ಸದಸ್ಯರ ಚರ್ಚೆಪುಟ:Sunithapathi
̺
ಸುನಿತಾ.ಪಿ | |
---|---|
ಜನನ | ಸುನಿತಾ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯರು |
ಇತರೆ ಹೆಸರು | ಚಿಟ್ಟಿ |
ವಿದ್ಯಾಭ್ಯಾಸ | ಬಿ.ಕಾ.ಮ್ |
ವೃತ್ತಿ | ವಿಧ್ಯಾರ್ಥಿನಿ |
ಗಮನಾರ್ಹ ಕೆಲಸಗಳು | ವಿಧೇಯತೆ |
ಹೆಸರು
[ಬದಲಾಯಿಸಿ]ನನ್ನ ಹೆಸರು ಸುನಿತ.ಪಿ ನನ್ನ ತಂದೆಯ ಹೆಸರು ಪತಿ ಹಾಗು ತಾಯಿಯ ಹೆಸರು ಶಶಿಕಲಾ. ನನಗೆ ಮಮತ ಮತ್ತು ಮೋನಿಕ ಎಂಬ ಇಬ್ಬರು ತಂಗಿಯರು ಇದ್ದಾರೆ.
ಜನನ
[ಬದಲಾಯಿಸಿ]ನಾನು ೩೦-೦೧-೧೯೯೭ ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದೆ.
ಬಾಲ್ಯ
[ಬದಲಾಯಿಸಿ]ನನ್ನ ಬಾಲ್ಯದ ದಿನಗಳು ಮರೆಯಲಾಗದ ದಿನಗಳು. ನಾನು ಚಿಕ್ಕವಳಾಗಿದ್ದಾಗ ಬಹಳ ತೀಟೆ ಮಾಡುತ್ತಿದ್ದೆ, ನನ್ನ ಬಾಲ್ಯದ ದಿನಗಳಲ್ಲಿ ನನಗೆ ಹಲವಾರು ಸ್ನೇಹಿತರಿದ್ದರು. ಅವರ ಜೊತೆ ಕಣ್ಣಾ ಮುಚ್ಚಾಲೆ, ಕುಂಟೆಬಿಲ್ಲೆ, ಲಗೋರಿ, ಚದುರಂಗ ಮುಂತಾದ ಆಟಗಳನ್ನು ಆಡುತ್ತಿದ್ದೆವು.
ವಿಧ್ಯಾಭ್ಯಾಸ
[ಬದಲಾಯಿಸಿ]ನಾನು ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗೆ ಕ್ರೈಸ್ಟ್ ಶಾಲೆಯಲ್ಲಿ ಓದಿದೆ ಹಾಗು ಹನ್ನೊಂದನೇ ತರಗತಿ ಮತ್ತು ಹನ್ನೆರಡನೆ ತರಗತಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮಾಡಿ ಹನ್ನೆರಡನೆ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದೆ. ಈಗ ಕ್ರೈಸ್ಟ್ ಯೂನಿವರ್ಸಿಟಿಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದೇನೆ. ನಾನು ಎಲ್.ಕೆ.ಜಿ ಯಿಂದ ಹನ್ನೆರಡನೆ ತರಗತಿಯವರೆಗೂ ಕ್ರೈಸ್ಟ್ ಶಾಲೆ ಮತ್ತು ಕ್ರೈಸ್ಟ್ ಕಾಲೇಜಿನಲ್ಲಿ ಓದಿರುವುದರಿಂದ ಈಗ ನನಗೆ ಯವುದೇ ರೀತಿಯಲ್ಲಿ ಇಲ್ಲಿ ಕಷ್ಟ ಎನಿಸುವುದಿಲ್ಲ.
ಆಸಕ್ತಿ
[ಬದಲಾಯಿಸಿ]ನನಗೆ ಕಥೆ ಪುಸ್ತಕಗಳನ್ನು ಓದುವುದು ಎಂದರೆ ಬಹಳ ಇಷ್ಟ ಹಾಗು ದೂರದರ್ಶನ ನೋಡುವುದು, ಹಾಡುಗಳನ್ನು ಕೇಳುವುದು ಇವೇ ಮೊದಲಾದ ಹವ್ಯಾಸಗಳಾಗಿವೆ. ರಜೆ ದಿನಗಲ್ಲಿ ಅಜ್ಜಿ ಮನೆಗೆ ಹೋಗುವುದು ಹಾಗು ಹೊರ ಪ್ರವಾಸಗಳಿಗೆ ಮನೆಯವರೊಂದಿಗೆ ಹೋಗುತ್ತೇವೆ. ನನಗೆ ಕ್ರೀಡೆಗಳಲ್ಲಿ ಕ್ರಿಕೆಟ್ ಆಟವನ್ನು ನೋಡವುದರಲ್ಲಿ ತುಂಬಾ ಆಸಕ್ತಿ ಹಾಗು ಕ್ರಿಕೆಟ್ ಆಟಗಾರನಾದ ವಿರಾಟ್ ಕೊಹ್ಲಿ ಎಂದರೆ ಬಹಳ ಇಷ್ಟ. ನನ್ನ ಮುಖ್ಯವಾದ ಗುರಿ ನಾನು ಎಮ್.ಬಿ.ಎ ಮಾಡಬೇಕೆಂಬುವುದು.
ವಿಕಿಪೀಡಿಯಾದ ಬಗ್ಗೆ ನನ್ನ ಅನಿಸಿಕೆಗಳು
[ಬದಲಾಯಿಸಿ]ನಾನು ಈ ಕಾಲೇಜಿಗೆ ಬಂದ ಮೇಲೆ ಮೊದಲ ಬಾರಿ ಕನ್ನಡದಲ್ಲಿ ಟೈಪ್ ಮಾಡುವುದನ್ನು ಕಲಿತೆ, ನನಗೆ ಇದರಿಂದ ಹಲವು ರೀತಿಯಲ್ಲಿ ಸಹಾಯವಾಗುತ್ತಿದೆ. ನಮ್ಮ ಭಾಷೆಯ ಮೇಲೆ ಇನ್ನೂ ಹೆಚ್ಚಿನ ಅಭಿಮಾನವನ್ನು ಉಂಟುಮಾಡುತ್ತಿದೆ. ಮೊದಲನೇ ಸೆಮಿಸ್ಟರ್ನಲ್ಲಿ ನಾವು ವಿಕಿಸೋರ್ಸ್ ನಲ್ಲಿ ಟೈಪಿಂಗ್ ಮಾಡಿದೆವು. ನಾನು ಅದರಿಂದ ಟೈಪಿಂಗ್ನ ಸುಲಭತೆಯನ್ನು ಕಲಿತುಕೊಂಡೆನು.ಇಂತಹ ಇಂಗ್ಲೀಷ್ ಮಾಧ್ಯಮದಲ್ಲೂ ಕನ್ನಡಕ್ಕೆ ಇಷ್ಟೂ ಪ್ರೋತ್ಸಾಹ ನೀಡುವುದರಿಂದ ನನಗೂ ಬಹಳ ಹೆಮ್ಮೆಯಾಗಿದೆ. ಕನ್ನಡ ಗೊತ್ತಿಲ್ಲದೆ ಕನ್ನಡ ವಿಷಯವನ್ನು ಆರಿಸಿಕೊಂಡಿರುವವರಿಗೆ ಕನ್ನಡವನ್ನು ಕಲಿಯಲು ಖಂಡಿತವಾಗಿಯೂ ಇದೊಂದು ಅವಕಾಶವಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಅದಲ್ಲದೆ ಕನ್ನಡ ಟೈಪಿಂಗ್ ವಿಷದಲ್ಲಿ ಯಾವುದೇ ಸಂಶಯವಿದ್ದಲ್ಲಿ ನಮಗೆ ನಮ್ಮ ಶಿಕ್ಷಕರು ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ನಾನು ಕಥೆಗಳ ವಿಷಯವಾಗಿ ವಿಕಿಪಿಡೀಯದಲ್ಲಿ ಕೆಲಸ ಮಾಡಲು ಇಚ್ಚಿಸುತ್ತೇನೆ. ವಿಕಿಪೀಡಿಯ ಮತ್ತು ವಿಕಿಸೋರ್ಸ್ನಿಂದ ನಮಗೆ ಬಹಳ ಉಪಯೋಗವಾಗುವುದರಿಂದ ನಾವಿರುವ ಇನ್ನೂ ಎರಡು ವರ್ಷಗಳಲ್ಲಿಯೂ ಇದೇ ರೀತಿಯ ಟೈಪಿಂಗ್ ಕೆಲಸವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.