ಸದಸ್ಯರ ಚರ್ಚೆಪುಟ:THANGAMMA PADEYANDA
ತರಂಗ
ತರಂಗಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು.
ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ
ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು
ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ
ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ
ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ.
ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ ಶಬ್ದ ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ
ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು ವಿದ್ಯುತ್ ಕಾಂತೀಯ ತರಂಗಗಳು. ಇವುಗಳ ಚಲನೆಗೆ ಮಾಧ್ಯಮಗಳ
ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವು ನಿರ್ವಾತದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ ರೇಡಿಯೋ ತರಂಗಗಳು, ಸೂಕ್ಷ್ಮ ತರಂಗಗಳು, ರಕ್ತಾತೀತ ತರಂಗಗಳು, ದೃಶ್ಯ ತರಂಗಗಳು, ನೇರಳಾತೀತ ತರಂಗಗಳು, ಕ್ಷ ತರಂಗಗಳು, ಗ್ಯಾಮ ತರಂಗಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ.
ಭೂಮಿ
ಭೂಮಿ - ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರು ವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು.
ಇತಿವೃತ್ತ
ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯು ೪೬೦ಕೋಟಿ ವರ್ಷಗಳ ಹಿಂದೆ ರೂಪು ಗೊಂಡಿತು.[೧] ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು. ಪರಿಚಯ
ಭೂಮಿಯ ಚಿಪ್ಪು ಹಲವು ಫಲಕಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ
ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಭೂಮಿಯ ಅತ್ಯಂತ ಮೇಲಿನ ಪದರ ಚಿಪ್ಪು. ಇದು ಸಿಲಿಕ - ಅಲ್ಯುಮಿನಿಯಂನಿಂದಾದ ಹೊರ¥Àಪದರ,, ಸಿಲಿಕ-ಮೆಗ್ಮೀನಿಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಖಂಡದ ಕೆಳಗೆ ಚಿಪ್ಪು ಹೆಚ್ಚು ಮಂದವಿದೆ.
ಆದರೆ ಸಾಗರದಡಿಯಲ್ಲಿ ತೆಳುವಾಗಿದೆ. ಕವಚವು ಅರೆಘನಸ್ಥಿತಿಯಲ್ಲಿದೆ.ಬಹುತೇಕ ಎಲ್ಲ ಲೋಹಗಳ ಭಂಡಾರವಿದು. ಭೂಗರ್ಭವು ಕಬ್ಬಿಣ ಮತ್ತು
ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇದು. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ.
ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ.
ಮೇಲ್ಮೈನ ಸುಮಾರು ೭೧% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದೆ; ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ. ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ವಿನಿಮಯ ಕ್ರಿಯೆಗಳು ಜರಗುತ್ತವೆ.
ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ
ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂ ಇತಿಹಾಸದ ಮೊದಲ
ಭಾಗದಲ್ಲಿ ಧೂಮಕೇತು ಅಪ್ಪಳಿಸಿದ್ದರಿಂದ ಸಾಗರಗಳು ಉದ್ಭವವಾದವು ಎಂಬುದು ಒಂದು ಸಿದ್ಧಾಂತ. ನಂತರದ ಕ್ಷುದ್ರಗ್ರಹಗಳ ತಾಡನೆಯಿಂದ ಮೇಲ್ಮೈ ಸಾಕಷ್ಬ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟುಮಾಡಿರಬಹುದು. ಓರೆಗೊಂಡ ಭೂ ಕಕ್ಷೆ ದೀರ್ಘಾವಧಿ ಯಲ್ಲಿ [:en:Milankovitch cycle ಭೂ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ ಹಿಮಯುಗಗಳಿಗೂ
ಕಾರಣವಾಗಿದ್ದಿರಬಹುದು.
ಇತಿಹಾಸ
ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು
೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು solar nebula ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು
ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ
ಚಂದ್ರ ರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತ್ರದ ಥೀಯ ಎಂಬ ಕಾಯ ಭೂಮಿಯನ್ನು ತಾಡಿಸಿದ್ದರಿಂದ ಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು;
ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲ ಸಾಗರಗಳು ರೂಪುಗೊಂಡವು.[೨]
ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಜೀವಾಧಾರವಾದ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು. *ಭೂವಿಜ್ಞಾನದಲ್ಲಿ ಈ ಕಾಲವನ್ನು ಆದಿಜೀವಿಕಲ್ಪ ಎಂದು ಗುರುತಿಸಲಾಗಿದೆ.[೩]ಆರಂಭದಲ್ಲಿ ಕೆಳದರ್ಜೆಯ ಸಸ್ಯವಾದ ಪಾಚಿ ಮೈದಳೆಯಿತು. ದ್ಯುತಿಸಂಶ್ಲೇಷಣೆಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ ಆಮ್ಲಜನಕವು ವಾಯುಮಂಡಲದಲ್ಲಿ ಶೇಖರವಾಗಿ ಓಜೋನ್ ಪದರವನ್ನು ನಿರ್ಮಿಸಿತು.
Start a discussion with THANGAMMA PADEYANDA
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with THANGAMMA PADEYANDA. What you say here will be public for others to see.