ಸದಸ್ಯರ ಚರ್ಚೆಪುಟ:THANGAMMA PADEYANDA/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ರೈಟ್ ಸಹೋದರರು

ವ್ರೈಟ್ ಸಹೋದರರು, ಒರ್ವಿಲ್ಲೆ (ಜನನ: ಆಗಸ್ಟ್ ೧೯, ೧೮೭೧ – ಮರಣ: ಮೇ ೩೦, ೧೯೧೨ ) ಹಾಗು ವಿಲ್ಬರ್' (ಜನನ: ಏಪ್ರಿಲ್ ೧೬, ೧೮೬೭ – ಮರಣ:ಮೇ ೩೦, ೧೯೧೨ ) ಅಮೇರಿಕಾರಾಷ್ಟ್ರೀಯರು. ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ ೧೭, ೧೯೦೩ ರಂದುವಿಮಾನ ಚಾಲನೆ ಮಾಡಿದವರು.

ಬಾಲ್ಯ

ವ್ರೈಟ್ ಸಹೋದರರು ಮಿಲ್ಟೊನ್ ವ್ರೈಟ್ ಹಾಗು ಸುಸಾನ್ ಕ್ಯಾಥೆರಿನ್ ಕೊರ್ನೆರವರ ೭ ಮಕ್ಕಳಲ್ಲಿ ಇಬ್ಬರಾಗಿ ಜನಿಸಿದರು. ವಿಲ್ಬರ್ ಮಿಲ್ವಿಲ್ಲೇ, ಇಂಡಿಯಾನದಲ್ಲಿ ಹಾಗು ಒರ್ವಿಲ್ಲೆ ಡೆಯ್ಟೊನಾ, ಓಹಿಯೊದಲ್ಲಿ ಜನಿಸಿದರು. ಪ್ರಾಥಮಿಕ ವ್ಯಾಸಂಗದ ಸಮಯದಲ್ಲಿ ಒರ್ವಿಲ್ಲೆ ತುಂಬಾ ತುಂಟನಾಗಿದ್ದು ಒಮ್ಮೆ ಶಾಲೆಯಿಂದ ಹೊರಗೆ ಕಳಿಸಲಾಗಿತು[೧]. ೧೮೭೮ರಲ್ಲಿ ಅವರ ತಂದೆ ಚರ‍್ಚಿನ ಹಿರಿಯ ಅರ‍್ಚಕರಾಗಿದ್ದು, ಬಹಳ ತಿರುಗಾಟದಲ್ಲಿರುತಿದ್ದರು. ಅದೇ ಸಮಯದಲ್ಲಿ ಒಮ್ಮೆ ಅವರು ತನ್ನ ಹಿರಿಯ ಮಕ್ಕಳಿಗಾಗಿ ಒಂದು ಆಟಿಕೆಯ ಹೆಲಿಕಾಪ್ಟರ್ ತಂದಿದ್ದರು. ವಿಲ್ಬರ್ ಹಾಗು ಒರ್ವಿಲ್ಲೆ ಆ ಆಟಿಕೆ ಮುರಿಯುವ ತನಕ ಅದರಲ್ಲಿ ಆದಿದ್ದರು ಹಾಗು ನಂತರದ ದಿನಗಳಲ್ಲಿ ಅದೇ ರೀತಿಯ ಹೆಲಿಕಾಪ್ಟರ್ ತಯಾರಿಸುವಲ್ಲಿ ಸಫಲರಾಗಿದ್ದರು[೨]. ಇದೇ ಅನುಭವ ಅವರಲ್ಲಿ ವೈಮಾನಿಕ ಹಾರಾಟದತ್ತ ಆಸಕ್ತಿ ಹುಟ್ಟಿಸಿತು[೩]. ಮೊದಲ ವೃತ್ತಿಜೀವನ ಹಾಗು ಸಂಶೋಧನೆ

ಕುಟುಂಬವು ೧೮೮೪ರ ಸುಮಾರಿಗೆ ಅಚಾನಕ್ಕಗಿ ರಿಚ್ಮಂಡ್, ಇಂಡಿಯಾನದಿಂದ ಡೆಯ್ತೊನಾಕ್ಕೆ ವಲಸೆ ಹೊದ್ದರಿಂದಾಗಿ ಸಹೊದರರಿಗೆ ತಮ್ಮ ಹೈಸ್ಕೊಲ್ ವ್ಯಾಸಾಂಗ ಪೂರೈಸಲಾಗಲಿಲ್ಲ. ೧೮೯೨ರ ಸುಮಾರಿಗೆ ಹೊಸ ರೀತಿಯ ಬೈಸಿಕಲ್ (ಸಮಾನ ಗಾತ್ರ ಹಾಗು ಆಕಾರದ ಚಕ್ರ ಹೊಂದಿದ) ದುರಸ್ತಿ ಹಾಗೂ ಮಾರಾಟದ ಅಂಗಡಿಯನ್ನು ಹೊಂದಿ ಅದಕ್ಕೆ ವ್ರೈಟ್ ಸೈಕಲ್ ಎಕ್ಸ್ ಚೆಂಜ್ ಎಂದು ಹೆಸರಿಟ್ಟರು ಹಾಗು ಮುಂದೆ ಅದಕ್ಕೆ ವ್ರೈಟ್ ಸೈಕಲ್ ಕಂಪೆನಿ ಎಂದು ಬದಲಾಯಿಸಿ ೧೮೯೬ರ ಸುಮಾರಿಗೆ ತಮ್ಮದೆ ಆದ ಛಾಪಿನ ಸೈಕಲ್ ತಯಾರಿಸಲು ಪ್ರಾರಂಬಿಸಿದರು

ತರಂಗ

ತರಂಗಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ

ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ 

ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ.

ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ ಶಬ್ದ ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು ವಿದ್ಯುತ್ ಕಾಂತೀಯ ತರಂಗಗಳು. ಇವುಗಳ ಚಲನೆಗೆ ಮಾಧ್ಯಮಗಳ ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು

ಒಳಗೊಂಡಿರುತ್ತವೆ. ಆದ್ದರಿಂದಲೇ ಇವು ನಿರ್ವಾತದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ ರೇಡಿಯೋ ತರಂಗಗಳು, 

ಸೂಕ್ಷ್ಮ ತರಂಗಗಳು, ರಕ್ತಾತೀತ ತರಂಗಗಳು, ದೃಶ್ಯ ತರಂಗಗಳು, ನೇರಳಾತೀತ ತರಂಗಗಳು, ಕ್ಷ ತರಂಗಗಳು, ಗ್ಯಾಮ ತರಂಗಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ.