ಸದಸ್ಯರ ಚರ್ಚೆಪುಟ:Viviansharu

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Viviansharu


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (talk) ೧೨:೫೧, ೧೫ ಡಿಸೆಂಬರ್ ೨೦೧೪ (UTC)

ನನ್ನ ಜೀವನದ ಕಿರು ಪರಿಚಯ......[ಬದಲಾಯಿಸಿ]

ನನ್ನ ಹೆಸರು ಇನ್ಫೆಂಟ್ ವಿವಿಯನ್, ನಾನು ಡಿಸೆಂಬರ್ ೧೦,೧೯೯೩ ರಲ್ಲಿ ಬೆಂಗಳೂರಿನಲ್ಲಿರುವ ಫಾತಿಮಾಪುರ ಎಂಬ ಗ್ರಾಮದಲ್ಲಿ ಜನಿಸಿದೆನು. ನಮ್ಮ ಕುಟುಂಬದಲ್ಲಿ ನಾವು ೫ ಜನ ನನ್ನ ತಂದೆ, ತಾಯಿ, ತಮ್ಮ ತಂಗಿ ಮತ್ತು ನಾನು. ನಾನು ನನ್ನ ಪ್ರಾಥಮಿಕ ಮತ್ತು ಪ್ರೌಡ ಶಾಲೆಯನ್ನು ನನ್ನ ಹುಟ್ಟೂರಿನಲ್ಲಿರುವ ಸೇಕ್ರೆಡ್ ಹಾರ್ಟ್ ವಿದ್ಯಾಲಯದಲ್ಲಿ ಮುಗಿಸಿದೆನು.ತದ ನಂತರ ನಾನು ನನ್ನ ಪಿ.ಯು.ಸಿ ಯನ್ನು ಸಂತ ಜೋಸೆಫರ ಕಾಲೇಜ್, ಬೆಂಗಳೂರಿನಲ್ಲಿ ಮುಗಿಸಿದೆನು. ಪಿ.ಯು.ಸಿ ಮುಗಿಸಿದ ಬಳಿಕ ಎರಡು ವರ್ಷಗಳ ಕಾಲ ಬೈಬಲ್ ಅಧ್ಯಯನ ಮಾಡಿದೆನು. ತದ ನಂತರ ಕೇರಳದಲ್ಲಿ ಒಂದು ವರುಶ ಇಂಗ್ಲೀಷ್ ಅಧ್ಯಯನ ಮಾಡಿದೆನು..

ಸಾಧನೆಗಳು...

           ನಾನು ನನ್ನ ಈ ೨೧ ವರ್ಷದ ಕಾಲಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ, ಅಷ್ಟಲ್ಲದೆ ಕೆಲವು ಸಾಧನೆಗಳನ್ನು ಸಹ ಮಾಡಿದ್ದೇನೆ. ನಾನು ಪ್ರೌಡ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಮೂರು ವರ್ಷ ಬಿಡದೆ ಹಿಂದೆ ಭಾಷೆಯಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಗಳಿಸಿದ್ದೆ ಹಾಗೂ ೧೦ನೇ ತರಗತಿಯಲ್ಲಿ ಕಧೋಲಿಕ ಕ್ರೈಸ್ತರಿಗೆ ಏರ್ಪಡಿಸಿದ್ದ ಧರ್ಮೊಪದೇಶ ಪರೀಕ್ಷೆಯಲ್ಲಿ ಇಡೀ ಬೆಂಗಳೂರಿನಲ್ಲಿ ೬ನೇ ಸ್ಥಾನವನ್ನು ಗಳಿಸಿದ್ದೆ,ಇದೊಂದು ಹೆಮ್ಮೆ ಪಡುವ ವಿಷಯ....
       ಇದು ನನ್ನ ಜೀವನದ ಒಂದು ಕಿರು ಪರಿಚಯ....