ಸದಸ್ಯರ ಚರ್ಚೆಪುಟ:Mohd sufaid

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Mohd sufaid


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (talk) ೧೦:೫೧, ೧೦ ಫೆಬ್ರುವರಿ ೨೦೧೫ (UTC)

ಮನೆಮಗ[ಬದಲಾಯಿಸಿ]

ಮನೆಮಗ ಜಗತ್ತಿನ ಹಲವು ಕಾದಂಬರಿಗಳಲ್ಲಿ ಹೊಸ ಶಿಕ್ಷಣ ಪಡೆದ ನಾಯಕನೊಬ್ಬ ನಗರದಿಂದ ಹಳ್ಳಿಗೆ ಮರಳಿ ತನ್ನ ಪರಿಸರವನ್ನು ಸುಧಾರಿಸಲೆತ್ನಿಸುತ್ತಾನೆ. ಹಲಬಗೆಯ ಶಕ್ತಿಗಳೊಂದಿಗೆ ಹೋರಾಡುತ್ತಾನೆ. ಹೊಸ ಆದರ್ಶಗಳನ್ನು ರೂಪಿಸಲೆತ್ನಿಸುತ್ತಾನೆ. ನೂರು ವರ್ಷಗಳ ಕೆಳಗೆ, 1915ರ ಜನವರಿ ಒಂಬತ್ತನೆಯ ತಾರೀಕು ದಕ್ಷಿಣ ಆಫ್ರಿಕಾದಿಂದ ‘ಅರೇಬಿಯಾ’ ಎಂಬ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಮೋಹನದಾಸ್ ಕರಮಚಂದ ಗಾಂಧಿ ಮರಳಿ ಭಾರತವನ್ನು ಹುಡುಕಿಕೊಂಡ ಮನೆಮಗ ನಂತೆ ಇವತ್ತು ಚರಿತ್ರೆಯ ಹಿನ್ನೋಟದಲ್ಲಿ ಕಾಣತೊಡಗುತ್ತಾರೆ. ಇದಾದ ಎರಡೂವರೆ ವರ್ಷಗಳ, ನಂತರ ಮತ್ತೊಬ್ಬ ಮನೆಮಗ ಅಂಬೇಡ್ಕರ್ ಕೂಡ ಇಂಗ್ಲೆಂಡಿನಿಂದ ಮುಂಬೈಗೆ ಬಂದಿಳಿದರು. ಗಾಂಧೀಜಿಯವರ ಜಾತಿಯಲ್ಲಿ ಸಮುದ್ರ ದಾಟಿ ವಿದೇಶಕ್ಕೆ ಹೋಗುವುದು ನಿಷಿದ್ಧವಾಗಿತ್ತು; ಅಂಬೇಡ್ಕರ್ ಅವರಿಗೆ ಆ ಸಾಧ್ಯತೆ ತೀರ ದೂರದಲ್ಲಿತ್ತು. ಇವೆಲ್ಲ ಕಷ್ಟಗಳನ್ನು ದಾಟಿ ಸಮುದ್ರ ಪ್ರಯಾಣ ಮಾಡಿ ಮರಳಿ ಮನೆಗೆ ಬಂದ ಇಬ್ಬರು ನಾಯಕರು ಭಾರತದ ಚರಿತ್ರೆಯ ಚಕ್ರದ ದಿಕ್ಕನ್ನು ಬೇರೊಂದು ದಿಕ್ಕಿಗೆ ತಿರುಗಿಸಿದ ಕತೆ ಎಲ್ಲರಿಗೂ ಗೊತ್ತು. ಇಂಡಿಯಾಕ್ಕೆ ಹೊರಟು ಹಡಗಿನಲ್ಲಿ ಕೂತ ಗಾಂಧೀಜಿಯವರ ‘ಯುದ್ಧಭೂಮಿ ಸಿದ್ಧ ವಾಗಿತ್ತು; ಪ್ರಯಾಣದ ಆನಂದ ಹಾಗೂ ಮಹತ್ತರ ಕೆಲಸವೊಂದರಲ್ಲಿ ತೊಡಗಲಿರು ವವನ ಆತಂಕಗಳೆರಡೂ ಅವರಲ್ಲಿ ತುಂಬಿದ್ದವು’ ಎಂದು ‘ಮೋಹನದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಆ್ಯನ್ ಎಂಪೈರ್’ ಜೀವನ ಚರಿತ್ರೆಯಲ್ಲಿ ರಾಜಮೋಹನ ಗಾಂಧಿ ಬರೆಯುತ್ತಾರೆ. ಆಗ ಗಾಂಧೀಜಿ ಬರೆದ ಪತ್ರದಲ್ಲಿ ಅವರ ತಳಮಳ ದಾಖಲಾಗಿದೆ: “ಇಂಡಿಯಾಕ್ಕೆ ಹೊರಡುವುದು ಅದೆಷ್ಟು ಸಲ ತಪ್ಪಿ ಹೋಗಿದೆಯೆಂದರೆ, ನಾನು ಇವತ್ತು ಇಂಡಿಯಾಕ್ಕೆ ಹೊರಟಿರುವ ಹಡಗಿನಲ್ಲಿ ಕೂತಿರುವುದು ನಿಜವೆಂದು ನನಗೆ ನಂಬಲು ಆಗುತ್ತಲೇ ಇಲ್ಲ. ಇಂಡಿಯಾ ತಲುಪಿದ ಮೇಲೆ ನಾನೇನು ಮಾಡಬಹುದು? ಅದೇನೇ ಇರಲಿ, ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು’ ಎಂಬ ಭಾವವಷ್ಟೇ ನನಗೀಗ ನೆಮ್ಮದಿ ಕೊಡುತ್ತಿರುವುದು”. ಈ ಪಯಣ, ಮರುಪಯಣಗಳ ನಡುವೆ ಮೋಹನದಾಸ್ ವಸಾಹತುಕಾರ ದೇಶವಾದ ಇಂಗ್ಲೆಂಡಿಗೆ ಹೋಗಿ ಕಾನೂನು ಶಿಕ್ಷಣ ಪಡೆದದ್ದು ಹಾಗೂ ವಸಾಹತೀಕರಣದಿಂದ ನೊಂದ ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ್ದು, ಚಿಂತಿಸಿದ್ದು, ಹೋರಾಡಿದ್ದು, ಹಿಂಜರಿಕೆಯ ತರುಣನೊಬ್ಬ ನಿರ್ಭೀತ ನಾಯಕನಾದದ್ದು ಎಲ್ಲವೂ ಸೇರಿವೆ. ಈ ಮರುಪಯಣದ ಹೊತ್ತಿಗೆ ಅವರೊಳಗೆ ಆಧುನಿಕ ನಾಗರಿಕತೆ ಕುರಿತ ಒರಿಜಿನಲ್ ಫಿಲಾಸಫಿಯೂ ಇಂಡಿಯಾದ ಬಿಡುಗಡೆಗಾಗಿ ಹೊಸ ಕಾರ್ಯಯೋಜನೆಯೂ ಬೆಳೆಯತೊಡಗಿತ್ತು. ಇಂಡಿಯಾಕ್ಕೆ ಬರುವ ಐದು ವರ್ಷಗಳ ಕೆಳಗೆ, ಗಾಂಧೀಜಿ ಇಂಗ್ಲೆಂಡಿ ನಿಂದ ದಕ್ಷಿಣ ಆಫ್ರಿಕಾಕ್ಕೆ ಮರಳಿ ಬರುತ್ತಿರುವಾಗ ಹಡಗಿನಲ್ಲಿ ಒಂಬತ್ತು ದಿನಗಳ ಕಾಲ ತಮ್ಮ ಜೀವನದರ್ಶನವನ್ನು ಮಂಡಿಸುವ ‘ಹಿಂದ್ ಸ್ವರಾಜ್’ ಬರೆದಿದ್ದರು. ಬಲಗೈ ಸೋತಾಗ ಎಡಗೈಯಲ್ಲಿ ಬರೆಯುತ್ತಿದ್ದರು! ಎಡಗೈಯಲ್ಲಿ ಬರೆಯುವ ಈ ಹೊಸ ಕಲೆಯನ್ನು ಕೊನೆತನಕ ಉಳಿಸಿಕೊಂಡರು! ರಾಜಮೋಹನ್ ಗಾಂಧಿ ವಿವರಿಸುವಂತೆ ‘ಸ್ವರಾಜ್ ಎಂದರೆ ಪ್ರತಿ ವ್ಯಕ್ತಿಯೂ ತನ್ನನ್ನು ತಾನು ಆಳಿಕೊಳ್ಳುವುದು; ರಾಜಕೀಯ ದೃಷ್ಟಿಯಲ್ಲಿ ಸ್ವರಾಜ್ ಎಂದರೆ ಹೋಂರೂಲ್ ಅಥವಾ ನಮ್ಮನ್ನು ನಾವೇ ಆಳಿಕೊಳ್ಳುವ ಸರ್ಕಾರದ ಸ್ಥಾಪನೆ ಎಂದರ್ಥ. ಆದರೆ ನಿಜವಾದ ಅರ್ಥದಲ್ಲಿ ಸ್ವಯಮಾಡಳಿತವೆನ್ನು ವುದು ನಾಯಕರು ಮತ್ತು ನಾಗರಿಕರು ತಮ್ಮನ್ನು ತಾವು ಎಷ್ಟರಮಟ್ಟಿಗೆ ನಿಯಂತ್ರಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ’. ‘ಇನ್ನು ಮುಂದೆ ನನ್ನ ಬದುಕು ಸ್ವರಾಜ್ಯದ ಸಾಧನೆಗೆ ಮುಡಿಪಾ ಗಿದೆ ಎಂದು ನನ್ನ ಮನಸ್ಸಾಕ್ಷಿ ಹೇಳುತ್ತಿದೆ’ ಎಂದು ಗಾಂಧೀಜಿ ಆ ಘಟ್ಟದಲ್ಲಿ ಬರೆದರು.

ಪ್ರಾಣಿಗಳು ಮತ್ತು ಹಿಂದೂಗಳು ಎಲ್ಲರಿಗೂ ಪ್ರವೇಶವಿದೆ[ಬದಲಾಯಿಸಿ]

ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎಂದು ಯುರೋಪಿ¬ಯನ್‌ರ ಕ್ಲಬ್‌ನ ಬಾಗಿಲುಗಳ ಮೇಲೆ ಬರೆ¬ದಿ¬ರುವ ಆ ಸಾಲುಗಳಾದರೂ ಪರವಾಗಿಲ್ಲ. ನಮ್ಮ ದೇಗುಲಗಳ ಬಾಗಿಲಲ್ಲಿ ದೇವರು, ಪ್ರಾಣಿಗಳು ಮತ್ತು ಹಿಂದೂಗಳು ಎಲ್ಲರಿಗೂ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ ಎಂದಿ¬ರುತ್ತದೆ. ಹೀಗೆಂದು ದೇವಾಲಯ ಪ್ರವೇಶವನ್ನು ಕುರಿತು ಬರೆದ ಗಾಂಧೀಜಿಯವರಿಗೆ ಉತ್ತರ ನೀಡಿ¬ದವರು ಬಾಬಾ ಸಾಹೇಬ್ ಅಂಬೇಡ್ಕರ್. ಅಸಮಾನತೆಯ ನೆಲಗಟ್ಟಿನ ಮೇಲೆ ನಿಂತ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ವನ್ನು ಸ್ವೀಕರಿಸಿದಾಗ ಅದು ಅಂಬೇಡ್ಕರ್‌ ಒಬ್ಬರ ಬದುಕಿಗೆ ತಿರುವಾಗಿರಲಿಲ್ಲ. ಭಾರತದ ಭವಿಷ್ಯಕ್ಕೆ ಬರೆದ ತಿರುವಾಗಿತ್ತು. ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ ಈ ದಿನ ಬುದ್ಧ ಮತ್ತು ಬೌದ್ಧ ಧರ್ಮದ ಜಾಡನ್ನು ಹಿಡಿದು ಚಿಂತಿಸುವಂತೆ ಮಾಡಿದೆ. ಬುದ್ಧ ಹಾಗೂ ಬೌದ್ಧ ಧರ್ಮವನ್ನು ವಿವರಿಸುವ ಶಾಲಾ ಪಠ್ಯಗಳು ಬುದ್ಧನ ಬದುಕಿನ ಬಗೆಗೆ ಬಂದಿರುವ ಸರಳವಾದ ಕಥೆಯನ್ನು ಹೇಳುತ್ತಾ ಬಂದಿವೆ. ಒಬ್ಬ ರೋಗಿ, ಮುದುಕ ಮತ್ತು ಭಿಕ್ಷುಕ¬ನನ್ನು ನೋಡಿ ಸಂಸಾರವನ್ನು ತೊರೆಯುವ ಈ ಪುರಾಣೀಕರಿಸಿದ ಕಥೆ ರೂಪಕ ಭಾಷೆಯದ್ದಾಗಿರ¬ಬೇಕು. ಚರಿತ್ರೆಯ ಆಳಕ್ಕಿಳಿದು ನೋಡುವ ಅಂಬೇಡ್ಕರ್ ನದಿ ವ್ಯಾಜ್ಯದಂತಹ ಎರಡು ರಾಜ್ಯಗಳ ನಡುವಿನ ಹೋರಾಟವನ್ನು ತಪ್ಪಿಸಲು ಸಿದ್ಧಾರ್ಥ ರಾಜ್ಯವನ್ನು ತೊರೆಯಬೇಕಾಯಿ¬ತೆಂದು ವಿವರಿಸುತ್ತಾರೆ. ಕ್ರಿ.ಪೂ. ಆರನೆಯ ಶತಮಾನ ಹಲವು ವೈಚಾ¬ರಿಕ ವಾದಗಳ ಹುಟ್ಟಿಗೆ ಕಾರಣವಾಗಿದೆ. ಈ ಎಲ್ಲಾ ಸಿದ್ಧಾಂತಗಳಲ್ಲಿ ಕಾಣುವ ಸಾಮಾನ್ಯ¬ವಾದ ವಿಚಾರವೆಂದರೆ ವೈದಿಕ ಪಾರಮ್ಯದ ವಿರೋಧ. ಈ ವಿರೋಧವನ್ನು ಕಂಡುಕೊಂಡ ಮಾರ್ಗ ಮಾತ್ರ ದೊಡ್ಡ ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು. ಸಮಾಜದ ಅಸಮಾನತೆ¬ಯನ್ನು ಒಪ್ಪುವ ಮತ್ತು ಅಮೂರ್ತದಲ್ಲಿ ತನ್ನ ವಿಚಾರವನ್ನು ಮಂಡಿಸುವ, ವಿಚಾರವನ್ನು ಪ್ರತಿ¬ಭ¬ಟಿಸದೆ ವೇದ ಸಮಾಜದ ಹೊರಗುಳಿದ ಜನ¬ರಿಗೆ ಬೇರೆ ಮಾರ್ಗವೇ ಇರಲಿಲ್ಲ. ಬುದ್ಧನ ವಿಚಾರ¬ಗಳು ಹೇಗೆ ಹರಿದು ಬಂದಿವೆ ಎಂಬ ಚಾರಿತ್ರಿಕ ಬೆಳವಣಿಗೆಯನ್ನು ಅಂಬೇಡ್ಕರ್ ‘ಬುದ್ಧ ಅಂಡ್ ಹಿಸ್ ಧಮ್ಮ’ ಕೃತಿಯಲ್ಲಿ ಸ್ಪಷ್ಟವಾದ ವಿವರಣೆ¬ಯನ್ನು ನೀಡುತ್ತಾರೆ. ಬುದ್ಧ ಕೊಟ್ಟ ವಿಚಾರ ವಾಸ್ತವದ ಬದುಕಿಗೆ ನೀಡಿದ ಮಾರ್ಗವಾಗಿತ್ತೇ ಹೊರತು ಕಣ್ಣಿಗೆ ಕಾಣದ, ಕೈಗೆಟುಕದ ಆತ್ಮ, ಪರಮಾತ್ಮನ ಚಿಂತೆ ಅದಾಗಿರಲಿಲ್ಲ. ಬುದ್ಧ ಎಲ್ಲೂ ತನ್ನನ್ನು ದೇವರೆಂದು ಹೇಳಿ¬ಕೊಳ್ಳ¬ಲಿಲ್ಲವೆಂದು ನಾಗಾರ್ಜುನ ತನ್ನ ‘ಮಧ್ಯ¬ಮಕ ಕಾರಿಕಾ’¬ದಲ್ಲಿ ಮತ್ತೆಮತ್ತೆ ಹೇಳುತ್ತಾನೆ. ಬೌದ್ಧ ಧರ್ಮವಾಗಲಿ ಅಥವಾ ಬೇರೆ ಯಾವುದೇ ಧರ್ಮವಾಗಲೀ ನಾವಿಂದು ಕೇಳಿ¬ಕೊಳ್ಳ¬ಬೇಕಾಗಿರುವುದು ಇವತ್ತಿನ ಬದುಕಿಗೆ ಎಷ್ಟು ಸಮಂಜಸ ಮತ್ತು ಎಷ್ಟರಮಟ್ಟಿಗೆ ಅದು ನಮ್ಮ ಬದುಕನ್ನು ನಿರ್ದೇಶಿಸುತ್ತದೆ. ಬುದ್ಧನ ತತ್ವ ಜನರು ತಮ್ಮ ಬದುಕನ್ನು ರೂಪಿಸಿ¬ಕೊಳ್ಳಲು ಹಲವು ರೀತಿಯಲ್ಲಿ ಕಾರಣವಾ¬ಗಿದ್ದು, ಗೊತ್ತಿದ್ದೋ ಗೊತ್ತಿಲ್ಲದೆಯೇ ಅದು ಭಾರತೀಯನ ಬದುಕಿನ ಭಾಗವಾಗಿದೆ. ಬೌದ್ಧ ಧರ್ಮದ ಅಧ್ಯಯನ ಮಾಡುವ ವಿದ್ವಾಂಸರು ಬೌದ್ಧ ಧರ್ಮದ ಬೆಳವಣಿಗೆಯನ್ನು ಗುರುತಿಸಿ ಅನಂತರದಲ್ಲಿ ಅದರ ಪತನವನ್ನು ಗುರುತಿ¬ಸುತ್ತಾ ಬಂದಿದ್ದಾರೆ. ಆದರೆ ಬೌದ್ಧ ಧರ್ಮ ಧಾರ್ಮಿಕ ಆಚರಣೆಯಾಗಿ ನಶಿಸಿಹೋಗಿದ್ದರೂ ಜನರ ಬದುಕಿನ ಭಾಗವಾಗಿ ಹರಿದುಬಂದಿದೆ ಎಂದು ಹೇಳಲು ಹಲವು ನಿದರ್ಶನಗಳು ದೊರೆ¬ಯುತ್ತವೆ. ಬೌದ್ಧರ ಹತ್ಯೆ ಬೌದ್ಧ ಧರ್ಮ¬ವನ್ನು ಮರೆಮಾಡಲು ಸಾಧ್ಯವಾಗಿದೆಯೇ ಹೊರತು ಜನಪದರ ಬದುಕಿನ ಭಾಗವೇ ಆಗಿಹೋದ ಬೌದ್ಧ ತತ್ವಗಳನ್ನು ಅಳಿಸಿ ಹಾಕಲು ಸಾಧ್ಯವಾ¬ಗಿಲ್ಲ. ಬೌದ್ಧ ಚಿಂತನೆ ಕಾಲದೇಶಗಳನ್ನು ಮೀರಿ ಹರಡುತ್ತಾ ಬಂದಿದೆ. ವೈಚಾರಿಕತೆ, ತರ್ಕ, ಅನುಭವ ವೇದ್ಯವಾದ ಸತ್ಯ, ಸಮಾನತೆ, ವ್ಯಕ್ತಿಯ ವಿಮೋಚನೆ ಇಂತಹ ಆಲೋಚನೆಯ ಮೇಲೆ ಚಿಂತನೆಯನ್ನು ಮಾಡಬಲ್ಲ ಯಾವುದೇ ತತ್ವಜ್ಞಾನಿ ಮರಳಿ ಬೌದ್ಧ ತತ್ವದ ಒಳಹೊಕ್ಕು ನೋಡಬೇಕಾಗುತ್ತದೆ.