ಸದಸ್ಯರ ಚರ್ಚೆಪುಟ:Parmesh.nl

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Parmesh.nl


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೨೦:೦೨, ೨೧ ಜುಲೈ ೨೦೧೮ (UTC)


ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಇತಿಹಾಸ

ನೆಲಮಂಗಲ ತಾಲ್ಲೂಕು ಪರಿಚಯ: ಇದು ನನ್ನ ಫೇಸ್ಬುಕ್ ನ 93ನೇ ಇತಿಹಾಸ ಕೆದಕಿದಾಗ ಎಂಬ ಶೀರ್ಷಿಕೆಯ 93ನೇ ಅಂಕಣ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಒಂದು ತಾಲೂಕು ಕೇಂದ್ರ. ನೆಲಮಂಗಲಕ್ಕೆ ಪ್ರವೇಶಿಸುತ್ತಿದ್ದಂತೆ ನಿಮಗೆ 16ಅಡಿಯ ಪ್ರಸನ್ನ ಆಂಜನೇಯನ(ಸಿಮೆಂಟ್ ಕಾಂಕ್ರೀಟ್ ನಿಂದ ನಿರ್ಮಿಸಿರುವ)ಸುಂದರ ಮೂರ್ತಿ ಸ್ವಾಗತಿಸುತ್ತದೆ. ನೆಲಮಂಗಲ ಒಂದು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಪಟ್ಟಣವಾಗಿದ್ದು ತಾಲೋಕು ಕೇಂದ್ರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ. ಪ್ರಾಚೀನ ಕಾಲದಲ್ಲಿ ನೆಲಮಂಗಲ ಪ್ರದೇಶದಲ್ಲಿ ಅರ್ಕಾವತಿ ನದಿ ದಂಡೆಯ ಮೇಲೆ ಚಂದನಾರಣ್ಯ(ಗಂಧದ ಮರಗಳ ಕಾಡು) ಸಮೃದ್ಧವಾಗಿ ಬೆಳೆದಿತ್ತಂತ್ತೆ. ಬೆಂಗಳೂರಿನಿಂದ ಪಶ್ಚಿಮ ದಿಕ್ಕಿಗೆ ತುಮಕೂರಿನಿಂದ ಪೂರ್ವ ದಿಕ್ಕಿಗೆ ಚಿಕ್ಕಬಳ್ಳಾಪುರದಿಂದ ದಕ್ಷಿಣ ದಿಕ್ಕಿಗೆ ಮತ್ತು ರಾಮನಗರ ಮಾಗಡಿಯಿಂದ ಉತ್ತರ ದಿಕ್ಕಿಗೆ ಇದೆ. ಪಟ್ಟಣವು ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಎರಡು ಉನ್ನತ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಹಾದೂ ಹೋಗಿದ್ದು ಚೆನ್ನೈನಿಂದ ಬೆಂಗಳೂರು ತುಮಕೂರಿನ ಮೂಲಕ ಪುಣೆ ಮುಂಬಯಿಗೆ ಕೂಡಿಕೊಳ್ಳುತ್ತದೆ. ಮತ್ತೊಂದು ಬೆಂಗಳೂರಿನಿಂದ ಕುಣಿಗಲ್ ಹಾಸನ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ48 ಹಾದುಹೋಗಿದೆ. ಪಟ್ಟಣದಲ್ಲಿ ತಾಲೂಕು ಆರೋಗ್ಯ ಕೇಂದ್ರವಿದ್ದು ಎರಡು ಪೋಲಿಸ್ ಠಾಣೆಗಳಿವೆ, ಒಂದು ಪಟ್ಟಣ ವ್ಯಾಪ್ತಿಯದ್ದಾಗಿದ್ದರೆ ಮತ್ತೊಂದು ಗ್ರಾಮಾಂತರ ವ್ಯಾಪ್ತಿಗೆ(ಅರಿಶಿನಕುಂಟೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿದೆ)ಒಳಪಟ್ಟಿದೆ. ನೂತನವಾಗಿ ಒಂದು ಸಂಚಾರಿ ಪೋಲಿಸ್ ಠಾಣೆ ಆರಂಭಗೊಂಡಿದೆ. ವಿದ್ಯುತ್ ಛಕ್ತಿ ಮಂಡಳಿ, ಬಸ್ ನಿಲ್ದಾಣ, ನೂತನವಾಗಿ ಆರಂಭಗೊಂಡಿರುವ ಪಟ್ಟಣದ ಹೊರವಲಯದಲ್ಲಿರುವ ರೈಲು ನಿಲ್ದಾಣ ಬೆಂಗಳೂರು ಹಾಸನ ಮಂಗಳೂರು ಮತ್ತು ಕಾರವಾರ ಸ್ಥಳಗಳಿಗೆ ರೈಲಿನ ವ್ಯವಸ್ಥೆಯಿದೆ. ನೆಲಮಂಗಲದಿಂದ ಏಳು ಕಿಲೋಮೀಟರ್ ದೂರದ ರೈಲ್ವೇ ಗೊಲ್ಲಹಳ್ಳಿಗೆ ಹೋದರೆ ತುಮಕೂರು ಬೆಂಗಳೂರು ರೈಲುಗಳು ಸಂಚರಿಸುತ್ತವೆ. ಪ್ರತಿಷ್ಠಿತ ಎಬಿಬಿ, ಡೆನ್ಸೊ ಕಿರ್ಲೋಸ್ಕರ್, ಜಿಂದಾಲ್ ನಂತಹ ಅಂತರಾಷ್ಟ್ರೀಯ ಕಂಪನಿಗಳಿವೆ. ನೆಲಮಂಗಲ ತಾಲೂಕು ನಾಲ್ಕು ಹೋಬಳಿಗಳನ್ನು ಒಳಗೊಂಡಿವೆ. ನೆಲಮಂಗಲ ತಾಲೂಕಿನಲ್ಲಿ ಎರಡು ಕೈಗಾರಿಕಾ ಪ್ರದೇಶಗಳು ಹೊಂದಿದೆ. ಅನೇಕ ಉತ್ತಮ ಚಿಕಿತ್ಸೆಯುಳ್ಳ ಖಾಸಗಿ ಆಸ್ಪತ್ರೆಗಳು, ಸುಸಜ್ಜಿತ ಕಲ್ಯಾಣ ಮಂಟಪಗಳು, ವಿವಿಧ ಬಗೆಯ 30ಕ್ಕೂ ಹೆಚ್ಚು ಬ್ಯಾಂಕ್ ಗಳು, ತಾಲೂಕಿನಾದ್ಯಂತ 4 ಅಂಚೆ ಕಚೇರಿ ಹೊಂದಿದೆ. ಪಟ್ಟಣದಲ್ಲಿಯೇ 6 ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಕಾಲೇಜುಗಳು, ಸುಸಜ್ಜಿತ ಕ್ರೀಡಾಂಗಣ, ಅರಣ್ಯ ಇಲಾಖೆ, ಕೃಷಿ ಉತ್ಪನ್ನ ಮಾರಾಟ ಮಳಿಗೆಗಳು, ಎರಡು ಸಿನಿಮಾ ಥಿಯೇಟರ್ ಗಳಿವೆ, ಮಿನಿ ವಿಧಾನ ಸೌಧ(ತಾಲೂಕು ಕಛೇರಿ), 120 ಎಕರೆಯ ವಿಸ್ತಾರವಾದ ಕೆರೆಯಿದೆ ಆದರೆ ನೀರು ಕಲುಷಿತಗೊಂಡಿದೆ. ತಾಲೂಕಿನಲ್ಲಿ ಅನೇಕ ಪ್ರವಾಸಿ ತಾಣಗಳು ಮತ್ತು ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳಿವೆ. ವಿಶ್ವಶಾಂತಿ ಆಶ್ರಮ, ಚೋಳರ ಕಾಲದ ಮುಕ್ತನಾಥೇಶ್ವರ ದೇವಸ್ಥಾನ ಮತ್ತು ಮಹಾಲಿಂಗೇಶ್ವರ ದೇವಸ್ಥಾನ, ಮಹಿಮರಂಗನಾಥ ಸ್ವಾಮಿ ಬೆಟ್ಟ, ಶಿವಗಂಗೆ ಬೆಟ್ಟ, ಗಂಗರ ರಾಜಧಾನಿಯಾಗಿದ್ದ ಮಣ್ಣೆ(ಮಾನ್ಯಪುರ), ಆಲದಹಳ್ಳಿ ರಂಗನಾಥ ಸ್ವಾಮಿ, ಮಣ್ಣೆಯ ಸೋಮೇಶ್ವರ ದೇವಸ್ಥಾನ, ಬಸವನಹಳ್ಳಿಯ ಲಕ್ಷಿವೆಂಕಟರಮಣ ದೇವಸ್ಥಾನ, ಸೊಂಡೆಕೊಪ್ಪ ರಸ್ತೆಯ ಗಣೇಶನ ಗುಡಿ, ರೈಲ್ವೇ ಗೊಲ್ಲಹಳ್ಳಿ ಬೈಲಾಂಜನೇಯ ಸ್ವಾಮಿ ದೇವಸ್ಥಾನವಿದೆ ಬನ್ನಿ ಇದರ ಇತಿಹಾಸವನ್ನು ಕೆದಕೋಣ.

ನೆಲಮಂಗಲದ ಇತಿಹಾಸ: ನೆಲಮಂಗಲ ಹಿಂದೆ 8ನೇ ಶತಮಾನದಲ್ಲಿ ಗಂಗರ ಆಳ್ವಿಕೆಯಲ್ಲಿತ್ತು, ಆಗ ಗಂಗರು ತಾಮಗೊಂಡ್ಲು ಹತ್ತಿರದ ಈಗಿನ ಮಣ್ಣೆ(ಅಂದು ಮಾನ್ಯಪುರ ಎನ್ನುತ್ತಿದ್ದರು)ಯನ್ನು ಕೆಲವು ವರ್ಷಗಳ ಕಾಲ ಉಪ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿಂದಲೇ ರಾಜ್ಯಭಾರವನ್ನು ಮಾಡಿದರು. ಇಂದಿಗೂ ಗಂಗರ ದೇವಸ್ಥಾನಗಳನ್ನು ನೋಡಬಹುದು, ಆದರೆ ಎಲ್ಲವೂ ಪಾಳುಬಿದ್ದು ಹಾಳುಗಿದೆ. ಆನಂತರ 10ನೇ ಶತಮಾನದಲ್ಲಿ ಚೋಳರು ಅಧಿಪತ್ಯಕ್ಕೆ ಬಂದರೂ, ಆನಂತರ ನೊಳಂಬರು ರಾಜ್ಯಭಾರ ಮಾಡಿದರು ಆಗ ನೆಲಮಂಗಲವನ್ನು ನೊಳಂಬವಾಡಿ ಎಂದು ಹೆಸರು ಬಂದಿತು ಇವರ ನಂತರ ಹೊಯ್ಸಳರು ಇವರ ನಂತರ 1350ರಸುಮಾರಿಗೆ ವಿಜಯನಗರದ ಆಳ್ವಿಕೆಗೆ ಒಳಪಟ್ಟಿತು. ಸಾಮಂತ ರಾಜರು ಹಾಗೂ ಪಾಳೆಗಾರರು ನೋಡಿಕೊಳ್ಳುತ್ತಿದ್ದರು. ಸಾಮಂತ ರಾಜ ಮಾಗಡಿ ಕೆಂಪೆಗೌಡರ ಅಧೀನದಲ್ಲಿತ್ತು. ಇವರ ತರುವಾಯ ಹೈದರಾಲಿ ಟಿಪ್ಪುಸುಲ್ತಾನ್ ಆಳ್ವಿಕೆಯಲ್ಲಿತ್ತು ಇವರಿಂದ ಬ್ರಿಟಿಷರು ಸ್ವಾಧೀನ ಪಡಿಸಿಕೊಂಡು ಮೈಸೂರು ಸಂಸ್ಥಾನದ ಮಹಾರಾಜರ ಸುಪರ್ದಿಗೆ ಹಸ್ತಾಂತರಿಸಲಾಯಿತು. ಬ್ರಿಟಿಷರು ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ4 ಇಂದು ಉತ್ತಮ ಗುಣಮಟ್ಟದ ರಸ್ತೆಯಾಗಿ ರಾಜ್ಯ ರಾಜ್ಯವನ್ನು ಬೆಸೆಯುತ್ತಿದೆ. ಬಿ.ಹೆಚ್.ರಸ್ತೆಯ ಎರಡು ಬದಿಯಲ್ಲಿ ಬ್ರಿಟಿಷರು ಬೆಳೆಸಿದ ಹಿಪ್ಪೆ ಮರಗಳು ಸೊಂಪಾಗಿ ಬೆಳೆದಿದ್ದವು ಈ ಮರಗಳಿಗೆ 250ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳವಾಗಿದ್ದವು ಆದರೆ 2 ವರ್ಷಗಳ ಹಿಂದೆ ರಸ್ತೆ ಅಗಲಿಕರಣದ ಹೆಸರಲ್ಲಿ ಎಲ್ಲಾ ಮರಗಳ ಮಾರಣಹೋಮವಾಗಿದ್ದು ವಿಷಾದದ ಸಂಗತಿ. ಇನ್ನೂ ನೆಲಮಂಗಲ ತಾಲೂಕಿನಾದ್ಯಂತ ಅನೇಕ ಮಾಸ್ತಿಗಲ್ಲು ವೀರಗಲ್ಲುಗಳಿವೆ. ಗೊಲ್ಲಹಳ್ಳಿಯಿಂದ ಅರ್ಜುನಬೆಟ್ಟಹಳ್ಳಿಗೆ ಹೋಗುವ ಮಾರ್ಗದಲ್ಲಿ ಒಂದು ವೀರಗಲ್ಲು ಅನಾಥವಾಗಿ ಬಿದ್ದಿದೆ ಇದು ಯಾರದು ಇಲ್ಲಿನ ಇತಿಹಾಸವೇನು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರು ಹೋಗಿಲ್ಲ. ಪಟ್ಟಣದ ಜೂನಿಯರ್ ಕಾಲೇಜು(ಫ್ರೌಡಶಾಲೆ) ಗೊಡೆಗೆ ಹೊಂದಿಕೊಂಡಂತೆ ಒಂದು ಮಾಸ್ತಿಗಲ್ಲು ಇದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿ.ಜಿ.ಪ್ರಸಾದ್ ಎಂಬ ಅಧ್ಯಾಪಕಿ ಹೇಳುವ ಪ್ರಕಾರ ಇಲ್ಲಿ ಸತಿಸಹಗಮನ ಪದ್ಧತಿ ಜಾರಿಯಲ್ಲಿತ್ತು ಇಲ್ಲಿ ಗಂಡನ ಚಿತೆಯಲ್ಲೆ ಹೆಂಡತಿಯ ದಮನವಾಗಿದೆ ಎಂದು. ಆದರೆ ಅದು ಯಾರ ಕಾಲದಲ್ಲಿ ಎಂಬ ಮಾಹಿತಿ ಪತ್ತೆಹಚ್ಚಲಾಗಿಲ್ಲ. ಮೈಲನಹಳ್ಳಿಯ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿಯೇ ಒಂದು ವೀರಗಲ್ಲು ಇದೆ. ಉಳಿದಂತೆ ಎಲೆಕಿತ್ತನಹಳ್ಳಿಯಲ್ಲಿಯೂ ಕಂಡುಬರುತ್ತವೆ. ಪ್ರಾಚೀನ ಕಾಲದಲ್ಲಿ ನೆಲಮಂಗಲ ಪ್ರದೇಶದಲ್ಲಿ ಅರ್ಕಾವತಿ ನದಿ ದಂಡೆಯ ಮೇಲೆ ಚಂದನಾರಣ್ಯ ಅಂದರೆ ಗಂಧದ ಮರಗಳ ಕಾಡು ಹೇರಳವಾಗಿ ಬೆಳೆದಿತ್ತಂತ್ತೆ.

ನೆಲಮಂಗಲ ತಾಲ್ಲೂಕಿನ ಪ್ರಮುಖ ವ್ಯಕ್ತಿಗಳು: ದಿವಂಗತ BML ಕೃಷ್ಣಪ್ಪನವರು(ವಿದಿವಶರಾದ ಸಮಯದಲ್ಲಿ ಬೇಗೂರು ZP ಸದಸ್ಯರಾಗಿದ್ದರು), ಶ್ರೀನಿವಾಸ್ ಮೂರ್ತಿ(ಶಾಸಕರು ವಿಧಾನಸಭಾ ಕ್ಷೇತ್ರ), ಆಂಜನಮೂರ್ತಿಯವರು ಮಾಜಿ ವಸತಿ ಸಚಿವರು ಮತ್ತು ಶಾಸಕರು, ದಿವಂಗತ ಕರಿಬಸವಯ್ಯನವರು(ಚಲನಚಿತ್ರದ ಹಾಸ್ಯ ನಟ), BML ಕಾಂತರಾಜುರವರು ಪ್ರಸ್ತುತ ತುಮಕೂರು MLC(ಜೆಡಿಎಸ್) ಆಗಿದ್ದಾರೆ, ನೆ.ಲ.ನರೇಂದ್ರ ಬಾಬು(ಮಾಜಿ ಶಾಸಕರು ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ), ನೆ.ಲ.ಗಿರಿಧರ್ ಮಾಜಿ ಪುರಸಭೆ ಸದಸ್ಯರು. ನೆಗಳೂರ್ ರವರು ನಿವೃತ್ತ ಉಪನ್ಯಾಸಕರು ಮತ್ತು ಪ್ರಜಾವಾಣಿ ಪತ್ರಕರ್ತರು. ಕೇಶವಮೂರ್ತಿ ವಕೀಲರು, ಎಂ.ವಿ.ನಾಗರಾಜ್ ಮಾಜಿ ಶಾಸಕರು(ಬಿಜೆಪಿ), ತಿಮರಾಯಪ್ಪ ಅರಿಶಿನಕಂಟೆ ಜಿಲ್ಲಾ ಪಂಚಾಯತಿ ಸದಸ್ಯರು, ರಂಗಧಾಮಯ್ಯ ಸಮಾಜ ಸೇವಕರು, ಮಿಲಿಟರಿ ಮೂರ್ತಿ ಬಿ.ಎಂ.ಟಿ.ಸಿ ನಿರ್ದೇಶಕರು ಬೆಂಗಳೂರು, ವಿನೋದ್ ರಾಜ್ ಮತ್ತು ಲೀಲಾವತಿ(ಚಲನಚಿತ್ರ ಹಿರಿಯ ಕಲಾವಿದರು ಮತ್ತು ಸಮಾಜ ಸೇವಕರು),ಗೋಲ್ಡನ್ ಸ್ಟಾರ್ ಗಣೇಶ್(ಓದಿದ್ದು ಬೆಳೆದಿದ್ದು ನೆಲಮಂಗಲದಲ್ಲಿ), ಮುಖ್ಯಮಂತ್ರಿ ಚಂದ್ರು ಚಲನಚಿತ್ರ ಮತ್ತು ರಂಗಭೂಮಿ ಹಿರಿಯ ಕಲಾವಿದರು, ರಾಜಕಾರಣಿ ಮತ್ತು ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ದರ್ಶನ್ ಉದಯೋನ್ಮುಖ ಕಬಡ್ಡಿ ಆಟಗಾರ ಪ್ರಸ್ತುತ ಪ್ರೋ ಕಬಡ್ಡಿ ಲೀಗ್ ನಲ್ಲಿ ತಮಿಳು ತಲೈವಾಸ್ ತಂಡದ ಪರ ಆಡುತ್ತಿದ್ದಾರೆ ಮತ್ತು ಕಂಬಾಳು ಸಿದ್ಧಗಂಗಯ್ಯನವರು ಇತಿಹಾಸ ಸಂಶೋಧಕರು.

ಬಿಲ್ಲಿನಕೋಟೆಯಲ್ಲಿ ರಾಜ್ಯದ ಪ್ರಥಮ ಭೂಕಂಪದ ದಾಖಲೆಯ ಶಾಸನ ಪತ್ತೆಯಾಗಿದೆ: ಇದೊಂದು ಮಹತ್ವದ ಶಾಸನವಾಗಿದ್ದು ಬಿಲ್ಲಿನಕೋಟೆಯಲ್ಲಿ ದೊರಕಿದೆ ನೂರಾರು ವರ್ಷಗಳ ಹಿಂದೆ ಭೂಕಂಪವಾದ ಮಾಹಿತಿಯ ಕಲ್ಲಿನ ಶಾಸನವಾಗಿದೆ. ಇದು ಕರ್ನಾಟಕದಲ್ಲಿಯೇ ಮೊಟ್ಟಮೊದಲ ಭೂಕಂಪನವಾದ ಮಾಹಿತಿಯ ಶಾಸನವಾಗಿದೆ. ಕ್ರಿಸ್ತಶಕ 1507ರಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ಬಿಲ್ಲಿನಕೋಟೆ ಸುತ್ತಮುತ್ತಲಿನ ಪ್ರದೇಶವು ವಿಜಯನಗರದ ಸಾಮಂತ ಪಾಳೆಗಾರರ ಪ್ರದೇಶವಾಗಿತ್ತು. ಆಗ ಇಲ್ಲಿ ಭೂಕಂಪನವಾದ ಬಗ್ಗೆ ಶಾಸನ ಒಂದನ್ನು ಕೆತ್ತಲಾಗಿದೆ.

ಶಾಸನದಲ್ಲಿ ಏನು ಕೆತ್ತಿದ್ದಾರೆ?(ಶಾಸನ ಲಿಪಿ) ಕೋಟೆಯ ಅವಶೇಷಗಳ ನಡುವೆ ದೊಡ್ಡ ಬಂಡೆಯ ಮೇಲೆ ಕಲಿ ವರುಷ(ಕಲಿಯುಗ) 4608ನೆ ಪ್ರಭಾರ ಸಂವತ್ಸರದ ಶ್ರಾವಣ ಸುಧ ಆರನೇ ಗುರುವಾರ ಅದರೆ 15 ಜುಲೈ 1507 ಗುರುವಾರದ ದಿನ ಭೂಮಿ ನಡುಗಿದೆ ಎಂದು ಶಾಸನದಲ್ಲಿ ಕೆತ್ತಲಾಗಿದೆ. ಶಾಸನದ ಕೊನೆಯಲ್ಲಿ ಲಿಪಿಕಾರ(ಶಾಸನವನ್ನು ಬರೆದವರು) ಕಮ್ಮಾರ ಕೆಲಸ ಮಾಡುವ ವೀರಯ್ಯನ ಮಗ ದೊಡ್ಡ ವೀರಯ್ಯ ಎಂದು ಲಿಪಿಕಾರ ತನ್ನ ಹೆಸರನ್ನು ಕೆತ್ತಿದ್ದಾನೆ. 2015ರಲ್ಲಿ ಈ ಶಾಸನ ಪತ್ತೆಯಾಗಿದೆ. ನೆಲಮಂಗಲ ತಾಲೂಕು ವ್ಯಾಪ್ತಿಗೆ ಒಳಪಡುವ ಬಿಲ್ಲಿನಕೋಟೆ ಗ್ರಾಮವು ಹಿಂದೆ ಪಾಳೆಗಾರರು ಕೋಟೆ ಕಟ್ಟಿಕೊಂಡು ಪಾಳೆಗಾರಿಕೆ ಮಾಡುತ್ತಿದ್ದರು. ಪಾಳೆಗಾರರು ಈ ಕೋಟೆಯಲ್ಲಿ ಯುದ್ಧಕ್ಕೆ ಬೇಕಾದ ಬಿಲ್ಲುಗಳನ್ನು ತಯಾರಿಸುತ್ತಿದ್ದರು ಆದ್ದರಿಂದ ಈ ಕೋಟೆಗೆ ಬಿಲ್ಲಿನಕೋಟೆ ಎಂದು ಕರೆಯುತ್ತಾರೆ. ಬೆಂಗಳೂರು ತುಮಕೂರು ಮದ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 4 ರ ಎಡಭಾಗದಲ್ಲಿ ರಸ್ತೆಗೆ ಹೊಂದುಕೊಂಡಿದೆ. ಬಿಲ್ಲಿನಕೋಟೆಯಿರುವ ಬಂಡೆಕಲ್ಲುಗಳ ಗುಡ್ಡದ ಮೇಲಿನ ಕೋಟೆ ಈಗ ಕುಸಿದಿದೆ. ನೆಲಮಂಗಲದಿಂದ 20 ಕಿಲೋಮೀಟರ್ ಇದ್ದರೆ ಬೆಂಗಳೂರಿನಿಂದ 47 ಕಿಲೋಮೀಟರ್ ಯಿದೆ. ತುಮಕೂರಿನಿಂದ 26ಕಿಲೋಮೀಟರ್ ಇದೆ. ಬೆಂಗಳೂರಿನಿಂದ ತುಮಕೂರು ಕಡೆ ಹಾದುಹೋಗುವಾಗ ಬಲಭಾಗದಲ್ಲಿ 600ವರ್ಷಗಳ ಇತಿಹಾಸವಿರುವ ಕೆರೆಯಿದೆ. ಅದರ ಮದ್ಯೆ ಬಂಡೆಕಲ್ಲಿನ ಮೇಲೆ ಕಲ್ಲಿನ ಚಿಕ್ಕ ಮಂಟಪವನ್ನು ಕಟ್ಟಿದ್ದಾರೆ.

ವಿಶ್ವಶಾಂತಿ ಆಶ್ರಮ: ನೆಲಮಂಗಲ ಸಮೀಪ 4 ಕಿಲೋಮೀಟರ್ ದೂರದ ಅರಿಶಿನಕುಂಟೆಯಲ್ಲಿ ನಿರ್ಮಿಸಿದ ಪಾಂಡುರಂಗನ ಕ್ಷೇತ್ರವೇ ವಿಶ್ವಶಾಂತಿ ಆಶ್ರಮ ಕೇಶವದಾಸ ಎಂಬುವವರು 1980ರಲ್ಲಿ ಸ್ಥಾಪಿಸಿದರು. ದೇಶ ವಿದೇಶಗಳಿಂದ ಇಲ್ಲಿಗೆ ಪ್ರವಾಸಿಗರು ಭಕ್ತರು ಆಗಮಿಸುತ್ತಾರೆ. 32ಅಡಿ ಎತ್ತರದ ಕಪ್ಪು ಶಿಲೆಯ ಪಾಂಡುರಂಗನ ವಿಗ್ರಹ ನಯನ ಮನೋಹರವಾಗಿದೆ. ಇದು ವಿಶ್ವದಲ್ಲಿಯೇ ಅತಿ ಎತ್ತರದ ಪಾಂಡುರಂಗನ ವಿಗ್ರಹ ಎಂಬ ಕೀರ್ತಿಗೆ ಪಾತ್ರವಾಗದೆ. ಇಲ್ಲಿ ಅನೇಕ ಚಲನಚಿತ್ರಗಳು ಚಿತ್ರಿಕರಣಗೊಂಡಿವೆ. ನೂತನವಾಗಿ 20 ವರ್ಷಗಳ ಹಿಂದೆ ನಿರ್ಮಿಸಿದ ಭಗವದ್ಗೀತೆ ಮಂದಿರ ಬಹಳ ಸುಂದರವಾಗಿದ್ದು ರಥದ ಮೇಲೆ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆ ಭೋಧಿಸುತ್ತಿರುವ ಭಂಗಿಯಲ್ಲಿ ನಿರ್ಮಿಸಲಾಗಿದೆ. ಒಳಗೆ ಪ್ರವೇಶಿಸಿದರೆ ವಿಷ್ಣುವಿನ ವಿಶ್ವ ರೂಪದ ದರ್ಶನವಾಗುತ್ತದೆ. ಭಗವದ್ಗೀತೆ ಮಂದಿರದ ಒಳಗೆ ಗೋಡೆಗಳ ಮೇಲೆ ಕನ್ನಡ ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ರಚಿಸಲಾಗಿದೆ. ಒಂದು ದಿನದ ಪ್ರವಾಸಕ್ಕೆ ಉತ್ತಮವಾದ ಸ್ಥಳವಾಗಿದೆ. ಇಲ್ಲಿಗೆ ಸಮೀಪವೇ ಇರುವುದು 1000ವರ್ಷಗಳ ಇತಿಹಾಸವಿರುವ ಮುಕ್ತನಾಥೇಶ್ವರ ದೇವಸ್ಥಾನ.

ಮುಕ್ತನಾಥೇಶ್ವರ ದೇವಸ್ಥಾನದ ಪರಿಚಯ ಮತ್ತು ಇತಿಹಾಸ: ಇದು ಚೋಳರ ಕಾಲದಲ್ಲಿ ನಿರ್ಮಾಣವಾದ 1000 ವರ್ಷಗಳ ಹಳೆಯ ಶಿವಲಿಂಗವಿರುವ ದೇವಸ್ಥಾನ. ರಾಜ ರಾಜ ಚೋಳನಿಂದ ನಿರ್ಮಾಣವಾಗಿದೆ ಎಂದು ಶಾಸನದಿಂದ ತಿಳಿದುಕೊಳ್ಳಬಹುದು. ದೇವಸ್ಥಾನವು ಸುಂದರ ಕೆತ್ತನೆಯನ್ನು ಹೊಂದಿದ್ದು ಎದುರಿಗೆ ಗರುಡಸ್ತಂಭ ಹಾಗೂ ರಾಜ ರಾಜ ಚೋಳನ ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಒಂದು ಶಾಸನದ ಕಲ್ಲು ದೊರಕಿದ್ದು. ದೇವಸ್ಥಾನದ ನಿರ್ಮಾಣದ ಬಗ್ಗೆ ವಿವರಿಸಲಾಗಿದೆ. ಹಿಂದೆ ಇದು ಪಾಳುಬಿದ್ದು ಶಿಥಿಲಾವಸ್ಥೆಗೆ ತುಲುಪಿದ್ದು 15 ವರ್ಷಗಳ ಹಿಂದೆ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಿ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಸ್ಥಾನ ಬಗ್ಗೆ ಪಿಯುಸಿಯ ಇತಿಹಾಸ ವಿಷಯದಲ್ಲಿ ಪ್ರಸ್ತಾಪಿಸಿಲಾಗಿದೆ. ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ಹರಿಕಥೆ, ವಿಷೇಶ ಅಭಿಷೇಕ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನಡೆಯುತ್ತದೆ. ವಿಶ್ವಶಾಂತಿ ಆಶ್ರಮ ಬಸ್ ನಿಲ್ದಾಣದಲ್ಲಿ ಇಳಿದು ಎಡಗಡೆಯಲ್ಲಿಯೇ ದೇವಸ್ಥಾನದ ದ್ವಾರ ಕಾಣಿಸುತ್ತದೆ ಅಲ್ಲಿಂದ ಸ್ವಲ್ಪ ದೂರ 250ಮೀಟರ್ ಒಳಗೆ ಹೋಗಬೇಕು.

ದಕ್ಷಿಣ ಕಾಶಿ ಶಿವಗಂಗೆ ಪರಿಚಯ: ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ಶಿವನು ನೆಲೆನಿಂತ ಕ್ಷೇತ್ರವಿದು. ಹೊಯ್ಸಳರ ವಿಷ್ಣುವರ್ಧನನ ಆಳ್ವಿಕೆಗೆ ಒಳಪಟ್ಟಿದ್ದು ಆತನ ಮಡದಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ ಬೆಟ್ಟದಲ್ಲಿ ಎಂದು ಇತಿಹಾಸದಿಂದ ತಿಳಿದುಕೊಳ್ಳಬಹುದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆಂಪೆಗೌಡರು ಸಾಕಷ್ಟು ಅಭಿವೃದ್ಧಿ ಪಡಿಸಿದರು ಇಲ್ಲಿಂದ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸುರಂಗಮಾರ್ಗವಿದೆ ಎಂದು ಹೇಳಲಾಗುತ್ತಿದೆಯಾದರು ಇಂದು ಅದು ಮುಚ್ಚಿ ಹೋಗಿದೆ. ಇಲ್ಲಿನ ಒಳಕಲ್ಲು ತೀರ್ಥದಲ್ಲಿ ಎಂತಹ ಬರಗಾಲದಲ್ಲು ಸದಾಕಾಲ ನೀರು ಇರುವುದು ಎಂತಹವರನ್ನು ಆಶ್ಚರ್ಯಗೊಳಿಸುತ್ತಿದೆ. ಸಂಪೂರ್ಣ ಶಿವಗಂಗೆ ಕ್ಷೇತ್ರದ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಪರಿಚಯ: ಶಿವಗಂಗೆಯನ್ನು ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೋಕಿನ ಗಡಿಭಾಗದಲ್ಲಿದೆ ಶಿವಗಂಗೆ ಬೆಟ್ಟ. ಬೆಂಗಳೂರಿನಿಂದ 58ಕಿಲೋ ಮೀಟರ್ ದೂರವಿದೆ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ನೆಲಮಂಗಲದ ಮೇಲೆ ಹಾದು "ಡಾಬಸ್ ಪೇಟೆ" ತಲುಪಿ ಅಲ್ಲಿಂದ ಎಡಗಡೆ ತಿರುಗಿ ಅಲ್ಲಿಂದ ಮತ್ತೆ 8 ಕಿಲೋಮೀಟರ್ ಹಸಿರ ನೈಸರ್ಗಿಕ ಸಿರಿಯಲ್ಲಿ ಮುಂದೆ ಸಾಗುತ್ತಾ ಹೋದಂತೆ ಮೈ ರೋಮಾಂಚನಗೊಳ್ಳುತದೆ ಮುಂದೆ ನಿಮಗೆ ಶಿವಗಂಗೆ ಬೆಟ್ಟದ ದರ್ಶನವಾಗುತ್ತದೆ. ತುಮಕೂರಿನಿಂದ 26 ಕಿಲೋಮೀಟರ್ ಇದೆ. ಕುಮುದ್ವತಿ ನದಿಯು ಹುಟ್ಟುವುದು ಇದೆ ಶಿವಗಂಗೆಯಲ್ಲಿ ಎಂಬುದು ಈ ಬೆಟ್ಟದ ಹಿರಿಮೆಗಳಲ್ಲೊಂದು, ಈ ಕುಮುದ್ವತಿ ನದಿಯು ಅರ್ಕಾವತಿ ನದಿಯ ಉಪನದಿಯಾಗಿದೆ. ವೀರಭದ್ರೇಶ್ವರ, ಹೊನ್ನಾದೇವಿ, ಗಂಗಾಂಧರೇಶ್ವರ, ಬಸವ(ನಂದಿ), ತುಪ್ಪವನ್ನು ಬೆಣ್ಣೆಯಾಗಿ ಪರಿವರ್ತಿಸುವ ಶಿವಲಿಂಗ, ಪಾತಾಳಗಂಗೆ, ಒಳಕಲ್ಲು ತೀರ್ಥ, ಒಳಕಲ್ಲು ತೀರ್ಥಕ್ಕೆ ಹೋಗುವ ಗುಹೆ, ಕೆಂಪೇಗೌಡರು ನಿರ್ಮಾಣಮಾಡಿರುವ ದೇವಸ್ಥಾನದ ಶಿಲ್ಪಕಲೆ, ಆದಿಶಂಕರಾಚಾರ್ಯರ ಮೂರ್ತಿ, ಕೆಂಪೇಗೌಡರ ಸುರಂಗ ಮಾರ್ಗ(ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಮತ್ತು ಹುತ್ರಿದುರ್ಗಕ್ಕೂ ಸಂಪರ್ಕವಿರುವ ರಹಸ್ಯ ಮಾರ್ಗ), ಕಳುವಾದ ಚಿನ್ನದ ಗಂಟೆಯ ಬದಲಾಗಿ ಬೆಳ್ಳಿ ಗಂಟೆಯ ಬಂಡೆ, ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳು, 5 ವಿವಿಧ ಜನಾಂಗದ ಮಠಗಳು, ಶಾಂತಲಾ ಡ್ರಾಪ್(ವಿಷ್ಣುವರ್ಧನನ ಪಟ್ಟದರಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಳ) ಇಲ್ಲಿನ ಪ್ರಮುಖ ಆಕರ್ಷಣೆಗಳು ಬನ್ನಿ ಇದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೊಣ.

ಶಿವಗಂಗೆಬೆಟ್ಟದ ಬಗ್ಗೆ ಮಾಹಿತಿ: ಸಮುದ್ರ ಮಟ್ಟದಿಂದ 1380ಮೀಟರ್ ಅಂದರೆ 4 ,547 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ ದಿಕ್ಕಿನ ಕಡೆಯಿದೆ, ತುಮಕೂರಿನಿಂದ ಪೂರ್ವ ದಿಕ್ಕಿಗೆ ಇದೆ. ನೋಡಲು ಇದು ಶಂಖಾಕೃತಿಯ ಬೆಟ್ಟ ವಾಗಿದ್ದು. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ ಹಾಗೂ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯನ್ನೂ ಪಡೆದಿದೆ. ಪ್ರತಿ ವರ್ಷವು ಮಕರ ಸಂಕ್ರಾತಿಯ ಹಬ್ಬದ ದಿನದಂದೆ ಇಲ್ಲಿ ಜಾತ್ರೆ ನಡೆಯುತ್ತದೆ ಇದನ್ನು ಶಿವಗಂಗೆ ಜಾತ್ರೆ ಅಥವಾ ಶಿವಗಂಗೆ ಗಂಗಾಧರೇಶ್ವರನ ಜಾತ್ರೆ ಎನ್ನುವರು(ಬೆಂಗಳೂರಿನಲ್ಲಿಯೂ ಸಹ ಪ್ರಸಿದ್ಧ ಗವಿಗಂಗಾಧರೇಶ್ವರನ ದೇವಾಸ್ಥಾನವಿರುವುದರಿಂದ ಶಿವಗಂಗೆ ಗಂಗಾಧರೇಶ್ವರನ ಜಾತ್ರೆ ಎನ್ನುವರು). ಇದು ವರ್ಷವಿಡೀ ಜಲಧಾರೆಯನ್ನು ಹೊಂದಿರುವ ಅದ್ಭುತ ಬೆಟ್ಟ. ಇಲ್ಲಿರುವ ರಹಸ್ಯ ಸುರಂಗ ಮಾರ್ಗದಲ್ಲಿ ಸಾಗಿದರೆ ಶ್ರೀರಂಗಪಟ್ಟಣವನ್ನೂ ತಲುಪಬಹುದು ಹಾಗೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯಕ್ಕೂ ನೇರ ಸಂಪರ್ಕವಿದೆ ಆದರೆ ಇದು ಇಂದು ಶೀತಲವ್ಯಸ್ಥೆಯಲ್ಲಿದ್ದು ಮುಚ್ಚಿಹೋಗಿದೆ(ಭಕ್ತಾಧಿಗಳು ಸುರಂಗದೊಳಗೆ ಪ್ರವೇಶಿಸುವುದು ನಿಷೇಧಿಸಲಾಗಿದೆ, ಕಾರಣ ಉಸಿರಾಟದ ತೊಂದರೆಯಾಗಿ ಸಾವು ಸಂಭವಿಸಬಹುದು). ಈ ಬೆಟ್ಟದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು, ಅದು ಒಳಕಲ್ಲಿನ ಆಕೃತಿಯಲ್ಲಿದೆ ಆದ್ದರಿಂದ ಇದನ್ನು ಒಳಕಲ್ಲು ತೀರ್ಥ ಎಂದು ಪ್ರಸಿದ್ಧಿ ಪಡೆದಿದೆ, ಶಿವಗಂಗೆ ಬೆಟ್ಟಕ್ಕೆ ಯಾರೇ ಬಂದರು ಬೆಟ್ಟದ ತುತ್ತ ತುದಿಯ ಸುತ್ತುವ ಬಸವ ಇರುವಲ್ಲಿಗೆ ಹತ್ತಲಾಗದಿದ್ದವರು ಸಹ ಬೆಟ್ಟದ ಮಧ್ಯ ಭಾಗದಲ್ಲಿರುವ ಒಳಕಲ್ಲು ತೀರ್ಥಕ್ಕೆ ಭೇಟಿನೀಡಿ ಒಳಕಲ್ಲಿನ ಒಳಗೆ ಕೈಹಾಕಿ ಅದೃಷ್ಟ ಪರೀಕ್ಷಿಸುವರು ಅಥವಾ ಬೇಡಿದ ಕಾರ್ಯ ಇಡೇರುವುದೋ ಇಲ್ಲವೋ ಎಂದು ತಿಳಿದುಕೊಳ್ಳುವರು. ನೀರು ಸಿಕ್ಕಿದರೆ ಬೇಡಿದ ಕಾರ್ಯ ಇಡೇರುವುದೆಂದು, ಸಿಗದಿದ್ದರೆ ಬೇಡಿದ ಕಾರ್ಯ ಇಡೇರುವುದಿಲ್ಲವೆಂದು ತಿಳಿಯುವರು. ಒಳಕಲ್ಲು ತೀರ್ಥವೇ ಈ ಸ್ಥಳದ ಪ್ರಮುಖ ಆಕರ್ಷಣೆ. ಜನರ ಆಡುಭಾಷೆಯಲ್ಲಿ ಒಳಕಲ್ಲು ತೀರ್ಥ ಎಂದು ಪ್ರಸಿದ್ಧಿಯಾಗಿದೆ, ಒಳಕಲ್ಲು ತೀರ್ಥವನ್ನು ಜಗದ್ಗುರು ರೇವಣಸಿದ್ಧೇಶ್ವರರಿಂದ ಉತ್ಪತ್ತಿಯಾಗಿರುವ ತೀರ್ಥ ಎನ್ನುವರು. ಜಗದ್ಗುರು ರೇವಣಸಿದ್ಧೇಶ್ವರರು ತಪಸ್ಸುಗೈದಿದ್ದು ಇದೆ ಶಿವಗಂಗೆಯಲ್ಲಿ, ಹಾಗೆಯೇ ಅಗಸ್ಱರಿಗೆ ದೀಕ್ಷೆ ನೀಡಲು ಜಲ ಪ್ರೋಕ್ಷಣೆಯ ಅಗತ್ಯವಿದ್ದಾಗ ತಮ್ಮ ಕೈಯಲ್ಲಿದ್ದ ದಂಡದಿಂದ ಕಲ್ಲನ್ನು ಗುದ್ದಿ ಗಂಗೆಯನ್ನು ಹೊರತಂದಿದ್ದಾರೆ. ಹಾಗೆಯೇ ಜಗದ್ಗುರು ರುದ್ರಮುನೀಶ್ವರರ ಜನ್ಮವತಾರವಾಗಿದ್ದು ಸಹ ಇದೇ ಶಿವಗಂಗೆಯಲ್ಲಿ ಎನ್ನುವರು. ಈ ಎಲ್ಲ ಅಂಶಗಳಿಗೆ ಪೂರಕವೆಂಬಂತೆ ಜಗದ್ಗುರು ರೇವಣಸಿದ್ಧೇಶ್ವರ ಪರಂಪರೆಯ ಹಲವು ಕುರುಹುಗಳು ಇಲ್ಲಿವೆ..ಅರ್ಧಬೆಟ್ಟವನ್ನು ಹತ್ತಿದರೆ ಗುಹೆ ಸಿಗುತ್ತದೆ ಒಳಗೆ ಪ್ರವೇಶಿಸಲು 5 ರುಪಾಯಿಯ ಚೀಟಿ ಪಡೆಯಬೇಕು ಒಳಗೆ ಪ್ರವೇಶಿಸಿ ಒಳಕಲ್ಲು ತೀರ್ಥಕ್ಕೆ ತೆವಳುತ್ತ ಬಗ್ಗಿ ಸಾಗಬೇಕು. ವರ್ಷದ 365ದಿನಗಳು ಈ ಒಳಕಲ್ಲಿನಲ್ಲಿ ನೀರು ಬತ್ತುವುದಿಲ್ಲ. ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದ್ದು, ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ.

ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತವೆ ಹಾಗೂ ಮದ್ಯಾಹ್ನ 12 ಘಂಟೆಯಿಂದ 3 ಘಂಟೆಯ ವರೆಗೂ ಅನ್ನ ದಾಸೋಹವು ನಡೆಯುತ್ತದೆ. ಇನ್ನೋಂದು ಅಚ್ಚರಿ ಏನೆಂದರೆ ಬೆಟ್ಟದ ಮೇಲಿರುವ ದೇವಾಲಯದಲ್ಲಿರುವ ಶಿವನ ರೂಪವಾದ ಗಂಗಾಧರೇಶ್ವರನ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ. ಬೆಟ್ಟದ ಶಿವಲಿಂಗದ(ಗಂಗಾಧರೇಶ್ವರ) ಎದುರು ನಂದಿ ವಿಗ್ರಹವಿದೆ. ಎಡಕ್ಕೆ ಪಾರ್ವತಿ ದೇವಸ್ಥಾನ, ಮುಂಭಾಗದಲ್ಲಿ ಕೆಂಪೇಗೌಡರ ಖಜಾನೆ ಇದ್ದ ಗುಹೆಯಿದೆ.

ಅಲ್ಲಿಂದ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾ ಸ್ಥಂಭಗಳಿಂದ ನಿರ್ಮಾಣವಾದ ಕೆಂಪೇಗೌಡರ ಹಜಾರ, ಕಲ್ಯಾಣ ಮಂಟಪ, ಸಪ್ತ ಮಾತೃಕೆ, ನವಗ್ರಹ ವಿಗ್ರಹಗಳಿವೆ. ಇದಲ್ಲದೆ ಕೆಂಪೆಗೌಡರು ಶಿವಗಂಗೆಯ ಗಂಗಾಧರೇಶ್ವರನ ಪರಮ ಭಕ್ತನಾಗಿದ್ದನು. ಆ ದೇಗುಲವನ್ನು ಅವರು ಒಂದು ನ್ಯಾಯಾಸ್ಥಾನ ಎಂದು ಪರಿಗಣಿಸಿದ ಬಗ್ಗೆ ಐತಿಹ್ಯಗಳಿವೆ. ಜತೆಗೆ ಅಲ್ಲಿರುವ ಕೆಂಪೇಗೌಡನ ಹಜಾರವಂತೂ ತುಂಬಾ ಪ್ರಸಿದ್ಧವಾದುದಾಗಿದೆ. ಅಲ್ಲಿನ ಒಂದು ಕಂಬದ ಮೇಲಿರುವ ಉಬ್ಬುಶಿಲ್ಪವನ್ನು ಕೆಲವರು ಅದು ಕೆಂಪೇಗೌಡನದೇ ಚಿತ್ರ ಎಂದು ಇತಿಹಾಸಕಾರರು ಪ್ರಾಚ್ಯವಸ್ತು ಇಲಾಖೆಯವರು ಗುರುತಿಸಿದ್ದಾರೆ.

ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳಿವೆ(ಬೆಟ್ಟದ ಎದುರಿಗೆ ಕೆನರಾ ಬ್ಯಾಂಕ್ ಇದೆ ಅದರ ಹಿಂಭಾಗದಲ್ಲಿ ಕಲ್ಯಾಣಿಯಿದೆ, ಅದರ ಸುತ್ತಲೂ ನೂರೆಂಟು ಲಿಂಗಗಳ ಸಂಕಿರ್ಣವಿದೆ). ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠವಿದೆ. ಮತ್ತೆ ಈ ಕ್ಷೇತ್ರದಲ್ಲಿ ಮೂರು ಕಾರ್ಯನಿರತವಾಗಿರುವ ಲಿಂಗಾಯತ ಮಠಗಳಿವೆ ಅವುಗಳೆಂದರೆ ಹೊನ್ನಮ್ಮ ಗವಿಮಠ, ಮೇಲನ ಗವಿಮಠ, ಲಕ್ಷ್ಮೀ ಪೀಠ ಈ ಶಿವಗಂಗೆ ಕ್ಷೇತ್ರದಲ್ಲಿ ಇವೆ. ತಿಗಳ ಜನಾಂಗದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ ,ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಮನೆಗಳು ಅಂಗಡಿಗಳು ಹೋಟೆಲುಗಳಿವೆ ಮತ್ತು ಧರ್ಮಛತ್ರಗಳು ಸಮುದಾಯ ಭವನಗಳಿವೆ. ಎದುರಿಗೆ ಕೆನರಾ ಬ್ಯಾಂಕ್ ಇದೆ ಹಣದ ಅವಶ್ಯಕತೆ ಇದ್ದವರು ಎಟಿಎಂ ಮೊರೆ ಹೋಗಬಹುದು.

ವಿಶೇಷ ಮಾಹಿತಿ: ಪ್ರತಿ ತಿಂಗಳ ಹುಣ್ಣಿಮೆ(ಪೌರ್ಣಮಿ)ಯ ಮುಂಜಾನೆ 4ಘಂಟೆಯ ನಂತರ ಬೆಟ್ಟವನ್ನು ಒಂದು ಸುತ್ತು ಪ್ರದಕ್ಷಿಣೆಯನ್ನು ಭಕ್ತಾದಿಗಳು ಹಾಕುವರು. ಇದಕ್ಕೆ ಯಾವುದೇ ಶುಲ್ಕಗಳಿಲ್ಲ ಹಾಗೂ ಯಾರಾದರೂ ಸಹ ಯಾವುದೇ ನೊಂದಣಿಯಿಲ್ಲದೆ ತಮ್ಮ ಇಚ್ಛೆಯನುಸಾರ ಪ್ರದಕ್ಷಿಣೆ ಹಾಕಬಹುದು, ಪ್ರದಕ್ಷಿಣೆ ಹಾಕುವ ಭಕ್ತಾದಿಗಳು ಸಂಘವನ್ನು ಸ್ಥಾಪಿಸಿ ಸದಸ್ಯತ್ವವನ್ನು ಮಾಡಿಕೊಂಡಿದ್ದಾರೆ. ಇಲ್ಲಿನ ಪ್ರಧಾನ ಅರ್ಚಕರು ಉತ್ತರ ಭಾರತದ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸವನ್ನು ಬಾಡಿಗೆ ಲೆಕ್ಕದಲ್ಲಿ ಕರೆದುಕೊಂಡು ಹೋಗುವರು.

ಶಿವಗಂಗೆಯ ವಿಷೇಶತೆ: ಶಿವಗಂಗೆ ಬೆಟ್ಟದ ವಿಶೇಷವೆಂದರೆ ಪೂರ್ವಕ್ಕೆ ವೃಷಭಾಕೃತಿ , ದಕ್ಷಿಣಕ್ಕೆ ಲಿಂಗಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿಯಂತೆ ಕಾಣುತ್ತದೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಕೈಗೊಂಡು ಮುಕ್ತಿ ಪಡೆದ ಸಂಗತಿ ಕ್ರಿ.ಶ.1131 ರ ಶ್ರಾವಣ ಬೆಳಗೊಳದ ಶಾಸನದಲ್ಲಿ ಉಲ್ಲೇಖವಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ ಶಾಂತಲೆಯು ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆಯು ಮಾಡಿಕೊಂಡಳೆಂದು ಹೇಳಲಾಗುತ್ತಿದೆ ಶಾಂತಲೆ ಬಿದ್ದ ಬೆಟ್ಟದ ಒಂದು ಸ್ಥಳಕ್ಕೆ ಶಾಂತಲಾ ಡ್ರಾಪ್ ಎಂದು ಕರೆಯುವರು.

ಶಿವಗಂಗಾ ಕ್ಷೇತ್ರದ ಪುರಾಣ: ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು. ಅದನ್ನು ಕಂಡ ಮುನಿಗಳು "ಶಿವಗಂಗಾ" ಎಂದರು. ಅದೇ ಶಿವಗಂಗೆ ಕ್ಷೇತ್ರ ಆಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.

ದಕ್ಷಿಣ ಕಾಶಿ ಶಿವಗಂಗೆಯ ಇತಿಹಾಸ: 9 ಮತ್ತು 10 ಶತಮಾನದಲ್ಲಿ ಶಿವಗಂಗೆ ಚೋಳರ ವಶದಲ್ಲಿತ್ತಾದರು ಇಲ್ಲಿ ಚೋಳರ ಯಾವುದೇ ದೇವಸ್ಥಾನ ಶಾಸನಗಳಿಲ್ಲ, ಆದರೆ 11 ಮತ್ತು 12ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಾಗ ವಿಷ್ಣುವರ್ಧನನು ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ ಎಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಷ್ಣುವರ್ಧನನ ಪಟ್ಟದರಸಿ ಶಾಂತಲೆ ಬೆಟ್ಟದ ಮೇಲಿಂದ ಕೆಳಕ್ಕೆ ಬಿದ್ದು ದೇಹತ್ಯಾಗ ಮಾಡದ್ದು ಇದೆ ಶಿವಗಂಗೆ ಬೆಟ್ಟದಲ್ಲಿ ಆ ಸ್ಥಳವನ್ನು ಈಗ ಶಾಂತಲಾ ಡ್ರಾಪ್ ಎಂದು ಹೆಸರಿಸಿ ಕರೆಯಲಾಗುತ್ತಿದೆ. ವಿಷ್ಣುವರ್ಧನನ ಪಟ್ಟದರಸಿ ಶಾಂತಲೆಯು ಕ್ರಿ.ಶ.1131ರಲ್ಲಿ ಮರಣ ಹೊಂದಿದ್ದು, ಈ ಶಾಂತಲೆಯ ಸ್ಥಾನಮಾನ ಅವಳ ನಂತರ ಬಮ್ಮಲದೇವಿಗೆ ದೊರೆಯಿತು. ಈ ಬಮ್ಮಲದೇವಿ ರಾಣಿ ಕಲ್ಕಣಿನಾಡಿಗೆ ಸೇರಿದ ನಾಗಮಂಗಲದ ಶಂಕರನಾರಾಯಣ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದಳೆಂದು ನಾಗಮಂಗಲದ ಶಂಕರನಾರಯಣ ದೇವಸ್ಥಾನದ ಶಾಸನದಿಂದ ತಿಳಿಯುತ್ತದೆ. ಹೊಯ್ಸಳರ ನಂತರ 16ನೇ ಶತಮಾನದಲ್ಲಿ ವಿಜಯನಗರದ ಆಳ್ವಿಕೆಗೆ ಒಳಪಟ್ಟಿತ್ತು ಈ ಶಿವಗಂಗೆಯ ಉಸ್ತುವಾರಿಯನ್ನು ವಿಜಯನಗರದ ಸಾಮಂತರಾಜ ಶಿವಪ್ಪ ನಾಯಕನಿಗೆ ವಹಿಸಿದ್ದರು ಆಗ ಇದು ಶಿವಪ್ಪ ನಾಯಕ ಕೋಟೆ ಎಂದಾಗಿತ್ತು, ಆನಂತರ ಮಾಗಡಿ ಕೆಂಪೇಗೌಡರಿಗೆ ನೀಡಲಾಯಿತು. ಮಾಗಡಿ ಕೆಂಪೇಗೌಡರು ಈ ಶಿವಗಂಗೆ ಕ್ಷೇತ್ರದ ಮೇಲೆ ವಿಶೇಷವಾದ ಒಲವು ಹೊಂದಿದ್ದರೆಂದು ಅಲ್ಲಿನ ಶಾಸನಗಳು ಮತ್ತು ಶಿಲ್ಪಕಲೆಗಳು ವಿವರಿಸುತ್ತವೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಶಾಲಿವಾಹನ ಶಕ (ಕ್ರಿಸ್ತ ಶಕ)1550 ರಲ್ಲಿ ಶಿವಗಂಗೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಮೇಲೆ ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ಕಡಿದಾದ ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ದೇವಾಲಯದ ಹಜಾರಗಳನ್ನು ನಿರ್ಮಿಸಿದ್ದಾರೆ. ಆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಂತ್ರಜ್ಞಾನದ ವ್ಯವಸ್ಥೆಯೂ ಆಯಿತು. ಅದು ಪವಿತ್ರ ಶೈವ ಕ್ಷೇತ್ರವಾಗುವಂತೆ ಶ್ರಮಿಸಿದ್ದು ಕೆಂಪೇಗೌಡರು. ಅದು ಈಗ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಸಂಗಮವಾಗಿ ಹೆಸರಾಗಿದೆ. ವಿಜಯನಗರದ ಅರಸರಿಂದ ಶಿವಗಂಗೆ ಮೈಸೂರು ಅರಸರ ವಶವಾದ ನಂತರ ಚಿಕ್ಕದೇವರಾಯನ ಕಾಲದಲ್ಲಿ ಕಳಲೆಯ ನಂಜರಾಜನೆಂಬ ಒಬ್ಬ ದಳವಾಯಿ ಕವಿಯೂ ಸಹ ಆಗಿದ್ದನು ಶಾಲಿವಾಹನ ಶಕ(ಕ್ರಿಸ್ತ ಶಕ)1740ರಲ್ಲಿ ಅನೇಕ ಕನ್ನಡ ಕೃತಿಗಳನ್ನು ಬರೆದಿದ್ದಾನೆ. ಇವುಗಳಲ್ಲಿ ಹಲವು ಸ್ಥಳ ಪುರಾಣಗಳ ಮಹಾತ್ಮೆಗಳನ್ನು ಬರೆದು ತಿಳಿಸಿದ್ದಾನೆ ಗರಳಪುರಿ, ಕಾಶಿ, ಭದ್ರಗಿರಿ, ಕಕ್ಕುದ್ಗಿರಿ(ದಕ್ಷಿಣ ಕಾಶಿ ಶಿವಗಂಗೆ) ಮೊದಲಾದ ಪುಣ್ಯಸ್ಥಳಗಳ ಮಹಿಮೆಯನ್ನು ಪ್ರಶಂಸಿಸುವ ಕಾವ್ಯಗಳು ಈ ಸೇನಾನಿಯ ಹೆಸರಿನಲ್ಲಿ ಪ್ರಸಿದ್ದವಾಗಿವೆ. ಈತನ ಕಾವ್ಯದಲ್ಲಿ ಶಿವಗಂಗೆ ಕ್ಷೇತ್ರವನ್ನು ಕಕ್ಕುದ್ಗಿರಿ ಎಂದು ಹೆಸರಿಸಿದ್ದಾನೆ.

ಹಲವು ಅಚ್ಚರಿಯ ಸಂಗತಿಗಳನ್ನು ಈ ಬೆಟ್ಟ ಹೊಂದಿದೆ. ಅದರಲ್ಲಿ ಒಂದು ಬೆಟ್ಟದ ತುದಿಯಲ್ಲಿ­ರುವ ಬೆಳ್ಳಿ ಗಂಟೆ. ಈ ಗಂಟೆ ಸಮರ್ಪಿಸಿದವರು ಕೆಂಪೇ ಗೌಡ. ಚಿನ್ನದ ಗಂಟೆಯು ಬೆಟ್ಟದ ಕಡಿದಾದ ಬೃಹತ್ ಬಂಡೆಯ ಕಲ್ಲಿಗೆ ಅಳವಡಿಸಲಾಗಿತ್ತು ಆದರೆ ಹೀಗೆ ಸುಮಾರು 30 ವರ್ಷದ ಹಿಂದೆ ಕಳ್ಳರು ಕದ್ದಿದ್ದಾರೆ. 16 ನೇ ಶತಮಾನದಲ್ಲಿ ಗಂಗಾಧರೇಶ್ವರ ದೇವಾಲಯದ ನವರಂಗದ ಸಿಂಹದ್ವಾರ ನಿರ್ಮಿಸಲಾಯಿತು. ಇದೇ ಕಾರಣಕ್ಕೆ, ಈ ಬಾಗಿಲುವಾಡದ ಕೆಳಗಡೆ ಕೆಂಪೇಗೌಡ, ಆತನ ಪತ್ನಿ, ಪುತ್ರ ಪುತ್ರಿಯರ ಉಬ್ಬು ಶಿಲೆಗಳಿವೆ. ಶಿವಗಂಗೆ ಬೆಟ್ಟದ ಬುಡದಲ್ಲಿ ರಾಯಗೋಪುರ (ಕೆಂಪೇಗೌಡ ಗೋಪುರ) ಮತ್ತು ಬೆಟ್ಟದ ಮೇಲೆ "ಕೆಂಪೇಗೌಡ ಹಜಾರ" ನಿರ್ಮಾಣವಾಗಿದೆ.

ವಾರ ಪೂರ್ತಿ ದುಡಿದು ಮರಕಟ್ಟಿದ ಮನಸಿಗೆ ಮುದ ನೀಡುವ ಶಿವಗಂಗೆ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದ ಸ್ಥಳ ಬೆಂಗಳೂರಿಗರಿಗೆ ಹೇಳಿಮಾಡಿಸಿದಂತಿದೆ. ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಒತ್ತಿರಿ https://m.facebook.com/story.php?story_fbid=1850212585195951&id=100006216819639

ಮಹಿಮರಂಗನಾಥ ಸ್ವಾಮಿ ಪರಿಚಯ ರಂಗನಾಥ ಸ್ವಾಮಿ ನೆಲೆನಿಂತ ಸ್ಥಳವೆ ಮಹಿಮಪುರದ ಮಹಿಮರಂಗನಾಥ ಸ್ವಾಮಿ ಕ್ಷೇತ್ರ ಇದೊಂದು ಚಿಕ್ಕ ಬೆಟ್ಟವಾಗಿದ್ದು ಎಂತಹವರೂ ಹತ್ತಿ ದೇವರ ದರ್ಶನ ಪಡೆಯಬಹುದು. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ 15ಕಿಲೋಮೀಟರ್ ದೂರದಲ್ಲಿ ಮಹಿಮಪುರ ಬಸ್ ನಿಲ್ದಾಣವಿದೆ ಅಲ್ಲಿಂದ ಎಡಕ್ಕೆ 1.5 ಕಿಲೋಮೀಟರ್ ಒಳಗೆ ಕ್ರಮಿಸಿದರೆ ನಿಮಗೆ ಮಹಿಮರಂಗನಾಥನ ಬೆಟ್ಟದ ದರ್ಶನವಾಗುತ್ತದೆ. ಇಲ್ಲಿನ ದನಗಳ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಮಾರಟಕ್ಕೆ ಬರುತ್ತವೆ. ಅತ್ಯಂತ ದೊಡ್ಡ ಜಾತ್ರೆ ನಡೆಯುತ್ತದೆ.

  1. ಮಹಿಮಪುರ ಮಹಿಮಾರಂಗಸ್ವಾಮಿ ದೇವಸ್ಥಾನದ ಇತಿಹಾಸ:

ಸ್ಥಳೀಯ ಜನರ ಮತ್ತು ದೇವಸ್ಥಾನದ ಅರ್ಚಕರ ಮಾಹಿತಿಯ ಪ್ರಕಾರ, ಭಗವಾನ್ ಗರುಡ(ವಿಷ್ಣುವಿನ ವಾಹನ) ನೆಲೆಸಿರುವ ಸ್ಥಳವಾಗಿದೆ. ಚೋಳ ಶೈಲಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಸ್ಥಾನವು 700ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ರಂಗನಾಥನ ಮಹಿಮೆಯಿಂದ ಈ ಗ್ರಾಮವನ್ನು ಮಹಿಮಪುರ ಎಂದು ಕರೆಯಲಾಗುತ್ತಿದೆ. ಈ ಸಣ್ಣ ದೇವಾಲಯಕ್ಕೆ 280 ಮೆಟ್ಟಿಲುಗಳಿವೆ. ವಿಮಾನ ಗೋಪುರವಿದೆ. ಬೆಂಗಳೂರಿನಿಂದ ನೇರ ಬಸ್ಸುಗಳು ಲಭ್ಯವಿದೆ. ಮಹಿಮಾ ರಂಗನಾಥ ಸ್ವಾಮಿ ಸ್ವಾಭಾವಿಕವಾಗಿ ವಿಕಾಸಗೊಂಡಿದೆ ಎಂದು ನಂಬಲಾದ ಬೆಲ್ಲದ ದಿಬ್ಬವಾಗಿದೆ. 12-ಅಡಿ ಎತ್ತರದ ಹನುಮಂತನ ವಿಗ್ರಹವಿದೆ. ಇದು ಖಂಡಿತವಾಗಿಯೂ ಒಂದು ದಿನದ ಪಿಕ್ನಿಕ್ಗೆ ಉತ್ತಮ ಸ್ಥಳವಾಗಿದೆ, ಬೆಟ್ಟದ ಸುತ್ತಲೂ ನೀವು ಸುಂದರವಾದ ಹಸಿರು ಪ್ರದೇಶ ಮತ್ತು ಕಲ್ಲಿನ ಪೂರ್ಣವನ್ನು ನೋಡಬಹುದು.

ಗಂಗರ ರಾಜಧಾನಿ ಮಣ್ಣೆ ಗ್ರಾಮದ ಪರಿಚಯ: ತ್ಯಾಮಗೊಂಡ್ಲುವಿಗೆ ಸಮೀಪವಿರುವ ಮಣ್ಣೆ 8ನೇ ಶತಮಾನದಲ್ಲಿ ಗಂಗರಿಂದ ನಿರ್ಮಾಣವಾದ ಗ್ರಾಮವಾಗಿದೆ. ಆನಂತರ ಚೋಳರು ವಶಪಡಿಸಿಕೊಂಡು ಅನೇಕ ದೇವಾಲಯವನ್ನು ನಿರ್ಮಿಸಿದ್ದಾರೆ. ಇಲ್ಲಿನ ಸುಂದರ ಕಲ್ಲಿನ ಕೆತ್ತನೆಗಳು ಹಾಳಾಗಿದ್ದು ಭವ್ಯ ಇತಿಹಾಸ ಮರೆಯಾಗುತ್ತಿದೆ. ಇಂದು ಇದನ್ನು ಜನಗಳು ಜನಪ್ರತಿನಿಧಿಗಳು ಅಧಿಕಾರಿಗಳಾಗಲಿ ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ ಗೋಜಿಗೆ ಕೈ ಹಾಕಿಲ್ಲ. ಸೋಮೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆಯಾದರು. ಇತರ ಐತಿಹಾಸಿಕ ಕೆತ್ತನೆಗಳು ಎಲ್ಲೆಂದರಲ್ಲಿ ಬಿದ್ದಿವೆ ಗಿಡಮರ ಕಳ್ಳಿಗಳಿಂದ ದೇವಸ್ಥಾನಗಳು ಮುಚ್ಚಿಹೋಗಿವೆ ಮಳೆ ಬಂತೆಂದರೆ ಒಂದೊಂದು ದೇವಸ್ಥಾನದ ಗೋಡೆಯ ಕಲ್ಲುಗಳು ಉರುಳುತ್ತಿವೆ. ಎಷ್ಟು ಮನೆಗೆ ಕಲ್ಲುಗಳಾಗಿವೆ ತಿಳಿಯದಾಗಿದೆ. ಪಿಯುಸಿ ಪಠ್ಯಪುಸ್ತಕದಲ್ಲಿ ಮಣ್ಣೆಯ ದೇವಸ್ಥಾನದ ಬಗ್ಗೆ ಉಲ್ಲೇಖಿಸಲಾಗಿದೆ. ಮಣ್ಣೆಗೆ ರಸ್ತೆ ಮೂಲಕ ಬರುವುದಾದರೆ ನೆಲೆಮಂಗಲ ಮಣ್ಣೆಯಿಂದ 25 ಕಿಲೋಮೀಟರ್ ಇದೆ. ಬೆಂಗಳೂರಿನಿಂದ ಮಣ್ಣೆಗೆ 25 ಕಿಲೋಮೀಟರ್ ಇದೆ. ಬೆಂಗಳೂರಿಗರು ತುಮಕೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರಲ್ಲಿ ಬೇಗೂರಿಗೆ ತಲುಪಿ ಅಲ್ಲಿಂದ ಬಲಕ್ಕೆ ತಿರುವು ಪಡೆದು ತ್ಯಾಮಗೊಂಡ್ಲು ಎಂಬ ಗ್ರಾಮದ ಮೂಲಕ ಮಣ್ಣೆಗೆ ಹೋಗಬಹುದು. ರೈಲು ಮೂಲಕ ಹೋಗುವುದಾದರೆ ಮುದ್ದಲಿಂಗಹಳ್ಳಿ ರೈಲ್ವೇ ಸ್ಟೇಷನ್ ಮತ್ತು ನಿಡವಂದ ರೇಲ್ವೆ ಸ್ಟೇಷನ್ ಗಳು ಹತ್ತಿರದ ರೈಲು ನಿಲ್ದಾಣವಾಗಿದೆ.

ಮಣ್ಣೆಯ(ಮಾನ್ಯಪುರ) ಇತಿಹಾಸ: 9ರಿಂದ 12 ನೇ ಶತಮಾನಗಳ ಅವಧಿಯಲ್ಲಿ ಕರ್ನಾಟಕವನ್ನು ಆಳಿದ ಅನೇಕ ಪ್ರಬಲ ರಾಜವಂಶಗಳಲ್ಲಿ ಗಂಗರು ಒಬ್ಬರು. ಮೊದಲು ಕೋಲಾರವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದರು. ನಂತರ ಮಾನ್ಯಪುರ(ಮಣ್ಣೆ)ಕ್ಕೆ ಬದಲಾಯಿಸಿಕೊಂಡರು. ಅಂತಿಮವಾಗಿ ತಲಕಾಡುಗೆ ಸ್ಥಳಾಂತರಗೊಂಡರು. ಗಂಗರ ರಾಜಧಾನಿ ಮಾನ್ಯಪುರ ಇಂದು ನಿರ್ಲಕ್ಷ್ಯದ ಅವಶೇಷಗಳಾಗಿವೆ. ಗಂಗರ ತಲಕಾಡು ಮತ್ತು ಕೋಲಾರದ ಇತಿಹಾಸದ ಮಾಹಿತಿ ಕಲೆ ಹಾಕಿದಂತೆ ಮಣ್ಣೆಯ ಇತಿಹಾಸ ಪರಿಪೂರ್ಣವಾಗಿ ಪತ್ತೆ ಮಾಡಲು ಅನೇಕ ಪಂಗಡಗಳು ಅದರ ಗುರುತು ಮಾಡಲು ವಿಫಲವಾದವು ಎಂದು ಹೇಳಬಹುದು. ಗಂಗರ ಕಾಲದಲ್ಲಿ ನಿರ್ಮಿಸಲಾದ ಅನೇಕ ದೇವಾಲಯಗಳು ಇವೆ, ಅವುಗಳಲ್ಲಿ ಕೆಲವು ಸಂಪೂರ್ಣವಾಗಿ ನವೀಕರಿಸಲ್ಪಟ್ಟಿದ್ದು, ಇತರ ದೇವಸ್ಥಾನಗಳ ಅವಶೇಷಗಳು ಮಾತ್ರ ಉಳಿದಿವೆ. ಈ ಕೆಲವು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಪುನಃ ಸ್ಥಾಪಿಸಲು ಕೆಲವು ಪ್ರಯತ್ನಗಳು ನಡೆದರು ಸಾಧ್ಯವಾಗಲಿಲ್ಲ. 1200 ವರ್ಷ ಹಳೆಯದಾದ "ಕಪಿಲೇಶ್ವರ ದೇವಸ್ಥಾನ" ಬಹಳ ದೊಡ್ಡದಾಗಿದೆ. ಜೀವ ಗಾತ್ರದ ದ್ವಾರಪಾಲಕರುಗಳು, ಚೆನ್ನಾಗಿ ಕೆತ್ತಿದ ಕಿಟಕಿಗಳು ಮತ್ತು ಸಂಪೂರ್ಣವಾಗಿ ವಿನ್ಯಾಸಗೊಳಿಸಿದ ಕಂಬಗಳು ಮಾತ್ರ ಉಳಿದಿದೆ. ಉಳಿದಂತೆ ಚೋಳರ ಸೋಮನಾಥ ದೇವಸ್ಥಾನ ಸುವ್ಯವಸ್ಥೆಯಲ್ಲಿದೆ. ಹಾಗೂ ಈ ಗ್ರಾಮದಲ್ಲಿ ಚೋಳರು ನಿರ್ಮಿಸಿದ ಹಲವಾರು ಐತಿಹಾಸಿಕ ಸ್ಥಳಗಳಿವೆ. ಅವರು ಸಾಕಷ್ಟು ದೇವಾಲಯಗಳನ್ನು ಮತ್ತು ಕೆರೆಗಳನ್ನು ನಿರ್ಮಿಸಿದರು. "ಮಣ್ಣಮ್ಮ ದೇವಸ್ಥಾನ" ಕೂಡ ಹಳೆಯ ಶಕ್ತಿಯ ಪೂರ್ಣ ದೇವತೆ. ಪ್ರತಿದಿನ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ಬಸವನ ದೇವಸ್ಥಾನವಿದೆ. ವಾರದಲ್ಲಿ 2 ದಿನಗಳು ತೆರೆದಿರುತ್ತದೆ. ಸೋಮವಾರ ಮತ್ತು ಶುಕ್ರವಾರದಂದು ಅನೇಕ ಮಂದಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಗಣೇಶನ ಗುಡಿ ಪರಿಚಯ: ಪುಟ್ಟ ಗಣಪತಿ ದೇವಸ್ಥಾನವಾದರೂ ಉದ್ಬವ ಮೂರ್ತಿ ಎಂದು ಹೆಸರು ಪಡೆದಿದೆ ಅತ್ಯಂತ ಪ್ರಸಿದ್ಧ ತಾಣವಾಗಿದೆ. ನೆಲಮಂಗಲ ಸುತ್ತಮುತ್ತಲಿನ ಮತ್ತು ಬೆಂಗಳೂರಿನ ಜನರು ಹೊಸ ವಾಹನಗಳನ್ನು ಖರೀದಿಸಿದರೆ ಮೊದಲು ಪೂಜೆ ಮಾಡಿಸುವುದು ವಿಘ್ನ ನಿವಾರಕನಾದ ಉದ್ಬವ ಗಣಪತಿಗೆ. ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಕಡಲೆಕಾಯಿ ಪರಿಷೆ(ಜಾತ್ರೆ) ನಡೆಯುತ್ತದೆ ಸರಿಸುಮಾರು 30,000ಸಾವಿರ ಭಕ್ತಾಧಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಗಣೇಶನ ಗುಡಿಯ ಉದ್ಭವ ಗಣಪತಿ ಇತಿಹಾಸ: 400 ವರ್ಷಗಳ ಹಿಂದೆ ಇದು ಬಯಲು ಪ್ರದೇಶವಾಗಿದ್ದು ಹೊನ್ನಗಂಗಪಾಳ್ಯ ಎಂಬ ಹೆಸರಿತ್ತು. ಇದು ಹುಲ್ಲು ಗಾವಲಾಗಿದ್ದು ಸುತ್ತಮುತ್ತಲಿನ ಹಳ್ಳಿ ಜನರು ಇಲ್ಲಿ ದನಗಳನ್ನು ಮೇಯಿಸುತ್ತಿದ್ದರು. ಈ ಬಯಲು ಪ್ರದೇಶದಲ್ಲಿ ಬಂಡೆಗಳಿಂದ ಕೂಡಿದ್ದ ಸ್ಥಳವೊಂದಿತ್ತು ಇದು ಆ ಪ್ರದೇಶದ ಎತ್ತರದ ಸ್ಥಳವಾಗಿದ್ದು ಇಲ್ಲಿ ಬಂಡೆಗಳ ಮೇಲೆ ಕುಳಿತು ತಮ್ಮ ದನಗಳನ್ನು ಗಮನಿಸುತ್ತಿದ್ದರು. ಒಮ್ಮೆ ದನಕಾಯುವವರು ವಿಶ್ರಮಿಸುತ್ತಿದ್ದಾಗ ಸಣ್ಣ ಗುಹೆಯಂತೆ ಕಂಡ ಬಂಡೆಗಳ ಮದ್ಯೆ ಕಣ್ಣು ಹಾಯಿಸಿದಾಗ, ಬಂಡೆ ಕಲ್ಲಿನ ಮೇಲೆ ಗಣೇಶ ಮೂರ್ತಿಯ ರೂಪ ಕಂಡಿತು. ಆಗಿನಿಂದ ಭಕ್ತರು ಪೂಜಿಸ ತೊಡಗಿದರು. ನಂತರದ ದಿನಗಳಲ್ಲಿ ಮಲ್ಲಪ್ಪ ಶೆಟ್ರು ಮತ್ತು ಸಿದ್ಧರಾಮ ಶೆಟ್ರು ಎಂಬುವರಿಂದ ವಿಘ್ನೇಶ್ವರನಿದ್ದ ಗುಹೆ ಮಂಟಪವಾಗಿ ಬದಲಾಯಿತು. ಅಂದಿನಿಂದ ಸುತ್ತಮಮುತ್ತಲಿನ ಹತ್ತಾರು ಸಂಖ್ಯೆಯ ಹಳ್ಳಿಗಳ ರೈತರು ಬಾರಿ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಕಡಲೆಕಾಯಿ ಕಬ್ಬನ್ನು ಪ್ರತಿವರ್ಷವೂ ಸ್ವಾಮಿಗೆ ಅರ್ಪಿಸಿ ಮೂಟೆಗಟ್ಟಲೆ ಕಡಲೆಕಾಯಿಯನ್ನು ಭಕ್ತರಿಗೆ ಉಚಿತವಾಗಿ ವಿತರಣೆ ಮಾಡಿದರು. ಇದರಿಂದ ಕಡಲೆಕಾಯಿ ಪರಿಷೆ(ಜಾತ್ರೆ) ಆರಂಭವಾಯಿತು ಮತ್ತು ಕಡಲೆಕಾಯಿ ಪರಿಷೆ ಎಂಬ ಹೆಸರು ಬರಲು ಕಾರಣವಾಯಿತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಉಚಿತ ವಿತರಣೆಯ ಬದಲಾಗಿ ನೂರಾರು ಟನ್ ಗಳಷ್ಠು ಕಡಲೆಕಾಯಿಯ ಮಾರಾಟ ಮಾಡಲಾಗುತ್ತಿದೆ. ಈ ಸ್ಥಳಕ್ಕೆ ಗಣೇಶನ ಗುಡಿ ಎಂಬ ಹೆಸರಿಟ್ಟು ಕರೆಯುತ್ತಿದ್ದಾರೆ. ಸ್ವಯಂ ಉದ್ಬವವಾದ್ದರಿಂದ ಉದ್ಬವ ಗಣಪತಿ ದೇವಸ್ಥಾನವಾಗಿ ಪ್ರಸಿದ್ಧವಾಗಿದೆ.

ಬಸವನಹಳ್ಳಿ ಲಕ್ಷ್ಮಿವೆಂಕಟರಮಣ ದೇವಸ್ಥಾನದ ಪರಿಚಯ: ನೆಲಮಂಗಲ ಪಟ್ಟಣದಿಂದ 3 ಕಿಲೋಮೀಟರ್ ದೂರದಲ್ಲಿರುವ ಗರುಡ ದೇವಸ್ಥಾನ ಮತ್ತು ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದ್ದು ರಾಮನವಮಿ ಕಳೆದ ಕೆಲವೆರಡು ದಿನದಲ್ಲಿ ಜಾತ್ರೆ ನಡೆಯುತ್ತದೆ ತೇರು ಎಳೆಯುವುದು ಜಾತ್ರೆಯಲ್ಲಿ ವಿಷೇಶವಾಗದೆ. ನೆಲಮಂಗಲದಿಂದ ದೊಡ್ಡಬಳ್ಳಾಪುರದ ರಸ್ತೆಯಲ್ಲಿ ಹಾದೂ ಹೋದರೆ, ರಸ್ತೆಯ ಪಕ್ಕದಲ್ಲಿಯೇ ಇದೆ ಶಕಪುರಿ ಕ್ಷೇತ್ರದ ಲಕ್ಷ್ಮಿವೆಂಕಟರಮಣ ದೇವಸ್ಥಾನ. ನೆಲಮಂಗಲದ ರೈಲು ನಿಲ್ದಾಣದಿಂದ 500 ಮೀಟರ್ ದೂರದಲ್ಲಿಯೇ ಇದೆ. ಬಸವನಹಳ್ಳಿ ಗ್ರಾಮವು ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿ ಮತ್ತು ಗರುಡನಿಗೆ ಸಮರ್ಪಿತವಾದ ಪುರಾತನ ದೇವಸ್ಥಾನ. ಇತಿಹಾಸ ಕೆಣಕಿದಾಗ ಪುರಾಣದ ಪ್ರಕಾರ ಗ್ರಾಮದ ಪುರಾತನ ಹೆಸರು ಕೌಂಟಿನ್ಯಾಪುರ ಎಂಬುದಾಗಿತ್ತು. ಕೌಂಟಿನ್ಯಾ ಮಹರ್ಷಿ ತಪಸನ್ನು ಇಲ್ಲಿಯೇ ಮಾಡಿದರು ಎಂಬುದು ಪುರಾಣದಿಂದ ನಂಬಲಾಗಿದೆ. ಶಂಕಪುಶ್ಕರಣಿ ಎಂಬ ಪವಿತ್ರ ಕೊಳವನ್ನು ನಿರ್ಮಿಸಿದವರು ಸಹ ಕೌಂಟಿನ್ಯ ಮಹರ್ಷಿಗಳು. ಇಲ್ಲಿ ವಿಷ್ಷಾಪುರಿ ಎಂಬ ಒಬ್ಬ ರಾಕ್ಷಸನಿದ್ದನ್ನು‌ ಆತನು ವೃಷಭ(ಗೂಳಿ) ರೂಪದಲ್ಲಿದ್ದನು ವಿಷ್ಣುವಿನ ಆರಾಧಕರಾದ ಕೌಂಡಿನ್ಯಾ ಮಹರ್ಶಿ ಅವರಿಂದ ಮಾನವನಾಗಿ ಪರಿವರ್ತನೆಗೊಂಡನು, ಆಗ ಈ ಸ್ಥಳವನ್ನು ಬಸವಪುರಿ ಎಂದು ಕರೆದರು ಅಂತಿಮವಾಗಿ ಬಸವನಾಹಳ್ಳ ಎಂದಾಯಿತು. ಗ್ರಾಮದ ಮುಖ್ಯ ದೇವಸ್ಥಾನ ಶ್ರೀಲಕ್ಷ್ಮಿವೆಂಕಟರಮಣ ಸ್ವಾಮಿ ಮತ್ತು ಶ್ರೀವೈನಾಥೇಯ(ಗರುಡ) ಏಕಾದಶಿ ದಿನದಂದು ಸಾವಿರಾರು ಭಕ್ತರು ಬಂದು ದರ್ಶನ ಪಡೆದು ಪೂಜೆ ಮಾಡಿಸುತ್ತಾರೆ.

ಬಸವನಹಳ್ಳಿ ಲಕ್ಷ್ಮಿ ವೆಂಕಟರಮಣನ ಇತಿಹಾಸ: ಅರ್ಜುನದ ಮೊಮ್ಮಗ ಜನಮೇಜಯ ರಾಜ ಕಟ್ಟಿಸಿದನೆಂದು ಹೇಳಲಾಗಿದೆ. ಮತ್ತು ನಂತರದಲ್ಲಿ ದೇವಾಲಯವನ್ನು ಆಗಾಗ ಬಂದ ರಾಜರು ನವೀಕರಿಸುತ್ತಾ ಬಂದಿದ್ದಾರೆ. ಚೋಳರ ವಾಸ್ತು ಶೈಲಿಯನ್ನು ನಾವು ಕಾಣಬಹುದು. ಅಂತಿಮವಾಗಿ ವಿಜಯನಗರ ಶೈಲಿಯಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ. ಶ್ರೀ ಲಕ್ಷ್ಮೀವೆಂಕಟರಾಣ ಸ್ವಾಮಿ ವಿಗ್ರಹ ಅಭಯ ಮತ್ತು ವರದಾಹಸ್ತ, ವೆಂಕಟರಮಣ ಸ್ವಾಮಿಯ ಅಪರೂಪದ ನಿಂತಿರುವ ಭಂಗಿಯಲ್ಲಿದೆ ಮತ್ತು ಗರುಡ(ವಿರಾದಾ ಹಸ್ತಗಳು ಎರಡೂ ಅಪರೂಪದ ಗರುಡ ಮೂರ್ತಿಗಳಿವೆ, ಆಕರ್ಷಕ ಸುಧಮೂರ್ತಿಯಿದೆ. ಶಂಕ ಪುಷ್ಕರಣಿ ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿದೆ ಇದೊಂದು ಸಣ್ಣ ಕೊಳವಾಗಿದೆ ಮತ್ತು ಮುಖಮಂಟಪ, ದೇವಸ್ಥಾನದ ವಿಶೇಷತೆ ಗರುಡ, ಇದನ್ನು ಪ್ರಮುಖ ದೇವತೆಯಾಗಿ ಮತ್ತು ಮೆರವಣಿಗೆಯ ದೇವತೆಯಾಗಿ ಪೂಜಿಸಲಾಗುತ್ತದೆ. ಸಾವಿರಾರು ಭಕ್ತರು ಗರುಡವನ್ನು ಪೂಜಿಸುತ್ತಾರೆ. ಇಲ್ಲಿ ವೆಂಕಟರಮಣ ಸ್ವಾಮಿ ಗರುಡನ ಮೂಲಕ ಆಶೀರ್ವಾದಿಸುತ್ತಾನೆ ಎಂಬ ನಂಬಿಕೆಯಿದೆ. ಆದ್ದರಿಂದ ಹೆಚ್ಚಿನ ಜನರು ಗರುಡನನ್ನು ತಮ್ಮ ಮುಖ್ಯ ದೇವತೆಯಾಗಿ ಪೂಜಿಸುತ್ತಾರೆ. ನಾಗಾ ದೋಷದಿಂದ ಉಂಟಾದ ರೋಗಗಳು ಈ ದೇವರನ್ನು ಆರಾಧಿಸುವುದರ ಮೂಲಕ ಗುಣಪಡಿಸಕೊಳ್ಳಬಹುದು ಎಂಬ ನಂಬಿಕೆ. ಅಲ್ಲದೆ, ಜನರು ವಿದ್ಯೆ, ವಿವಾಹಾ ಭಾಗ್ಯಾ ಕರುಣಿಸುವಂತೆ ಬೇಡಿಕೊಳ್ಳುತ್ತಾರೆ ಆದ್ದರಿಂದ ಗರುಡನು ವರಾಪ್ರದಾ ಗರುಡ ಎಂದು ಜನಪ್ರಿಯವಾಗಿದೆ.

ಹಳೆನಿಜಗಲ್ ಸಿದ್ದರಬೆಟ್ಟದ ಪರಿಚಯ: ಇದು ಚಿಕ್ಕಸಿದ್ದರಬೆಟ್ಟ/ನಿಜಗಲ್ ಬೆಟ್ಟ‌. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಇದೆ. ಬೆಂಗಳೂರಿನಿಂದ ನೆಲಮಂಗಲದ ಮುಖಾಂತರ ಡಾಬಸ್ ಪೇಟೆ ಇಂದ ತಲುಪಬೇಕು, ಬೆಂಗಳೂರಿನಿಂದ 55 ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟಕ್ಕೆ ಎರಡು ಮಾರ್ಗಗಳಿವೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿಯೇ ರೈಲು ಹಳಿಯ ಸೇತುವೆಯ ಕೆಳಗೆ ಹಾದೂ ಹೋಗುವ ಒಂದು ರಸ್ತೆಯಾದರೆ. ಮತ್ತೊಂದು ಡಾಬಸ್ ಪೇಟೆಯಿಂದ ಆಗಲಕುಪ್ಪೆಯ ರಸ್ತೆಯಲ್ಲಿ ಹೋಗಿ ಮುಂದೆ ಬಲಭಾಗದಲ್ಲಿ ಒಂದು ಸಿದ್ದರಬೆಟ್ಟಕ್ಕೆ ದಾರಿ ಎಂಬ ಫಲಕವಿದೆ ಅಲ್ಲಿ ಬಲಗಡೆ ತಿರುವು ಪಡೆದುಕೊಂಡು ನೇರವಾಗಿ ಹೋದರೆ ಬೆಟ್ಟದ ಅರ್ಧ ಭಾಗಕ್ಕೆ ಹೋಗುತ್ತದೆ. ಇಲ್ಲಿ ಬೆಟ್ಟದ ಮೇಲೆ ಗುಹೆಯೊಳಗೆ ಶಿವಯೋಗಿ ಸಿದ್ದೇಶ್ವರನ ಪ್ರತಿಷ್ಠಾಪಿಸಲಾಗಿದೆ ಇದರ ಹಿಂದೆಯೇ ಮುಸ್ಲಿಂ ಸಮುದಾಯದ ದರ್ಗಾವಿದೆ ಇದು ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ನಮ್ಮ ಹಿಂದೂಗಳು ದರ್ಗಕ್ಕೆ ಹೋಗುತ್ತಾರೆ ಭೂತ ಪಿಶಾಚಿಗಳನ್ನು ಹೋಡಿಸುವ ಶಕ್ತಿ ಕೇಂದ್ರವಾಗಿದೆ‌. ಹಿಂದೂಗಳು ಭೂತ ಪಿಶಾಚಿಗಳನ್ನು ಹೋಡಿಸಿ ಮುಕ್ತಿ ಕೊಡಿಸುವ ಕೆಲಸಗಳು ಇಲ್ಲಿಝ್ಕ ಮಾಡುತ್ತಾರೆ. ಅಕ್ಕ ತಂಗಿ ಎಂಬ ಎರಡು ದೊಣೆಗಳಿವೆ. ಪಾಳುಬಿದ್ದ ಕೋಟೆಯ ಅವಷೇಶಗಳು ಕಾಣಸಿಗುತ್ತವೆ ದೇವಸ್ಥಾನಗಳು ಗಿಡಗೆಂಟೆಗಳು ಬೆಳೆದು ಮುಚ್ಚಿಹೋಗಿವೆ. ಆದರೆ ಬೆಟ್ಟದ ತುತ್ತ ತುದಿಯಲ್ಲಿರುವ ಸಿದ್ದೇಶ್ವರನ ಗುಹಾಂತರ ದೇವಸ್ಥಾನ ಮತ್ತು ದರ್ಗಾನ ಸುಸ್ಥಿಯಲ್ಲಿದ್ದು ಭಕ್ತರು ತಾವು ತಯಾರಿಸಿದ ಮೊಸರು ಅನ್ನ ಅಥವಾ ಮಾಂಸಹಾರವನ್ನು ದೇವರಿಗೆ ಸಮರ್ಪಿಸಿ ತಾವೆ ಪೂಜೆ ಮಾಡಬೇಕು ಇಲ್ಲಿನ ವಿಶೇಷವೇನೆಂದರೆ ಇಲ್ಲಿ ಯಾವುದೇ ಅರ್ಚಕರು ಇಲ್ಲ ಭಕ್ತರುಗಳೆ ಪೂಜೆಮಾಡಿಕೊಂಡು ಹೋಗಬೇಕು.

ಹಳೆನಿಜಗಲ್ ಸಿದ್ದರಬೆಟ್ಟದ ಇತಿಹಾಸ: ಇದು 12ನೇ ಶತಮಾನದಲ್ಲಿ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. ಆನಂತರ 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ವಶದಲ್ಲಿತ್ತು. 18 ನೇ ಶತಮಾನದ ಉತ್ತರಾರ್ಧದಲ್ಲಿ 1750ರಲ್ಲಿ ಈ ಕೋಟೆಯ ಹಿಂಭಾಗದಲ್ಲಿ ಮರಾಠರು, ಹೈದರ್ ಅಲಿ ಮತ್ತು ಬ್ರಿಟಿಷರ ನಡುವೆ ಯುದ್ಧವನ್ನು ಕಂಡಿತು. ಆಗ ಮರಾಠಾ ಸಾಮ್ರಾಜ್ಯವು ಆಂತರಿಕ ಕಲಹದಿಂದಾಗಿ ಹಠಾತ್ತನೆ ಮಾಧವರಾವ್ ನಾಯಕತ್ವದಲ್ಲಿ ಮರಾಠ ಸೇನೆಯು ಹೈದರ್ ಅಲಿಯನ್ನು ನಾಶಮಾಡಲಾಗದೆ ದಂಡಯಾತ್ರೆಯನ್ನು ಪ್ರಾರಂಭಿಸಿತು. ಅಡೋಣಿಯೊಂದಿಗೆ ಆರಂಭಗೊಂಡು, ಮಾಧವ ರಾವ್ ಬಳ್ಳಾರಿ, ಕರ್ನೂಲ್, ದೇವದುರ್ಗ, ರಾಯದುರ್ಗ, ಕೋಲಾರ, ಭೈರವಗಡ (ಬೆಂಗಳೂರಿನ ಬಳಿ), ದೇವಾರಯನದುರ್ಗ(ತುಮಕೂರಿನ ಕೊರಟಗೆರೆ ರಸ್ತೆಯಲ್ಲಿದೆ) ದಂಡಯಾತ್ರೆ ಆರಂಭಿಸಿ ನಿಜಗಲ್ ಗೆ ತಲುಪಿದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ, ಆಗ ಹೈದರಾಲಿಯ ರಾಜಧಾನಿಯ ಶ್ರೀರಂಗಪಟ್ಟಣವಾಗಿತ್ತು. ಬಂಡೆಯ ಪರ್ವತದ ತುದಿಯಲ್ಲಿ ನಿಜಗಲ್ ಕೋಟೆಯನ್ನು ನಿರ್ಮಿಸಲಾಯಿತು. ನಿಜಗಲ್ ಬೃಹತ್ ಬಂಡೆಯ, ಜಾರು ಬಂಡೆಗಳೊಂದಿಗೆ ಎಲ್ಲಾ ದಿಕ್ಕುಗಳಲ್ಲಿ ಅಲಂಕರಿಸಿದ ಪರ್ವತದ ಮೇಲಿರುವ ಅಗಾಧವಾದ ಬಂಡೆಯ ಅರ್ಧವೃತ್ತವನ್ನು ಹೋಲುತ್ತದೆ, ಯಾವುದೇ ರೀತಿಯ ಆಕ್ರಮಣದಿಂದ ಪರಿಣಾಮಕಾರಿಯಾಗಿ ಶತೃಗಳನ್ನು ಹಿಮ್ಮೆಟಿಸುವಂತೆ ಮಾಡಿದ್ದರು. ಕೋಟೆಯ ಎತ್ತರದ ವ್ಯಾಪ್ತಿ ದೊಡ್ಡದಲ್ಲ. ಶತೃಗಳು ದಾಳಿಯಿಟ್ಟರೆ ಕೋಟೆಯ ಸುತ್ತಲೂ ಅಗಾಧ ಪ್ರಮಾಣದಲ್ಲಿ ಕುದಿಯುವ ತೈಲ ಮತ್ತು ನೀರನ್ನು ಸುರಿಯುವುದರ ಮೂಲಕ ಮತ್ತು ವಿಶೇಷವಾಗಿ ನಿರ್ಮಿಸಲಾದ ರಂಧ್ರಗಳಿಂದ (ವಿಶಿಷ್ಟವಾಗಿ) ಆರೋಹಣವನ್ನು ಅಸಾಧ್ಯವಾಗುವಂತೆ ಕೋಟೆಯ ಮೇಲ್ಭಾಗದಲ್ಲಿ ನಿಂತು ತೈಲ ಸುರಿಯುತ್ತಿದ್ದರು. ಒಂದು ಬುರ್ಜ್/ಬತೇರಿ(ಕಲ್ಲು, ಮರಳು ಮತ್ತು ಗಾರೆಗಳಿಂದ ಮಾಡಿದ ಅಂಡಾಕಾರದ ಆಕಾರದ ನಿರ್ಮಾಣ) ನಿರ್ಮಿಸಿ ಬುರ್ಜ್ ಮೇಲೆ ನಿಂತು ಸುತ್ತಲೂ ಗಸ್ತು ತಿರುಗುತ್ತಿದ್ದರು. ದೊಡ್ಡದಾದ, ಆಳವಾದ ಮತ್ತು ಬೆಟ್ಟದ ಸುತ್ತಲೂ ಮುಳ್ಳುಗಳನ್ನು ಬೆಳೆಸಿ ಶತೃಗಳು ಬರಲಾಗದಂತೆ ಮಾಡಿದ್ದರು. ಮತ್ತೊಂದು ಕಡೆ ಭದ್ರತಾ ದೃಷ್ಟಿಯಿಂದ ಮೊಸಳೆಗಳನ್ನು ಸಾಕಲಾಗಿತ್ತು. ಅಲ್ಲದೆ, ನಿಜಗಲ್ ಎಂದಿಗೂ ನೀರಿನಿಂದಕೂಡಿದ್ದು ಎಂದಿಗೂ ದೊಣೆಗಳು ಬತ್ತಿಲ್ಲ. ಈ ಕೋಟೆಯನ್ನು ವಶಪಡಿಸಿಕೊಳ್ಳಲು ಶತ್ರುಗಳಿಗೆ ಕಠಿಣವಾಗಿತ್ತು.

ನಿಜಗಲ್ ಬೆಟ್ಟ ಆನಂತರ ಮೈಸೂರು ಸಂಸ್ಥಾನದ ಮಹಾರಾಜ ಚಿಕ್ಕ ದೇವರಾಯ ಓಡೆಯರ್ ರ ಪಾಲಾಗಿತು. ನಿಜಗಲ್ ನಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳು ಇಂದಿಗೂ ಹೊಂದಿದೆ ಮತ್ತು ಚಿಕದೇವರಾಯ ಒಡೆಯರ್ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿದ ಕೋಟೆಯಿದೆ. ಈ ಬೆಟ್ಟವು ಅತ್ಯುತ್ತಮವಾದ ಬಂಡೆಗಳ ರಚನೆಗಳನ್ನು ಹೊಂದಿದೆ. ಹಿಂದೂ ದೇವತೆಯಾದ ಹನುಮಂತನ ಕೆತ್ತಿದ ವಿಗ್ರಹವು ಕೋಟೆ ಪ್ರವೇಶದ್ವಾರದಲ್ಲಿದೆ ಅಲ್ಲಿ ಜನರು ಬೆಟ್ಟ ಹತ್ತುವಾಗ ಹನುಮಂತನಿಗೆ ನಮಸ್ಕರಿಸಿ ಕೋಟೆಯ ಒಳಗಿನಿಂದ ಮುಂದೆ ಸಾಗುತ್ತಾರೆ. ಬಂಡೆಗಳ ನಡುವೆ ಸಿಕ್ಕಿಬಿದ್ದ ನೀರಿನಿಂದ ರೂಪುಗೊಂಡ ಕೋಟೆಯೊಳಗೆ ಕೆಲವು ಕೊಳಗಳು ಇವೆ. ನಿಜಗಲ್ ಬೆಟ್ಟದ ಬಳಿ ಪತ್ತೆಯಾಗಿರದ ಅನೇಕ ಪುರಾತನ ಅವಶೇಷಗಳು, ಶಾಸನಗಳು ದೊರಕಿವೆ.

ರೈಲ್ವೇ ಗೊಲ್ಲಹಳ್ಳಿ ಬೈಲಾಂಜನೆಯನ ಪರಿಚಯ ಮತ್ತು ಇತಿಹಾಸ: 250ವರ್ಷಗಳ ಇತಿಹಾಸವಿರುವ ಈ ಆಂಜನೇಯ ಸ್ವಾಮಿ ಕ್ಷೇತ್ರ. ಪೀಡೆ ಪಿಶಾಚಿ ನಾಶಕ್ಕೆ ಹೆಸರುವಾಸಿಯಾಗಿದೆ. ಬಹಳ ಶಕ್ತಿದಾಯಕ ತಾಣವಾಗಿದ್ದು ಪ್ರತಿದಿನ ಅನೇಕ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಶ್ರೀರಾಮನವಮಿಯ ನಂತರ ಬಹಳ ವಿಜೃಂಭಣೆಯಿಂದ ಗೊಲ್ಲಹಳ್ಳಿ ಜಾತ್ರೆ ನೆಡೆಯುತ್ತದೆ. ಮದುವೆ ನಾಮಕರಣಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ. ನೆಲಮಂಗಲದಿಂದ ಹೆಸರಘಟ್ಟ ಮತ್ತು ದೊಡ್ಡಬಳ್ಳಾಪುರ ರಸ್ತೆಯಲ್ಲಿ ಪಟ್ಣಣದಿಂದ 7 ಕಿಲೋಮೀಟರ್ ಕ್ರಮಿಸಿದರೆ. ಹ್ಯಾಡಾಳು ಗ್ರಾಮದ ನಂತರ ಸಿಗುತ್ತದೆ ಗೊಲ್ಲಹಳ್ಳಿ ಅಲ್ಲಿಂದ ಬೈರನಾಯಕನಹಳ್ಳಿ ಚಿಕ್ಕನಹಳ್ಳಿ ರಸ್ತೆಯಲ್ಲಿ 3 ಮೀಟರ್ ಒಳಗೆ ಕ್ರಮಿಸಿದರೆ ದೇವಸ್ಥಾನವನ್ನು ತಲುಪುವಿರಿ. ಬೆಂಗಳೂರಿನಿಂದ ನೇರವಾಗಿ ಗೊಲ್ಲಹಳ್ಳಿಗೆ ರೈಲಿನ ವ್ಯವಸ್ಥೆಯಿದೆ. ಹ್ಯಾಡಾಳು ದೇವೆಂದ್ರ(ದೇವಿ) ಎಂಬುವವರು 2009 ರಲ್ಲಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದರು ಕೆಲಸವೂ ಚುರುಕಾಗಿ ನಡೆಯುತ್ತಿತ್ತು. ದುಷ್ಕರ್ಮಿಗಳಿಂದ ದೇವಸ್ಥಾನದ ಮುಂಭಾಗದಲ್ಲಿಯೇ ಹತ್ಯೆಯಾದರು ಅಂದಿನಿಂದ ಇಂದಿನವರೆಗೂ ದೇವಸ್ಥಾನ ಯಾವುದೇ ಅಭಿವೃದ್ಧಿ ಕಾಣದೆ ಹಾಗೆಯೇ ಇದೆ.

ಚೋಳರ ಕಾಲದ ಮಹಾಲಿಂಗೇಶ್ವರ ದೇವಸ್ಥಾನದ ಪರಿಚಯ ಮತ್ತು ಇತಿಹಾಸ: ನೆಲಮಂಗಲ ಕೆರೆ ಏರಿ ಹಿಂದೆ ಚೋಳರ ಕಾಲದ ಮಹಾಲಿಂಗೇಶ್ವರನ ದೇವಸ್ಥಾನವಿರುವುದು. ಇಲ್ಲಿ ಯಾವುದೇ ಶಾಸನ ದೊರೆತಿಲ್ಲವಾದರೂ, ಇದು ಮತ್ತು ನೆಲಮಂಗಲ ಪಟ್ಟಣದ ಅಡೆಪೇಟೆಯ ಒಳಗೆ ನೆಲೆಸಿರುವ ಕಾಶಿವಿಶ್ವೇಶ್ವರಸ್ವಾಮಿ ದೇವಸ್ಥಾನ ಹಾಗೂ ಬಿನ್ನಮಂಗಲದ ಮುಕ್ತನಾಥೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸ ಕಾರರು ಗುರುತಿಸಿದ್ದಾರೆ. ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಲಾಗಿದ್ದು ನೂತನವಾಗಿ ಜೀರ್ಣೋದ್ಧಾರಮಾಡಲಾಗಿದೆ. ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದ ಪೂಜೆಯೂ ಪಟ್ಟಣದಲ್ಲಿಯೇ ಅತಿ ವಿಜೃಂಭಣೆಯಿಂದ ನಡೆಯುತ್ತದೆ ಅಂದು ಸಾವಿರಾರು ಭಕ್ತರು ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಪಟ್ಟಣದಿಂದ 500 ಮೀಟರ್ ಕೆರೆ ಏರಿಯ ಮೇಲೆ ಬಂದರೆ ದೇವಸ್ಥಾನವನ್ನು ತಲುಪುವಿರಿ. ಅಡೆಪೇಟೆಯಲ್ಲಿ ನೆಲೆಸಿರುವ ಕಾಶಿವಿಶ್ವೇಶ್ವರಸ್ವಾಮಿ ರುದ್ರೇಶ್ವರ ಕಲ್ಯಾಣ ಮಂಟಪದ ಪಕ್ಕದಲ್ಲಿ ಇದೆ. ಚೋಳರ ಕಾಲದ ದೇವಸ್ಥಾನವಾಗಿದ್ದು. ನೂತನವಾಗಿ ಜೀರ್ಣೋದ್ಧಾರಗೊಂಡಿದೆ. ದೇವಸ್ಥಾನದ ಕಲ್ಲಿನ ಗೊಡೆಗಳ ಸುತ್ತಲೂ ಅನೇಕ ದೇವರ ಹಾವಿನ ಉಬ್ಬು ಶಿಲ್ಪಗಳಿವೆ. ದೇವಸ್ಥಾನದ ಎದುರಿಗೆ ಗರುಡಸ್ತಂಭವಿದೆ. ದೇವಸ್ಥಾನ ಆವರಣದಲ್ಲಿ ನವಗ್ರಹಗಳ ದೇವಸ್ಥಾನ ಬನ್ನಿಮರ, ಬಿಲ್ವಪತ್ರೆ ಮರವಿದೆ.

ಆಲದಹಳ್ಳಿ ರಂಗನಾಥ ದೇವಸ್ಥಾನ ಪರಿಚಯ ಮತ್ತು ಇತಿಹಾಸ: ನೆಲಮಂಗಲದಿಂದ 18ಕಿಲೋಮೀಟರ್ ದೂರದಲ್ಲಿರುವ ಆಲದಹಳ್ಳಿ ಗ್ರಾಮದಲ್ಲಿ ಪುರಾತನ ರಂಗನಾಥ ಸ್ವಾಮಿದೇವಸ್ಥಾನವಿದೆ. ದೇವಸ್ಥಾನದ ಪಕ್ಕದಲ್ಲೇ ಹಳೆಯದಾದ ಬೃಹತ್ ಆಲದಮರವಿದೆ ಆದ್ದರಿಂದ ಆಲದಹಳ್ಳಿ ಎಂಬ ಹೆಸರು ಬಂದಿದೆ. ಇತಿಹಾಸ ಪ್ರಸಿದ್ಧ ದೇವಾಲಯದ ಪ್ರಮುಖ ವಿಗ್ರಹ ರಂಗನಾಥ ಸ್ವಾಮಿ. ಘನ ಕಪ್ಪು ಗ್ರಾನೈಟ್ ಕಂಬದ ರೂಪದಲ್ಲಿ ಕೆತ್ತಲಾಗಿರುವ ವಿಗ್ರಹವಾಗಿದೆ. ಇದರ ವಿಶೇಷವೆನೆಂದರೆ ಇಡೀ ರಾಜ್ಯದಲ್ಲಿ ಒಂದೇ ರೀತಿಯ ರಂಗನಾಥನ ಮೂರ್ತಿಗಳಿವೆ. ಸಾಮಾನ್ಯವಾಗಿ ರಂಗನಾಥ ಸ್ವಾಮಿ ದೇವಸ್ಥಾನಗಳು ಮಾನವ ರೂಪದಲ್ಲಿ ನಿದ್ರೆ, ಕುಳಿತು ಅಥವಾ ವಿಗ್ರಹಗಳನ್ನು ನಿಂತ ರೂಪದಲ್ಲಿವೆ ಅಥವಾ ಸರ್ಪದ ಮೇಲೆ ಮಲಗಿರುವುದು. ಆದರೆ ಇಲ್ಲಿ ಕಲಾತ್ಮಕವಾಗಿ ಕೆತ್ತಿದ ಮೀನು ಮತ್ತು ಆಮೆ ಅವತಾರಗಳ ರೂಪದಲ್ಲಿ ರಂಗನಾಥ ಸ್ವಾಮಿಯ ಮೂರ್ತಿಯನ್ನು ಕೆತ್ತಲಾಗಿದೆ. ಇವನ್ನು ಮತ್ಸ್ಯ ಅವತಾರ ಮತ್ತು ಕೊರ್ಮಾ(ಆಮೆ) ಅವತಾರಗಳು ಎಂದು ಕರೆಯಲಾಗುತ್ತದೆ. ಇದು ರಾಜ್ಯದಲ್ಲಿಯೇ ಏಕೈಕ ದೇವಾಲಯ ಎಂಬುದು ವಿಶೇಷ. ದೇವಸ್ಥಾನ ಚಿಕ್ಕದಾದರೂ ಇತಿಹಾಸ ಪ್ರಸಿದ್ಧ ಮತ್ತು ಸುಂದರವಾದ ದೇವಸ್ಥಾನವಾಗಿದೆ. ಅಲದಹಳ್ಳಿ ಯಜ್ಞವಲ್ಕಾ ಆಶ್ರಮ ಎಂದು ಒಂದು ಕಾಲದಲ್ಲಿ ಕರೆಯಲ್ಪಡುತ್ತಿತ್ತು. ಯಜ್ಞವಲ್ಕಾ ಎಂಬ ಮಹರ್ಷಿಗಳು ಇಲ್ಲಿ ನೆಲೆಸಿದ್ದರು. ಅವರೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಬೆಟ್ಟದ ತಳದಲ್ಲಿ ಲಕ್ಷ್ಮೀ ದೇವತೆಯ ಗುಹೆಯ ದೇವಾಲಯವಿದೆ. ಬೆಟ್ಟ ಹತ್ತುವುದು ತುಂಬಾ ಸುಲಭವಾಗಿದೆ. ರಾಕ್ ಕ್ಲೈಂಬಿಂಗ್ ಮಾಡುವುದಕ್ಕೆ ಉತ್ತಮವಾಗಿದೆ.

ತಡಸಿಘಟ್ಟ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಪರಿಚಯ ಮತ್ತು ಇತಿಹಾಸ: ಎಲ್ಲಾ ಓಕೆ ಸುಮಾರು 1000 ವರ್ಷ ಇತಿಹಾಸವುಳ್ಳ ಚೇಳರು ಕಟ್ಟಿದ ನೆಲಮಂಗಲ ತಾಲ್ಲೂಕಿನ ತಡಸೀಘಟ್ಟ ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಜ್ಙಾಪಕ ಬರಲಿಲ್ಲವೇ .ಇಡೀ ನೆಲಮಂಗಲ ತಾಲ್ಲೂಕಿನಲ್ಲೇ ಹೆಚ್ಚು ಭಕ್ತಾದಿಗಳನ್ನು ಹೊಂದಿರುವ ಮತ್ತು ವರ್ಷಕ್ಕೊಮ್ಮೆ ಇಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನೆಡೆಯುತ್ತೆ.ಮತ್ತು ಇಲ್ಲಿ ಒಂದು ಪವಾಡ ನೆಡೆಯುತ್ತೆ ಇಲ್ಲಿನ ಬ್ರಹ್ಮ ರಥೋತ್ಸವವನ್ನು ಎಳೆಯುವ ಸರಿಯಾದ ಸಮಯಕ್ಕೆ ಗರುಡ ಬಂದು ಆಕಾಶದಲ್ಲಿ ಮೂರು ಸುತ್ತು ಹಾರಟ ನಡೆಸಿದ ಮೇಲೇ ರಥೋತ್ಸವವನ್ನು ಎಳೆಯಲು ಅವಕಾಶವಿರುವುದು ಹಾಗು ಮುಜರಾಯಿ ಇಲಾಖೆ ದಾಖಲೆಗಳ ಪ್ರಕಾರ ತಾಲ್ಲೂಕಿನಲ್ಲೇ ಭಕ್ತಾದಿಗಳ ಕಾಣಿಕೆ ರೂಪದಲ್ಲಿ ಬರುವ ಹುಂಡಿ ಹೆಚ್ಚು ಹಣ ಪ್ರತೀ ವರ್ಷ ಸರ್ಕಾರಕ್ಕೆ ಸಂದಾಯವಾಗುತ್ತೆ.

ದೇವರ ಹೊಸಹಳ್ಳಿ ವೀರಭದ್ರ ಸ್ವಾಮಿ ಪರಿಚಯ ಮತ್ತು ಇತಿಹಾಸ: ಈ ದೇವಸ್ಥಾನವು ನೆಲಮಂಗಲ ತಾಲೂಕಿನ ಗಡಿ ಭಾಗವಾದ ರಾಷ್ಟ್ರೀಯ ಹೆದ್ದಾರಿ 4 ದೇವರಹೊಸಹಳ್ಳಿಯ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ಒಳಗೆಯಿದೆ. ಬೆಂಗಳೂರಿನಿಂದ 58ಕಿಲೋಮೀಟರ್ ಇದ್ದರೆ ನೆಲಮಂಗಲದಿಂದ 31ಕಿಲೋಮೀಟರ್ ಇದೆ. ತುಮಕೂರಿನಿಂದ 13ಕಿಲೋಮೀಟರ್ ಇದೆ. ಇಲ್ಲಿ ಒಂದು ಬೆಟ್ಟವಿದ್ದು ಇದನ್ನು ದೇವರಹೊಸಹಳ್ಳಿ ಬೆಟ್ಟ ಎನ್ನುವರು. ರಾಷ್ಟ್ರೀಯ ಹೆದ್ದಾರಿಗೆ ಕಾಣುವ ದೇವಸ್ಥಾನದ ದೊಡ್ಡ ನಾಮಫಲಕ ನಿಮಗೆ ಸ್ವಾಗತಿಸುತ್ತದೆ. ಸುಂದರ ಕೆರೆಯ ಏರಿಯಾ ಮೇಲೆ ಸಾಗತ್ತ ಪ್ರಕೃತಿಯ ಆನಂದ ಸವಿಯುತ್ತಾ ಬೆಟ್ಟದ ಮೇಲಿರುವ ವೀರಭದ್ರನ ದೇವಸ್ಥಾನಕ್ಕೆ ಸಾಗಬಹುದು, ಈ ಬೆಟ್ಟದ ಮೇಲೆ ವೀರಭದ್ರನ 600 ವರ್ಷಗಳ ಇತಿಹಾಸವಿರುವ ದೇವಸ್ಥಾನವಿದೆ. ಹಾಗೂ ಭದ್ರಕಾಳಮ್ಮನ ದೇವಸ್ಥಾನವಿದೆ. ಈ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿದೆ. ಫ್ರೌಡದೇವರಾಯನು 15ನೇ ಶತಮಾನದ ಅಂತ್ಯದಲ್ಲಿ ಸುಮಾರು ಕಿಸ್ತ ಶಕ 1490ರಲ್ಲಿ ಕಟ್ಟಿಸಿದ್ದಾನೆ. ಅಂದಿನಿಂದ ಇಂದಿನವರೆಗೂ ದಿನನಿತ್ಯ ಪೂಜೆ ನಡೆಯುತ್ತಿದೆ. ಇತ್ತೀಚೆಗೆ ಇಲ್ಲಿ ಭಕ್ತಾಧಿಗಳಿಗೆ ಪ್ರತಿನಿತ್ಯ ಅನ್ನ ದಾಸೋಹ ನಡೆಯುತ್ತಿದೆ. ವೀರಭದ್ರೇಶ್ವರನ ಜಾತ್ರೆ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತದೆ. ಆಗ ಸರಿಸುಮಾರು 1ಲಕ್ಷಕ್ಕೂಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ.


ಉದ್ದಾನ ವೀರಭದ್ರಸ್ವಾಮಿ ಮತ್ತು ಮರಳು ಸಿದ್ದೇಶ್ವರ ಸನ್ನಿದಿ ಹಳೆನಿಜಗಲ್ ಪರಿಚಯ ಮತ್ತು ಇತಿಹಾಸ: ಇದು ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿ 1.5ಕಿಲೋಮೀಟರ್ ಒಳಗೆ ನೆಲೆಗೊಂಡಿದೆ. ಬೆಂಗಳೂರಿನಿಂದ 55 ಕಿಲೋಮೀಟರ್ ದೂರವಿದೆ. ತುಮಕೂರಿನಿಂದ 12 ಕಿಲೋಮೀಟರ್ ಇದೆ. ನೆಲಮಂಗಲದಿಂದ 28 ಕಿಲೋಮೀಟರ್ ಇದೆ. ಇದು ಒಂದು ಗುಡ್ಡವಾಗಿರುವುದರಿಂದ 100 ಮೆಟ್ಟಿಲು ಹತ್ತಿ ಮೇಲೆ ಹೋಗಬೇಕು. ಇಲ್ಲಿ ಮೊದಲು ಮರುಳು ಸಿದ್ದೇಶ್ವರ ದೇವಸ್ಥಾನ ಇತ್ತು. ಇದರ ಇತಿಹಾಸ ಅಸ್ಪಷ್ಟವಾಗಿದ್ದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಹಿಂದಿನ ಶಿವಯೋಗಿಗಳು ಮರುಳು ಸಿದ್ದೇಶ್ವರ ಸ್ವಾಮಿಯನ್ನು ಪೂಜಿಸುತ್ತ ಇಲ್ಲಿಯೆ ಇದ್ದರು ಆನಂತರ ಅವರು ಉದ್ದಾನ ಶಿವಯೋಗಿಗಳು ಎಂದು ಪ್ರಸಿದ್ಧಿಯನ್ನು ಪಡೆದರು. ಕ್ರಿಸ್ತಶಕ 1465ರಲ್ಲಿ ಹಂಪಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದು. ಸಂಪತ್ಬರಿತವಾಗಿತ್ತು, ಇದರ ಮೇಲೆ ಕಣ್ಣು ಹಾಕಿದ ಮುಸ್ಲಿಂ ರಾಜರುಗಳು ದಂಡೆತ್ತಿ ಬಂದು ಸಿಕ್ಕ ಸಿಕ್ಕ ವಿಗ್ರಹಗಳನ್ನು ಒಡೆದು ನಾಶ ಪಡಿಸುತ್ತಿದ್ದರು. ಆಗ ಉದ್ದಾನ ವೀರಭದ್ರೇಶ್ವರನ ಮೂರ್ತಿಯೂ ಸಹ ಸ್ವಲ್ಪ ಭಿನ್ನವಾಗುತ್ತದೆ. ಈ ಉದ್ದಾನ ವೀರಭದ್ರೇಶ್ವರ(ಈಗಿರುವ ಹಳೆನಿಜಗಲ್ ನ ವೀರಭದ್ರೇಶ್ವರ) ಮೂರ್ತಿಯನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಆತನ ಆಸ್ಥಾನದ ಆಪ್ತರ ಸಹಾಯದಿಂದ ಹಳೆನಿಜಗಲ್ ಗೆ ತಂದು ಪ್ರತಿಷ್ಠಾಪಿಸುತ್ತಾರೆ. ಹಳೆನಿಜಗಲ್ ಪ್ರದೇಶವು ಆಗಿನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿರುತ್ತದೆ. ಆನಂತರ ಕೆಲವು ದಿನಗಳ ನಂತರ ಶ್ರೀಕೃಷ್ಣದೇವರಾಯನು ಇಲ್ಲಿಗೆ ಭೇಟಿನೀಡಿ ಹಾಲಿನ ಹಂಪಣ್ಣ ಎಂಬುವರಿಂದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸುತ್ತಾನೆ. ಈ ಕ್ಷೇತ್ರವು ಬೆಟ್ಟ-ಗುಟ್ಟಗಳಿಂದ ಕೂಡಿದ್ದು ಬಂಡೆಯ ಕಲ್ಲಿಗೆ ಹೊಂದಿಕೊಂಡ ಮರುಳು ಸಿದ್ದೇಶ್ವರ ದೇವಸ್ಥಾನವಿದೆ. ಈ ಕ್ಷೇತ್ರದಲ್ಲಿ ಭಕ್ತರು ನಾಗದೇವತೆಯ ನಾಗರ ಕಲ್ಲುಗಳನ್ನು ಹರಕೆಯ ರೂಪದಲ್ಲಿ ಪ್ರತಿಷ್ಠಾಪಿಸಿದ್ದಾರೆ. ನೂರು ಪಲ್ಲದಷ್ಟು ಭತ್ತ ತುಂಬುವ ಭತ್ತದ ಒಟ್ಟಿನ ಕಣಜವಿದೆ. ಗರ್ಭಗುಡಿಯಲ್ಲಿ ಹತ್ತು ಅಡಿ ಎತ್ತರದ ವೀರಭದ್ರನ ಸುಂದರ ಮೂರ್ತಿಯಿದೆ. ಎದುರಿಗೆ ದೇವಸ್ಥಾನದ ಹೊರಗೆ ನಂದಿಯ ವಿಗ್ರಹವಿದೆ, ನಿತ್ಯ ಪೂಜೆ ಮತ್ತು ಭಕ್ತರಿಗೆ ಅನ್ನ ದಾಸೋಹ ನಡೆಯುತ್ತದೆ. ಕಲ್ಯಾಣ ಮಂಟಪವಿದೆ, ಸುಸಜ್ಜಿತ ಶೌಚಾಲಯವಿದೆ, ಭಕ್ತರು ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ. ಹತ್ತಿರದಲ್ಲೆ ಉದ್ದಾನ ವೀರಭದ್ರ ಸ್ವಾಮಿಯ ಅರ್ಚಕರಾದ ಕೋಡಿ ಸಿದ್ದೇಶ್ವರರ ದೇವಸ್ಥಾನವಿದೆ. ಧನ್ಯವಾದಗಳು🙏