ಸದಸ್ಯ:ರಶ್ಮಿ ಯಾದವ್ ಕೆ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೆಲೆಯಾಗಿದೆ.ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರ.‍ ‍ಸಾವಿರಾರು ಭಕ್ತರು ಪೂವ‍೯ಜರ ಮೋಕ್ಷಪ್ರಾಪ್ತಿಗಾಗಿ ಇಲ್ಲಿಗೆ ಆಗಮಿಸಿ ಪಿಂಡ ಪ್ರದಾನವನ್ನು ಮಾಡುತ್ತಾರೆ.

ಸಂಗಮ ಕ್ಷೇತ್ರ[ಬದಲಾಯಿಸಿ]

ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಮಳೆಗಾಲದಲ್ಲಿ ಉಕ್ಕಿ ಹರಿಯತ್ತವೆ. ಇದೇ ನದಿಗಳು ಒಂದುಗೂಡಿದಾಗ ಸಂಗಮವಾಗುತ್ತದೆ.ಭಕ್ತರೆಲ್ಲರೂ ಸೇರಿ ಈ ಸಂಧಭ‍೯ದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ.ನೆರೆಯಿಂದಾಗಿ ಇಡೀ ಉಪ್ಪಿನಂಗಡಿ ಪಟ್ಟಣವೇ ಜಲಾವೃತವಾಗುತ್ತದೆ.ಸುಮಾರು ವಷ‍೯ಗಳ ಹಿಂದೆ ಉಪ್ಪಿನಂಗಡಿಯು ತಾಲ್ಲೂಕು ಕೇಂದ್ರವಾಗಿತ್ತು.ನೆರೆಯಿಂದಾಗಿ ಇದನ್ನು ಪುತ್ತೂತಿಗೆ ಬದಲಾಯಿಸಬೇಕಾಗಿ ಬಂತು.

ಪೂಜಿಸಲ್ಪಡುವ ದೇವರುಗಳು[ಬದಲಾಯಿಸಿ]

    1. ಶಿವ
    2. ಮಹಾಕಾಳಿ
    3. ಗಣಪತಿ
    4. ಸುಬ್ರಹ್ಮಣ್ಯ
    5. ನಾಗ

ಮಖೆ ಜಾತ್ರೆ[ಬದಲಾಯಿಸಿ]

ದೇವಸ್ಥಾನದಲ್ಲಿ ನಡೆಯುವ ವಾಷಿ೯ಕ ಜಾತ್ರೆಯೇ ಮಖೆ ಜಾತ್ರೆ.ಊರ ಪರವೂರ ಭಕ್ತಾದಿಗಳು ಈ ಸಮಯದಲ್ಲಿ ಆಗಮಿಸುತ್ತಾರೆ.ಮಹಾಕಾಳಿ ಮೆಚ್ಚಿಯೂ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ಉಲ್ಲೇಖ ದೋಷ: Invalid <ref> tag; refs with no name must have contenthttp://mangalurutemple.blogspot.com/2011/02/sri-sahasralingeshwara-temple.html