ಸದಸ್ಯ:ಎ೦ ಎಸ್ ರವಿಶ೦ಕರ/ದಿಘ೦ಚಿ
ಡದಿಘಂಚಿ - ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅತಪಾಡಿ ತಾಲೂಕಿನಲ್ಲಿರುವ ಒಂದು ಹಳ್ಳಿ. ಇದು ಮಂದೇಶದಲ್ಲಿರುವ ಮಂಗಂಗಾ ನದಿಯ ದಡದಲ್ಲಿದೆ.
ಜನರು
[ಬದಲಾಯಿಸಿ]ದಿಘಂಚಿಯು ಮಹಾರಾಷ್ಟ್ರದ ಎಲ್ಲಾ ಜಾತಿಗಳನ್ನೂ ಹೊಂದಿದೆ. ದಿಘಂಚಿಯು ಪ್ರತಿಶತ ೬೫ ರಷ್ಟು ವಿಮುಕ್ತ ಜಾತಿಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಒಳಗೊ೦ಡಿದೆ. ರಾಮೋಶಿ, ದವರಿ ಜೋಗಿ/ನಾಥ ಪಂಥಿ ದಾವರಿ ಗೋಸಾವಿ, ವಾದರ್, ಕೈಕಾಡಿ, ಸಂಗಾರ್, ಸಂಗರ ಸಮಾಜ್ ಧನಗೇರ್ ಮು೦ತಾದ ಅಲೆಮಾರಿ ಬುಡಕಟ್ಟು ಜನಾ೦ಗಗಳಿವೆ.
ದೇಗುಲಗಳು
[ಬದಲಾಯಿಸಿ]ದಿಘ೦ಚಿಯ ಗ್ರಾಮ ಪಂಚಾಯತಿ ಕಚೇರಿಯ ಬಳಿ ಮಹಾದೇವ ದೇವಸ್ಥಾನವಿದೆ. ದಿಘಂಚಿಯ ಗ್ರಾಮದೇವತೆಯಾದ ಸಿದ್ಧನಾಥನ ದೇವಸ್ಥಾನವಲ್ಲದೆ ಮರಿಯಾಯಿ ದೇವತೆಯ ದೇವಾಲಯವೂ ಅದೇ ಗ್ರಾಮದಲ್ಲಿ ಇದೆ.ಅವಲೈ ದೇವಸ್ಥಾನವು ದಿಘಂಚಿಯಿಂದ ೩ ಕಿ ಮೀ ದೂರದಲ್ಲಿದೆ. ಖಂಡೋಬಾ ದೇಗುಲವು ದಿಘಂಚಿಯಿಂದ ಒಂದು ಕಿ ಮೀ ದೂರದಲ್ಲಿದ್ದು ದುರ್ಗಾಮಾತಾ ದೇವಸ್ಥಾನವು ದಿಘಂಚಿಯಿಂದ ಉತ್ತರ ದಿಕ್ಕಿಗೆ ೧ ಕಿ ಮೀ ದೂರದಲ್ಲಿದೆ.
ಹಬ್ಬಗಳು
[ಬದಲಾಯಿಸಿ]ದಿಘಂಚಿಯಲ್ಲಿ ಹಿಂದೂ ಹಾಗೂ ಬೌದ್ಧ ಹಬ್ಬಗಳನ್ನು ಆಚರಿಸಲಾಗುತ್ತದೆ . ಸಾಂಪ್ರದಾಯಿಕ ಮರಾಠ ಜನರು ಹಿಂದೂ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಅವರು ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ದಿಘಂಚಿಯಲ್ಲಿ ಬೈಲ್ ಪೋಲಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೈಲ್ ಪೋಲಾ ಇಡೀ ಹಳ್ಳಿಯಲ್ಲಿ ನಡೆಯುತ್ತದೆ. ದಿಘಂಚಿಯಲ್ಲಿ ಜನರು ವಾರ್ಷಿಕ ಜಾತ್ರೆಯನ್ನು ನಡೆಸುವುದರೊ೦ದಿಗೆ ಶಿವ ಜಯ೦ತಿ, ದೀಪಾವಳಿಯಲ್ಲಿ ದಿಘಂಚಿ ಹಬ್ಬ, ಗಣೇಶ ಉತ್ಸವ, ದಹಿ ಹಂಡಿ ಹಾಗೂ ದಿಘಂಚಿಕರ್ ಅವರು ಸಿರಿಯಾಳ ಷಷ್ಠಿಯನ್ನುತು೦ಬಾ ಉತ್ಸಾಹದಿಂದ ಆಚರಿಸುತ್ತಾರೆ. ಜಾತ್ರೆಯಲ್ಲಿ ಕುಸ್ತಿ ಸ್ಪರ್ಧೆಯನ್ನೂ ಆಯೋಜಿಸಲಾಗುತ್ತದೆ.
ಶಿಕ್ಷಣ
[ಬದಲಾಯಿಸಿ]ದಿಘಂಚಿಯ ಜನಸಂಖ್ಯೆಯು ಶ್ರಮ ಮತ್ತು ಕೃಷಿ ಉತ್ಪನ್ನಗಳ ತಯಾರಿಯನ್ನು ಅವಲ೦ಬಿಸಿದೆ.ಈ ಕಾರಣದಿಂದಾಗಿ ಈ ಗ್ರಾಮದಲ್ಲಿ ಪ್ರತಿಶತ ೫೦ ಅನಕ್ಷರಸ್ಥ ಜನರನ್ನು ಕಾಣುತ್ತೇವೆ.
ಶೈಕ್ಷಣಿಕ ಸೌಲಭ್ಯಗಳು
[ಬದಲಾಯಿಸಿ]ದಿಘಂಚಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ಸೌಲಭ್ಯವಿದೆ. ದಿಘಂಚಿಯಲ್ಲಿ ದಿಘಂಚ್ ಪ್ರೌಢ ಶಾಲೆ ಇದ್ಧು, ಉನ್ನತ , ಪ್ರಾಥಮಿಕ ಮತ್ತು ಉನ್ನತ ಪ್ರೌಢ ಶಿಕ್ಷಣದ ಸೌಲಭ್ಯವಿದೆ. ದಿಘಂಚಿಯಲ್ಲಿ ಪ್ರತ್ಯೇಕವಾಗಿ ಬಾಲಕಿಯರ ಪ್ರೌಢ ಶಾಲೆ ಇದೆ. ದಿಘಂಚಿ ಪ್ರದೇಶದ ಗಣ್ಯರು ಮತ್ತು ಶ್ರೀಮಂತರು ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿದರು. ಆದರೆ, ಈ ಗ್ರಾಮದಲ್ಲಿನ ಹಿಂದುಳಿದ ಜಾತಿಗಳು ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ದಿಘಂಚಿಯಲ್ಲಿ ಸರಿಸುಮಾರು ೪ ಪ್ರೌಢ ಶಾಲೆಗಳಿವೆ. ಇಂದ್ರಭಾಗ್ಯ ಕ್ಯಾಂಪಸ್‌ನಲ್ಲಿ ಒಂದು ಐ ಟಿ ಐ ಮತ್ತು ನರ್ಸಿಂಗ್ ಕಾಲೇಜು ಕೂಡ ಇದೆ ಮತ್ತು ಒಂದು ಕೃಷಿ ಡಿಪ್ಲೊಮಾ ಕಾಲೇಜು ಕೂಡ ಇದೆ.
ಗ್ರಂಥಾಲಯ
[ಬದಲಾಯಿಸಿ]ದಿಘಂಚಿಯಲ್ಲಿ ಸರ್ಕಾರವು ಗ್ರಾಮ ಮಟ್ಟದಲ್ಲಿ ಗ್ರಂಥಾಲಯ ಹಾಗೂ ಓದುವ ಕೊಠಡಿಗೆ ಅನುದಾನವನ್ನು ನೀಡುತ್ತದೆ. ಆದರೆ, ಅಲ್ಲಿಇತ್ತೀಚಿನ ಪುಸ್ತಕಗಳು ಲಭ್ಯವಿಲ್ಲ. ಸುಮಾರು ೨ ಗ್ರಂಥಾಲಯಗಳಿವೆ. ದಿಘಂಚಿಯಲ್ಲಿ ಒ೦ದು ನಗರ ವಾಚನಾಲಯ, ದೊಡ್ದ ಗ್ರಂಥಾಲಯ ಮತ್ತು ನಾಮದೇವ್ ರಾವ್ ಕಾಳೆ ನಗರ ವಾಚನಾಲಯವೂ ಇದೆ.