ಸತ್ರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಕೃತಿ ಓರಾ, ಅರವತ್ನಾಲ್ಕು ಮತಿ- ಅಖೋರಾದಲ್ಲಿ ಅಥವಾ ಸತ್ರಿಯಾ ದ ಮೂಲ ಅಭ್ಯಾಸ ಪಾಠಗಳಲ್ಲಿ ಒಂದು.

ಸತ್ರಿಯಾ , ಅಥವಾ ಸತ್ರಿಯಾ ನೃತ್ಯ , ಶಾಸ್ತ್ರೀಯ ಭಾರತೀಯ ನಾಟ್ಯದ ಎಂಟು ಪ್ರಮುಖ ಸಂಪ್ರದಾಯಗಳಲ್ಲಿ ಇದೂ ಕೂಡ ಒಂದಾಗಿದೆ. ಇತ್ತೀಚೆಗಷ್ಟೇ ಸ್ವಲ್ಪ ದಿನಗಳ ಹಿಂದೆ ಇತರ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲಾಯಿತು, ಆದರೆ ಸತ್ರಿಯಾ ಮಾತ್ರ ಅಸ್ಸಾಮಿ ವೈಷ್ಣವ ಸಂತರಾದ ಶ್ರೀಮಂತ ಶಂಕರ್ ದೇವಾ 15 ನೇ ಶತಮಾನದಲ್ಲಿ ಅಸ್ಸಾಂನಲ್ಲಿ ಇದನ್ನು ಸೃಷ್ಟಿಸಿದಾಗ ಹೇಗೆ ಇತ್ತೂ ಹಾಗೇಯೇ ಉಳಿದುಕೊಂಡಿದೆ.[೧]

ಶಂಕರ್ ದೇವಾ ಸತ್ರಿಯಾ ನೃತ್ಯ ವನ್ನು ಅಂಖಿಯ ನಾಟ್ (ಇವರು ಸೃಷ್ಟಿಸಿದಂತಹ ಅಸ್ಸಾಮಿಯರ ಏಕ ಅಂಕ ನಾಟಕದ ಒಂದು ರೂಪವಾಗಿದೆ)ದ ಜೊತೆಯಾಗಿ ಸೃಷ್ಟಿಸಿದರು. ಇವುಗಳನ್ನು ಅಸ್ಸಾಂನ ಸನ್ಯಾಸಿ ಮಂದಿರಗಳೆಂದು ಕರೆಯಲಾಗುವ ಸತ್ತ್ರಾ ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಸತ್ತ್ರಾ ಗಳೊಳಗೆ ಸಂಪ್ರದಾಯ ಬೆಳೆದಂತೆಲ್ಲಾ ಈ ನಾಟ್ಯ ರೂಪವನ್ನು ಸತ್ರಿಯಾ ನೃತ್ಯ ಎಂದು ಕರೆಯಲಾಯಿತು.[೨] ಸತ್ರಿಯಾ ನೃತ್ಯ ಸಂಪ್ರದಾಯವು ಸತ್ತ್ರಾ ದಿಂದಲೇ ಬೆಳಕಿಗೆ ಬಂದಾಯಿತು. ಇಂದೂ ಕೂಡ ಸತ್ತ್ರಾ , ಈ ನಾಟ್ಯವನ್ನು ಧಾರ್ಮಿಕ ಸಂಸ್ಕಾರಗಳು ಮತ್ತು ಇತರ ಉದ್ದೇಶಗಳಿಗೆ ಬಳಸುತ್ತದೆ. ಸುಮಾರು 500 ವರ್ಷಗಳ ಹಿಂದೆ ಈ ಉದ್ದೇಶಗಳಿಗಾಗಿಯೇ ಇದನ್ನು ಸೃಷ್ಟಿಸಲಾಗಿತ್ತು.

ನೃತ್ಯ[ಬದಲಾಯಿಸಿ]

ಪೌರಾಣಿಕ ಕಥೆಗಳು ಸತ್ರಿಯಾ ನೃತ್ಯ ದ ತಿರುಳಾಗಿವೆ. ಇದು ಪೌರಾಣಿಕ ಭೋಧನೆಗಳನ್ನು ಜನರಿಗೆ ಮನುಮುಟ್ಟುವಂತೆ ಮತ್ತು ಸುಲಭವಾಗಿ ಅರ್ಥವಾಗುವಂತೆ ಪ್ರದರ್ಶಿಸುವ ಕಲಾತ್ಮಕ ರೀತಿಯಾಗಿದೆ. ಸಾಂಪ್ರದಾಯಿಕವಾಗಿ,ಸತ್ರಿಯಾ ವನ್ನು ಭೂಕೋಟ್ ಗಳು (ಪುರುಷ ಸನ್ಯಾಸಿಗಳು) ಮಾತ್ರ ವಿಹಾರಗಳಲ್ಲಿ ಪ್ರದರ್ಶಿಸಬಹುದಾಗಿದೆ. ಇದನ್ನು ಅವರ ದಿನನಿತ್ಯದ ಆಚರಣೆಯ ಭಾಗವೆಂಬಂತೆ ಅಥವಾ ವಿಶೇಷ ಉತ್ಸವಗಳನ್ನು ಸೂಚಿಸುವಂತೆ ಪ್ರದರ್ಶಿಸಲಾಗುತ್ತದೆ. ಇಂದು ಈ ಪದ್ಧತಿಯ ಜೊತೆಯಲ್ಲಿ, ಸತ್ರಿಯಾ ವನ್ನು ಸತ್ತ್ರಾ ದ ಸದಸ್ಯರಲ್ಲದ ಮಹಿಳೆ ಅಥವಾ ಪುರುಷರು ವೇದಿಕೆಯ ಮೇಲೆ ಪ್ರದರ್ಶಿಸುತ್ತಾರೆ.ಅಲ್ಲದೇ ಇದರ ಸಾರಾಂಶ ಕೇವಲ ಪೌರಣಿಕ ಸಂಗತಿಗಳಿಗೆ ಮಾತ್ರ ಸೀಮಿತಗೊಂಡಿರುವುದಿಲ್ಲ.

ಸತ್ರಿಯಾ ನೃತ್ಯ ವನ್ನು ಅನೇಕ ಪ್ರಕಾರಗಳಲ್ಲಿ ವಿಂಗಡಿಸಲಾಗಿದ್ದು, ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ: ಅಪ್ಸರಾ ನೃತ್ಯ , ಬೆಹರ್ ನೃತ್ಯ , ಚಾಲಿ ನೃತ್ಯ , ದಶವತಾರ ನೃತ್ಯ , ಮನ್ಚೋಕ್ ನೃತ್ಯ , ನತೌ ನೃತ್ಯ , ರಾಸ ನೃತ್ಯ , ರಾಜ್ ಘರಿಯಾಚಾಲಿ ನೃತ್ಯ , ಗೊಸಾಯಿ ಪ್ರಬೇಶ್ , ಬಾರ್ ಪ್ರಬೇಷ್ , ಗೋಪಿ ಪ್ರಬೇಷ್ , ಜುಮುರಾ , ನಡು ಭಂಗಿ ಮತ್ತು ಸೂತ್ರಧಾರ . ಶಾಸ್ತ್ರೀಯ ಭಾರತೀಯ ನೃತ್ಯದ ಇತರ ಏಳು ಸಂಪ್ರದಾಯಗಳಂತೆ ಸತ್ರಿಯಾ ನೃತ್ಯ ಕೂಡ ಶಾಸ್ತ್ರೀಯ ನೃತ್ಯ ರೂಪಕ್ಕೆ ಅಗತ್ಯವಿರುವ ನಿಯಮಗಳನ್ನು ಒಳಗೊಂಡಿದೆ:ನಾಟ್ಯಶಾಸ್ತ್ರ, ಅಭಿನಯ ದರ್ಪಣ, ಮತ್ತು ಸಂಗೀತ ರತ್ನಾಕರದಂತಹ ನೃತ್ಯ ಮತ್ತು ನಾಟಕ-ಕಲೆಯ ಪ್ರಬಂಧಗಳು;ವಿವಿಧ ಪರಿಚಿತ ಕೃತಿಗಳು (ಮಾರ್ಗ್) ಹಾಗು ನರ್ತ್ತ (ಶುದ್ಧ ನೃತ್ಯ), ನರ್ಟ್ಯ (ಅಭಿವ್ಯಕ್ತಿ ನೃತ್ಯ), ಮತ್ತು ನಾಟ್ಯ (ಅಭಿನಯ)ದ ಆಕಾರಗಳು.

ಸತ್ರಿಯಾ ನೃತ್ಯ ವನ್ನು ಬೊರ್ ಜೀತ್ ಗಳು (ಇತರರಲ್ಲಿ ಶಂಕರ್ ದೇವಾ ರವರು ಸಂಯೋಜಿಸಿದಂತಹ ಹಾಡುಗಳು)ಎಂದು ಕರೆಯಲಾಗುವ ಸಂಗೀತದ ಸಂಯೋಜನೆಗಳೊಂದಿಗೆ ಜೊತೆಗೂಡಿಸಲಾಗಿದೆ. ಶಾಸ್ತ್ರೀಯ ರಾಗಗಳನ್ನು ಆಧರಸಿ ಇವುಗಳನ್ನು ಮಾಡಲಾಗಿರುತ್ತದೆ. ಈ ಸಾಂಪ್ರದಾಯಿಕ ಪ್ರದರ್ಶನಕ್ಕೆ ಜೊತೆಗೂಡುವಂತಹ ವಾದ್ಯಗಳೆಂದರೆ:ಖೊಲ್ಸ್ (ಡ್ರಮ್ ಗಳು), ತಾಳಗಳು (ತಾಳಗಳು) ಮತ್ತು ಕೊಳಲು. ಪಿಟೀಲು ಮತ್ತು ಹಾರ್ಮೋನಿಯಂ ನಂತಹ ಇತರ ವಾದ್ಯಗಳನ್ನು ಇತ್ತೀಚೆಗೆ ಸೇರಿಸಲಾಗಿದೆ. ಉಡುಪುಗಳನ್ನು ಸಾಮಾನ್ಯವಾಗಿ ಪ್ಯಾಟ್ ಗಳಿಂದ ಮಾಡಲಾಗುತ್ತದೆ. ಇದು ಅಸ್ಸಾಂ ನಲ್ಲಿ ಉತ್ಪಾದಿಸಲಾಗುವ ಒಂದು ಬಗೆಯ ರೇಷ್ಮೆಯಾಗಿದ್ದು, ಇದನ್ನು ಸಂಕೀರ್ಣವಾದ ಸ್ಥಳೀಯ ಜರತಾರಿ ಅಲಂಕಾರದೊಂದಿಗೆ ನೇಯಲಾಗಿರುತ್ತದೆ. ಆಭರಣಗಳು ಕೂಡ ಸಾಂಪ್ರದಾಯಿಕ ಅಸಾಮಿ ವಿನ್ಯಾಸದಲ್ಲಿರುತ್ತವೆ.

ಇತಿಹಾಸ[ಬದಲಾಯಿಸಿ]

19 ನೇ ಶತಮಾನದ ಉತ್ತರಾರ್ಧದಲ್ಲಿ, ಸತ್ರಿಯಾ ನೃತ್ಯ ವು ಅಸ್ಸಾಂ ನ ಪವಿತ್ರ ಸ್ಥಳ ಸತ್ತ್ರಾ ದಿಂದ ಹುಟ್ಟಿಕೊಂಡಿತು. ಅನಂತರ ಇದು ಸನ್ಯಾಸಿ ಮಂದಿರದಿಂದ ಮಹಾನಗರಗಳ ವೇದಿಕೆಯಲ್ಲಿ ಕಾಣಿಸಿಕೊಂಡಿತು. ಸತ್ತ್ರಾ ಅದರೊಳಗೆಯೇ ಕೆಲವೊಂದು ಕಟ್ಟುನಿಟ್ಟಾದ ನಿಯಮಗಳನ್ನು ಮತ್ತು ನೇಮನಿಷ್ಠೆಗಳನ್ನು ಪಾಲಿಸುತ್ತಿತ್ತು. ಅಲ್ಲದೇ 19 ನೇ ಶತಮಾನದ ಪೂರ್ವಾರ್ಧದವರೆಗೂ ಈ ನೃತ್ಯ ರೂಪವನ್ನು ಧಾರ್ಮಿಕ ಆಚರಣೆಯ ರೂಪದಲ್ಲಿ ಪುರುಷ ನೃತ್ಯಗಾರರು ಪ್ರದರ್ಶಿಸುತ್ತಿದ್ದರು. ಶಾಸ್ತ್ರೀಯ ಕಟ್ಟುನಿಟ್ಟು ಮತ್ತು ಕೆಲವೊಂದು ನಿಯಮಗಳ ನಿಷ್ಹೆಯಿಂದ ಪಾಲನೆ ಹಾಗು ಶೈಕ್ಷಣಿಕ ಸಂಶೋಧನೆಯ ಕೊರತೆಯಿಂದಾಗಿ ಈ ನೃತ್ಯ ರೂಪವನ್ನು ಭಾರತದ ಶಾಸ್ತ್ರೀಯ ನೃತ್ಯಕ್ಕೆ ಸೇರಿದೆ ಎಂದು ಪರಿಗಣಿಸಿರಲಿಲ್ಲ. ಈ ಎಂಟು ರೂಪಗಳಲ್ಲಿ ಸತ್ರಿಯಾ ನೃತ್ಯ ವು ಒಂದೆಂದು ಗುರುತಿಸಲು ಎಲ್ಲರೂ ಶ್ರಮಿಸಿದರು. ಅಂತಿಮವಾಗಿ ಸಂಗೀತ ನಾಟಕ ಅಕಾಡೆಮಿಯು 2000 ನವೆಂಬರ್ 15 ರಂದು ಸತ್ರಿಯಾ ನೃತ್ಯ ವನ್ನು ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಹಾಗು ಇತರ ಏಳು ರೂಪಗಳೊಂದಿಗೆ ಇದು ಕೂಡ ಒಂದಾಗಿದೆ ಎಂಬ ಮಾನ್ಯತೆ-ಮನ್ನಣೆ ನೀಡಿತು.

ಶಾಸ್ತ್ರೀಯ ಭಾರತೀಯ ನೃತ್ಯದ ಮಾನದಂಡಗಳೊಳಗೆ ಇದನ್ನು ತಡವಾಗಿ ಸೇರಿಸಿದ್ದು, ಮತ್ತು ಕೇಂದ್ರದಿಂದ ಇದಕ್ಕೆ ಅಗತ್ಯವಿರುವ ಸಾಂಸ್ಥಿಕ ಬೆಂಬಲವನ್ನು ನೀಡದಿರುವುದರ ಹೊರತಾಗಿ, ಸತ್ರಿಯಾ ನೃತ್ಯ ಶತಮಾನಗಳುದ್ದಕ್ಕೂ ಅದರ ಶಾಸ್ತ್ರೀಯ ನೇಮ ನಿಯಮಗಳನ್ನು, ಮತ್ತು ಪ್ರಾಚೀನ ಕಲಾ ರೂಪಗಳನ್ನು ಸೂಚಿಸುವ ಸಂಕೀರ್ಣ ವಿವರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದೆ. ಸತ್ತ್ರಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸತ್ರಿಯಾ ನೃತ್ಯದ ನೇಮ ನಿಷ್ಠೆಗಳಿಂದಾಗಿ, ಇದರ ಶುದ್ಧ ರೂಪವನ್ನು ಮತ್ತು ಅದರ ವಿಭಿನ್ನ ಶೈಲಿಯನ್ನು ಹಾಗೇಯೇ ಉಳಿಸಿಕೊಂಡು ಬರಲಾಗುತ್ತಿದೆ. ಈಗ ಇದು ಅಸ್ಸಾಂಸತ್ತ್ರಾ ದ ಪವಿತ್ರ ಒಳಾಂಗಣಗಳಿಂದ ವಿಶ್ವ ವೇದಿಕೆಯ ಜನಪ್ರಿಯ ಸ್ಥಳಗಳ ವರೆಗೂ ಆಗಮಿಸಿದೆ, ಇದು ಸತ್ರಿಯಾ ನೃತ್ಯದ ಕಲಾತ್ಮಕ ಮತ್ತು ಸೌಂದರ್ಯಾತ್ಮಕ ಗುಣಗಳ ಮಹತ್ವವನ್ನು ಹೆಚ್ಚಿಸುವ ಸಮಯವಾಗಿದೆ.

ಇವನ್ನೂ ನೋಡಿ[ಬದಲಾಯಿಸಿ]

  • ಭಾರತದಲ್ಲಿ ನೃತ್ಯ
  • ನೃತ್ಯದ ಶೈಲಿಯ ವರ್ಗಗಳ ಪಟ್ಟಿ
  • ನೃತ್ಯದ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

  1. Sethi, Arshiya Sattriya: The redefining of a tradition
  2. ಠಾಕೂರ್, ಸುದರ್ಶ Cultural Reportage

ಹೊರಗಿನ ಕೊಂಡಿಗಳು[ಬದಲಾಯಿಸಿ]

  • ಸತ್ರಿಯಾ ಡ್ಯಾನ್ಸ್ Archived 2019-08-22 ವೇಬ್ಯಾಕ್ ಮೆಷಿನ್ ನಲ್ಲಿ. ಶ್ರೀಮತಿ ದೇವಿಕಾ P. ಬೊರ್ಥಕುರ್ ಮತ್ತು ಮಿಸ್ಟರ್.ಪುಲಕ್ J. ಬೋರ್ಥಕುರ್ ರವರಿಂದ,ನ್ಯೂಸ್, ಫೀಡ್ ಬ್ಯಾಕ್,ಲೆಜೆಂಡ್ಸ್,ಪರ್ಫಾರ್ಮೆನ್ಸಸ್,ನ್ಯೂಸ್,ಇವೆಂಟ್ಸ್, ಇಂಟರ್ ವ್ಯೂಸ್ ಆಫ್ ಸತ್ರಿಯಾ ಡ್ಯಾನ್ಸ್ ಆಫ್ ಅಸ್ಸಾಂ *

ಟೆಂಪ್ಲೇಟು:Indian classical dance

"https://kn.wikipedia.org/w/index.php?title=ಸತ್ರಿಯಾ&oldid=1084058" ಇಂದ ಪಡೆಯಲ್ಪಟ್ಟಿದೆ