ಸದಸ್ಯ:ನಿಧಿ ಪ್ರಸನ್ನ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಯಾವರ ಮಾಧವ ಆಚಾರ್ಯ

ಉದ್ಯಾವರ ಮಾಧವ ಆಚಾರ್ಯ ಶ್ರೇಷ್ಠ ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧರು.೨೫-೦೩-೧೯೪೧ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ[೧] ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ 'ರಾಸವಿಲಾಸ'ಎಂಬ ಕೃತಿಯನ್ನು ರಚಿಸಿದ್ದರು.ತಾಯಿ ಯು.ಲಲಿತಾಲಕ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಮಗನ ಕಲಾ ಬದುಕಿಗೆ ಅಚ್ಚಳಿಯದ ಪ್ರಭಾವ ಬೀರಿದವರು. ಅಲ್ಲಿಂದ ಯಕ್ಷಗಾನ,ಕೋಲ,ನಾಗಮಂಡಲ,ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡವರು.

ವಿದ್ಯಾಭ್ಯಾಸ[ಬದಲಾಯಿಸಿ]

ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ,ಬೆಂಗಳೂರು ವಿಶ್ವವಿದ್ಯಾಲಯದಿಂದ[೨] ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

ಕುಂದಾಪುರದ ಭಂಡಾರ್ಕಸ್‍ ಕಾಲೇಜಿನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಆರಂಭಿಸ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು,ಕುಂದಾಪುರದ [೩] ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಪೂರ್ಣ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ[ಬದಲಾಯಿಸಿ]

ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ್ದರೂ ಸಾಹಿತ್ಯಿಕವಾಗಿ,ಸಾಂಸ್ಕೃತಿಕವಾಗಿ ಆಚಾರ್ಯರು ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಾಧವ ಆಚಾರ್ಯರು ತಮ್ಮನ್ನು ಕಂಡುಕೊಂಡಿದ್ದು ಸಣ್ಣಕಥೆಗಳ ಮೂಲಕ.

ಕಥಾ ಸಂಕಲನಗಳು

  • ಬಾಗಿದ ಮರ
  • ಭಾಗದೊಡ್ಡಮ್ಮನ ಕಥೆ
  • ಅಪರಾಧ ಸಹಸ್ರಾಣಿ ಕಥೆ

ಪ್ರಬಂಧ ಸಂಕಲನಗಳು

  • ಬೆಳಕಿನೆಡೆಗೆ
  • ಹಾಡಿ
  • ನೀಡು ಪಾಥೇಯವನು
  • ಸೀಳು ಬಿದಿರಿನ ಸಿಳ್ಳು
  • ರಂಗಪ್ರಬಂಧಗಳು
  • ನೃತ್ಯ ಪ್ರಬಂಧಗಳು
  • ಯಕ್ಷಪ್ರಬಂಧಗಳು
  • ಸಾಹಿತ್ಯ ಸ್ಪಂದನ
  • ಲಘು ಬಿಗು ಪ್ರಬಂಧಗಳು

ಕವನ ಸಂಕಲನಗಳು

  • ರಂಗಸ್ಥಳದ ಕನವರಿಕೆಗಳು
  • ಹೂ ಮಿಡಿ ಹಾಡು

ನಾಟಕಗಳು

  • ಇದ್ದಕ್ಕಿದ್ದಂತೆ ನಾಟಕ
  • ಎದೆಯೊಳಗಣ ದೀಪ
  • ಗೋಡೆ
  • ಕೃಷ್ಣನ ಸೋಲು
  • ರಾಣಿ ಅಬ್ಬಕ್ಕ ದೇವಿ
  • ಗಾಂಧಾರಿ
  • ರಾಧೆ ಎಂಬ ಗಾಥೆ
  • ನೆನಪೆಂಬ ನವಿಲುಗರಿ

ರಂಗಭೂಮಿಯ ಸಾಧನೆ[ಬದಲಾಯಿಸಿ]

ಸಮೂಹ ಎಂಬ ಪರಿಕಲ್ಪನೆಯಲ್ಲಿ ಒಂದು ಲಾಂಛನವನ್ನು ರೂಪಿಸಿ ಸುಮಾರು ೧೯೫೦-೫೧ರಿಂದ ಇದುವರೆಗೆ ಸಂಯೋಜಿಸಿದ, ನಿರ್ದೇಶಿಸಿದ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಇವರದು.

ನೃತ್ಯರೂಪಕಗಳು ಮತ್ತು ನಾಟಕಗಳು[ಬದಲಾಯಿಸಿ]

  • ಅಂಧಯುಗ
  • ಬ್ರಹ್ಮಕಪಾಲ
  • ಅರುಂಧತಿ
  • ಹಂಸ ದಮಯಂತಿ
  • ಶಬರಿ
  • ಅಶ್ವತ್ಥಾಮನ್
  • ಹೆಬ್ಬೆರಳು
  • ಸತ್ಯಾಯನ ಹರಿಶ್ಚಂದ್ರ
  • ಅಹಲ್ಯೆ
  • ಶ್ರೀಹರಿಚರಿತೆ
  • ಹರಿಣಾಭಿಸರಣ
  • ಕುಚೇಲ ಕೃಷ್ಣ
  • ಸೀತಾಪಹರಣ
  • ಚಿತ್ರಾಂಗದೆ
  • ವೃಂದಾವನ
  • ಹರಿದಾಸ ವಿಜಯ
  • ಅವತಾರ ವೈಭವ
  • ಶ್ರೀ ಮನೋಹರ ಬಿಲ್ಲಹಬ್ಬ
  • ಆನಂದ ಮುಕುಂದ
  • ಭಗವದ್ಗೀತಾ ನೃತ್ಯ ವೈಭವ
  • ನವನೀತ ಲಹರಿ
  • ಸಾಕ್ಷಾತ್ಕಾರ
  • ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ
  • ಅರಗಿನ ಬೆಟ್ಟ
  • ಋತುಗೀತೆ
  • ಮುಕ್ತದ್ವಾರ
  • ಶ್ವಮೇಧ
  • ಮಾದ್ರಿಯ ಚಿತೆ
  • ಹೊನ್ನಿಯ ಮದುವೆ
  • ಹಿಡಿಂಬೆ
  • ಮಹಾಯೋಗಿ
  • ಮತ್ತೆ ರಾಮನ ಕತೆ
  • ರುಕ್ಮಿಣೀಶ ವಿಜಯ
  • ನಾರದ ಕೊರವಂಜಿ
  • ಕೀಚಕ ವಧೆ ರೂಪಕ
  • ಉಪನಿಷದುದ್ಯಾನಂ
  • ವಲ್ಮೀಕ ನಿನಾನದ
  • ತಿರುನೀಲಕಂಠ
  • ನೆನಪಾದಳು ಶಕುಂತಲೆ
  • ಕುವರ ಭಸ್ಮಾಸುರ
  • ಪಾಂಚಾಲಿ
  • ಭೀಷ್ಮ ಸತ್ಯವ್ರತನಾದದ್ದು
  • ಅಂಬೆ
  • ಜ್ವಾಲೆ

ವಿಶೇಷ ಸಾಧನೆಗಳು[ಬದಲಾಯಿಸಿ]

ಮಂಗಳೂರು[೪] ಆಕಾಶವಾಣಿಯ ಕಲಾವಿದರಾಗಿರುವ ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅಲ್ಲದೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು ಅವುಗಳಲ್ಲಿ ಗುಡ್ಡದ ಭೂತ ಧಾರವಾಹಿಯಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ.

ಗೌರವಗಳು[ಬದಲಾಯಿಸಿ]

  1. ೧೯೯೭ರಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
  2. ರಂಗಭೂಮಿ ಕಲಾಸಂಸ್ಥೆಯಿಂದ 'ರಂಗವಿಶಾರದ' ಬಿರುದು
  3. ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೫]
  4. ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ,ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Tamil_Nadu
  2. http://bangaloreuniversity.ac.in/
  3. https://en.wikipedia.org/wiki/Kundapur
  4. https://en.wikipedia.org/wiki/Mangalore
  5. http://siri.kannadasiri.co.in/kannadasiri/downloads/Rajothsava_List.pdf