ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Bhavya

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                    ನ್ಯೂಕ್ಲೀಯ ಆಯುಧಗಳು

ನ್ಯೂಕ್ಲೀಯ ವಿದಳನ ಮತ್ತು ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳ ತತ್ವದ ಆಧಾರದ ಮೇಲೆ, ಪರಮಾಣು ಬಾಂಬ್ (ವಿದಳನ ಬಾಂಬ್) ಮತ್ತು ಹೈಡ್ರೋಜನ್ ಬಾಂಬ್ (ಸಮ್ಮಿಳನ ಬಾಂಬ್) ಗಳನ್ನು ತಯಾರಿಸಲಾಗುತ್ತದೆ. ಇಡೀ ಜನ ಸಮೂಹವನ್ನು ನಾಶಮಾಡುವ ಸಾಮರ್ಥ್ಯವಿರುವ ಈ ಬಾಂಬ್ ಗಳ ತಯಾರಿಕೆಯನ್ನು ನಿಯಂತ್ರಿಸುವುದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸವಾಲಾಗಿದೆ. ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ರವರು ಹೀಗೆ ಹೇಳಿದ್ದಾರೆ ಒಂದು ವೇಳೆ ಮೂರನೇ ಮಹಾಯುದ್ಧ ನಡೆದರೆ ನ್ಯೂಕ್ಲೀಯ ಆಉಧಗಳು ಬಳಕೆಯಾದರೆ, ನಾಲ್ಕನೆಯ ಮಹಾಯುದ್ಧದಲ್ಲಿ ಕಲ್ಲುಗಳಿಂದಲೇ ಹೋರಾಡಬೇಕಾಗುತ್ತದೆ. ವಿಜ್ಞಾನಿಗಳು ಮತ್ತು ಮಾನವತಾವಾದಿಗಳು ನ್ಯೂಕ್ಲೀಯ ಆಯುಧಗಳ ಬಳಕೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ.

ನ್ಯೂಕ್ಲೀಯ ವಸ್ತುಗಳ ಬಳಕೆ ಮತ್ತು ವಿಲೇವಾರಿ ವಿಕಿರಣಪಟು ವಸ್ತುಗಳನ್ನು ಸರಿಯಾದ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿವಿಲೇವಾರಿ ಮಡಿದಿದ್ದರೆ, ಅವು ಜನಸಾಮನ್ಯರ ಆರೋಗ್ಯಕ್ಕೆ ತೀವ್ರ ಧಕ್ಕೆಯನ್ನು ಉಂಟುಮಾಡುತ್ತವೆ. ಈ ವಸ್ತುಗಳ ಜೊತೆ ಕೆಲಸ ಮಾಡುವ ಜನರಿಗೆ ಈ ವಿಕಿರಣಗಳು ಅಪಾಯವನ್ನುಂಟುಮಾಡುತ್ತವೆ. ಅಯಾನೀಕರಿಸುವ ಸಾಮರ್ಥ್ಯವುಳ್ಳ ಗಾಮಾ ಕಿರಣಗಳು ಜೀವಕೋಶಗಳಲ್ಲಿ ಅನುವಂಶೀಯ ಅವ್ಯವಸ್ಥೆಯನ್ನು ಉಂಟುಮಾಡಬಲ್ಲವು. [ರೇಡಿಯಂನ್ನು ಪ್ರತ್ಯೇಕಿಸಿದ ಮೇಡಂ ಕ್ಯೂರಿ ಅವರೂ ಸಹ ಗಾಮಾ ಕಿರಣಗಳಿಗೆ ನಿರಂತರವಾಗಿ ಒಡ್ಡಿಕೊಂಡಿದ್ದರಿಂದ ಕ್ಯಾನ್ಸರ್ ರೋಗದಿಂದ ಬಳಲಿದರು] ಈ ಅಯಾನೀಕರಿಸುವ ವಿಕಿರಣಗಳಿಂದ ಕ್ಯಾನ್ಸರ್ ರೋಗವೂ ಸಹ ಬರುತ್ತದೆ.

ನ್ಯೂಕ್ಲೀಯ ಕ್ರಿಯಾಕರಿಗಳಲ್ಲಿ ಉಳಿಯುವ ತ್ಯಾಜ್ಯವಸ್ತುಗಳೂ ಸಹ ವಿಕಿರಣಪಟು ವಸ್ತುಗಳಾಗಿವೆ. ಕಡಿಮೆ ಅರ್ಧಾಯುಷ್ಯವನ್ನು ಹೊಂದಿರುವ ವಿಕಿರಣಪಟು ಧಾತುಗಳ ವಿಲೇವಾರಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಆದರೆ, ದೀರ್ಘ ಆರ್ಧಾಯುಷ್ಯವನ್ನು ಹೊಂದಿರುವ ವಿಕಿರಣಪಟು ಧಾತುಗಳು ಭವಿಷ್ಯದಲ್ಲಿ ಹೆಚ್ಚು ಮಾರಕವಾಗಬಲ್ಲವು. ಇವುಗಳ ನಿರ್ವಹಣೆಯೇ ಬಹು ಮುಖ್ಯ ಅಂಶವಾಗಿರುತ್ತದೆ.

ವಿಕಿರಣಪಟು ದ್ರವ್ಯವನ್ನು ಗಾಜಿನ ಚಪ್ಪಡಿಗಳಲ್ಲಿ ಇರಿಸಿ, ಅವುಗಳನ್ನು ಗಟ್ಟಿಯಾದ ಉಕ್ಕಿನ ಪತ್ರೆಯೊಳಗೆ ತುಂಬಿ ಸಮುದ್ರದ ಆಳದಲ್ಲಿ ಹುದುಗಿಸಲಾಗುತ್ತದೆ. ಇದರಿಂದ ಈ ವಿಕಿರಣಗಳು ಜೀವಗೋಳಕ್ಕೆ ತಲುಪಲಾರವು ಮತ್ತು ಯಾವುದೇ ಹಾನಿ ಉಂಟಾಗುವುದಿಲ್ಲ. ವಿಕಿರಣಪಟು ಧಾತುಗಳು ಹೊರಸೂಸುವ ವಿಕಿರಣಗಳು ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ ಹಾಗೂ ಅನುಭವಕ್ಕೂ ಬರುವುದಿಲ್ಲ. ನ್ಯೂಕ್ಲೀಯ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಕೆಲವಸಗಾರರು, ಸೀಸದ ಕವಚವನ್ನು ಧರಿಸುವಂತಹ ಮನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು.

Start a discussion with Bhavya

Start a discussion