ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Venkatesh Das

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Venkatesh Das


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೬:೪೭, ೧೩ ಡಿಸೆಂಬರ್ ೨೦೨೧ (UTC)

ಕವಿ ಮುದಲ್ ವಿಜಯ್ LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ[ಬದಲಾಯಿಸಿ]

ಕನ್ನಡ ಸಾಹಿತ್ಯ ಲೋಕದ ಒಂದು ಅದ್ಭುತವಾದ ಪ್ರತಿಭೆ. ಅವರ ಮಾತೃಭಾಷೆ ತಮಿಳಾದರೂ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ. ತಮಿಳಮ್ಮನ ಕನ್ನಡಾಭಿಮಾನದಿಂದ ಚಿಕ್ಕಂದಿನಲ್ಲಿ ಕನ್ನಡ ವಿದ್ಯಾಭ್ಯಾಸ ಮಾಡಿದ ಮುದಲ್ ವಿಜಯ್ ಅವರು ಕನ್ನಡದ ಕವಿಯಾದರು. ತಮಿಳು ಶಾಲೆಯಲ್ಲಿ ಕುಳಿತಿದ್ದ ಅವರನ್ನು ತಾಯಿ ಎಳೆತಂದು ಕನ್ನಡ ಶಾಲೆಗೆ ಕೂರಿಸಿದರು. ನಾವು ಬೆಂಗಳೂರಲ್ಲಿ ಬದುಕಬೇಕೆಂದರೆ ನನ್ನ ಮಗನಿಗೆ ಕನ್ನಡ ಕಲಿಸಬೇಕು. ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಶಿಕ್ಷಕರ ಬಳಿ ಕೇಳಿಕೊಂಡರಂತೆ. ಹೀಗಾಗಿ ಮುದಲ್ ವಿಜಯ್ ಕನ್ನಡ ಕಲಿತರು. ನಂತರದ ದಿನಗಳಲ್ಲಿ ಪಿಯುಸಿ ಮತ್ತು ಪದವಿಯನ್ನು ವಿಜ್ಞಾನದಲ್ಲಿ ಪೂರೈಸಿದ ಅವರು, ತಮ್ಮದೇ ಆದ ಕಂಪನಿಯೊಂದನ್ನು ಆರಂಭಿಸಿ ಸ್ವುದ್ಯೋಗದಲ್ಲಿ ತೊಡಗಿಸಿಕೊಂಡರು.

ನಂತರದ ದಿನಗಳಲ್ಲಿ ಖ್ಯಾತ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾದ ಸಿದ್ದಲಿಂಗಯ್ಯ ಅವರ ಒಡನಾಟಕ್ಕೆ ಬಂದ ವಿಜಯ್ ಅವರಿಗೆ ಸಾಹಿತ್ಯದ ಬಗೆಗಿನ ಆಸಕ್ತಿ ಬೆಳೆಯಿತು. ಸಿದ್ದಲಿಂಗಯ್ಯ ಅವರ ಪ್ರೇರಣೆಯಿಂದ ಕವಿತೆಗಳನ್ನು ಬರೆಯಲು ಆರಂಭಿಸಿದ ಮುದಲ್ ವಿಜಯ್ ಅವರು ಅನೇಕ ಕವಿತೆಗಳನ್ನು ಬರೆದಿದ್ದಾರೆ. ಅವರ ಅಂತರಾಳದ ಅಳಲು, ಜೋಗಿ ಜಂಗಮ, ಜವುಗು. ಕಡಲಿನಾಳದ ಕವಿತೆಗಳು ಮೊದಲಾದ ಕವನ ಸಂಕಲನಗಳು ನಾಡಿನಾದ್ಯಂತ ಸಂಚಲನ ಮೂಡಿಸಿವೆ. ಅವರ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡು ಡಾ.ಸಿದ್ದಲಿಂಗಯ್ಯ, ಬೈರಹೊಂಗಲ ರಾಮೇಗೌಡ, ಎಚ್.ದಂಡಪ್ಪ ಅವರಂತಹ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಸಿರಿಗನ್ನಡ ಮಿತ್ರ ತಂಡದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ಸಿದ್ದಲಿಂಗಯ್ಯ ಅವರ ಒಡನಾಟದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮುದಲ್ ವಿಜಯ್ ಅವರು, ಸಿದ್ದಲಿಂಗಯ್ಯ ಅವರ ಕುರಿತು ಬರೆದ "ವಂದನೆ, ಅಭಿನಂದನೆ, ಮಾಗಡಿಯ ಮಗನಿಗೆ' ಎಂಬ ಕವಿತೆ ಜೋಗಿಲಾ ಸಿದ್ದರಾಜು ಧ್ವನಿಯಲ್ಲಿ ನಾಡಿನಾದ್ಯಂತ ಹೆಸರು ಮಾಡಿತ್ತು. ಈ ಗೀತೆಯನ್ನು ಸಿದ್ದಲಿಂಗಯ್ಯ ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಶ್ರವಣಬೆಳಗೊಳದಲ್ಲಿ ಅನೇಕ ಗಾಯಕರು ಪದೇಪದೆ ಹಾಡುವ ಮೂಲಕ ಸಿದ್ದಲಿಂಗಯ್ಯ ಅವರಿಗೆ ಗೌರವ ಸಲ್ಲಿಸಿದ್ದರು.

ಮುದಲ್ ವಿಜಯ್ ಅವರು ಬರೆದಿರುವ ನೆನಪು ಕಾದಂಬರಿ ನಾಡಿನ ಪ್ರಸಿದ್ಧ ಪ್ರಾದೇಶಿಕ ಪತ್ರಿಕೆ ಉದಯಕಾಲದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗಿತ್ತು. ನಂತರ ಅದೇ ಕಾದಂಬರಿಯನ್ನು ವಾರಪತ್ರಿಕೆಗಳಲ್ಲಿಯೂ ಸರಣಿ ರೂಪದಲ್ಲಿ ಪ್ರಕಟ ಮಾಡಲಾಗಿತ್ತು. ಮುದಲ್ ವಿಜಯ್ ಅವರು ಲೇಖಕ, ಕವಿ ಮಾತ್ರವಲ್ಲದೇ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ತಮ್ಮಲ್ಲಿನ ಕನ್ನಡತನ, ಸಮಾಜಿಕ ಕಳಕಳಿಯನ್ನು ಪ್ರಕಟ ಮಾಡುತ್ತಿದ್ದಾರೆ. ಇದುವರೆಗೂ ನಾಲ್ಕು ಕವನ ಸಂಕಲನಗಳು, ಮೂರೂ ಕಾದಂಬರಿಗಳು ಲೋಕಾರ್ಪಣೆಯಾಗಿವೆ. ಐದನೇ ಕವನಸಂಕಲನ ತಯಾರಿಯಲ್ಲಿದೆ. ಮೂಲನಾಮ ವಿಜಯಕುಮಾರ್ ಎಂತಾದರು ಸಾಹಿತ್ಯವಲಯದಲ್ಲಿ ಮುದಲ್ ವಿಜಯ್ ಎಂದು ಪರಿಚಯ.


ಪರಿವಿಡಿ ೧ ಜನನ, ವಿದ್ಯಾಭ್ಯಾಸ

೧೩.೧೨.೧೯೭೦ ರಂದು ಬೆಂಗಳೂರಿನ ಯಶವಂತಪುರದಲ್ಲಿ ಜನನ. ತಂದೆ ದಿವಂಗತ ದಕ್ಷಿಣಾಮೂರ್ತಿ, ತಾಯಿ ಶ್ರೀಮತಿ ಶಾಂತ. ಮಾತೃ ಭಾಷೆ ತಮಿಳು. ಓದಿದ್ದು ಕನ್ನಡ ಮಾಧ್ಯಮದಲ್ಲಿ ಪದವಿ

೨ ವೃತ್ತಿ-ಜೀವನ ವೃತ್ತಿಯಲ್ಲಿ ವ್ಯಾಪಾರಿ. ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರ.

೩ ಕವನ ಸಂಕಲನಗಳು: ಅಂತರಾಳದ ಅಳಲು ಕಡಲಿನಾಳದ ಕವನ ಜೋಗಿಜಂಗಮ ಜವುಗು

ಕಾದಂಬರಿಗಳು:

ನೆನಪು ನಿರ್ವಾಣ ನೂಲಿನ ಬೇಲಿ

ಧ್ವನಿ ಸುರುಳಿ: ಕಡಲಿನಾಳದ ಹಾಡು ಒಲವ ಧಾರೆ


೫ ಪ್ರಶಸ್ತಿಗಳು