ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Mounarushi

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೋಣಿ ಹಾಲಸ್ವಾಮಿಜಿ ಮಠ

ಡೋಣಿ ಗ್ರಾಮದಲ್ಲಿ "ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರ ಜಾತ್ರಾ ಮಹೋತ್ಸವ

[ಬದಲಾಯಿಸಿ]

ಭಾರತವು ಅನೇಕ ಸಂಸ್ಕೃತಿ,ಸಂಸ್ಕಾರಗಳ ರೂಢಿ ಸಂಪ್ರಾದಾಯಗಳನ್ನು ಒಳಗೊಂಡ ಒಂದು ಭವ್ಯ ಪರಂಪರೆಯಾಗಿದ್ದು. ಭಾರತ ಭೂಮಿಯಲ್ಲಿ ಅನೇಕ ಪವಾಡ ಪುರುಷರು,ಸಾಧು ಸಂತರು ಮಹಾನ್ ಧಾರ್ಮಿಕ ಸಂಹಿಷ್ಣುಗಳು ನೆಲೆಸಿ ಆಧಾತ್ಮಿಕ ಕ್ಷೇತ್ರದಲ್ಲಿ ತನ್ನದೆ ಆದ ಧಾರ್ಮಿಕ ಶ್ರೀಮಂತಿಕೆಯನ್ನು ಹೊಂದಿದ್ದು ಇಲ್ಲಿನ ಗದಗ ಜಿಲ್ಲೆ,ಮುಂಡರಗಿ ತಾಲೂಕು ಡೋಣಿ(ಡೋಣಗಿರಿ) ಗ್ರಾಮದಲ್ಲಿ "ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರ ಜಾತ್ರಾ ಮಹೋತ್ಸವವು ಸಮನ್ವಯ ವೇದಿಕೆಯಾಗಿದೆ.ಇಲ್ಲಿನ ಶ್ರೀಗಳಮಠವು ಸರ್ವೇ ಜನೋ ಸುಖಿನೋ ಭವಂತು ಎಂಬ ತತ್ವವು ಅನಾವರಣಗೊಮಡು ಶ್ರೀ ಸ.ಶಿ.ರಾಂಪುರ ಹಾಲಸ್ವಾಮಿಗಳ ಕೃಪಾ-ಆಶೀವಾರ್‌ದಿಂದ ಹಿರೇಹಡಗಲಿಯಲ್ಲಿ ಬಂದು ನೆಲೆಸಿ ಶ್ರೀರಾಂಪುರ ಹಾಲಸ್ವಾಮಿಗಳ ಅಪ್ಪಣೆ ಮೇರೆಗೆ ಇಂದು ನಾಡಿನಾದ್ಯಂತ ಅನೇಕ ಶಾಖಾಮಠಗಳನ್ನೂ ಹೊಂದಿದೆ. ಅನೇಕ ಪವಾಡ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಶ್ರೀ ಸ.ಶಿ ಹಾಲಸೋಮೇಶ್ವರ ಸ್ವಾಮಿಗಳವರ ಡೋಣಿಯ ಶ್ರೀಗಳ ಮಠವು ಹಾಲೇಶ್ವರ ಶಾಖಾ ಮಠಗಳಲ್ಲಿ ಪ್ರಮುಖ ಮಠವಾಗಿದೆ ಇಲ್ಲಿ ಶ್ರೀಗಳು ಭಕ್ತರ ಸವರ್‌ತೋಮುಖ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿವೆ . ಉಚಿತ ನೇತ್ರ ತಪಾಸಣೆದಂತಹ ಕಾರ್ಯಕ್ರಗಳು ನಡೆಯುತ್ತಿವೆ. ಅಲ್ಲದೆ ಶ್ರೀಗಳು ಸಹ ಆಯುರ್ವೇದ ವೈದ್ಯರಾಗಿ ಭಕ್ತರ ಆರಾಧ್ಯ ದೈವವೆನಿಸಿದ್ದಾರೆ.ಕ್ಷೇತ್ರದಲಿ ಆಧ್ಯಾತ್ಮಿಕತೆಯನ್ನು ಅಷ್ಟೇ ಅಲ್ಲದೆ ಶ್ರೀಗಳ ಅಪ್ಪಣೆ ಮೆರೆಗೆ ಜಾತ್ರಾಮಹೋತ್ಸವದಲ್ಲಿ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಕಲೆ ಸಾಹಿತ್ಯ,ಸಂಗಿತ ಕ್ಷೇತ್ರಗಳಲ್ಲಿ ಆಸಕ್ತ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ. ಅಲ್ಲದೆ ಗ್ರಾಮೀಣ ಸೊಗಡಿನ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ಹಾಲೇಶ್ವರ ಜಾತ್ರೆಯಲ್ಲಿ ಕುಸ್ತಿ, ಕಬ್ಬಡಿಗಳಂತಹ ಗ್ರಾಮಿಣ ಕ್ರೀಡೆಗಳನ್ನು ನಡೆಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲೊಂದಾದ ಗಂಗಾಳ ಭಜನಾ ಕಾರ್ಯಗಳು ಹಾಗೂ ಧಾರ್ಮಿಕಕತೆಯ ನೆಲೆಬಿಡಾಗಿರುವ ಶ್ರೀಕ್ಷೇತ್ರ ಡೋಣಿಯಲ್ಲಿ ಅನೇಕ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮಗಳನ್ನು ನೆಡೆಸುತ್ತಿದ್ದಾರೆ. ಅಡ್ಡ ಪಲ್ಲಕ್ಕಿ ಮಹೋತ್ಸವವು ಊರಿನ ಪ್ರಮುಖ ಬೀದಿಗಳಲ್ಲಿ ಹಸಿರು ತೋರಣಗಳೊಂದಿಗೆ ಕುಂಭ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಗುವುದು.

ಶ್ರೀ ಮಠದಲ್ಲಿ ಈಗಾಗಲೇ ಪುರಾಣ-ಪ್ರವಚನಗಳು,ಹೋಮ,ಪೂಜೆಯ ವಿಧಿ-ವಿಧಾನಗಳೊಂದಿಗೆ ಲಿಂಗದೀಕ್ಷೆಯನ್ನು ಮತ್ತು ಧರ್ಮಸಭೆ ನಡೆಸುವುದರ ಮೂಲಕ ಧರ್ಮಪ್ರಚಾರ ಮಾಡುತ್ತಿದ್ದಾರೆ. ದಾಸೋಹಕ್ಕೆ ಹೆಸರಾದ ಶ್ರೀಗಳ ಮಠಕ್ಕೆ ಈಗಾಗಲೇ ಸಾವಿರಾರು ರೊಟ್ಟಿಗಳನ್ನು ಭಕ್ತರು ತಮ್ಮ ಮನೆಯಿಂದ ತಂದು ನೀಡುತ್ತಿದ್ದು ಈ ಜಾತ್ರೆಯ ವಿಶೇಷವಾಗಿದೆ. ನೆಡೆಯುವ ಸಾಮೂಹಿಕ ವಿವಾಹಗಳಿಗೆ ಅನೇಕ ಭಕ್ತರು ಬರಲಿದ್ದು,ಅವರಿಗಾಗಿ ಬುಂದೆ ಲಾಡು,ಅನ್ನದಾಸೋಹಕ್ಕೆ ಶ್ರೀಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ನೆಡೆಸುತ್ತಿದ್ದಾರೆ.ಅಂತೆಯೇ ರಾತ್ರಿ ಮುಳ್ಳು ಗದ್ದುಗೆ ಮಹೋತ್ಸವ ನಡೆಯಲ್ಲಿದ್ದು, ಶ್ರೀ ಹಾಲೇಶ್ವರ ಮಠವು ಸಹಸ್ರ-ಸಹಸ್ರ ಭಕರು ಇದಕ್ಕೆ

ಸಾಕ್ಷಿಯಾಗಲಿದ್ದಾರೆ.ಕೋಮು-ಸೌಹಾರ್ದತೆ ಮೂಲಕ ಶ್ರೀಮಠವು ಧರ್ಮಕ್ಷೇತ್ರವಾಗಿ, ಸಾವಿರಾರು ಭಕ್ತರ ನೆಲೆಬೀಡಾಗಿದೆ.

ನುಡಿ ಸೇವೆ:- ಮಾರುತಿ.ಎಮ್. ಕೆ, ಅಳವಂಡಿ. Mounarushi (ಚರ್ಚೆ) ೦೨:೨೩, ೨೦ ಜನವರಿ ೨೦೨೩ (IST)[reply]

ಮೌನ ಋಷಿ Mounarushi (ಚರ್ಚೆ) ೦೨:೩೮, ೨೦ ಜನವರಿ ೨೦೨೩ (IST)[reply]

ವಿಕಿಪೀಡಿಯಕ್ಕೆ ಲೇಖನ ಸೇರಿಸುವಾಗ

[ಬದಲಾಯಿಸಿ]

ವಿಕಿಪೀಡಿಯ ಒಂದು ವಿಶ್ವಕೋಶ. ಇದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶದ ಶೈಲಿಯಲ್ಲಿರಬೇಕು. ವೈಯಕ್ತಿಕ ಅಭಿಪ್ರಾಯಗಳು, ಜಾಹೀರಾತು ಅಥವಾ ಬ್ಲಾಗ್ ಮಾದರಿಯ ಲೇಖನಗಳನ್ನು ಇಲ್ಲಿ ಸೇರಿಸುವಂತಿಲ್ಲ. ಭಾಷೆ ತಟಸ್ಥವಾಗಿರಬೇಕು. ಹೊಗಳಿಕೆ ತೆಗಳಿಕೆಗಳಿರಬಾರದು. ನೀವು ಬರೆದ ಲೇಖನಗಳು ಈ ರೀತಿಯಲ್ಲಿರಲಿಲ್ಲ ಆದುದರಿಂದ ಅದನ್ನು ಅಳಿಸಲಾಗಿದೆ. ದಯವಿಟ್ಟು ಈ ನಿಯಮಗಳಿಗನುಗುಣವಾಗಿ ಲೇಖನ ಬರೆಯಿರಿ.--ಪವನಜ ಯು. ಬಿ. (ಚರ್ಚೆ) ೦೯:೫೦, ೩೧ ಜನವರಿ ೨೦೨೩ (IST)[reply]

@Pavanaja ಸರ್ ದಯವಿಟ್ಟು ಕ್ಷಮಿಸಿ ನಾವು ಇನ್ನು ಮುಂದೆ ಸರಿಯಾಗಿರಂತ ವಿಷಯಗಳನ್ನು ವಿಕಿಪೀಡಿಯ ಕ್ಕೆ ಹಾಕುತ್ತೇವೆ ದಯವಿಟ್ಟು ಸಹಕರಿಸಿ. ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆಯನ್ನು ನಮಗೆ ಕೊಡಿ. Mounarushi (ಚರ್ಚೆ) ೧೩:೦೬, ೩೧ ಜನವರಿ ೨೦೨೩ (IST)[reply]
ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದುದರಿಂದ ನಿಮ್ಮನ್ನು ಒಂದು ತಿಂಗಳುಗಳ ಕಾಲ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೧:೪೬, ೮ ಫೆಬ್ರವರಿ ೨೦೨೩ (IST) (ನಿರ್ವಾಹಕ)[reply]
ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದುದರಿಂದ ನಿಮ್ಮನ್ನು ಆರು ತಿಂಗಳುಗಳ ಕಾಲ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೨:೦೪, ೭ ಜೂನ್ ೨೦೨೩ (IST) (ನಿರ್ವಾಹಕ)[reply]
@Pavanaja ಸರ್ ಇನ್ನೂ ಯಾವತರ ವಿಷಯ ಹಾಕಬೇಕು 😕 Mounarushi (ಚರ್ಚೆ) ೧೨:೦೮, ೭ ಜೂನ್ ೨೦೨೩ (IST)[reply]
ವಿಕಿಪೀಡಿಯ ಒಂದು ವಿಶ್ವಕೋಶ. ಇದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶದ ಶೈಲಿಯಲ್ಲಿರಬೇಕು. ವೈಯಕ್ತಿಕ ಅಭಿಪ್ರಾಯಗಳು, ಜಾಹೀರಾತು ಅಥವಾ ಬ್ಲಾಗ್ ಮಾದರಿಯ ಲೇಖನಗಳನ್ನು ಇಲ್ಲಿ ಸೇರಿಸುವಂತಿಲ್ಲ. ಭಾಷೆ ತಟಸ್ಥವಾಗಿರಬೇಕು. ಹೊಗಳಿಕೆ ತೆಗಳಿಕೆಗಳಿರಬಾರದು. ನೀವು ಬರೆದ ಲೇಖನಗಳು ಈ ರೀತಿಯಲ್ಲಿರಲಿಲ್ಲ ಆದುದರಿಂದ ಅದನ್ನು ಅಳಿಸಲಾಗಿದೆ. --ಪವನಜ ಯು. ಬಿ. (ಚರ್ಚೆ) ೧೨:೧೦, ೭ ಜೂನ್ ೨೦೨೩ (IST)[reply]
@Pavanaja ಪವನ್ ಸರ್ ದಯವಿಟ್ಟು ದೇವಸ್ಥಾನದ ವಿಕಿಪೀಡಿಯನ್ನು ರಚಿಸಬೇಕಾಗಿದೆ ಆದಕಾರಣ ನಿಮಗೆ ವಿಷಯವನ್ನು ನಾವು ಹಾಕುತ್ತೇವೆ. ನಿಮಗೆ ಯಾವ ರೀತಿ ಸೇರಿಸಬಹುದು ಎಂಬುದನ್ನು ನಮಗೆ ಕಳುಹಿಸಿ ಕೊಡಿ ಅಥವಾ ನೀವೇ ಆದರೂ ಪರವಾಗಿಲ್ಲ ವಿಷಯವನ್ನು ಹಾಕಿ. Mounarushi (ಚರ್ಚೆ) ೧೨:೧೫, ೭ ಜೂನ್ ೨೦೨೩ (IST)[reply]