ಸಜ್ಜಪ್ಪ
ಗೋಚರ
ಕರ್ನಾಟಕದಲ್ಲಿ ಹಬ್ಬಗಳಲ್ಲಿ ಮಾಡುವ ಒಂದು ಬಗೆಯ ಸಿಹಿ ತಿಂಡಿ.[೧]
ಬೇಕಾಗುವ ಪದಾರ್ಥಗಳು
[ಬದಲಾಯಿಸಿ]- ಚಿರೋಟಿ ರವೆ -
- ಕೊಬ್ಬರಿ(ಹಸಿ ಕಾಯಿತುರಿ)
- ಬೆಲ್ಲ
- ಮೈದಾಹಿಟ್ಟು ಸ್ವಲ್ಪ
- ಕರಿಯಲು ಎಣ್ಣೆ
ತಯಾರಿಸುವ ವಿಧಾನ
[ಬದಲಾಯಿಸಿ]ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಮೈದಾಹಿಟ್ಟು ಮತ್ತು ತುಪ್ಪವನ್ನು ಸುರಿದು ಚೆನ್ನಾಗಿ ಕಲಸಬೇಕು. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಬೇಕು. ನಂತರ ಚಪಾತಿಯಂತೆ ಲಟ್ಟಿಸಿಕೊಂಡು ನಂತರ ಅದರಲ್ಲಿ ಹೂರಣವನ್ನು ಇಟ್ಟು , ಹಿಟ್ಟಿನ ತುದಿಯಿಂದ ಮುಚ್ಚಿ ಮತ್ತೆ ಅದನ್ನು ಲಟ್ಟಿಸಿ, ಗುಂಡನೆಯ ಆಕಾರಕ್ಕೆ ಬಂದಾಗ ಎಣ್ಣೆಯಲ್ಲಿ ಹಾಕಿ, ಗರಿಗರಿಯಾಗಿ, ಕೆಂಪು ಬಣ್ಣ ಬರುವರೆಗೂ ಕರಿಯಬೇಕು.
ಹೂರಣ ತಯಾರಿಸುವ ವಿಧಾನ
[ಬದಲಾಯಿಸಿ]ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿದುಕೊಂಡು, ಬೆಲ್ಲ ಕೆಂಪಾಗಾದ ಬಳಿಕ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬೇಕು. ಈ ಮಿಶ್ರಣಕ್ಕೆಹೂರಣ ಎನ್ನುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://kannada.oneindia.com/festivals/ugadi/2009/0325-sajjappa-sweet-recipe.html ,ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ ,kannada.oneindia.com ,