ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Jeevitha b

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Jeevitha b,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೩:೩೧, ೧೦ ಜುಲೈ ೨೦೧೫ (UTC)

ಮಹಾಸ್ಫೋಟ

[ಬದಲಾಯಿಸಿ]

ಸಕಲ ಜೀವರಾಶಿಗಳಲ್ಲಿ ದುಸ್ಸಾಹಸಕ್ಕೆ ವಿನಾಕಾರಣ ಧುಮುಕುವ ಬುದ್ಧಿ ಬರುವುದು ಮನುಷ್ಯನಿಗೆ ಮಾತ್ರ. ಯಾಕೆಂದರೆ, ಅರ್ಥಶಾಸ್ತ್ರಜ್ಞ ಆಲ್ಫ್ರೆಡ್ ಮಾರ್ಷಲ್ ಹೇಳಿರುವಂತೆ ಮನುಷ್ಯನ ಆಸೆಗಳನ್ನು ಈಡೇರಿಸುವುದು ಅಸಾಧ್ಯ. ಯಾಕೆಂದರೆ ಅದು ಇಂಗಿಸಲಾಗದ ಸರೋವರ. ಉಳಿದ ಜೀವರಾಶಿಗಳು ಹಾಗಲ್ಲ. ಪ್ರಾಣಾಪಾಯ ಎದುರಾದರೆ ಮಾತ್ರವೇ ದುಸ್ಸಾಹಸ. ಮನುಷ್ಯನಿಗಾದರೂ ನಾನಾ ರೀತಿಯ ತೆವಲುಗಳು, ಅಧಿಕಾರ, ಅಂತಸ್ತು, ಪರಾಕ್ರಮ, ಶೌರ್ಯಗಳು ತೂಕ ತಪ್ಪಿದ ರೀತಿಯಲ್ಲಿ ಬೆರೆತ ಪರಿಣಾಮವೇ ಮನುಷ್ಯನಲ್ಲಿ ಕ್ರೌರ್ಯದ ಗುಣ ಉದಯ. ಇದಕ್ಕೆ ತಾಜಾ ಉದಾಹರಣೆ ಉತ್ತರ ಕೊರಿಯಾ ತನ್ನ ದೇಶದ ಪರಾಕ್ರಮದ ಪರೀಕ್ಷೆಗಾಗಿ ನಡೆಸಿರುವ ಜಲಜನಕ ಬಾಂಬ್ ಪರೀಕ್ಷೆ. ಇದರ ದುಷ್ಪರಿಣಾಮಕ್ಕೆ ಸುತ್ತಮುತ್ತಲಿನ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ರಷ್ಯಾದಲ್ಲಿ ಹಠಾತ್ ಭೂಕಂಪ. ರಿಕ್ಟರ್ ಅಳತೆಯಲ್ಲಿ ಇದರ ಪ್ರಮಾಣ 5.01. ಇದರ ಅರ್ಥ ಸ್ಪಷ್ಟ ಈ ಭೌಗೋಳಿಕ ಪರಿಸರದಲ್ಲಿ ನಾನು ಹೇಳಿದ್ದೇ ಆಟ- ಮಾಡಿದ್ದೆ ಪಾಠ ಎಂಬ ಎಚ್ಚರಿಕೆ ಸಂದೇಶ ರವಾನೆ ನೆರೆದೇಶಗಳಿಗೆ. ಇದು ಯಾವ ರೀತಿಯಲ್ಲಿ ನೋಡಿದರೂ ದುಸ್ಸಾಹಸವೇ. ಪರಮಾಣು ಬಾಂಬ್‌ಗಿಂತ ಜಲಜನಕ ಬಾಂಬ್ ಹೆಚ್ಚು ಮಾರಕ. ಅದರ ಖರ್ಚು ಹೆಚ್ಚು. ನಿರ್ಮಾಣದ ತಂತ್ರಜ್ಞಾನವೂ ರಹಸ್ಯ. ಇಂತಹ ಜಗತ್ತಿನ ರಹಸ್ಯವನ್ನು ಬೇಧಿಸಿರುವ ಯಶಸ್ಸಿನ ಗುಂಗಿನಲ್ಲಿರುವ ಉತ್ತರ ಕೊರಿಯಾಗೆ ತಕ್ಕಪಾಠ ಕಲಿಸಬೇಕಾದ ಹೊಣೆ ಇರುವುದು ವಿಶ್ವಸಂಸ್ಥೆಗೆ ಮಾತ್ರ. ಯಾಕೆಂದರೆ, ವಿಶ್ವಸಂಸ್ಥೆಗೆ ಮಾತ್ರ ದೇಶಗಳಿಗೆ ಬುದ್ದಿ ಹೇಳುವ- ಅಗತ್ಯಬಿದ್ದರೆ ಬುದ್ದಿ ಕಲಿಸುವ ಉತ್ತರದಾಯಿತ್ವವಿದೆ. ಇಲ್ಲವೇ ದೇಶಗಳ ಮಟ್ಟದಲ್ಲಿ ಬುದ್ಧಿ ಕಲಿಸುವ ಆಟಕ್ಕೆ ಅವಕಾಶವಾದರೆ ಮತ್ತೊಂದು ಮಹಾಯುದ್ದಕ್ಕೆ ಕುಮ್ಮಕ್ಕು ಕೊಟ್ಟಂತೆಯೇ ಸರಿ. ಹಾಗೆ ನೋಡಿದರೆ, ಉತ್ತರ ಕೊರಿಯಾದ ದುಸ್ಸಾಹಸದ ಮೂಲ ಇರುವುದು ದಾಯಾದಿ ಜಗಳದಲ್ಲಿ. ಅವಿಭಾಜ್ಯ ಕೊರಿಯಾದ ಹಂಗು-ಗುಂಗುಗಳು ಇನ್ನು ಪ್ರತ್ಯೇಕಗೊಂಡಿರುವ ಕೊರಿಯಾ ದೇಶಗಳಲ್ಲಿ ಹೋಗಿಲ್ಲ. ಯಥಾ ಪ್ರಕಾರ, ಭಾರತ ಹಾಗೂ ಪಾಕಿಸ್ತಾನದಲ್ಲಿರುವ ಸ್ಥಿತಿ. ಭಾರತದಲ್ಲಿ ಜವಾಬ್ದಾರಿಯುತ ಜನತಂತ್ರ ಪದ್ಧತಿ ಇರುವಾಗ ಪರಿಣಾಮವಾಗಿ ಉಭಯ ದೇಶಗಳ ಸಂಬಂದ ಹಾಗೊಮ್ಮೆ-ಹೀಗೊಮ್ಮೆ ಚಕಮಕಿಯಲ್ಲಿ ಮುಗಿಯುತ್ತಿದೆ. ಅಷ್ಟರಮಟ್ಟಿಗೆ ಕೊರಿಯಾಗಿಂತ ಭಾರತ-ಪಾಕಿಸ್ತಾನಗಳೇ ವಾಸಿ. ಕೊರಿಯಾದ ದಾಯಾದಿಗಳಲ್ಲಿ ಒಬ್ಬರನ್ನೊಬ್ಬರು ಮಟ್ಟ ಹಾಕುವುದೇ ಕನಸು. ಹೀಗಾಗಿ ಉಭಯ ದೇಶಗಳ ಹಗೆತನ ಒಂದು ಸಾಮೂಹಿಕ ಸನ್ನಿ. ಜಗತ್ತು ಈಗ ಪರಿಸರ ಮಾಲಿನ್ಯದ ಪರಿಣಾಮವಾಗಿ ತಬ್ಬಲಿ ಸ್ಥಿತಿ ಬಂದಿದೆ. ಪರಿಸರ ನಾಶದಿಂದ ಇತ್ತೀಚೆಗಷ್ಟೆ ತಮಿಳುನಾಡಿನಲ್ಲಿ ಚಂಡಮಾರುತದ ಪರಿಣಾಮ ಏನೆಂಬುದನ್ನು ಕಣ್ಣಾರೆ ಜಗತ್ತು ಕಾಣಬೇಕಾಯಿತು. ಇದೇ ಸ್ಥಿತಿ ಮುಂದುವರಿದರೆ ಭೀಕರ ಮಳೆ ಕಟ್ಟಿಟ್ಟ ಬುತ್ತಿ ಎಂಬುದು ತಜ್ಞರ ಎಚ್ಚರಿಕೆ. ಆದರೆ ಈ ಎಚ್ಚರಿಕೆ ಸ್ವೀಕರಿಸುವ ಎಚ್ಚರ ಸರ್ಕಾರಗಳಿಗೆ ಇಲ್ಲ. ಇದರ ಪರಿಣಾಮ ದೇಶವಾಸಿಗಳು ಅನುಭವಿಸಬೇಕು. ಉತ್ತರ ಕೊರಿಯಾ ದೇಶಕ್ಕೆ ಇಂತಹ ಅಪಾಯಕಾರಿ ಶಸ್ತ್ರದ ಅಗತ್ಯ ಏನಿತ್ತು ಎಂಬುದು ಪ್ರಶ್ನೆ. ದಕ್ಷಿಣ ಕೊರಿಯಾಗೆ ಅಂತಹ ಪರಾಕ್ರಮ ಪ್ರದರ್ಶನ ಬಯಕೆ ಇದ್ದರೆ ಇದುವರೆಗೆ ಶೃತಪಟ್ಟಿಲ್ಲ. ಇನ್ನೂ ಜಪಾನ್ ಎದುರಿಸಿ ನಿಲ್ಲುವಷ್ಟು ತಾಕತ್ತು ದಕ್ಷಿಣ ಕೊರಿಯಾಗೆ ಇಲ್ಲ. ಜಾಗತಿಕ ರಾಜಕಾರಣದಲ್ಲಿ ಶಸ್ತ್ರಾಸ್ತ್ರಗಳೇ ಎಲ್ಲವೂ ಅಲ್ಲ. ಶಸ್ತ್ರಾಸ್ತ್ರಗಳ ಜತೆಗೆ ಜಾಗತಿಕ ರಾಜಕಾರಣದ ಪಾತ್ರಧಾರಿಗಳಾಗಿದ್ದರಷ್ಟೆ ಸೂತ್ರಧಾರಿಗಳಾಗಲು ಅವಕಾಶ. ಬಾಹುಬಲದಿಂದ ಬೆದರಿಸಿ ಬಾಳಬಹುದು ಎಂಬುದು ವಿನಾಶಕಾರಿ ವಿಪರೀತ ಬುದ್ಧಿ ಎಂಬುದಕ್ಕೆ ಸಾಕ್ಷಿ. ಕೊರಿಯಾ ದೇಶಕ್ಕೆ ಪಾಠ ಕಲಿಸದಿದ್ದರೆ ನರಿ ಬುದ್ದಿ ಚಿಗುರಲು ಬೇರೆ ದೇಶಗಳು ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದು ಘರ್ಜಿಸುತ್ತದೆ ಗೋಡೆಬರಹ.