ವಿಷಯಕ್ಕೆ ಹೋಗು

ಸದಸ್ಯ:ಭಾರದ್ವಾಜ ಕಾರಂತ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಚ್.ಎಸ್.ಆರ್.ಬಡಾವಣೆ
ನೆರೆಹೊರೆ
ದೇಶಭಾರತ
ರಾಜ್ಯಕರ್ನಾಟಕ
ನಗರಬೆಂಗಳೂರು
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (ಭಾರತದ_ನಿರ್ದಿಷ್ಟ_ಕಾಲಮಾನ)
ಪಿನ್
೫೬೦೧೦೨

ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಬಡಾವಣೆ.ಇದರ ಪೂರ್ಣ ರೂಪ ಹೊಸೂರು ಸರ್ಜಾಪುರ ರಸ್ತೆ ಬಡಾವಣೆ ಎಂದಾಗಿದೆ.ಬಡಾವಣೆಯು ಹೊಸೂರು ರಸ್ತೆ ಹಾಗು ಸರ್ಜಾಪುರ ರಸ್ತೆಗೆ ಹೊಂದಿಕೊಂಡಿರುವ ಕಾರಣ ಈ ಹೆಸರು ಬಂದಿದೆ.

೧೯೮೭ರಲ್ಲಿ ನಿರ್ಮಾಣವಾಗಿ ಬಿ.ಡಿ.ಎ ಯಿಂದ ಅನುಮೋದನೆ ಪಡೆಯಿತು[೧]. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಮೀಪದಲ್ಲೆ ಹಲವಾರು ತಂತ್ರಜ್ಞಾನ ಪಾರ್ಕ್ ಗಳಿರುವ ಕಾರಣ ಸಾಫ್ಟ್ ವೇರ್ ಉದ್ಯೋಗಿಗಳ ಸಂಖ್ಯೆಯು ಹೆಚ್ಚಿದೆ.ಹೊಸ ಉದ್ಯಮಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿದೆ.

ನೆರೆ ಹೊರೆ

[ಬದಲಾಯಿಸಿ]

ಹೆಚ್.ಎಸ್.ಆರ್ ಬಡಾವಣೆಯ ಪಶ್ಚಿಮದಲ್ಲಿ ಹೊಸೂರು ರಸ್ತೆ(ರಾಷ್ಟ್ರೀಯ ಹೆದ್ದಾರಿ ೭) ಹಾದು ಹೋಗುತ್ತದೆ.

ಉತ್ತರದಲ್ಲಿ ಹೊರ ವರ್ತುಲ ರಸ್ತೆ ಹಾದು ಹೋಗುತ್ತದೆ. ಉತ್ತರ ಭಾಗದಲ್ಲಿ ರಾಜ್ಯ ಪೊಲೀಸ್ ಮೀಸಲು ಪಡೆಯ ವಸತಿ ಸಮುಚ್ಚಯ,ವೆಂಕಟಾಪುರ ಗ್ರಾಮ,ಜಕ್ಕಸಂದ್ರ ಗ್ರಾಮ ಹಾಗು ಅಗರ ಕೆರೆಯಿದೆ.

ಬಡಾವಣೆಯ ಈಶಾನ್ಯದಲ್ಲಿ ಅಗರ ಗ್ರಾಮವಿದೆ.

ಪೂರ್ವ ದಿಕ್ಕಿನಲ್ಲಿ ಇಬ್ಬಲೂರು ಸೇನಾ ಶಿಬಿರವಿದೆ.ಇನ್ನು ದಕ್ಷಿಣದಲ್ಲಿ ಬೊಮ್ಮನಹಳ್ಳಿ,ಮಂಗಮ್ಮನಪಾಳ್ಯ,ಎಳ್ಳುಕುಂಟೆ ಗ್ರಾಮಗಳು ಇದೆ.ವಾಯುವ್ಯಕ್ಕೆ  ಸಿಲ್ಕ್ ಬೋರ್ಡ್ ಜಂಕ್ಷನ್ ಇದೆ.

ಆಗ್ನೇಯ ದಕ್ಕಿನಲ್ಲಿ ಸೋಮಸುಂದರ ಪಾಳ್ಯ ಹಾಗು ಹೊಸಪಾಳ್ಯ, ಹೊಸಪಾಳ್ಯ ಕೆರೆಯಿದೆ.

ವಿನ್ಯಾಸ

[ಬದಲಾಯಿಸಿ]

ಬಡಾವಣೆಯಲ್ಲಿ ಮುಖ್ಯ ರಸ್ತೆ ಹಾಗು ಅಡ್ಡ ರಸ್ತೆಗಳಿವೆ.ಮುಖ್ಯ ರಸ್ತೆಗಳು ಉತ್ತರ -ದಕ್ಷಿಣ ಕ್ಕೆ ಇದ್ದರೇ,ಅಡ್ಡ ರಸ್ತೆಗಳು ಮುಖ್ಯ ರಸ್ತೆಗೆ ಲಂಬವಾಗಿ ,ಅಂದರೆ ಪೂರ್ವ-ಪಶ್ಚಿಮ ದಿಕ್ಕಿಗೆ ಇವೆ.ಒಟ್ಟಾರೆಯಾಗಿ ೧ನೇ ಮುಖ್ಯ ರಸ್ತೆಯಿಂದ ೩೧ನೇ ಮುಖ್ಯ ರಸ್ತೆಯ ವರೆಗೂ ಹಾಗು ೧ನೇ ಅಡ್ಡ ರಸ್ತೆಯಿಂದ ೨೭ನೇ ಅಡ್ಡ ರಸ್ತೆಯ ವರೆಗು ಇದೆ.

ಬಡಾವಣೆಯನ್ನು ಏಳು ಸೆಕ್ಟರ್ ಗಳಾಗಿ ವಿಂಗಡಿಸಲಾಗಿದೆ.

ಸಾಕಷ್ಟು ಉದ್ಯಾನಗಳು,ಅಗಲವಾದ ರಸ್ತೆಗಳು ಇವೆ.

ಗರಿಮೆ.

[ಬದಲಾಯಿಸಿ]

ನಗರದಲ್ಲೇ ಮೊದಲ ಬಾರಿಗೆ 'ಓಪನ್ ಸ್ಟ್ರೀಟ್ ' ಆಯೋಜಿಸಿದ ಖ್ಯಾತಿ[೨].

ರಸ್ತೆ ಗುಂಡಿಗಳನ್ನು ಗುರುತಿಸಲು ಗೂಗಲ್ ಮ್ಯಾಪ್ ನ ತಂತ್ರಜ್ಞಾನ ಬಳಸಿಕೊಂಡ ಖ್ಯಾತಿ[೩].

ಪ್ಲಾಸ್ಟಿಕ್ ಕೈ ಚೀಲ ನಿಷೇಧ ಮಾಡಿದ ಖ್ಯಾತಿ[೪].

ಬೆಂಗಳೂರಿನಲ್ಲಿ ಕೊಳವೆ ಮೂಲಕ ಇಂಧನ ಸರಬರಾಜು ಪಡೆಯಲಿರುವ  ಮೊದಲ ಬಡಾವಣೆಗಳಲ್ಲಿ ಒಂದು.

ಪ್ರಮುಖ ವಾಣಿಜ್ಯ ಸ್ಥಳಗಳು.

[ಬದಲಾಯಿಸಿ]

ಬಡಾವಣೆಯ ಮಧ್ಯದಲ್ಲಿ ಬಿ.ಡಿ.ಎ ವಾಣಿಜ್ಯ ಸಂಕೀರ್ಣವಿದೆ.ಇದು ಬಡಾವಣೆಯ ಹೆಗ್ಗುರುತು.ಇದರ ಸುತ್ತ-ಮುತ್ತಲು ಸಹ ಹಲವಾರು ಅಂಗಡಿಗಳು,ಹೋಟೆಲ್ ಗಳು ಇರುವುದರಿಂದ ಈ ಸ್ಥಳ ಸದಾ ಜನರಿಂದ ತುಂಬಿರುತ್ತದೆ.

ಇನ್ನುಳಿದಂತೆ, ೫,೯,೧೪,೧೯,೨೪ ಹಾಗು ೨೭ ನೇ ಮುಖ್ಯ ರಸ್ತೆಗಳಲ್ಲಿಯೂ ಸಹ ಹಲವಾರು ಅಂಗಡಿಗಳು,ವಾಣಿಜ್ಯ ಕಟ್ಟಡಗಳು ಇವೆ.

ಭಾರತೀಯ ಸ್ಟೇಟ್ ಬ್ಯಾಂಕ್,ಮೈಸೂರು ಸ್ಟೇಟ್ ಬ್ಯಾಂಕ್,ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಕೆನರಾ ಬ್ಯಾಂಕ್,ಸಿಂಡಿಕೇಟ್ ಬ್ಯಾಂಕ್,ಐಸಿಐಸಿಐ ಬ್ಯಾಂಕ್ ಹೀಗೆ ಬಹುತೇಕ ಎಲ್ಲ ಪ್ರಮುಖ ಬ್ಯಾಂಕುಗಳ ಶಾಖೆಗಳು ಹೆಚ್.ಎಸ್.ಆರ್ ಬಡಾವಣೆಯಲ್ಲಿದೆ

ಪ್ರಮುಖ ವಿದ್ಯಾಸಂಸ್ಥೆಗಳು.

[ಬದಲಾಯಿಸಿ]

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ.

ಜೆ.ಎಸ್.ಎಸ್. ಮಹಿಳಾ ಪದವಿ ಕಾಲೇಜು.

ಆಕ್ಸ್ಫರ್ಡ್ ಕಾಲೇಜು.

ಬಾಲ್ಡವಿನ್ ಇಂಡಿಯನ್ ಹೈ ಸ್ಕೂಲ್.

ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್.

ಜ್ಞಾನ ಸೃಷ್ಟಿ ಪಬ್ಲಿಕ್ ಸ್ಕೂಲ್.

ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್.

ಲಾರೆನ್ಸ್ ಪಬ್ಲಿಕ್ ಸ್ಕೂಲ್.

ಎಳ್ಳುಕುಂಟೆ ಸರ್ಕಾರಿ ಶಾಲೆ.

ಅಗರ ಸರ್ಕಾರಿ ಪ್ರೌಡ ಶಾಲೆ.

ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್.

ಮುಂತಾದ ಹಲವಾರು ವಿದ್ಯಾಸಂಸ್ಥೆಗಳಿವೆ.

ದೇವಾಲಯಗಳು.

[ಬದಲಾಯಿಸಿ]

ಶ್ರೀ ವರಸಿದ್ದಿ ವಿನಾಯಕ ದೇವಾಲಯ(೭ನೇ ಸೆಕ್ಟರ್).

ಶ್ರೀ ಬಸವೇಶ್ವರ ಗಾಯಿತ್ರಿ ದೇವಾಲಯ,ವಂಗಲಹಳ್ಳಿ(೧ನೇ ಸೆಕ್ಟರ್)

ಶ್ರೀ ವಿನಾಯಕ ದೇವಸ್ಥಾನ (೧ನೇ ಸೆಕ್ಟರ್)

ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ.(೬ನೇ ಸೆಕ್ಟರ್) .

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ,ಪರಂಗಿಪಾಳ್ಯ(೧ನೇ ಸೆಕ್ಟರ್)

ಮುಂತಾದವು.

ಆಹಾರ ಮಳಿಗೆಗಳು

[ಬದಲಾಯಿಸಿ]

ವಾಸುದೇವ್ ಅಡಿಗಾಸ್.

ಶ್ರೀ ಕೃಷ್ಣ ಸಾಗರ್.

ಶ್ರೀ ಕೃಷ್ಣ ಭವನ.

ಅಡ್ಯಾರ್ ಆನಂದ ಭವನ್.

ಮೆಕ್ ಡೊನಾಲ್ಡ್ಸ್

ಪೀಜಾ ಹಟ್.

ಕೆ.ಎಫ್.ಸಿ.

ಸಬ್ ವೇ.

ಲೂ ಹಾನ್ಸ್.

ಕುಮರಕೊಮ್

ಬೆಂಗಳೂರು ಅಗರ್ವಾಲ್ ಭವನ್.

ಜೂನಿಯರ್ ಕುಪ್ಪಣ.

ಮುಂತಾದವುಗಳು.

ಇತರೆ ಪ್ರಮುಖ ಸ್ಥಳಗಳು.

[ಬದಲಾಯಿಸಿ]

ಬಿ.ಎಂ.ಟಿ.ಸಿ.ಬಸ್ ಡಿಪೋ ೨೫.

ಸಿ.ಪಿ.ಡಬ್ಲ್ಯೂ. ಡಿ. ಕ್ವಾರ್ಟರ್ಸ್.

ಇದನ್ನೂ ನೋಡಿ

[ಬದಲಾಯಿಸಿ]

ಜಯನಗರ.

ಬಿ.ಟಿ.ಎಮ್. ಬಡಾವಣೆ.

ಕೋರಮಂಗಲ.

ಉಲ್ಲೇಖಗಳು

[ಬದಲಾಯಿಸಿ]

http://m.thehindu.com/news/cities/bangalore/here-peace-and-bullets-coexist/article5908655.ece

http://m.bangalore.citizenmatters.in/articles/plastic-carry-bag-ban-trend-bangalore-citizens

  1. http://www.bdabangalore.org/BDA%20approved%20layout.pdf Sl.No.92 and 93.
  2. http://timesofindia.indiatimes.com/city/bengaluru/Traffic-free-Sunday-HSR-Layout/articleshow/49020740.cms?from=mdr
  3. http://www.bangaloremirror.com/bangalore/civic/HSR-Layout-residents-take-to-Google-Maps-to-point-to-potholes-black-spots/articleshow/50359109.cms
  4. http://www.deccanchronicle.com/nation/current-affairs/250216/hsr-shows-way-to-a-better-bengaluru.html