ಸದಸ್ಯ:ಐಸಿರಿ ಪಿ/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಮೋದ್ ಕುಮಾರ್ ಶತಪತಿ[ಬದಲಾಯಿಸಿ]

ಅಶೋಕ ಚಕ್ರ ಪ್ರಮೋದ್ ಕುಮಾರ್ ಶತಪತಿರವರು, ಭಾರತದ ಒಡಿಶಾ ಪೊಲೀಸ್ ಸುಪರ್ದಿಯಲ್ಲಿ ಬರುವ, ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪಿನ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದರು. ಭಾರತದ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪಡೆದರು.

15 ಫೆಬ್ರವರಿ 2008 ರ ರಾತ್ರಿ, ಸುಮಾರು 500 ಶಸ್ತ್ರಸಜ್ಜಿತ ನಕ್ಸಲೀಯರು ಭಾರತದ ಒಡಿಶಾದ ಭುವನೇಶ್ವರ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದರು. ಈ ಸುದ್ದಿಯನ್ನು ತಿಳಿದ ಶತಪತಿ ಅವರು, ಕೇವಲ 20 ಪೊಲೀಸ್ ಸಿಬ್ಬಂದಿಯೊಂದಿಗೆ ನಯಾಗರ್‌ನ ಕಾಡಿನೊಳಗೆ ನುಗ್ಗಿ ಅಲ್ಲಿ ಅಡಗಿಕೊಂಡಿದ್ದ ನಕ್ಸಲೀಯರ ಮೇಲೆ ದಾಳಿ ನಡೆಸಲು ಸಜ್ಜಾದರು. ನಂತರದ ಎನ್‌ಕೌಂಟರ್‌ನಲ್ಲಿ, ಶ್ರೀ ಶತಪತಿ ಅವರು ಕಾರ್ಯಾಚರಣೆಯನ್ನು ಧೈರ್ಯದಿಂದ ಮುನ್ನಡೆಸಿದರಾದರೂ ಅಂತಿಮವಾಗಿ ಕಾರ್ಯಾಚರಣೆಯಲ್ಲಿ ಹುತಾತ್ಮರಾದರು.

ಅಶೋಕ ಚಕ್ರ ಪುರಸ್ಕೃತರು[ಬದಲಾಯಿಸಿ]

ಈ ಶೌರ್ಯದ ಕಾರ್ಯಕ್ಕಾಗಿ, ಭಾರತದ ರಾಷ್ಟ್ರಪತಿಗಳು 2009ರ ಗಣರಾಜ್ಯೋತ್ಸವದಂದು ಶ್ರೀ ಪ್ರಮೋದ್ ಕುಮಾರ್ ಶತಪತಿರವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ಪ್ರಧಾನ ಮಾಡಿದರು.

ಅಶೋಕ ಚಕ್ರ ಪ್ರಶಸ್ತಿಯ ಅಧಿಕೃತ ಉಲ್ಲೇಖ[ಬದಲಾಯಿಸಿ]

ಅಸಿಸ್ಟೆಂಟ್ ಕಮಾಂಡೆಂಟ್ ಶ್ರೀ ಪ್ರಮೋದ್ ಕುಮಾರ್ ಶತಪತಿ, ತರಬೇತಿ-ಪ್ರಭಾರಿ ಒರಿಸ್ಸಾ ರಾಜ್ಯ ಸಶಸ್ತ್ರ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪು (ಮರಣೋತ್ತರ)

15 ಫೆಬ್ರವರಿ 2008ರ ರಾತ್ರಿಯಂದು ಸುಮಾರು 500 ಶಸ್ತ್ರಸಜ್ಜಿತ ನಕ್ಸಲೀಯರು ಭುವನೇಶ್ವರ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಪೊಲೀಸರ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು. ಅನೇಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು ಮತ್ತು ಹಲವಾರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದು, ಹತ್ತಿರದ ಕಾಡಿನಲ್ಲಿ ಅಡಗಿಕೊಂಡರು.

ವಿಶೇಷ ಕಾರ್ಯಾಚರಣೆ ಗುಂಪಿನ ಅಸಿಸ್ಟೆಂಟ್ ಕಮಾಂಡೆಂಟ್ ಶ್ರೀ ಪ್ರಮೋದ್ ಕುಮಾರ್ ಶತಪತಿಯವರು ಕೇವಲ 20 ಪೊಲೀಸ್ ಸಿಬ್ಬಂದಿಯೊಂದಿಗೆ, ನಕ್ಸಲೀಯರು ವಶಪಡಿಸಿಕೊಂಡಿದ್ದ ಕಾಡಿನ ಎತ್ತರದ ಸ್ಥಾನವನ್ನು ತಲುಪಿದರು ಮತ್ತು ತಕ್ಷಣವೇ ಅವರ ಮೇಲೆ ದಾಳಿ ನಡೆಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ನಕ್ಸಲೀಯರು ಪೊಲೀಸ್ ತಂಡದ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದರು. ಶ್ರೀ ಶತಪತಿಯವರು ಸರ್ವೋಚ್ಚ ತ್ಯಾಗ ಮಾಡುವ ಮುನ್ನ ಇತರರಿಗೆ ಮಾದರಿಯಾಗುವಂತೆ ವೀರಾವೇಷದಿಂದ ಕಾರ್ಯಾಚರಣೆ ನಡೆಸಿದರು.

ಶ್ರೀ ಪ್ರಮೋದ್ ಕುಮಾರ್ ಶತಪತಿಯವರು ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಅತ್ಯುನ್ನತ ಶೌರ್ಯ ಮತ್ತು ಕರ್ತವ್ಯದ ಸಮರ್ಪಣೆಯನ್ನು ಪ್ರದರ್ಶಿಸಿದರು.

ಉಲ್ಲೇಖಗಳು[ಬದಲಾಯಿಸಿ]

[೧]

[೨]

  1. ಪೋಲೀಸ್ ಸಿಬ್ಬಂದಿಗಳ ಮರಣೋತ್ತರ ಪ್ರಶಸ್ತಿಗಳು
  2. ಅಶೋಕ ಚಕ್ರದ ಉಲ್ಲೇಖ