ಸದಸ್ಯ:ವರ್ಷಲ್/sandbox
ಗೋಚರ
ಘರ್ಷಣೆ
[ಬದಲಾಯಿಸಿ]ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳ ನಡುವಿನ ಚಲನೆಯನ್ನು ಸದಾ ವಿರೋಧಿಸುವ ಒಂದು ಬಲವೇ ಘರ್ಷಣಾ ಬಲ.
ಪರಸ್ಪರ ಸಂಪರ್ಕದಲ್ಲಿದ್ದು ತೀಡಿಕೊಳ್ಳುವ ಎಲ್ಲ ಮೇಲ್ಮೈಗಳು ಘರ್ಷಣೆಯನ್ನು ಅನುಭವಿಸುತ್ತವೆ.ಎಷ್ಟೇ ನಯವಾದ ಮೇಲ್ಮೈಗಳಾದರೂ ಸೂಕ್ಷದರ್ಶಕದ ಮೂಲಕ ವೀಕ್ಷಿಸಿದಾಗ ಅವುಗಳ ಅನಿಯತ ರಚನೆಗಳು ಕಂಡುಬರುತ್ತವೆ.ಆದ್ದರಿಂದ ಒಂದು ಕಾಯವನ್ನು ಮತ್ತೊಂದರ ಮೇಲೆ ಇಟ್ಟಾಗ ಅವುಗಳ ಮೇಲ್ಮೈಗಳ ಅನಿಯತ ರಚನೆಗಳು ಪರಸ್ಪರ ಅಂತರ್ಬಂಧಕ್ಕೆ ಒಳಪಡುತ್ತವೆ.
ಒಂದು ಕಾಯವು ಮತ್ತೊಂದು ಕಾಯದ ಮೇಲೆ ಜಾರುವಂತೆ ಬಲ ಪ್ರಯೋಗಿಸಿದಾಗ ಅವುಗಳ ಮೇಲ್ಮೈನ ಅನಿಯತ ಚಲನೆಗಳು ನಡುವಿನ ಅಂತರಾನ್ವಿಕ ಅಂತರ್ ಕ್ರಿಯೆಯು ಜಾರುವಿಕೆಯನ್ನು ನಿರ್ಬಂಧಿಸುತ್ತದೆ.ಪ್ರಯೋಗಿಸಿದ ಬಲಕ್ಕೆ ವಿರುದ್ದವಾದ ಈ ನಿರ್ಬಂಧ ಘರ್ಷಣೆಯ ರೂಪದಲ್ಲಿ ಕಂಡುಬರುತ್ತದೆ.
ಘರ್ಷಣಾ ಬಲದ ಅಳತೆ
[ಬದಲಾಯಿಸಿ]ಘರ್ಷಣಾ ಬಲವನ್ನು ಸ್ಟ್ರಿಂಗ್ ತ್ರಾಸಿನ ಮೂಲಕ ಅಳೆಯುವರು.
ಘರ್ಷಣೆಯ ಮೇಲೆ ಪ್ರಭಾವ ಬೀರುವ ಅಂಶಗಳು
[ಬದಲಾಯಿಸಿ]- ಘರ್ಷಣಾ ಬಲವು ಕಾಯಗಳ ಅಂತರಾನ್ವಿಕ ಅಂತರ್ ಕ್ರಿಯೆಯಿಂದ ಉಂಟಾಗುತ್ತದೆ.
- ಘರ್ಷಣಾ ಬಲವು ಸಂಪರ್ಕದಲ್ಲಿರುವ ಮೇಲ್ಮೈಗಳ ಸಾಪೇಕ್ಷ ಚಲನೆಯನ್ನು ಪ್ರತಿರೋಧಿಸುತ್ತದೆ.
- ಘರ್ಷಣಾ ಬಲದ ಪ್ರಮಾಣವು ಎರಡು ಮೇಲ್ಮೈಗಳು ಎಷ್ಟು ಬಲವಾಗಿ ಒತ್ತಲ್ಪಟ್ಟಿವೆ ಹಾಗೂ ಎಷ್ಟು ನುಣುಪಾಗಿದೆ ಅಥವಾ ಎಷ್ಟು ಒರಟಾಗಿವೆ ಎಂಬ ಅಂಶಗಳನ್ನು ಅವಲಂಬಿಸಿ ಬದಲಾವಣೆಯಾಗುತ್ತದೆ.
- ಎರಡು ಮೇಲ್ಮೈಗಳನ್ನು ಪರಸ್ಪರ ಬಲವಾಗಿ ಒತ್ತಿ ಹಿಡಿದಾಗ ಅವುಗಳ ನಡುವೆ ಗರಿಷ್ಟ ಪ್ರಮಾಣದ ಘರ್ಷಣಾ ಬಲ ಏರ್ಪಡುತ್ತದೆ.
- ಘರ್ಷಣಾ ಬಲವು ನುಣುಪಾದ ಮೇಲ್ಮೈಗಳಲ್ಲಿ ಕಡಿಮೆಯಾದರೆ,ಒರಟಾದ ಮೇಲ್ಮೈಗಳಲ್ಲಿ ಹೆಚ್ಚಾಗುತ್ತದೆ.