ಸದಸ್ಯರ ಚರ್ಚೆಪುಟ:Bscsagar
ಹೊಸ ಖಾತೆ ತೆರೆದಿದೆ ಏಕೆ?
[ಬದಲಾಯಿಸಿ]ಹೊಸ ಖಾತೆ ತೆರೆದಿದೆ ಏಕೆ? ಈಗ ಕನ್ನಡಕೆ ಬೇಗ ಬದಲಾವಣೆ ಆಗದು ?
ಹೊಸ ವಿಷಯ ಪಟ್ಟಿ
[ಬದಲಾಯಿಸಿ]ಮಹಿಳೆಯ ಹೊಟ್ಟೆ ಒಳಗಿತ್ತು 33 ಕೆಜಿ ತೂಕದ ಮಾಂಸ ಚೀಲ!
[ಬದಲಾಯಿಸಿ]- ಉದಯವಾಣಿ, Mar 22, 2017, 3:50 AM IST
- ಮೆಕ್ಸಿಕೋ ಸಿಟಿಯಲ್ಲಿ 24 ವರ್ಷದ ಆ ಮಹಿಳೆಯ ಹೊಟ್ಟೆಯಲ್ಲಿ 10 ಮಗು ಇದ್ದಷ್ಟು ತೂಕದಿಂದ ಭಾರದ ಹೆಜ್ಜೆ ಇಡುತ್ತಿದ್ದ ಆಕೆ ಅಷ್ಟು ದಪ್ಪಗಿರಲು ಕಾರಣ ಅಂಡಾಶಯದ ಬೊಕ್ಕೆ (ಒವರಿಯನ್ ಸಿಸ್ಟ್). ವೈದ್ಯರ 157 ಸೆಂ.ಮೀ. ಗಾತ್ರದ ಆ ಪೊಳ್ಳು ಚೀಲವನ್ನು ಕೊನೆಗೂ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಮೆಕ್ಸಿಕೋದ ಜನರಲ್ ಆಸ್ಪತ್ರೆಯ ವೈದ್ಯ ಡಾ. ಎರಿಕ್ ಹನ್ಸನ್ ಈ ಚಿಕಿತ್ಸೆಯನ್ನು ಯಶಸ್ವಿಯಾಗಿಸಿದ್ದು, 11 ತಿಂಗಳ ನಂತರ ಮಹಿಳೆ ಸಹಜ ಜೀವನಕ್ಕೆ ಮರಳಿದ್ದಾರೆ. ಕಳೆದ 6 ತಿಂಗಳಿಂದ ಓಡಾಡಲೂ ಆಗದೆ, ಉಸಿರಾಡಲಾಗದೆ, ಹಸಿವಾದರೂ ಹೊಟ್ಟೆಗೆ ಆಹಾರ ಸೇವಿಸಲು ಅಸಾಧ್ಯವಾಗಿ ಮಹಿಳೆಗೆ ಮರುಜೀವ ಬಂದಂತಾಗಿದೆ.[೧]
12ರ ಹರಯಕ್ಕೇ ತಂದೆಯಾದ ಬಾಲಕ!
[ಬದಲಾಯಿಸಿ]- 23 Mar, 2017
- ತಿರುವನಂತಪುರದ ಕೊಚ್ಚಿಯಲ್ಲಿ ಕೇವಲ 12ವರ್ಷದ ಬಾಲಕನೋರ್ವ ತಂದೆಯಾಗುವ ಮೂಲಕ ‘ದೇಶದ ಕಿರಿಯ ತಂದೆ’ ಎನಿಸಿಕೊಂಡ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. 2016ರ ನವೆಂಬರ್‌ನಲ್ಲಿ 17 ವರ್ಷದ ಬಾಲಕಿ ಕಕ್ಕನಾಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಳು. ಬಳಿಕ ತಮ್ಮ ಸಂಬಂಧಿ 12ರ ಬಾಲಕನಿಂದಲೇ ತಾನು ಗರ್ಭಧರಿಸಿದ್ದಾಗಿ ಹೇಳಿಕೆ ನೀಡಿದ್ದಳು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದರು. ತಿರುವನಂತಪುರಂಮಡಿಕಲ್ ಕಾಲೇಜಿನಲ್ಲಿ ಇಬ್ಬರ ರಕ್ತದ ಮಾದರಿಗಳನ್ನು ಪಡೆದು ಡಿಎನ್ಎ ಪರೀಕ್ಷೆ ನಡೆಸಿದ ನಂತರ ನಾಲ್ಕು ತಿಂಗಳ ಮಗುವಿನ ತಾಯಿಯಾಗಿರುವ 17 ವರ್ಷದ ಬಾಲಕಿ ತಾಯಿಯಾಗಲು 12ರ ಬಾಲಕನೇ ಕಾರಣ ಎಂಬುದು ಸಾಬೀತಾಗಿದೆ.
- ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಲಾಮಸ್ಸೇರಿ ಸರ್ಕಲ್ ಇನ್ಸ್‌ಪೆಕ್ಟರ್ ಎಸ್. ಜಯಕೃಷ್ಣನ್ ಅವರು ‘ಇಬ್ಬರನ್ನೂ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ ನಂತರ 12ರ ಹರೆಯದ ಬಾಲಕನೇ ಮಗುವಿನ ತಂದೆ ಎಂದು ತಿಳಿದು ಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಪೋಸ್ಕೋ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದ್ದು, ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಖಾಸಗಿ ಅಸ್ಪತ್ರೆಯ ಮಾಧ್ಯಮ ಪ್ರತಿನಿಧಿ ಮಾತನಾಡಿ ‘ಮಗುವಿಗೆ ಜನ್ಮ ನೀಡಿದ ತಾಯಿ ಅಪ್ರಾಪ್ತೆ ಎಂದು ತಿಳಿದ ಕೂಡಲೇ ಮಕ್ಕಳ ರಕ್ಷಣಾ ಆಯೋಗ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದೆವು’ ಎಂದು ಹೇಳಿದ್ದಾರೆ.[೨]
ಸ್ನಾತಕೋತ್ತರ ಪದವಿ ಓದುತ್ತಿರುವ ಅತಿ ಹಿರಿಯ ವ್ಯಕ್ತಿ
[ಬದಲಾಯಿಸಿ]- 19 Mar, 2017;
- ಬಿಹಾರದ 97 ವರ್ಷ ವಯಸ್ಸಿನ ವೃದ್ಧರೊಬ್ಬರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ದಾಖಲಾಗುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಕನಸನ್ನು ಸಾಕಾರಗೊಳಿಸುವ ಕೊನೆಯ ಹಂತದಲ್ಲಿರುವ ಹಿರಿಯಜ್ಜ ರಾಜ್‌ಕುಮಾರ್ ವೈಶ್ಯ ಈಗ ಸ್ನಾತಕೋತ್ತರ ಪದವಿ ಓದುತ್ತಿರುವ ಅತಿ ಹಿರಿಯ ವ್ಯಕ್ತಿ ಎಂದು ಲಿಮ್ಕಾ ದಾಖಲೆಗೂ ಪಾತ್ರರಾಗಿದ್ದಾರೆ. ಇವರು 2015ರಲ್ಲಿ ನಲಂದಾ ಮುಕ್ತ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡಿದ್ದಾರೆ.
- ‘ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಬಹಳ ಹಿಂದಿನಿಂದಲೂ ಆಸೆಯಿತ್ತು. ಅಲ್ಲದೆ, ಬಡತನದಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಯಾಕೆ ವಿಫಲವಾಗಿದೆ ಎಂಬುದನ್ನು ತಿಳಿಯುವುದಕ್ಕಾಗಿ ಅರ್ಥಶಾಸ್ತ್ರ ಕಲಿಯಬೇಕು ಎಂದುಕೊಂಡಿದ್ದೆ. ಈ ಎರಡು ಕಾರಣಗಳಿಗಾಗಿ ಅಧ್ಯಯನ ಆರಂಭಿಸಿದ್ದೇನೆ’ ಎಂದು ವೈಶ್ಯ ತಿಳಿಸಿದ್ದಾರೆ.[೩]
ಮಹಿಳೆಯ ಮೂಗಿನಲ್ಲಿದ್ದ ಜೀವಂತ ಜಿರಲೆ
[ಬದಲಾಯಿಸಿ]- 3 Feb, 2017;
- ಚೆನ್ನೈಹತ್ತಿರದ ಇಂಜಾಮ್‌ಬಾಕಮ್ ಪ್ರದೇಶದ ನಿವಾಸಿ ಸೆಲ್ವಿ(42) ಎಂಬುವರ ಮೂಗಿನ ಗೂಡಿನಲ್ಲಿದ್ದ ಜಿರಲೆಯನ್ನು ವೈದ್ಯರು ಜೀವಂತವಾಗಿ ಹೊರತೆಗೆದಿದ್ದಾರೆ. ಅಚಾನಕ್ಕಾಗಿ ಜಿರಲೆ ಸೆಲ್ವಿಯವರ ಮೂಗಿನ ಹೊಳ್ಳೆ ಸೇರಿದೆ. ಅವರು ಉಸಿರನ್ನು ಒಳ ತೆಗೆದುಕೊಂಡಾಗ ಅದು ಮೂಗಿನ ಗೂಡನ್ನು (ಮಿದುಳಿನ ಹಿಂಭಾಗ ಅಥವಾ ತಲೆ) ಸೇರಿತ್ತು ಎಂದು ಸ್ಟಾನ್‌ಲೇ ಸರ್ಕಾರಿ ವೈದ್ಯರು ತಿಳಿಸಿದ್ದಾರೆ.
- ಜಿರಲೆ ದೊಡ್ಡ ಗಾತ್ರದಲ್ಲಿ ಇದುದ್ದರಿಂದ ಅದನ್ನು ಹೊರ ತೆಗೆಯುವುದು ಕಷ್ಟವಾಗಿತ್ತು. ವಿವಿಧ ಚಿಕಿತ್ಸೆಗಳನ್ನು ಪ್ರಯತ್ನಿಸಿದರೂ ಜಿರಲೆ ಹೊರತೆಗೆಯುವುದು ಕಷ್ಟವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ನಂತರ ನಾಸೆಲ್ ಎಂಡೋಸ್ಕೊಫಿ ಮಾಡುವ ಮೂಲಕ ಜೀವಂತವಾಗಿದ್ದ ಜಿರಲೆಯನ್ನು ಹೊರ ತೆಗೆಯಲಾಯಿತು. ಮಹಿಳೆ ಸೆಲ್ವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.[೪]
ಜಗಜ್ಜಾಣ
[ಬದಲಾಯಿಸಿ]- ಜಗಜ್ಜಾಣ
ಕೊರಿಯಾದ ಸಿವಿಲ್ ಎಂಜಿನಿಯರ್ ಕಿಮ್ ಉಂಗ್–ಯೊಂಗ್ ಎರಡು ವರ್ಷದ ಮಗು ಆಗಿದ್ದಾಗಲೇ ನಾಲ್ಕು ಭಾಷೆಗಳನ್ನು ಮಾತನಾಡಬಲ್ಲವನಾಗಿದ್ದ. ಮೂರನೇ ವಯಸ್ಸಿಗೆ ಬೀಜಗಣಿತ ತಿಳಿದಿತ್ತು. ಏಳನೇ ವಯಸ್ಸಿಗೆ ನಾಸಾ ಕೆಲಸಕ್ಕೆ ಆಹ್ವಾನಿಸಿತು. ಅವರ ಐಕ್ಯೂ 210. ವಿಶ್ವದಲ್ಲೇ ಇಷ್ಟು ಐಕ್ಯೂ ಇನ್ಯಾರಿಗೂ ಇಲ್ಲ. 15ನೇ ವಯಸ್ಸಿಗೆ ಕಿಮ್ ಪಿಎಚ್.ಡಿ. ಪದವಿ ಗಳಿಸಿದ್ದರು.ಮುಕ್ತಛಂದ;ಒಂಚೂರು;‘ಬಾಂಡ್’ಗೆ ದಂಡ!
- ನೀಳ ಕೂದಲು
ವಿಶ್ವದ ಅತಿ ನೀಳ ಕೂದಲಿನ ಮಹಿಳೆ ಎನ್ನುವ ದಾಖಲೆಯು ಚೀನಾದ ಕ್ಸೀ ಕ್ವಿಪಿಂಗ್ ಹೆಸರಿನಲ್ಲಿದೆ. 1973ರಿಂದ ಅವರ ನೀಳಕೂದಲು ಜನಪ್ರಿಯ. ಆಗ 13 ವರ್ಷದವಳಾಗಿದ್ದ ಕ್ಸೀ, 2004ರಲ್ಲಿ 5.62 ಮೀಟರ್ ಉದ್ದದ ಕೂದಲು ಬೆಳೆಸಿದ್ದರು. 18 ಅಡಿ 5.5 ಇಂಚು ಉದ್ದದ ಕೂದಲು ನಿಭಾಯಿಸುವುದು ಎಷ್ಟು ಕಷ್ಟ? ನಡೆದು ಸಾಗುವಾಗ ಕೂದಲನ್ನು ಹಿಡಿದುಕೊಳ್ಳಲೆಂದೇ ಅವರಿಗೆ ಒಬ್ಬ ಸಹಾಯಕನಿದ್ದಾನೆ. ಮುಕ್ತಛಂದ;ಒಂಚೂರು;‘ಬಾಂಡ್’ಗೆ ದಂಡ! [೫]
ಸಯಾಮಿ ಅವಳಿಗಳನ್ನು ಬೇರ್ಪಡಿಸಿದ್ದು
[ಬದಲಾಯಿಸಿ]- ಕ್ಯಾಲಿಫೋರ್ನಿಯಾದ ವೈದ್ಯರು ಸಯಾಮಿ ಅವಳಿಗಳನ್ನು ಬೇರ್ಪಡಿಸಿದ್ದಾರೆ. 2 ವರ್ಷದ ಹುಡುಗಿಯರು 17 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಸ್ಥಿರ ಸ್ಥಿತಿಯಲ್ಲಿ ಚೇತರಿಸಿಕೊಂಡರು. ಅವರು ತಮ್ಮ ದೇಹದಲ್ಲಿ ಇದ್ದ, ಒಂದು (ಒಂದೇ) ಮೂತ್ರಕೋಶ ಮತ್ತು ಒಂದು ಪಿತ್ತಜನಕಾಂಗ, ಮೂರು ಕಾಲುಗಳನ್ನು ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಸವಾಲೊಡ್ಡುವ ಸ್ಥಿತಿ ಏಕೆಂದರೆ, ಶಸ್ತ್ರಚಿಕಿತ್ಸಾ ತಂಡವು ಮೂತ್ರಕೋಶವನ್ನು ಎರಡು ಪ್ರತ್ಯೇಕ ಅಂಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಮಗುವಿಗೆ ಅರ್ಧ ನೀಡಲು ಮತ್ತು ಯಕೃತ್ತನ್ನು ವಿಭಜನೆಯಾಯಿತು, ಆಸ್ಪತ್ರೆ ಅಧಿಕಾರಿಗಳ ಹೇಳಿಕೆ. ಹುಡುಗಿಯರಲ್ಲಿ ಒಂದು ಮಗುವಿನ ಉದರದ ಮುಚ್ಚಲು ಅದರ ಮೂರನೇ ಕಾಲಿನ ಚರ್ಮ ಮತ್ತು ಸ್ನಾಯು ತೆಗೆದುಕೊಳ್ಳಲಾಗಿದೆ. , ಹುಡುಗಿಯರಲ್ಲಿ ಪುನರ್ನಿಮಾಣದ ನಂತರ ಪ್ರತಿ ಹುಡುಗಿಯೂ ಒಂದೇ ಕಾಲು ಹೊಂದಿವೆ. (ರಾಯಿಟರ್ಸ್)[೬]
- ನೋಡಿ:[[೧]]
ಕೋಮಲಾಂಗಿಯನ್ನು ಅಪ್ಪಿರುವ ಆಕ್ಟೋಪಸ್
[ಬದಲಾಯಿಸಿ]- ವಿಭಿನ್ನ ರೀತಿಯಲ್ಲಿ ಫೋಟೊ ತೆಗೆಸಿಕೊಳ್ಳುವ ಹವ್ಯಾಸ ಕೆಲವರನ್ನು ಹುಚ್ಚು ಸಾಹಸಕ್ಕೂ ಕೈ ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಸಾಹಸ ಮಾಡಿ ದಾಖಲೆ ಮಾಡಿದ್ದಾರೆ ಜಪಾನಿನ ಮಾಡೆಲ್ ನಮಾಡಾ. ಈಕೆಗೆ ಆಕ್ಟೋಪಸ್ ಎಂದರೆ ಅದೇನೋ ತುಂಬಾ ಪ್ರೀತಿಯಂತೆ. ಅದಕ್ಕಾಗಿಯೇ ಆಕ್ಟೋಪಸ್ ಹುಡುಕಿ ಹೊರಟಳಾಕೆ. ಅದು ಸಿಕ್ಕ ತಕ್ಷಣ ಅದರ ಜೊತೆ ಸೆಲ್ಫಿ ತೆಗೆಸಿಕೊಳ್ಳೋಣ ಎಂದು ಮೊದಲು ಅಂದುಕೊಂಡಳಂತೆ. ತಾನೂ ಹಾಗೆ ಮಾಡಿದರೆ ಸುದ್ದಿ ಆಗುವುದಿಲ್ಲ ಎಂಬುದು ಆಕೆಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಆಕೆ ಮಾಡಿದ ಯೋಚನೆ ಏನು ಗೊತ್ತೆ? ಆಕ್ಟೋಪಸ್ ಅನ್ನೇ ಮೈಮೇಲೆ ಸುತ್ತಿಕೊಂಡು ಫೋಟೊ ತೆಗೆಸಿಕೊಂಡರೆ ಹೇಗೆ ಎಂದುಕೊಂಡು ಹಾಗೇ ಮಾಡಿದಳು. ಈ ಚಿತ್ರವೇ ಅದಕ್ಕೆ ಸಾಕ್ಷಿ. ನೋಡಲು ಆಕ್ಟೋಪಸ್ ಹೋಲುವ ವಸ್ತ್ರವಿನ್ಯಾಸದಂತೆ ಈ ಚಿತ್ರ ಕಂಡರೂ ಇದರಲ್ಲಿ ಇರುವುದು ನಿಜವಾದ ಆಕ್ಟೋಪಸ್. ಬರೋಬರಿ 18 ಕೆ.ಜಿ. ತೂಕ ಇರುವ ದೈತ್ಯ ಪೆಸಿಫಿಕ್ ಆಕ್ಟೋಪಸ್ ಅನ್ನು ವಸ್ತ್ರದಂತೆ ಧರಿಸಿಕೊಂಡು ಈಕೆ ದಾಖಲೆ ಮಾಡಿದ್ದಾಳೆ.
- ‘ಕೊನೆಗೂ ನನ್ನ ಬಾಲ್ಯದ ಕನಸು ನನಸಾಗಿದೆ. ಆಕ್ಟೋಪಸ್ ತುಂಬಾ ಭಾರ ಇತ್ತು. ಆದ್ದರಿಂದ ಅದನ್ನು ನನ್ನ ಕೋಮಲ ಶರೀರಕ್ಕೆ ಸುತ್ತಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅದನ್ನು ಸುತ್ತಿಕೊಳ್ಳಲು ಆರಂಭದಲ್ಲಿ ಭಯವಾಗಿತ್ತು. ಸುತ್ತಿಕೊಂಡ ಮೇಲೆ ಭಾರ ಎನಿಸಿದರೂ ನನ್ನ ಕನಸು ನನಸಾಗುತ್ತದೆ ಎನ್ನುವ ಕಾರಣಕ್ಕೆ ಈ ಭಾರ ಲೆಕ್ಕಕ್ಕೆ ಬರಲಿಲ್ಲ’ ಎಂದು ಪತ್ರಕರ್ತರಿಗೆ ತಿಳಿಸಿದಳು. ಈ ಕೊಮಲಾಂಗಿಯ ಶರೀರವನ್ನು ಸುತ್ತಿಕೊಳ್ಳುವ ‘ಭಾಗ್ಯ’ ಸಿಕ್ಕ ಆಕ್ಟೋಪಸ್ ‘ಫೋಟೊಶೂಟ್’ ನಂತರ ಮಾಡೆಲ್, ಫೋಟೊಗ್ರಾಫರ್ ಸೇರಿದಂತೆ ಅಲ್ಲಿರುವವರಿಗೆ ಆಹಾರವಾಯಿತು!
ಅಪ್ಪಿಕೊಂಡ ಚಿತ್ರ/ಫೊಟೊಕ್ಕೆ ಕ್ಲಿಕ್ ಮಾಡಿ:[[೨]] |
ಪ್ರೀತಿಯ ಮುತ್ತು ತಂದ ಮೃತ್ಯು
[ಬದಲಾಯಿಸಿ]- 25 Nov, 2016
- ಮೆಕ್ಸಿಕೋದ 18 ವರ್ಷದ ಜುಲಿಯೊ ಮ್ಯಾಷಿಯನ್, 24 ವರ್ಷದ ಪ್ರೇಯಸಿಯಿಂದಾಗಿ ‘ಮುತ್ತಿನ ಸಾವು’ ತಂದುಕೊಂಡಿದ್ದಾನೆ. ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಕುಡಿದ ಅಮಲಿನಲ್ಲಿದ್ದ ಯುವತಿಯ ಪ್ರೇಮ ಪರಾಕಾಷ್ಠೆ ತಲುಪಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಿಯಕರನನ್ನು ಬಲವಾಗಿ ಅಪ್ಪಿಕೊಂಡು ಕುತ್ತಿಗೆಯ ಮೇಲೆ ಚುಂಬಿಸಿದಳು. ಚುಂಬನದ ಖುಷಿಯಲ್ಲಿಯೇ ಜುಲಿಯೊ ಮನೆಗೆ ಹೋಗಿದ್ದಾನೆ. ಸ್ವಲ್ಪ ಹೊತ್ತಿನಲ್ಲಿಯೇ ಆಕೆ ಚುಂಬಿಸಿದ ಜಾಗದ ರಕ್ತ ಹೆಪ್ಪುಗಟ್ಟಲು ಶುರುವಾಗಿದೆ. ಉಸಿರಾಟದ ತೊಂದರೆಯಾಗಿ ಸ್ಥಳದಲ್ಲಿಯೇ ಜುಲಿಯೊ ಸಾವನ್ನಪ್ಪಿದ. ಸುದ್ದಿ ತಿಳಿದ ತಕ್ಷಣ ಪ್ರೇಯಸಿ ಪರಾರಿಯಾಗಿದ್ದಾಳಂತೆ![೮]
ಮಹಿಳೆ ತೂಕ 500 ಕೆ.ಜಿ.
[ಬದಲಾಯಿಸಿ]- ಈಜಿಪ್ಟ್ ದೇಶದ 36 ವರ್ಷದ ಮಹಿಳೆ ಇಮಾನ್ ಅಹಮದ್ ಅಬ್ದುಲತಿ (ಎಮನ್ ಅಹ್ಮದ್) ಅವರ ದೇಹದ ತೂಕವು 500 ಕೆ.ಜಿ.ಗೆ ತಲುಪಿದ್ದು, ಜಗತ್ತಿನ ಅತಿಹೆಚ್ಚು ಸ್ಥೂಲಕಾಯದ ಮಹಿಳೆ ಎನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿರುವ ಇವರು ಸ್ಥೂಲಕಾಯದ ಸಮಸ್ಯೆಯಿಂದಾಗಿ ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೊರಬಂದಿಲ್ಲ. ಸಮಸ್ಯೆ ಬಗೆಹರಿಸಲು ಮಾಡಿದ ಯತ್ನಗಳು ವಿಫಲವಾದಾಗ, ಇವರ ಸಹೋದರಿ ಚಾಯ್‌ಮಾ ಅವರು ಸಹಾಯ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ. ತಾಯಿ ಹಾಗೂ ಸಹೋದರಿ ಜತೆ ಇವರು ವಾಸಿಸುತ್ತಿದ್ದಾರೆ. ಹನ್ನೊಂದನೆಯ ವಯಸ್ಸಿಗೆ ಪಾರ್ಶ್ವವಾಯುಗೆ ತುತ್ತಾದ ಇವರ ದೇಹದ ತೂಕ ಸತತವಾಗಿ ಏರುತ್ತಾ ಹೋಯಿತು. ಶೌಚಾಲಯಕ್ಕೆ ಹೋಗಲೂ ಇವರಿಗೆ ಇತರರ ಸಹಾಯ ಬೇಕು. ಇವರು ಹುಟ್ಟಿದಾಗಲೇ ಐದು ಕೆ.ಜಿ. ಇದ್ದರು. ಇಮಾನ್ ಅವರಿಗೆ ಆನೆಕಾಲುರೋಗ ಇದೆ ಎಂದು ವೈದ್ಯರು ತಿಳಿಸಿದ್ದರು. ಈ ರೋಗದಿಂದ ಕೈಕಾಲುಗಳಲ್ಲಿ ಭಾರಿ ಊತ ಕಾಣಿಸಿಕೊಳ್ಳುತ್ತದೆ.
- ಚಿತ್ರ:[[೩][೯]
- ಅವಳು ಚಿಕಿತ್ಸೆಗೆ ಭಾರತಕ್ಕೆ ಬರವವಳಿದ್ದಾಳೆ.ಸಹಾಯ ಹಸ್ತ ಚಾಚಿದ ಭಾರತ;ಪಿಟಿಐ;6 Dec, 2016(Eman Ahmed Abd El Aty, the world’s heaviest woman who flew to India from Egypt for her bariatric surgery)
- ಭಾರತದಲ್ಲಿ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಮನ್ ಅವರ ದೇಹದ ಭಾರ ಕಡಿಮೆ ಮಾಡುವ ಚಿಕಿತ್ಸೆಗೆ ರೂ.1 ಕೋಟಿ ವೆಚ್ಚವಾಗಲಿದೆ. ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಿರುವ ವೈದ್ಯರು ಅದರ ವೆಚ್ಚವನ್ನು ಎಮನ್ ಅವರಿಗೆ ಭರಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಾಲಿವುಡ್ ನಿರ್ಮಾಪಕ ರಾಕೇಶ್ ರೋಶನ್ ಅವರ ಪತ್ನಿ ಪಿಂಕಿ ರೋಶನ್ ಧನಸಹಾಯ ನೀಡಿದ್ದಾರೆ. ಎಮನ್ ಅವರ ಚಿಕಿತ್ಸೆಗೆ ಸಾರ್ವಜನಿಕರು ಮುಂದಾಗಿದ್ದಾರೆ. ಆಸ್ಪತ್ರೆ ಖಾತೆಗೆ ರೂ.35 ಲಕ್ಷ ಜಮೆಯಾಗಿದೆ ಎಂದು ಸೈಫಿ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.[೧೦]
ಶಸ್ತ್ರ ಚಿಕಿತ್ಸೆ
[ಬದಲಾಯಿಸಿ]- 22 Apr, 2017
- ‘ಎಮಾನ್ ಅವರಿಗೆ ಮುಂಬೈಯಲ್ಲಿ ಮಾಡಿದ್ದ ಶಸ್ತ್ರಚಿಕಿತ್ಸೆ ಹೆಚ್ಚು ಸವಾಲಿನದ್ದಾಗಿತ್ತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಶೇಕಡ 1ರಷ್ಟು ಮಾತ್ರ ಇತ್ತು. ಎಮಾನ್ ಅವರು ಪವಾಡದ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ. ‘ಭಾರಿ ತೂಕದ ಮಹಿಳೆ’ ಅರ್ಧ ತೂಕ ಕಳೆದುಕೊಂಡಿದ್ದಾಳೆ. [೧೧]
ತಿಥಿ ಊಟಕ್ಕೆ ಪ್ರತಿವರ್ಷ ಮನೆಗೆ ಬರುವ ಶವ
[ಬದಲಾಯಿಸಿ]- 8 Nov, 2016
- ಹಲವು ಜನಾಂಗಗಳಲ್ಲಿ ಯಾರಾದರೂ ಸತ್ತರೆ ಶವಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ನಂತರ ಶವಸಂಸ್ಕಾರಕ್ಕೆ ಒಯ್ಯುವುದು ರೂಢಿ. ಒಮ್ಮೆ ಶವಸಂಸ್ಕಾರ ಮಾಡಿಬಂದರೆ ಪ್ರತಿ ವರ್ಷ ಅವರ ತಿಥಿ ಮಾಡುತ್ತೇವೆ. ಆದರೆ ಇಂಡೋನೇಷಿಯಾದ ಟೊರಜ ಬುಡಕಟ್ಟು ಜನರೂ ಶವಕ್ಕೆ ಸ್ನಾನ ಮಾಡಿಸುತ್ತಾರೆ, ಬಟ್ಟೆ ತೊಡಿಸುತ್ತಾರೆ... ಅಷ್ಟೇ ಏಕೆ ಅದಕ್ಕೆ ಊಟವನ್ನೂ ಮಾಡಿಸುತ್ತಾರೆ. ಆದರೆ ಶವ ಸಂಸ್ಕಾರಕ್ಕೆ ಒಯ್ಯುವ ದಿನ ಮಾತ್ರವಲ್ಲ... ಪ್ರತಿ ವರ್ಷ...! ಹೌದು. ಇಂಥದ್ದೊಂದು ವಿಚಿತ್ರ ಆಚರಣೆ ಅಲ್ಲಿದೆ.
- ಟೊರಜ ಜನಾಂಗದಲ್ಲಿ ಯಾರೇ ಸತ್ತರೂ ಮೊದಲು ಶವವನ್ನು ಅವರ ಇಷ್ಟದ ಬಟ್ಟೆಯಲ್ಲಿ ಸುತ್ತುತ್ತಾರೆ. ಸತ್ತವರ ಎದುರು ಅಳುವುದು, ಕೂಗಾಡುವುದು ನಿಷಿದ್ಧ. ಕುಟುಂಬದ ಸದಸ್ಯರೆಲ್ಲಾ ನಗಬೇಕು. ನಂತರ ಶವವನ್ನು ಒಂದು ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಬೆಟ್ಟ–ಗುಡ್ಡ ಕೊರೆದು ಒಂದು ಕೋಣೆ ನಿರ್ಮಿಸಿ ಶವವನ್ನು ಇಡಲಾಗುತ್ತದೆ. ಶವದ ಪಕ್ಕ ವಾರಕ್ಕೊಮ್ಮೆ ಅವರು ಇಷ್ಟಪಡುತ್ತಿದ್ದ ತಿನಿಸು ಇಟ್ಟು ಬರಲಾಗುತ್ತದೆ. ಕುತೂಹಲಕರ ಅಂಶವೆಂದರೆ, ಪ್ರತಿ ವರ್ಷ ಆ ಶವವನ್ನು ಮನೆಗೆ ಕರೆದುಕೊಂಡು ಬರಲಾಗುತ್ತದೆ. ರಾಸಾಯನಿಕ ಸಿಂಪಡನೆ ಮಾಡಿರುವ ಕಾರಣ, ಎಷ್ಟು ವರ್ಷ ಕಳೆದರೂ ಶವ ಕೊಳೆಯುವುದಿಲ್ಲ. ಹೀಗೆ ಮನೆಗೆ ಕರೆತಂದ ಶವಕ್ಕೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಲಾಗುತ್ತದೆ. ಅದರ ಬಾಯಿಗೆ ಆಹಾರ ಇಡಲಾಗುತ್ತದೆ. ಪುನಃ ಅದನ್ನು ತೆಗೆದುಕೊಂಡು ಅದೇ ಕೋಣೆಯಲ್ಲಿ ಇರಿಸಿ ಬರಲಾಗುತ್ತದೆ!(ಚಿತ್ರ:[[೪]][೧೨]
ಸಾವಿನ ದೋಣಿ
[ಬದಲಾಯಿಸಿ]- ದೋಣಿಯೊಂದು ‘ಸಾವಿನ ದೋಣಿ’ ಎಂಬ ಅಪಕೀರ್ತಿಗೆ ಗುರಿಯಾಗಿದ್ದು, ‘ಈ ದೋಣಿ ಮುಟ್ಟಿದರೆ ಸಾವು ಖಚಿತ’ ಎಂಬ ಮಾತು ಅವರಲ್ಲಿ ಬಲವಾಗಿ ಬೇರೂರಿದ್ದು, ಅದರ ಹೆಸರೆತ್ತಿದರೆ ಮೀನುಗಾರರೆಲ್ಲ ಬೆಚ್ಚಿ ಬೀಳುತ್ತಾರೆ.
- ಈ ದೋಣಿ ಇರುವುದು ಇಲ್ಲಿನ ಕೋಡಿಬಾಗ ಕಡಲತೀರದ ಸಮೀಪದಲ್ಲಿ. ಕಡಲಿನ ಅಲೆಗಳ ಆರ್ಭಟಕ್ಕೆ ಸಿಲುಕಿ ತೀರದ ಬಳಿ ಅನಾಥವಾಗಿ ಬಿದ್ದಿದೆ. ಇದರ ತಳಭಾಗ ಸ್ವಲ್ಪ ಭಾಗ ಉಸುಕಿನಲ್ಲಿ ಹುದುಗಿ ಹೋಗಿದ್ದು, ಒಳಭಾಗದಲ್ಲಿ ನೀರು ತುಂಬಿಕೊಂಡಿದೆ. ದೋಣಿಗೆ ಕಟ್ಟಿದ ಎರಡು ಹಗ್ಗ ಪಕ್ಕದಲ್ಲೇ ಬಿದ್ದಿದ್ದು, ಬಿಸಿಲು–ಮಳೆಗೆ ಸಿಕ್ಕ ದೋಣಿ ಹಾಳಾಗುತ್ತಿದೆ. ಸ್ಥಳೀಯ ಮೀನುಗಾರರು ಇದನ್ನು ಬಳಸುವುದಿರಲಿ. ಅದನ್ನು ಸುರಕ್ಷಿತ ಸ್ಥಳಕ್ಕೆ ಎಳೆದು ತರುವ ಧೈರ್ಯ ಕೂಡ ಮಾಡುತ್ತಿಲ್ಲ.
- ತಳಕು ಹಾಕಿಕೊಂಡಿರುವ ಕಥೆ: ‘ಇದು ಹೊನ್ನಾವರದ ಮೀನುಗಾರರೊಬ್ಬರಿಗೆ ಸೇರಿದ ದೋಣಿ. ಅವರು ಮೀನು ಹಿಡಿಯಲು ಕಡಲಿಗೆ ತೆರಳಿದಾಗ ದುರ್ಮರಣಕ್ಕೀಡಾದರು. ಕೆಲ ದಿನಗಳ ನಂತರ ಅವರ ಮನೆಯವರು ದೋಣಿಯನ್ನು ಗೋವಾದ ಮೀನುಗಾರನೊಬ್ಬನಿಗೆ ಮಾರಾಟ ಮಾಡಿದರು. ಅಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ನಾಲ್ವರು ಮೀನುಗಾರರು ಕೊನೆಯುಸಿರೆಳೆದರು. ನಂತರ ಇದನ್ನು ಕಾರವಾರ ತಾಲ್ಲೂಕು ಸುಂಕೇರಿಯ ರತ್ನಾಕರ್ ಜಾಧವ್ ಎಂಬುವವರು ಖರೀದಿಸಿದರು. ಮೀನುಗಾರಿಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿ ದೋಣಿಯಲ್ಲಿದ್ದ ಮೀನುಗಾರ ಪ್ರಾಣ ಕಳೆದುಕೊಂಡ. ಇನ್ನು, ಇದನ್ನು ಮುಟ್ಟಿದ ಮೀನುಗಾರರೂ ಮೇಲಿಂದ ಮೇಲೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಇದರ ಹತ್ತಿರ ಸುಳಿಯಲು ಭಯಪಡುವಂತಾಗಿದೆ’ ಎಂದು ವಿವರಿಸುತ್ತಾರೆ ಸ್ಥಳೀಯ ಸುನಿಲ್.ಅದರಂತೆ ಅರಬ್ಬಿ ಸಮುದ್ರದಲ್ಲಿ ಅದನ್ನು ತೇಲಿ ಬಿಡಲಾಯಿತು. ಹೀಗೆ ನೀರಿನಲ್ಲಿ ಒಂಟಿಯಾಗಿ ನಿಂತಿದ್ದ ದೋಣಿಯನ್ನು ಮೀನುಗಾರನೊಬ್ಬ ದಡಕ್ಕೆ ತಂದು ಲಂಗರು ಹಾಕಿದ. ಆದರೆ ಕೆಲವೇ ಕ್ಷಣಗಳಲ್ಲಿ ಆತನ ದೇಹದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಕುಸಿದುಬಿದ್ದ.
- ಸ್ಥಳೀಯರು ಆತನನ್ನು ಗೋವಾ ಆಸ್ಪತ್ರೆಗೆ ಸೇರಿಸಿದ್ದು, ಆತ ಇನ್ನೂ ಚೇತರಿಸಿಕೊಂಡಿಲ್ಲ. ಈ ದೋಣಿ ಇರುವ ದಡದಲ್ಲಿ ಇತರೆ ಮೀನುಗಾರರು ತಮ್ಮ ದೋಣಿಯನ್ನು ನಿಲ್ಲಿಸಲೂ ಹಿಂಜರಿಯುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಮೀನುಗಾರ ಪ್ರಕಾಶ ಅಂಬಿಗ.(ಕಾರವಾರ):[[೫]][೧೩]
ಎರಡು ಬಾರಿ ಜನಿಸಿದ ಮಗು
[ಬದಲಾಯಿಸಿ]- 26 Oct, 2016;ಹ್ಯೂಸ್ಟನ್‌ನ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವೊಂದು ಎರಡು ಬಾರಿ ಜನಿಸಿರುವ ಅಪರೂಪದ ಘಟನೆ ನಡೆದಿದೆ. ತಾಯಿ 23 ವಾರಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಮಗುವನ್ನು ಹೊರತೆಗೆದಿದ್ದ ವೈದ್ಯರು, ಮಗುವಿಗೆ 20 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಮತ್ತೆ ತಾಯಿಯ ಗರ್ಭದೊಳಗಿಟ್ಟಿದ್ದರು. ಈಗ ಒಂಬತ್ತು ತಿಂಗಳು ಪೂರ್ಣಗೊಂಡ ಬಳಿಕ ತಾಯಿ ಸಹಜವಾಗಿ ಪುನಃ ಮಗುವನ್ನು ಹೆತ್ತಿದ್ದಾರೆ. ಅಮೆರಿಕದ ಮಾರ್ಗರೆಟ್ ಬೊಮರ್ ಅವರು 16 ವಾರದ ಗರ್ಭಿಣಿಯಾಗಿದ್ದಾಗ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಗುವಿನ ಬೆನ್ನುಮೂಳೆಯ ತುದಿಯಲ್ಲಿ ಗೆಡ್ಡೆ (ಸ್ಯಾಕ್ರೊಕಾಸಿಗೆಲ್ ಟ್ಯೂಮರ್) ಬೆಳೆಯುತ್ತಿರುವುದನ್ನು ಪತ್ತೆಮಾಡಿದ್ದರು. ‘ಇಂಥ ಗೆಡ್ಡೆಗಳು ಕ್ರಮೇಣ ಮಗುವಿನಲ್ಲಿ ಹರಿಯುವ ರಕ್ತವನ್ನು ಹೀರಿಕೊಂಡು ಮಗುವಿನಂತೆಯೇ ಬೆಳವಣಿಗೆ ಹೊಂದುತ್ತವೆ. ಒಂದು ಹಂತದಲ್ಲಿ ಗೆಡ್ಡೆ ಮತ್ತು ಮಗುವಿನ ನಡುವೆ ಪೈಪೋಟಿ ಉಂಟಾಗಿ, ಎರಡೂ ಕಡೆ ರಕ್ತ ಪೂರೈಸಲಾಗದೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ವೈದ್ಯರು ತಿಳಿಸಿದರು. ಈ ಪ್ರಕರಣದಲ್ಲಿ ಗೆಡ್ಡೆ ಭ್ರೂಣಕ್ಕಿಂತ ದೊಡ್ಡದಾದ ನಂತರ ತುರ್ತು ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರಾದ ಕಾಸ್ ಮತ್ತು ಒಲುಯಿಂಕಾ ಒಲುಟೊಯಿ ಸತತ ಐದು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿಗೆ ಮರು ಜನ್ಮ ನೀಡಿದ್ದಾರೆ. "
- ಒಟ್ಟಾರೆ 5 ಗಂಟೆಯ ಶಸ್ತ್ರಚಿಕಿತ್ಸೆಯಲ್ಲಿ 20ನಿಮಿಷಗಳ ಚಿಕಿತ್ಸೆಯನ್ನು ಮಗುವಿಗೆ ನೀಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ವೈದ್ಯರು ಮಗುವನ್ನು ಪುನಃ ಗರ್ಭಕೋಶದೊಳಗೆ ಸೇರಿಸಿದರು. ಇದಾಗಿ 12 ವಾರಗಳ ನಂತರ ಮಹಿಳೆ ಮಗುವಿಗೆ ಮರುಜನ್ಮ ನೀಡಿದ್ದಾರೆ.[೧೪]
ಕಪ್ಪೆಯನ್ನು ನುಂಗುತ್ತಿರುವ ಹಾವು
[ಬದಲಾಯಿಸಿ]ದೊಡ್ಡ ಕಪ್ಪೆಯನ್ನು ನುಂಗುತ್ತಿರುವ ಹಾವಿನ ಚಿತ್ರ:[[೬]]
ಸಪ್ತ ಭಾಷಾ ಚತುರೆ 4 ವರ್ಷದ ಪುಟಾಣಿ
[ಬದಲಾಯಿಸಿ]ಅಮೇಜಿಂಗ್ ಪೀಪಲ್;
- ನಾಲ್ಕು ವರ್ಷದ ಪುಟಾಣಿ ಏಳು ಭಾಷೆಗಳಲ್ಲಿ ಮಾತನಾಡಬಲ್ಲಳು, ಓದಬಲ್ಲಳು, ಹಾಡಬಲ್ಲಳು! ಪುಟ್ಟಪುಟ್ಟ ಹೆಜ್ಜೆ, ಕ್ಷಣದಲ್ಲೇ ಕುಣಿತ, ಕೇಳುವ ಪ್ರಶ್ನೆಗಳಿಗೆ ಫಟಾಫಟ್ ಉತ್ತರ. ನಾಲ್ಕು ವರ್ಷದ ಏಂಜಲಿನಾ ಬೆಲ್ಲಾ 7 ಭಾಷೆಗಳನ್ನು ಅರ್ಥೈಸಿಕೊಂಡು ಪ್ರತಿಕ್ರಿಯಿಸುತ್ತಾಳೆ. ರಷ್ಯಾದ ಮಾಸ್ಕೋ ಮೂಲದ ಬೆಲ್ಲಾಗೆ ರಷ್ಯನ್, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಚೈನೀಸ್ ಹಾಗೂ ಅರಾಬಿಕ್ ಭಾಷೆಗಳಲ್ಲಿ ಮಾತನಾಡುವುದೆಂದರೆ ಆಟ ಆಡಿದಷ್ಟೇ ಸಲೀಸು. ‘ಅಮೇಜಿಂಗ್ ಪೀಪಲ್’ ಪ್ರತಿಭಾ ಕಾರ್ಯಕ್ರಮದ ಆಡಿಷನ್‌ನ ಚಿತ್ರೀಕರಣದ ತುಣುಕು ಈಗ ವೈರಲ್ ಆಗಿದೆ.[[೭]]
ಆರು ಸಾವಿರ ವಯಸ್ಸಿನ ಮರದೊಳಗೆ ಹೊಟೆಲು
[ಬದಲಾಯಿಸಿ]- ದಕ್ಷಿಣ ಆಫ್ರಿಕಾದಲ್ಲಿ ಈ 6000 ವರ್ಷದ ಬಯೋಬಾಬ್ ಎಂಬ ಮರವಿದೆ! ನಮಗೆ ಪ್ರಕೃತಿಯು ಸೌಂದರ್ಯವನ್ನ ಆಶೀರ್ವದಿಸಿ ತೋರುತ್ತದೆ. ನಾವು ಸೃಷ್ಟಿಯ ಚಮತ್ಕಾರ ನೋಡಿದರೆ ಇದು ನಮಗೆ ಅಚ್ಚರಿಗೊಳಿಸುತ್ತದೆ. ಆದರೆ ಈ ನಿಜವಾಗಿಯೂ ಅದ್ಭುತ ಆಗಿದೆ, ಈ ದಕ್ಷಿಣ ಆಫ್ರಿಕಾದಲ್ಲಿ ನಂಬಲಾಗದ 6000 ವರ್ಷದ ಬಯೋಬಾಬ್ ಮರವಾಗಿದೆ. ಇದಕ್ಕೆ ನಿಜವಾಗಿಯೂ 6000 ವರ್ಷ ವಯಸ್ಸು. ಇದರೊಳಗೊಂದು ಬಾರ್ ಇದೆ. ಆ ಮರದ ಸುತ್ತಳತೆ ೪೭ ಮೀಟರ್, ಎತ್ತರ ೧೯ ಮೀಟರು. ನೋಡಿ: [[೮]]
೧೧ ವರ್ಷದ ಹುಡುಗನ ಸಾಹಸ
[ಬದಲಾಯಿಸಿ]- 7 Oct, 2016
- ‘ಅಜ್ಜನ ಮನೆಗೆ ತೆರಳುತ್ತಿದ್ದೆ. ಹಿಂದಿನಿಂದ ದಾಳಿ ಮಾಡಿದ ಹೆಬ್ಬಾವು ನೆಲಕ್ಕೆ ಬಿದ್ದ ನನ್ನನ್ನು ಸುತ್ತಿಕೊಳ್ಳಲು ಆರಂಭಿಸಿತು. ಅದರಿಂದ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ. ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಹೆಬ್ಬಾವಿನ ಕಣ್ಣಿಗೆ ಹೊಡೆದರೆ, ಕಣ್ಣು ಕಾಣದಂತಾಗಿ ನನ್ನನ್ನು ಬಿಡಬಹುದು ಎಂದು ಕಲ್ಲಿನಿಂದ ಅದರ ಕಣ್ಣಿಗೆ ಹೊಡೆದೆ. ಅದರ ಕಣ್ಣು ಸಂಪೂರ್ಣ ಹಾಳಾಯಿತು. ಕಣ್ಣು ಕಾಣದ ಹಾವು ನನ್ನನ್ನು ಬಿಟ್ಟು ಹೋಯಿತು’.
- ಹೆಬ್ಬಾವಿನೊಂದಿಗೆ ಸೆಣಸಾಡಿ, ಇದೀಗ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಕೊಳಕೆ ಕೂಡೂರಿನ 11 ವರ್ಷ ಬಾಲಕ ವೈಶಾಖ್, ತನ್ನನ್ನು ರಕ್ಷಿಸಿಕೊಂಡ ಬಗೆಯನ್ನು ವಿವರಿಸಿದ.
- ‘ಸುತ್ತಿಕೊಳ್ಳಲು ಆರಂಭಿಸಿದ ಹೆಬ್ಬಾವಿನಿಂದ ಬಿಡಿಸಿಕೊಳ್ಳಲು ಅದರ ತಲೆಗೆ ಗುದ್ದಿದೆ. ಆಗ ನನ್ನ ಕೈ ಅದರ ಬಾಯೊಳಗೆ ಹೋಯಿತು. ಇದರಿಂದ ಕೈ ಬೆರಳುಗಳಿಗೂ ಗಾಯವಾಗಿದೆ’ ಎಂದು ಹೇಳಿದ. ‘ಅಷ್ಟರಲ್ಲೇ ಕಾಲೇಜಿನಿಂದ ನನ್ನ ದೊಡ್ಡಪ್ಪನ ಮಗಳು ಹರ್ಷಿತಾ ಬರುತ್ತಿದ್ದಳು. ಸುತ್ತಿಕೊಂಡಿದ್ದ ಹಾವನ್ನು ಬಿಡಿಸಲು ಮುಂದಾದಳು. ಹತ್ತಿರಕ್ಕೆ ಬರದಂತೆ ಹೇಳಿದೆ’ ಎಂದು ತಿಳಿಸಿದ.
- ‘ನನ್ನ ಮನೆಯ ಹಿಂಭಾಗದಲ್ಲಿ ಎರಡು ಹೆಬ್ಬಾವುಗಳನ್ನು ನೋಡಿದ್ದೆ. ಹಾಗಾಗಿ ಹೆಬ್ಬಾವು ಸುತ್ತಿಕೊಂಡಾಗ ಹೆದರಿಕೆ ಆಗಲಿಲ್ಲ. ನಾನು ಓದುತ್ತಿರುವ ಸಜೀಪ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಣಾ ಕ್ರಮಗಳನ್ನು ಹೇಳಿಕೊಡಲಾಗುತ್ತಿತ್ತು. ಇದು ನನಗೆ ಅನುಕೂಲವಾಯಿತು. ಹೆಬ್ಬಾವಿನ ಕಣ್ಣು ಕಾಣದಂತೆ ಮಾಡಿದರೆ, ಅದಕ್ಕೆ ಏನೂ ಮಾಡಲು ಆಗುವುದಿಲ್ಲ ಎಂಬುದು ತಿಳಿದಿತ್ತು. ಇದೆಲ್ಲವನ್ನು ಬಳಸಿಕೊಂಡು ಹಾವಿನ ಒಂದು ಕಣ್ಣನ್ನು ಸಂಪೂರ್ಣವಾಗಿ ಜಜ್ಜಿದೆ’ ಎಂದು ಹೆಬ್ಬಾವಿನಿಂದ ಬಿಡಿಸಿಕೊಂಡ ಬಗೆಯನ್ನು ವಿವರಿಸಿದ.[೧೬]
550 ಕಿ.ಮೀ ಈಜಲಿದ್ದಾಳೆ 11ರ ಬಾಲೆ
[ಬದಲಾಯಿಸಿ]- ಎರಡನೇ ವಯಸ್ಸಿನಲ್ಲೇ ಈಜು ಕಲಿತಿದ್ದ ಪೋರಿ:30 Aug, 2016:
- ವಾರಾಣಸಿಯಿಂದ ಕಾನ್ಪುರದವರೆಗಿನ 550 ಕಿ.ಮೀ. ದೂರವನ್ನು ಉಕ್ಕಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಈಜಿ 10 ದಿನಗಳಲ್ಲಿ ಕ್ರಮಿಸುವ ಗುರಿಯೊಂದಿಗೆ 11 ವರ್ಷದ ಬಾಲೆ ಶ್ರದ್ಧಾ ಶುಕ್ಲಾ, 28-8-2016 ಭಾನುವಾರ ನದಿಗೆ ಧುಮುಕಿದ್ದಾಳೆ ! ಗಂಗಾ ನದಿಯಲ್ಲಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಿದೆ.
- ಭಾನುವಾರದಿಂದ ಆರಂಭಿಸಿ ಹತ್ತನೆಯ ದಿನ ವಾರಾಣಸಿಯ ಗೌಘಾಟ್ ತಲುಪಿ, ಈಜು ಪೂರ್ಣಗೊಳಿಸಲು ಈಕೆ ನಿರ್ಧರಿಸಿದ್ದಾಳೆ. ಈಜಿನ ನಡುವೆ ಈಕೆ ಪ್ರತಿ ನಾಲ್ಕು ಅಥವಾ ಐದು ತಾಸಿಗೊಮ್ಮೆ ವಿಶ್ರಾಂತಿ ಪಡೆಯಲಿದ್ದಾಳೆ. ಈ ಪೋರಿ ಈಜಲು ಆರಂಭಿಸಿದ್ದು ಎರಡು ವರ್ಷದ ಎಳೆ ವಯಸ್ಸಿನಲ್ಲಿ. ಅಜ್ಜ ಮುನ್ನು ಶುಕ್ಲಾ ಮೊಮ್ಮಗಳನ್ನು ಗಂಗಾ ನದಿಗೆ ಕರೆದೊಯ್ದ ದಿನದಿಂದ.
- ಶ್ರದ್ಧಾ ಆರು ವರ್ಷ ವಯಸ್ಸಿನಲ್ಲಿದ್ದಾಗ ಆರು ಕಿ.ಮೀ. ದೂರ ಈಜಿದ್ದಳು. ಮಾರನೆಯ ವರ್ಷ ಒಂದೇ ಏಟಿಗೆ ಏಳು ಕಿ.ಮೀ. ಈಜಿದಳು. 2012ರಲ್ಲಿ ಆಕೆ ಇನ್ನೂ ಹೆಚ್ಚು ದೂರ ಈಜಿದಳು. 2013ರಲ್ಲಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡ ಶ್ರದ್ಧಾ, ಒಟ್ಟು 16 ಕಿ.ಮೀ. ಈಜಿ ತೋರಿಸಿದಳು. 2014ರಲ್ಲಿ ಗಂಗಾ ನದಿಯಲ್ಲಿ ಕಾನ್ಪುರದಿಂದ ಅಲಹಾಬಾದ್‌ವರೆಗೆ (282.5 ಕಿ.ಮೀ) ಈಜಿ ದಾಖಲೆ ಬರೆದಳು. ಶ್ರದ್ಧಾ ಬಡ ಕುಟುಂಬಕ್ಕೆ ಸೇರಿದವಳು.[೧೭]
ಅನ್ಯ ಲೋಕದ ಮಾನವರು
[ಬದಲಾಯಿಸಿ]ಚತ್ತೀಸಗಡದ ಚರಮ ಪ್ರದೇಶದಲ್ಲಿ ಕಂಕೇರ್`ಜಿಲ್ಲೆಯ ಗುಡ್ಡಗಾಡು ಪ್ರದೇಶದ ಗುಹೆಯಲ್ಲಿ ಸುಮಾರು 10,000 ವರ್ಷಗಳ ಹಿಂದಿನ ಕಲ್ಲಿನ ಮೇಲೆ ಬರೆದ ತೈಲಚಿತ್ರಗಳು ಕಂಡು ಬಂದಿವೆ. ಅವುಗಳಲ್ಲಿ ಈಗ ಊಹಿಸಿರುವ ಅನ್ಯ ಲೋಕದ(ಗ್ರಹ)ಜೀವಿಗಳು- ಮಾನವರ ಚಿತ್ರಗಳಂತೆ ಇವೆ. ಭಾರತದ ಪ್ರಾಚೀನ -ಪುರಾತತ್ವ ಸಂಶೋಧಕರು ಇದನ್ನು ನೋಡಿ ಈ ಬಗ್ಗೆ ಅಮೇರಿಕಾದ ನಾಸಾ ವಿಜ್ಞಾನಿಗಳ ಸಲಹೆ ಸಹಾಯ ಕೇಳಿದ್ದಾರೆ.(ಕೆಳಗೆ ಚಿತ್ರ ಮತ್ತು -ವಿವರ ಇದೆ)
ಬಾಲಕನ ಬಾಯಿಂದ ೨೩೨/232ಹಲ್ಲಿನ ಮೊಳಕೆಗಳ ತೆಗೆಯುವಿಕೆ
[ಬದಲಾಯಿಸಿ]JJ doctors remove 232 teeth from Buldhana teenager in Mumbai
TNN; Jul 23, 2014, 04.08 AM IST ;Ashik Gavai (17), a class X student from Buldhana, had a swelling on the right side of the mouth when he came to JJ Hospital in June. the surgery that lasted over seven hours on Monday. "We started picking small teeth from the abnormal molar. These pearlies were of varying sizes, some as tiny as a grain of mustard and some almost the size of a marble. At the final count, we had a total of 232 of them," said Dr Sunanda Dhivare-Palwankar, head of dental department at JJ Hospital.)", (The ToI
- ಮುಂಬಯಿಯಲ್ಲಿ ದವಡೆ ಊದಿಕೊಂಡು ನರಳುತ್ತಿದ್ದ ಬುಲ್ದಾನಿನ 17 ವರ್ಷದ ಬಾಲಕ ಅಶಿಕ್ ಗವಾಯಿಯ ದವಡೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದಾಗ, ಮೋಲಾರ್ (ಕೋರೆ)ಹಲ್ಲಿನ ಬುಡದಲ್ಲಿ ಸುಮಾರು 232 ಹಲ್ಲಿನ ಚಿಕ್ಕ ಚಿಕ್ಕ ಮೊಳಿಕೆಗಳು ಕಂಡು ಬಂದವು. ಅವನ್ನು ತೆಗೆಯಲು ಏಳು ಗಂಟೆಗಳ ಶಸ್ತ್ರ ಚಿಕಿತ್ಸೆ ಮಾಡಲಾಯಿತೆಂದು ಡಾಕ್ಟರ್ ತಿಳಿಸಿದ್ದಾರೆ. ಅವು ಸಾಸಿವೆ ಕಾಳಿನ ಗಾತ್ರದಿಂದ ಚಿಕ್ಕ ಕಲ್ಲುಹರಳಿನ ಗಾತ್ರದವರೆಗೆ ಇದ್ದವು ಎಂದು ಮುಂಬಯಿ ಜೆ.ಜೆ ಆಸ್ಪತ್ರೆಯ ಡಾಕ್ಟರ್ ಸುನಂದ ದಿವಾರೆ ಪಲ್ವಂಕರ್ ಹೇಳಿದ್ದಾರೆ. ಇದೊಂದು ಅಪರೂಪದ(ವಿರಳ) ಘಟನೆ ಎಂದಿದ್ದಾರೆ.
- ಆಧಾರ:-The Times of India[[೯]]
40 ಬಗೆಯ ಹಣ್ಣು ಬಿಡುವ ಕಲ್ಪವೃಕ್ಷ
[ಬದಲಾಯಿಸಿ]( Jul 26, 2014,: ವಿಜಯ ಕರ್ನಾಟಕ :
- ನ್ಯೂಯಾರ್ಕ್‌ನಲ್ಲೊಂದು 40 ಬಗೆಯ ಹಣ್ಣು ಬಿಡುವ ಕಲ್ಪವೃಕ್ಷ-ಗಿಜ್‌ಮೊಡೊ.
- ಒಂದೇ ಬುಡ, ಒಂದೇ ಕಾಂಡ, ರೆಂಬೆ, ಕೊಂಬೆ, ಎಲೆ ಎಲ್ಲವೂ ಒಂದೇ. ಆದರೆ ಬಿಡುವ ಹಣ್ಣುಗಳು ಮಾತ್ರ 40 ಬಗೆ. ಇಂಥ ಒಂದು ಕಲ್ಪವೃಕ್ಷ ಅಮೆರಿಕದ ನ್ಯೂಯಾರ್ಕ್‌ನಲ್ಲಿದೆ.
- ಗಟ್ಟಿ ತೊಗಟೆ ಜಾತಿಯ 40ಕ್ಕೂ ಹೆಚ್ಚು ವಿವಿಧ ಹಣ್ಣುಗಳನ್ನು ಈ ಮರ ನೀಡುತ್ತದೆ. ಇಂಥ ಮ್ಯಾಜಿಕ್ ಸಸಿ ನ್ಯೂಯಾರ್ಕ್‌ನ ಹಳೇ ತೋಟವೊಂದರಲ್ಲಿ 'ಅನಾಥ'ವಾಗಿತ್ತು. ಇದನ್ನು 2008ರಲ್ಲಿ ಕಲಾವಿದ ಸ್ಯಾಮ್ ವ್ಯಾನ್ ಅಕಿನ್ ತೆಗೆದುಕೊಂಡು ಬಂದರು. ಈ ಅಪರೂಪದ ಸಂತತಿ ಯನ್ನು ಉಳಿಸುವುದರ ಜತೆಗೆ ಅದನ್ನು ಪ್ರಯೋಗಕ್ಕೂ ಸಾಧನ ಮಾಡಿಕೊಂಡರು. ಕಸಿ ಕಟ್ಟಲು ತೊಡಗಿದರು. 40 ಬಗೆಯ ಹಣ್ಣಿನ ಗಿಡಗಳನ್ನು ಒಂದೇ ಗಿಡದಲ್ಲಿ ಕಸಿ ಮಾಡಿದರು. ಅದೀಗ 40 ಬಗೆಯ ಹಣ್ಣುಗಳನ್ನು ಕೊಡುತ್ತದೆ. ಇದರಲ್ಲಿ ಪೀಚ್, ಚೆರ‌್ರಿ, ಬಾದಾಮಿ, ಪ್ಲಮ್ ಹಣ್ಣು ( ನಯವಾದ ಸಿಪ್ಪೆಯ ಗಟ್ಟಿಬೀಜದ ಸಿಹಿಯಾದ ಹಳದಿ ಇಲ್ಲವೇ ಕೆಂಪು ಹಣ್ಣುಗಳೂ ಸೇರಿವೆ.
- 40 ಫಲಗಳನ್ನು ನೀಡುವ ಈ ಮರ ಒಂದೊಂದು ಋತುವಿನಲ್ಲೂ ಬಣ್ಣ ಬದಲಿಸುತ್ತದೆ. ವಸಂತ ಕಾಲದಲ್ಲಿ ನಸು ಕೆಂಪು, ಕಡು ಕೆಂಪು, ಬಿಳಿ ಬಣ್ಣ ಬಳಿದುಕೊಂಡರೆ, ಬೇಸಿಗೆಯಲ್ಲಿ ಗೊಂಚಲು ಗೊಂಚಲು ಹಣ್ಣು ಬಿಡುತ್ತದೆ. ಇದು ಪ್ರಾಚೀನ ಮತ್ತು ನವೀನತೆಯ ಸಂಗಮ. ಹಳೆಯ ಹಣ್ಣಿನ ಜತೆ ಸ್ಥಳೀಯ ಹಣ್ಣು ಜಾತಿಗಳನ್ನು ಕಸಿ ಮಾಡಲಾಗಿದೆ. ಕಸೀಕರಣ ತಂತ್ರಜ್ಞಾನದ ಅತ್ಯುತ್ತಮ ಫಲವಿದು ಎಂದು ಬಣ್ಣಿಸುತ್ತಾರೆ ಇದರ ಮಾಲೀಕ ಅಕಿನ್.
When Sam Van Aken found out that a New York state orchard—with varieties of stone fruit 200 years old—was about to be abandoned in 2008, he bought it to save those species and to experiment: Grafting from the existing trees he created the magical Tree of 40 Fruit, which produces over 40 types of fruit.ಚಂ |
ರೂ.10,59,೦೦೦,ಬೈಸಿಕಲ್
[ಬದಲಾಯಿಸಿ]- ಫಿಟ್‌ನೆಸ್ ಮತ್ತು ಸೈಕ್ಲಿಂಗ್ ಪ್ರಿಯರಿಗಾಗಿಯೇ ಜೈಂಟ್ ಸ್ಟಾರ್ಕೆನ್ ಸೈಕ್ಲಿಂಗ್ ವರ್ಲ್ಡ್ ಒಂದು ವಿಶೇಷ ಸೈಕಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಸೈಕಲ್‌ನ ಬೆಲೆ ಬರೋಬ್ಬರಿ ರೂ.10.59 ಲಕ್ಷ. ಪ್ರೊಪೆಲ್ ಅಡ್ವಾನ್ಸ್ಡ್ ಎಸ್‌ಎಲ್ಒ ಎಂದು ಈ ಸೈಕಲ್ ಹೆಸರು. ಇದು ಬೆಂಗಳೂರಿನಲ್ಲಿ ದೊರಕುವ ಅತ್ಯಂತ ದುಬಾರಿ ಬೆಲೆಯ ಸೈಕಲ್. ವಿಶ್ವದ ಅತ್ಯಂತ ವೇಗದ ಬೈಸಿಕಲ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
([[೧೨]]ಪ್ರಜಾವಾಣಿ-೨೬-೭-೨೦೧೪)
ದೆವ್ವದ-ಮಾನವ ಮುಖ-ಟೂಮರ್`ಗಡ್ಡೆಯಲ್ಲಿ
[ಬದಲಾಯಿಸಿ]November ನವಂಬರ್ 02, 2011-ಕೆನಡಾದ ಸಂಶೋಧನಾ ವಿಜ್ಞಾನಿ ತಂಡದವರು ಒಬ್ಬ ರೋಗಿಯ ವೃಷಣವನ್ನು ಆಲ್ಟ್ರಾ ಸೌಂಡ ಚಿಕಿತ್ಸೆಗೆ ಒಳಪಡಿಸಿದಾಗ ಅದಲ್ಲಿದ್ದ ಟ್ಯೂಮರ್ ಅಥವಾ ಗಡ್ಡೆಯಲ್ಲಿ ತಮ್ಮನ್ನೇ ದಿಟ್ಟಿಸುತ್ತಿರುವ ದೆವ್ವದ-ಮಾನವ ಮುಖವನ್ನು ಕಂಡು ದಿಗ್ಭ್ರಮೆಗೊಂಡರು. 45 ವರ್ಷದ ರೋಗಿಯು ತನ್ನ ವೃಷಣದಲ್ಲಿ ನೋವು ಇರುವುದೆಂದು ಹೇಳಿದಾಗ ಆಲ್ಟ್ರಾ ಸೌಂಡ್ ಮಾಡಿ ನೋಡಲಾಯಿತು. ಓರಿಯಂಟೋದ ಕ್ವೀನ್ಸ್ ಯೂನಿವರ್ಸಿಟಿಯ ಡಾ.ಗ್ರೆಗ್ ರಾಬರ್ಟ್ಸ್ ಮತ್ತು ಡಾ. ನಾಜಿ ಟವುಮಾ ಅವರು ಯೂರಾಲಜಿ ಜರ್ನಲ್ ನಲ್ಲಿ ಇದನ್ನು ಪ್ರಕಟಿಸಿದರು. ಅದು ಈಜಿಪ್ಟಿನ ದೇವತೆಯ ಹೊಲಿಕೆ ಇದ್ದರೂ ಅದು ಒಂದು ಆಕಸ್ಮಿಕ ಹೋಲಿಕೆ ಹಾಗೂ ಘಟನೆ ಎಂದಿದ್ದಾರೆ.
ಆಧಾರ:ಡೈಲಿ ಮೈಲ್: [[೧೩]]
ಚಿನ್ನದ ಬಾಲೆ
[ಬದಲಾಯಿಸಿ]- ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವುದು ಅಷ್ಟು ಸುಲಭವಲ್ಲ.. ಸ್ಕಾಟ್ಲೆಂಡ್`ನ ಗ್ಲ್ಯಾಸ್ಕೋ ನಗರದಲ್ಲಿ 2014ರ ಕಾಮನ್` ವೆಲ್ತ್ ಕ್ರೀಡಾಕೂಟದಲ್ಲಿ ದಿ.26-7-2014 ರಂದು ಜಿಮ್ನಾಸ್ಟಿಕ್ ನಲ್ಲಿ ಚಿನ್ನ ಗೆದ್ದ ಬಾಲೆಯ ಅದ್ಭುತ ಕಸರತ್ತು ಎಲ್ಲರ ಮೆಚ್ಚುಗೆ ಪಡೆಯಿತು. ಸ್ಕಾಟ್ಲೆಂಡ್ ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ ಜಿಮ್ನಾಸ್ಟಿಕ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಕೆನಡಾದ ಸ್ಪರ್ಧಾಳು.
- ಪ್ರಜಾವಾಣಿ -[[೧೪]][[೧೫]]
ಅನ್ಯ ಲೋಕದ ಮಾನವರು
[ಬದಲಾಯಿಸಿ]ಅನ್ಯ ಲೋಕದ ಮಾನವರು ??
- (ಚಿತ್ರದ ಮೇಲೆ ಕ್ಲಿಕ್` ಮಾಡಿದರೆ ದೊಡ್ಡ ಚಿತ್ರ ಬರುವುದು.)
- ಚತ್ತಿಸಗಡದ ಕಾಂಕೇರ ಜಿಲ್ಲೆಯ ಚರಮ ಪ್ರದೇಶದ ಗುಡ್ಡಗಾಡು ಜನರ ವಸತಿ ಪ್ರದೇಶದ ಗುಹೆಯಲ್ಲಿ ಕಂಡುಬಂದ 10,000 ವರ್ಷದ ಹಿಂದಿನ ಪ್ರಾಚೀನ ಶಿಲಾ ತೈಲಚಿತ್ರಗಳನ್ನು ನೋಡಿ ,, ಅನ್ಯ ಲೋಕದ ಜನರ ಆಗಮನವಾಗಿತ್ತೇ ಎಂದು ಚತ್ತೀಸಗಡದ ವಾಸ್ತು ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಚಕಿತಗೋಡಿದ್ದಾರೆ. (rock paintings depicting aliens and UFOs in Charama region in Kanker district in tribal Bastar region.)
- ಅವರು ಈ ಬಗ್ಗೆ ಹೆಚ್ಚಿನ ವಿಷಯ ತಿಳಯಲು ಅಮೇರಿಕಾದ ನಾಸಾ ವಿಜ್ಞಾನಿಗಳ ಸಹಾಯ ಕೇಳಿದ್ದಾರೆ ಪ್ರಾಚೀನ ವಾಸ್ತು ತಜ್ಞರಾದ ಜೆಆರ್.ಭಗತ್ ರವರು, ಸುಮಾರು 1೦,೦೦೦ ವರ್ಷದ ಹಿಂದಿನ ಈ ಶಿಲಾ-ಚಿತ್ರಗಳು -ಪೈಂಟಿಂಗ್ ಗಳು ಯು.ಎಫ್.ಓ (UFOs) ಗಳ ಮತ್ತು ಈಗಿನ ಇಂಗ್ಲಿಷ್ ಚಿತ್ರಗಳಲ್ಲಿ ಬರುವ ಅನ್ಯ ಲೋಕದ ಜೀವಿಗಳನ್ನು ಹೋಲುತ್ತವೆ ಎಂದಿದ್ದಾರೆ.
ಇತಿಹಾಸ ಪೂರ್ವದ ಜನರು ಈಬಗೆಯ ಜನರನ್ನು ನೋಡಿ/ ಊಹಿಸಿ ಚಿತ್ರ ಬರೆದಿರಬಹುದೆಂದು ಭಾವಿಸುತ್ತಾರೆ.
- ಅಲ್ಲಿಯ ಮೂಲ ನಿವಾಶಿಗಳು .ಕೆಲವರು ಅದನ್ನು ಪೂಜಿಸುತ್ತಾರೆ. ಇನ್ನು ಕೆಲವರು ಹೇಳುವುದೇನೆಂದರೆ , ಹಿಂದೆ ಚಕ್ರಾಕಾರದ ತಟ್ಟೆಯಾಕಾರದ ವಾಹನದಲ್ಲಿ ಕುಳ್ಳಾದ ಜನರು ಬಂದು, ಇಳಿದು ಇಲ್ಲಿಯ ಒಬ್ಬಿಬ್ಬರನ್ನು ತಮ್ಮ ಜೊತೆ ಕರೆದುಜೊಂಡು ಹೋಗುತ್ತಿದ್ದುದಾಗಿ ಅವರ ಹಿರಿಯರು ಕಥೆ ಹೇಳುತ್ತಿದ್ದರೆಂದು ತಿಳಿಸಿದ್ದಾರೆ. ಈ ತೈಲಚಿತ್ರಗಳ ರಚನೆಗೆ ಪ್ರಾಕೃತಿಕ ಬಣ್ನ ಉಪಯೋಗಿಸಲಾಗಿದೆ.
- 1೦,೦೦೦ ವರ್ಷವಾದರೂ ಅದು ಸ್ವಲ್ಪವೂ ಮಾಸಿಲ್ಲ, ಕಳೆಗುಂದಿಲ್ಲ,- ಎಂದಿದ್ದಾರೆ ವಾಸ್ತು ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು .(ಟೈಮ್ಸ್ ಆಫ್ ಇಂಡಿಯಾ ವರದಿ | Jul 15, 2014 -TOI photo by Amit Bhardwaj)
(ಶಿರೋಲೇಖ-ಗೂಗಲ್ ಹುಡುಕು-ತಾಣ. :-10,000-year-old rock paintings depicting aliens and UFOs found in Chhattisgarh) [[೧೬]]
ಆರನೇ ವರ್ಷಕ್ಕೆ5 ಅಡಿ,7 ಅಂಗುಲ ಎತ್ತರ
[ಬದಲಾಯಿಸಿ]- ಮೀರತ್ ಪ್ರದೇಶದ ಕರಣ ನೆಂಬ ಬಾಲಕ ಕೇವಲ ಆರು ವರ್ಷಕ್ಕೆ 5 ಅಡಿ,7 ಅಂಗುಲ ಎತ್ತರ ಇದ್ದಾನೆ. ಅವನ ತಾಯಿ ಸ್ವೇತ್ಲಾನಾ ಸಿಂಗ್‘ 25 ವರ್ಷದವಳು 7 ಅಡಿ 2 ಇಂಚು ಎತ್ತರ ಇದ್ದಾಳೆ -ಇನ್ನೂ ಬೆಳೆಯುತ್ತಿದ್ದಾಳೆ - ವರ್ಷಕ್ಕೆ 2 ಅಂಗುಲ;. ಮೀರತ್ತಿನ ವೈದ್ಯರು 25 ವರ್ಷದ ನಂತರ ಬೆಳೆಯುತ್ತಿರುವುದು ಅಚ್ಚರಿ ಎಂದಿದ್ದಾರೆ. 2012 ರ ವರೆಗೆ ಅವಳು ಗಿನ್ನಿಸ್` ದಾಖಲೆ ಹೊಂದಿದ್ದಳು; ಆದರೆ ಪಶ್ಚಿಮ ಬಂಗಾಳದ ಸಿದ್ದಿಕಿ ಪರ‍್ವೀನಾ ೮ ಅಡಿ ೨ ಅಂಗುಲ ಎತ್ತರವಿದ್ದು ಇವಳನ್ನು ಹಿಂದೆ ಹಾಕಿದ್ದಾಳೆ.
- ಬೆಂಗಳೂರಿನ 6 ಅಡಿ, 6 ಅಂಗುಲ ಎತ್ತರದ ಸಂಜಯ ಎಂಬುವವನು ಅವಳನ್ನು (ಸ್ವೇತ್ಲಾನಾ ಸಿಂಗ್)‘ ಪ್ರೀತಿಸಿ 2007 ರಲ್ಲಿಮದುವೆಯಾಗಿದ್ದಾನೆ.ಕೌತುಕದ ಸಂಗತಿಯೆಂದರೆ, ತಾಯಿ-ಮಗ ಇಬ್ಬರಿಗೂ ವಿಶೇಷ ಶ್ರವಣ ಶಕ್ತಿಯಿದೆ. ಅವರಿಬ್ಬರೂ ಬಹಳ ದೂರದಿಂದ ಬರುವ ಶಬ್ದಗಳನ್ನೂ ಸ್ಪಷ್ಟವಾಗಿ ಕೇಳಬಲ್ಲರು ಎನ್ನುತ್ತಾರೆ ಸಂಜಯ್. (ಟೈಮ್ಸ್‌ಆಫ್ ಇ0ಡಿಯಾ 16-9-2014)[articleshow /42600875.cms]
ಬಿಳಿ ಹುಲಿಯ ಆವರಣದೊಳಗೆಹಾರಿದ ಯುವಕ
[ಬದಲಾಯಿಸಿ]ನವದೆಹಲಿಯ ಪ್ರಾಣಿಸಂಗ್ರಹಾಲಯದಲ್ಲಿ ಸುಮಾರು 200 ಕೆ.ಜಿ.ತೂಕದ ಏಳು ವರ್ಷದ ಬಿಳಿ ಹುಲಿಯ ಆವರಣದೊಳಗೆ ಸುಮಾರು 20 ವರ್ಷದ ದೆಹಲಿ ನಿವಾಸಿ ಮಕ್ಸೂದ್ ಎಂಬ ಯುವಕನು ಹಾರಿದ್ದಾನೆ. , ಆ ಹುಲಿಯು ಅವನನ್ನು ಸುಮಾರು ಹದಿನ್ಶೆದು ನಿಮಿಷ ದಿಟ್ಟಿಸಿ ನೋಡಿ ಕೊನೆಗೆ ಹೊಡೆದು ಗಾಯಗೊಳಿಸಿ ಎಳೆದಾಡಿ ಸಾಯಿಸಿದೆ. ಹತ್ತಿರದವರು ಕಲ್ಲು ಕಟ್ಟಿಗೆ ಎಸೆದು ಅದನ್ನು ಓಡಿಸಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಹತ್ತಿರ ವಿದ್ದವನು ಮೊಬೈಲಿನಲ್ಲಿ ಪೂರ್ಣ ಚಿತ್ರೀಕರಿಸಿದ್ದಾನೆ.ದಿ.23-9-2014 ಮಂಗಳವಾರ. (ಗೂಗಲ್ ಮತ್ತು ಟೈಮ್ಸ್ ‘- ಸುದ್ದಿ -ಫೋಟೋ)
- ವ್ಯಾಘ್ರನಿಗೂ ಅಚ್ಚರಿ! :
ಸಂದರ್ಶಕರ ಗ್ಯಾಲರಿಗೂ, ಹುಲಿಯಿರುವ ಪ್ರದೇಶಕ್ಕೂ ಅಂತರವಿದೆ. ಇವುಗಳ ಮಧ್ಯೆ ಕಂದಕವಿದೆ. ಸಂದರ್ಶಕರು ನಿಲ್ಲುವಂಥ ಗ್ಯಾಲರಿಗೆ ಹಾಕಲಾಗಿದ್ದ ಸರಳುಗಳನ್ನು ಹತ್ತಿದ ಯುವಕ, ಅಲ್ಲಿಂದ ಜಾರಿ ಕಂದಕಕ್ಕೆ ಬಿದ್ದ?. ತಾನಿರುವ ಜಾಗಕ್ಕೆ ದಿಢೀರ್ ಮನುಷ್ಯನೊಬ್ಬ ಬಂದದ್ದು ಕಂಡು, ಹುಲಿಗೆ ಆರಂಭದಲ್ಲಿ ಶಾಕ್ ಆಗಿತ್ತು.-(ತಮ್ಮ ಪುತ್ರ ಮಾನಸಿಕ ಸ್ತಿಮಿತ ಕಳೆದುಕೊಂಡಿದ್ದ ಎಂದು ಯುವಕನ ತಂದೆ ಹೇಳಿದ್ದಾನೆ.)
- ದಿ ನ್ಯಾಷನಲ್ ಜೂಅಲಜಿಕಲ್ ಪಾರ್ಕ್:
ಬಿಳಿ ಹುಲಿ ದಾಳಿಗೆ ಯುವಕ ಬಲಿಯಾದ ಘಟನೆ ನಡೆದಿರುವ ಈ ಪಾರ್ಕ್, ರಾಜಧಾನಿ ದಿಲ್ಲಿಯ ಕೇಂದ್ರ ಭಾಗದಲ್ಲಿದೆ. 176 ಎಕರೆಯಲ್ಲಿ ಈ ಪಾರ್ಕ್ ಹರಡಿಕೊಂಡಿದ್ದು, 1,556 ನಾನಾ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳ ತಾಣವಾಗಿದೆ. ಇಲ್ಲಿಗೆ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 5ರಿಂದ 6ಸಾವಿರ ಜನ ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಇಲ್ಲಿಗೆ 12ರಿಂದ 13 ಸಾವಿರ ಜನ ಸಂದರ್ಶಿಸುತ್ತಾರೆ.
- ಯುವಕ ಜಾರಿ ಕಂದಕಕ್ಕೆ ಬಿದ್ದಿಲ್ಲ. ಅಪಾಯದ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಿ ಸಂದರ್ಶಕರ ಗ್ಯಾಲರಿ ಬಳಿಯಿದ್ದ ಮೊಣಗಾಲು ಉದ್ದದ ರಕ್ಷಣಾ ಬೇಲಿಯನ್ನು ಆತ ಹತ್ತಿದ. ನಂತರ 18 ಅಡಿ ಆಳದ ಕಂದಕಕ್ಕೆ ಜಿಗಿದ. ಹುಲಿ ಪ್ರದೇಶದ ಆವರಣ ಸಂಪೂರ್ಣ ಸುರಕ್ಷಿತವಾಗಿವೆ. ರಕ್ಷಣಾ ಬೇಲಿ ದಾಟದೇ, ಕಂದಕ ಪ್ರವೇಶಿಸಲು ಸಾಧ್ಯವೇ ಇಲ್ಲ, ಎಂದು ರಿಯಾಜ್ ಅಹಮದ್ ಖಾನ್, ಪ್ರಾಣಿ ಸಂಗ್ರಹಾಲಯದ ವಕ್ತಾರರು ಹೇಳುತ್ತಾರೆ
18 ಅಡಿ ಮೀಸೆ ಮಾಮ
[ಬದಲಾಯಿಸಿ]ಮೀಸೆ ಹೊತ್ತ ಗಂಡಸಿಗೆ ಬಹಳ ಬೇಡಿಕೆ ಎಂದು ಹಾಡುತ್ತಿರುವ ಈ ವ್ಯಕ್ತಿಯ ಹೆಸರು ರಾಮ್ ಸಿಂಗ್ ಚೌಹಾಣ್. ಅಹಮದಾಬಾದ್‌ನಲ್ಲಿ ಬುಧವಾರ ತಮ್ಮ 18 ಅಡಿ ಉದ್ದದ ಮೀಸೆಯನ್ನು ಕೈಯಲ್ಲಿ ಹಿಡಿದು ಕ್ಯಾಮೆರಾಗೆ ತೋರಿಸಿದ್ದು ಹೀಗೆ:> ಅವನು ತನ್ನ ಮೀಸೆಯನ್ನು ಯಾರಿಗೂ ಮುಟ್ಟಲು ಬಿಡುವುದಿಲ್ಲ. ಅದನ್ನು ಸುತ್ತಿ ತಲೆಯಮೇಲೆ ತನ್ನ ಪೇಟದ ಕೆಳಗೆ ಇಟ್ಟುಕೊಳ್ಳುತ್ತಾನೆ. ಅವನಿಗೆ ಗಿನ್ನಿಸ್ ದಾಖಲೆಯಲ್ಲಿ ನೊಂದಾಯಿಸುವುದು ,ಅದರ ಕ್ರಮ, ಗೊತ್ತಿಲ್ಲ. – ಪಿಟಿಐ ಚಿತ್ರ(web)
ಬಾಲಕ, ರೂಬಿನ್ ಪಾಲ್ ಕಂಪ್ಯೂಟರ್ ತಂತ್ರಜ್ಞಾನಿ
[ಬದಲಾಯಿಸಿ]- ಬಾಲಕ, ರೂಬಿನ್ ಪಾಲ್ ಕಂಪ್ಯೂಟರ್ ತಂತ್ರಜ್ಞಾನಿ ಮತ್ತು ಎಂಟು ವರ್ಷದ ವಯಸ್ಸಿನಲ್ಲಿಯೇ ಕಂಪನಿಯ ಮುಖ್ಯಸ್ಥ
- ಭಾರತ ಸಂಜಾತ ರೂಬಿನ್ ಪಾಲ್ ನನ್ನು ದಿನಾಂಕ 14-11- 2014ರಂದು ದೆಹಲಿಯಲ್ಲಿ ನೆಡೆಯುವ ಸೈಬರ್(ಗಣಕ ತಂತ್ರ) ರಕ್ಷಣಾ ತಂತ್ರಜ್ಞಾನ ಸಮ್ಮೇಳನದಲ್ಲಿ( cybersecurity conference) ಕಂಪುಟರಿಗೆ ಈ ಮುಂದಿನ ವರ್ಷಗಳಲ್ಲಿ ಬರುವ ತೊಂದರೆಯ ಸವಾಲುಗಳನ್ನು ಹೇಗೆ ಎದುರಿಸ ಬೇಕೆಂಬ ಬಗ್ಗೆ ತಿಳುವಳಿಕೆ ಕೊಡುವ ಉಪನ್ಯಾಸಕ. ಪ್ರಾತ್ಯಕ್ಷಿಕೆಯ ಮೂಲಕ ವಿವರಿಸುವ ತಂತ್ರಜ್ಷ. ಅವನು ಈ ವಯಸ್ಸಿನಲ್ಲೇ ತನ್ನದೇ ಒಂದು ಕಂಪೂಟರ್ ಆಟಗಳ ತಂತ್ರಾಂಶ ರೂಪಿಸುವ ಒಂದು ಕಂಪನಿಯನ್ನು ಸ್ಥಾಪಿಸಿ ಅದರ ಮುಖ್ಯ ನಿರ್ವಾಹಕನಾಗಿದ್ದಾನೆ
- ಸಭೆಯ ನಿರ್ವಾಹಕರು , 8 ವರ್ಷದ ಬಾಲಕ ಜಾಗತಿಕ “ಹೋಸ್ಟನ್ ಸೆಚುರಿಟಿ ಸಮ್ಮೇಳನದಲ್ಲಿ ಸೂತ್ರವಿವರಣೆಯ ಉಪನ್ಯಾಸ ಕೊಡುವನೆಂದಿದ್ದಾರೆ. ಅದೇ ದೆಹಲಿಯ ಸಭೆಯಲ್ಲಿ ನಿವೃತ್ತ ಜನರಲ್ ವಿ.ಕೆ.ಸಿಂಗರದೂ ಉಪನ್ಯಾಸವಿದೆ.(gives keynote at Houston Security Conference)
- ಅವನ ತಂದೆ ಮಾನೋ ಪಾಲ್ ಅವನು ಮಗನ ¥ಕಂಪನಿಯ ಪಾಲುದಾರ.
- ತಂದೆಯೇ ಅವನಿಗೆ ಗಣಕ ಯಂತ್ರದ ಕೌಶಲ್ಯಗಳನ್ನು ಕಲಿಸಿದ್ದಾನೆ. ರೂಬಿನ್ ಪಾಲ್, ತಾನು ಒಂದೂವರೆ ವರ್ಷದಿಂದಲೇ ಗಣಕಯಂತ್ರದ ಉಪಯೋಗಮಾಡುವುದನ್ನು ಕಲಿಯಲು ಪ್ರಾರಂಭಿಸಿರುವುದಾಗಿ ಹೇಳುತ್ತಾನೆ . ಅವನು ಇದೇಆಗಸ್ಟ ತಿಂಗಳಲ್ಲಿ ತನ್ನ ಕಂಪನಿಯನ್ನು ಆರಂಭಸಿದ್ದಾನೆ.
ಅವನು ಕೇವಲ ಒಂದೂವರೆ ವರ್ಷದ ಹಿಂದೆ ಗಣಕ ಸಿ-ತಂತ್ರಾಂಶ ಭಾಷೆಯನ್ನು ಕಲಿತು ತನ್ನದೇ ಯೋಜಿತ ಆಟ ಮತ್ತು ತಂತ್ರಾಂಶ ಪ್ರೋಗ್ರಾಮ ಗಳನ್ನು ಬರೆದಿದ್ದಾನೆ ಈಗ ಮುಂದಿನ ಉನ್ನತ ತಂತ್ರಾಶ ಶೀಘ್ರ-ತಂತ್ರಾಶಗಳಮ್ಮು ಕಲಿಯುತ್ತಿದ್ದಾನೆ (learning Swift programming for Apple's iOS platform.)
- ರೂಬಿನ್ ಪಾಲ್, ಒಡಿಸ್ಸಾದಲ್ಲಿ ಜನಿಸಿ ಅಲ್ಲಿಯೇ ಬೆಳೆದನು; ೨೦೦೦/ 2000 ದಲ್ಲಿ ಆವನು ಕುಟಂಬದೊಡನೆ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋದನು.
(The Times of India: Nov 13, 2014,[[೧೭]]
ಹನ್ನೆರಡು ವಯಸ್ಸಿನ ಗೌರಿ ಶಂಕರ ಶಿಖರವನ್ನೇರಿದ ಮಾಲವತ್ ಪೂರ್ಣ
[ಬದಲಾಯಿಸಿ]- ಮಾಲವತ್ ಪೂರ್ಣ ತೇನ್‌ಸಿಂಗನ ರೋಚಕ ಅನುಭವಗಳನ್ನು ಕೇಳಿ, ತಾನೂ ಎವರೆಸ್ಟ್ ಶಿಖರವನ್ನು ಹತ್ತಬಾರದೇಕೆ ಎಂದಾಲೋಚಿಸಿದಳು.ಅದಕ್ಕೆ ಸರಿಯಾಗಿ 299 ರೆಸಿಡೆನ್ಸಿಯಲ್ ಶಾಲೆಗಳ 150 ಮಕ್ಕಳನ್ನು ಆರಿಸಿ, ಅವರಲ್ಲಿ ನಾಲ್ಕು ಹಂತದ ಕಠಿಣ ಪರೀಕ್ಷೆಗೆ ಗುರಿಪಡಿಸಿ, ಅದರಲ್ಲಿ 20 ಮಕ್ಕಳನ್ನು ಆಯ್ಕೆ ಮಾಡಿ ಅವರನ್ನು ಡಾರ್ಜಿಲಿಂಗ್‌ನ ಪರ್ವತಾರೋಹಣ ತರಬೇತಿ ಸಂಸ್ಥೆಗೆ ಕಳುಹಿಸಲಾಯಿತು. ಅಲ್ಲಿ ಬಹಳ ಶ್ರಮದಾಯಕವಾದ ತರಬೇತಿ ನೀಡಿ ಕೊನೆಯಲ್ಲಿ ಪರೀಕ್ಷೆ ನಡೆಸಿದಾಗ ಆಯ್ಕೆಯಾದವರು ಕೇವಲ ಇಬ್ಬರು.
- ತೆಲಂಗಾಣದ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದ ಈಕೆ ಇನ್ನೂ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿರುವ ಬಾಲಕಿ. ಅವರಲ್ಲಿ ಅತಿ ಕಿರಿಯಳು ಈ ಮಾಲವತ್ ಪೂರ್ಣ, ಇನ್ನೊಬ್ಬ ಸಾಧನಪಲ್ಲಿ ಆನಂದ ಕುಮಾರ್. ಕೃಷಿ ಕಾರ್ಮಿಕ ದಂಪತಿಗೆ ಜನಿಸಿದ ಗುಡ್ಡಗಾಡು ಜನಾಂಗದ ಈ ಪೋರಿ ಎವರೆಸ್ಟ್ ಶಿಖರ ಹತ್ತಲು ಆಯ್ಕೆಯಾದಾಗ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ಅಲ್ಲಿ ಭಾರತದ ಪತಾಕೆಯನ್ನು ಹಾರಿಸುವ ಅವಕಾಷ ಸಿಕ್ಕಿದ್ದೂ ತನ್ನ ಪುಣ್ಯ ಶೇಷವೆಂದೇ ಭಾವಿಸಿದಳು.
- 25ನೇ ಮೇ ತಿಂಗಳು 2014 ರಂದು ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಗೌರಿಶಂಕರದ ತುದಿಯೇರಿದಾಗ ಆಕೆಗಾದ ಸಂತಸ ಅಷ್ಟಿಷ್ಟಲ್ಲ. ಆಕೆ ಹತ್ತಿದ ಒಂದು ಗಂಟೆಯ ನಂತರ ಆನಂದ್ ಸಹ ಗೌರಿ ಶಂಕರ ಶಿಖರವನ್ನೇರಿದ. ಆದರೆ ಮೊದಲು ಹತ್ತಿದ ಆನಂದನಿಗಿಂತ ಚಿಕ್ಕವಳಾದ ಆಕೆ ಮೌಂಟ್ ಎವರೆಸ್ಟ್ ಶಿಖರ ಹತ್ತಿದ ವಿಶ್ವದ ಅತೀ ಕಿರಿಯ ವಯಸ್ಸಿನ ಬಾಲಕಿಯೆಂಬ ಅಭಿದಾನಕ್ಕೆ ಪಾತ್ರಳಾಗಿದ್ದಳು.
- ತೆಲಂಗಾಣ ಸರ್ಕಾರ ಆಕೆಯನ್ನು ಅಭಿನಂದಿಸಿ 25ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ನೀಡಿತಲ್ಲದೆ. ಸರ್ಕಾರಿ ಜಮೀನನ್ನೂ ಮಂಜೂರು ಮಾಡಿತು. ಮಾಲವತ್ ಪೂರ್ಣ ಹೆಚ್ಚಿನ ವಿದ್ಯಾಭ್ಯಾಸ ಮಾಡಿತ. ಭಾರತೀಯ ಪೋಲೀಸ್ ಇಲಾಖೆ ಸೇರಿ ಸೇವೆ ಮಾಡುವ ಹಿರಿದಾಸೆ ಹೊಂದಿದ್ದಾಳೆ.
ಕ್ರಿಸ್ಮಸ್ ಹಬ್ಬಕ್ಕಾಗಿ ಎದೆಹಾಲು ಮಾರಿದ ಮಹಾತಾಯಿ
[ಬದಲಾಯಿಸಿ]- ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ತಾಯಿಯೊಬ್ಬಳು, ಕ್ರಿಸ್ಮಸ್ ಹಬ್ಬದ ಆಚರಣೆಗೆ ದುಡ್ಡು ಸಂಪಾದಿಸಲು ತನ್ನ ಎದೆ ಹಾಲನ್ನೇ ಮಾರಿದ್ದಾಳೆ. ರೆಬೆಕ್ಕಾ ಹಡ್ಸನ್ ಎಂಬ 26 ವರ್ಷದ ಮಹಿಳೆಗೆ ನಾಲ್ಕು ಮಕ್ಕಳು. ಮ್ಯಾಂಚೆಸ್ಟರ್ ನಿವಾಸಿಯಾದ ಈಕೆಗೆ ಹಣಕಾಸಿನ ತೀವ್ರ ಅಡಚಣೆ ಕಾಡುತ್ತಿತ್ತು. ಹೇಳಿಕೇಳಿ ಇದು ಡಿಸೆಂಬರ್ ತಿಂಗಳು. ಕ್ರಿಸ್ಮಸ್ ಹಬ್ಬ ಮುಂದಿದೆ. ಆದರೆ, ಮಕ್ಕಳಿಗೆ ಚೂರು ಸಿಹಿ ಮಾಡೋಣವೆಂದರೆ ಕೈಯಲ್ಲಿ ಕಾಸಿಲ್ಲ. ಹೀಗೆ ದಿಕ್ಕು ತೋಚದೆ ಕುಳಿತಿದ್ದಾಗ ಆಕೆಯ ಮನಸ್ಸಿನೊಳಗೆ ಬಂದ ಅಲೋಚನೆಯೇ ಎದೆಹಾಲು ಮಾರಿ ಕಾಸು ಸಂಪಾದಿಸುವುದು.
- ತನ್ನ ಒಂದು ವರ್ಷ ಮಗು ಕುಡಿದು ತೃಪ್ತಿಗೊಂಡ ಬಳಿಕವೂ ಎದೆ ಹಾಲು ಸಾಕಷ್ಟು ಮಿಕ್ಕುತ್ತಿರುವುದು ಈಕೆಯ ಗಮನಕ್ಕೆ ಬಂದಿತ್ತು. ಅದನ್ನೇಕೆ ಮಾರಿ ಹಣ ಸಂಪಾದಿಸಬಾರದು ಎಂದು ಯೋಚಿಸಿದ ರೆಬೆಕ್ಕಾ, ತಡ ಮಾಡದೇ ಅಂತರಜಾಲ ತಾಣದಲ್ಲಿ ಎಂಟು ಗ್ರಾಹಕರನ್ನು ಹುಡುಕಿದಳು. ಪ್ರತಿ ಬಾಟಲ್ ಹಾಲಿಗೆ 12.50 ಪೌಂಡ್ ದರ ವಿಧಿಸಿ, ಇದುವರೆಗೂ 3,700 ಪೌಂಡ್ ಹಣ ಸಂಪಾದಿಸಿದ್ದಾಳೆ. ಹಬ್ಬ ಹೇಗೆ ಆಚರಿಸುವುದು ಎಂಬ ತಲೆನೋವು ಸದ್ಯಕ್ಕೆ ಬಗೆಹರಿದಿದೆ. ರೆಬೆಕ್ಕಾ ಅವರ ಮನಕಲಕುವ ಕತೆ ಮಾಧ್ಯಮಗಳಿಗೆ ಹೇಗೋ ತಿಳಿದು ಅದೀಗ ದೊಡ್ಡ ಸುದ್ದಿಯಾಗಿದೆ.
- ಅನೇಕ ಸುದ್ದಿವಾಹಿನಿಗಳು ರೆಬೆಕ್ಕಾರನ್ನು ಕೂರಿಸಿಕೊಂಡು ಆಕೆ ನೀಡಿದ ಎಲೆಹಾಲು ಹೇಗೆಲ್ಲಾ ಬಳಕೆಯಾಗುತ್ತಿದೆ ಎಂಬ ಕುರಿತು ಪ್ಯಾನೆಲ್ ಚರ್ಚೆಯನ್ನೂ ನಡೆಸಿವೆ. ಕೆಲವರು ಹೇಳುವ ಪ್ರಕಾರ, ರೆಬೆಕ್ಕಾಳಿಂದ ಖರೀದಿಸಿದ ಹಾಲನ್ನು ಕೆಲವರು ಲೈಂಗಿಕ ಉದ್ದೇಶಕ್ಕೆ ಬಳಸಿಕೊಂಡಿದ್ದಾರಂತೆ. ಇದು ನೈತಿಕತೆಗೆ ವಿರುದ್ಧವಂತೆ. ಆದರೆ, ರೆಬೆಕ್ಕಾ ಇಂತಹ ಸುದ್ದಿಗಳಿಂದ ವಿಚಲಿತರಾಗಿಲ್ಲ.
- ನನ್ನ ಹಣಕಾಸಿನ ಅಗತ್ಯಕ್ಕಾಗಿ ಎದೆಹಾಲನ್ನು ಮಾರಿದ್ದೇನೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಖರೀದಿಸಿದವರಿಗೆ ಬಿಟ್ಟ ವಿಷಯ. ಅದಕ್ಕೂ ನನಗೂ ಸಂಬಂಧವಿಲ್ಲ, ಎಂದು ಆಕೆ ದಿಟ್ಟವಾಗಿ ಉತ್ತರಿಸಿದ್ದಾರೆ.
ಸೂಕ್ಷ್ಮಜೀವಶಾಸ್ತ್ರದಲ್ಲಿ ಉನ್ನತ ಪದವಿ.ಓದುತ್ತಿರುವ 13 ವರ್ಷದ ಸುಷ್ಮಾ ವರ್ಮಾ
[ಬದಲಾಯಿಸಿ]- ಅಸಾಧಾರಣ ಪ್ರತಿಭೆ !!
- ಸುಷ್ಮಾ ವರ್ಮಾ, ಒಬ್ಬ ದೈನಂದಿನ ವೇತನ ಕಾರ್ಮಿಕನ ಅಸಾಧಾರಣ ಪ್ರತಿಭೆಯ 13 ವರ್ಷದ ಮಗಳು, ಲಕ್ನೋ ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮ ಜೀವವಿಜ್ಞಾನದ ಒಂದು ಸ್ನಾತಕೋತ್ತರ ಪದವಿಗಾಗಿ(a post-graduate degree in microbiology at Lucknow University) ಓದುತ್ತಿದ್ದಾಳೆ. ಪ್ರತಿಜ್ಞಾ ದಾಸ್ ಎಂಬುವವರೊಡನೆ ಮಾತನಾಡಿದ ವರ್ಮಾಬಾಲಕಿ ಅವರು ಕೇವಲ ಏಳು ವರ್ಷದವಳಾಗಿದ್ದಾಗ ವರ್ಗ 10 ಪರೀಕ್ಷೆಗೆ ತೆಗೆದುಕೊಂಡುಳು, ಜನರನ್ನು ಪ್ರತಿಭೆಯಿಂದ ಗುರುತಿಸ ಬೇಕು, ವಯಸ್ಸು ನೋಡಿ ಅಲ್ಲ.
- ಸಂದರ್ಶಕ ದಾಸ್ :ಅವರು ನೀವು ಶೈಕ್ಷಣಿಕವಾಗಿ ಪ್ರತಿಭೆಯುಳ್ಳವರೆಂದು ಯಾವಾಗ ಸ್ಪಷ್ಟ ವಾಯಿತು ಎಂದು ಕೇಳಿದರು.
- ಅದಕ್ಕೆ ಅವರು , “ನಾನು ಎರಡು ವರ್ಷಗಳ ಮಗುವಾಗಿದ್ದಾಗ ನಾನು ಸ್ಥಳೀಯ ವೇದಿಕೆಯಲ್ಲಿ ರಾಮಾಯಣ ನೆನಪಿನಿಂದ ಪಠಿಸಿದ್ದಾಗಿ , ನನ್ನ ಪೋಷಕರು ಹೇಳಿದಾಗ ತಿಳಿಯಿತು",ಎಂದಳುರು. ನನ್ನ ಸಹೋದರ ಶೈಲೇಂದ್ರ ಒಬ್ಬ ಪ್ರತಿಭಾವಂತ. ಸ್ವತಃ ತನ್ನ 10 ನೆಯ ತರಗತಿ ಯನ್ನು ಒಂಬತ್ತನೆಯ ವಯಸ್ಸಿನಲ್ಲಿ ಮುಗಿಸಿದ. ಅವನು 14 ವಯಸ್ಸಿನಲ್ಲಿ ಮತ್ತು ಗಣಕ ವಿಜ್ಞಾನ ಪದವಿ ಪಡೆದ ಅತ್ಯಂತ ಕಿರಿಯ BCA/ಗಣಕ ವಿಜ್ಞಾನ ಪದವೀಧರ. ನನ್ನಲ್ಲೂ ಪ್ರತಿಭೆ ಇದೆ ಎಂಬ ಅರಿವು ಆಯಿತು. ವರ್ಗ 10 ಕ್ಕೆ ಓದಲು ನನಗೆ ಸ್ಫೂರ್ತಿ ನೀಡಿದ. ನನ್ನ ಸಹೋದರ ನಾನು ವರ್ಗ 10ರ ಪರೀಕ್ಷೆಗಾಗಿ ಕುಳಿತುಕೊಳ್ಳಬೇಕೆಂದು ಒತ್ತಾಯಿಸಿದರು. ಅವನ ಪುಸ್ತಕಗಳನ್ನು ನಾನು ಓದುವ ಅಭ್ಯಾಸ ಬೆಳಸಿಕೊಂಡೆ. ನಾನು ಸದಾ ಪುಸ್ತಕಗಳನ್ನು ಓದುತ್ತಿದ್ದೆ. ನನ್ನ ಸಹೋದರನ ಪುಸ್ತಕಗಳು ಓದಿ ಅರ್ಥಮಾಡಿಕೊಳ್ಳುತ್ತಿದ್ದೆ, ನಾನು ಲಕ್ನೋ ಸೇಂಟ್ ಮಿರಾಜ್ ಇಂಟರ್ ಕಾಲೇಜ್ ನಲ್ಲಿ ನನ್ನ ಸೇರಿಕೊಂಡೆ.
- ಮಿರಾಜ್, ಶಿಕ್ಷಕರು ನನಗೆ ಸಹಾಯ ಮಾಡಿದರು. ನಾನು ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಸಮಸ್ಯೆಗಳನ್ನು ಬಿಡಿಸುತ್ತಿದ್ದೆ. ನಾನು ವರ್ಗ 10 ಕ್ಕೆ ಅರ್ಹ ಆಗಲು ವಿಶೇಷ ತರಬೇತಿ ನೀಡಲಾಯಿತು. ವರ್ಗ ಗುರುಗಳು 9 ನೇ ಪರೀಕ್ಷೆಗೆ ಕೂರಿಸಿದರು. ನಾನು ಪ್ರಶ್ನೆ ಗಳಿಗೆ ಉತ್ತರ ನೀಡುವುದು ನಿಧಾನವಾಯಿತು .- ಆದ್ದರಿಂದ ನಾನು ಹೇಗೆ ಸಮಯ ನಿರ್ವಹಿಸಬೇಕೆಂಬುದನ್ನು ಕಲಿಸಿದರು. ನನಗೆ ವಿಶ್ವಾಸ ಉಂಟಾಯಿತು. ನಾನು ಏಳನೇ ವಯಸ್ಸಿನಲ್ಲಿ ವರ್ಗ 10 ಪರೀಕ್ಷೆಯನ್ನು ತೆಗೆದುಕೊಂಡೆ ಎಂದರು.
(ಟೈಮ್ಸ್ ಆಫ್ ಇಂಡಿಯಾ -TOI-A person should be judged by her talent, not age: Sushma Verma/by Pratigyan Das | ನವೆಂಬರ್ 15, 2013)
ಕತ್ತೆಯ ಹಾಲು ರೂ.2000/-ಒಂದು ಲೀಟರ್
[ಬದಲಾಯಿಸಿ]- ನಂದಿನಿ ಹಾಲು ಒಂದು ಲೀಟರಿಗೆ ರೂ.29/-< 36/-
- ದಟ್ಟರಿಗೆ /ಮೂರ್ಖರಿಗೆ 'ಕತ್ತೆ' ಎಂದು ಬೈಯ್ಯುವುದು ರೂಢಿ, ಆದರೆ ಕತ್ತೆ ಅಷ್ಟೇನೂ ದಡ್ಡ ಪ್ರಾಣಿಯಲ್ಲ. ಆದರೆ ಅದರ ಹಾಲಿಗೆ ಅತ್ಯುನ್ನತ ಬೆಲೆ !!
- ಮೈಸೂರು ಜಿಲ್ಲೆ ಹುಣಸೂರು ಸುತ್ತಮುತ್ತ ಕತ್ತೆಗಳದ್ದೇ ಕಾರುಬಾರು, ಅದರಲ್ಲೂ ಹೆಣ್ಣುಕತ್ತೆಗೆ ಇಲ್ಲಿ ಭಾರಿ ಬೇಡಿಕೆ. ನೆರೆಯ ರಾಜ್ಯ ತಮಿಳುನಾಡಿನ ಕೃಷ್ಣಗಿರಿಯಿಂದ ಕೆಲವೊಂದಿಷ್ಟು ಅಗಸರು ತಮ್ಮ ಕಾಯಕಕ್ಕೆ ಸಹಕಾರಿಯಾಗುವ ಹೆಣ್ಣು ಕತ್ತೆಗಳೊಂದಿಗೆ ಇಲ್ಲಿಗೆ ಬರುತ್ತಾರೆ. ಇದಕ್ಕೆ ಕಾರಣ ಕತ್ತೆಯ ಹಾಲು ಮಾರಲು. ಕತ್ತೆ ಹಾಲು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬ ಅಂಶವನ್ನು ಬೀದಿ ಬೀದಿಗಳಲ್ಲಿ ಪ್ರಚಾರ ಮಾಡುವ ಈ ಅಗಸರು, ಹಾಲು ಮಾರಾಟ ಮಾಡಿ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ‘ಕತ್ತೆಹಾಲು ಬೇಕೇ? .... ತಾಜಾ ಕತ್ತೆಹಾಲು ...’ ಎನ್ನುತ್ತಾ ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಾ, ವ್ಯಾಪಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
- ಕತ್ತೆ ಮರಿ ಹಾಕುತ್ತಿದ್ದಂತೆ ಕತ್ತೆ ಹಾಲು ಮಾರಾಟ ಮಾಡಲು ರಾಜ್ಯದ ವಿವಿಧ ಊರು ಕೇರಿಗಳಲ್ಲಿ ತಿರುಗಾಟ ನಡೆಸಿ ಹೊಟ್ಟೆ ಹೊರೆದುಕೊಳ್ಳುತ್ತಾರೆ.
- ಔಷಧೀಯ ಗುಣ:ಕತ್ತೆ ಹಾಲು ಅಸ್ತಮಾ, ಜಾಂಡೀಸ್, ಹೊಟ್ಟೆ ನೋವು ಮತ್ತು ಆಗ್ಗಿಂದಾಗೆ ಮರುಕಳಿಸುವ ತಲೆ ನೋವು ಈ ಕಾಯಿಲೆಗಳಿಗೆ ಸಿದ್ಧ ಔಷಧಿಯಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಒಳಲೆ ಹಸಿ ಹಾಲು ಸೇವಿಸಿದರೆ ರೋಗ ಮಾಯವಾಗುತ್ತದೆ.
ಎಂಬುದು ಪ್ರಚಾರ ; ಜನರ ನಂಬುಗೆ !!
- ದಿನವೊಂದಕ್ಕೆ ಅರ್ಧ ಲೀಟರ್ ಹಾಲು ನೀಡುವ ಕತ್ತೆಯೊಂದಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಸಂಚರಿಸಿದರೆ ಈ ಮಾರಾಟಗಾರರು ದಿನದ ಅಂತ್ಯದಲ್ಲಿ 1000 ರೂಪಾಯಿವರೆಗೂ ಸಂಪಾದಿಸುತ್ತಾರೆ. ಒಂದು ಒಳಲೆ (ಅಂದಾಜು 15 ಮಿಲಿ) ಹಾಲಿಗೆ ₨ 50 ಹಾಗೂ ಒಂದು ಪುಟ್ಟ ಲೋಟದ ಹಾಲಿಗೆ (ಅಂದಾಜು 100 ಮಿಲಿ) ₨ 200ರಂತೆ ಮಾರಾಟ ಮಾಡುತ್ತಾರೆ. (ಪ್ರಜಾವಾಣಿ -ಎಚ್.ಎಸ್.ಸಚ್ಚಿತ್-Tue, 13/01/2015)
ವಿಶ್ವದಾಖಲೆಮಾಡಿದ ಕನ್ನಡನಾಡಿನ ಮೊದಲ ಈಜು ತಾರೆ ಬೈರಮ್ಮ[೨]
[ಬದಲಾಯಿಸಿ]- 1934ರ ಏಪ್ರಿಲ್ 22ರಂದು ಭಾನುವಾರ ಬೈರಮ್ಮ ಎಂಬ 8 - 9 ವರ್ಷ ವಯಸ್ಸಿನ ಬಾಲಕಿ ಕೆಂಪಾಂಬುದಿ ಕೆರೆಯಲ್ಲಿ ನಿರಂತರವಾಗಿ 12 ಗಂಟೆಗಳ ಕಾಲ ಈಜುತ್ತಾಳೆ ಎಂದು ಅವಳಿಗೆ ಈಜು ತರಬೇತಿ ಕೊಟ್ಟ ಡಾಲ್ಫಿನ್ ಕ್ಲಬ್‌ನವರು ಊರು ತುಂಬಾ ಪ್ರಚಾರ ಮಾಡಿದ್ದರು. ಆಗಿನ ಪತ್ರಿಕೆಗಳಲ್ಲೂ ಸುದ್ದಿಗಳು ಪ್ರಕಟಗೊಂಡಿದ್ದವು. ಹೀಗಾಗಿ ಸ್ಪರ್ಧೆಯ ದಿನ ಮುಂಜಾನೆಯೇ ನೂರಾರು ಮಂದಿ ಕೆಂಪಾಂಬುದಿ ಕೆರೆಯ ಸುತ್ತಲೂ ಕಿಕ್ಕಿರಿದಿದ್ದರು. ಬೆಳಿಗ್ಗೆ 6ಗಂಟೆ 5ನಿಮಿಷಕ್ಕೆ ಬೈರಮ್ಮ ನೀರಿಗಿಳಿದರು.
ಇಡೀ ಜಗತ್ತಿಗೆ ಬೈರಮ್ಮನ ಸಾಹಸ ಸುದ್ದಿ
[ಬದಲಾಯಿಸಿ]- ಮಧ್ಯಾಹ್ನದ ವೇಳೆಗೆ ಕೆರೆಯ ಆಸುಪಾಸಿನ ಪ್ರದೇಶವೆಲ್ಲಾ ಜಾತ್ರೆಯ ಕಳೆ ಪಡೆದುಕೊಂಡಿತ್ತು.. ಅಮೆರಿಕನ್ ಮಹಿಳೆ ರತ್ ಇ ರಾಬಿನ್ಸನ್ ಆಗ ಬೆಂಗಳೂರಿನ ಮೆಥಡಿಸ್ಟ್ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಜತೆಗೆ ಪತ್ರಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದರು.
- ಈ ಅಮೆರಿಕನ್ ಮಹಿಳೆ ಬೈರಮ್ಮನ ಸಾಹಸಗಳ ಬಗ್ಗೆ ಹೊರ ಜಗತ್ತಿಗೆ ತಿಳಿಸಿದರು. ಅಂದು ಕೆಂಪಾಂಬುದಿ ಕೆರೆಯ ಬಳಿ ರತ್ ರಾಬಿನ್ಸನ್ ಕೂಡಾ ಇದ್ದರು. ಬೈರಮ್ಮ ನೀರಲ್ಲಿ ಈಜುತ್ತಾ, ತೇಲುತ್ತಾ ಇರುವುದನ್ನು ಸಾವಿರಾರು ಮಂದಿ ವೀಕ್ಷಿಸಿದ್ದರು. ಡಾಲ್ಫಿನ್ ಕ್ಲಬ್‌ನ ನುರಿತ ಈಜುಗಾರರು ಎರಡು ಗಂಟೆಗಳಿಗೆ ಒಮ್ಮೆ ದೋಣಿಯಲ್ಲಿ ಬೈರಮ್ಮನ ಬಳಿ ಹೋಗಿ ಕೋಲಿಗೆ ಲೋಟವೊಂದನ್ನು ಸಿಕ್ಕಿಸಿ ಅದರಲ್ಲಿ ಬಾದಾಮಿ ಹಾಲು ಮತ್ತು ಹಣ್ಣಿನ ರಸವನ್ನು ಕೊಡುತ್ತಿದ್ದರು.
- ಹನ್ನೆರಡು ಗಂಟೆಗಳ ಕಾಲ ನೀರಲ್ಲಿದ್ದ ಬೈರಮ್ಮ ದಡಕ್ಕೆ ಬಂದ ಮೇಲೆ ಸಾವಿರಾರು ಮಂದಿ ಹಲವು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದ್ದರು. ಆಗ ಸಚಿವರಾಗಿದ್ದ ಎಸ್.ಪಿ.ರಾಜಗೋಪಾಲಾಚಾರ್ಯ ಮತ್ತು ಬೆಂಗಳೂರು ನಗರಸಭೆಯ ಅಧ್ಯಕ್ಷರಾಗಿದ್ದ ಬಿ.ಕೆ.ಗರುಡಾಚಾರ್ ಅವರು ಕೆರೆಯ ಬಳಿ ಹೋಗಿ ಬೈರಮ್ಮ ಅವರನ್ನು ಸನ್ಮಾನಿಸಿದರು.
ಎರಡನೇ ಬಾರಿ ಸತತ ೧೨ ಗಂಟೆ ಈಜು
[ಬದಲಾಯಿಸಿ]- ಆ ನಂತರ ಅಂತಹದೇ ಇನ್ನೊಂದು ಸಾಹಸ ಮಾಡಬೇಕೆಂದು ಅಭಿಮಾನಿಗಳು ಬೈರಮ್ಮ ಅವರ ಮೇಲೆ ಒತ್ತಡ ಹೇರತೊಡಗಿದರು. ಹೀಗಾಗಿ 1934ರ ಮೇ 19ರ ಶನಿವಾರ ಮಧ್ಯರಾತ್ರಿ 12 ಗಂಟೆಯಿಂದ ಮರುದಿನ ಸಂಜೆ 6 ಗಂಟೆಯವರೆಗೆ ಕೆರೆಯಲ್ಲಿ ಈಜುತ್ತಾ, ತೇಲುತ್ತಾ ಕಳೆಯುವ ಸಾಹಸ ಮಾಡುವುದಕ್ಕೆ ಬೈರಮ್ಮ ನಿರ್ಧರಿಸಿದರು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯನ್ನು ಚಾಮರಾಜಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಹಿಸಿಕೊಂಡಿದ್ದರು. ಕೆರೆಯ ಆಸುಪಾಸಿನ ನಿವಾಸಿಗಳೇ ಅಂದು ರಾತ್ರಿ ಬೆಳಕು ನೀಡುವ ನೂರಾರು ಪೆಟ್ರೊಮ್ಯಾಕ್ಸ್‌ಗಳನ್ನು ವ್ಯವಸ್ಥೆ ಮಾಡಿದ್ದರು.
- ನಿಗದಿತ ವೇಳೆಗೆ ಬೈರಮ್ಮ ನೀರಿಗಿಳಿದರು. ಕೆರೆಯ ಸುತ್ತಲೂ ಸಾವಿರಾರು ಮಂದಿ ಸೇರಿದ್ದರು. ತೀರ್ಪುಗಾರರು ಎಚ್ಚರಗಣ್ಣಿನಿಂದ ಬೈರಮ್ಮ ಅವರನ್ನು ನೋಡುತ್ತಿದ್ದರು. ಭಾನುವಾರ ಮೈಸೂರು ರಸ್ತೆಯಲ್ಲಿರುವ ಗಾಳಿ ಹನುಮಂತರಾಯ ಸ್ವಾಮಿ ದೇವರ ಜಾತ್ರೆ ಇತ್ತು. ಅಲ್ಲಿಗೆ ಹೋಗಿದ್ದ ಸಾವಿರಾರು ಮಂದಿ ಕೆಂಪಾಂಬುದಿ ಕೆರೆಯಲ್ಲಿ ಬೈರಮ್ಮನ ಸಾಹಸ ನೋಡಲು ಸೇರಿದ್ದರು. ಹೀಗಾಗಿ ವಿಪರೀತ ಜನಜಂಗುಳಿ ಉಂಟಾಗಿತ್ತು.
- ಆಗಿನ ಮೈಸೂರು ಪ್ರಾಂತ್ಯದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಖುದ್ದಾಗಿ ಕೆಂಪಾಂಬುದಿ ಕೆರೆಯ ಬಳಿ ಹೋಗಿ ಬೈರಮ್ಮ ಅವರ ಸಾಹಸವನ್ನು ವೀಕ್ಷಿಸಿದ್ದೊಂದು ವಿಶೇಷ. ಸಂಜೆ 6ಗಂಟೆ 13ನೇ ನಿಮಿಷಕ್ಕೆ ಬೈರಮ್ಮ ದಡ ಸೇರಿದರು.
- ಕೇವಲ ಒಂಬತ್ತು ವರ್ಷ ವಯಸ್ಸಿನ ಬಾಲಕಿಯ ಈ ಸಾಧನೆ ಭಾರತದ ಮತ್ತು ಇಂಗ್ಲೆಂಡ್‌ನ ಪತ್ರಿಕೆಗಳಲ್ಲೂ ಸುದ್ದಿಯಾಯಿತು.
- ಕೆಲವು ಪತ್ರಿಕೆಗಳು ಇದೊಂದು ವಿಶ್ವದಾಖಲೆ ಎಂದೇ ಬರೆದಿದ್ದವು.
ಈಜು ಪಟು ಪುಟ್ಟ ಬಾಲಕಿ-ಬೈರಮ್ಮಳಿಗೆ ಸನ್ಮಾನ
[ಬದಲಾಯಿಸಿ]- ಈ ಘಟನೆ ನಡೆದು 20 ದಿನಗಳ ನಂತರ ಅಂದರೆ 1934ರ ಜೂನ್ 11ರಂದು ನಗರಸಭಾಧ್ಯಕ್ಷ ಕೆ.ಪಿ.ಪುಟ್ಟಣ್ಣ ಚೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೈರಮ್ಮ ಅವರಿಗೆ ನಾಗರಿಕ ಸನ್ಮಾನ ನೀಡಲಾಯಿತು. ಈ ಪ್ರದರ್ಶನ ನಡೆದ ಕೆಲವು ದಿನಗಳ ನಂತರ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿಯೂ ಬೈರಮ್ಮ ಎರಡೂ ಕೈಗಳನ್ನು ಹಗ್ಗದಿಂದ ಕಟ್ಟಿಕೊಂಡು ನೀರಲ್ಲಿ ತೇಲುವ ಪ್ರದರ್ಶನ ನೀಡಿದ್ದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಯಿಂದಲೇ ವಿಶೇಷ ಉಡುಪುಗಳನ್ನು ಬೈರಮ್ಮ ಅವರಿಗೆ ಕಳುಹಿಸಿಕೊಟ್ಟು ಗೌರವಿಸಿದ್ದರು.
ವೈಯುಕ್ತಿಕ ಜೀವನ-ನೋವಿನ ಜೀವನ
[ಬದಲಾಯಿಸಿ]- ಬೈರಮ್ಮ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾಹಿತಿಗಳು ಬಹಳ ಕಡಿಮೆ. ಚಾಮರಾಜಪೇಟೆಯಲ್ಲಿ ಪಿಟೀಲು ವಾದಕರಾಗಿದ್ದ ಪಿ.ಶಿವಲಿಂಗಪ್ಪ ಅವರ ಪುತ್ರಿ ಬೈರಮ್ಮ1926ರ ಮೇ ತಿಂಗಳಲ್ಲಿ ಹುಟ್ಟಿದ್ದು. 1930ರಲ್ಲಿ ಅವರು ಡಾಲ್ಫಿನ್ ಕ್ಲಬ್ ಸೇರಿ ಈಜು ಕಲಿತರು. 1941ರಲ್ಲಿ ಬೈರಮ್ಮ ಅವರ ಸೊಂಟದಭಾಗವು ಚೇತನ ಕಳೆದುಕೊಂಡಿತು. ಎದ್ದು ನಿಲ್ಲಲಾಗದ, ನಡೆಯಲಾಗದಂತಹ ಪರಿಸ್ಥಿತಿ ಉಂಟಾಯಿತು.
- ಆ ಕಾಲದಲ್ಲಿ ಬೆಂಗಳೂರಿನ ಹತ್ತು ಹಲವು ವೈದ್ಯರು ಅವರಿಗೆ ಚಿಕಿತ್ಸೆ ನೀಡದರಾದರೂ ಗುಣಮುಖರಾಗಲಿಲ್ಲ. ಆಗ ಮಹಾತ್ಮಾ ಗಾಂಧೀಜಿಯವರಿಗೆ ಬೈರಮ್ಮನವರ ವಿಷಯ ಗೊತ್ತಾಯಿತು. ಅದು 1942ರ ವರ್ಷ. ಗಾಂಧೀಜಿಯವರು ಪಿ.ಶಿವಲಿಂಗಪ್ಪ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡರು. ‘ನಿಮ್ಮ ಮಗಳು ಬೈರಮ್ಮನನ್ನು ಪ್ರಕೃತಿ ಚಿಕಿತ್ಸೆಗಾಗಿ ವಾರ್ಧಾ ಆಶ್ರಮಕ್ಕೆ ಕಳುಹಿಸಿಕೊಡಿ’ ಎಂದು ಶಿವಲಿಂಗಪ್ಪ ಅವರಲ್ಲಿ ಕೇಳಿಕೊಂಡ ಗಾಂಧೀಜಿ ಒಂದು ಚರಕವನ್ನು ಶಿವಲಿಂಗಪ್ಪನವರಿಗೆ ಉಡುಗೋರೆ ನೀಡಿ ಕಳುಹಿಸಿಕೊಟ್ಟರು.
- ಆದರೆ ಬೈರಮ್ಮ ಅವರು ವಾರ್ಧಾ ಆಶ್ರಮಕ್ಕೆ ಹೋಗಲಾಗಲಿಲ್ಲ.
- 1943ರ ವೇಳೆಗೆ ಸಂಪೂರ್ಣವಾಗಿ ಅಂಗವಿಕಲೆಯಾಗಿದ್ದ ಬೈರಮ್ಮ ಅವರನ್ನು ಕನಕಪುರದ ಲಕ್ಷ್ಮೀನಾರಾಯಣ ರಾವ್ ಎಂಬುವವರು ಮದುವೆಯಾದರು. ಈ ದಂಪತಿಗೆ ಮಕ್ಕಳಿರಲಿಲ್ಲ. 1980ರಲ್ಲಿ ಬೈರಮ್ಮ ನಿಧನರಾದರು.(೨.prajavani//(ವೇಮಗಲ್ ಸೋಮಶೇಖರ್)೯-೩-೨೦೧೫)
ಅಸಾಧಾರಣ ಬಿಲ್ಲುಗಾತಿಯರು
[ಬದಲಾಯಿಸಿ]- ಕ್ರೀಡಾ ಪ್ರಶಸ್ತಿ ಪಡೆದ ಬಿಲ್ಲುಗಾರರು ಕೈಗಳಿಂದ ಬಾಣಪ್ರಯೋಗ ಮಾಡಿ ಕೈಚಳಕ ತೋರಿಸುವರು. ಮಹಾಭಾರತದಲ್ಲಿ ಅರ್ಜುನ ಎರಡೂ ಕೈಗಳಿಂದ ಬಾಣ ಪ್ರಯೋಗ ಮಾಡಲು ಸಮರ್ಥನಾದ ಕಾರಣ ಸವ್ಯಸಾಚಿ ಎಂಬ ಬಿರುದು ಪಡೆದ. ಆದರೆ ಈ ಕಲಿಯುಗದಲ್ಲಿ, 26 ವರ್ಷದ ಸಾಹಸಿ ಕ್ಯಾಲಿಫೋರ್ನಿಯಾದ ನ್ಯಾನ್ಸಿ ಸಿಫಿಕರ್ ತನ್ನ ಬಳ್ಳಿ ದೇಹವನ್ನು ಚೇಳಿನಂತೆ ಬಾಗಿಸಿ,ಮೇಲೆ ಎತ್ತಿದ ಕಾಲುಗಳಲ್ಲಿ ಬಿಲ್ಲು ಹಿಡಿದು ಇಪ್ಪತ್ತು ಅಡಿ ದೂರದಲ್ಲಿರುವ ಫಲಕವನ್ನು ಗುರಿತಪ್ಪದೆ ಬಾಣ ಬಿಡುತ್ತಾಳೆ. ಗುರಿ ಫಲಕ ೫ ೧/೨ ಇಂಚು ಎದೆ. ಅವಳು ಕಾಲಿನಿಂದ ಬಿಟ್ಟ ಬಾಣ ಗುರಿ ತಪ್ಪದೆ ಅದರ ಮಧ್ಯಕ್ಕೆ ನಾಟುವುದು.
- ಲಾಸ್ ಏಂಜೆಲೀಸ್‌ನಲ್ಲಿ ನಡೆಸಿದ ಪ್ರಯೋಗ 2015ರ ಗಿನ್ನಿಸ್ ದಾಖಲೆಯ ಪುಸ್ತಕವನ್ನು ಸೇರಿದೆ. ‘ಬಿಲ್ವಿದ್ಯೆಗೆ ರಾಬಿನ್‌ಹುಡ್ ಪ್ರೇರಣೆ, ಆತನೇ ನನ್ನ ಮಾನಸಿಕ ಗುರು’ ಎಂದಿರುವ ನ್ಯಾನ್ಸಿ, ಸರ್ಕಸ್ ಕಂಪೆನಿಯ ಕಲಾವಿದೆಯೂ ಹೌದು.[[೧೮]][[೧೯]][[೨೦]]
ಫೋಟೋ ಮತ್ತು ವಿವರಕ್ಕೆ ನೋಡಿ -> [[೨೧]]
ವಿಶ್ವದ ಹಿರಿಯಜ್ಜ ಯಸುತರೊ ಕ್ಯೊಡಿ
[ಬದಲಾಯಿಸಿ]ಜಪಾನಿನ (ಟೊಕಿಯೊದ) ವಿಶ್ವದ ಹಿರಿಯಜ್ಜ, ಶತಾಯುಷಿ ಯಸುತರೊ ಕ್ಯೊಡಿ (112 ವರ್ಷ, 312 ದಿನ) ಅವರು ಮಂಗಳವಾರ ಜಪಾನ್‌ನಲ್ಲಿ ನಿಧನರಾದರು. ರೈಟ್ ಸಹೋದರರು ವಿಮಾನ ಆವಿಷ್ಕಾರಕ್ಕೆ ಮುನ್ನುಡಿ ಬರೆಯುವ ಕೆಲವೇ ತಿಂಗಳುಗಳ ಹಿಂದೆ ಅಂದರೆ, 1903, ಮಾರ್ಚ್ 13 ರಂದು ಜಪಾನಿನ ತ್ಸುರ್ಗಾ ಫುಕುಯಿ ಪ್ರಾಂತ್ಯದಲ್ಲಿ ಕ್ಯೊಡಿ ಜನಿಸಿದ್ದರು.ವೃತ್ತಿಯಲ್ಲಿ ಕ್ಯೊಡಿ ದರ್ಜಿಯಾಗಿದ್ದರು.ಜಪಾನಿನ ನಗೊಯಾ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾದರು ಎಂದು ಸ್ಥಳೀಯ ಆಡಳಿತ ಖಚಿತಪಡಿಸಿದೆ. ಅವರಿಗೆ 7 ಮಕ್ಕಳು, 9 ಮೊಮ್ಮಕ್ಕಳು ಇದ್ದಾರೆ.
- ಜಪಾನಿನವರೇ ಆದ ವಿಶ್ವದ ಹಿರಿಯ ವ್ಯಕ್ತಿ, ಶತಾಯುಷಿ ಸಕಾರಿ ಮೊಮೊಯಿ(112 ವರ್ಷ, 150 ದಿನ) ಕಳೆದ ಜುಲೈನಲ್ಲಿ ಮೃತಪಟ್ಟಿದ್ದರು.
ಗಿನ್ನೆಸ್ ವಿಶ್ವದಾಖಲೆ ವೆಬ್‌ಸೈಟ್ ಪ್ರಕಾರ ಸದ್ಯ ಬದುಕಿರುವ ವಿಶ್ವದ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಸೂಸನ್ನಾ ಮುಷಟ್ ಜೋನ್ಸ್ (116 ವರ್ಷ, 194 ದಿನ) ಮುಂಚೂಣಿಯಲ್ಲಿದ್ದಾರೆ. ಆಧಾರ: www.prajavani.net/article/ವಿಶ್ವದ-ಹಿರಿಯಜ್ಜ-ಯಸುತರೊ-ಕ್ಯೊಡಿ-ಜಪಾನ್‌ನಲ್ಲಿ-ನಿಧನ [[೨೨]]
ಪ್ರಜಾವಾಣಿ ಕ್ವಿಜ್`ನಲ್ಲಿ ಎಲ್ಲಾ ಪ್ರಶ್ನೆಗೆ ಕೈ ಎತ್ತಿದ ಬಾಲಕ
[ಬದಲಾಯಿಸಿ]ಪ್ರಜಾವಾಣಿ ನೆಡೆಸಿದ ಕ್ವಿಜ್` ಸ್ಪಧಯಲ್ಲಿ ಸುಹಾಸ್ ಅಡಿಗನ ಪ್ರತಿಭೆ ಗುರುತಿಸಿದವರು ಪ್ರೊ.ಬಿ. ತಿಮ್ಮೇಗೌಡರು. ಲಿಖಿತ ಉತ್ತರದ ಪರೀಕ್ಷೆಯಲ್ಲಿ ಫೈನಲ್ ತಲುಪಲು ಅರ್ಹತೆ ಗಿಟ್ಟಿಸದೆ ಸಭಿಕರಲ್ಲಿ ಕುಳಿತಿದ್ದ ಹುಡುಗ ಪೂರ್ಣಪ್ರಜ್ಞ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸುಹಾಸ್ ಅಡಿಗ. ಕ್ವಿಜ್ ಮಾಸ್ಟರ್ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆರೆದುಕೊಳ್ಳುತ್ತಿದ್ದರೆ ಈ ಹುಡುಗ ಕೈಎತ್ತಿ ಉತ್ತರ ಹೇಳಲು ತವಕಿಸುತ್ತಿದ್ದ. ಯಾವುದೇ ಪ್ರಶ್ನೆ ಕೇಳಿದರೂ ಕೈ ಎತ್ತುತ್ತಿದ್ದ ಆತನನ್ನು ಕಂಡು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು. ಪ್ರೇಕ್ಷಕರಿಗೆ ವರ್ಗಾವಣೆಗೊಂಡ ಪ್ರಶ್ನೆಗಳಲ್ಲಿ ಒಂದೂ ಸುಹಾಸ್‌ನತ್ತ ಸುಳಿಯದಿದ್ದಾಗ ಸ್ವತಃ ಕುಲಪತಿ ಅವರು ಮೈಕ್ ಪಡೆದು ಆತನ ಕೈಗಿತ್ತರು. ಸರಿ ಉತ್ತರ ಹೇಳಿದ ಆತ, ಬಹುಮಾನ ಪಡೆದು ಸಂಭ್ರಮಿಸಿದ. ->ಆಧಾರ:[[೨೩]]
ಆಹಾರ-ಗಾಳಿ ಇಲ್ಲದೆ ಒಂದು ವಾರ ಬದುಕಿದ
[ಬದಲಾಯಿಸಿ]- D.9-2-2016-news-HT
- --the 200 soldiers who carried out the dangerous mission at a height of 20,500 feet with raging blizzards and temperatures plunging to -55 degree Celsius.
- --The men chipped away inch-by-inch at over 30 feet of blue ice – which is harder than concrete -- for hours amid high-intensity winds but were energised when they finally found Koppad. “Him being found alive electrified the entire rescue team.
- When rescued, Koppad was conscious but drowsy and disoriented. -,” officials said.
- The air force sent a C-130J Super Hercules plane on Tuesday to bring Koppad – trapped under snow for six days -- to New Delhi. [೧೮]
- ಸುಮಾರು 25 ಅಡಿ ಆಳದಲ್ಲಿ, ಹಿಮದ ಅಡಿ ಸಿಲುಕಿದ ಯೋಧ ಅದನ್ನು ತೆಗೆದಾಗ ಇನ್ನೂಬದುಕಿದ್ದ; ಉಳಿದ ಒಂಭತ್ತು ಜನ ಸತ್ತಿದ್ದರು.
ಅವನು/ಅವರು ಹನುಮಂತಪ್ಪ ಕೊಪ್ಪದ, ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಬೆಟದೂರಿನವರು. ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿ ಫೆಬ್ರುವರಿ 3 ರಂದು ಸಂಭವಿಸಿದ್ದ ಹಿಮಕುಸಿದಲ್ಲಿ ಭಾರತದ ಸೈನ್ಯದಲ್ಲಿದ್ದ, ರಾಜ್ಯದ ಯೋಧ.ಈ ಹನುಮಂತಪ್ಪ ಅವರು ದಿ.8-2-2016 ರಕ್ಷಣೆಗಾಗಿ ಅಗೆದು ತೆಗೆದಾಗ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ. ಅವರನ್ನು ಮಂಗಳವಾರ ದಿ.9-2-2016 ರ ಬೆಳಿಗ್ಗೆ ಸಿಯಾಚಿನ್` ಸೇನಾ ನೆಲೆಯಿಂದ ವಿಶೇಷ ವಿಮಾನ ಅಂಬುಲೆನ್ಸ್ ಮೂಲಕ ದೆಹಲಿಯ ಆರ್‌ಆರ್ ಆಸ್ಪತ್ರೆಗೆ ದಾಖಲಿಸಿದರು..ಆರು ದಿನಗಳ ಕಾಲ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಹಿಮರಾಶಿಯಲ್ಲಿ ಹೂತು ಹೋಗಿ ಬದುಕಿ ಬಂದಿದ್ದ ಯೋಧ ಹನುಮಂತಪ್ಪ ಕೊಪ್ಪದ 11-2-2016 ಗುರುವಾರ ಬೆಳಗ್ಗೆ 11 .45ಕ್ಕೆ ನಿಧನರಾದರು. [೧೯][೨೦]
ಫೋಟೊ :[[೨೪]] |
ತಮಿಳುನಾಡಿನಲ್ಲಿ ಉಲ್ಕಾಪಾತದಿಂದ ಒಬ್ಬನ ಸಾವು
[ಬದಲಾಯಿಸಿ]- ಒಂದು ಉಲ್ಕಾಶಿಲೆ ಶನಿವಾರ ದಿ.6-2-2016 ರಂದು ವೆಲ್ಲೂರ್ ಜಿಲ್ಲೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜ್ ಹತ್ತಿರ ಅಪ್ಪಳಿಸಿತು. ಅದರಿಂದ ಒಬ್ಬ ಬಸ್ ಚಾಲಕ ಕಾಮರಾಜ್` ಹತನಾಗಿದ್ದು ಮೂವರು ಗಾಯಗೊಂಡಿದ್ದಾರೆ. ಶನಿವಾರದ ಈ ಸ್ಪೋಟದಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮತ್ತು ಒಬ್ಬ ವಿದ್ಯಾರ್ಥಿ ಗಾಯಗೊಂಡರು. ವಿದ್ಯಾರ್ಥೀ ಸ್ಪೋಟದ ಶಬ್ದದಿಂದ ಕಿವುಡಾಗಿದ್ದಾನೆ. ಕಾಲೇಜಿನ ಕಿಟಕಿ ಮತ್ತು ಹತ್ತಿರದಲ್ಲಿ ನಿಂತಿದ್ದ ಬಸ್ಸಿನ ಗಾಜುಗಳು ಒಡೆದಿವೆ. ವಿದ್ಯಾರ್ಥಿಗಳು ಇದನ್ನು ಕಣ್ಣಾರೆ ಕಂಡರು.
- ಈ ಸ್ಪೋಟ 5 ಅಡಿ ಆಳವಾದ ಮತ್ತು 2 ಅಡಿ ಅಗಲದ ಒಂದು ಕುಳಿ ಉಂಟು ಮಾಡಿದೆ. ಪೊಲೀಸ್`ರು ಅಲ್ಲಿಂದ (ಸ್ಪೋಟ ಸ್ಥಳದಿಂದ) 11 ಗ್ರಾಂ ತೂಕದ ಒಂದು ಕಪ್ಪು ಚುಕ್ಕೆಯಂಥ ಕುಳಿಗಳಿರುವ ಕಲ್ಲನ್ನು ಸಂಗ್ರಹಿಸಿದ್ದಾರೆ. ಹೀಗೆ ಉಲ್ಕಾಪಾತದಿಂದ ಒಬ್ಬ ಸತ್ತು ಮೂವರು ಘಾಯಗೊಂಡಿರುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಶ್ರೀಮತಿ ಜಯಲಲಿತಾ ಅವರಿಗೆ ಪರಿಹಾರ ಘೋಷಿಸಿದ್ದಾರೆ.
- ಆಕಾಶದಿಂದ ಬಂದ ಒಂದು ಉಲ್ಕಾಶಿಲೆಯಿಂದಲೇ ವಾಸ್ತವವಾಗಿ ಬಸ್ ಚಾಲಕ ಕಾಮರಾಜ್ ಸತ್ತಿದ್ದರೆ’ ಜಗತ್ತಿನ ಇತಿಹಾಸದಲ್ಲಿ, ಅವನು ಹಾಗೆ ಸತ್ತ ಮೊದಲ ವ್ಯಕ್ತಿ.
- ಫೋಟೊ:[[೨೫]][೨೧]
ಜಾರಿಬಿದ್ದಿದ್ದರಿಂದ ೨೦ ವರ್ಷದ ನಂತರ ದೃಷ್ಟಿ ಪಡೆದಳು
[ಬದಲಾಯಿಸಿ]- "ಫ್ಲೋರಿಡಾ ಮಹಿಳೆಯು ಜಾರಿ ಬೀಳುವಳು; ಮತ್ತು 20 ವರ್ಷಗಳ ನಂತರ ಕುರುಡುತನ ಹೊಗಿ ದೃಷ್ಟಿ ಪುನಹ ಪಡೆದುಕೊಳ್ಳುತ್ತಾಳೆ".
- ಫ್ಲೋರಿಡಾದಲ್ಲಿ 70 ವರ್ಷದ ಮಹಿಳೆ, ಮೇರಿ ಆನ್ ಫ್ರಾಂಕೊಗೆ, 1993 ರಲ್ಲಿ ಕಾರು ಅಪಘಾತದಲ್ಲಿ ಬೆನ್ನುಮೂಳೆ ಗಾಯದಿಂದ ಕ್ರಮೇಣ ಕಣ್ಣು ಕುರುಡು ಆಯಿತು. ಅವಳು 20 ವರ್ಷಗಳಿಂದ ಕುರುಡಿಯಾಗಿದ್ದಳು. ಅವಳು ತನ್ನ ಮನೆಯಲ್ಲಿ ಎಡವಿ ಬಿದ್ದು, ತಲೆಗೆ ಏನೋ ಬಡಿದಿದ್ದರಿಂದ ತನ್ನ ಕುತ್ತಿಗೆಯ ನರಶಸ್ತ್ರಚಿಕಿತ್‍ಸೆ ಮಾಡಿಸಿಕೊಂಡಳು. 'ಅನೇಸ್ತೀಶಿಯಾ'ದಿಂದ ಎಚ್ಚರಗೊಂಡಾಗ ಅವಳು ತನ್ನ ದೃಷ್ಟಿಯನ್ನು ಪುನಃ ಪಡೆದುಕೊಂಡಳು. ನಂತರ ನರಶಸ್ತ್ರಚಿಕಿತ್ಸಕ ಅಚ್ಚರಿಪಟ್ಟು, “ಇದು ಒಂದು ನಿಜವಾದ ಪವಾಡ" ಎಂದು ಹೇಳಿದ್ದಾನೆ. ಆಧಾರ:[[೨೬]]
ಆಧಾರ
[ಬದಲಾಯಿಸಿ]೧.ಟೈಮ್ಸ್ ಆಫ್ ಇಂಡಿಯಾ ವರದಿ-Rashmi Drolia,TNN | Jul 15, 2014 ೧.[[೨೭]]
- ಉಲ್ಲೇಖ:ವಿಜಯ ಕರ್ನಾಟಕ | Dec 6, 2014//-,[[೨೮]]
೨.prajavani//(ವೇಮಗಲ್ ಸೋಮಶೇಖರ್)--[[೨೯]]
ಭಾರಿ ಗಾತ್ರದ ಕುಂಬಳಕಾಯಿ
[ಬದಲಾಯಿಸಿ]- 04-08-2016:
- ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರತಿವರ್ಷ ‘ದಿ ಪ್ಲೈಯಿಂಗ್ ಸಾಸರ್’ ಹೆಸರಿನ ಕುಂಬಳಕಾಯಿ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವದಲ್ಲಿ ಒಮ್ಮೆ 2154 ಪೌಂಡ್ (977.0379kg) ತೂಕದ ಕುಂಬಳಕಾಯಿ ಬಂದಿತ್ತು. ಈ ಕುಂಬಳಕಾಯಿ ಮಾಡಿದ ದಾಖಲೆ ಇನ್ನೂ ಮುರಿದಿಲ್ಲ.[[೩೦]][೨೨]
ರಾಸಾಯನಿಕ ಬಳಸದೆಯೇ ಕೃಷಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂಬುದನ್ನು ಸ್ವಿಡ್ಜರ್‌ಲೆಂಡ್‌ನ ಬೆನ್ನಿ ಮೆಯಿರ್ ಕೇವಲ ಸಾವಯವ ಗೊಬ್ಬರವನ್ನು ಬಳಸಿ ಇವರು ಬೆಳೆದಿರುವ 951 ಕೆ.ಜಿ.(2096lb) ತೂಕದ ಕುಂಬಳಕಾಯಿ ರೈತರನ್ನು ನಿಬ್ಬೆರಗಾಗಿಸಿದೆ. ಈ ಕುಂಬಳಕಾಯಿ ಗಿನ್ನಿಸ್ ದಾಖಲೆಯಲ್ಲಿಯೂ ಸ್ಥಾನ ಪಡೆದಿದೆ. ಇದನ್ನು ಇವರು ಸಾರ್ವಜನಿಕರ ಪ್ರದರ್ಶನಕ್ಕೂ ಇಟ್ಟಿದ್ದರು. ಇದರ ಬೀಜಕ್ಕೆ ಬಹುಬೇಡಿಕೆ ಇದೆಯಂತೆ.[[೩೧]][೨೩]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ಮಹಿಳೆಯ ಹೊಟ್ಟೆ ಒಳಗಿತ್ತು 33 ಕೆಜಿ ತೂಕದ ಮಾಂಸ ಚೀಲ!
- ↑ ವಿಲಕ್ಷಣ ಪ್ರಕರಣ;12ರ ಹರಯಕ್ಕೇ ತಂದೆಯಾದ ಬಾಲಕ!;23 Mar, 2017
- ↑ 97 ನೇ ವಯಸ್ಸಿನಲ್ಲಿ ಪದವಿ ಅಧ್ಯಯನ;19 Mar, 2017
- ↑ ಚೆನ್ನೈ;5 ಗಂಟೆಗಳ ಕಾಲ ಮಹಿಳೆಯ ಮೂಗಿನಲ್ಲಿದ್ದ ಜೀವಂತ ಜಿರಲೆಯನ್ನು ಹೊರತೆಗೆದ ವೈದ್ಯರು;3 Feb, 2017
- ↑ ಮುಕ್ತಛಂದ;ಒಂಚೂರು;‘ಬಾಂಡ್’ಗೆ ದಂಡ!
- ↑ | Doctors successfully separate conjoined twinsDec 09, 2016 06:38 IST
- ↑ ಕೋಮಲಾಂಗಿಯನ್ನು ಅಪ್ಪಿದ ಆಕ್ಟೋಪಸ್;ಪ್ರಜಾವಾಣಿ ವಾರ್ತೆ;15 Nov, 2016
- ↑ ಮುತ್ತು ತಂತು ಮೃತ್ಯು!
- ↑ ವಿಶ್ವದ ಹೆಚ್ಚು ಸ್ಥೂಲಕಾಯದ ಮಹಿಳೆ ತೂಕ 500 ಕೆ.ಜಿ.;24 Oct, 2016
- ↑ ಚಿಕಿತ್ಸೆಗೆ ರೂ.10 ಲಕ್ಷ ನೆರವು ನೀಡಿದ ಪಿಂಕಿ ರೋಶನ್;;18 Feb, 2017
- ↑ ಅರ್ಧ ತೂಕ ಕಳೆದುಕೊಂಡ ‘ಭಾರಿ ತೂಕದ ಮಹಿಳೆ’;22 Apr, 2017
- ↑ ಪ್ರತಿವರ್ಷ ಮನೆಗೆ ಬರುವ ಶವ
- ↑ ಕಡಲತೀರದಲ್ಲೊಂದು ಸಾವಿನ ದೋಣಿ!;ಪಿ.ಕೆ. ರವಿಕುಮಾರ್;5 Nov, 2016
- ↑ ಎರಡು ಬಾರಿ ಜನಿಸಿದ ಹೆಣ್ಣುಮಗು
- ↑ ಸಪ್ತ ಭಾಷಾ ಚತುರೆ 4 ವರ್ಷದ ಪುಟಾಣಿ;24 Oct, 2016
- ↑ ಹೆಬ್ಬಾವಿನ ಕಣ್ಣಿಗೆ ಹೊಡೆದು ಪಾರಾದೆ
- ↑ http://www.prajavani.net/news/article/2016/08/30/434761.html
- ↑ http://www.hindustantimes.com/india/miracle-at-20-500-ft-how-army-rescued-a-hero-from-siachen-snow/story-34yuPK55QQKmwo1Aiv0DuI.html
- ↑ http://www.prajavani.net/article/%E0%B2%AF%E0%B3%8B%E0%B2%A7-%E0%B2%B9%E0%B2%A8%E0%B3%81%E0%B2%AE%E0%B2%82%E0%B2%A4%E0%B2%AA%E0%B3%8D%E0%B2%AA-%E0%B2%A6%E0%B3%86%E0%B2%B9%E0%B2%B2%E0%B2%BF-%E0%B2%86%E0%B2%B8%E0%B3%8D%E0%B2%AA%E0%B2%A4%E0%B3%8D%E0%B2%B0%E0%B3%86%E0%B2%97%E0%B3%86-%E0%B2%A6%E0%B2%BE%E0%B2%96%E0%B2%B2%E0%B3%81
- ↑ http://www.hindustantimes.com/india/siachen-hero-lance-naik-hanumanthappa-koppad-dies-sources-to-ht/story-5BsLCPcd0Xw85djupn7WyK.html
- ↑ http://timesofindia.indiatimes.com/city/chennai/Scientists-question-Tamil-Nadu-governments-claim-that-meteorite-blast-killed-bus-driver-in-Vellore/articleshow/50894959.cms?
- ↑ ಅಬ್ಬಾ ! ಎಷ್ಟು ದೊಡ್ಡ ಕುಂಬಳಕಾಯಿ !!
- ↑ ಭಾರಿ ಗಾತ್ರದ ಕುಂಬಳಕಾಯಿ
[[ವರ್ಗ:ಪುರಾತತ್ವ ಇತಿಹಾಸ
[[ವರ್ಗ:ಖಗೋಲ ಶಾಸ್ತ್ರ
[[ವರ್ಗ:ಖಗೋಲ ವಿಜ್ಞಾನ
[[ವರ್ಗ:ಇತಿಹಾಸ
ವರ್ಗಗಳು:ವರ್ಗ:ಖಗೋಳ ಶಾಸ್ತ್ರ]]
[[ವರ್ಗ:ಭೌತಶಾಸ್ತ್ರ
[[ಖಭೌತ ಶಾಸ್ತ್ರ
[[ವಿಜ್ಞಾನ
[[ಹಿಂದೂ ಧರ್ಮ
[[ಪುರಾಣ
[[ಬಾಹ್ಯಾಕಾಶ ಅನ್ವೇಷಣೆ
[[ವರ್ಗ:ವಿಜ್ಞಾನ
[[ವರ್ಗ:ವಿಸ್ಮಯಕಾರಿ ಸಂಗತಿಗಳು
[[ವರ್ಗ:ಮನೋರಂಜನೆ