ಸತ್ಯನಾರಾಯಣ ಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಸಮಾಜ ಸೇವಾಭೂಷಣ ಎಸ್. ಸತ್ಯನಾರಾಯಣ ಶೆಟ್ಟಿ , ಅಜ್ಜಂಪುರ , ಇವರ ಕಿರುಪರಿಚಯ. ತಾ ೩೧-೧೨-೧೯೨೧ ರಲ್ಲಿ ಚಿಕ್ಕಮಗಳೂರು ಜಿಲ್ಲಾ ಅಜ್ಜಂಪುರದ ದಿ|| ಎಸ. ಸುಬ್ಬರಾಯ ಶೆಟ್ಟಿ , ಶ್ರೀಮತಿ ಗಂಗಮ್ಮ ಇವರ ಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿಯೇ ಮಾತಾ ಪಿತೃಗಳ ಪ್ರೀತಿ ವಾತ್ಸಲ್ಯ ಗಳಿಂದ ವಂಚಿತರಾಗಿ ಹಿರಿಯಸೋದರ ಶ್ರೀ ಎಸ್. ಸುಬ್ರಹ್ಮಣ್ಯ ಶೆಟ್ಟಿ, ಶ್ರೀಮತಿ ರುಕ್ಮಿಣಿ ಯಮ್ಮ ಇವರ ಆರೈಕೆಯಲ್ಲಿ ಬೆಳೆಯುತ್ತಾ, ಹಿರಿಯರ ಸದ್ಗುಣ, ಸಂಸ್ಕಾರ ಗಳ್ಳನ್ನು ರೂಢಿಸಿಕೊಂಡು, ವಿದ್ಯಾಭ್ಯಾಸ ಮಾಡುತ್ತಾ, ಅಂದಿನ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ ಕುಳಿತು ಮುಂದೆ ಓದಲಾರದೆ ಕುಲಕಸುಬಾದ ವಣಿಕ ವೃತ್ತಿಯಲ್ಲಿ ಮುಂದುವರೆದರು. ಬಾಲ್ಯವನ್ನು ದಾಟಿ ಯೌವನದಲ್ಲಿ ಪ್ರವೇಶಿಸಿದಾಗ ಶ್ರೀ || ಶಂಕರಾನಂದ ಸ್ವಾಮಿಗಳವರ ಅಧ್ಯಾತ್ಮ ಹಾಗು ಶ್ರೀಮದ್ ಭಗವದ್ ಗೀತಾ ಪ್ರವಚನಗಳಿಂದ ಪ್ರಭಾವಿತರಾಗಿ, ಗೀತಾ ಆರಾಧಕರಾಗಿ, ಗೀತಾ ಸೇವೆ ಹಾಗು ಪ್ರಚಾರಗಳಲ್ಲಿ ಆಸಕ್ತಿ ವಹಿಸಿ, ತಮ್ಮ ಸೋದರ ಸುಬ್ರಹ್ಮಣ್ಯ ಶೆಟ್ಟಿ ಅವರಿಂದ ಸ್ಥಾಪಿತವಾದ ನಾಡಿನ ಏಕೈಕ ಮಾಸ ಪತ್ರಿಕೆಯಾದ "ಗೀತಾ ಮಿತ್ರ" ಪತ್ರಿಕಾ ಸಹಸಂಪಾದಕರಾಗಿ,[೧] ವ್ಯಾಪಕವಾಗಿ, ಗೀತಾ ಪ್ರಚಾರದಲ್ಲಿ ನಿರತರಾಗಿ, ನಲವತ್ತು ವರ್ಷಗಳ ಧೀರ್ಘ ಕಾಲ ಪತ್ರಿಕಾ ವ್ಯವಸಾಯದಲ್ಲಿ ನಿರತರಾಗಿ ಅಪಾರ ಅನುಭವ ಗಳಿಸಿದರು. ಸಂಗೀತ, ಕಲೆ, ನಾಟಕ, ನೃತ್ಯ ಇವು ಗಳಲ್ಲಿ ಆಸಕ್ತಿ ಉಳ್ಳವರಾಗಿ, "ಕಲಾ ಸೇವಾ ಸಂಘ (ರಿ)" ಹವ್ಯಾಸಿ ಕಲಾವಿದರ ಏಳಿಗೆಗಾಗಿ ಸಂಸ್ಥೆಯನ್ನು ಪ್ರಾರಂಭಿಸಿ, ಸ್ಥಾಪಕ ಅಧ್ಯಕ್ಷರಾಗಿ, ರಾಜ್ಯ ಮಟ್ಟದ ಸಂಗೀತ, ನಾಟಕ, ನೃತ್ಯ ಸ್ಪರ್ಧೆಗಳನ್ನು ರಾಜ್ಯದ ಇತಿಹಿಹಾಸದಲ್ಲಿಯೇ ಪ್ರ ಪ್ರಥಮವಾಗಿ ಏರ್ಪಡಿಸಿ ಗಳಿಸಿದ ಅಪಾರ ಅನುಭವದಿಂದ ಹಲವಾರು ನಾಟಕಗಳನ್ನು ಬರೆದು ರಂಗಮಂದಿರದಲ್ಲಿ ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದು, ಮುಖ್ಯವಾಗಿ, "ಮಹಾತ್ಮ ಬಸವೇಶ್ವರ" ಎಂಬ ನಾಟಕವನ್ನು ನೂರ ಮೂವತ್ತು ಪ್ರದರ್ಶನಗಳನ್ನು ನೀಡಿ, 'ಕಲಾ ಶ್ರೀ ರಂಗ ಮಂದಿರ' ವನ್ನು ನಿರ್ಮಾಣ ಮಾಡಿ, ಇಂದಿಗೂ ಹವ್ಯಾಸಿ ಕಲಾವಿದರಿಗೆ ಆಶ್ರಯ ವಾಗಿದೆ. ಜೊತೆಗೆ ನೂರಾರು ಮಕ್ಕಳ ನಾಟಕಗಳನ್ನು ಬರೆದು, ರಂಗ ಭೂಮಿಯಲ್ಲಿ ಪ್ರದರ್ಶನ ನೀಡಿರುವರು. ಈ ಸಂದರ್ಭದಲ್ಲಿ ಕನ್ನಡ ವರನಟ ರಾಜಕುಮಾರ್, ಉದಯಕುಮಾರ್, ಸುದರ್ಶನ್ ಮತ್ತು ಗುಬ್ಬಿ ವೀರಣ್ಣ, ಜಯಮ್ಮ ಇವರುಗಳು ಅಂದಿನ ಹೆಸರಾಂತ ನಟಿ ಹರಿಣಿ ಮತ್ತು ನ್ರ್ಯತ್ಯ ಕಲಾವಿದೆ ಉಷಾ ದಾತಾರ್ ಮುಂತಾದ ಕಲಾವಿದರು ಆಗಮಿಸಿದ್ದು ಎಂದಿಗೂ ಮರೆಯಲಾಗದ ಸಂಗತಿ ಮತ್ತು ಹವ್ಯಾಸಿ ಕಲಾವಿದರಿಗೆ ಸ್ಫೂರ್ತಿದಾಯಕವಾಗಿತ್ತು. ತಮ್ಮ ತೊಂಬತ್ತನೆಯ ಇಳಿ ವಯಸ್ಸಿನಲ್ಲೂ ಕಲಾಸೇವೆಗೆ ತಮ್ಮನ್ನು ತೊಡಗಿಸಿ ಕೊಂಡಿರುವರು. ಪತ್ರಕರ್ತರಾಗಿ ಸಾಮಾಜಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ಜ್ಞಾನ ಉಳ್ಳವರಾಗಿದ್ದು, ಇತ್ತೀಚಿನ ಇಳಿವಯಸ್ಸಿನ ಸಾಧನೆ ಎಂದರೆ, ಸುಮಾರು ೫೦೦ ಪುಟಗಳ ಕೈ ಬರವಣಿಗೆಯ ಬೃಹತ್ ಗ್ರಂಥದಲ್ಲಿ ಅಂದಾಜು ೨೫೦ ವಿಷಯಗಳ ಬಗ್ಗೆ ವಿವರವಾದ ಲೇಖನಗಳು ಇದ್ದು, ಅದರಲ್ಲಿ ರಾಮಾಯಣ, ಮಹಾಭಾರತ, ಭಾಗವತ, ಶ್ರೀಮದ್ಭಗವದ್ಗೀತೆ, ಚತುರ್ವೇದಗಳು, ಪ್ರಾಣಾಯಾಮ ಮತ್ತು ಗಾಯತ್ರಿ ಮಂತ್ರದ ಮಹತ್ವ ಮುಂತಾದ ಆಧ್ಯಾತ್ಮಿಕ ಪ್ರಶ್ನೋತ್ತರಗಳಿಂದ ತುಂಬಿ ತುಳುಕುತ್ತಿದ್ದು ನಾಡಿಗೆ ನೀಡುತ್ತಿರುವ ಒಂದು ವಿಶೇಷ ಕಾಣಿಕೆಯಾಗಿದೆ. ತಮ್ಮ ಆರ್ಯ ವೈಶ್ಯ ಕುಲಮಾತೆಯಾದ ಶ್ರೀಮತ್|| ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ತ್ಯಾಗಮಯ ಜೀವನವನ್ನು ನಿರೂಪಿಸುವ "ವಾಸವಿ ವಿಜಯ" ಎಂಬ ನಾಟಕವನ್ನು ರಚಿಸಿ ೧೦೩ ಪ್ರದರ್ಶನಗಳನ್ನು ರಾಜ್ಯದಾದ್ಯಂತ ಪ್ರದರ್ಶಿಸಿ ಮೆಚ್ಚುಗೆ ಪಡೆದದ್ದು ಒಂದು ವಿಶೇಷ. ವಿದ್ಯಾಕ್ಷೇತ್ರದಲ್ಲಿ ಸಹ ಪ್ರವೇಶಿಸಿ ಶ್ರೀ ವಾಸವಿ ಎಜುಕೇಶನ್ ಸೊಸೈಟಿ ಎಂಬ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿ ಪ್ರಗತಿ ಪಥದಲ್ಲಿ ಸಾಗುತ್ತ ಸುಮಾರು ೫೪೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾ ಆದರ್ಶ ವಿದ್ಯಾಸಂಸ್ಥೆ ಎನ್ನಿಸಿದೆ.

ತೊಂಬತ್ತರ ವಯೋವ್ರುದ್ಧರಾಗಿ ಇಂದಿಗೂ ಯಾವ ಶ್ರೀಮಂತ ಖಾಯಿಲೆಗಳೂ ಇಲ್ಲದೆ ಪೂರ್ಣ ಆರೋಗ್ಯ ಭಾಗ್ಯ ಮತ್ತು ಚಟುವಟಿಕೆಗಳಿಂದ ಇರಲು ಮುಖ್ಯ ಕಾರಣಗಳೆಂದರೆ ಗಾಯತ್ರಿ ಮಂತ್ರದ ಉಪಾಸನೆ ಹಾಗು ಪ್ರಾಣಾಯಾಮ ಅನುಷ್ಥಾನಗಳಿಂದಾಗಿ ಎಂದು ಹೆಮ್ಮೆಯಿಂದ ನುಡಿಯುತ್ತಾರೆ. ಇಂದಿನ ಯುವ ಜನರು ಪೂರ್ಣ ಆರೋಗ್ಯ ಭಾಗ್ಯದಿಂದಿರಲು ಮತ್ತು ಧೀರ್ಘಾಯುಷಿಗಳಾಗಿ ಬಾಳಲು ಪ್ರಾಣಯಾಮ ಅನುಷ್ಟಾನ ಅತ್ಯಾವಶ್ಯಕ ಎನ್ನುತಾರೆ ಶ್ರೇಷ್ಠಿಗಳು.


ಉಲ್ಲೇಖಗಳು[ಬದಲಾಯಿಸಿ]