ಸದಸ್ಯ:ವರ್ಷಲ್

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ವರ್ಷಲ್. ನಾನು ೧೧ ಏಪ್ರಿಲ್ ೧೯೯೭ ರಲ್ಲಿ ಕಾರ್ನಾಡು ಮುಲ್ಕಿಯಲ್ಲಿ ಜನಿಸಿರುತ್ತೇನೆ. ನನ್ನ ತಂದೆಯ ಹೆಸರು ಲಿಂಗಪ್ಪ ಪೂಜಾರಿ. ನನ್ನ ತಾಯಿಯ ಹೆಸರು ಉಷಾ ಪೂಜಾರಿ. ಮಂಗಳೂರು ತಾಲೂಕಿನ ಹಳೆಯಂಗಡಿಕೊಪ್ಪಲಗ್ರಾಮದ "ವಜ್ರದುಂಬಿ" ನನ್ನ ಮನೆ. ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಲ್ಲಿಯ ಅನುದಾನಿತ ಯು.ಬಿ.ಯಮ್.ಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿರುತ್ತೇನೆ.ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ನನ್ನ ಕಾಲೇಜು ವಿದ್ಯಾಭ್ಯಾಸವನ್ನು ಶ್ರೀ ದೇವಿಯ ನೆಲೆಯಾದ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿರುತ್ತೇನೆ.ಪ್ರಸ್ತುತ ಪದವಿ ವಿದ್ಯಾಭ್ಯಾಸವನ್ನು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ಬಿ.ಎಸ್ಸಿ ವಿಭಾಗದಲ್ಲಿ ಮಾಡುತ್ತಿದ್ದೇನೆ. ಇಲೆಕ್ಟ್ರಾನಿಕ್ಸ್,ಕಂಪ್ಯೂಟರ್ ಸೈನ್ಸ್,ಗಣಿತಶಾಸ್ತ್ರ ನನ್ನ ಕಲಿಕೆಯ ವಿಷಯಗಳಾಗಿವೆ.ಗಣಿತ ನನ್ನ ಆಸಕ್ತಿಯ ವಿಷಯವಾಗಿದೆ. ಗಣಕ ತಂತ್ರಜ್ನಾನದಲ್ಲಿಯೂ ಆಸಕ್ತಿಯಿದ್ದು ಈ ಕ್ಷೇತ್ರದಲ್ಲಿ ಹೆಚ್ಛಿನ ಸಾಧನೆ ಮಾಡಬೇಕೆಂಬ ಹಂಬಲವಿದೆ. ಕವನಗಳನ್ನು ರಚಿಸುವುದು,ಸಣ್ಣ ಕಥೆಗಳನ್ನು ಬರೆಯುವುದು,ಕಾದಂಬರಿಗಳನ್ನು ಓದುವುದು,ರಂಗೋಲಿ,ಕಿರು ಪ್ರಬಂಧಗಳ ರಚನೆ,ನೃತ್ಯ, ಸಂಗೀತ ನೆಚ್ಚಿನ ಹವ್ಯಾಸಗಳಾಗಿವೆ. ನನಗೆ ಕ್ರೀಡೆಯಲ್ಲಿಯೂ ಆಸಕ್ತಿಯಿದ್ದು ಕಬ್ಬಡಿ ನನ್ನ ನೆಚ್ಛಿನ ಕ್ರೀಡೆಯಾಗಿದೆ.ರಾಜ್ಯಮಟ್ಟದ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ನನಗೆ ಯಕ್ಷಗಾನದಲ್ಲಿ ಎಲ್ಲಿಲ್ಲದ ಆಸಕ್ತಿ.ಈವರೆಗೆ ಅನೇಕ ಪ್ರದರ್ಶನಗಳನ್ನು ನೀಡಿದ್ದೇನೆ.ಯಕ್ಷಗಾನ ಮಾಡುವುದು ಮಾತ್ರವಲ್ಲ,ರಾತ್ರಿಯಿಡೀ ಯಕ್ಷಗಾನ ನೋಡುವುದೂ ನನಗೆ ಬಹಳ ಇಷ್ಟ.