ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Kavithaganesh

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕವಿತ.ಜಿ
SELFIE
ಜನನ
ಕವಿತ

ಸೇಲಂ
ರಾಷ್ಟ್ರೀಯತೆಭಾರತೀಯರು
ಇತರೆ ಹೆಸರುಕುಳ್ಳಿ, ಕವಿ
ವಿದ್ಯಾಭ್ಯಾಸಬಿ.ಕಾ.ಮ್
ವೃತ್ತಿವಿಧ್ಯಾರ್ಥಿನಿ
ಗಮನಾರ್ಹ ಕೆಲಸಗಳುಶಿಸ್ತು

ಹೆಸರು

[ಬದಲಾಯಿಸಿ]

ನನ್ನ ಹೆಸರು ಕವಿತ.ಜಿ.ನನ್ನ ತಂದೆಯ ಹೆಸರು ಗಣೇಶ್ ಬಿ.ಆರ್ ಹಾಗು ತಾಯಿಯ ಹೆಸರು ಗೀತಾ.ಜಿ.

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ೩-೪-೧೯೯೭ ರಂದು ನಾನು ಜನಿಸಿದೆ.

ಬಾಲ್ಯ

[ಬದಲಾಯಿಸಿ]

ನನಗೆ ಬಾಲ್ಯದಲ್ಲಿ ಹಲವಾರು ಸ್ನೇಹಿತರಿದ್ದರು, ನಾನು ಹೆಚ್ಚಾಗಿ ಹುಡುಗರ ಜೊತೆ ಆಟವಾಡುತ್ತಿದ್ದೆ. ಬುಗುರಿ ಆಡುವುದು, ಕುಂಟೆಬಿಲ್ಲೆ, ಆಟ ಸಾಮಾನುಗಳಲ್ಲಿ ಅಡಗೆ ಮಾಡುವ ಆಟವಾಡುವುದು ಹೀಗೆ ಹಲವಾರು ಆಟಗಳನ್ನು ಆಡುತ್ತಿದ್ದೆವು.

ವಿಧ್ಯಾಭ್ಯಾಸ

[ಬದಲಾಯಿಸಿ]

ನಾನು ನನ್ನ ಶಾಲಾ ವಿಧ್ಯಾಭ್ಯಾಸವನ್ನು ಕ್ರಿಸ್ತವಿದ್ಯಾಲಯ ಶಾಲೆಯಲ್ಲಿ ಮಾಡಿದೆ. ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಹನ್ನೊಂದನೆ ತರಗತಿ ಮತ್ತು ಹನ್ನೆರಡನೆ ತರಗತಿಯನ್ನು ಮುಗಿಸಿದೆ ಹಾಗು ಹನ್ನೆರಡನೆ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದೆನು. ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಮ್ ರೆಗುಲರ್ಸ್ ಮಾಡುತ್ತಿದ್ದೇನೆ. ಇದು ನನ್ನ ಮೊದಲನೇ ವರ್ಷ ಈಗ ಎರಡನೇ ಸೆಮಿಸ್ಟರ್ನಲ್ಲಿದ್ದೇನೆ.

ಆಸಕ್ತಿ

[ಬದಲಾಯಿಸಿ]

ನನಗೆ ಮೆಹಂದಿ ಚಿತ್ರಗಳನ್ನು ಬಿಡಿಸುವುದೆಂದರೆ ಬಹಳ ಇಷ್ಟ, ಅದಲ್ಲದೆ ಪುಟ್ಟ ಕಥೆ ಪುಸ್ತಕಗಳನ್ನು ಓದುವುದು, ದೂರದರ್ಶನ ನೋಡುವುದು, ಹಾಡುಗಳನ್ನು ಕೇಳುವುದು, ರಂಗೋಲಿ ಬಿಡಿಸುವುದು ಇವೇ ನನ್ನ ಮೊದಲಾದ ಹವ್ಯಾಸಗಳಾಗಿವೆ. ನನಗೆ ಅಡುಗೆ ಕಲಿಯಲು ಮತ್ತು ಮಾಡಲು ಬಹಳ ಇಷ್ಟ. ನನಗೆ ಸಂಗೀತವನ್ನು ಕಲಿಯಲು ಬಹಳ ಆಸೆ. ಚಿತ್ರರಂಗದಲ್ಲಿ ವಿಜಯ್ ಎಂದರೆ ತುಂಬಾ ಇಷ್ಟ. ನನಗೆ ಮದರ್ ತೆರೆಸಾ ಅವರ ಜೀವನ ಶೈಲಿ ಮತ್ತು ಅವರ ಸೇವಾಮನೋಭಾವ ನನ್ನಲ್ಲಿ ಆಶ್ಚರ್ಯ ಉಂಟುಮಾದಡಿದೆ ಹಾಗು ಸ್ಪೂರ್ತಿಯಾಗಿದೆ. ನನಗೆ ಶಾಲಾ ದಿವಸಗಳಿಂದಲೂ ಕ್ರೀಡೆಗಳೆಂದರೆ ಬಹಳ ಆಸಕ್ತಿ ಆದ್ದರಿಂದ ವಾಲಿಬಾಲ್, ತ್ರೋಬಾಲ್ ಆಟವನ್ನು ಆಡುತ್ತಿದ್ದೆ, ಬೇರೆ ಬೇರೆ ಶಾಲೆಗಳ ಜೊತೆ ಹಲವಾರು ಬಾರಿ ಕ್ರೀಡಾ ಸ್ಪರ್ಧೆಗಳಲ್ಲಿ ಭಗವಹಿಸಿ ಗೆದ್ದಿರುವ ಸಮಯವೂ ಇದೆ ಹಾಗು ಸೋತಿರುವ ಘಟನೆಗಳೂ ಇವೆ. ಈಗ ನಮ್ಮ ಕಾಲೇಜಿನಲ್ಲೂ ತ್ರೋಬಾಲ್ ತಂಡದಲ್ಲಿ ಒಬ್ಬ ಸದಸ್ಯಳಾಗಿದ್ದೇನೆ.

ವಿಕಿಪೀಡಿಯ

[ಬದಲಾಯಿಸಿ]

ನಾನು ಮೊದಲ ಬಾರಿಗೆ ಕನ್ನಡದಲ್ಲಿ ಟೈಪ್ ಮಾಡಿರುವುದು ಈ ಕಾಲೇಜಿನಲ್ಲೇ. ಇದರಿಂದ ನಮಗೆ ಹಲವಾರು ರೀತೆಯಲ್ಲಿ ಸಹಾಯವಾಗುತ್ತಿದೆ ಉದಾಹರಣೆಗೆ ಕನ್ನಡ ಗೊತ್ತಿಲ್ಲದೆ ಇರುವ ಹಲವಾರು ವಿಧ್ಯಾರ್ಥಿಗಳಿಗೆ ಇದು ಒಂದು ಅವಕಾಶವಾಗಿದೆ. ಕನ್ನಡವನ್ನು ಕಲಿಯಲು ಇದೊಂದು ಸುಲಭವಾದ ಮಾರ್ಗ ಎನ್ನುವುದು ನನ್ನ ಅನಿಸಿಕೆ ಹಾಗು ಟೈಪಿಂಗ್ ಅಲ್ಲದೆ ಕನ್ನಡ ತರಗತಿಯೂ ಕೂಡ ನನಗೆ ಇಷ್ಟ ಅದರಲ್ಲಿಯೂ ಚರ್ಚೆಗಳಲ್ಲಿ ಭಾಗವಹಿಸಿವುದರಲ್ಲಿ ನನಗೆ ತುಂಬಾ ಆಸಕ್ತಿ ಇದೆ. ಟೈಪಿಂಗ್ ವಿಷಯದಲ್ಲಿ ನಮಗೆ ಯಾವುದೇ ಸಂಶಯವಿದ್ದಲ್ಲಿ ನಮ್ಮ ಶಿಕ್ಷಕರು ನಮಗೆ ಸಹಾಯ ಮಾಡುತ್ತಾರೆ. ಕನ್ನಡ ಭಾಷೆಯ ಮೇಲೆ ಇರುವ ಅಭಿಮಾನವು ಹೆಚ್ಚಾಗುತ್ತದೆ. ನಾನು ಕೊಡುಗೆಯಾಗಿ ಕ್ರೀಡೆಗಳಿಗೆ ಸಂಬಂಧಿಸಿದಂತೆ ವಿಕಿಪಿಡೀಯದಲ್ಲಿ ಭಾಗವಹಿಸಲು ಇಚ್ಚಿಸುತ್ತೇನೆ.