ್ನು ಕಂಡರೆ ಬಹಳ ಇಷ್ಟ ನಾನು ಟೆಂಟ್ ಎಕ್ಸಾಮ್ನಲ್ಲಿ ಮೈಗ್ರೇನ್ ಪ್ರಾಬ್ಲಂ ನಿಂದ ತುಂಬಾ ಕಷ್ಟಪಟ್ಟೆ ಆದರೂ ನಾನು ಕಷ್ಟಪಟ್ಟು ಓದಿನಾನು ಹತ್ತನೆಯ ತರಗತಿಯಲ್ಲಿ ತೊಂಬತ್ತೈದು ಪರ್ಸೆಂಟ್ ಗಳಿಸಿ ನಮ್ಮ ಶಾಲೆಗೆ ಬಹಳ ಒಳ್ಳೆಯ ಹೆಸರನ್ನು ತಂದು ಕೊಟ್ಟೇನು ಮುಂದೆ ನನ್ನ ಪಿಯು ಶಿಕ್ಷಣವೂ ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ನಡೆಯಿತು ಆ ಕಾಲೇಜಿನಲ್ಲಿ ನಾನು ಬಹಳ ಸ್ನೇಹಿತರನ್ನು ಗಳಿಸಿಕೊಂಡೆನು ಅಲ್ಲಿ ನನ್ನ ಎಕನಾಮಿಕ್ಸ್ ಶಿಕ್ಷಕಿಯಾದ ಅರ್ಪಿತಾ ಮೇಡಂ ನನ್ನ ನೆಚ್ಚಿನ ಶಿಕ್ಷಕಿಯಾಗಿದ್ದರು ನಾನು ಅವರ ನೆಚ್ಚಿನ ವಿದ್ಯಾರ್ಥಿನಿ ಆಗಿದ್ದೇನು ನನ್ನ ದ್ವಿತೀಯ ಹಾಗೂ ಪ್ರಥಮ ಪಿಯುಸಿಯಲ್ಲಿಯೂ ನಾನು ಮೊದಲ ಅಂಕವನ್ನು ಪಡೆದು ನನ್ನ ತಂದೆ ತಾಯಿಯರಿಗೆ ಗೌರವ ಸಲ್ಲಿಸಿದ್ದೇನೆ ನನಗೆ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿಓದಬೇಕೆಂಬುದು ಒಂದು ಕನಸೇ ಆಗಿತ್ತು ಆದ್ದರಿಂದ ನಾನು ನನ್ನ ಬಿಕಾಂ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮುಂದುವರಿಸದೇ ಇದರಲ್ಲಿ ಸ್ವಾರಸ್ಯವೇನೆಂದರೆ ನನ್ನ ಗೆಳತಿಯ ಸಹ ನನ್ನ ಜೊತೆಯಲ್ಲಿಯೇ ಅರ್ಜಿ ಬರೆದು ಹಾಕಿದ್ದಳು ಇಬ್ಬರಿಗೂ ಒಂದೇ ತರಗತಿಯಲ್ಲಿ ಆಸನ ಸಿಕ್ಕಿತ್ತು ಈ ವಿಷಯ ಕೇಳಿದ ಕೂಡಲೇ ಇಬ್ಬರಿಗೂ ಬಹಳ ಸಂತೋಷವಾಯಿತು ಮೊದಲು ಏನು ಮಾಡುತ್ತೇವೆ ಹೊಸ ಕಾಲೇಜು ಎಂದು ಭಯವಾಯಿತು ಕಾಲ ಕಳೆದ ನಂತರ ನಾವು ಅದಕ್ಕೆ ತಕ್ಕಂತೆ ಹೊಂದಿಕೊಂಡು ಹೋದೆವು.ನನಗೆ ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂಬ ಆಸೆಯಿದೆ ನನ್ನ ಈ ಗುರಿಯನ್ನು ಸಾಧಿಸಲು ನಾನು ಬೇಕಾದಷ್ಟು ಪ್ರಯತ್ನಗಳನ್ನ ಪಡುತ್ತಿದ್ದೇನೆ.
ಹವ್ಯಾಸ
ನನಗೆ ಹಾಡುವುದು ಹಾಗೂ ನಟಿಸುವುದೆಂದರೆ ಬಹಳ ಇಷ್ಟ.ನಾನು ಬೆಳಗ್ಗೆ ಆರು ಗಂಟೆಗೆ ಎದ್ದು ದೇವರನ್ನು ಪ್ರಾರ್ಥಿಸಿ ನನ್ನ ದಿನವನ್ನು ತೊಡಗುತ್ತೇನೆ ಆದ ನಂತರ ನಾನು ಕಾಲೇಜಿಗೆ ಹೋಗುತ್ತೇನೆ ಕಾಲೇಜಿನಿಂದ ಬಂದ ನಂತರ ಸ್ವಲ್ಪ ಸಮಯ ಟೀವಿ ನೋಡುತ್ತೇನೆ ನಂತರ ಸ್ವಲ್ಪ ಸಮಯ ಓದುತ್ತೇನೆ. ವಿಲಿಯಂ ಶೇಕ್ಸ್ಪಿಯರ್ರವರು ಬರೆದಿರುವ ಕವನವೆಂದರೆ ನನಗೆ ಬಹಳ ಇಷ್ಟ ಸಮಯವಿರುವಾಗ ನಾನು ಅದನ್ನು ಓದುತ್ತೇನೆ ನನಗೆ ಊಟ ಮಾಡುವುದು ಹಾಗೂ ನಿದ್ರಿಸುವುದೆಂದರೆ ಬಹಳ ಮುಖ್ಯ ಹಾಗೂ ಸಂತೋಷದ ವಿಷಯವಾಗಿತ್ತು ಆದ್ದರಿಂದ ನಾನು ಬಹುಸಮಯ ಅದರಲ್ಲಿಯೇ ಕಳೆಯುತ್ತಿದ್ದೆ. ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹವ್ಯಾಸಗಳನ್ನು ಬದಲಾಯಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ಬದಲಾದಲ್ಲಿ ನಿಮ್ಮ ಭವಿಷ್ಯವೂ ಬದಲಾಗುತ್ತದೆ,ಎಂಬ ಅಬ್ದುಲ್ ಕಲಾಂ ಅವರ ಮಾತನ್ನು ನನ್ನ ಜೀವನದಲ್ಲಿ ನಾನು ಅಳವಡಿಸಿಕೊಂಡು ನಡೆಯುತ್ತಿದ್ದೇನೆ.