ಸದಸ್ಯ:ಪ್ರಮಥ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ[ಬದಲಾಯಿಸಿ]
""""ಜೀವನ"""""

೧೮೭೦ರ ಆಸುಪಾಸಿನಲ್ಲಿ ತುಂಗಾ ತೀರದ ಹಲಸಿನಹಳ್ಳಿ (ತೀರ್ಥಹಳ್ಳಿ ಸಮೀಪ) ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು‌.ಅವರ ತಂದೆಯವರ ಹೆಸರು ನಾಗೇಂದ್ರ ಶಾಸ್ತ್ರಿ. ನರಸಿಂಹ ಶಾಸ್ತ್ರಿಗಳು ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು ಮತ್ತು ಆಮೂಲಾಗ್ರವಾಗಿ ಅಧ್ಯಯನಮಾಡಿದವರು ಮತ್ತು ಅಪಾರ ಪುರಾಣ ಜ್ಞಾನ ಹೊಂದಿದ್ದರು‌.


 """"ರಚಿಸಿದ ಕೆಲವು ಕೃತಿಗಳು""

ಶಶಿಕಲಾ ಸ್ವಯಂವರ (1899)

ವಿಧ್ಯುನ್ಮತಿ ಕಲ್ಯಾಣ (1901)

ಕೌಶಿಕ ಚರಿತ್ರೆ (1901)

ರುಗ್ಮವತಿ ಕಲ್ಯಾಣ (1902)

ಚಂದ್ರಹಾಸ ಚರಿತ್ರೆ (1904)

ಭೀಷ್ಮೋತ್ಪತ್ತಿ(1904)

ಭೀಷ್ಮ ವಿಜಯ (1905)

ಕುಮುದ್ವತೀ ಕಲ್ಯಾಣ (1906)

ಭೀಷ್ಮಾರ್ಜುನರ ಕಾಳಗ (1909)

ವಾಮನ ಚರಿತ್ರೆ (1910)

ರುಕ್ಮಾಂಗದ ಮೋಹಿನಿ (1911)

ಕಚ ದೇವಯಾನಿ (1913)

ಶ್ರೀಕೃಷ್ಣ ವಿವಾಹ (1914)

ಪುಂಡರೀಕ ಚರಿತ್ರೆ (1916)

ಶಲ್ಯ ಪರ್ವ (1916)

ವೀರಮಣಿ ಕಾಳಗ (1916)


   """ಪ್ರಸಂಗ ರಚನೆಯಲ್ಲಿ ತನ್ನ ಪರಿಚಯ""""'
ತನ್ನ ಕುರಿತು ಹಾಗೂ ಕೃತಿ ಕೊನೆಗೊಂಡ ಸಂವತ್ಸರ , ಮಾಸ, ಪಕ್ಷ , ತಿಥಿ , ವಾರಗಳನ್ನು ಹೇಳಿಕೊಂಡಿದ್ದಾರೆ.ವರ ತುಂಗಾ ದಕ್ಷಿಣ ಕಾಲದೊಳ್ ಪರಾಸಾಖ್ಯ ಪುರಿವಾಸ ಹವ್ಯಕ ದ್ವಿಜನು ಉರಗೇಂದ್ರನ ತರಳನು ನರಹರಿ ಎಂದು ಹೇಳಿಕೊಂಡಿದ್ದಾರೆ.ಪರಾಸಾಖ್ಯ ಪುರವೆಂದರೆ ಹಲಸಿನ ಹಳ್ಳಿ ಉರಂಗೇಂದ್ರ ಶಾಸ್ತ್ರಿ ಅಂದರೆ ನಾಗೇಂದ್ರ ಶಾಸ್ತ್ರಿ ‌


   """"ನಾಟಕ ಹಾಗೂ ಯಕ್ಷಗಾನಗಳಲ್ಲಿ """"
      ನಾಟಕ ಹಾಗೂ ಯಕ್ಷಗಾನಗಳಲ್ಲಿ ಹಾಸ್ಯಗಾರನಾಗಿ ಪಾತ್ರ ನಿರ್ವಹಿಸಿದ್ದರು.ತಮ್ಮ ಹಾಸ್ಯಭರಿತ ಮಾತುಗಳಿಂದ ಜನ ಮನ ಸೆಳೆಯುತ್ತಿದ್ದರು.ತಾಳಮದ್ದಲೆಯ ಅರ್ಥಧಾರಿಯಾಗಿದ್ದರು.


    """"" ಹವ್ಯಾಸಗಳು"""""".
     ನಾಟಕ ರಚನೆ ಹಾಗೂ ನಿರ್ದೇಶನ, ಆಶುಕವಿತ್ವ, ಉಪನಯನ,ಗೃಹಪ್ರವೇಶದಲ್ಲಿ ಹಾಡುವ ಹಾಡನ್ನು ರಚಿಸುವುದು ಮತ್ತು ಪ್ರಸಂಗ ರಚನೆ ಇವರ ಹವ್ಯಾಸಗಳಾಗಿದ್ದವು‌.

   """""""ಮಿತ್ರರುಗಳು"""""""
 ೧.ಆಗುಂಬೆಯ ಗುತ್ತಿಗೆದಾರ ನಾರಾಯಣಪ್ಪ
 ೨.ವಿಠ್ಠಲ ಪಂಡೀತ
 ೩.ಪಟೇಲ್ ಶಂಕರಯ್ಯ 
 ೪.ಆಗುಂಬೆಯ ಸುಬ್ಬಯ್ಯ ಭಟ್ಟ
 ೫.ನರಸಿಂಹ ಮಲ್ಯ 
 ೬.ಕಮಕೊಂಡು ನರಸಿಂಹ ಶಾಸ್ತ್ರಿ (ಮೊದಲಾದವರು)
 """"""" ನಿಧನ"""""
     ಇವನ ನಿಧನದಲ್ಲಿ ನಿರ್ದಿಷ್ಟತೆ ಇಲ್ಲ.೧೯೩೦ರಲ್ಲಿ ಮಡಿದಿದ್ದಾನೆ ಎಂದು ಶಿವರಾಮ ಕಾರಂತರು ಹೇಳಿದರೆ;೧೯೫೩ರಲ್ಲಿ ಮಡಿದಿದ್ದಾನೆ ಎಂದು ಮೋಹನ ಹೆಗಡೆಯವರು ಹೇಳಿದ್ದಾರೆ.ಮೋಹನ ಹೆಗಡೆ ವಾಸ್ತವವಾಗಿರಬಹುದಾದ ಸಾಧ್ಯತೆ ಇದೆ.ಶಶಿಕಲಾ ಸ್ವಯಂವರವನ್ನು ೧೮೯೦ ರಲ್ಲಿ ರಚಿಸಿದ್ದಾರೆಂದು ಮೋಹನ ಹೆಗಡೆಯವರು ಹೇಳುತ್ತಾರೆ.