ಸದಸ್ಯರ ಚರ್ಚೆಪುಟ:Yellumalai subramani

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಅಂತರಾಷ್ಟ್ರೀಯ ಸಂಬಂಧಗಳು'


ಅಂತಾರಾಷ್ಟ್ರೀಯ ಸಂಬಂಧಗಳುಆಧುನಿಕ ಯುಗದ ವಿಶ್ವವ್ಯಾಪಾರಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಬಹು ಪ್ರಮುಖವಾದ ಸ್ಥಾನವನ್ನು ಹೊಂದಿವೆ. ಅಂತಾರಾಷ್ಟ್ರೀಯ ಸಂಬಂಧಗಳು ಈಗ ಒಂದು ವಿಶೇಷ ಅಧ್ಯಯನವಾಗಿ ಪರಿಗಣಿಸಲ್ಪಟ್ಟಿವೆ. ಅವು ಇತರ ಸಮಾಜಶಾಸ್ತ್ರಗಳಂತೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾನವನ ಮತ್ತು ರಾಷ್ಟ್ರಗಳ ನಡೆವಳಿಕೆಗೆ ಸಂಬಂಧಪಟ್ಟಿವೆ. ಕೆಲವು ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಶಾಖೆಯನ್ನು ರಾಜಕೀಯಶಾಸ್ತ್ರದ ಒಂದು ಮುಖ್ಯವಾದ ಭಾಗವೆಂದು ಪರಿಗಣಿಸಲಾಗಿದೆ.

   ಈಗಿನ ಕಾಲದಲ್ಲಿ ಯಾವ ರಾಷ್ಟ್ರವೇ ಆಗಲಿ, ಬೇರೆ ರಾಷ್ಟ್ರಗಳೊಡನೆ ಸಂಬಂಧ ಬೆಳೆಸದೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. ಅಂದರೆ, ಆಧುನಿಕ ರಾಷ್ಟ್ರಗಳು ಪ್ರತ್ಯೇಕವಾಗಿ ಜೀವಿಸಲಾರವು. ಅವು ಯಾವಾಗಲೂ ಪ್ರಪಂಚದ ಇತರ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿಯೇ ಜೀವಿಸಬೇಕು. ಆದುದರಿಂದ ಪ್ರತಿ ರಾಷ್ಟ್ರವೂ ಬೇರೆ ರಾಷ್ಟ್ರಗಳೊಂದಿಗೆ ಸರಿಯಾದ ಸಂಬಂಧವನ್ನು ಇಟ್ಟುಕೊಳ್ಳಲೇಬೇಕು. ಇಂಥ ಸಂದರ್ಭ ಅಂತಾರಾಷ್ಟ್ರೀಯ ಸಂಬಂಧಕ್ಕೆ ಎಡೆಮಾಡಿಕೊಟ್ಟಿದೆ.
   ಆದುದರಿಂದ ಇಂದಿನ ರಾಜಕೀಯ ಜೀವನದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಬಹು ಪ್ರಮುಖವಾಗಿವೆ. ಈಗ ಪ್ರತಿಯೊಬ್ಬ ಮಾನವನೂ ಇತರ ಮಾನವರ ಜೊತೆಯಲ್ಲಿ ಸಂಬಂಧವನ್ನು ಬೆಳೆಸದೆ ಜೀವಿಸುವುದು ಎಷ್ಟು ಕಷ್ಟವೋ ಅದೇ ರೀತಿ ಒಂದು ರಾಷ್ಟ್ರವೂ ಬೇರೆ ರಾಷ್ಟ್ರಗಳೊಡನೆ ಸಂಬಂಧ ಬೆಳೆಸದೆ ಜೀವಿಸುವುದೂ ಕಷ್ಟ. ಈಗ ಅನೇಕ ಕಾರಣಗಳಿಂದ ಪ್ರಪಂಚದ ಯಾವುÀದೋ ಒಂದು ಭಾಗದಲ್ಲಿ ಆಗುವ ಘಟನೆಗಳು, ಎಲ್ಲ ರಾಷ್ಟ್ರಗಳ ಜನಜೀವನ ಮತ್ತು ರಾಷ್ಟ್ರನೀತಿಗಳ ಮೇಲೆ ಪರಿಣಾಮ ಬೀರುತ್ತವೆ.
   ಈ ಸಂದರ್ಭ ಆಧುನಿಕ ಸಾರಿಗೆ ಮತ್ತು ಸಂಪರ್ಕ ಸಾಧನಗಳಿಂದಿರಬಹುದು ಅಥವಾ ಆಧುನಿಕ ರಾಷ್ಟ್ರಗಳ ಪರಸ್ಪರ ಅವಲಂಬನದಿಂದಿರಬಹುದು. ಈಗ ಭೌಗೋಳಿಕವಾಗಿ ಒಂದು ಪ್ರಪಂಚವಿದ್ದರೂ ರಾಜಕೀಯ, ಆರ್ಥಿಕ ಮತ್ತು ತಾತ್ತ್ವಿಕ ದೃಷ್ಟಿಯಿಂದ ಅದು ಬೇರೆಬೇರೆ ಪ್ರಪಂಚಗಳಾಗಿ ವಿಂಗಡವಾಗಿದೆ. ಇಂಥ ಪ್ರಪಂಚದಲ್ಲಿ ಪ್ರತಿಯೊಂದು ರಾಷ್ಟ್ರವೂ ಬೇರೆ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಲೇಬೇಕು. ಈ ಸಂಬಂಧಗಳನ್ನು ಅಂತಾರಾಷ್ಟ್ರೀಯ ಸಂಬಂಧಗಳೆಂದು ಕರೆಯುತ್ತಾರೆ.


ಹಳೆಯ ಕಾಲದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು:

   ಅಂತಾರಾಷ್ಟ್ರೀಯ ಸಂಬಂಧಗಳು ಬಹು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಪ್ರಾಚೀನ ಕಾಲದಲ್ಲಿ ಕೆಲವು ರಾಷ್ಟ್ರಗಳು ತಮ್ಮ ಸಂಪರ್ಕವನ್ನು ಬೇರೆ ರಾಷ್ಟ್ರಗಳೊಡನೆ ಬೆಳೆಸಿಕೊಂಡಿದ್ದುವು. ಆದರೆ ಆಗ ಇವಕ್ಕೆ ಅಷ್ಟು ಪ್ರಾಮುಖ್ಯವಿಲ್ಲದಿದ್ದರೂ ಆಧುನಿಕ ಕಾಲದಲ್ಲಿ ಪ್ರತಿ ಯೊಂದು ರಾಷ್ಟ್ರವೂ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಗಮನ ಕೊಡಲೇಬೇಕಾಗಿದೆ. 20ನೆಯ ಶತಮಾನದಲ್ಲಿ ಯಾವ ರಾಷ್ಟ್ರವೂ ಇವುಗಳನ್ನು ಕಡೆಗಣಿಸುವ ಹಾಗಿಲ್ಲ.
   ಏಕೆಂದರೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು ರಾಷ್ಟ್ರದ ಅಳಿವು ಉಳಿವು ಅದರ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ನಿಂತಿದೆ. ಇದೇ ಸಂದರ್ಭವೇ ಇದರ ಬೆಳೆವಣಿಗೆಗೆ ವಿಶೇಷ ಪ್ರೋತ್ಸಾಹ ಕೊಟ್ಟಿದೆ. ನಾನಾ ಕಾರಣಗಳಿಂದ ಅಂತಾರಾಷ್ಟ್ರೀಯ ಸಂಬಂಧಗಳು ಈಗಿನ ಕಾಲದಲ್ಲಿ ಪ್ರಾಮುಖ್ಯ ಪಡೆದಿವೆ. ಇದು ಪ್ರಪಂಚದ ಸನ್ನಿವೇಶವನ್ನು ತಿಳಿಯಲು ಅವಕಾಶವನ್ನುಂಟುಮಾಡುತ್ತದೆ. ಯುದ್ಧದಿಂದ ಆಗುವ ಪರಿಣಾಮಗಳನ್ನು ತಿಳಿಸಿ, ಅವಕ್ಕೆ ಪರಿಹಾರೋಪಾಯಗಳನ್ನು ಸೂಚಿಸುತ್ತದೆ.
   ಅಂತಾರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದದ ವೈಶಿಷ್ಟ್ಯವನ್ನು ತಿಳಿಸಿ ಅದನ್ನು ಕಾಪಾಡಿಕೊಂಡು ಹೋಗುವ ಮಾರ್ಗಗಳನ್ನು ಸೂಚಿಸುತ್ತದೆ; ಪ್ರಪಂಚದಲ್ಲಿ ಒದಗಬಹುದಾದ ಯುದ್ಧಗಳನ್ನು ತಡೆಗಟ್ಟಿ, ಅದರಿಂದ ಮಾನವ ಜನಾಂಗದ ಏಳಿಗೆಗೆ ಶ್ರಮಿಸುತ್ತಿದೆ. ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಹಾಗೂ ಪ್ರಜಾಸತ್ತೆಯ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಇದು ಪ್ರೋತ್ಸಾಹಿಸುತ್ತದೆ.
   ಇದರ ಜೊತೆಗೆ ಅಂತಾರಾಷ್ಟ್ರೀಯ ವ್ಯವಹಾರ ನಿರ್ವಹಣೆಗೆ ಅವಕಾಶ ಮಾಡಿಕೊಡುತ್ತದೆ. ಪ್ರಪಂಚದ ಪ್ರತಿಯೊಬ್ಬ ನಾಗರಿಕನ ಮತ್ತು ಪ್ರತಿ ರಾಷ್ಟ್ರದ ಮೇಲೆ ಇದರ ಪ್ರಭಾವ ಬಿದ್ದಿರುವುದರಿಂದ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಇಂದಿನ ಪ್ರಪಂಚದಲ್ಲಿ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ.