ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಪ್ರಮಥ/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂರೂರು ದೇವರು ಹೆಗಡೆ

""ಜನನ"""

   ೨೦-೦೨-೧೯೨೦ ರಲ್ಲಿ ದೇವರು ಮನೆತನದಲ್ಲಿ ಜನಿಸಿದರು ಮತ್ತು ತನ್ನ ಅಂಕಿತನಾಮವಾದ ದೇವರು ಎಂಬ ಹೆಸರನ್ನು ಬಿಟ್ಟು ದೇವರು ಹೆಗಡೆ ಎಂದೇ ಖ್ಯಾತಿ ಪಡೆದರು.
     
     """ ವಿದ್ಯಾಭ್ಯಾಸ-ವಿದ್ವತ್ತು""" 
        ಇವರು ಓದಿದ್ದು ೫ ನೇ ತರಗತಿಯವರೆಗೆ ಮಾತ್ರ. ಅನಂತರ ಹಿಂದಿ, ಸಂಸ್ಕೃತ ಭಾಷೆಯನ್ನು ಸ್ವತಃ ಅಧ್ಯಯನ ಮಾಡಿ ಆ ಭಾಷೆಗಳಲ್ಲಿ ವಿದ್ವತ್ತನ್ನು ಸಾಧಿಸಿದರು.
         ಭಟ್ರಕೇರಿ ನಾರಾಯಣ ಭಟ್ಟರಲ್ಲಿ ಇವರು ಶಾಸ್ತ್ರೀಯವಾಗಿ ಜ್ಯೋತಿಷ್ಯ ಅಧ್ಯಯನ ಮಾಡಿದ ಇವರು ಬಿಡುವಿನಲ್ಲಿ ಯಾವುದೇ ರೀತಿಯ ಫಲಶ್ರುತಿಯಿಲ್ಲದೇ ಅವರಲ್ಲಿ ಕೇಳದವರಿಗೆ ಜ್ಯೋತಿಷ್ಯ ಫಲಗಳನ್ನು  ಹೇಳುತ್ತಿದ್ದರು.

"""ಬಾಹ್ಯ ಆಕಾರ """"

         ದೀರ್ಘಕಾಯ, ಆಕರ್ಷಕವಾದ ವಿಶಾಲ ಕಣ್ಣುಗಳು,ಉದ್ದವಾದ ಕೂದಲನ್ನು ಹೊಂದಿದ್ದರು.

""""ಮೇಳದ ಯಜಮಾನರಾಗಿ """""

         ಇವರು ಮಹಾವಿಷ್ಣು ಪ್ರಸಾದಿತ ಯಕ್ಷಗಾನ ಮಂಡಳಿ ಕೋಣಾರೆ ಎನ್ನುವ ಯಕ್ಷಗಾನ ಮೇಳವನ್ನು ಸ್ಥಾಪಿಸಿ ಅದರ ಯಜಮಾನರಾದರು.


""""ಮೇಳಗಳಲ್ಲಿ ಭೇಷ್ ಎನ್ನಿಸಿಕೊಂಡದ್ದು""""""

          ತಮ್ಮ ಮೂರೂರು ಮೇಳ, ಕೆರೆಮನೆ ಮೇಳ, ಮೂಲ್ಕಿ ಸೇರಿದಂತೆ ಹಲವು(ತೆಂಕು ಮತ್ತು ಬಡಗು) ಮೇಳಗಳಲ್ಲಿ ಅಭಿನಯಿಸಿದ ಇವರು ತಮ್ಮ ಅಭಿನಯದ ಮೂಲಕ ಜನಮನಸೆಳೆದು ಭೇಷ್ ಎಂದೆನಿಸಿಕೊಂಡರು.
       """"ನಿರ್ವಹಿಸಿದ ಪಾತ್ರಗಳು"""" 
        ಗದಾಯುದ್ಧದ ಭೀಮ ,ಚಂದ್ರಹಾಸ ಚರಿತ್ರೆಯ ದುಷ್ಟಬುದ್ಧಿ,ಕಂಸ ವಧೆಯ ಕಂಸ, ಪ್ರಹ್ಲಾದ ಚರಿತ್ರೆಯ ಹಿರಣ್ಯಕಶಿಪು, ಕೀಚಕ ವಧೆಯ ಕೀಚಕ, ಮಾಗಧ ವಧೆಯ ಮಾಗಧ,ರಾವಣವಧೆಯ ರಾವಣ ಸೇರಿದಂತೆ ಹಲವು ಪಾತ್ರಗಳಿಗೆ ಜೀವ ತುಂಬಿ, ದೈತ್ಯ ಪಾತ್ರಕ್ಕೆ ತನ್ನದೇ ಆದ ಶೈಲಿಯನ್ನು ಮೂಡಿಸಿದರು.ಅವರ ವೇಷಭೂಷಣ,ಮಾತುಗಾರಿಕೆ ,ಎಲ್ಲವುದಕ್ಕಿಂತ ಹೆಚ್ಚಾಗಿ  ಅವರ ಅಭಿನಯ ಜನಮಾನಸದಲ್ಲಿ ಎಂತಹವನಿಗೂ ಭಯ ಮೂಡಿಸುವಂತಹದ್ದಾಗಿತ್ತು.
 """""  ನಿಧನ """"""
          ೨೩-೧೦-೧೯೯೦ ರಂದು ದೇವಪೂಜೆಗೆ ಗಂಧ-ಚಂದನ ತಳೆಯುವಾಗ ತಮ್ಮ ಪ್ರಾಣವನ್ನು ಬಿಟ್ಟರು.ಇವರ ಅಗಲಿಕೆಯಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಅವರಂತಹ ಕಲಾವಿದರ ಹೆಸರನ್ನು ಕೇಳಿದಾಗ "ನ ಭೂತೋ ನ ಭವಿಷ್ಯತಿ"ಎಂಬ ಮಾತು ನೆನಪಿಗೆ ಬರುತ್ತದೆ.
            
                       ಲೇಖನ ಪ್ರಮಥ ಹೆಗಡೆ ಕಡೇಮನೆ

Start a discussion about ಸದಸ್ಯ:ಪ್ರಮಥ/ನನ್ನ ಪ್ರಯೋಗಪುಟ

Start a discussion