ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:K.R Roshith/ನನ್ನ ಪ್ರಯೋಗಪುಟ/2

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಲಿಮರ್ಗಳ ವರ್ಗೀಕರಣ

[ಬದಲಾಯಿಸಿ]

ಮೂಲ ಆಧಾರಿತ ವರ್ಗೀಕರಣ.

[ಬದಲಾಯಿಸಿ]
    ೧. ನೈಸರ್ಗಿಕ ಪಾಲಿಮರ್ಗಳು.
                 ಇವು  ಸಸ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುವ ಪಾಲಿಮರ್ಗಳಾಗಿವೆ.
                  ಉದಾ: ಪ್ರೊಟೀನ್, ಸೆಲ್ಲೂಲೋಸ್, ರೆಸಿನ್ನ್, ಮತ್ತು ರಬ್ಬರ್.
    ೨. ಅರ್ಧ ಸಂಶ್ಲೇಷಿತ ಪಾಲಿಮರ್ಗಳು.
                 ಇವು ನೈಸರ್ಗಿಕ ಪಾಲಿಮರ್ಗಳಿಂದ ಉತ್ಪದಿಸುವ   ಪಾಲಿಮರ್ಗಳಾಗಿವೆ.
                   ಉದಾ:  ಸೆಲ್ಲೂಲೋಸ್ ಅಸಿಟೇಟ್,  ಸೆಲ್ಲೂಲೋಸ್ ನೈಟ್ರೇಟ್.
    ೩. ಸಂಶ್ಲೇಷಿತ  ಪಾಲಿಮರ್ಗಳು.
                 ಇವು ಮನುಷ್ಯ  ಆವಿಷ್ಕಾರಿಸಿದ   ಪಾಲಿಮರ್ಗಳಾಗಿವೆ.
                  ಉದಾ: ಪಾಲಿಥೀನ್, ನೈಲಾನ್,  ಸಂಶ್ಲೇಷಿತ ರಬ್ಬರ್.
        

ರಚನೆ ಆಧಾರಿತ ವರ್ಗೀಕರಣ.

[ಬದಲಾಯಿಸಿ]
   ೧. ರೇಖೀಯ ಪಾಲಿಮರ್ಗಳು.
         ಇವು ನೇರ ಹಾಗು ಉದ್ದವಾದ ಸರಣಿಗಳನ್ನು ಒಳಗೊಂಡಿರುವ ಪಾಲಿಮರ್ಗಳಾಗಿವೆ.
             ಉದಾ: ಪಾಲಿವಿನೈಲ್ ಕ್ಲೋರೈಡ್, ಹೆಚ್ಚಿನ ಸಾಂದ್ರತೆಯುಳ್ಳ ಪಾಲಿಥೀನ್.
   ೨.  ರೆಂಬೆಯಾಕಾರದ ಪಾಲಿಮರ್ಗಗಳು.
          ಇವು ನೇರ ಹಾಗು ಉದ್ದವಾದ ಸರಣಿಗಳಿಗೆ ರೆಂಬೆಗಳನ್ನು ಒಳಗೊಂಡಿರುವ ಪಾಲಿಮರ್ಗಳಾಗಿವೆ.
            ಉದಾ:  ಕಡಿಮೆ ಸಾಂದ್ರತೆಯುಳ್ಳ ಪಾಲಿಥೀನ್.
   ೩. ಎಣಿಬಲೆಯಾಕಾರದ ಪಾಲಿಮರ್ಗಳು.
           ಇವು ದ್ವಿ-ಕ್ರಿಯಾತ್ಮಕ ಅಥವಾ ತ್ರಿ-ಕ್ರಿಯಾತ್ಮಕ ಮೊನೊಮರ್ಗಳು ಬಲವಾದ ಕೋವೆಲೆಂಟ್ ಬಂಧನದಿಂದ ರೂಪುಗೊಂಡ ಪಾಲಿಮರ್ಗಳಾಗಿವೆ.
         ಉದಾ: ಬೇಕೆಲೈಟ್, ಮೆಲಮೈನ್. 

ಪಾಲಿಮರೀಕರಣ ಕ್ರಮಗಳ ಆಧಾರಿತ ವರ್ಗೀಕರಣ.

[ಬದಲಾಯಿಸಿ]
 ೧. ಸಂಕಲನ ಪಾಲಿಮರ್ಗಳು.
          ಇವು ಮೊನೊಮರ್ಗಳ ಪುನರಾವರ್ತಿತ ಸಂಕಲನ ಕ್ರಿಯೆಯಿಂದ ರೂಪುಗೊಂಡ ಪಾಲಿಮರ್ಗಳಾಗಿವೆ.
           ಉದಾ: ಎಥೆನ್ನಿಂದ ರೂಪುಗೊಂಡ ಪಾಲಿಥೀನ್. ಪ್ರೋಪೀನಿಂದ ರೂಪುಗೊಂಡ ಪಾಲಿಪ್ರೋಪೀನ್.
 ೨. ಸಾಂದ್ರೀಕೃತ ಪಾಲಿಮರ್ಗಳು.
          ಇವು ದ್ವಿ-ಕ್ರಿಯಾತ್ಮಕ ಅಥವಾ ತ್ರಿ-ಕ್ರಿಯಾತ್ಮಕ ಮೊನೊಮರ್ಗಳ ನಡುವೆ ಪುನರಾವರ್ತಿತ ಸಾಂದ್ರೀಕರಣ ಕ್ರಿಯೆಯಿಂದ ರೂಪುಗೊಂಡ ಪಾಲಿಮರ್ಗಳಾಗಿವೆ.
          ಉದಾ: ನೈಲಾನ್ ೬,೬.

ಅಣ್ವಿಕ ಶಕ್ತಿಯ ಆಧಾರಿತ ವರ್ಗೀಕರಣ.

[ಬದಲಾಯಿಸಿ]
 ೧. ಎಲಾಸ್ಟೊಮರ್.
       ಎಲಾಸ್ಟಿಕ್ ಗುಣ ಹೊಂದಿರುವ ಪಾಲಿಮರ್ಗಳು.
        ಉದಾ: ರಬ್ಬರ್
 ೨. ಫ಼ೈಬರ್.
         ಹೆಚ್ಚಿನ ಕರ್ಷಕ ಶಕ್ತಿಯನ್ನು ಹೊಂದಿರುವ ಪಾಲಿಮರ್ಗಳು.
          ಉದಾ:  ನೈಲಾನ್ ೬,೬.
೩. ಥರ್ಮೋಪ್ಲಾಸ್ಟಿಕ್  ಪಾಲಿಮರ್.
        ಶಾಕನೀಡಿದಾಗ ಮೃದುವಾಗುವ ಹಾಗು ತಣಿಸಿದಾಗ ಗಟ್ಟಿಯಾಗುವ , ಸ್ಥಿತಿಸ್ಥಾಪಕ  ಗುಣ ಹೊಂದಿರುವ ಪಾಲಿಮರ್ಗಳು.
        ಉದಾ: ಪಾಲಿಥೀನ್.
 ೪. ಥರ್ಮೋಸೆಟ್ಟಿಂಗ್ ಪಾಲಿಮರ್.
     ಶಾಕನೀಡಿದಾಗ ಮೃದುವಾಗಿ ಸ್ಥಿತಿಗೆಡುವ ಗುಣ ಹೊಂದಿರುವ ಪಾಲಿಮರ್ಗಳು.
      ಉದಾ: ಬೇಕಲೈಟ್.